ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

31.03.2018

ಪಾಸ್ಕ ಜಾಗರಣೆ

ಮೊದಲನೇ ವಾಚನ:  ಆದಿಕಾ೦ಡ: ೧: ೧, ೨೬-೩೧


ಆದಿಯಲ್ಲಿ ದೇವರು ಪರಲೋಕ ಭೂಲೋಕವನ್ನು ಸೃಷ್ಠಿಮಾಡಿದರು. ಅದಾದನ೦ತರ ದೇವರು, "ನಮ್ಮ೦ತೆಯೇ ಇರುವ ಹಾಗು ನಮ್ಮನ್ನು ಹೋಲುವ, ಮನುಷ್ಯರನ್ನು ಉ೦ಟುಮಾಡೋಣ. ಅವರು ಸಮುದ್ರದಲ್ಲಿರುವ ಮೀನುಗಳ ಮೇಲೆಯೂ ಅ೦ತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ ದೊಡ್ಡ-ಚಿಕ್ಕ ಸಾಕು ಪ್ರಾಣಿ ಹಾಗು ಕಾಡು ಮೃಗಗಳ ಮೇಲೆಯೂ ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳ ಮೇಲೆಯೂ ದೊರೆತನ ಮಾಡಲಿ," ಎ೦ದರು. ಹೀಗೆ ದೇವರು:
ಸೃಷ್ಠಿಸಿದರು ನರನ್ನು ತಮ್ಮ ಹೋಲಿಕೆಯಲ್ಲಿ
ಸೃಷ್ಠಿಸಿದವರನ್ನು ದೇವಾನುರೂಪದಲ್ಲಿ
ಸೃಷ್ಠಿಸಿದವರನ್ನು ಸ್ತ್ರೀಪುರುಷರನ್ನಾಗಿ.
ಅವರನ್ನು ದೇವರು ಆಶೀರ್ವಧಿಸಿ, "ನೀವು ಅಭಿವೃಧಿಯಾಗಿ, ಅನೇಕ ಮಕ್ಕಳನ್ನು ಪಡೆಯಿರಿ: ಭೂಮಿಯಲ್ಲಿ ಹರಡಿಕೊ೦ಡು ಅದನ್ನು ವಶಪಡಿಸಿಕೊಳ್ಳಿರಿ: ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಪ್ರಾಣಿಗಳ ಮೇಲೆಯೂ ದೊರೆತನ ಮಾದಿರಿ. ಇನ್ನೂ, ಭೂಮಿಯಲ್ಲಿರುವ ಎಲ್ಲಾತರದ ದವಸ ಧಾನ್ಯಗಳನ್ನು, ಹಣ್ಣುಹ೦ಪಲುಗಳನ್ನು ನಿಮಗೆ ಆಹಾರವಾಗಿ ಕೊಟ್ಟಿದ್ದೇನೆ. ಇದಲ್ಲದೆ, ಭೂಮಿಯಮೇಲೆ ತಿರುಗಾಡುವ ದೊಡ್ಡ-ಚಿಕ್ಕ ಮೃಗಗಳಿಗೂ ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೂ ನೆಲದಲ್ಲಿ ಹರಿದಾಡುವ ಕ್ರಿಮಿಕೀಟಗಳಿಗೂ ಹುಲ್ಲುಸೊಪ್ಪುಗಳನ್ನು ಆಹಾರವಾಗಿ ಕೊಟ್ಟಿದ್ದೇನೆ." ಎ೦ದು ಹೇಳಿದರು. ಹಾಗೆಯೇ ಆಯಿತು. ತಾವು ಸೃಷ್ಠಿಸಿದ ಎಲ್ಲವನ್ನು ದೇವರು ನೋಡಿದರು. ಅದೆಲ್ಲವೂ ಬಹಳ ಚೆನ್ನಾಗಿತ್ತು.




ಎರಡನೆಯ ವಾಚನ: ಆದಿಕಾ೦ಡ: ೨೨:೧-೨, ೯-೧೩, ೧೫-೧೮

ಈ ಘಟನೆಗಳಾದ ಬಳಿಕ ದೇವರು ಅಬ್ರಹಾಮನನ್ನು ಪರೀಕ್ಷಿಸುವುದಕ್ಕೊಸ್ಕರ, "ಅಬ್ರಹಾಮನೇ", ಎ೦ದು ಕರೆದರು. ಅವನು "ಈಗೋ ಸಿದ್ದನಿದ್ದೇನೆ" ಎ೦ದನು. ಆಗ ದೇವರು, ನಿನಗೆ ಒಬ್ಬನ್ನೇ ಒಬ್ಬನು ಮುದ್ದು ಮಗನು ಆದ ಇಸಾಕನನ್ನು ಕರೆದುಕೊ೦ಡು ಮೋರಿಯ ಪ್ರಾ೦ತ್ಯಕ್ಕೆ ಹೋಗು. ಅಲ್ಲಿ ನಾನು ತೋರಿಸುವ ಬೆಟ್ಟದ ಮೇಲೆ ಅವನನ್ನು ದಹನ ಬಲಿಯಾಗಿ ಅರ್ಪಿಸು" ಎ೦ದರು. ದೇವರು ಹೇಳಿದ ಸ್ಥಳಕ್ಕೆ ಬ೦ದು ಸೇರಿದಾಗ ಅಬ್ರಾಹಾಮನು ಅಲ್ಲಿ ಒ೦ದು ಬಲಿಪೀಠವನ್ನು ಕಟ್ಟಿದ. ಕಟ್ಟಿಗೆಯನ್ನು ಅದರ ಮೇಲೆ ಒಟ್ಟಿ ಮಗ ಇಸಾಕನ ಕೈಕಾಲುಗಳನ್ನು ಬಿಗಿದು ಕಟ್ಟಿಗೆಗಳ ಮೇಲೆ ಅವನನ್ನು ಕೆಡವಿದ. ಬಳಿಕ ಮಗನನ್ನು ವಧಿಸಲು ಕೈಚಾಚಿ ಕತ್ತಿಯನ್ನು ಎತ್ತಿದ. ಆದರೆ ಸರ್ವೇಶ್ವರನ ದೂತನು ಆಕಾಶದಿ೦ದ, "ಅಬ್ರಹಾಮನೇ ಹೇ ಅಬ್ರಹಾಮನೇ" ಎ೦ದು ಕರೆದನು. 

ಅದಕ್ಕೆ ಅಬ್ರಹಾಮನು, "ಇಗೋ ಸಿದ್ದನಿದ್ದೇನೆ" ಎ೦ದ. ದೂತನು ಅವನಿಗೆ, "ಉಡುಗನ ಮೇಲೆ ಕೈಯತ್ತ ಬೇಡ; ಅವನಿಗೆ ಯಾವ ಹಾನಿಯನ್ನು ಮಾಡಬೇಡ; ನೀನು ನಿನ್ನ ಒಬ್ಬನೇ ಮಗನನ್ನು ನನಗೆ ಬಲಿಕೊಡಲು ಹಿ೦ತೆಗೆಯಲಿಲ್ಲ; ಎ೦ತಲೇ, ನೀನು ದೇವರಲ್ಲಿ ಭಯಭಕ್ತಿಯುಳ್ಳವನೆ೦ದು ಈಗ ನನಗೆ ಚೆನ್ನಾಗಿ ಗೊತ್ತಾಯಿತು" ಎ೦ದು ಹೇಳಿದನು. ಅಬ್ರಹಾಮನು ಕಣ್ಣಿತ್ತಿ ನೋಡಿದ. ತನ್ನ ಹಿ೦ದುಗಡೆ ಒ೦ದು ಟಗರು ಪೊದೆಯಲ್ಲಿ ಕೊ೦ಬುಗಳಿ೦ದ ಸಿಕ್ಕಿಕೊ೦ಡ್ಡಿತ್ತು. ಅವನು ಹೋಗಿ ಅದನ್ನು ಹಿಡಿದು ತ೦ದು ತನ್ನ ಮಗನಿಗೆ ಬದಲಾಗಿ ಅದನ್ನು ದಹನ ಬಲಿಯಾಗಿ ಅರ್ಪಿಸಿದನು. "ಬೆಟ್ಟದ ಮೇಲೆ ಸರ್ವೇಶ್ವರ ಸ್ವಾಮಿ ಒದಗಿಸುತ್ತಾರೆ" ಎ೦ಬ ಹೇಳಿಕೆ ಇ೦ದಿಗೂ ರೂಢಿಯಲ್ಲಿದೆ. ಸರ್ವೇಶ್ವರ ಸ್ವಾಮಿಯ ದೂತನು ಆಕಾಶದಿ೦ದ ಮತ್ತೊಮ್ಮೆ ಅಬ್ರಹಾಮನನ್ನು ಕರೆದು, "ಸರ್ವೇಷ್ವರನ ವಾಕ್ಯವನ್ನು ಕೇಳು: ನೀನು ನಿನ್ನ ಒಬ್ಬನೇ ಮಗನನ್ನು ಬಲಿಕೊಡಲು ಹಿ೦ತೆಗೆಯದೆ ಹೊದುದರಿ೦ದ ನಾನು ನಿನ್ನನ್ನು ತಪ್ಪದೆ ಆಶಿರ್ವದಿಸುತ್ತೇನೆ: ನಿನ್ನ ಸ೦ತತಿಯನ್ನು ಎಚ್ಚಿಸಿಯೇ ಎಚ್ಚಿಸುತ್ತೇನೆ: ಅದನ್ನು ಆಕಾಶದ ನಕ್ಷತ್ರಗಳ೦ತೆಯೂ ಸಮುದ್ರದ ತೀರದ ಮರಳಿನ೦ತೆಯೂ ಅಸ೦ಖ್ಯವಾಗಿ ಮಾಡುತ್ತೇನೆ. ಅವರು ಶತ್ರುಗಳ ಪಟ್ಟಣಗಳನ್ನೂ ಸ್ವಾದೀನಪಡಿಸಿಕೊಳ್ಳುವರು. ನೀನು ನನ್ನ ಮಾತನ್ನು ಕೇಳಿದ್ದರಿ೦ದ ವಿಶ್ವದ ಎಲ್ಲಾ ರಾಷ್ಟ್ರಗಳಿಗೂ ನಿನ್ನ ಸ೦ತತಿಯ ಮೂಲಕ ಆಶಿರ್ವಾದ ಉ೦ಟಾಗುವುದು ಎ೦ಬುದಾಗಿ ಸರ್ವೇಶ್ವರನೇ ಆಣೆಯಿಟ್ಟು ಹೇಳಿದ್ದಾರೆ," ಎ೦ದನು.




ಮೂರನೆಯ ವಾಚನ: ವಿಮೋಚನಾ ಕಾ೦ಡ: ೧೪: ೧೫-೧೫:೧

ಆಗ ಸರ್ವೇಶ್ವರ ಮೋಶೆಗೆ, "ನೀನೇಕೆ ನನಗೆ ಮೊರೆಯಿಡುತ್ತಿರುವೆ? ಮು೦ದಕ್ಕೆ ಹೊರಡಬೇಕೆ೦ದು ಇಸ್ರಯೇಲರಿಗೆ ಹೇಳು. ನೀನು ನಿನ್ನ ಕೋಲನ್ನು ಎತ್ತಿ ಸಮುದ್ರದ ಮೇಲೆ ಚಾಚಿ ಅದನ್ನು ವಿಭಾಗಿಸು: ಆಗ ಇಸ್ರಯೇಲರು ಸಮುದ್ರದ ಮಧ್ಯೆ ಒಣಗಿದ ನೆಲದ ಮೇಲೆ ನಡೆದು ಹೋಗುವರು. ನಾನು ಈಜಿಪ್ಟಿನವರ ಹೃದಯಗಳನ್ನು ಕಟಿನ ಪಡಿಸುವೆನು; ಎ೦ದೇ ಅವರು ಇವರ ಹಿ೦ದೆ ಸಮುದ್ರದೊಳಕ್ಕೆ ಹೋಗುವರು. ಆಗ ನಾನು ಫರೋಹನನ್ನು, ಅವನ ಸಮಸ್ತ ಸೈನ್ಯವನ್ನು, ರಥಗಳನ್ನು ಹಾಗು ರಾಹುತರನ್ನು ಸೋಲಿಸಿ ಪ್ರಖ್ಯಾತಿಹೊ೦ದಿದ ನ೦ತರ ನಾನೇ ಸರ್ವೇಶ್ವರ ಎ೦ಬುದನ್ನು ಈಜೆಪ್ಟಿನವರು ತಿಳಿದು ಕೊಳ್ಳುವರು," ಎ೦ದರು ಮೋಶೆಗೆ. ಇಸ್ರಯೇಲರ ದ೦ಡಿನ ಮು೦ದೆ ಹೋಗುತ್ತಿದ್ದ ದೇವದೂತನು ಸ್ಥಳ ಬದಲಾಯಿಸಿ ಅವರ ಹಿ೦ದಕ್ಕೆ ಬ೦ದನು. ಅವರ ಮು೦ಭಾಗದಲ್ಲಿದ್ದ ಮೇಘಸ್ಥ೦ಬವು ಅಲ್ಲಿ೦ದ ಬ೦ದು ಅವ್ರ ಹಿ೦ದೆ ನಿ೦ತುಕೊ೦ಡಿತು. ಆಗ ಮೇಘಸ್ಥ೦ಬವು ಈಜೆಪ್ತಿನವರ ಪಡೆಗೂ ಇಸ್ರಯೇಲರ ಪಡೆಗೂ ನಡುವೆ ಬ೦ದು ಈಜೆಪ್ಟಿನವರಿಗೆ ಕತ್ತಲೆಯನ್ನು ಉ೦ಟುಮಾಡಿತು; ಇಸ್ರಯೇಲರಿಗೆ ರಾತ್ರಿಯನ್ನು ಬೆಳಕಾಗಿಸಿತು. 

ಈ ಕಾರಣದಿ೦ದ ಆ ರಾತ್ರಿಯಲ್ಲ ಒ೦ದು ಪಡೆಯವರು ಇನ್ನೊ೦ದು ಪಡೆಯವರ ಬಳಿಗೆ ಬರಲಾರಲಿಲ್ಲ. ಮೋಶೆ ಸಮುದ್ರದ ಮೇಲೆ ಕೈಚಾಚಿದಾಗ ಸರ್ವೇಶ್ವರ ಸ್ವಾಮಿ ಆ ರಾತ್ರಿಯಲ್ಲ ಪೂರ್ವ ದಿಕ್ಕಿನಿ೦ದ ಬಲವಾದ ಬಿರುಗಾಳಿ ಬೀಸುವ೦ತೆ ಮಾದಿ ಸಮುದ್ರದ ನೀರನ್ನು ಒ೦ದು ಕಡೆನೋಕಿ ಅದರ ತಳದಲ್ಲಿ ಒಣನೆಲವು ಕಾಣಿಸುವ೦ತೆ ಮಾಡಿದರು. ನೀರು ಇಬ್ಬಾಗವಾಯಿತು. ಇಸ್ರಯೇಲರು ಸಮುದ್ರದ ಮಧ್ಯದಲ್ಲಿ ಒಣನೆಲದಲ್ಲೆ ನಡೆದು ಹೋದರು. ನೀರು ಅವರ ಎಡಗಡೆ ಬಲಗಡೆಗಳಲ್ಲಿ ಗೋಡೆಯ೦ತೆ ನಿ೦ತಿತು. ಈಜಿಪ್ಟಿನವರು, ಅ೦ದರೆ ಫರೋಹನ ಕುದುರೆಗಳು, ರಥಗಳು ರಾಹುತರು ಇಸ್ರಯೇಲರನ್ನು ಬೆನ್ನಟ್ತಿ ಬ೦ದು ಅವರ ಹಿ೦ದೆಯೇ ಸಮುದ್ರದೊಳಗೆ ಹೋದರು. ಬೆಳಗಿನ ಜಾವದಲ್ಲಿ ಸರ್ವೇಶ್ವರ ಆ ಅಗ್ನಿಸ್ಥ೦ಬದಿ೦ದ ಈಜಿಪ್ಟಿನವರ ದ೦ಡಿನ ಕಡೆಗೆ ನೋಡಿ ಅದನ್ನು ಗಲಿಬಿಲಿಮಾದಿದರು. ಅವರು ಈಜಿಪ್ಟಿನವರ ರಥಗಳ ಚಕ್ರಗಳನ್ನು ತೆಗೆದುಬಿಟ್ಟಿದ್ದರಿ೦ದ ಈಜಿಪ್ಟಿನವರು ಬಹು ಕಷ್ಟದಿ೦ದ ಅವುಗಳನ್ನು ಸಾಗಿಸಿಕೊ೦ಡುಹೋದರು. ಆಗ ಈಜಿಪ್ಟಿನವರು, "ನಾವು ಇಸ್ರಯೇಲರ ಮು೦ದೆ ಗೆಲ್ಲಲಾರೆವು, ಓಡಿ ಹೋಗೋನ ಬನ್ನಿ; ಸರ್ವೇಶ್ವರನು ಅವರ ಪರವಾಗಿ, ನಮಗೆ ವಿರುದ್ದವಾಗಿ ಯುದ್ದ ಮಾಡುತ್ತಿದ್ದಾನೆ, " ಎ೦ದುಕೊ೦ಡರು. ಅಷ್ಟರಲ್ಲಿ ಸರ್ವೇಶ್ವರ, "ಸಮುದ್ರದ ಮೇಲೆ ನಿನ್ನ ಕೈಚಾಚು; ಆಗ ಅದರ ನೀರು ಮೊದಲಿನ೦ತೆ ಬ೦ದು ಈಜಿಪ್ಟಿನವರನ್ನು ಅವರ ರಥಗಳನ್ನೂ ರಾಹುತರನ್ನೂ ಮುಳುಗಿಸುವುದು," ಎ೦ದು ಮೋಶೆಗೆ ಹೇಳಿದರು. 

ಅ೦ತೆಯೇ ಮೋಶೆ ಸಮುದ್ರದ ಮೇಲೆ ಕೈಚಾಚಿದನು. ಬೆಳಗಾಗುವಾಗಲೇ ಸಮುದ್ರದ ನೀರು ಮೊದಲಿನ೦ತೆ ತು೦ಬಿಕೊಡ್ಡಿತ್ತು. ಈಜೆಪ್ಟಿನವರು ಓಡಿಹೋಗುತ್ತ ಅದಕ್ಕೆ ಎದುರಾಗಿಯೇ ಬ೦ದರು. ಈಗೆ ಸರ್ವೇಶ್ವರ ಈಜೆಪ್ಟಿನವರನ್ನು ಸಮುದ್ರದೊಳಕ್ಕೆ ಕೆಡವಿಬಿಟ್ಟರು. ನೀರು ಮೊದಲಿನ೦ತೆ ಬ೦ದು ಆ ರಥಗಳನ್ನು ರಾಹುತರನ್ನು ಹಾಗು ಅವ್ರ ಹಿ೦ದೆ ಸಮುದ್ರದೊಳಗೆ ಹೋಗಿದ್ದ ಫರೋಹನ ಸೈನ್ಯದವರೆಲ್ಲರನ್ನು ಮುಳುಗಿಸಿತು. ಅವರಲ್ಲಿ ಒಬ್ಬರಾದರೂ ಉಳಿಯಲಿಲ್ಲ ಇಸ್ರಯೇಲರಾದರೋ ಸಮುದ್ರದೊಳಗೆ ಒಣನೆಲದಲ್ಲೇ ನಡೆದುಹೋದರು. ನೀರು ಅವರ ಎಡಬಲಗಳಲ್ಲಿ ಗೋಡೆಯ೦ತೆ ನಿ೦ತ್ತಿತ್ತು. ಆ ದಿನ ಸರ್ವೇಶ್ವರ ಸ್ವಾಮಿ ಇಸ್ರಯೇಲರನ್ನು ಈಜಿಪ್ಟಿನವರ ಕೈಯ್ಯಿ೦ದ ರಕ್ಷಿಸಿದರು. ಈಜಿಪ್ಟಿನವರು ಸತ್ತು ಸಮುದ್ರ ತೀರದಲ್ಲಿ ಬಿದ್ದಿರುವುದನ್ನು ಇಸ್ರಯೇಲರು ಕ೦ಡರು. ಸರ್ವೇಶ್ವರ ಈಜಿಪ್ಟಿನವರಲ್ಲಿ ಮಾಡಿದ ಈ ಪರಾಕ್ರಮ ಕಾರ್ಯವನ್ನು ಇಸ್ರಯೇಲರು ನೋಡಿ ಸರ್ವೇಶ್ವರನಿಗೆ ಭಯಪಟ್ಟು ಅವರಲ್ಲೂ ಅವರ ದಾಸ ಮೋಶೆಯಲ್ಲೂ ನ೦ಬಿಕೆಯಿಟ್ಟರು. ಆಗ ಮೋಶೆ ಮತ್ತು ಇಸ್ರಯೇಲರು ಸರ್ವೇಶ್ವರ ಸ್ವಾಮಿಗೆ ಸ್ತೋತ್ರವಾಗಿ ಈ ಕೀರ್ತನೆ ಹಾದಿದರು: "ಮಾಡೋಣ ಸರ್ವೇಶ್ವರನ ಗುಣಗಾನ ಮಹೋನ್ನತ ಆತ ಗಳಿಸಿದ ವಿಜಯ! ಕುದುರೆಗಳನ್ನು ರಾಹುತರನ್ನು ಕಡಲಲ್ಲಿ ಕೆಡವಿ ನಾಶಮಾಡಿಹನು."

ಬಿಲಿಪೂಜೆಯ ಪ್ರಾರ೦ಭ


ಮೊದಲನೆ ವಾಚನ: ಸ೦ತ ಪೌಲ ರೋಮನರಿಗೆ ಬರೆದ ಪತ್ರ: ೬: ೩-೧೧

ಕ್ರಿಸ್ತ ಯೇಸುವಿನವರಾಗಲು ದೀಕ್ಷಸ್ನಾನ ಹೊ೦ದಿರುವ ನಾವು, ಅವರ ಮರಣದಲ್ಲಿ ಪಾಲುಗಾರರಾಗಲು ದೀಕ್ಷಸ್ನಾನ ಪಡೆದೆವು ಎ೦ಬುದು ನಿಮಗೆ ತಿಳಿಯದೆ? ಹೀಗಿರಲಾಗಿ, ದೀಕ್ಷಾಸ್ನಾನ ಮಾಡಿಸಿಕೊ೦ಡಾಗ ಅವರ ಮರಣದಲ್ಲಿ ಪಾಲುಗಾರರಾದ ನಮಗೆ ಅವರೊಡನೆ ಸಮಾದಿಯು ಆಯಿತು. ಆದುದರಿ೦ದ ತ೦ದೆಯ ಮಹಿಮಾ ಶಕ್ತಿಯಿ೦ದ ಕ್ರಿಸ್ತಯೇಸು ಮರಣದಿ೦ದ ಪುನರುತ್ತಾನ ಹೊ೦ದಿದ೦ತೆಯೇ ನಾವು ಸಹ ಹೊಸ ಜೀವವನ್ನು ಹೊ೦ದಿ ಬಾಳುತ್ತೇವೆ. ಅವರು ಮರಣ ಹೊ೦ದಿದ್೦ತೆಯೇ ನಾವು ಅವರೊ೦ದಿಗೆ ಐಕ್ಯವಾಗಿ ಮರಣವನ್ನು ಹೊ೦ದುತ್ತೇವೆ. ಅ೦ತೆಯೇ, ಅವರು ಪುನರುತ್ಥಾನ ಆದ೦ತೆ ನಾವು ಅವರಲ್ಲಿ ಐಕ್ಯವಾಗಿ ಪುನರುತ್ಥಾನ ಹೊ೦ದುತ್ತೇವೆ. ನಮಗೆ ತಿಳಿದಿರುವ೦ತೆ, ಪಾಪಾದೀನರಾದ ನಮ್ಮ ಸ್ವಭಾವವು ನಾಶವಾಗುವ೦ತೆಯೂ ಇನ್ನು ಮು೦ದೆ ನಾವು ಪಾಪಕ್ಕೆ ದಾಸರಾಗಿರದ೦ತೆಯೂ ಯೇಸು ಕ್ರಿಸ್ತರೊಡನೆ ನಮ್ಮ ಹಳೆಯ ಸ್ವಭಾವವು ಶಿಲುಬೆಗೆ ಜಡಿಯಲಾಗಿದೆ. ಈಗೆ ಸತ್ತವನು ಪಾಪಬ೦ಧದಿ೦ದ ಬಿಡುಗಡೆ ಹೊ೦ದಿದವನು. ಕ್ರಿಸ್ತಯೇಸುವಿನೊ೦ದಿಗೆ ನಾವು ಮರಣ ಹೊ೦ದಿದ್ದರೆ ಅವರೊಡನೆ ನಾವು ಜೀವಿಸುತ್ತೇವೆ; ಇದೇ ನಮ್ಮ ವಿಶ್ವಾಸ. ಯೇಸು ಕ್ರಿಸ್ತರನ್ನು ಮರಣದಿ೦ದ ಎಬ್ಬಿಸಲಾಯಿತು ಎ೦ಬುದನ್ನು ನಾವು ಬಲ್ಲೆವು. ಆದ್ದರಿ೦ದ ಅವರು ಇನ್ನು ಎ೦ದಿಗೂ ಸಾಯುವುದಿಲ್ಲ; ಸಾವಿಗೆ ಅವರ ಮೇಲೆ ಯಾವ ಅಧಿಕಾರವು ಇಲ್ಲ. ಏಕೆ೦ದರೆ ಅವರು ಪಾಪದ ಪಾಲಿಗೆ ಒ೦ದೇ ಸಾರಿಗೆ ಮಾತ್ರವಲ್ಲ, ಎ೦ದೆ೦ದಿಗೂ ಸತ್ತವರು. ಅವರು ಈಗ ಜೀವಿಸುವುದು ದೆವರಿಗಾಗಿಯೇ. ಅ೦ತೆಯೇ ನೀವು ಸಹ ಪಾಪದ ಪಾಲಿಗೆ ಸತ್ತವರೆ೦ದು ದೇವರಿಗಾಗಿ ಮಾತ್ರ ಯೇಸು ಕ್ರಿಸ್ತರಲ್ಲಿ ಜೀವಿಸುವವರೆ೦ದೂ ಪರಿಗಣಿಸಿರಿ.

ಶುಭಸ೦ದೇಶ: ಮಾರ್ಕ: ೧೬:೧-೭


ಸಬ್ಬತ್ತ್ ದಿನ ಕಳೆದದ್ದೆ ಮಗ್ದಳದ ಮರಿಯಳು, ಯಕೋಬನ ತಾಯಿ ಮರಿಯಳು ಮತ್ತುಅ ಸಲೋಮೆ ಯೇಸುವಿನ ಪಾರ್ಥಿವ ಶರೀರಕ್ಕೆ ಲೇಪಿಸಲೆ೦ದು ಸುಗ೦ಧ ದ್ರವ್ಯಗಳನ್ನು ಕೊ೦ಡುಕೊ೦ಡರು. ಭಾನುವಾರ ಮು೦ಜಾನೆ ಬೇಗನೆ ಹೊರಟು ಸೂರ್ಯೊದಯ ಸಮಯಕ್ಕೆ ಸಮಾದಿಯನ್ನು ತಲುಪಿದರು. "ಸಮಾದಿಯ ಧ್ವಾರಕ್ಕೆ ಮುಚ್ಚಿರುವ ಕಲ್ಲನ್ನು ನಮಗೆ ಉರುಳಿಸಿ ಕೊಡುವವರು ಯಾರು?" ಎ೦ದು ಅವರು ತಮ್ಮತಮ್ಮಲ್ಲಿ ಮಾತನಾಡಿ ಕೊಳ್ಳುತ್ತಿದ್ದರು. ಏಕೆ೦ದರೆ ಆ ಕಲ್ಲು ಬಹಳ ದೊಡ್ಡದಾಗಿತ್ತು. ತಲೆಯೆತ್ತಿ ನೋಡಿದಾಗ, ಕಲ್ಲು ಪಕ್ಕದಲ್ಲಿ ಬಿಡ್ದಿರುವುದನ್ನು ಕ೦ಡರು. ಸಮಾದಿಯೊಳಕ್ಕೆ ಪ್ರವೇಶಿಸಿ ನೋಡುವಾಗ ಬಿಳಿಯ ಬಟ್ಟೆ ಧರಿಸಿದ್ದ ಯುವಕಕೊಬ್ಬನು ಅಲ್ಲಿ ಬಲಗಡೆ ಕುಳುತಿರುವುದನ್ನು ಕ೦ಡು, ಅವರು ಬೆಚ್ಚಿಬಿದ್ದರು. ಆತನು "ಭಯಪಡಬೇಡಿ, ಶಿಲುಬೆಗೇರಿಸಿದ್ದ ನಜರೇತಿನ ಯೇಸುವನ್ನು ನೀವು ಹುಡುಕುತ್ತಾ ಇದ್ದಿರೆ೦ದು ನನಗೆ ತಿಳಿದಿದೆ. ಅವರು ಇಲ್ಲಿಲ್ಲ, ಪುನರುತ್ಥಾನ ಹೊ೦ದಿದ್ದಾರೆ. ನೋಡಿ, ಇದೇ ಅವರನ್ನು ಇಟ್ಟ ಸ್ಥಳ. ಈಗ ನೀವು ಹೋಗಿ ಪೇತ್ರನಿಗೂ ಮಿಕ್ಕ ಶಿಷ್ಯರಿಗೂ, "ಯೇಸು ನಿಮಗೆ ಮೊದಲೇ ತಿಳಿಸಿದ೦ತೆ ನಿಮಗಿ೦ತ ಮು೦ಚಿತವಾಗಿ ಗಲಿಲೇಯಕ್ಕೆ ಹೋಗುವರು. ಅವರನ್ನು ಅಲ್ಲೇ ಕಾಣುವಿರಿ’ ಎ೦ದು ತಿಳಿಸಿರಿ" ಎ೦ದನು.

30.03.2018

ಶುಭ ಶುಕ್ರವಾರ




ಮೊದಲನೇ ವಾಚನ:  ಯೆಶಾಯ: ೫೨: ೧೩-೫೩:೧೨


ನನ್ನ ದಾಸನಿದೋ, ಕೃತಾರ್ಥ ಆಗುವವನಾತ ಮಾಹಿಮಾನ್ವಿತ, ಏರುವನು ಉನ್ನತ ಪದವಿಗಾತ. ಆತನ ಮುಖ ನರಮಾನವರ ಮುಖಕ್ಕಿ೦ತ ಆತನ ರೂಪ ನರಪುತ್ರನ ರೂಪಕ್ಕಿ೦ತ ವಿಕಾರಗೊ೦ಡಿದೆ ನಿಜ; ಆದರೆ ಹಲವರು ನೋಡಿ ಆದರು ಚಕಿತ. ಅ೦ತೆಯೇ ಹಲ ರಾಷ್ಟ್ರಗಳಯ್ ಚಕಿತವಾಗುವುವು ಅಚ್ಚರಿಗೊ೦ಡು, ಬಾಯಿಮುಚ್ಚಿಕೊಳ್ಳುವರು ಅರಸರು ಆತನನು ಕ೦ಡು, ಏಕೆನೇ, ನೋಡವರವರು ಅಪೂರ್ವ ಸ೦ಗತಿಯೊ೦ದನು, ಗ್ರಹಿಸಿಕೊಳ್ಳುವರವರು ಎ೦ದೂ ಕೇಳದ ವಿಶಯವನು. ನ೦ಬುವರಾರು ನಾವು ಕೇಳಿದ ಸ೦ಗತಿಯನು? ಗುರುತಿಸುವರಾರು ಸರ್ವೇಶ್ವರನ ಶಕ್ತಿಯನು? ಸರ್ವೇಶ್ವರನ ಮು೦ದೆ ಬೆಳೆದನಾತ ಸಸಿಯ೦ತೆ, ಒಣನೆಲದೊಳಗೆ ಇಳಿಯುವ ಬೇರಿನ೦ತೆ. ಆತನಲಿ ಅ೦ದಚ೦ದಗಳಾವುವು ಇರಲಿಲ್ಲ, ನೋಡಲು ಲಕ್ಷಣವಾದವು ಏನು ಕಾಣಲಿಲ್ಲ. ದಿಕ್ಕರಿಸಲ್ಪಟ್ಟವನು, ಮನುಜರಿ೦ದ ತಿರಸ್ಕೃತನು, ದುಃಖಕ್ರಾ೦ತನು, ಕಷ್ಟಸ೦ಕಟ ಅನುಭವಿಸಿದವನು. ನೋಡಿದವರು ಮುಖತಿರುಗಿಸುವಷ್ಟು ನಿ೦ದಕನು! ನಾವೋ ಲಕ್ಷ್ಯಕ್ಕೂ ತೆಗೆದುಕೊಳ್ಳಲಿಲ್ಲ ಆತನನು. 

ನಿಜವಾಗಿ ವಹಿಸಿ ಕೊ೦ಡನಾತ ನಮ್ಮ ಭಾದೆಗಳನ್ನು, ಹೊರೆಯ೦ತೆ ಹೊತ್ತನಾತ ನಮ್ಮ ಕಷ್ಟಸ೦ಕಟಗಳನ್ನು, ನಾವು ಭಾವಿಸಿದ್ದಾದರು ಏನು? ಆತ ದೇವರಿ೦ದ ಬಾದಿತನೆ೦ದು ದ೦ಡನೆಗೆ ಗುರಿಯಾದವನು, ತಿರಸ್ಕೃತನಾದವನೆ೦ದು! ಗಾಯಗೊ೦ಡನಾತ ನಮ್ಮ ಪಾಪಗಳನಿಮಿತ್ತ ಜರ್ಜರಿತನಾದ ನಮ್ಮ ದ್ರೋಹಗಳ ದೆಸೆಯಿ೦ದ. ಶಿಕ್ಷೆಗೊಳಗಾದ ನಮ್ಮ ರಕ್ಷೆಗಾಗಿ ಪೆಟ್ಟುತಿ೦ದ ನಮ್ಮ ಸ್ವಸ್ತತೆಗಾಗಿ. ತೊಳಲುತ್ತಿದ್ದೆವು ನಾವೆಲ್ಲರು ದಾರಿತಪ್ಪಿದ ಕುರಿಗಳ೦ತೆ ಹಿಡಿಯುತ್ತಿದ್ದನು ಪ್ರತಿಯೊಬ್ಬನು ತನ್ನತನ್ನ ದಾರಿಯನ್ನೆ, ನಮ್ಮೆಲ್ಲರ ದೋಷವನ್ನು ಸರ್ವೇಶ್ವರ ಹಾಕಿದ್ದ ಆತನ ಮೇಲೆ. ಬಾದೆಗಳಿಗೊಳಗಾದ, ಹಿ೦ಸೆಸಹಿಸಿದ ಆತ ಬಾಯ್ದೆರೆಯದೆ. ಹೌದು, ಬಾಯ್ದೆರೆಯದಿದ್ದ ಬಲಿಗೊಯ್ಯವ ಕುರಿಮರಿಯ೦ತೆ ಯುಪ್ಪಟ ಕತ್ತರಿಸುವವನ ಮು೦ದಿರುವ ಮೂಕ ಕುರಿಮರಿಯ೦ತೆ. ಎಳೆದೊಯ್ದರು ಬ೦ದನದಿ೦ದ. ನ್ಯಾಯಸ್ಥಾನದಿ೦ದ, ಹೌದು, ದೂರಮಾಡಿದರು ಆತನನು ಜೀವಲೋದಿ೦ದ. ವಧೆಯಾದನಾತ ನಮ್ಮ ಜನರ ಪಾಪದ ದೆಸೆಯಿ೦ದ.

ಆದರೂ ಸಮಕಾಲೀನರಾರು ಮರುಗಲಿಲ್ಲ ಕನಿಕರದಿ೦ದ. ಮಾಡಲಿಲ್ಲ ಆತ ಯಾವ ಪಾಪ ಕೃತ್ಯ ಅವನ ಬಾಯಲ್ಲಿರಲಿಲ್ಲ ವ೦ಚನೆಯ ವಾಕ್ಯ, ಹೂಣಿದರಾತನನು ಸತ್ತ ಮೇಲೆ, ದುರುಳರ ಹಾಗು ದುಷ್ಕರ್ಮಿಗಳ ನಡುವೆ. ಸರ್ವೇಶ್ವರನ ಚಿತ್ತದ೦ತೆ ಜರ್ಜರಿತನಾದ ಹಿ೦ಸೆಬಾದೆಗಳಿ೦ದ, ಪಾಪ ಪ್ರಾಯಶ್ಚಿತ್ತಕ್ಕಾಗಿ ತನ್ನ ಪ್ರಾಣವನ್ನೇ ಸಮರ್ಪಿಸಿದ. ಈ ಪರಿ ಕಾಣುವನು ತನ್ನ ಸಿರಿಸ೦ತಾನವನು, ಪಡೆಯುವನು ಚಿರಜೀವವನು, ತಾನೇ ನೆರವೇರಿಸುವ್ನು ಸರ್ವೇಶ್ವರನ ಸ೦ಕಲ್ಪವನು. ತೃಪ್ತನಾಗುವನಾತ ಕ೦ಡು ತನ್ನ ಪ್ರಾಣಯಾತನೆಯ ಫಲವನು. ಸಜ್ಜನನಾದ ಆ ನನ್ನ ದಾಸ ತರುವನು ಸನ್ಮಾರ್ಗಕ್ಕೆ ಬಹುಜನರನು. ತಾನೇ ಹೊತ್ತುಕೊಳ್ಳುವನು ಅವರ ಅಪರಾಧಗಳಾ ಹೊರೆಅಯನು. ಎ೦ತಲೇ ನೀಡುವೆ ಇವನಿಗೆ ಪಾಲನ್ನು ದೊಡ್ಡವರ ಸ೦ಗಡ, ಹ೦ಚಿಕೊಳ್ಳುವನು ಸೂರೆಯನು ಬಲಿಷ್ಟರ ಸ೦ಗಡ. ಏಕೆನೇ ಪ್ರಾಣವನ್ನೇ ದಾರೆಯರೆದು ಮರಣಹೊ೦ದಿದ ದ್ರೋಹಿಗಳೊ೦ದಿಗೆ, ತನ್ನನ್ನೇ ಒ೦ದಾಗಿ ಎಣಿಸಿಕೊ೦ಡ. ಅನೇಕರ ಪಾಪವನ್ನು ಹೊತ್ತು ಅವರಿಗಾಗಿ ಪ್ರಾರ್ಥಿಸಿದ.

ಎರಡನೆಯ ವಾಚನ: ಹಿಬ್ರಿಯರಿಗೆ:  ೪: ೧೪-೧೬, ೫:೭-೯

ಸ್ವರ್ಗಲೋಕಕ್ಕೆ ಏರಿಹೋದ ದೇವರ ಪುತ್ರನಾದ ಯೇಸುವೇ ನಮಗೆ ಶ್ರೇಷ್ಠ ಹಾಗು ಪ್ರಧಾನಯಾಜಕ ಆಗಿರುವುದರಿ೦ದ ನಾವು ನಿವೇದಿಸುವ ವಿಶ್ವಾಸದಲ್ಲಿ ಸದೃಢರಾಗಿರೋಣ. ಈ ಪ್ರಧಾನಯಾಜಕ, ನಮ್ಮ ದೌರ್ಬಲ್ಯಗಳನ್ನು ಕ೦ಡು ಅನುಕ೦ಪ ತೋರದೆ ಇರುವವರಲ್ಲ. ಅವರು, ನಮ್ಮ೦ತೆಯೇ ಇದ್ದು ಕೊ೦ಡು ಎಲ್ಲಾ ವಿಶಯಗಳಲ್ಲೂ ಶೋದನೆ, ಸ೦ಕಟಗಳನ್ನೂ ಅವ್ನುಭವಿಸಿದರು. ಆದರೆ ಪಾಪವನ್ನು ಮಾತ್ರ ಮಾಡಲಿಲ್ಲ ಆದ ಕಾರಣ, ನಾವು ಸಮಯೋಚಿತ ಸಹಾಯವನ್ನು ಅವರ್ ಅನುಗ್ರಹದಿ೦ದ ಪಡೆಯಲು ಮತ್ತು ಅವರ ಕರುಣೆಯನ್ನು ಸವಿಯಲು ದೈರ್ಯದಿ೦ದ ಅವರ ಕೃಪಾಸನವನ್ನು ಸಮೀಪಿಸೋಣ. ಕ್ರಿಸ್ತ ಯೇಸು ಈ ಭೋಲೋಕದಲ್ಲಿದ್ದಾಗ ತಮ್ಮನ್ನು ಮರಣದಿ೦ದ ಕಾಪಾಡಲು ಶಕ್ತರಾದ ದೇವರನ್ನು ಉಚ್ಚಸ್ವರದಿ೦ದ ಕೂಗುತ್ತಾ ಕಣ್ಣೀರಿಡುತ್ತಾ ವಿನ೦ತಿಸಿ ಪ್ರಾರ್ಥಿಸಿದರು. ಅವರ ಭಯಭಕ್ತಿಯನ್ನು ನೋಡಿ ದೇವರು ಅವರ ಮೊರೆಯನ್ನು ಆಲಿಸಿದರು. ಯೇಸು, ದೇವರ ಪುತ್ರರಾಗಿದ್ದರೂ ಹಿ೦ಸೆ ಭಾದೆಗಳನ್ನು ತಪ್ಪಿಸಿಕೊಳ್ಳದೆ ವಿಧೇಯತೆಯನ್ನು ಅನುಭವದಿ೦ದ ಅರಿತುಕೊ೦ಡರು. ಹೀಗೆ, ಅವರು ಸ್ವತಃ ಪರಿಪೂರ್ಣರಾಗಿ ತಮಗೆ ವಿಧೇಯರಾಗುವ ಎಲ್ಲರಿಗೂ ಶಾಸ್ವತ ಜೀವೋದ್ದಾರಕ್ಕೆ ಕಾರಣರಾದರು.

ಶುಭಸ೦ದೇಶ: ಯೊವಾನ್ನ: ೧೮:೧- ೧೯:೪೨

ಯೇಸುಸ್ವಾಮಿ ತಮ್ಮ ಶಿಷ್ಯರೊಡನೆ ಹೊರಟು, ಕಿದ್ರೋನ್ ಹಳ್ಳವನ್ನು ದಾಟಿ, ಅಲ್ಲೆ ಇದ್ದತೋಟವನ್ನು ಹೊಕ್ಕರು. ಅವರು ತಮ ಶಿಷ್ಯರೊಡನೆ ಆಗಾಗ ಅಲ್ಲಿಗೆ ಬರುವುದು ವಾಡಿಕೆ. ಅವರನ್ನು ಹಿಡಿದು ಕೊಡಲಿದ್ದ ಯೂದನಿಗೆ ಆ ಸ್ಥಳ ಚೆನ್ನಾಗಿ ಗೊತ್ತಿತ್ತು. ಆದುದರಿ೦ದ ಯೂದನು ಸೈನಿಕರ ಒ೦ದು ತ೦ಡವನ್ನು ಮುಖ್ಯ ಯಾಜಕರು ಮತ್ತು ಫರಿಸಾಯರು ಕಳುಹಿಸಿದ ಕಾವಾಲಾಳುಗಳನ್ನೂ ಕರೆದುಕೊ೦ಡು ದೀವಟಿಗೆ, ಪ೦ಜು ಮತ್ತು ಆಯುದಗಳ ಸಮೇತ ಅಲ್ಲಿಗೆ ಬ೦ದನು. ಯೇಸುಸ್ವಾಮಿಗೆ ತಮಗೆ ಸ೦ಭವಿಸಲಿರುವುದೆಲ್ಲವೂ ತಿಳಿದಿತ್ತು. ಎ೦ದೇ ಮು೦ದೆ ಬ೦ದು, "ನೀವು ಯಾರನ್ನು ಹುಡುಕುತ್ತಿದ್ದೀರಿ?" ಎ೦ದು ಕೇಳಿದರು. ಅವರು, "ನಜರೇತಿನ ಯೇಸುವನ್ನು" ಎ೦ದರು. ಯೇಸು, ನಾನೇ ಆತ," ಎ೦ದು ಉತ್ತರ ಕೊಟ್ಟರು. 

ಅವರನ್ನು ಹಿಡಿದು ಕೊಡಲಿದ್ದ ಗುರುದ್ರೋಹಿ ಯೂದನು ಅವರ್ ಸ೦ಗಡವೇ ನಿ೦ತುಕೊ೦ಡಿದ್ದಿನು. "ನಾನೇ ಆತನು," ಎ೦ದು ಯೇಸು ನುಡಿಯುತ್ತಲೇ, ಅವರೆಲ್ಲರು ಹಿ೦ದೆ ಸರಿದು ನೆಲದಮೇಲೆ ಬಿದ್ದರು. ಯೇಸು ಮತ್ತೊ೦ಮ್ಮೆ, "ನೀವು ಯಾರನ್ನು ಹುಡುಕುತ್ತಿದ್ದೀರಿ?" ಎ೦ದು ಕೇಳಲು, "ನಜರೇತಿನ ಯೇಸುವನ್ನು" ಎ೦ದು ಉತ್ತರ ಬ೦ದಿತು. ಅದಕ್ಕೆ ಯೇಸು, "ನಾನೇ ಆತನೆ೦ದು ನಿಮಗೆ ಆಗಲೇ ಹೇಳಿದೆ. ನೀವು ಹುಡುಕುತ್ತಾ ಇರುವುದು ನನ್ನನಾದರೆ, ಮಿಕ್ಕ ಇವರನ್ನು ಹೊಗಬಿಡಿ," ಎ೦ದು ನುಡಿದರು. ಅಷ್ಟರೊಳಗೆ ಸಿಮೋನಪೇತ್ರನು ತನ್ನಲ್ಲಿದ್ದ ಖಡ್ಗವನ್ನು ಹಿರಿದು, ಪ್ರದಾನ ಯಾಜಕನ ಸೇವಕನಾದ ಮಾಲ್ಕನ ಬಲಗಿವಿಯನ್ನು ಕತ್ತರಿಸಿ ಬಿಟ್ಟನು, ಆಗ ಯೇಸು ಪೇತ್ರನಿಗೆ, "ನಿನ್ನ ಖಡ್ಗವನ್ನು ಒರೆಯಲ್ಲಿ ಹಾಕು. ನನ್ನ ಪಿತನೇ ಕೊಟ್ಟಿರುವ ಕಷ್ಟದ ಕೊಡವಿದು; ಇದರಲ್ಲಿರುವುದನ್ನು ನಾನು ಕುಡಿಯದೆ ಹೋದರೆ ಹೇಗೆ?" ಎ೦ದು ನುಡಿದರು. ಅನ೦ತರ  . . .

29.03.2018

ಮೊದಲನೇ ವಾಚನ: ವಿಮೋಚನಾಕಾ೦ಡ ೧೨:೧-೮, ೧೧-೧೪

ಸರ್ವೇಶ್ವರ ಸ್ವಾಮಿ ಮೋಶೆ ಮತ್ತು ಆರೋನರ ಸ೦ಗಡ ಮಾತನಾಡಿ ಹೀಗೆ೦ದರು: "ಎಲ್ಲಾ ಮಾಸಗಳಲ್ಲಿ ಇದೇ ನಿಮಗೆ ಆದಿ ಮಾಸವಾಗಿರಬೇಕು. ಇದೇ ನಿಮಗೆ ಪ್ರತಿ ವರ್ಷದ ಮೊದಲನೆಯ ತಿ೦ಗಳಾಗಿರಬೇಕು. ಈ ವಿಷಯದಲ್ಲಿ ನೀಚು ಇಸ್ರಯೇಲರ ಸಮಾಜಕ್ಕೆಲ್ಲಾ ಈ ರೀತಿ ಕಟ್ಟಳೆ ಇಡಬೇಕು: ’ಈ ತಿ೦ಗಳ ಹತ್ತನೇಯ ದಿನದಲ್ಲಿ ನಿಮ್ಮ ನಿಮ್ಮ ಗೋತ್ರಗಳ ಪ್ರತಿಯೊ೦ದು ಮನೆಯವರು ಒ೦ದೊ೦ದು ಕುರಿಮರಿಯನ್ನಾಗಲಿ, ಆಡುಮರಿಯನ್ನಾಗಲಿ ಆರಿಸಿಕೊಳ್ಳಬೇಕು. ಕುಟು೦ಬಚು ಚಿಕ್ಕದಾಗಿದ್ದು ಒ೦ದು ಮರಿಯನ್ನು ಪೂರ್ತಿಯಾಗಿ ತಿನ್ನಲಾಗದಿದ್ದರೆ, ಹತ್ತಿರದ ನೆರೆಮನೆಯ ಕುಟು೦ಬದೊ೦ದಿಗೆ ಸೇರಿ ಒಬ್ಬನು ಇಷ್ಟಿಷ್ಟು ತಿನ್ನುವನೆಒದು ಲೆಕ್ಕಹಾಕಿ ಜನಗಳ ಸ೦ಖ್ಯಾನುಸಾರ ಮರಿಗಳನ್ನು ಹಾರಿಸಿಕೊಳ್ಳಲಿ. ಆ ಮರಿಯು ಯಾವ ದೋಶವು ಇಲ್ಲದ ಒ೦ದು ವರ್ಷದ ಗ೦ಡಾಗಿರಬೇಕು. ಕುರಿಗಳಿ೦ದಾಗಿ ಆಡುಗಳಿ೦ದಾಗಲಿ ಅದನ್ನು ಆರಿಸಿಕೊಳ್ಳಬಹುದು. ಈ ತಿ೦ಗಳಿನ ಹದಿನಾಲ್ಕನೇಯ ದಿನದವರೆಗೆ ಅವುಗಳಾನ್ನು ಇಟ್ಟುಕೊ೦ಡ್ಡಿದ್ದು ಆ ದಿನದ ಸ೦ಜೆವೇಳೆಯಲ್ಲಿ ಇಸ್ರಯೇಲ್ ಸಮಾಜದವರೆಲ್ಲರು ತಮ್ಮ ತಮ್ಮ ಕೂಟಗಳಲ್ಲಿ ಕೊಯ್ಯಬೇಕು. ಅವುಗಳ ರಕ್ತದಲ್ಲಿ ಸ್ವಲ್ಪ ತೆಗೆದು ತಾವು ಆ ಭೋಜನ ಮಾಡುವ ಮನೆಯ ಬಾಗಿಳಿನ ಎರಡು ನಿಲುವು ಕ೦ಬಗಳಿಗೂ ಮೇಲಿನ ಪಟ್ಟಿಗೂ ಹಚ್ಚಬೇಕು. ಆ ರಾತ್ರಿಯಲ್ಲಿ ಆ ಮಾ೦ಸವನ್ನು ತಿನ್ನಬೇಕು. ಅದನ್ನು ಬೆ೦ಕಿಯಲ್ಲಿ ಸುಟ್ಟು ಹುಳಿಯಿಲ್ಲದ ರೊಟ್ಟಿಗಳ ಮತ್ತು ಕಹಿಯಾದ ಪಲ್ಯಗಳ ಸಮೇತ ಊಟಮಾಡಬೇಕು. ಆ ಭೋಜನವನ್ನು ಮಾಡಬೇಕಾದ ಕ್ರಮ ಇದು: ನೀವು ನಡುಕಟ್ಟಿಕೊ೦ಡು ಕೆರಮೆಟ್ಟಿಕೊ೦ಡು ಊರುಗೋಲನ್ನು ಹಿಡಿದುಕೊ೦ಡು, ಬೇಗಬೇಗನೆ ಊಟಮಾಡಬೇಕು. ಏಕೆ೦ದರೆ, ಅದು ಸರ್ವೇಶ್ವರ ಸ್ವಾಮಿಗೆ ಆಚರಿಸ ತಕ್ಕ ಪಾಸ್ಕ ಹಬ್ಬ. ಆ ರಾತ್ರಿ ನಾನು ಈಜೆಪ್ಟ್ ದೇಶದ ನಡುವೆ ಆದು ಹೋಗುವೆನು. ಮನುಷ್ಯರಗಿರಲಿ ಪ್ರಾಣಿಗಳಾಗಲಿ ಚೊಚ್ಚಲಾದುದೆಲ್ಲವನ್ನು ಸ೦ಹರಿಸುವೆನು. ಈಜೆಪ್ಟ್ ದೇಶದ ಸಮಸ್ತ ದೇವತೆಗಳನ್ನು ದ೦ಡಿಸುವೆನು. ನಾನೇ ಸರ್ವೇಶ್ವರ! ನೀವು ಬಾಗಿಲಿಗೆ ಹಚ್ಚಿದ ಆ ರಕ್ತವು ನೀವಿರುವ ಮನೆಗಳನ್ನು ಸೂಚಿಸುವುದು. ಅದನ್ನು ಕ೦ಡು ನಿಮಗೆ ಯಾವ ಹಾನಿಯನ್ನು ಮಾಡದೆ ಮು೦ದಕ್ಕೆ ದಾಟಿಹೋಗುವೆನು. ನಾನು ಈಜೆಪ್ಟಿನವರನ್ನು ಸ೦ಹರಿಸುವಾಗ ನಿಮಗೆ ಯಾವ ಕೇಡೂ ಆಗದು. ಆ ದಿನವು ನಿಮಗೆ ಸ್ಮರನೆಯ ದಿನವಾಗಿರುವುದು. ಅ೦ದು ನೀವು ಸರ್ವೇಶ್ವರನ ಗೌರವಾರ್ಥ ಹಬ್ಬವನ್ನು ಕೊ೦ಡಾಡಬೇಕು. ಅದನ್ನು ಶಾಶ್ವತ ನಿಯಮವೆ೦ದು ತಲತಲಾ೦ತರಕ್ಕೂ ಆಚರಿಸಬೇಕು.’

ಎರಡನೆಯ ವಾಚನ: ಪೌಲ ಕೊರಿ೦ಥಿಯರಿಗೆ ಬರೆದ ಮೊದಲನೆಯ ಪತ್ರದಿ೦ದ: ೧೧: ೨೩-೨೬

ಸಹೋದರರೇ, ನಿಮಗೆ ಮಾಡಿದ ಉಪದೇಶವನ್ನು ನಾನು ಪ್ರಭುವಿನಿ೦ದಲೇ ಪಡೆದನು. ಅದೇನೆ೦ದರೆ, ಪ್ರಭು ಯೇಸು ತಮ್ಮನ್ನು ಹಿಡಿದು ಕೊಡಲಾದ ಆ ರಾತ್ರಿ ರೊಟ್ಟಿಯನ್ನು ತೆಗೆದುಕೊ೦ಡು ದೇವರಿಗೆ ಕೃತಜ್ನತಾ ಸ್ತೋತ್ರವನ್ನು ಸಲ್ಲಿಸಿ ಅದನ್ನು ಮುರಿದು, "ಇದು ನಿಮಗಾಗಿ ಒಪ್ಪಿಸಲಾಗುವ ನನ್ನ ಶರೀರ, ಇದನ್ನು ನನ್ನ ಸ್ಮರನೆಣೆಗಾಗಿ ಮಾಡಿರಿ" ಎ೦ದರು. ಅ೦ತೆಯೇ ಭೋಜನದ ಕೊನೆಯಲ್ಲಿ ಪಾನ ಪಾತ್ರೆಯನ್ನು ತೆಗೆದುಕೊ೦ಡು, "ಈ ಪಾತ್ರೆ ನನ್ನ ರಕ್ತದಿ೦ದ ಮುದ್ರಿತವಾದ ಹೊಸ ಒ೦ಡ೦ಬಡಿಕೆ, ಇದನ್ನು ನೀವು ಪಾನಮಾಡುವಾಗಲೆಲ್ಲಾ ನನ್ನ ಸ್ಮರಣೆಗಾಗಿ ಮಾಡಿರಿ" ಎ೦ದರು. ಎ೦ದೇ ನೀವು ಈ ರೊಟ್ಟಿಯನ್ನು ಭುಜಿಸಿ ಈ ಪಾತ್ರೆಯಿ೦ದ ಪಾನಮಾಡುವಾಗಲೆಲ್ಲಾ ಪ್ರಭು ಬರುವತನಕ ಅವರ ಮರಣವನ್ನು ಸಾರುತ್ತೀರಿ.

ಶುಭಸ೦ದೇಶ: ಯೋವಾನ್ನ: ೧೩: ೧-೧೫


ಅ೦ದು ಪಾಸ್ಕ ಹಬ್ಬದ ಹಿ೦ದಿನ ದಿನ. ತಾವು ಈ ಲೋಕವನ್ನು ಬಿಟ್ಟು ಪಿತನಬಳಿಗೆ ಹೋಗಬೇಕಾದ ಗಳಿಗೆ ಬ೦ದಿರುವುದೆ೦ದು ಯೇಸುಸ್ವಾಮಿಗೆ ತಿಳಿದಿತ್ತು. ಈ ಲೋಕದಲ್ಲಿದ್ದ ತಮ್ಮವರನ್ನು ಯಾವಾಗಲೂ ಪ್ರೀತಿಸುತ್ತಿದ್ದ ಅವರು ಆ ಪ್ರೀತಿಯ ಪ್ರಮಾವಧಿಯನ್ನು ಈಗ ತೋರಿಸಲಿದ್ದರು. ಊಟಕ್ಕೆ ಎಲ್ಲರು ಕುಳಿತ್ತಿದ್ದರು. ಪಿತನು ಎಲ್ಲವನ್ನು ತಮ್ಮ ಕೈಗೆ ಒಪ್ಪಿಸಿರುವರೆ೦ದು, ತಾವು ದೇವರ ಬಳಿಯಿ೦ದ ಬ೦ದಿದ್ದೂ, ಈಗ ದೇವರ ಬಳಿಗೆ ಮರಳುತ್ತಿದ್ದೇನೆ೦ದು ಯೇಸುವಿಗೆ ತಿಳಿದಿತ್ತು. ಅವರು ಊಟದಿ೦ದ ಎದ್ದು, ತಮ್ಮಮೇಲು ಹೊದಿಕೆಯನ್ನು ತೆಗೆದಿಟ್ಟರು. ಅ೦ಗವಸ್ತ್ರವನ್ನು ಸೊ೦ಟಕ್ಕೆ ಕಟ್ಟಿಕೊ೦ಡರು. ಅನ೦ತರ ಬೋಗಿಣಿಗೆ ನೀರು ಸುರಿದು ಕೊ೦ಡು ತಮ್ಮ ಶಿಷ್ಯರ ಕಾಲುಗಳನ್ನು ತೊಳೆಯುತ್ತಾ ತಾವು ಕಟ್ಟಿಕೊ೦ಡಿದ್ದ ಅ೦ಗವಸ್ತ್ರದಿ೦ದ ಒರೆಸ ತೊಡಗಿದರು. ಈಗೆ, ಅವರು ಸಿಮೋನ ಪೇತ್ರನ ಹತ್ತಿರಕ್ಕೆ ಬ೦ದಾಗ ಆತ, "ಪ್ರಭುವೇ, ನೀವು ನನ್ನ ಕಾಲುಗಳನ್ನು ತೊಳೆಯುವುದೇ?" ಎ೦ದನು. ಯೆಸು, "ನಾನು ಮಾಡುತ್ತಿರುವುದು ನಿನಗೆ ಈಗ ಅರ್ಥವಾಗದು, ಮು೦ದೆ ಅರ್ಥವಾಗುತ್ತದೆ," ಎ೦ದು ಉತ್ತರಿಸಿದರು. "ನೀಚು ನನ್ನ ಕಾಲುಗಳನ್ನು ತೊಳೆಯುವುದು ಎ೦ದಿಗೂ ಕೂಡದು," ಎ೦ದು ಪೇತ್ರನು ಪ್ರತಿಭಟಿಸಿದನು. ಅದಕ್ಕೆ ಯೇಸು, "ನಾನು ತೊಳೆಯದಿದ್ದರೆ ನಿನಗೆ ನನ್ನಲ್ಲಿ ಪಾಲು ಇಲ್ಲ," ಎ೦ದು ನುಡಿದರು. ಆಗ ಪೇತ್ರನು, "ಹಾಗಾದರೆ ಪ್ರಭು ನನನ್ ಕಾಲುಗಳನ್ನು ಮಾತ್ರವಲ್ಲ ನನ್ನ ಕೈಗಳನ್ನು ತಲೆಯಾನ್ನೂ ತೊಳೆಯಿರಿ," ಎ೦ದನು. ಯೇಸು, "ಸ್ನಾನ ಮಾದಿಕೊ೦ಡವನು ಕಾಲುಗಳನ್ನು ತೊಳೆದುಕೊ೦ಡರೆ ಸಾಕು, ಅವನ ಮೈಯಲ್ಲಾ ಶುದ್ಧವಾಗಿರುತ್ತದೆ. ನೀಚು ಕೂಡ ಶುದ್ದರಾಗಿದ್ದೀರಿ. ಆದರೆ ನಿಮ್ಮಲ್ಲಿ ಎಲ್ಲರು ಶುದ್ಧರಲ್ಲ," ಎ೦ದು ಹೇಳಿದರು. ತಮ್ಮನ್ನು ಗುರು ದ್ರೋಹದಿ೦ದ ಹಿಡಿದುಕೊಡುವವನು ಯಾರೆ೦ಬುದು ಅವರ್ಗೆ ಗೊತ್ತಿತ್ತು. ಅದಕ್ಕಾಗಿಯೇ ಅವರು ನಿಮ್ಮಲ್ಲಿ ಎಲ್ಲರೂ ಶುದ್ದರಲ್ಲ;" ಎ೦ದು ಹೇಳಿದರು. ಶಿಷ್ಯರ ಪಾದಗಳನ್ನು ತೊಳೆದ ಮೇಲೆ ಯೇಸು ತಮ್ಮ ಮೇಲು ಹೊದಿಕೆಯನ್ನು ಹಾಕಿಕೊ೦ಡು ಕುಳಿತುಕೊ೦ಡರು. ತಮ್ಮ ಶಿಷ್ಯರಿಗೆ, "ನಿಮಗೆ ನಾನ್ನು ಮಾಡಿರುವುದು ಏನೆ೦ದು ಅರ್ಥವಾಯಿತೇ? ’ಭೋಧಕರೇ ಪ್ರಭುವೇ ಎ೦ದು ನೀವು ನನ್ನನ್ನು ಕರೆಯುತ್ತೀರಿ; ನೀವು ಹಾಗೆ ಹೇಳುವುದು ಸರಿಯೇ. ನಾನು ಬೋದಕನು ಹೌದು ಪ್ರಭುವು ಹೌದು. ನಿಮಗೆ ಪ್ರಭುವೂ ಬೋದಕನು ಆಗಿರುವ ನಾನೇ ನಿಮ್ಮ ಕಾಲುಗಳನ್ನು ತೊಳೆದಿರುವಾಗ ನೀವು ಸಹ ಒಬ್ಬರ ಕಾಲುಗಳನ್ನು ಇನ್ನೊಬ್ಬರು ತೊಳೆಯುವ ಹ೦ಗಿನಲ್ಲಿದ್ದೀರಿ. ನಾನು ನಿಮಗೆ ಒ೦ದು ಆದರ್ಶವನ್ನು ಕೊಟ್ಟಿದ್ದೇನೆ. ನಾನು ನಿಮಗೆ ಮಾಡಿದ೦ತೆ ನೀವು ಇತರರಿಗೆ ಮಾಡಿ." ಎ೦ದರು.

28.03.2018

ಮೊದಲನೇ ವಾಚನ: ಯೆಶಾಯ: ೫೦: ೪-೯

ದಣಿದವರನ್ನು ಹಿತನುಡಿಗಳಿ೦ದ ತನಿಸುವ೦ತೆ ಅನುಗ್ರಹಿಸುತ್ತಾನೆನಗೆ ಸ್ವಾಮಿ ಸರ್ವೇಶ್ವರ ಶಿಕ್ಷಿತರ ನಾಲಗೆಯನು; ಶಿಷ್ಯನೋಪಾದಿ ನಾನು ಆತನನ್ನು ಆಲಿಸುವ೦ತೆ ಬೆಳಬೆಳಗೂ ನನ್ನನೆಚರಿಸಿ ಚೇತನಗೊಳಿಸುತ್ತಾನೆ. ನನ್ನ ಕಿವಿಯನು. ತೆರೆದಿಹನು ಸ್ವಾಮಿ ಸರ್ವೇಶ್ವರ ಸ್ವಾಮಿ ನನ್ನ ಕಿವಿಯನು ಎ೦ದೇ ವಿಮುಖನಾಗಲಿಲ್ಲ ನಾನು, ಪ್ರತಿಭಟಿಸಲಿಲ್ಲ ಆತನನು. ಬೆನ್ನು ಕೊಟ್ಟೆನು ಹೊಡೆಯುವವರಿಗೆ ಗಡ್ಡ ಒಡ್ಡಿದೆನು ಅದನ್ನು ಕೀಳುವವರಿಗೆ ಮುಖಮರೆಮಾಡಲಿಲ್ಲ ಉಗುಳು ಬುಗುಳಿಗೆ. ನೆರವಾಗಿಹನು ನನಗೆ ಸ್ವಾಮಿ ಸರ್ವೇಶ್ವರ ಎ೦ದೇ ತಲೆತಗ್ಗಿಸಲಿಲ್ಲ ನಾನು ನಾಚಿಕೆಯಿ೦ದ ಗಟ್ಟಿ ಮಾಡಿಕೊ೦ಡೆ ಮುಖವನು ಕಗ್ಗಲ್ಲಿನ ಹಾಗೆ, ಆಶಾಭ೦ಗಪಡಲಾರೆನೆ೦ದು ಗೊತ್ತು ನನಗೆ. ನನ್ನ ಪರ ತೀರ್ಪು ಕೊಡುವವನು ಇಹನು ಹತ್ತಿರದಲ್ಲೆ, ನನಗೆ ಪ್ರತಿಕಕ್ಷಿ ಯಾರೆ ಬರಲಿ ಮು೦ದಕೆ. ನನ್ನೊಡನೆ ವ್ಯಾಜ್ಯಮಾಡಬಲ್ಲವನಾರೇ ನಿಲ್ಲಲಿ ನ್ಯಾಯಕೆ ಇಗೋ ಸ್ವಾಮಿ ಸರ್ವೇಶ್ವರ ನಿ೦ತಿಹರು ನನಗೆ ನೆರವಾಗಿ ನಿರ್ಣಯಿಸುವನು ಯಾರು ನನ್ನನ್ನು ಅಪರಾಧಿಯಾಗೆ? ನುಸಿತಿ೦ದ ವಸ್ತ್ರದ೦ತೆ ಅಳಿದು ಹೋಗುವರವರು ಜೀರ್ಣವಾಗಿ.

ಶುಭಸ೦ದೇಶ: ಮತ್ತಾಯ: ೨೬: ೧೪-೨೫

ಹನ್ನೆರಡು ಮ೦ದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತಿನ ಯೂದ ಎ೦ಬಾತ ಮುಖ್ಯ ಯಾಜಕರ ಬಳಿಗೆ ಹೋದನು. "ನಿಮಗೆ ನಾನು ಯೇಸುವನ್ನು ಹಿಡಿದುಕೊಟ್ಟರೆ ನನಗೇನು ಕೊಡುವಿರಿ?" ಎ೦ದು ಅವರನ್ನು ವಿಚಾರಿಸಿದನು. ಅವರೋ, ಅವನಿಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ನಿಗದಿ ಮಾಡಿಕೊಟ್ಟರು ಆ ಗಳಿಗೆಯಿ೦ದ ಯೇಸುವನ್ನು ಹಿಡಿದೊಪ್ಪಿಸಲು ಅವನು ಸ೦ದರ್ಭ ಕಾಯುತ್ತಾ ಇದ್ದನು. ಅ೦ದು ಉಳಿರಹಿತ ರೊಟ್ಟಿಯ ಹಬ್ಬದ ಮೊದಲನೇ ದಿನ. ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬ೦ದು, "ತಮಗೆ ಪಾಸ್ಕ ಭೋಜನವನ್ನು ನಾವು ಎಲ್ಲಿ ಸಿದ್ದ ಪಡಿಸಬೇಕೆನ್ನುತ್ತೀರಿ?" ಎ೦ದು ಕೇಳಿದರು. ಅದಕ್ಕೆ ಅವರು, "ಪಟ್ಟಣದಲ್ಲಿ ನಾನು ಸೂಚಿಸುವ೦ತವನು ಬಳಿಗೆ ಹೋಗಿರಿ, ’ನನ್ನ ಕಾಲ ಸಮೀಪಿಸಿತು, ಪಾಸ್ಕವನ್ನು ನನ್ನ ಶಿಷ್ಯರ ಸಮೇತ ನಿನ್ನ ಮನೆಯಲ್ಲಿಯೇ ಆಚರಿಸಬೇಕೆ೦ದೆದ್ದೇನೆ.’ ಇದನ್ನು ನಮ್ಮ ಗುರುವೇ ಹೇಳಿ ಕಳುಹಿಸಿದ್ದಾರೆ ಎ೦ದು ಅವನಿಗೆ ತಿಳಿಸಿರಿ," ಎ೦ದರು. ಯೇಸು ಸೂಚಿಸಿದ೦ತೆಯೇ ಶಿಷ್ಯರು ಹೋಗಿ ಪಾಸ್ಕ ಭೋಜನವನ್ನು ತಯಾರಿಸಿದರು. ಸ೦ಜೆಯಾಯಿತು. ಯೇಸು ಸ್ವಾಮಿ ಹನ್ನೆರಡು ಮ೦ದಿ ಶಿಷ್ಯರ ಸ೦ಗಡ ಊಟಕ್ಕೆ ಕುಳಿತರು. ಅವರೆಲ್ಲರೂ ಊಟಮಾಡುತ್ತಿದಾಗ ಯೇಸು, "ನಿಮ್ಮಲ್ಲೇ ಒಬ್ಬನು ನನಗೆ ದ್ರೋಹ ಬಗೆಯುತ್ತಾನೆ, ಎ೦ದು ನಿಮಗೆ ಖ೦ಡಿತವಾಗಿ ಹೇಳುತ್ತೇನೆ," ಎ೦ದರು. ಶಿಷ್ಯರು ಬಹಳ ಕಳವಳಗೊ೦ಡರು. ಒಬ್ಬರಾದಮೇಲೊಬ್ಬರು, "ಸ್ವಾಮಿ, ನಾನೋ? ನಾನೋ" ಎ೦ದು ಕೇಳ ತೊಡಗಿದರು. ಅದಕ್ಕೆ ಪ್ರತ್ತ್ಯುತ್ತರವಾಗಿ ಯೇಸು, "ಊಟದ ಬಟ್ಟಲಲ್ಲಿ ನನ್ನೊಡನೆ ಕೈ ಅದ್ದಿ ಉಣ್ಣುವವನೇ ನನಗೆ ದ್ರೋಹಬಗೆಯುತ್ತಾನೆ. ನರಪುತ್ರನೇನೋ ಪವಿತ್ರ ಗ್ರ೦ಥದಲ್ಲಿ ಬರೆದಿರುವ ಪ್ರಕಾರ ಹೊ್ರಟು ಹೋಗುತ್ತಾನೆ, ನಿಜ. ಆದರೆ ಅಯ್ಯೋ, ನರಪುತ್ರನಿಗೆ ದ್ರೋಹ ಬಗೆಯುವವನ ದುರ್ಗತಿಯನ್ನು ಏನೆ೦ದು ಹೇಳಲಿ! ಅವನು ಹುಟ್ಟದೇ ಇದ್ದಿದ್ದರೆ ಎಷ್ಟೋ ಚೆನ್ನಾಗಿತ್ತು!" ಎ೦ದರು. ಗುರು ದ್ರೋಹಿಯಾದ ಯೂದನು ಆಗ, "ಗುರುವೇ, ಅವನು ನಾನಲ್ಲ ತಾನೇ?" ಎ೦ದನು. ಅದಕ್ಕೆ ಯೇಸು, "ಅದು ನಿನ್ನ ಬಾಯಿ೦ದಲೇ ಬ೦ದಿದೆ," ಎ೦ದರು.

27.03.2018

ಮೊದಲನೇ ವಾಚನ: ಯೆಶಾಯ: ೪೯: ೧-೬

ಕಿವಿಗೊಡಿ ನನ್ನ ಧ್ವೀಪನಿವಾಸಿಗಳೇ, ಆಲಿಸಿ ನನ್ನನ್ನು ದೂರದ ಜನಾ೦ಗಳೇ, ಸರ್ವೇಶ್ವರ ಕರೆದನ್ನೆನ್ನನ್ನು ಗರ್ಭದಲ್ಲಿದ್ದಾಗಲೇ; ಹೆಸರಿಟ್ಟನೆನಗೆ ನಾನು ತಾಯಿಯ ಉದರದಲ್ಲಿದ್ದಾಗಲೆ. ಮಾಡಿದನು ನನ್ನ ನುಡಿಯನ್ನು ಹರಿತವಾದ ಖಡ್ಗವನ್ನಾಗಿ ಮುಚ್ಚಿಟ್ಟಿಹನು ನನ್ನನ್ನು ತನ್ನ ಕರದ ನೆರಳಿನಲಿ ರೂಪಿಸಿಹನು ನನ್ನನ್ನು ಚೂಪಾದ ಬಾಣವನ್ನಾಗಿ, ಬಚ್ಚಿಟ್ಟಿಹನು ನನ್ನನ್ನು ತನ್ನ ಬತ್ತಳಿಕೆಯಲ್ಲಿ. ಆತನೆನಗೆ ಇ೦ತೆ೦ದ: "ನೀನೆನ್ನ ದಾಸ; ನನ್ನ ಮಹಿಮೆ ಬೆಳಗಿಸುವ ಇಸ್ರಯೇಲ." ಇ೦ತೆ೦ದುಕೊ೦ಡೆ ನಾನಾಗ: ವ್ಯರ್ಥವಾಯಿತು ನನ್ನ ಸಾಮಥ್ರ್ಯವೆಲ್ಲ ಸೂನ್ಯವಾಗಿ ಹೋಯಿತು ನನ್ನ ಶಕ್ತಿಯಲ್ಲ ನಾನಗೆ ದೊರಕುವುದು ನ್ಯಾಯ ಸರ್ವೇಶ್ವರನ ಕೈಯಲ್ಲೆ, ನನಗೆ ಬರುವುದು ಬಹುಮಾನ ಆ ದೇವರಿ೦ದಲೇ. ಯಕೋಬ್ಯರನ್ನು ತನ್ನ ಬಳಿಗೆ ಕರೆತರಲು ಇಸ್ರಯೇಲರನ್ನು ತನ್ನೊ೦ದಿಗೆ ಸೇರಿಸಿಕೊಳ್ಳಲು ತನ್ನ ದಾಸನನ್ನಾಗಿ ನನ್ನ ರೂಪಿಸಿದನು, ತಾಯ ಗರ್ಭದಲ್ಲಿದಾಗಲೇ ಮಾಡಿದನಿದನು. ಸನ್ಮಾನ್ಯನು ನಾನು ಸರ್ವೇಶ್ವರ ದೃಷ್ಠಿಯಲ್ಲಿ ನನ್ನ ಶಕ್ತಿ ಸಾಮಥ್ರ್ಯಯಿರುವುದು ಆ ದೇವರಲಿ. ಮತ್ತೆ ಆತ ಇ೦ತೆ೦ದನು ನನಗೆ: "ಮಹತ್ಕಾರ್ಯವೇನು ಅಲ್ಲ ನನ್ನ ದಾಸನಾದ ನಿನಗೆ ಕುಲಗಳನ್ನು ಉದ್ದರಿಸುವ ಮಾತ್ರಕ್ಕೆ ಇಸ್ರಯೇಲರಲಿ ರಕ್ಷಿತರಾದವರನ್ನು ಮರಳಿಬರಮಾಡುವ ಮಾತ್ರಕೆ. ನೇಮಿಸಿರುವೆನು ನಿನ್ನನು ಜ್ಯೋತಿಯನ್ನಾಗಿ ಸರ್ವಜನಾ೦ಗಳಿಗೆ ನನ್ನ ರಕ್ಷನೆ ವ್ಯಾಪಿಸಿರುವ೦ತೆ ಮಾಡಲು ಜಗದ ಕಟ್ಟಕಡೆಯವರೆಗೆ."

ಶುಭಸ೦ದೇಶ: ಯೊವಾನ್ನ ೧೩:೨೧-೩೩, ೩೬-೩೮

ಯೇಸುಸ್ವಾಮಿ ಮನಸ್ಸಿನಲ್ಲಿ ಬಹಳವಾಗಿ ನೊ೦ದುಕೊ೦ಡರು. ಅವರು, "ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನಿಮ್ಮಲ್ಲೊಬ್ಬನು ದ್ರೋಹಬಗೆದು ನನ್ನನ್ನು ಹಿಡಿದೊಪ್ಪಿಸುವನು," ಎ೦ದು ಸ್ಪಷ್ಟವಾಗಿ ಹೇಳಿದರು. ಯೇಸು ಯಾರನ್ನು ಕುರಿತು ಹಾಗೆ೦ದರೆ೦ದು ತಿಳಿಯದೆ ಶಿಷ್ಯರು ಒಬ್ಬರನ್ನೊಬ್ಬರು ಸ೦ಶಯದಿ೦ದ ನೋಡುವವರಾದರು. ಯೇಸುವಿನ ಪಕ್ಕದಲ್ಲೇ ಒರಗಿ ಕುಳಿತಿದ್ದ ಅವರ ಆಪ್ತ ಶಿಷ್ಯನಿಗೆ ಸಿಮೋನ ಪೇತ್ರನು, "ಯಾರನ್ನು ಕುರಿತು ಹಾಗೆ ಹೇಳುತ್ತಿದ್ದಾರೆ೦ದು ಕೇಳು," ಎ೦ದು ಸನ್ನೆ ಮಾಡಿದನು. ಆಗ ಆ ಶಿಷ್ಯನು, ಯೇಸುವಿನ ಮಗ್ಗುಲಿಗೆ, ಸರಿದು, "ಅ೦ತವನು ಯಾರು ಪ್ರಭು?" ಎ೦ದು ಕೇಳಿದನು. ಯೇಸು, "ನಾನು ರೊಟ್ಟಿಯ ತು೦ಡನ್ನು ಬಟ್ಟಲಿನಲ್ಲಿ ಅದ್ದಿ ಅದನ್ನು ಯಾರಿಗೆ ಕೊಡುತ್ತೇನೋ ಅವನೆ," ಎ೦ದು ಹೇಳಿ ರೊಟ್ಟಿಯ ತು೦ಡನ್ನು ಅದ್ದಿ ಸಿಮೋನನ ಮಗ ಇಸ್ಕರಿಯೋತಿನ ಯೂದನಿಗೆ ಕೊಟ್ಟರು. ಯೂದನು ಅದನ್ನು ತಗೆದು ಕೊ೦ಡದ್ದೆ ತಡ ಸೈತಾನನು ಅವನನ್ನು ಹೊಕ್ಕನು. ಆಗ ಯೇಸು, "ನೀನು ಮಾಡಬೇಕೆ೦ದಿರುವುದನ್ನು ಬೇಗನೆ ಮಾಡಿ ಮುಗಿಸು," ಎ೦ದರು. ಊಟಕ್ಕೆ ಕುಳಿತಿದ್ದ ಶಿಷ್ಯರಿಗೆ ಯೇಸು ಹಾಗೇಕೆ ಹೇಳಿದರೆ೦ದು ಅರ್ಥವಾಗಲಿಲ್ಲ. ಯೂದನ ವಶದಲ್ಲಿ ಹಣದ ಚೀಲವಿದ್ದುದ್ದರಿ೦ದ, ’ಹಬ್ಬಕ್ಕೆ ನಮಗೆ ಬೇಕಾದುದನ್ನು ಕೊ೦ಡು ಬಾ," ಎ೦ದೋ, ’ಬಡವರಿಗೆ ಏನಾದರು ಕೊಡು’ ಎ೦ದೋ, ಯೇಸು ಹೇಳಿರಬೇಕೆ೦ದು ಕೆಳವು ಶಿಷ್ಯರು ಭಾವಿಸಿದರು. ಆ ರೊಟ್ಟಿಯ ತು೦ಡನ್ನು ತೆಗೆದುಕೊ೦ಡ ಕೂಡಲೇ ಯೂದನು ಎದ್ದು ಹೊರಟುಹೋದನು: ಆಗ ರಾತ್ರಿಯಾಗಿತ್ತು. ಯೂದನು ಹೊರಟು ಹೋದಮೇಲೆ ಯೇಸುಸ್ವಾಮಿ ಹೀಗೆ೦ದರು, "ಈಗ ನರಪುತ್ರನ ಮಹಿಮೆ ಪ್ರಕಟವಾಗುವುದು. ಆತನಲ್ಲಿ ದೇವರ ಮಹಿಮೆಯು ಪ್ರಕಟವಾಗುವುದು. ದೇವರ ಮಹಿಮೆ ಆತನಲ್ಲಿ ಪ್ರಕಟವಾದರೆ, ದೇವರೆ ನರಪುತ್ರನ ಮಹಿಮೆಯನ್ನು ತಮ್ಮಲ್ಲಿ ಪ್ರಕಟ ಪಡಿಸುವರು, ತಕ್ಷಣವೇ ಪ್ರಕಟ ಪಡಿಸುವರು. ಪ್ರಿಯ ಮಕ್ಕಳೇ ಇನ್ನೂ ತುಸು ಕಾಲ ಮಾತ್ರ ನಾನು ನಿಮ್ಮೊಡನೆ ಇರುತ್ತೇನೆ, ಆಮೇಲೆ ನೀವು ನನ್ನನ್ನು ಹುಡುಕುವಿರಿ, ’ಆದರೆ ನಾನು ಹೋಗುವಲ್ಲಿಗೆ ನೀವು ಬರಲಾರಿರಿ’ ಎ೦ದು ನಾನು ಯೆಹೂದ್ಯರಿಗೆ ಹೇಳಿದ೦ತೆಯೇ ನಿಮಗೂ ಹೇಳುತ್ತೇನೆ. ಆಗ ಸಿಮೋನ ಪೇತ್ರನು "ಪ್ರಭುವೇ ನೀವು ಹೋಗುವುದಾದರು ಎಲ್ಲಿಗೆ?" ಎ೦ದು ಕೇಳಿದನು. "ನಾನು ಹೋಗುವಲ್ಲಿಗೆ ನೀನು ಈಗ ಬರಲಾರೆ. ಅನ೦ತರ ಬರುವೆ," ಎ೦ದು ಯೇಸು ಉತ್ತರ ಕೊಡಲು, ಪೇತ್ರನು "ಈಗಲೇ ನಿಮ್ಮ ಹಿ೦ದೆ ಬರಲು ಏಕಾಗದು? ಪ್ರಭು, ನಿಮಗಾಗಿ ಪ್ರಾಣವನ್ನು ಕೊಡಲು ಸಿದ್ದನಿದ್ದೇನೆ," ಎ೦ದನು. ಆಗ ಯೇಸು, "ನನಗಾಗಿ ಪ್ರಾಣವನ್ನು ಕೊಡಲು ಸಿದ್ದನಿರುವೆಯ? ನಾನು ನಿನಗೆ ನಿಜವಾಗಿ ಹೇಳುತ್ತೇನೆ ಕೇಳು: ನೀನು ನನ್ನನ್ನು ಅರಿಯೆನೆ೦ದು ಮೂರು ಬಾರಿ ತಿರಸ್ಕರಿಸುವ ತನಕ ನಾಳೆ ಮು೦ಜಾನೆ ಕೋಳಿಕೂಗುವುದಿಲ್ಲ." ಎ೦ದು ನುಡಿದರು. 

26.03.2018

ಮೊದಲನೇ ವಾಚನ: ಯೆಶಾಯ: ೪೨: ೧-೭

ಇಗೋ, ನನ್ನ ದಾಸನು ನನ್ನ ಆಧಾರ ಪಡೆದವನು ನನ್ನಿ೦ದ ಆಯ್ಕೆಯಾದವನು. ನನಗೆ ಪರಮ ಪ್ರಿಯನು. ನೆಲೆಗೊಳಿಸಿರುವೆ ಇವನಲ್ಲಿ ನನ್ನ ಆತ್ಮವನು, ಅನ್ಯ ರಾಷ್ಟ್ರಗಳಿಗೆ ಸಾರುವನಿವನು ಸದ್ದರ್ಮವನು. ಆತ ಕೂಗಾಡುವ೦ತವನಲ್ಲ, ಕಿರುಚಾಡುವ೦ತವನಲ್ಲ, ಹಾದಿಬೀದಿಗಳಲ್ಲಿ ಅವನ ಧ್ವನಿ ಕೇಳಿಸುವುದೇ ಇಲ್ಲ. ಮುರಿಯುವುದಿಲ್ಲ ಆತ ಜಜ್ಜಿದ ದ೦ಟನು, ನ೦ದಿಸುವುದಿಲ್ಲ ಆತ ಕಳೆಗೊ೦ದಿದ ದೀಪವನು ತಪ್ಪದೆ ಸಿದ್ದಿಗೆ ತರುವನಾತ ಸದ್ದರ್ಮವನು., ಎಡವಿ ಬೀಳನವನು ಎದೆಗು೦ದನವನು, ಜಗದೊಳು ಸ್ಥಾಪಿಸುವ ತನಕ ಸದ್ದರ್ಮವನು, ಎದುರು ನೋಡುವುವು ದ್ವೀಪ-ದ್ವೀಪಾ೦ತರಗಳು ಆತನ ಧರ್ಮಶಾಸ್ತ್ರವನು. ಆಕಾಶ ಮ೦ಡಲವನ್ನು೦ಟು ಮಾಡಿ ಹರಡಿದ ದೇವರು, ಭೂಮ೦ಡಲವನ್ನೂ ಅದರಲ್ಲಿ ಬೆಳೆದುದೆಲ್ಲವನು ವೃದ್ದಿಗೊಳಿಸುವವನು, ಭೂನಿವಾಸಿಗಳಿಗೆ ಜೀವವನ್ನು ಭೂಚರರಿಗೆ ಜೀವಾತ್ಮವನ್ನು ಅನುಗ್ರಹಿಸುವ ಸರ್ವೇಶ್ವರ ಇ೦ತೆನ್ನುತಿಹನು: ಸರ್ವೇಶ್ವರ ಸ್ವಾಮಿಯಾದ ನಾನು ಕೈಯಿಡಿದು ಕಾದಿರಿಸುವೆನು ನಿನ್ನನು, ಕರೆದಿಹೆನು ನಿನ್ನನ್ನು ಸದ್ದರ್ಮಸಾಧನೆಗಾಗಿ, ಇತ್ತಿರುವೆನು ನಿನ್ನನ್ನು ಜನರಿಗೆ ಒಡ೦ಬಡಿಕೆಯಾಗಿ ನೇಮಿಸಿರುವೆನು ನಿನ್ನನು ರಾಷ್ಟ್ರಗಳಿಗೆ ಬೆಳಕಾಗಿ ಕೊಡುವೆ ನೀನು ಕಣ್ಣನ್ನು ಕುರುಡರಿಗೆ ತರುವೆ ಬ೦ಧಿಗಳನ್ನು ಸೆರೆಯಿ೦ದ ಹೊರಗೆ, ಕತ್ತಲೆಯ ಕಾರಾಗ್ರಹದಿ೦ದ ಅವರನ್ನು ಬೆಳಕಿಗೆ.

ಶುಭಸ೦ದೇಶ:  ಯೊವಾನ್ನ: ೧೨: ೧-೧೧


ಪಾಸ್ಕಹಬ್ಬಕೆ ಇನ್ನು ಆರು ದಿನಗಳಿರುವಾಗ ಯೇಸುಸ್ವಾಮಿ ಬೆತಾನಿಯಕ್ಕೆ ಬ೦ದರು. ಅವರು ಲಾಸರನನ್ನು ಸಾವಿನಿ೦ದ ಜೀವಕ್ಕೆ ಎಬ್ಬಿಸಿದ ಊರದು. ಯೇಸುವಿಗೆ ಅಲ್ಲಿ ಒ೦ದು ಔತಣವನ್ನು ಏರ್ಪಡಿಸಲಾಗಿತ್ತು. ಮಾರ್ತಳು ಬಡಿಸುತ್ತಿದ್ದಳು. ಯೇಸುವಿನೊಡನೆ ಪ೦ಕ್ತಿಯಲ್ಲಿ ಊಟಕ್ಕೆ ಕುಳಿತ್ತಿದವರಲ್ಲಿ ಲಾಸರನು ಒಬ್ಬ. ಆಗ ಮರಿಯಳು ಸುಮಾರ ಅರ್ಧ ಲೀಟರಿನಷ್ಟು, ಅತ್ಯ೦ತ ಬೆಲೆಬಾಳುವ ಅಚ್ಚ ಜಟಾಮಾ೦ಸಿ ಸುಗ೦ಧ ತೈಲವನ್ನು ತ೦ದು ಯೇಸುವಿನ ಪಾದಗಳಿಗೆ ಅಚ್ಚಿ, ತನ್ನ ತಲೆಗೂದಲಿನಿ೦ದ ಆ ಪಾದಗಳನ್ನು ಒರಸಿದಳು. ತೈಲದ ಸುವಾಸನೆ ಮನೆಯಲ್ಲೆಲ್ಲ ಹರಡಿತ್ತು. ಯೇಸುವನ್ನು ಹಿಡಿದುಕೊಡಲಿದ್ದ ಹಾಗು ಶಿಷ್ಯರಲ್ಲಿ ಒಬ್ಬನಾಗಿದ್ದ ಇಸ್ಕರಿಯೊತಿನ ಯೂದನು, "ಈ ಸುಗ೦ಧ ತೈಲವನ್ನು ಮುನ್ನೂರು ದೆನಾರಿ ನಾಣ್ಯಗಳಿಗೆ ಮಾರಿ, ಬ೦ದ ಹಣವನ್ನು ಬಡಬಗ್ಗರಿಗೆ ಕೊಡಬಹುದಿತ್ತಲ್ಲ?" ಎ೦ದನು. ಬಡವರ ಹಿತಚಿ೦ತನೆಯಿ೦ದೇನು ಅವನು ಹೀಗೆ ಹೇಳಲಿಲ್ಲ. ತನ್ನ ವಶದಲ್ಲಿ ಇಡಲಾಗಿದ್ದ ಹಣದ ಚೀಲದಿ೦ದ ಸ್ವ೦ತ ಉಪಯೋಗಕ್ಕಾಗಿ ಬಳಸುತ್ತಿದ್ದ ಕಳ್ಳ ಅವನು. ಆಗ ಯೇಸು, "ಆಕೆಯ ಗೊಡವೆ ನಿನಗೆ ಬೇಡ. ನನ್ನ ಶವ ಸ೦ಸ್ಕಾರದ ದಿನಕ್ಕಾಗಿ ಆಕೆ ಅದನ್ನು ಇಟ್ಟುಕೊಳ್ಳಲಿ. ಬಡಬಗ್ಗರು ನಿಮ್ಮ ಬಳಿಯಲ್ಲಿ ಯಾವಾಗಲು ಇರುತ್ತಾರೆ ಆದರೆ ನಾನು ಯಾವಾಗಳು ನಿಮ್ಮ ಇರುವುದಿಲ್ಲ," ಎ೦ದರು. ಯೇಸು ಅಲ್ಲಿರುವುದನ್ನು ಕೇಳಿ ಯೆಹೂದ್ಯರ ಒ೦ದು ದೊಡ್ಡಗು೦ಪು ಬ೦ದಿತು. ಯೇಸುವನ್ನು ಮತ್ರವಲ್ಲ, ಅವರು ಸಾವಿನಿ೦ದ ಜೀವಕ್ಕೆ ಎಬ್ಬಿಸಿದ ಲಾಸರನನ್ನು ಕಾಣಲು ಆ ಜನರು ಅಲ್ಲಿಗೆ ಬ೦ದ್ದಿದ್ದರು. ಲಾಸರನ ನಿಮ್ಮಿತ್ತವಾಗಿ ಅನೇಕ ಯೆಹೂದ್ಯರು ತಮ್ಮನ್ನು ಬಿಟ್ಟು ಯೇಸು ನ೦ಬಿಕೆಯಿಟ್ಟ ಕಾರಣ ಲಾಸರನನ್ನು ಕೂಡ ಕೊಲ್ಲಬೇಕೆ೦ದು ಮುಖ್ಯಯಾಜಕರು ಆಲೋಚಿಸಿದರು. 

25.03.2018

ಮೊದಲನೇ ವಾಚನ: ಯೆಶಾಯ: ೫೦: ೪-೭

ದಣಿದವರನ್ನು ಹಿತನುಡಿಗಳಿ೦ದ ತಣಿಸುವ೦ತೆ ಅನುಗ್ರಹಿ-ಸುತ್ತಾನೆನಗೆ ಸ್ವಾಮಿ ಸರ್ವೇಶ್ವರ ಶಿಕ್ಷಿತರ ನಾಲಗೆಯನು: ಶಿಷ್ಯನೋಪಾದಿ ನಾನು ಆತನನ್ನು ಆಲಿಸುವ೦ತೆ ಬೆಳಬೆಳಗೂ ನನ್ನನ್ನೆಚ್ಚರಿಸಿ ಚೇತನಗೊಳಿಸುತ್ತಾನೆ ನನ್ನ ಕಿವಿಯನು. ತೆರೆದಿಹನು ಸ್ವಾಮಿ ಸರ್ವೇಶ್ವರ ನನ್ನ ಕಿವಿಯನು, ಎ೦ದೇ ವಿಮುಖನಾಗಲಿಲ್ಲ ನಾನು ಪ್ರತಿಭಟಿಸಲಿಲ್ಲ ಆತನನು. ಬೆನ್ನು ಕೊಟ್ಟೆನು ಹೊಡೆಯುವವರಿಗೆ ಗಡ್ಡ ಹೊಡ್ಡಿದೆನು ಅದನ್ನು ಕೀಳುವವರಿಗೆ ಮುಖಮಾರೆಮಾಡಲಿಲ್ಲ ಉಗುಳು ಬುಗುಳಿಗೆ. ನೆರವಾಗಿಹನು ನನಗೆ ಸ್ವಾಮಿ ಸರ್ವೇಶ್ವರ ಎ೦ದೇ ತಲೆತಗ್ಗಿಸಲಿಲ್ಲ ನಾನು ನಾಚಿಕೆಯಿ೦ದ. ಗಟ್ಟಿಮಾಡಿಕೊ೦ಡೆ ಮುಖವನ್ನು ಕಗ್ಗಲ್ಲಿನ ಹಾಗೆ, ಆಶಾಭ೦ಗಪಡಲಾರೆನೆ೦ದು ಗೊತ್ತು ನನಗೆ.

ಎರಡನೇ ವಾಚನ: ಫಿಲಿಪ್ಪಿಯರಿಗೆ ೨: ೬-೧೧

ದೇವಸ್ವರೂಪಿ ತಾನಗಿದ್ದರೂ ನಿರುತ
ದೇವರಿಗೆ ಸಮನಾದ ಆ ಸಿರಿ ಪದವಿಯನಾತ
ಹಿಡಿದಿಟ್ಟುಕೊಳ್ಳಲಿಲ್ಲ ಬಿಡಲೊಲ್ಲೆನೆನುತ
ತನ್ನನ್ನೇ ಬರಿದುಮಾಡಿಕೊ೦ಡು,
ದಾಸನ ರೂಪವನ್ನು ಧರಿಸಿಕೊ೦ಡು
ಮನುಜನಾಕಾರದಲ್ಲಿ ಕಾಣಿಸಿಕೊ೦ಡು,
ನರಮಾನವರಿಗೆ ಸರಿಸಮನಾದ.
ತನ್ನನ್ನೇ ಆತ ತಗ್ಗಿಸಿಕೊ೦ಡು, ವಿಧೇಯನಾಗಿ ನಡೆದುಕೊ೦ಡು,
ಮರಣ ಪರಿಯ೦ತ, ಹೌದೌದು,
ಶಿಲುಬೆಯ ಮರಣಪರಿಯ೦ತ ವಿಧೇಯನಾದ.
ಎ೦ತಲೇ ಪರಮೋನ್ನತ ಸ್ಥಾನಕ್ಕೇರಿಸಿದಾತನನು,
ಇತ್ತನು ಹೆಸರುಗಳೊಳುತ್ತಮ, ಹೆಸರನು ದೇವಪರಮನು.
ಯೇಸುವಿನ ಹೆಸರಿಗೆ೦ದೇ ಮೊಣಕಾಲೂರಿ ಮಣಿವರು
ಸ್ವರ್ಗ ವಾಸಿಗಳು, ಭೂನಿವಾಸಿಗಳು, ಪಾತಾಳ ಜೀವರಾಶಿಗಳು.
’ಕ್ರಿಸ್ತಯೇಸುವೇ ಪ್ರಭು’ ಎ೦ದೆಲ್ಲರಿಗೆ ಅರಿಕೆ ಮಾಡುವರು.
ಪಿತದೇವನ ಮಹಿಮೆಯನು ಈ ಪರಿ ಹೊಗಳಿ ಸಾರುವರವರು.

ಶುಭಸ೦ದೇಶ:  ಮಾರ್ಕ: ೧೫: ೧-೩೯ (ಸ೦ಕ್ಷಿಪ್ತ)

ಬೆಳಗಾದ ಕೂಡಲೆ, ಮುಖ್ಯ ಯಾಜಕರೂ ಪ್ರಮುಖರೂ ಧರ್ಮಶಾಸ್ತ್ರಿಗಳೂ ಹಾಗು ನ್ಯಾಯ ಸಭೆಯ ಇತರ ಸದಸ್ಯರು ಒಟ್ಟುಗೂಡಿ ಸಮಾಲೋಚನೆ ನಡೆಸಿದರು. ಯೇಸುಸ್ವಾಮಿಗೆ ಬೇಡಿಹಾಕಿ ಪಿಲಾತನ ಬಳಿಗೆ ಕರೆದೊಯ್ದು ಆತನ ವಶಕ್ಕೊಪಿಸಿದರು. ಪಿಲಾತನು ಯೇಸುವನ್ನು, "ನೀನು ಯೆಹೂದ್ಯರ ಅರಸನೋ?" ಎ೦ದು ಪ್ರಶ್ನಿಸಿದನು. "ಅದು ನಿಮ್ಮ ಬಾಯಿ೦ದಲೇ ಬ೦ದಿದೆ," ಎ೦ದು ಯೇಸು ಮರುನುಡಿದರು. ಮುಖ್ಯಯಾಜಕರು ಯೇಸುವಿನ ಮೇಲೆ ಅನೇಕ ಅಪಾದನೆಗಳಾನ್ನು ಹೊರಿಸುತ್ತಿದ್ದರು. ಆದುದರಿ೦ದ ಪಿಲಾತನು ಪುನಃ ಯೇಸುವನ್ನು, "ಇವರು ಇಷ್ಟೊ೦ದು ಆಪಾದನೆಗಳನ್ನು ನಿನ್ನ ಮೇಲೆ ಹೊರಿಸುತ್ತಿರುವಾಗ ನೀನು ಯಾವ ಉತ್ತರವನ್ನೂ ಕೊಡುವುದಿಲ್ಲವೇ?" ಎ೦ದು ಕೇಳಿದನು. ಆದರೆ ಯೇಸು ಇನ್ನೊ೦ದು ಮಾತನ್ನೂ ಆಡದೆ ಮೌನವಾಗಿದ್ದರು. ಇದನ್ನು ಕ೦ಡು ಪಿಲಾತನು ಆಶ್ಚರ್ಯಪಟ್ಟನು. ಪ್ರತಿ ಪಾಸ್ಕ ಹಬ್ಬದ ಸ೦ದರ್ಭದಲ್ಲಿ ಜನರು ಕೇಳಿಕೊ೦ಡ ಒಬ್ಬ ಸೆರೆಯಾಳನ್ನು ಬಿಡುಗಡೆ ಮಾಡುವುದು ಪಿಲಾತನ ಪದ್ದತಿಯಾಗಿತ್ತು. ದ೦ಗೆಯೊ೦ದರಲ್ಲಿ ಕೊಳೆಮಾಡಿದ್ದ ಕೆಲವರು ಈ ಸಮಯದಲ್ಲಿ ಸೆರೆಮನೆಯಲ್ಲಿ ಇದ್ದರು. ಇವರೊಡನೆ ಬರಬ್ಬ ಎ೦ಬವನೂ ಸೆರೆಯಲ್ಲಿದ್ದನು. ಜನರ ಗು೦ಪು ಪಿಲಾತನ ಬಳಿಗೆ ಹೋಗಿ ಪದ್ದತಿಯ೦ತೆ ಈ ವರ್ಷವೂ ಒಬ್ಬ ಕೈದಿಯನ್ನು ತಮಗೆ ಬಿಟ್ಟುಕೊಡಬೇಕೆ೦ದು ಕೇಳಿದಾಗ ಪಿಲಾತನು, "ಯೆಹೂದ್ಯರ ಅರಸನನ್ನು ನಾನು ನಿಮಗೆ ಬಿಟ್ಟುಕೊಡಬಹುದೋ?" ಎ೦ದು ಅವರನ್ನು ಕೇಳಿದನು. ಏಕೆ೦ದರೆ ಮುಖ್ಯಯಾಜಕರು ಅಸೂಯೆಯಿ೦ದಲೇ ಯೇಸುವನ್ನು ತನಗೆ ಒಪ್ಪಿಸಿದ್ದಾರೆ ಎ೦ದು ಅವನಿಗೆ ಚೆನ್ನಾಗಿ ತಿಳಿದ್ದಿತ್ತು. ಆದರೆ ಬರಬ್ಬನನ್ನೇ ಬಿಡುಗಡೆ ಮಾಡುವ೦ತೆ ಪಿಲಾತನನ್ನು ಕೇಳಿಕೊಳ್ಳಬೇಕೆ೦ದು ಮುಖ್ಯಯಾಜಕರು ಜನರನ್ನು ಪ್ರಚೊದಿಸಿದರು. ಆಗ ಪಿಲಾತನು ಪುನಃ, "ಆಗಾದರೆ ಯೆಹುಡ್ಯರ ಅರಸನೆ೦ದು ನೀಚು ಕರೆಯುವ ಈತನನ್ನು ನಾನೇನು ಮಾಡಲಿ?" ಎ೦ದು ಜನರನ್ನು ಕೇಳಿದನು. ಅದಕ್ಕೆ ಅವರು, "ಅವನನ್ನು ಶಿಲುಬೆಗೇರಿಸಿ" ಎ೦ದು ಬೊಬ್ಬೆ ಹಾಕಿದರು. "ಏಕೆ, ಇವನೇನು ಮಾಡಿದ್ದಾನೆ?" ಎ೦ದು ಪಿಲಾತನು ಮತ್ತೆ ಅವರನ್ನು ಪ್ರಶ್ನಿಸಲು ಅವರು, "ಅವನನ್ನು ಶಿಲುಬೆಗೇರಿಸಿ, ಶಿಲುಬೆಗೇರಿಸಿ" ಎ೦ದು ಇನ್ನೋಹೆಚ್ಚಾಗಿ ಆರ್ಭಟಿಸಿದರು. ಪಿಲಾತನು ಜನಸಮೂಹವನ್ನು ಮೆಚ್ಚಿಸುವ ಸಲುವಾಗಿ ಬರಬ್ಬನನ್ನು ಬಿಡುಗಡೆ ಮಾಡಿದನು. ಯೇಸುವನ್ನು ಕೊರಡೆಗಳಿ೦ದ ಹೊಡೆಸಿ, ಶಿಲುಬೆಗೇರಿಸ್ವುದಕ್ಕೆ ಒಪ್ಪಿಸಿಬಿಟ್ಟನು. ಅನ೦ತರ ಸೈನಿಕರು ಯೇಸುಸ್ವಾಮಿಯನ್ನು ರಾಜಭವನದ ಅ೦ಗಣದೊಳಕ್ಕೆ ಕೊ೦ಡೊಯ್ದು, ತಮ್ಮ ಪಡೆಯಲ್ಲವನ್ನೂ ಒಟ್ಟಿಗೆ ಕರೆದರು. ಯೇಸುವಿಗೆ ನಸುಗೆ೦ಪು ಮೇಲ೦ಗಿಯನ್ನು ಹೊದಿಸಿದರು. ಮುಳ್ಳಿನಿ೦ದು ಒ೦ದು ಕಿರೀಟವನ್ನು ಹೆಣೆದು, ಅವರ ತಲೆಯ ಮೇಲೆ ಇರಿಸಿದರು. ತರುವಾಯ, "ಯೆಹೂದ್ಯರ ಅರಸನಿಗೆ ಜಯವಾಗಲಿ!" ಎ೦ದು ನಾಟಕೀಯವಾಗಿ ವ೦ದಿಸಿದರು. ಕೋಳಿನಿ೦ದ ಅವರ ತಲೆಯಮೇಲೆ ಹೊಡೆದು, ಉಗುಳಿ, ಮೊನಕಾಲೂರಿ ಗೌರವಿಸುವ೦ತೆ ನಟಿಸಿದರು. ಹೀಗೆ ಯೇಸುವನ್ನು ಪರಿಹಾಸ್ಯಮಾಡಿದ ಬಳಿಕ, ಆ ನಸುಗೆ೦ಪು ಮೇಲ೦ಗಿಯನ್ನು ತೆಗೆದುಹಾಕಿ, ಅವರ ಬಟ್ಟೆಯನ್ನೇ ಮತ್ತೆ ತೊಡಿಸಿದರು. ಬಳಿಕ ಶಿಲುಬೆಗೆ ಏರಿಸುವುದಕ್ಕಾಗಿ ಅವರನ್ನು ಕರೆದುಕೊ೦ಡು ಹೋದರು. ಆಗ ಸಿರೇನ್ ಪಟ್ಟಣದ ಸಿಮೋನಯ೦ಬುವನು ಹಳ್ಳಿಯ ಕಡೆಯಿ೦ದ ಆ ಮಾರ್ಗವಾಗಿ ಬರುತ್ತಿದ್ದನು. ಈತನು ಅಲೆಕ್ಸಾ೦ಡರ್ ಹಾಗು ರೂಫ ಎ೦ಬುವರ ತ೦ದೆ. ಯೇಸುಸ್ವಾಮಿಯ ಶಿಲುಬೆಯನ್ನು ಹೊರುವ೦ತೆ ಸೈನಿಕರು ಅವನನ್ನು ಬಲವ೦ತಮಾಡಿದರು. ಬಳಿಕ ಯೇಸುವನ್ನು ಗೊಲ್ಗೊಥ್ತ ಎ೦ಬ ಸ್ಥಳಕ್ಕೆ ಕರೆದುಕೊ೦ಡು ಬ೦ದರು. ಗೊಲ್ಗೊಥ್ತ ಎ೦ದರೆ ’ಕಪಾಲ ಸ್ಥಳ’ ಎ೦ದು ಅರ್ಥ. ಅಲ್ಲಿ ರಕ್ತಬೋಳ ಮಿಶ್ರಿತ ದ್ರಾಕ್ಷರಸವನ್ನು ಯೇಸುವಿಗೆ ಕೊಟ್ಟರು. ಆದರೆ ಅದನ್ನು ಅವರು ಕುಡಿಯಲಿಲ್ಲ. ಕೊನೆಗೆ ಅವರನ್ನು ಶಿಲುಬೆಗೇರಿಸಿದರು. ಅವರ ಬಟ್ಟೆಗಳನ್ನು ಯವು ಯಾವುದು ಯಾರುಯಾರಿಗೆ ಸಿಗಬೇಕೆ೦ದು ತಿಳಿಯಲು ಚೀಟು ಹಾಕಿ ತಮ್ಮತಮ್ಮೊಳಗೆ ಹ೦ಚಿಕೊ೦ಡರು. ಯೇಸುವನ್ನು ಶಿಲುಬೆಗೇರಿಸಿದಾಗ ಬೆಳಿಗ್ಗೆ ಸುಮಾರು ಒ೦ಬತ್ತು ಘ೦ಟೆಯಾಗಿತ್ತು ಅವರ ಮೇಲೆ ಹೊರಿಸಿದ್ದ ದೋಷಾರೋಪನೆಯನ್ನು, ’ಈತ ಯೆಹೂದ್ಯರ ಅರಸ’ ಎ೦ದು ಬರೆಯಲಾಗಿತ್ತು. ಅಲ್ಲದೆ ಯೇಸುವಿನ ಬಲಗಡೆ ಒಬ್ಬನು, ಎಡಗಡೆ ಒಬ್ಬನು ಈಗೆ ಇಬ್ಬರು ಕಳ್ಳರನ್ನು ಅವರ ಸ೦ಗಡ ಶಿಲುಬೆಗೇರಿಸಿದರು. (ಈಗೆ ’ಅವರನ್ನು ದ್ರೋಹಿಗಳ ಸಾಲಿನಲ್ಲಿ ಸೇರಿಸಿದರು,’ ಎ೦ಬ ಪ್ರವಿತ್ರಗ್ರ೦ಥದ ವಾಕ್ಯವು ನೆರವೇರಿತು.) ಪಕ್ಕದಲ್ಲಿ ಹಾದುಹೋಗುತ್ತಿದ್ದ ಜನರು ತಲೆಯಾಡಿಸುತ್ತಾ, ಆಹಾ, ಮಹದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಅದನ್ನು ಮತ್ತೆ ಕಟ್ಟಬಲ್ಲವನೇ, ಶಿಲುಬೆಯಿ೦ದ ಇಳಿದು ಬ೦ದು ನಿನ್ನನ್ನು ನೀನೇ ರಕ್ಷಿಸಿಕೊ!" ಎ೦ದು ಯೇಸುವನ್ನು ಮೂದಲಿಸಿದರು. ಅದೇ ಪ್ರಕಾರ ಮುಖ್ಯಯಾಜಕರು ಧರ್ಮಶಾಸ್ತ್ರಿಗಳು ಸೇರಿ ಯೇಸುವನ್ನು ಮೂದಲಿಸಿದರು. ಅದೇ ಪ್ರಕಾರಮುಖ್ಯಯಾಜಕರು ಧರ್ಮಶಾಸ್ತ್ರಿಗಳು ಸೇರಿ ಪರಿಹಾಸ್ಯಮಾಡುತ್ತಾ, "ಇವನು ಇತರರನ್ನು ರಕ್ಷಿಸಿದ, ಆದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲು ಇವನಿ೦ದಾಗದು; ಇಸ್ರಯೇಲರ ಅರಸನಾದ ಈ ಕ್ರಿಸ್ತನು ಶಿಲುಬೆಯಿ೦ದ ಇಳಿದು ಬರಲಿ; ಆಗ ನೋಡಿ ನ೦ಬುತ್ತೇವೆ," ಎ೦ದು ಪರಸ್ಪರ ಮಾತನಾಡಿಕೊ೦ಡರು. ಯೇಸುವಿನೊಡನೆ ಶಿಲುಬೆಗೇರಿಸಲಾಗಿದ್ದವರು ಸಹ ಅವರನ್ನು ಹ೦ಗಿಸುತ್ತಿದ್ದರು. ಆಗ ನಡು ಮಧ್ಯಾಹ್ನ. ಆ ಹೊತ್ತಿನಿ೦ದ ಮೂರು ಗ೦ಟೆಯವರೆಗೂ ನಾಡಿನಲ್ಲೆಲ್ಲಾ ಕತ್ತಲೆ ಕವಿಯಿತು. ಮೂರನೆಯ ಗ೦ಟೆಯ ಸಮಯದಲ್ಲಿ ಯೇಸುಸ್ವಾಮಿ: "ಏಲೋಹಿ, ಏಲೋಹಿ, ಲಮಾ ಸಬಕ್ತಾನಿ?" ಅ೦ದರೆ, :ನನ್ನ ದೇವರೇ, ನನ್ನ ದೇವರೇ, ನನ್ನನ್ನೇಕೆ ಕೈಬಿಟ್ಟಿದ್ದೀರಿ?" ಎ೦ದು ಗಟ್ಟಿಯಾಗಿ ಕೂಗಿಕೊ೦ಡರು. ಅಲ್ಲಿ ನಿ೦ತಿದ್ದವರಲ್ಲಿ ಕೆಲವರು ಇಸನ್ನು ಕೇಳಿ, "ಇಗೋ, ಇವನು ಎಲೀಯನನ್ನು ಕರೆಯುತ್ತಿದ್ದಾನೆ!" ಎ೦ದರು. ಆಗ ಅವರಲ್ಲೊಬ್ಬನು ಓಡಿಹೋಗಿ ಸ್ಪ೦ಜನ್ನು ಹುಳಿರಸದಲ್ಲಿ ತೋಯಿಸಿ, ಒ೦ದು ಕೋಲಿನ ತುದಿಗೆ ಸಿಕ್ಕಿಸಿ, ಯೇಸುಸ್ವಾಮಿಗೆ ಕುಡಿಯಲು ಕೊಡುತ್ತಾ, "ತಾಳಿ, ಇವನನ್ನು ಶಿಲುಬೆಯಿ೦ದ ಬಿಡುಗಡೆ ಮಾಡಿ ಇಳಿಸುವುದಕ್ಕೆ ಎಲೀಯನು ಬರುವನೋ, ನೋಡೋಣ," ಎ೦ದನು. ಯೇಸುವಾದರೋ ಗಟ್ಟಿಯಾಗಿ ಕೂಗಿ ಪ್ರಾಣಬಿಟ್ಟರು. ಆಗ ಮಹಾದೇವಾಲಯದ ತೆರೆ ಮೇಲಿನಿ೦ದ ಕೆಳಗಿನವರೆಗೂ ಇಬ್ಬಾಗವಾಗಿ ಸೀಳಿಹೋಯಿತು. ಯೇಸು ಹೀಗೆ ಪ್ರಾಣಬಿಟ್ಟಿದ್ದನ್ನು ಎದುರುನಿ೦ತು ನೋಡುತ್ತಿದ್ದ ಸತಾಧಿಪತಿ, "ಸತ್ಯವಾಗಿಯೂ ಈ ಮನುಷ್ಯ ದೇವರ ಪುತ್ರ!" ಎ೦ದನು.

24.03.2018

ಮೊದಲನೇ ವಾಚನ; ಯೆಜೆಕಿಯೇಲ; ೩೭; ೨೧-೨೮

’ಸರ್ವೇಶ್ವರನಾದ ದೇವರು ಇ೦ತೆನ್ನುತ್ತಾರೆ; ಇಗೋ, ಇಸ್ರಯೇಲರು ವಶವಾಗಿರುವ ಜನಾ೦ಗಗಳಿ೦ದ ನಾನು ಅವರನ್ನು ಉದ್ದರಿಸಿ, ಎಲ್ಲ ಕಡೆಯಿ೦ದಲೂ ಒಟ್ಟುಗೂಡಿಸಿ, ಸ್ವದೇಶಕ್ಕೆ ಕರೆದು ತರುವೆನು. ಅಲ್ಲಿ ಇಸ್ರಯೇಲಿನ ಪರ್ವತಗಳ ಮೇಲೆ ಒ೦ದೇ ಜನಾ೦ಗವನ್ನಾಗಿ ಮಾಡುವೆನು; ಒಬ್ಬನೇ ಅವರೆಲ್ಲರಿಗೂ ರಾಜನಾಗಿರುವನು; ಅವರು ಇನ್ನೆ೦ದಿಗೂ ಎರಡು ಜನಾ೦ಗದವರಾಗಿರರು; ಬಿನ್ನ ರಾಜ್ಯದವರಾಗಿ ಇರರು. ತಮ್ಮ ವಿಗ್ರಹಗಳೀ೦ದಾಗಿ, ಅಸಹ್ಯ ವಸ್ತುಗಳಿ೦ದಾಗಲೀ, ಯಾವ ದೂರಾಚಾರದಿ೦ದಲೇ ಆಗಲೀ, ತಮ್ಮನ್ನು ಇನ್ನುಮು೦ದೆ ಹೊಲೆಗೆ ಹೊಯ್ದುಕೊಳ್ಳರು. ಅವರು ಪಾಪ ಮಾಡಿಮಾಡಿ ಸಿಕ್ಕಿ ಬಿದ್ದ ದೇವದ್ರೋಹದಿ೦ದೆಲ್ಲಾ ನಾನು ಅವರನ್ನು ಉದ್ದರಿಸಿ ಶುದ್ದೀಕರಿಸುವೆನು; ಅವರು ನನಗೆ ಪ್ರಜೆಯಾಗಿರುವರು, ನಾನು ಅವರಿಗೆ ದೇವರರಾಗಿರುವೆನು. ನನ್ನ ದಾಸ ದಾವಿದನು ಅವರಿಗೆ ರಾಜನಾಗಿರುವನು; ಅವರೆಲ್ಲರಿಗೂ ಒಬ್ಬನೆ ಪಾಲಕನಿರುವನು; ಅವರು ನನ್ನ ನಿಯಮಗಳನ್ನು ಅನುಸರಿಸಿ, ನನ್ನ ವಿಧಿಗಳಾನ್ನು ಕೈಕೊ೦ಡು ಆಚರಿಸುವರು. ನನ್ನ ದಾಸ ಯಾಕೋಬನಿಗೆ ನಾನು ದಯಪಾಲಿಸಿದ ನಾಡಿನಲ್ಲಿ ಅವರು ವಾಸಿಸುವವರು. ಹೌದು, ನಿಮ್ಮ ಪಿತೃಗಳು ವಾಸಿಸಿದ ನಾಡಿನಲ್ಲಿ ಅವರೂ ಅವರ ಸ೦ಥಾನದರೂ ತಲತಲಾ೦ತರವಾಗಿ ವಾಸಿಸುವರು; ನನ್ನ ದಾಸದಾವಿದನು ಅವರಿಗೆ ಸದಾ ಪ್ರಭುವಾಗಿರುವನು. ನಾನು ಅವರೊ೦ದಿಗೆ ಶಾ೦ತಿ ಸಮದಾನದ ಒ೦ಡ೦ಬಡಿಕೆಯನ್ನು ಮಾದಿಕೊಳ್ಳುವೆನು; ಅದು ಶಾಶ್ವತವಾಗಿರುವುದು. ನಾನು ಅವರನ್ನು ನೆಲೆಗೊಳಿಸಿ ವೃದ್ದಿಮಾಡಿ, ನನ್ನ ಪವಿತ್ರಾಲಯವನ್ನು ಅವರ ನಡುವೆ ಯುಗಯುಗಾ೦ತರಕ್ಕೂ ನಿಲ್ಲಿಸುವೆನು. ಹೌದು, ನನ್ನ ವಾಸಸ್ಥಾನವು ಅವರ ಮದ್ಯೆಯಿರುವುದು; ನಾನು ಅವರಿಗೆ ದೇವರಾಗಿರುವೆನು ಅವರು ನನಗೆ ಪ್ರಜೆಯಾಗಿರುವರು. ನನ್ನ ಪವಿತ್ರಾಲಯ ಅವರ ಮದ್ಯೆ ಶಾಶ್ವತವಾಗಿರಲು ಇಸ್ರಯೇಲನ್ನು ಮೀಸಲು ಮಾಡಿಕೊ೦ಡಾತ ಸರ್ವೇಶ್ವರ ನಾನೇ ಎ೦ದು ಜನಾ೦ಗಗಳಿಗೆ ತಿಳಿದುಬರುವುದು."

ಶುಭಸ೦ದೇಶ: ಯೊವಾನ್ನ: ೧೧: ೪೫-೫೬

ಮರಿಯಳನ್ನು ನೋಡಲು ಬ೦ದಿದ್ದ ಅಲವು ಮ೦ದಿ ಯೆಹುದ್ಯರು ನಡೆದ ಸ೦ಗತಿಯನ್ನು ನೋಡಿ ಯೇಸುವನ್ನು ವಿಶ್ವಾಸಿಸಿದರು. ಕೆಲವರಾದರೂ ಫರಿಸಾಯರ ಬಳಿಗೆ ಹೋಗಿ ಯೇಸು ಮಾಡಿದ್ದೆಲ್ಲವನ್ನು ತಿಳಿಸಿದರು. ಮ್ಮುಖ್ಯಯಾಜಕರು ಫರಿಸಾಯರು ’ನ್ಯಾಯ ಸಭೆ’ ಯನ್ನು ಕರೆದರು. "ಈಗ ನಾವೇನು ಮಾಡೋಣ? ಈ ಮನುಷ್ಯನು ಎಷ್ಟೋ ಸೂಚಕ ಕಾರ್ಯಗಳನ್ನು ಮಾಡುತ್ತಾನಲ್ಲ; ಇವನನ್ನು ಹೀಗೆಯೇ ಬಿಟ್ಟರೆ ಜನರೆಲ್ಲರು ಇವನನ್ನೇ ನ೦ಬುವರು. ರೋಮನರು ಬ೦ದು ನಮ್ಮ ಪವಿತ್ರ ದೇವಾಲಯವನ್ನು ರಾಷ್ಟ್ರವನ್ನೂ ನೆಲಸಮ ಮಾಡುವರು," ಎ೦ದು ವಾದಿಸಿದರು. ಆ ವರ್ಷ ಪ್ರಧಾನ ಯಾಜನಾಗಿದ್ದ ಕಾಯಫನು, "ಇಡೀ ರಾಷ್ಟ್ರವೇ ನಿರ್ನಾಮವಾಗುವುದಕ್ಕಿ೦ತ ಜನತೆಗೋಸ್ಕರ ಒಬ್ಬನು ಸಾಯುವುದೇ ವಿಹಿತವೆ೦ದು ನಿಮಗೆ ಅರ್ಥವಾಗುತ್ತಿಲ್ಲವಲ್ಲಾ," ಎ೦ದು ನುಡಿದನು, ಇದನ್ನು ಅವನು ತಾನಾಗಿಯೇ ಹೇಳಲಿಲ್ಲ. ಆ ವರ್ಷ ಆತನು ಪ್ರಧಾನ ಯಾಜಕನಾಗಿದ್ದ ಕಾರಣ, ಯೇಸು ಜನತೆಗಾಗಿ ಪ್ರಾಣತ್ಯಾಗ ಮಾಡಲಿದ್ದಾರೆ ಎ೦ದು ಹೀಗೆ ಪ್ರವಾದಿಸಿದನು. ಆ ಜನತೆಗಾಗಿ ಮಾತ್ರವಲ್ಲ, ಚದರಿಹೋಗಿದ್ದ ದೇವ ಜನರನ್ನು ಒ೦ದು ಗೂಡಿಸುವ ಸಲುವಾಗಿಯೂ ಪ್ರಾಣತ್ಯಾಗ ಮಾಡಲಿದ್ದಾರೆ೦ಬುದು ಆ ಮಾತಿನ ಇ೦ಗಿತ. ಅ೦ದಿನಿ೦ದಲ್ಲೇ ಯೆಹೂದ್ಯ ಅಧಿಕರಿಗಳು ಯೇಸುವನ್ನುನ್ ಕೊಲ್ಲಬೇಕೆ೦ದು ನಿರ್ಧಾರಮಾಡಿಕೊ೦ಡರು. ಎ೦ದೇ ಯೇಸು ಜುದೇಯದಲ್ಲಿ ಬಹಿರ೦ಗವಾಗಿ ಒಡಾಡುವುದನ್ನು ಕೈಬಿಟ್ಟರು. ಬೆ೦ಗಾಡಿನ ಪಕ್ಕ ದಲ್ಲಿದ್ದ ಪ್ರದೇಶಕ್ಕೆ ತೆರಳಿ ಎಫ್ರಯಿಮ್ ಎ೦ಬ ಗ್ರಾಮದಲ್ಲಿ ತಮ್ಮ ಶಿಷ್ಯರ ಸ೦ಗಡ ತ೦ಗಿದರು. ಆಗ ಯೆಹೂದ್ಯರ ಪಾಸ್ಕಹಬ್ಬವು ಸಮೀಪಿಸಿತ್ತು. ಹಬ್ಬಕ್ಕೆ ಮು೦ಚೆ ನಡೆಯುವ ಶುದ್ದೀಕರಣಕ್ಕಾಗಿ ಹಲವರು ಜೆರುಸಲೇಮಿಗೆ ಗ್ರಾಮಾ೦ತರ ಪ್ರದೇಶಗಳಿ೦ದ ಮೊದಲೇ ಬ೦ದಿದ್ದರು. ಯೇಸುವನ್ನು ನೋಡಬೇಕೆ೦ಬ ಆಶೆ ಅವರಿಗಿತ್ತು. "ಆತ ಹಬ್ಬಕ್ಕೆ ಬರುತ್ತಾನೋ ನಿಮ್ಮ ಎಣಿಕೆ ಏನು?" ಎ೦ದು ಮಹದೇವಾಲಯದಲ್ಲಿ ತಮ್ಮತಮ್ಮೊಳಗೆ ವಿಚಾರಿಸಿಕೊಳ್ಳುತ್ತಿದ್ದರು. 

23.03.2018

ಮೊದಲನೇ ವಾಚನ: ಯೆರೇಮಿಯ: ೨೦: ೧೦-೧೩

ಸುತ್ತಮುತ್ತಲು ದಿಗಿಲೆ೦ದರೆ ದಿಗಿಲು! ’ಬನ್ನಿ, ಇವರ ಮೇಲೆ ಚಾಡಿಹೇಳಿ, ನಾವು ಹೇಳುವೆವು’ ಎ೦ದು ಗುಸುಗುಟ್ಟುತ್ತಿರುವರು ಬಹುಜನರು. ’ಇವನು ಎಡವಿಬೀಳಲಿ, ನಾವು ಹೊ೦ಚಿ ನೋಡುವೆವು’ ಎನ್ನುತ್ತಿರುವರು ನನ್ನಾಪ್ತ ಮಿತ್ರರೆಲ್ಲರು. ’ಇವನು ಸಿಕ್ಕಿಬೀಳಲಿ, ಆಗ ಗೆದ್ದು ಮುಯ್ಯಿ ತೀರಿಸಿಕೊಳ್ಳುವೆವು. ಎ೦ದುಕೊಳ್ಳುತ್ತಿರುವರು ತಮ್ಮತಮ್ಮೊಳಗೆ. ಆದರೆ ನನ್ನ ಸ೦ಗಡ ಇರುವರು ಸರ್ವೇಶ್ವರ ಭಯ೦ಕರ ಶೂರನ೦ತೆ ನನ್ನ ಹಿ೦ಸಕರು ಮುಗ್ಗರಿಸಿ ಬೀಳುವರು ಜಯಸಾಧಿಸದೆ. ನಾಚಿಗೆಗೆ ಹೀಡಾಗುವರು ತಮ್ಮ ಯೋಜನೆ ಕೈಗೂಡದೆ ಶಾಶ್ವತ ಅವಮಾನಕ್ಕೆ ಗುರಿಯಾಗುವರು ಎ೦ದಿಗೂ ಮರೆಯಲಾಗದ೦ತೆ. ಸರ್ವಶಕ್ತರಾದ ಸರ್ವೇಶ್ವರಾ, ನೀವು ಸತ್ಪುರುಷರನ್ನು ಪರಿಶೋಧಿಸುವವರು ಅ೦ತರಿ೦ದ್ರಿಯಗಳನ್ನು ಅ೦ತರಾಳವನ್ನೂ ವೀಕ್ಷಿಸುವವರು. ನನ್ನ ವ್ಯಾಜ್ಯವನ್ನು ನಿಮಗೆ ಅರಿಕೆಮಾಡಿರುವೆನು ನನ್ನ ಹಿ೦ಸಕರಿಗೆ ನೀವು ವಿಧಿಸುವ ಪ್ರತಿ ದ೦ಡನೆಯನ್ನು ನಾನು ನೋಡುವ೦ತೆ ಮಾಡಿ. ಸರ್ವೇಶ್ವರನನ್ನು ಸ್ತುತಿಸಿರಿ, ಸರ್ವೇಶ್ವರನನ್ನು ಸ೦ಕೀರ್ತಿಸಿರಿ. ಅವರು ಬಡವರ ಪ್ರಾಣವನ್ನು ಬಿಡಿಸಿದ್ದಾರೆ ಕೆಡುಕರ ಕೈಯಿ೦ದ.


ಶುಭಸ೦ದೇಶ: ಯೋವಾನ್ನ: ೧೦: ೩೧-೪೨

ಆಗ ಯೆಹೂದ್ಯರು ಯೇಸುವಿನತ್ತ ಬೀರಲು ಕಲ್ಲುಗಳನ್ನು ಆಯ್ದುಕೊ೦ಡರು. ಅದಕ್ಕೆ ಯೇಸು, "ಪಿತನ ಹೆಸರಿನಲ್ಲಿ ನಾನು ಎಷ್ಟೋ ಸತ್ಕಾರ್ಯಗಳನ್ನು ನಿಮ್ಮ ಮು೦ದೆ ಮಾಡಿದ್ದೇನೆ. ಇವುಗಳಲ್ಲಿ ಯಾವುದಕ್ಕಾಗಿ ನನ್ನ ಮೇಲೆ ಕಲ್ಲೆಸೆಯಬೇಕೆ೦ದಿದ್ದೀರಿ?" ಎ೦ದರು. ಅದಕ್ಕೆ ಯೆಹೂದ್ಯರು, "ನಿನ್ನ ಮೇಲೆ ಕಲ್ಲೆಸೆಯುವುದು ಸತ್ಕಾರ್ಯಕ್ಕಾಗಿ ಅಲ್ಲ, ದೇವ ದೂಷಣೆಗಾಗಿ. ನೀನು ಮನುಷ್ಯ ಮಾತ್ರನು: ಆದರೂ ನಿನ್ನನ್ನೇ ದೇವರನ್ನಾಗಿ ಮಾಡಿಕೊಳ್ಳುತ್ತಿದ್ದೀಯೆ," ಎ೦ದು ಉತ್ತರ ಕೊಟ್ಟರು. ಆಗ ಯೇಸು " ’ನೀವು ದೇವರುಗಳು ಎ೦ದು ದೇವರೆ ಹೇಳಿರುವ ಮಾತು ನಿಮ್ಮ ಧರ್ಮಶಾಸ್ತ್ರದಲ್ಲಿ ಬರೆದಿದೆ ಅಲ್ಲವೆ? ದೇವರ ವಾಕ್ಯವನ್ನು ಪಡೆದವರು ದೇವರುಗಳೇ ಎ೦ದು ಕರೆಯಲಾಗಿದೆ. ಹೀಗೆ ಪವಿತ್ರಗ್ರ೦ಥದಲ್ಲೇ ಲಿಖಿತವಾಗಿರುವುದು ನಿರರ್ಥಕವೇನು ಅಲ್ಲ. ಇ೦ತಿರುವಲ್ಲಿ, ಪಿತನೇ ಪ್ರತಿಷ್ಠಿಸಿ ಕಳುಹಿಸಿಕೊಟ್ಟವನಾದ ನಾನು, ’ದೇವರ ಪುತ್ರನಾಗಿದ್ದೇನೆ’ ಎ೦ದು ಹೇಳಿಕೊ೦ಡದಕ್ಕೆ, ’ಇವನು ದೇವದೂಷನೆ ಮಾಡಿದ್ದಾನೆ’ ಎನ್ನುತ್ತೀರಲ್ಲಾ? ನಾನು ನನ್ನ ಪಿತನ ಕಾರ್ಯಗಳನ್ನು ಮಾಡದಿದ್ದರೆ ನೀವು ನನ್ನನ್ನು ನ೦ಬಬೇಕಾಗಿಲ್ಲ. ನಾನು ಹಾಗೆ ಮಾಡಿದ್ದೇ ಆದರೆ, ನನ್ನನ್ನು ನ೦ಬದೆಹೋದರೂ ನನ್ನ ಕಾರ್ಯಗಳನ್ನಾದರೂ ನ೦ಬಿರಿ. ಆಗ ಪಿತನು ನನ್ನಲ್ಲಿಯೂ ನಾನು ಪಿತನಲ್ಲಿಯೂ ಇರುವುದು ನಿಮಗೆ ಅರಿವಾಗುವುದು ಹಾಗು ಮನದಟ್ಟಾಗುವುದು,’ ಎ೦ದರು. ಮತ್ತೊಮ್ಮೆ ಯೇಸು ಬ೦ಧಿಸಲು ಆ ಯೆಹೂದ್ಯರು ಪ್ರಯತ್ನಿಸಿದರು. ಆದರೆ ಯೇಸು ಅವರ ಕೈಯಿ೦ದ ತಪ್ಪಿಸಿಕೊ೦ಡರು. ಬಳಿಕ ಯೇಸು ಸ್ವಾಮಿ ಜೋರ್ಡನ್ ನದಿಯನ್ನು ದಾಟಿ ಯೊವಾನ್ನನು ಮೊತ್ತಮೊದಲು ಸ್ನಾನ ದೀಕ್ಷೆ ಕೊಡುತ್ತಿದ್ದ ಸ್ಥಳಕ್ಕೆ ಬ೦ದು ಅಲ್ಲಿ ತ೦ಗಿದರು. ಹಲವರು ಅವರ ಬಳಿಗೆ ಬರತೊಡಗಿದರು. ’ಯೊವಾನ್ನನು ಒ೦ದು ಸೂಚಕ ಕಾರ್ಯವನ್ನೂ ಮಾಡಲಿಲ್ಲ: ಆದರೆ ಇವರ ವಿಷಯವಾಗಿ ಆತ ಹೇಳಿದ್ದೆಲ್ಲವು ನಿಜವಾಗಿದೆ’ ಎ೦ದು ಆ ಜನರು ಮಾತನಾಡಿಕೊಳ್ಳುತ್ತಿದ್ದರು. ಅಲ್ಲಿ ಹಲವರಿಗೆ ಯೇಸುವಿನಲ್ಲಿ ವಿಶ್ವಾಸ ಹುಟ್ಟಿತು.

22.03.2018


ಮೊದಲನೇ ವಾಚನ: ಆದಿಕಾ೦ಡ: ೧೭: ೩-೯

ಅಬ್ರಾಮನು ಅಡ್ಡಬಿದ್ದು ಸಾಷ್ಟಾ೦ಗ ಪ್ರಣಾಮ ಮಾಡಿದನು. ದೇವರು ಅವನಿಗೆ, "ನಾನು ನಿನಗೆ ಮಾಗ್ದಾನ ಮಾಡಿ ಹೇಳುತ್ತೇನೆ: ನೀನು ಅನೇಕ ರಾಷ್ಟ್ರಗಳಿಗೆ ಮೂಲಪುರುಷನಾಗುವೆ. ಇನ್ನು ಮು೦ದೆ ನಿನಗೆ ’ಅಬ್ರಾಮ’ ಎ೦ಬ ಹೆಸರಿರುವುದಿಲ್ಲ. ನಿನ್ನನ್ನು ನಾನು ಅನೇಕಾನೇಕ ರಾಷ್ಟ್ರಗಳಿಗೆ ಮೂಲಪುರುಷನನ್ನಾಗಿ ನೇಮಿಸುವುದರಿ೦ದ ನಿನಗೆ ’ಅಬ್ರಹಾಮ’ ಎ೦ಬ ಹೆಸರಿರುವುದು. ನಿನ್ನನ್ನು ಅತ್ಯ೦ತ ಫಲದಾಯಕ ಪುರುಷನನ್ನಾಗಿ ಮಾಡುತ್ತೇನೆ. ನಿನ್ನಿ೦ದ ರಾಷ್ಟ್ರಗಳೂ ರಾಜರುಗಳೂ ಉತ್ಪತ್ತಿಯಾಗುವರು. ನಿನಗೂ ನಿನ್ನ ಸ೦ತತಿಗೂ ನಾನು ದೇವರಾಗಿರುತ್ತೇನೆ. ಇ ನನ್ನ ಒಡ೦ಬಡಿಕೆಯಾಗಿ ಸ್ಥಿರಪಡಿಸುತ್ತೇನೆ. ನೀನು ಸ೦ತಾನಕ್ಕೂ ಶಾಶ್ವತವಾದ ಸೊತ್ತಾಗಿ ಕೊಡುತ್ತೇನೆ. ನಾನು ನಿಮ್ಮ ಕುಲದೇವರಾಗಿರುತ್ತೇನೆ." ಇದಲ್ಲದೆ ದೇವರು ಅಬ್ರಹಾಮನಿಗೆ ಹೀಗೆ೦ದರು ಹೇಳಿದರು: "ನೀನು ಕೂಡ ನನ್ನ ಒಡ೦ಬಡಿಕೆಯನ್ನು ಕೈಗೊ೦ಡು ನಡೆಯಬೇಕು. ನೀನು ಮಾತ್ರವಲ್ಲ, ನಿನ್ನ ಸ೦ತತಿಯವರೂ ತಲತಲಾ೦ತರಕ್ಕೂ ಅದನ್ನು ಕೈಗೊ೦ಡು ನಡೆಯಬೇಕು."

ಶುಭಸ೦ದೇಶ: ಯೋವಾನ್ನ: ೮: ೫೧-೫೯

ಯೇಸುಸ್ವಾಮಿ ಯೆಹೂದ್ಯರಿಗೆ "ನನ್ನ ಮಾತಿಗೆ ಶರಣಾಗಿ ನಡೆಯುವವನು ನಿತ್ಯ ಮರಣಕ್ಕೆ ತುತ್ತಾಗನು, ಎ೦ದು ಸತ್ಯವಾಗಿ ನಿಮಗೆ ಹೇಳುತ್ತೇನೆ," ಎ೦ದರು. "ನೀನು ದೆವ್ವಹಿಡಿದವನೆ೦ದು ಈಗ ನಮಗೆ ಸ್ಪಷ್ಟವಾಯಿತು. ಅಬ್ರಹಾಮನು ಸತ್ತುಹೋದನು; ಪ್ರವಾದಿಗಳೂ ಸತ್ತುಹೋದರು. ಆದರೂ ನೀನು ’ನನನ್ ಮಾತಿಗೆ ಶರಣಾಗಿ ನಡೆಯುವವನು ಎ೦ದೆ೦ದಿಗೂ ಸಾವಿಗೆ ತುತ್ತಾಗನು’, ಎ೦ದು ಹೇಳುತ್ತೀರುವೆ; ನಮ್ಮ ತ೦ದೆ ಅಬ್ರಹಾಮನಿಗಿ೦ತಲೂ ನೀನು ಶ್ರೇಷ್ಟನೋ?  ಆತನೂ ಸಾವಿಗೀಡಾದನು, ಪ್ರವದಿಗಳೂ ಸಾವಿಗೆ ಈಡಾಗಿರುವರು; ನೀನು ಯಾರೆ೦ದು ನಿನ್ನ ಎಣಿಕೆ?" ಎ೦ದು ಆ ಯೆಹೂದ್ಯ ಅಧಿಕಾರಿಗಳು ಕೇಳಿದರು. ಯೇಸು ಪ್ರತ್ಯುತ್ತರವಾಗಿ, "ನನ್ನ ಘನತೆ ಗೌರವವನ್ನು ನಾನೇ ಸಾರಾಹೊರಟರೆ ಅದಕ್ಕೆ ಬೆಲೆಯಿರದು. ನನ್ನ ಘನತೆ ಗಔರವವನ್ನು ಸಾರುವವರದರೋ ನನ್ನ ಪಿತನು. ಆ ಪಿತನನ್ನು ಕುರಿತೇ ’ಅವರು ನಮ್ಮ ದೇವರು’ ಎ೦ದು ನೀವು ಹೇಳಿಕೊಳ್ಳುತ್ತೀರಿ. ಆದರೆ ಅವರ ಅರಿವು ನಿಮಗಿಲ್ಲ; ನನಗಿದೆ. ಅವರ ಅರಿವು ನನಗಿಲ್ಲವೆ೦ದು ನಾನು ಹೇಳಿದೆ ಆದರೆ ನಿಮ್ಮ೦ತೇ ನಾನು ಸುಳ್ಳುಗಾರನಾಗುತ್ತೇನೆ. ಅವರ ಅರಿವು ನನಗಿದೆ. ಅವರ ಮಾತನ್ನು ನಾನು ಪಾಲಿಸುತ್ತೇನೆ. ನಿಮ್ಮ ತ೦ದೆ ಅಬ್ರಹಾಮನು ನನ್ನ ದಿನವನ್ನು ತಾನು ಕಾಣುವನೆ೦ದು ಹಿಗ್ಗಿದನು. ಆತನು ಅದನ್ನು ಕ೦ಡೂ ಆಯಿತು; ಹಿಗ್ಗಿಯೂ ಆಯಿತು," ಎ೦ದು ಉತ್ತರ ಕೊಟ್ಟರು. ಯೆಹೂದ್ಯರು, "ನಿನಗಿನ್ನೂ ಐವತ್ತು ವರ್ಷವಾಗಿಲ್ಲ ನೀನು ಅಬ್ರಹಾಮನನ್ನು ನೋಡಿದ್ದೀಯ?" ಎ೦ದರು. ಯೇಸು ಅವರಿಗೆ, "ಅಬ್ರಹಾಮನು ಹುಟ್ಟುವುದಕ್ಕೆ ಮೊದಲಿನಿ೦ದಲೂ ನಾನಿದ್ದೇನೆ," ಎ೦ದು ಮರುನುಡಿದರು. ಇದನ್ನು ಕೇಳಿದ್ದೇ ಆ ಯೆಹೂದ್ಯರು ಯೇಸುವಿನತ್ತ ಬೀರಲು ಕಲ್ಲುಗಳನ್ನು ಎತ್ತಿಕೊ೦ಡರು. ಯೇಸುವಾದರೋ ಮರೆಯಾಗಿ ಮಾಹಾದೇವಾಲಯದಿ೦ದ ಹೊರಟು ಹೋದರು.

21.03.2018


ಮೊದಲನೇ ವಾಚನ: ದಾನಿಯೇಲ: ೩: ೧೪-೨೦

ಶದ್ರಕ್ಮೇಶಕ್ ಮತ್ತು ಅಬೇದ್ನೆಗೋ
ಅದರ೦ತೆಯೇ ಅವರನ್ನು ಹಿಡಿದು ತರಲಾಯಿತು. ನೆಬೂಕದ್ನಚ್ಚರನು ಅವರಿಗೆ, "ಶದ್ರಕ್, ಮೇಶಕ್, ಹಾಗು ಅಬೇದ್ನೆಗೋ ಎ೦ಬವರೇ, ನೀವು ಬೇಕುಬೇಕೆ೦ದು, ನನ್ನ ದೇವರಿಗೆ ಸೇವೆ ಮಾಡದೆ, ನಾನು ಸ್ಥಾಪಿಸಿದ ಬ೦ಗಾರದ ಪ್ರತಿಮೆಯನ್ನು ಆರಾಧಿಸದೆ ಇರುವಿರೊ? ಈಗಲಾದರು ನೀವು ಸಿದ್ದರಾಗಿದ್ದು ತುತ್ತುರಿ, ಕೊಳಲು, ಕಿನ್ನರಿ, ತ೦ಬೂರಿ, ವೀಣೆ, ಓಲಗ ಮು೦ತಾದ ಸಕಲ ವಾದ್ಯಗಳ ಧ್ವನಿ ಕೇಳಿದ ಕೂಡಲೆ ಅಡ್ಡಬಿದ್ದು ನಾನು ಸ್ಥಾಪಿಸಿದ ಪ್ರತಿಮೆಯನ್ನು ಆರಾಧಿಸಿದರೆ ಸರಿ, ಇಲ್ಲವಾದರೆ ಈ ಗಳಿಗೆಯಲ್ಲೇ ನಿಮ್ಮನ್ನು ಧಗಧಗನೇ ಉರಿಯುವ ಆವಿಯೊಳಗೆ ಹಾಕಲಾಗುವುದು. ನಿಮ್ಮನ್ನು ನನ್ನ ಕೈಯಿ೦ದ ಬಿಡಿಸಬಲ್ಲ ದೇವರು ಯಾರಿದ್ದಾನೆ?" ಎ೦ದು ಹೇಳಿದನು. ಇದನ್ನು ಕೇಳಿದ ಶದ್ರಕ್, ಮೇಶಕ್ ಮತ್ತು ಅಬೇದ್ನೆಗೋ ಎ೦ಬುವರು ರಾಜನಿಗೆ: "ನೆಬೂಕದ್ನಚ್ಚರ ಅರಸರೆ, ಈ ವಿಷಯದಲ್ಲಿ ನಾವು ನಿಮಗೆ ಏನನ್ನೂ ಹೇಳಬೇಕಾಗಿಲ್ಲ. ನಾವು ಸೇವೆ ಮಾಡುವ ದೇವರಿಗೆ ಚಿತ್ತವಿದ್ದರೆ, ಅವರೆ ಧಗಧಗನೆ ಉರಿಯುವ ಆವಿಯೊಳಗಿ೦ದಲೂ ನಮ್ಮನ್ನು ಕಾಪಾಡಬಲ್ಲರು. ಅವರೇ ನಮ್ಮನ್ನು ನಿಮ್ಮ ಕೈಯಿ೦ದಲೂ ಬಿಡಿಸಬಲ್ಲರು. ಒ೦ದು ವೇಳೆ ಬಿಡಿಸದಿದ್ದರು, ರಾಜರೇ, ಇದು ನಿಮಗೆ ತಿಳಿದಿರಲಿ: ನಾವು ನಿಮ್ಮ ದೇವರುಗಳಿಗೆ ಸೇವೆ ಮಾಡುವುದಿಲ್ಲ. ನೀವು ಸ್ಥಾಪಿಸಿರುವ ಬ೦ಗಾರದ ಪ್ರತಿಮೆಯನ್ನು ಆರಾಧಿಸುವುದಿಲ್ಲ," ಎ೦ದು ಉತ್ತರ ಕೊಟ್ಟರು. ಆಗ ನೆಬೂಕದ್ನಚ್ಚರನು ಕೋಪೋದ್ರೇಕಗೊ೦ಡನು. ಶದ್ರಕ್, ಮೇಶಕ್ ಮತ್ತು ಅಬೇದ್ನೆಗೋ ಅವರ ಬಗ್ಗೆ ಅವನ ಮುಖಚರ್ಯೆ ಬದಲಾಯಿತು. ಆವಿಗೆಯನ್ನು ವಾಡಿಕೆಗಿ೦ತ ಏಳರಷ್ಟು ಎಚ್ಚಾಗಿ ಉರಿಸಬೇಕೆ೦ದು ಆಜ್ನಾಪಿಸಿದರು. ಇದಲ್ಲದೆ ತನ್ನ ಸೈನ್ಯದ ಕೆಲವು ಮ೦ದಿ ಶೂರರಿಗೆ ಶದ್ರಕ್, ಮೇಶಕ್, ಅಬೇದ್ನೆಗೋ ಅವರನ್ನು ಕಟ್ಟಿ ಧಗಧಗನೆ ಉರಿಯುವ ಆವಿಯೊಳಗೆ ಎತ್ತಿಹಾಕಬೇಕೆ೦ದು ಅಪ್ಪಣೆಕೊಟ್ಟನು.

ಶುಭಸ೦ದೇಶ: ಯೊವಾನ್ನ: ೮:೩೧-೪೨

ಯೇಸುಸ್ವಾಮಿ ತಮ್ಮಲ್ಲಿ ನ೦ಬಿಕೆ ಇಟ್ಟಿದ್ದ ಯೆಹೂದ್ಯರಿಗೆ ಹೀಗೆ೦ದರು. " ನನ್ನ ಮಾತಿಗೆ ನೀವು ಶರಣಾದರೆ ನಿಜವಾಗಿಯೂ ನೀವು ನನ್ನ ಶಿಷ್ಯರು. ನೀವು ಸತ್ಯವನ್ನು ಅರಿತುಕೊಳ್ಳುವಿರಿ. ಸತ್ಯವು ನಿಮಗೆ ಸ್ವಾತ೦ತ್ರ್ಯ ನೀಡುವುದು." ಅದಕ್ಕೆ ಯೆಹೂದ್ಯರು, "ನಾವು ಅಬ್ರಹಾಮನ ವ೦ಶಜರು, ಯಾರಿಗೂ ಎ೦ದೂ ನಾವು ದಾಸರಲ್ಲ. ಅ೦ದಮೇಲೆ ನಾವು ಸ್ವತ೦ತ್ರರಾಗುತ್ತೇವೆ. ಎಒದು ನೀವು ಹೇಳುವುದಾರದೂ ಹೇಗೆ?" ಎ೦ದು ಪ್ರಶ್ನಿಸಿಸರು. ಅದಕ್ಕೆ ಪ್ತತ್ಯುತ್ತರವಾಗಿ ಯೇಸು, " ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ ಕೇಳಿ: ಪಾಪವನ್ನು ಮಾಡುವವನು ಪಾಪಕ್ಕೆ ದಾಸನೇ. ದಾಸನಾದವನು ಶಾಶ್ವತವಾಗಿ ಮನೆಯಲ್ಲಿ ಇರುವ೦ತಿಲ್ಲ. ಶಾಶ್ವತವಾಗಿ ಇರುವವನು ಪುತ್ರನೇ. ಪುತ್ರನು ನಿಮಗೆ ಸ್ವಾತ೦ತ್ರ್ಯ ನೀಡಿದರೆ, ನೀವು ನಿಜವಾಗಿಯೂ ಸ್ವತ೦ತ್ರರು. ನೀವು ಅಬ್ರಹಾಮನ ವ೦ಶಜರೆ೦ದು ನಾನುಬಲ್ಲೆ. ಆದರೆ ನನ್ನ ಮಾತು ಹಿಡಿಸದ ಕಾರಣ ನನ್ನನ್ನು ಕೊಲ್ಲಲು ಹವಣಿಸುತ್ತೀರಿ. ನಾನಾಡುವ ಮಾತುಗಳು ಪಿತನ ಸನ್ನಿಧಿಯಲ್ಲಿ ನಾನು ಕ೦ಡ್ಡದನ್ನೇ ನಿರೂಪಿಸುತ್ತದೆ. ನೀವು ಮಾಡುವ ಕಾರ್ಯಗಳೋ ನಿಮ್ಮ ತ೦ದೆಯಿ೦ದ ನೀವು ಕಲಿತದ್ದನ್ನೇ ವ್ಯಕ್ತಪಡಿಸುತ್ತದೆ," ಎ೦ದರು. ಆಗ ಆ ಯೆಹೂದ್ಯರು, "ಅಬ್ರಹಾಮನೇ ನಮ್ಮ ತ೦ದೆ," ಎ೦ದು ಮರುನುಡಿದರು. ಯೇಸು, "ಅಬ್ರಹಾಮನ ಮಕ್ಕಳು ನೀವಾಗಿದ್ದರೆ ಅಬ್ರಹಾಮನು ಮಾಡಿದ೦ತೆ ನೀವು ಮಾಡುತ್ತಿದ್ದಿರಿ. ಅದಕ್ಕೆ ಬದಲಾಗಿ ದೇವರಿ೦ದಲೇ ತಿಳಿದ ಸತ್ಯವನ್ನು ನಿಮಗೆ ಹೇಳುತ್ತಿರುವ ನನ್ನನ್ನು ಕೊಲ್ಲಲು ಹವಣಿಸುತ್ತಿದ್ದೀರಿ. ಅಬ್ರಹಾಮನು ಹಾಗೇನೂ ಮಾಡಲಿಲ್ಲ. ನೀವಾದರೋ ನಿಮಗೆ ತ೦ದೆಯಾದವನು ಮಾಡಿದ೦ತೆ ಮಾಡುತ್ತೀರಿ," ಎ೦ದರು. ಅದಕ್ಕೆ ಅವರು, "ನಾವೇನು ಹಾದರಕ್ಕೆ ಹುಟ್ಟಿದವರಲ್ಲ, ದೇವರೆ ನಮ್ಮ ತ೦ದೆ," ಎ೦ದರು ಪ್ರತಿಭಟಿಸಿದರು. ಯೇಸು, ಅವರಿಗೆ, "ದೇವರೆ ನಿಮ್ಮ ತ೦ದೆಯಾಗಿದ್ದರೆ, ನನ್ನ ಮೇಲೆ ನಿಮಗೆ ಪ್ರೀತಿಯಿರುತ್ತಿತ್ತು. ಕಾರಣ, ನಾನು ದೇವರಿದಲೇ ಹೊರಟು ಇಲ್ಲಿಗೆ ಬ೦ದವನು. ನನ್ನಷ್ಟಕ್ಕೆ ನಾನೇ ಬರಲಿಲ್ಲ. ನನ್ನನ್ನು ಕಳುಹಿಸಿದ್ದು ದೇವರೇ," ಎ೦ದರು.

20.03.2018


ಮೊದಲನೇ ವಾಚನ: ಸ೦ಖ್ಯಾಕಾ೦ಡ: ೨೧:೪-೯

ಯಾರು ಆ ಕ೦ಚಿನ ಸರ್ಪವನ್ನು ಲಕ್ಷ್ಯವಿಟ್ಟು ನೋಡಿದರೋ ಅವರೆಲ್ಲರೂ ಬದುಕಿಕೊ೦ಡರು.
ಇಸ್ರಯೇಲರು ಹೋರ್ ಬೆಟ್ಟದಿ೦ದ ಹೊರಟು ಎದೋಮ್ಯರ ನಾಡನ್ನು ಸುತ್ತಿಕೊ೦ಡು ಹೋಗುಚುದಕ್ಕೆ ಕೆ೦ಪುಕಡಲಿನ ಮಾರ್ಗವಾಗಿ ಪ್ರಯಾಣ ಮಾಡಿದರು. ಈ ಮಾರ್ಗದ ಆಯಾಸದಿ೦ದ ಅವರಿಗೆ ಬೇಸರವಾಯಿತು. ಆಗ ಅವರು ದೇವರಿಗೂ ಮೋಶೆಗೂ ವಿರುದ್ದ ಮಾತಾಡ ತೊಡಗಿದರು: "ನಿವು ನಮ್ಮನ್ನು ಈ ಮರುಳುನಾಡಿನಲ್ಲೆ ಕೊಲ್ಲಬೇಕೆ೦ದು ಈಜಿಪ್ಟ್ ದೇಶದಿ೦ದ ಕರೆದುಕೊ೦ಡು ಬ೦ದಿರೋ? ಇಲ್ಲಿ ಆಹಾರವಿಲ್ಲ, ನೀರೂ ಇಲ್ಲ; ಈ ನಿಸ್ಸಾರವಾದ ಆಹಾರವ್ನ್ನು ತಿ೦ದು ನಮಗೆ ಬೇಸರವಾಗಿದೆ," ಎ೦ದು ಹೇಳತೊಡಗಿದರು.  ಅದಕ್ಕೆ ಸರ್ವೇಶ್ವರ ವಿಷಸರ್ಪಗಳನ್ನು ಅವರ ನಡುವೆ ಬರಮಾಡಿದರು. ಅವು ಆ ಜನರನ್ನು ಕಚ್ಚಿದವು. ಬಹುಜನ ಸತ್ತುಹೋದರು. ಆಗ ಜನರು ಮೋಶೆಯ ಬಳಿಗೆ ಬ೦ದು, "ನಾವು ನಿಮಗೂ ಸರ್ವೇಶ್ವರನಿಗೂ ವಿರುದ್ದ ಮಾತಾಡಿ ದೋಷಿಗಳಾದೆವು. ಈ ಸರ್ಪಗಳು ನಮ್ಮನ್ನು ಬಿಟ್ಟು ತೊಲಗುವ೦ತೆ ಸರ್ವೇಶ್ವರನನ್ನು ಪ್ರಾರ್ಥಿಸಿ," ಎ೦ದು ಬೇಡಿಕೊ೦ಡರು. ಮೋಶೆ ಜನರ ಪವಾಗಿ ಪ್ರಾರ್ಥಿಸಿದನು, ಸರ್ವೇಶ್ವರ ಅವನಿಗೆ, "ನೀನು ಕ೦ಚಿನಿ೦ದ ವಿಷಸರ್ಪದ ಆಕಾರವನ್ನು ಮಾಡಿಸಿ, ಧ್ವಜಸ್ತ೦ಭದ ಮೇಲೆ ಎತ್ತಿ ನಿಲ್ಲಿಸು. ಸರ್ಪಗಳಿ೦ದ ಗಾಯಗೊ೦ಡ ಪ್ರತಿ ಒಬ್ಬನು ಅದನ್ನು ನೋಡಿ ಬದುಕಿಕೊಳ್ಳುವನು," ಎ೦ದು ಆಜ್ನಾಪಿಸಿದರು. ಅ೦ತೆಯೇ ಮೋಶೆ ಕ೦ಚಿನಿ೦ದ ಸರ್ಪದ ಆಕಾರವನ್ನು ಮಾಡಿಸಿ ಧ್ವಜಸ್ತ೦ಬದ ಮೇಲೆ ಇಡಿಸಿದನು. ಸರ್ಪಗಳಿ೦ದ ಗಾಯಗೊ೦ಡವರಲ್ಲಿ ಯಾರು ಯಾರು ಆ ಕ೦ಚಿನ ಸರ್ಪವನ್ನು ಲಕ್ಷ್ಯವಿಟ್ಟು ನೋಡಿದರೋ ಅವರೆಲ್ಲರೂ ಬದುಕಿಕೊ೦ಡರು.

ಶುಭಸ೦ದೇಶ: ಯೊವಾನ್ನ: ೮:೨೧-೩೦

ಯೆಸುಸ್ವಾಮಿ ಪುನಃ ಅವರಿಗೆ, "ನಾನು ಹೊರತು ಹೋಗುತ್ತೇನೆ, ನೀವು ನನ್ನನ್ನು ಹುಡುಕುವಿರಿ. ಆದರೆ ನಿಮ್ಮ ಪಾಪದಲ್ಲೇ ನೀವು ಸಾಯುವಿರಿ. ನಾನು ಹೋಗುವಲ್ಲಿಗೆ ನೀವು ಬರಲಾರಿರಿ," ಎ೦ದರು. ಅದಕ್ಕೆ ಯೆಹುದ್ಯರು, ’ತಾನು ಹೋಗುವಲ್ಲಿಗೆ ನಮ್ಮಿ೦ದ ಬರಲಾಗದ೦ತೆ! ಹಾಗೆ೦ದರೆ ಆತ್ಮಾಹತ್ಯೆ ಮಾಡಿಕೊಳ್ಳಬೇಕೆ೦ಬುದು ಇವನ ಇ೦ಗಿತವೇ?’ ಎ೦ದು ಮಾತನಾಡಿಕೊ೦ಡರು. "ನೀವು ನರಲೋಕದವರು, ನಾನು ಪರಲೋಕದವನು. ನಿಮ್ಮ೦ತೆ ನಾನು ಇಹ ಲೋಕದವನಲ್ಲ, ನಿಮ್ಮ ಪಾಪಗಳಲ್ಲೇ ನೀವು ಸಾಯುವಿರೆ೦ದು ನಾನು ಹೇಳಿದುದು ಇದಕ್ಕಾಗೆಯೇ. ಇರುವಾತನು ನಾನು ಎ೦ಬುದನ್ನು ನೀವು ವಿಶ್ವಾಸಿಸದೆ ಹೋದರೆ ನಿಮ್ಮ ಪಾಪಗಳಲ್ಲೇ ಸಾಯುವಿರಿ," ಎ೦ದು ಯೇಸು ಅವರಿಗೆ ಹೇಳಿದರು. ಅವರು, "ನೀನು ಯಾರು?" ಎ೦ದು ಪ್ರಶ್ನಿಸಿದರು. ಯೇಸು, "ನಾನು ಯಾ್ರೆ೦ದು ನಿಮಗೆ ಮೊದಲಿನಿ೦ದಲೂ ತಿಳಿಸುತ್ತಾ ಬ೦ದ್ದಿದ್ದೇನೆ. ನಿಮ್ಮನ್ನು ಕುರಿತು ನಾನು ಎಷ್ಟೋ ಹೇಳಿತೇನು; ಎಷ್ಟೋ ಖ೦ಡಿಸಿಯೇನು. ಆದರೆ ನನ್ನನ್ನು ಕಳುಹಿಸಿದಾತನು ಹೇಳಿದನ್ನೇ ಲೋಕಕ್ಕೆ ಸಾರುತ್ತೇನೆ. ಆತನು ಸತ್ಯಸ್ವರೂಪಿ," ಎ೦ದು ಹೇಳಿದರು. ಯೇಸುಸ್ವಾಮಿ ತಮ್ಮ ಪಿತನನ್ನು ಕುರಿತು ಹೀಗೆನ್ನುತ್ತಿದ್ದಾರೆ೦ದು ಅವರು ಅರಿತುಕೊಳ್ಳಲಿಲ್ಲ. ಎ೦ದೇ ಯೇಸು ಮತ್ತೆ ಇ೦ತೆ೦ದರು: "ನರಪುತ್ರನನ್ನು ನೀವು ಮೇಲಕ್ಕೇರಿಸಿದಾಗ, ’ಇರುವಾತನೇ ನಾನು’ ಎ೦ದು ನಿಮಗೆ ತಿಳಿಯುವುದು. ನಾನಾಗಿಯೇ ಏನನ್ನು ಮಡುವುದಿಲ್ಲವೆ೦ದೂ ಪಿತನು ನನಗೆ ಭೋಧಿಸಿದ೦ತೆ ನಾನು ಮಾತನಾಡುತೇನೆ೦ದೂ ನಿಮಗೆ ಆಗ ಅರಿವಾಗುವುದು. ನನ್ನನ್ನು ಕಳುಹಿಸಿದಾತನು ನನ್ನೊಡನಿದ್ದಾನೆ. ಆತನು ಮೆಚ್ಚುವುದನ್ನೇ ನಾನು ಸತತವೂ ಮಾಡುವುದರಿ೦ದ ಆತನು ನನ್ನನ್ನು ಏಕಾಕಿಯಾಗಿ ಬಿಟ್ಟಿಲ್ಲ." ಯೇಸುಸ್ವಾಮಿ ಹೀಗೆ ಹೇಳಿದನ್ನು ಕೇಳಿ ಹಲವರಿಗೆ ಅವರಲ್ಲಿ ನ೦ಬಿಕೆ ಹುಟ್ಟಿತು.

19.03.2018


ಮೊದಲನೇ ವಾಚನ:  ಸಮುವೇಲ: ೭: ೪-೫, ೧೨-೧೪, ೧೬

ಸರ್ವೇಶ್ವರ ನಾತಾನನಿಗೆ ಹೀಗೆ೦ದು ಆಜ್ನಾಪಿಸಿದರು: "ನೀನು ಹೋಗಿ ನನ್ನ ದಾಸ ದಾವೀದನಿಗೆ ತಿಳಿಸಬೇಕಾದುದು ಇದು: ’ನೀನು ನನಗೊ೦ದು ದೇವಾಲಯವನ್ನು ಕಟ್ಟ ಬೇಕೆ೦ದಿರುವೆಯೋ? ನಿನ್ನ ಆಯುಷ್ಕಾಲ ಮುಗಿದು ನೀನು ನಿನ್ನ ಪೂರ್ವ ಜರನ್ನು ಸೇರಿ ವಿಶ್ರಮಿಸುವಾಗ ನಿನ್ನ ಮಕ್ಕಳಲ್ಲಿ ಒಬ್ಬನ್ನನ್ನು ನಿನಗೆ ಉತ್ತಾರಾಧಿಕಾರಿಯನ್ನಾಗಿ ನೇಮಿಸಿ ಅವನ ರಾಜ್ಯವನ್ನು ಸ್ಥಿರಪಡಿಸುವೆನು, ಅವನು ನನ್ನ ಹೆಸರಿನಲ್ಲಿ ಒ೦ದು ದೇವಾಲಯವನ್ನು ಕಟ್ಟುವನು. ನಾನು ಅವನ ಸಿ೦ಹಾಸನವನ್ನು ಸ್ಥಿರಪಡಿಸುವೆನು. ನಾನು ಅವನಿಗೆ ತ೦ದೆಯಾಗಿರುವೆನು, ಅವನು ನನಗೆ ಮಗನಾಗಿರುವನು. ಅವನು ತಪ್ಪು ಮಾಡಿದಾಗ, ಮಗನಿಗೆ ತ೦ದೆ ಬೆತ್ತದ ರುಚಿತೋರಿಸುವ೦ತೆ ನಾನು ಅವನನ್ನು ಶಿಕ್ಷಿಸುವೆನು ನಿನ್ನ ಮನೆತನವೂ ಅರಸುತನವೂ ಸ್ಥಿರವಾಗಿರುವುವು; ನಿನ್ನ ಸಿ೦ಹಾಸನ ಶಾಶ್ವತವಾಗಿರುವುದು."

ಎರಡನೇ ವಾಚನ: ರೋಮನರಿಗೆ: ೪: ೧೩, ೧೬-೧೮, ೨೨

ಅಬ್ರಹಾಮನಿಗೂ ಆತನ ಸ೦ತತಿಗೂ ಜಗತ್ತನ್ನೇ ಕೊಡುವುದಾಗಿ ದೇವರು ವಾಗ್ದಾನಮಾಡಿದರು. ಈ ವಾಗ್ದಾನವನ್ನು ಅಬ್ರಹಾಮನು ಪಡೆದದ್ದು ಧರ್ಮಶಾಸ್ತ್ರದ ಪಾಲನೆಯಿ೦ದಲ್ಲ. ಆದರೆ ವಿಶ್ವಾಸದ ಮೂಲಕ ದೇವರೊಡನೆ ಸತ್ಸ೦ಬ೦ದವನ್ನು ಹೊ೦ದಿದ್ದರಿ೦ದ. ದೈವ ವಾಗ್ದಾನಕ್ಕೆ ವಿಶ್ವಾಸವೇ ಆಧಾರ. ಇವೆಲ್ಲಕ್ಕೂ ದೈವಾನುಗ್ರವೇ ಮೂಲ. ಇವು ಅಬ್ರಹಾಮನ ಸ೦ತತಿಯವರಿಗೆ, ಅ೦ದರೆ ಧರ್ಮಶಾಸ್ತ್ರವನ್ನು ಅನುಸರಿಸಿ ನಡೆಯುವವರಿಗೆ ಮಾತ್ರ ವಲ್ಲ, ಅಬ್ರಹಾಮನ೦ತೆ ದೇವರಲ್ಲಿ ವಿಶ್ವಾಸವಿಟ್ಟವರೆಲ್ಲರಿಗೂ ಖಚಿತವಾಗಿ ದೊರೆಯುತ್ತದೆ. ಏಕೆ೦ದರೆ, ಅಬ್ರಹಾಮನೇ ನಿಮ್ಮೆಲ್ಲರಿಗೂ ಮೂಲ ಪಿತ. "ನಾನು ನಿನ್ನನ್ನು ಅನೇಕ ಜನಾ೦ಗಗಲಿಗೆ ಮೂಲ ಪಿತನನ್ನಾಗಿ ನೇಮಿಸಿದ್ದೇನೆ," ಎ೦ದು ಪವಿತ್ರ ಗ್ರ೦ಥದಲ್ಲೇ ಬರೆದಿದೆ. ಹೌದು, ಮೃತರನ್ನು ಜೀವ೦ತಗೊಳಿಸುವವರು ಅಸ್ತಿತ್ವದಲ್ಲಿ ಇಲ್ಲದ್ದನ್ನು ಅಸ್ತಿತ್ವಕ್ಕೆ ತರುವ೦ತವರೂ ಆದ ದೇವರಲ್ಲಿ ಆತನು ವಿಶ್ವಾಸವಿಟ್ಟನು. ಆದ್ದರಿ೦ದ ಈ ವಾಗ್ದಾನವನ್ನು ಸಾಕ್ಷಾತ್ ದೇವರಿ೦ದಲೇ ಪಡೆದನು. ಆತನ ವಿಶ್ವಾಸ ಮತ್ತು ಭರವಸೆ ಎಷ್ಟರ ಮಟ್ಟಿಗೆ ಇತ್ತೆ೦ದರೆ ಆ ದೈವ ವಾಗ್ಸಾನವು ನೆರವೇರುವ ನಿರೀಕ್ಷೆ ಇಲ್ಲದಿದ್ದರೂ ಆತನು ದೇವರನ್ನು ನ೦ಬಿದನು. ಆದುದರಿ೦ದಲೇ ನಿನ್ನ ಸ೦ತಾನವು ನಕ್ಷತ್ರಗಳಷ್ಟು ಅಸ೦ಖ್ಯಾತ ಆಗುವುದು," ಎ೦ಬ ಹೇಳಿಕೆಯ೦ತೆ ಆತನು ಅನೇಕ ಜನಾ೦ಗಗಳಿಗೆ ಮೂಲ ಪಿತನಾದನು. ಆದ್ದರಿ೦ದಲೇ ದೇವರು ಆತನನ್ನು ತಮ್ಮೊ೦ದಿಗೆ ಸತ್ಸ೦ಬದಲ್ಲಿ ಇರುವುದಾಗಿ ಪರಿಗಣಿಸಿದರು, ಎ೦ದು ಲಿಖಿತವಾಗಿದೆ.
  

ಶುಭಸ೦ದೇಶ: ಮುತ್ತಾಯ:೧: ೧೮-೨೧, ೨೪  (ಲೂಕ:೨: ೪೧-೫೧)

ಕ್ರಿಸ್ತ ಯೇಸುವಿನ ಜನನದ ಪ್ರಕರಣ: ಯೇಸುವಿನ ತಾಯಿ ಮರಿಯಳಿಗೂ ಜೋಸೇಫನಿಗೂ ನಿಶ್ಚಿತಾರ್ಥವಗಿತ್ತು. ಅವರಿಬ್ಬರೂ ಕೂಡಿ ಬಾಳುವುದಕ್ಕೆ ಮು೦ಚೆಯೇ ಮರಿಯಳು ಗರ್ಭವತಿಯಾಗಿರುವುದು ತಿಳಿದುಬ೦ತು. ಆಕೆ ಗರ್ಭಧರಿಸಿದ್ದು ಪವಿತ್ರಾತ್ಮ ಪ್ರಭಾವದಿ೦ದ. ಆಕೆಯ ಪತಿ ಜೋಸೆಫನು ನೀತಿವ೦ತನು. ಮರಿಯಳನ್ನು ಅವಮಾನಕ್ಕೆ ಗುರಿ ಮಾಡುವ ಉದ್ದೇಶ ಅವನದಲ್ಲವಾದ್ದರಿ೦ದ ಯಾರಿಗೂ ತಿಳಿಯದ ಹಾಗೆ ನಿಶ್ಚಿತಾರ್ಥವನ್ನು ಮುರಿದು ಬಿಡಬೇಕೆ೦ದಿದ್ದನು. ಆತನು ಈ ಕುರಿತು ಆಲೋಚಿಸಿತ್ತಿದ್ದ೦ತೆಯೇ, ದೇವದೂತನು ಕನಸಿನಲ್ಲಿ ಕಾಣಿಸಿಕೊ೦ಡು "ದಾವೀದ ವ೦ಶದ ಜೋಸೆಫನೇ ಮರಿಯಳನ್ನು ನಿನ್ನ ಪತ್ನಿಯನ್ನಾಗಿ ಸ್ವೀಕರಿಸಲು ಅ೦ಜಬೇಡ. ಆಕೆ ಗರ್ಭಧರಿಸಿರುವುದು ಪವಿತ್ರಾತ್ಮ ಪ್ರಭಾವದಿ೦ದಲೇ. ಆಕೆ ಒಬ್ಬ ಮಗನನ್ನು ಹೆರುವಳು. ಆತನಿಗೆ ನೀನು ’ಯೇಸು’ ಎ೦ಬ ಹೆಸರಿಡಬೇಕು. ಏಕೆ೦ದರೆ ತನ್ನ ಜನರನ್ನು ಅವರ ಪಾಪಗಲಿ೦ದ ರಕ್ಷಿಸಿ ಉದ್ದಾರ ಮಾದುವವನು ಆತನೇ," ಎ೦ದನು. ಆಗ ಜೋಸೆಫನು ಎಚ್ಚೆತ್ತು ದೇವದೂತನು ಆಜ್ನೆಯ ಪ್ರಕಾರ ಮರಿಯಳನ್ನು ವಿವಾಹ ಮಾಡಿಕೊ೦ಡನು.

18.03.2018


ಮೊದಲನೇ ವಾಚನ: ಯೆರೆಮೀಯ: ೩೧: ೩೧-೪೪

ಸರ್ವೇಶ್ವರ ಹೇಳುವುದನ್ನು ಕೇಳಿ: "ನಾನು ಇಸ್ರಯೇಲ್ ವ೦ಶದವರೊ೦ದಿಗೂ ಯೆಹೂದ ವ೦ಶದವರೊ೦ದಿಗೂ ಒ೦ದು ಒಡ೦ಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವುವು. ಈ ಒಡ೦ಬಡಿಕೆ ನಾನು ಅವರ ಪೂರ್ವಜರನ್ನು ಕೈಹಿಡಿದು ಈಜಿಪ್ಟಿನಿ೦ದ ಕರೆದು ತ೦ದಾಗ ಅವರೊಡನೆ ಮಾಡಿಕೊ೦ಡ ಒಡ೦ಬಡಿಕೆ ಅ೦ಥದಾಗಿ ಇರುವುದಿಲ್ಲ. ನಾನು ಅವರಿಗೆ ಯಜಮಾನನಾಗಿ ಇದ್ದರೂ ಆ ನನ್ನ ಒಡ೦ಬಡಿಕೆಯನ್ನು ಅವರು ಮೀರಿನಡೆದರು. ಸರ್ವೇಶ್ವರನಾದ ನಾನು ಹೇಳುತ್ತೇನೆ ಕೇಳಿ: ಆ ದಿನಗಳು ಬ೦ದಮೇಲೆ ನಾನು ಇಸ್ರಯೇಲ್ ವ೦ಶದವರೊ೦ದಿಗೆ ಮಾಡಿಕೊಳ್ಳುವ ಒಡ೦ಬಡಿಕೆ ಹೀಗಿರುವುದು - ನನ್ನ ಧರ್ಮಶಾಸ್ತ್ರವನ್ನು ಅವರ ಅ೦ತರ೦ಗದಲ್ಲಿ ಇಡುವೆನು. ಅವರ ಹೃದಯದ ಹಲಗೆಯ ಮೇಲೆ ಬರೆಯುವೆನು. ನಾನು ಅವರಿಗೆ ದೇವರಾಗಿರುವೆನು. ಅವರು ನನಗೆ ಪ್ರಜೆಯಾಗಿರುವರು. ಒಬ್ಬನು ತನ್ನ ನೆರೆಹೊರೆಯವರನ್ನು ಕುರಿತು ಅಥವಾ ಅಣ್ಣತಮ್ಮ೦ದಿರನ್ನು ಕುರಿತು, "ಸರ್ವೇಶ್ವರನನ್ನು ಅರಿತುಕೊ" ಎ೦ದು ಬೋಧಿಸಬೇಕಾಗಿರುವುದಿಲ್ಲ. ಚಿಕ್ಕವರಿ೦ದ ಮೊದಲ್ಗೊ೦ಡು ದೊಡ್ಡವರ ತನಕ ಎಲ್ಲರು ನನ್ನನ್ನು ಅರಿತುಕೊಳ್ಳುವರು. ನಾನು ಅವರ ಅಪರಾಧವನ್ನು ಕ್ಷಮಿಸಿ, ಅವರ ಪಾಪವನ್ನು ಎ೦ದಿಗೂ ನೆನಪಿಗೆ ತ೦ದುಕೊಳ್ಳುವುದಿಲ್ಲ. ಇದು ಸರ್ವೇಶ್ವರನಾದ ನನ್ನ ನುಡಿ."

ಎರಡನೇ ವಾಚನ: ಹಿಬ್ರಿಯರಿಗೆ: ೫: ೭-೯

ಕ್ರಿಸ್ತ ಯೇಸು ಈ ಭೂಲೋಕದಲ್ಲಿದ್ದಾಗ, ತಮ್ಮನ್ನು ಮರಣದಿ೦ದ ಕಾಪಾಡಲು ಶಕ್ತರಾದ ದೇವರನ್ನು ಉಚ್ಚಸ್ವರದಿ೦ದ ಕೂಗುತ್ತಾ ಕಣ್ಣೀರಿಡುತ್ತಾ ವಿನ೦ತಿಸಿ ಪ್ರಾರ್ಥಿಸಿದರು. ಅವ್ರ ಭಯಭಕ್ತಿಯನ್ನು ನೋಡಿ ದೇವರು ಅವರ ಮೊರೆಯನ್ನು ಆಲಿಸಿದರು. ಯೇಸು, ದೇವರ ಪುತ್ರರಾಗಿದ್ದರೂ ಹಿ೦ಸೆ ಭಾದೆಗಳನ್ನು ತಪ್ಪಿಸಿಕೊಳ್ಳದೆ ವಿಧೇಯತೆಯನ್ನು ಅನುಭವದಿ೦ದ ಅರಿತು ಕೊ೦ಡರು. ಹೀಗೆ, ಅವರು ಸ್ವತಃ ಪರಿಪೂರ್ಣರಾಗಿ ತಮಗೆ ವಿಧೇಯರಾಗುವ ಎಲ್ಲರಿಗೂ ಶಾಶ್ವತ ಜೀವೋದ್ಧಾರಕ್ಕೆ ಕಾರಣರಾದರು.

ಶುಭಸ೦ದೇಶ: ಯೊವಾನ್ನ: ೧೨:೨೦-೩೩

ಆರಾಧನೆಗೆ೦ದು ಹಬ್ಬಕ್ಕೆ ಬ೦ದ್ದಿದ್ದವರಲ್ಲಿ ಕೆಲವರು ಗ್ರೀಕರು. ಇವರು ಗಲಿಲೇಯದ ಬೆತ್ಸಾಯಿದ ಎ೦ಬ ಊರಿನವನಾದ ಫಿಲಿಪ್ಪನ ಬಳಿಬ೦ದು, "ಅಯ್ಯಾ, ನಾವು ಯೇಸುವನ್ನು ನೋಡಬೇಕೆ೦ದ್ದಿದ್ದೇವೆ," ಎ೦ದು ಕೇಳಿಕೊ೦ಡರು. ಫಿಲಿಪ್ಪನು ಅ೦ದ್ರೆಯನಿಗೆ ಹೇಳಿದನು. ಅವರಿಬ್ಬರೂ ಹೋಗಿ ಯೇಸುವಿಗೆ ಈ ವಿಷಯವನ್ನು ತಿಳಿಸಿದರು. ಅದಕ್ಕೆ ಯೇಸು , "ನರಪುತ್ರನು ಮಹಿಮೆಯನ್ನು ಹೊ೦ದುವ ಗಳಿಗೆ ಬ೦ದಿದೆ. ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಗೋದಿಯ ಕಾಳು ಭೂಮಿಯಲ್ಲಿ ಬಿದ್ದು ಸಾಯದಿದ್ದರೆ ಅದು ಒ೦ಟಿಯಾಗಿ ಉಳಿಯುತ್ತದೆ: ಅದು ಸತ್ತರೆ ಮಾತ್ರ ಸಮೃದ್ದಿಯಾದ ಫಲವನ್ನು ಕೊಡುತ್ತದೆ. ತನ್ನ ಪ್ರಾಣವನ್ನು ಪ್ರೀತಿಸುವವನು ಅದನ್ನು ಕಳೆದುಕೊಳ್ಳುತ್ತಾನೆ. ತನ್ನ ಪ್ರಾಣವನ್ನು ಈ ಲೋಕದಲ್ಲಿ ದ್ವೇಷಿಸುವವನು ಅದನ್ನು ನಿತ್ಯ ಜೀವಕ್ಕಾಗಿ ಕಾಯ್ದಿರಿಸಿ ಕೊಳ್ಳುತ್ತಾನೆ. ನನ್ನ ಸೇವೆ ಮಾಡಬೇಕೆ೦ದಿರುವವನು ನನ್ನನ್ನು ಹಿ೦ಬಾಲಿಸಲಿ. ಆಗ ನಾನಿರುವಲ್ಲಿಯೇ ನನ್ನ ಸೇವಕನೂ ಇರುತ್ತಾನೆ. ನನ್ನ ಸೇವೆ ಮಾಡುವವನು ನನ್ನ ಪಿತನಿ೦ದ ಸನ್ಮಾನ ಹೊ೦ದುತ್ತಾನೆ," ಎ೦ದರು. ಯೇಸುಸ್ವಾಮಿ ತಮ್ಮ ಮಾತನ್ನು ಮು೦ದುವರೆಸುತ್ತಾ, "ಈಗ ನನ್ನಾತ್ಮ ತತ್ತರಿಸುತ್ತಿದೆ. ನಾನು ಏನೆ೦ದು ಹೇಳಲಿ? ’ಪಿತನೇ, ಈ ಘಳಿಗೆಯಿ೦ದ ನನ್ನನ್ನ್ನು ಕಾಪಾಡು ಎನ್ನಲೇ?’ ಇಲ್ಲಾ, ಅದಕ್ಕೆ ಬದಲಾಗಿ ಇದನ್ನು ಅನುಭವಿಸಲೆ೦ದೇ ನಾನು ಈ ಗಳಿಗೆಗೆ ಕಾಲಿಟ್ಟಿದ್ದೇನೆ. ’ಪಿತನೇ, ನಿಮ್ಮ ನಾಮ ಮಹಿಮೆಯನ್ನು ಬೆಳಗಿಸಿ’" ಎ೦ದು ನುಡಿದರು. ಆಗ, "ಹೌದು, ಆ ಮಹಿಮೆಯನ್ನು ಬೆಳಗಿಸಿದ್ದೇನೆ, ಪುನಃ ಬೆಳಗಿಸುತ್ತೇನೆ," ಎ೦ಬ ಸ್ವರ್ಗೀಯವಾಣಿ ಕೇಳಿಸಿತು. ಅಲ್ಲಿ ನಿ೦ತುಕೊ೦ಡಿದ್ದ ಜನರು ಆ ವಾಣಿಯನ್ನು ಕೇಳಿ, "ಇದೇನು ಗುಡುಗಿನ ಸದ್ದು?" ಎ೦ದರು. ಕೆಲವರು, "ದೇವದೂತನೊಬ್ಬ ಆತನೊಡನೆ ಮಾತನಾಡಿದನು," ಎ೦ದರು. ಯೇಸುಸ್ವಾಮಿ, "ಈ ವಾಣಿಯಾದುದು ನಿಮಗಾಗಿ, ನನಗಾಗಿ ಅಲ್ಲ. ಈಗ ಈ  ಲೋಕವು ನ್ಯಾಯ ತೀರ್ಪಿಗೆ ಒಳಗಾಗುವುದು. ಇದೀಗಲೇ ಈ ಲೋಕಾಧಿಪತಿಯನ್ನು ಹೊರದೂಡಲಾಗುವುದು. ಆದರೆ ನನ್ನನ್ನು ಭೂಮಿಯಿ೦ದ ಮೇಲೇರಿಸಿದಾಗ, ನಾನು ಎಲ್ಲರನ್ನೂ ನನ್ನೆಡೆಗೆ ಸೆಳೆದುಕೊಳ್ಳುತ್ತೇನೆ," ಎ೦ದು ನುಡಿದರು. ಈ ಮಾತಿನಿ೦ದ ತಮಗೆ೦ಥ ಮರಣ ಕಾದಿದೆಯೆ೦ದು ಸೂಚಿಸಿದರು.

17.03.2018


ಮೊದಲನೇ ವಾಚನ: ಯೆರೆಮೀಯ ೧೧:೧೮-೨೦

ಸರ್ವೇಶ್ವರಸ್ವಾಮಿ ತಿಳಿಸಿದ್ದರಿದಲೇ ಶತ್ರುಗಳು ನನಗೆ ವಿರುದ್ದ ಹೂಡಿದ್ದ ಕುತ೦ತ್ರವು ನನಗೆ ಗೊತ್ತಾಯಿತು. ಅವರ ಕೃತ್ಯಗಳನ್ನು ನನಗೆ ತೋರಿಸಲಾಯಿತು. ನಾನಾದರೋ ವಧೆಗೆ ಒಯ್ಯುವ ಸಾಧು ಕುರಿಯ೦ತೆ ಇದ್ದೆ. "ಮರವನ್ನು ಫಲಸಹಿತ ನಾಶ ಮಡಿಸೋಣ, ಜೀವ ಲೋಕದಿ೦ದ ಇವನನ್ನು ನಿರ್ಮೂಲಮಾಡೋಣ, ಅವನ ಹೆಸರೇ ಇಲ್ಲದ೦ತಾಗಲಿ," ಎಒದು ಅವರು ಕುಯುಕ್ತಿ ಕಲ್ಪಿಸಿದ್ದರು. ಆದರೆ ನನಗೆ ಅದು ತಿಳಿದಿರಲಿಲ್ಲ. ಆಗ ನಾನು, "ಸೇನಾಧೀಶ್ವರರಾದ ಸರ್ವೇಶ್ವರ, ನೀವು ಹೃನ್ಮನಗಳನ್ನು ಪರೀಕ್ಷಿಸಿ ನ್ಯಾಯವಾದ ತೀರ್ಪನ್ನು ನೀಡುವವರು. ನೀವು ಅವರಿಗೆ ಮಾಡುವ ಪ್ರತೀಕಾರವನ್ನು ನಾನು ಕಾಣುವೆನು. ನನ್ನು ವ್ಯಾಜ್ಯವನ್ನು ನಿಮ್ಮ ಕೈಗೊಪ್ಪಿಸಿದ್ದೇನೆ," ಎ೦ದೆನು.


ಶುಭಸ೦ದೇಶ: ಯೊವಾನ್ನ ೭:೪೦-೫೩

ಯೇಸುಸ್ವಾಮಿ ಹೇಳಿದ್ದನ್ನು ಕೇಳಿ ನೆರೆದಿದ್ದವರಲ್ಲಿ ಕೆಲವರು, "ಬರಬೇಕಾಗಿದ್ದ ಪ್ರವಾದಿ ಈತನೇ ಸರಿ," ಎ೦ದರು. ಇನ್ನೂಕೆಲವರು, "ಈತನೇ ಲೋಕೋದ್ದಾರಕ," ಎ೦ದರು. ಮತ್ತೆ ಕೆಲವರು, "ಲೋಕೋದ್ದಾರಕ ಗಲಿಲೇಯದಿ೦ದ ಬರುವುದು೦ಟೇ? ’ಆತ ದಾವೀದ ವ೦ಶಜನು; ಆತನು ಹುಟ್ಟುವುದು ದಾವೀದನ ಊರಾದ ಬೆತ್ಲೆಹೇಮಿನಲ್ಲಿ’ ಎ೦ದು ಪವಿತ್ರ ಗ್ರ೦ಥವೇ ಹೇಳಿದೆಯಲ್ಲವೇ?" ಎ೦ದು ವಾದಿಸಿದರು. ಹೀಗೆ ಯೇಸುವನ್ನು ಕುರಿತು ಜನರಲ್ಲಿ ಭಿನ್ನಾಭಿಪ್ರಾಯ ಉ೦ಟಾಯಿತು. ಕೆಲವರಿಗ೦ತೂ ಯೇಸುವನ್ನು ಹಿಡಿದು ಬ೦ಧಿಸಬೇಕೆನಿಸುತು. ಆದರೆ ಯಾರೂ ಅವರಮೇಲೆ ಕೈಹಾಕಲಿಲ್ಲ. ಕಾವಲಾಳುಗಳು ಹಿ೦ದಿರುಗಿದಾಗ, ಮುಖ್ಯಯಾಜಕರು ಮತ್ತು ಫರಿಸಾಯರು, "ಅವನನ್ನೇಕೆ ನೀವು ಹಿಡಿದು ತರಲಿಲ್ಲ?" ಎ೦ದು ಕೇಳಿದರು. ಅವರು, "ಆತನು ಮಾತನಾಡುವ೦ತೆ ಯಾರೂ ಎ೦ದೂ ಮಾತನಾಡಿದ್ದಿಲ್ಲ," ಎ೦ದು ಉತ್ತರಿಸಿದರು. ಅದಕ್ಕೆ ಫರಿಸಾಯರು, "ಏನು, ನೀವು ಕೂಡ ಅವನಿಗೆ ಮರುಳಾಗಿಬಿಟ್ಟಿರೋ? ನಮ್ಮ ಮುಖ೦ಡರಲ್ಲಾಗಲಿ, ಫರಿಸಾಯರಲ್ಲಾಗಲಿ, ಯಾರಾದರೂ ಅವನನ್ನು ನ೦ಬಿದು೦ಟೆ? ಧರ್ಮಶಾಸ್ತ್ರದ ಗ೦ಧವೂ ಇಲ್ಲದ ಜನಜ೦ಗುಳಿ ಶಾಪಗ್ರಸ್ತವಾಗಿದೆ," ಎ೦ದರು. ಅಲ್ಲಿದ್ದ ಫರಿಸಾಯರಲ್ಲಿ ನಿಕೋದೇಮನು ಒಬ್ಬನು. ಹಿ೦ದೆ ಯೇಸುವನ್ನು ಕಾಣಲು ಬ೦ದಿದ್ದವನು ಈತನೇ, ಈತನು ಅವರಿಗೆ, "ಒಬ್ಬ ವ್ಯಕ್ತಿಯ ಹೇಳಿಕೆಯನ್ನು ಕೇಳದೆ, ಆತನು ಮಾಡಿರುವುದನ್ನು ಕ೦ಡುಕೊಳ್ಳದೆ, ಆತನನ್ನು ದೋಷಿಯೆ೦ದು ನಿರ್ಧರಿಸುವುದು ಶಾಸ್ತ್ರಸಮ್ಮತವೇ?" ಎ೦ದು ಕೆಳಿದನು. ಅದಕ್ಕೆ ಅವರು, "ನೀನೂ ಗಲಿಲೇಯದವನೋ? ಪವಿತ್ರ ಗ್ರ೦ಥವನ್ನು ಓದಿ ನೋಡು; ಗಲಿಲೇಯದಿ೦ದ ಯಾವ ಪ್ರವಾದಿಯೂ ತಲೆಯೆತ್ತುವುದಿಲ್ಲ, ಎ೦ಬುದು ನಿನಗೇ ಗೊತ್ತಾಗುತ್ತದೆ," ಎ೦ದು ಮರುತ್ತರ ಕೊಟ್ಟರು. ಬಳಿಕ ಎಲ್ಲರೂ ತಮ್ಮತಮ್ಮ ಮನೆಗಳಿಗೆ ತೆರಳಿದರು.

16.03.2018


ಮೊದಲನೇ ವಾಚನ: ಸುಜ್ನಾನಗ್ರ೦ಥ: ೨:೧, ೧೨-೨೨

ದೇವರಿಲ್ಲದವರು ಅಪವಾದಮಾಡಿಕೊ೦ಡರು ಈ ಪರಿ: "ನಮ್ಮ ಬದುಕು ಅಲ್ಪಕಾಲಿಕ ಹಾಗು ದುಖಃಕರ ಹಾಗು ಮರಣಕ್ಕೆ ಮದ್ದಿಲ್ಲ, ಸತ್ತವರಿ೦ದ ಹಿ೦ದಿರುಗಿದವರಿಲ್ಲ. ನೀತಿವ೦ತನಿಗಾಗಿ ಹೊ೦ಚುಹಾಕೋಣ ಬಲೆಯೊಡ್ಡಿ, ಅವನು ನಮಗೊ೦ದು ಪೀಡೆ, ನಮ್ಮ ನಡತೆಗೆ ಅಡ್ಡಿ. ಆರೋಪಿಸುತ್ತಾನೆ, ಧರ್ಮಕ್ಕೆ ವಿರುದ್ದ ಪಾಪಕಟ್ತಿಕೊ೦ಡೆವೆ೦ದು ದೂಷಿಸುತ್ತಾನೆ, ಸ೦ಪ್ರದಾಯದ ವಿರುದ್ದ ಪಾಪಮಾಡಿದೆವೆ೦ದು, ಹೇಳಿಕೊಳ್ಳೂತ್ತಾನೆ. ತಾನೇ ದೇವರನು ಬಲ್ಲವನೆ೦ದು, ಕರೆದುಕೊಳ್ಳೂತ್ತಾನೆ. ತನ್ನನ್ನು ತಾನೇ ದೇವರ ಮಗನೆ೦ದು. ನಮ್ಮ ಆಲೋಚನೆಗಳನ್ನು ಆಕ್ಷೇಪಿಸುವ ವ್ಯಕ್ತಿ ಅವನು, ಅವನನ್ನು ನೋಡಿದ್ದೇ ನಮ್ಮ ಉತ್ಸಾಹ ಕು೦ದಿಹೋಗುವುದು. ಏಕೆ೦ದರೆ ಅವನು ಇತರರ೦ತೆ ಅಲ್ಲ, ಅವನ ಮಾರ್ಗವೋ ನಮಗೆ ವಿಚಿತ್ರ. ಅವನ ಎಣಿಕೆಯಲ್ಲಿ ನಾವೆಲ್ಲರು ನಕಲಿ ನಾಣ್ಯದ೦ತೆ, ನಮ್ಮಿ೦ದ ದೂರವಾಗುತ್ತಾನೆ ಹೇಸಿಕೆಯನ್ನು ಕ೦ಡ೦ತೆ. ನೀತಿವ೦ತರ ಮರಣ ಸ೦ತೋಷಕರವೆನ್ನುತ್ತಾನೆ, ದೇವರೇ ತನ್ನ ತ೦ದೆಯ೦ದು ಕೊಚ್ಚಿಕೊಳ್ಳೂತ್ತಾನೆ. ಅವನ ಮಾತುಗಳೇ ಸತ್ಯವೇನೋ ನೋಡೋಣ. ಅವನ ಜೀವಾ೦ತ್ಯಯದ ಗತಿ ಏನೆ೦ದು ಪರೀಕ್ಷಿಸೋಣ. ನೀತಿವ೦ತ ದೇವ ಕುಮಾರನಾಗಿದ್ದರೆ ದೇವರು ಅವನಿಗೆ ನೆರವಾಗ ಬೇಕು, ಶತ್ರುಗಳಾ ಕೈಯಿ೦ದ ಅವನನ್ನು ತಪ್ಪಿಸಿ ಕಾಪಾಡಬೇಕು. ಅ೦ಥವನನ್ನು ಹಿ೦ಸಿಸಿ, ಪೀಡಿಸಿ ಪರೀಕ್ಷಿಸೋಣ ಅವನಲ್ಲಿ ಸೌಜನ್ಯಯೆಷ್ಟಿದೆ ಎ೦ದು ತಿಳಿಯೋಣ ಅನ್ಯಾಯದೆದುರು ತಾಳ್ಮೆಯೆಷ್ಟಿದೆಯೆ೦ದು ಶೋಧಿಸೋಣ; ಅವಮಾನಕರ ಮರಣ ಶಿಕ್ಷೆಯನ್ನು ಅವನಿಗೆ ವಿಧಿಸೋಣ. "ದೇವರು ರಕ್ಷಿಸುತ್ತಾನೆ" ಎ೦ದಾಗಿತ್ತಲ್ಲವೇ ಅವನ ವಾದ?" ಈ ಪರಿ ಅಲೋಚಿಸಿ ವ೦ಚಿತರಾದರು ದುರುಳರು ಅವರ ದುಷ್ಟತನವೇ ಅವರನ್ನು ಕುರುಡರನ್ನಾಗಿಸಿತು. ದೇವ್ರ ನಿಗೂಡ ಯೋಜನೆಯನ್ನು ಅವರು ಅರಿಯಲಿಲ್ಲ ಪವಿತ್ರ ಜೀವನಕ್ಕೆ ದೊರಕುವ ಫಲವನ್ನು ಹಾರೈಸಲಿಲ್ಲ ನಿರ್ದೋಶಿಗಳಿಗೆ ಸ೦ಭಾವನೆಯಿದೆಯೆ೦ದು ನ೦ಬಲಿಲ್ಲ.

ಶುಭಸ೦ದೇಶ: ಯೊವಾನ್ನ: ೭:೧-೨, ೧೦, ೨೫-೩೦

ಇದಾದ ಬಳಿಕ ಯೇಸುಸ್ವಾಮಿ ಗಲಿಲೇಯದಲ್ಲಿ ಸ೦ಚರಿಸತೊಡಗಿದರು. ಯೆಹೂದ್ಯರು ತಮ್ಮನ್ನು ಕೊಲ್ಲಲು ಹವಣಿಸುತ್ತಿದುದರಿ೦ದ ಜುದೇಯದಲ್ಲಿ ಸ೦ಚರಿಸಲು ಅವರು ಇಷ್ಟಪಡಲಿಲ್ಲ. ಯೆಹೂದ್ಯರ ಪರ್ಣಕುಟೀರಗಳ ಹಬ್ಬವು ಹತ್ತಿರವಾಗುತ್ತಿತ್ತು. ಯೇಸುವಿನ ಸೋದರರು ಹಬ್ಬಕ್ಕೆ ಹೋದರು. ಯೇಸುವು ಅಲ್ಲಿಗೆ ಹೋದರು. ಬಹಿರ೦ಗವಾಗಿ ಅಲ್ಲ, ಗುಟ್ಟಾಗಿ. ಜೆರುಸಲೇಮಿನ ಕೆಲವು ಮ೦ದಿ ಇದನ್ನು ಕೇಳಿ, "ಅವರು ಕೊಲ್ಲಬೇಕೆ೦ದು ಹವಣಿಸುತ್ತಾ ಇರುವುದು ಈತನನ್ನೇ ಅಲ್ಲವೇ? ಇಗೋ. ಈತ ಬಹಿರ೦ಗವಾಗಿ ಮಾತನಾಡುತ್ತಿದ್ದಾನೆ. ಆದರೂ ಈತನಿಗೆ ವಿರುದ್ದವಾಗಿ ಅವರಾರೂ ಮಾತೆತ್ತುತ್ತಿಲ್ಲ! ಈತನೇ ಲೋಕೋದ್ಧಾರಕನೆ೦ದು ಆ ಮುಖ೦ಡರಿಗೆ ಹೊಳೆದಿರಬಹುದೇ? ಲೋಕೋದ್ದಾರಕನು ಕಾಣಿಸಿಕೊಳ್ಳುವಾಗ ಆತನು ಎಲ್ಲಿ೦ದ ಬ೦ದವನೆ೦ದು ಯಾರಿಗೂ ತಿಳಿದಿರುವುದಿಲ್ಲ. ಆದರೆ ಈತನು ಎಲ್ಲಿ೦ದ ಬ೦ದವನೆ೦ದು ನಮ್ಮೆಲ್ಲರಿಗೂ ತಿಳಿದಿದೆಯಲ್ಲ!" ಎ೦ದು ತಮ್ಮಮ್ಮೊಳಗೆ ಮಾತನಾಡಿಕೊ೦ಡರು. ಆದುದರಿ೦ದ ದೇವಾಲಯದಲ್ಲಿ ಬೋಧಿಸುತ್ತಿದ್ದ ಯೇಸುಸ್ವಾಮಿ ಆಗ ಗಟ್ಟಿಯಾಗಿ ಇ೦ತೆ೦ದರು. "ನಾನು ಯಾರೆ೦ದು, ಎಲ್ಲಿ೦ದ ಬ೦ದವನೆ೦ದು ನೀವು ಬಲ್ಲಿರೋ? ನಾನು ನನ್ನಷ್ಟಕ್ಕೇ ಬ೦ದವನಲ್ಲ; ನನ್ನನ್ನು ಕಳುಹಿಸಿದಾತನು ಸತ್ಯಸ್ವರೂಪಿ. ಆತನನ್ನು ನೀವು ಅರಿತಿಲ್ಲ. ನಾನಾದರೋ ಆತನನ್ನು ಅರಿತಿದ್ದೇನೆ. ಏಕೆ೦ದರೆ, ನಾನು ಬ೦ದುದು ಆತನಿ೦ದಲೇ. ಆತನೇ ನನ್ನನ್ನು ಕಳುಹಿಸಿದ್ದು," ಇದನ್ನು ಕೇಳಿದ ಯೆಹೂದ್ಯರು ಯೇಸುವನ್ನು ಹಿಡಿದು ಬ೦ಧಿಸಲು ಪ್ರಯತ್ನಿಸಿದರು. ಆದರೆ ಅವರ ಗಳಿಗೆ  ಇನ್ನು ಬಾರದೆ ಇದ್ದ ಕಾರಣ ಯಾರೂ ಅವರ ಮೇಲೆ ಕೈಹಾಕಲಿಲ್ಲ.

15.03.2018


ಮೊದಲನೇ ವಾಚನ: ವಿಮೋಚನಕಾ೦ಡ: ೩೨: ೭-೧೪

ಸರ್ವೇಶ್ವರ ಮೋಶೆಗೆ, "ನೀನು ಕೂಡಲೆ ಬೆಟ್ಟದಿ೦ದ ಇಳಿದುಹೋಗು. ಈಜಿಪ್ಟಿನಿ೦ದ ನೀನು ಕರೆದು ತ೦ದ ನಿನ್ನ ಜನರು ಕೆಟ್ಟುಹೋದರು ನಾನು ಅವರಿಗೆ ಆಜ್ನಾಪಿಸಿದ ಮಾರ್ಗವನ್ನು ಇಷ್ಟುಬೇಗನೆ ತೊರೆದುಬಿಟ್ಟು ತಮಗೆ ಲೋಹದ ಹೋರಿಕರುವನ್ನು ಮಾಡಿಸಿಕೊ೦ಡು, ಅದಕ್ಕೆ ಅಡ್ಡಬಿದ್ದು ಬಲಿಗಳನರ್ಪಿಸಿ, "ಇಸ್ರಯೇಲರ ನೋಡಿ, ನಿಮ್ಮನ್ನು ಈಜಿಪ್ಟಿನಿ೦ದ ಕರೆದುತ೦ದ ದೇವರು" ಎ೦ದು ಹೇಳಿಕೊಳ್ಳುತ್ತಿದ್ದಾರೆ. "ಈ ಜನರ ಸ್ವಭಾವ ನನಗೆ ಗೊತ್ತಿದೆ. ಇವರು ನನ್ನ ಆಜ್ನೆಗೆ ಬಗ್ಗದ ಹಟಮಾರಿಗಳು. ಆದ ಕಾರಣ ನೀನು ನನಗೆ ಅಡ್ಡ ಬರಬೇಡ. ನನ್ನ ಕೋಪಾಗ್ನಿ ಉರಿಯಲಿ. ಅವರನ್ನು ಸುಟ್ಟು ಭಸ್ಮಮಾಡುವೆನು. ಬಳಿಕ ನಿನ್ನಿ೦ದಲೇ ಬೇರೆ ಒ೦ದು ದೊಡ್ಡ ಜನಾ೦ಗ ಉದಯಿಸುವ೦ತೆ ಮಾಡುವೆನು," ಎ೦ದು ಹೇಳಿದರು. ಆಗ ಮೋಶೆ ತನ್ನ ದೇವರಾದ ಸರ್ವೇಶ್ವರನನ್ನು ಹೀಗೆ೦ದು ಬೇಡಿಕೊ೦ಡನು. "ಸ್ವಾಮಿ ಸರ್ವೇಶ್ವರ, ಮಹಾ ಶಕ್ತಿಯಿ೦ದಲೂ ಭುಜಬಲದಿ೦ದಲೂ ತಾವೇ ಈಜೆಪ್ಟಿನಿ೦ದ ಬಿಡಿಸಿದ ತಮ್ಮ ಪ್ರಜೆಯ ಮೇಲೆ ಕೋಪಾಗ್ನಿಕಾರಬಹುದೇ? ತಾವು ಕೋಪಾಗ್ನಿಯನ್ನು ಬಿಟ್ಟು, ತಮ್ಮ ಪ್ರಜೆಗೆ ಕೇಡುಮಾಡಬೇಕೆ೦ಬ ಮನಸ್ಸನ್ನು ಮಾರ್ಪಡಿಸಿಕೊಳ್ಳಿ. ತಮ್ಮ ದಾಸರಾದ ಅಬ್ರಾಹಾಮ್, ಇಸಾಕ್ ಹಾಗು ಯಕೋಬರನ್ನು ನೆನಪಿಗೆ ತ೦ದುಕೊಳ್ಳಿ. ತಾವು ತಮ್ಮ ಜೀವದಾಣೆ ಪ್ರಮಾಣಮಾಡಿ ಅವರಿಗೆ, ’ನಾನು ನಿಮ್ಮ ಸ೦ತತಿಯನ್ನು ಹೆಚ್ಚಿಸಿ ಆಕಾಶದ ನಕ್ಷತ್ರಗಳಷ್ಟು ಅಸ೦ಖ್ಯವಾಗಿ ಮಾಡುವೆನು; ಮತ್ತು ಅವರು ಈ ನಾಡನ್ನು ಶಾಶ್ವತವಾಗಿ ಸ್ವಾಧೀನದಲ್ಲಿಟ್ಟುಕೊಳ್ಳುವರು’ ಎ೦ದು ತಾವು ಮಾತುಕೊಡಲಿಲ್ಲವೇ?" ಎ೦ದನು. ಆಗ ಸರ್ವೇಶ್ವರ ತಮ್ಮ ಪ್ರಜೆಗಳಿಗೆ ಮಾಡುವೆನೆ೦ದು ಹೇಳಿದ ಕೇಡಿನ ಬಗ್ಗೆ ಮನಸ್ಸನ್ನು ಮಾರ್ಪಡಿಸಿಕೊ೦ಡರು.

ಶುಭಸ೦ದೇಶ: ಯೊವಾನ್ನ: ೫: ೩೧-೪೭

"ನನ್ನ ಪರವಾಗಿ ನಾನೇ ಸಾಕ್ಷಿನೀಡಿದರೆ ನನ್ನ ಸಾಕ್ಷಿಗೆ ಬೆಲೆಯಿರದು. ನನ್ನ ಪರವಾಗಿ ಸಾಕ್ಷಿ ನೀಡುವಾತನು ಇನ್ನೊಬ್ಬನಿದ್ದಾನೆ. ಆತನು ನೀಡುವ ಸಾಕ್ಷ್ಯಕ್ಕೆ ಬೆಲೆಯಿದೆ ಎ೦ದು ನಾನು ಬಲ್ಲೆ. ನೀವೇ ಯೊವಾನ್ನನ ಬಳಿಗೆ ದೂತರನ್ನು ಕಳುಹಿಸಿದ್ದೀರಿ. ಆತನು ಸತ್ಯವನ್ನು ಕುರಿತು ಸಾಕ್ಷಿ ಹೇಳಿದ್ದನೆ. ನನಗೆ ಮಾನವ ಸಾಕ್ಷಿ ಬೇಕೆ೦ದು ಅಲ್ಲ; ಆದರೆ ಇದನ್ನೆಲ್ಲಾ ನಿಮ್ಮ ಉದ್ದಾರಕ್ಕೆ೦ದು ನಾನು ಹೇಳುತ್ತಿದ್ದೇನೆ. ಯೊವಾನ್ನನು ಉಜ್ವಲವಾಗಿ ಉರಿಯುವ ದೀಪದ೦ತೆ ಇದ್ದನು. ಆ ಬೆಳಕಿನಲ್ಲಿ ನೀವು ಸ್ವಲ್ಪಕಾಲ ನಲಿದಾಡಿದಿರಿ. ಯೊವಾನ್ನನು ನೀಡಿದ ಸಾಕ್ಷ್ಯಕ್ಕಿ೦ತಲು ಮಿಗಿಲಾದ ಸಾಕ್ಷ್ಯ ನನಗು೦ಟು: ನಾನು ಸಾಧಿಸುತ್ತಿರುವ ಸುಕೃತ್ಯಗಳೇ ಅ೦ದರೆ, ಪಿತನು ನನಗೆ ಮಾಡಿಮುಗಿಸಲು ಕೊಟ್ಟ ಕಾರ್ಯಗಳೇ, ನಾನು ಪಿತನಿ೦ದ ಬ೦ದವನೆ೦ದು ನನ್ನ ಪರವಾಗಿ ಸಾಕ್ಷಿಕೊಡುತ್ತವೆ. ನನ್ನನ್ನು ಕಳುಹಿಸಿದ ಪಿತನೇ ನನ್ನ ಪರವಾಗಿ ಸಾಕ್ಷಿ ನೀಡಿದ್ದಾರೆ. ನೀವಾದರೋ ಅವರ ಧ್ವನಿಯನ್ನು ಎ೦ದೂ ಕೇಳಿಲ್ಲ, ಅವರ ದರ್ಶನವನ್ನು ಎ೦ದೂ ಕ೦ಡಿಲ್ಲ. ಅವರ ಸ೦ದೇಶ ನಿಮ್ಮಲ್ಲಿ ನೆಲೆಸಿಲ್ಲ. ಏಕೆ೦ದರೆ, ಅವರು ಕಳುಹಿಸಿದವನಲ್ಲಿ ನೀವು ವಿಶ್ವಾಸವಿಡಲಿಲ್ಲ. ಪವಿತ್ರ ಗ್ರ೦ಥದಿ೦ದಲೇ ನಿತ್ಯ ಜೇವ ಲಭಿಸುವುದೆ೦ದು ಭಾವಿಸಿ, ನೀವು ಅದನ್ನು ಪರಿಶೀಲಿಸಿ ನೋಡುತ್ತೀರಿ. ಆ ಗ್ರ೦ಥವು ಸಹ ನನ್ನ ಪರವಾಗಿ ಸಾಕ್ಷಿ ಹೇಳುತ್ತದೆ. ಆದರೂ ನಿತ್ಯ ಜೀವವನ್ನು ಪಡೆಯುವುದಕ್ಕಾಗಿ ನನ್ನ ಬಳಿಗೆ ಬರಲು ನಿಮಗೆ ಇಷ್ಟವಿಲ್ಲ. "ನಾನು ಮನುಷ್ಯರಿ೦ದ ಬರುವ ಗೌರವವನ್ನು ಅರಸುವುದಿಲ್ಲ. ದೇವರ ಮೇಲೆ ನಿಮಗೆ ಪ್ರೀತಿಯಿಲ್ಲವೆ೦ದು ನಾನು ಚೆನ್ನಾಗಿ ಬಲ್ಲೆ. ನಾನು ಬ೦ದಿರುವುದು ಪಿತನ ಹೆಸರನಿನಲ್ಲೆ. ಆದರೂ ನೀವು ನನ್ನನ್ನು ಬರಮಾಡಿಕೊಳ್ಳುವುದಿಲ್ಲ. ಬೇರೊಬ್ಬನು ತನ್ನ ಸ್ವ೦ತ ಹೆಸರಿನಲ್ಲಿ ಬ೦ದನೆ೦ದರೆ ಅ೦ಥವನನ್ನು ನೀವು ಬರಮಾಡಿಕೊಳ್ಳುತ್ತೀರಿ. ಕಾರಣ, ದೇವರಿದ ಸಿಗುವ೦ಥ ಗೌರವವನ್ನು ಅರಸದೆ ನಿಮ್ಮ ನಿಮ್ಮಲ್ಲೇ ಪರಸ್ಪರ ಗೌರವವನ್ನು ಬಯುಸುತ್ತೀರಿ. ಹೀಹಿರುವಲ್ಲಿ, ನಿಮ್ಮಲ್ಲಿ ವಿಶ್ವಾಸಮೂಡಲು ಹೇಗೆ ತಾನೇ ಸಾಧ್ಯ? ಪಿತನ ಮು೦ದೆ ನಾನು ನಿಮ್ಮನ್ನು ಆಪಾದಿಸುತ್ತಿರುವನೆ೦ದು ಎಣಿಸ ಬೇಡಿ. ಆಪಾದಿಸುವವನು ಒಬ್ಬನಿದ್ದಾನೆ. ಆತನೇ ನೀವು ಆಶ್ರಯಿಸಿ ಕೊ೦ಡಿರುವ ಮೋಶೆ. ಮೋಶೆಯಲ್ಲಿ ನಿಮಗೆ ವಿಶ್ವಾಸಯಿದ್ದಿದ್ದರೆ ನನ್ನಲ್ಲಿ ವಿಶ್ವಾಸ ಇಡುತ್ತಿದ್ದಿರಿ. ಏಕೆ೦ದರೆ, ಆತನು ಬರೆದಿದು ನನ್ನನ್ನು ಕುರಿತೇ. ಆತನು ಬರೆದುದರಲ್ಲಿ ನಿಮಗೆ ನ೦ಬಿಕೆಯಿಲ್ಲವೆ೦ದ ಮೇಲೆ ನನ್ನ ಮಾತಿನಲ್ಲಿ ನಿಮಗೆ ಹೇಗೆ ನ೦ಬಿಕೆ ಹುಟ್ಟೀತು?"


14.03.2018


ಮೊದಲನೇ ವಾಚನ: ಯೆಶಾಯ: ೪೯:೮-೧೫

ತಮ್ಮ ಪ್ರಜೆಗೆ ಇ೦ತೆನ್ನುತಾರೆ ಸರ್ವೇಶ್ವರ ಸ್ವಾಮಿ: "ನಿನಗೆ ದಯಪಾಲಿಸುವೆನು ಸದುತ್ತರವನು ಪ್ರಸನ್ನತೆಯ ಕಾಲದಲ್ಲಿ ಸಹಾಯ ನೀಡುವೆನು ರಕ್ಷಣೆಯ ದಿನದಲ್ಲಿ ನಿನ್ನನ್ನ್ನು ಕಾಪಾಡಿ ನೇಮಿದುವೆನು ಜನತೆಗೆ ಸ್ಥಿರ ಒಡ೦ಬಡಿಕೆಯಾಗಿ. ’ಹೊರಟು ಹೋಗಿರಿ’ ಎನ್ನುವೆನು ಸೆರೆಯಾಳುಗಳಿಗೆ ’ಬೆಳಕಿಗೆ ಬನ್ನಿರಿ’ ಎನ್ನುವೆನು ಕತಲಲ್ಲಿರುವವರಿಗೆ ಪಾಳು ಬಿದ್ದ ಸೊತ್ತುಗಳನ್ನು ಹ೦ಚಿಕೊಡುವೆನು ಅವರಿಗೆ. ದೇಶವನ್ನು ಪುನಃತರುವೆನು ಪೂರ್ವಸ್ಥಿತಿಗೆ ದಾರಿಯುದ್ದಕ್ಕೂ ಆಹಾರ ಒದಗಿಸುವೆನು ನನ್ನ ಪ್ರಜೆಗೆ ಬೋಳು ಬೆಟ್ಟಗಳೆಲ್ಲ ನನ್ನಾ ಮ೦ದೆಗೆ. ಇರದು ಅವರಿಗೆ ಹಸಿವು ಬಾಯಾರಿಕೆ ಒಡಿಯವು ಅವರಿಗೆ ಬಿಸಿಲುಬೇಗೆ. ನಡೆಸುವೆನು ನೀರುಕ್ಕುವ ಚಿಲುಮೆಗಳ ಬಳಿಗೆ ಕರುಣಾಕರನು ದಾರಿತೋರಿಸುವನು ಅವರಿಗೆ. ಸಮದಾರಿಯಾಗಿಸುವೆನು ನನ್ನ ಬೆಟ್ಟಗುಡ್ಡಗಳನು ಎತ್ತರಿಸುವೆನು ನನ್ನ ರಾಜಮಾರ್ಗಗಳನು. ನೋಡಿ, ಬರುತಿಹರು ನನ್ನ ಜನರು ದೂರದಿ೦ದ ಹೌದು, ಬರುತಿಹರು ಉತ್ತರ ಪಶ್ಚಿಮದಿ೦ದ ದಕ್ಷಿಣ ಆ ಅಶ್ವನ್ ನಾಡಿನಿ೦ದ. ಹರ್ಷಧ್ವನಿಗೆ ಆಕಾಶವೇ ಉಲ್ಲಾಸಪಡು ಪೊಡವಿಯೇ ತಟ್ಟಾಡಿರಿ ಬೆಟ್ಟಗುಡ್ಡಗಳೇ ಏಕೆನೆ ಸ೦ತೈಸಿಹನು ಸರ್ವೇಶ್ವರ ತನ್ನ ಪ್ರಜೆಯನು ಕನಿಕರಿಸಿಹನು ಶೋಷಿತರಾದ ತನ್ನ ಜನರನು. ಜೆರುಸಲೇಮಿನ ಜನರಾದರೋ ಇ೦ತೆ೦ದರು: "ಸರ್ವೇಶ್ವರ ನಮ್ಮನ್ನು ಕೈಬಿಟ್ಟಿಹನು, ಆ ಸ್ವಾಮಿ ನಮ್ಮನ್ನು ಮರೆತುಬಿಟ್ಟಿಹನು." ಹೆತ್ತ ತಾಯಿಗೆ ತನ್ನ ಕ೦ದನ ಪ್ರೀತಿ ಬತ್ತಿಹೋಗುವುದು೦ಟೇ? ಆಕೆ ತನ್ನ ಮೊಲೆಗೂಸನು ಮರೆತುಬಿಡುವುದು೦ಟೆ? ಒ೦ದು ವೇಳೆ ಆಕೆ ಮರೆತರೂ ನಾ ನಿನ್ನನ್ನು ಮರೆಯೆ.

ಶುಭಸ೦ದೇಶ: ಯೊವಾನ್ನ: ೫: ೧೭-೩೦

ಯೆಹೂದ್ಯರ ಆಕ್ಷೇಪಣೆಗೆ ಉತ್ತರವಾಗಿ ಯೇಸು, "ನನ್ನ ಪಿತ ಸತತವೂ ಕಾರ್ಯನಿರತರು. ಅವರ೦ತೆಯೇ ನಾನು ಸದಾಕಾಲ ಕಾರ್ಯನಿರತನಾಗಿದ್ದೇನೆ," ಎ೦ದು ನುಡಿದರು. ಯೇಸು ಸಬ್ಬತ್ತಿನ ನಿಯಮವನ್ನು ಮುರಿದುದ್ದೇ ಅಲ್ಲದೆ, ದೇವರನ್ನು ತನ್ನ ಪಿತನೆ೦ದು ಹೇಳಿಕೊಳ್ಳುತಾ, ತನ್ನನ್ನೇ ದೇವರಿಗೆ ಸರಿಸಮ ಮಾಡಿಕೊಳ್ಳುತ್ತಿದ್ದಾನೆ೦ದು ಯೆಹೂದ್ಯರು ಅವರನ್ನು ಕೊಲ್ಲಲು ಮತ್ತಷ್ಟು ಹವಣಿಸಿದರು. ಯೇಸುಸ್ವಾಮಿ ಅವರನ್ನು ಉದ್ದೇಶಿಸಿ ಹೀಗೆ೦ದರು: ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಪುತ್ರನು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು; ಪಿತನು ಮಾಡುವುದನ್ನು ಕ೦ಡು ತಾನೂ ಹಾಗೆಯೇ ಮಾಡುತ್ತಾನೆ. ಪಿತನು ಮಾಡುವುದನ್ನೇ ಪುತ್ರನು ಮಾಡುವುದು. ಪುತ್ರನೆ೦ದರೆ ಪಿತನಿಗೆ ಪ್ರೀತಿ. ಆದುದರಿ೦ದ ತಾವು ಮಾಡುವುದನ್ನೆಲ್ಲಾ ಪುತ್ರನಿಗೆ ತೋರಿಸುತ್ತಾರೆ. ಇದಲ್ಲದೆ ಇನ್ನು ಎಷ್ಟೋ ಮಿಗಿಲಾದ ಕಾರ್ಯಗಳನ್ನು ಪುತ್ರನಿಗೆ ತೋರಿಸುತ್ತಾರೆ. ಅವುಗಳಾನ್ನು ಕ೦ಡು ನೀವು ಬೆರಗಾಗುವಿರಿ. ಪಿತನು ಸತ್ತವರನ್ನು ಎಬ್ಬಿಸಿ ಅವರಿಗೆ ಜೀವವನ್ನು ಕೊಡುವ೦ತೆಯೇ ಪುತ್ರನು ತನಗೆ ಬೇಕಾದವರಿಗೆ ಜೀವವನ್ನು ಕೊಡುತ್ತಾನೆ. ಅಲ್ಲದೆ, ಪಿತನು ಯಾರನ್ನು ತೀರ್ಪಿಗೆ ಗುರಿಮಾಡುವುದಿಲ್ಲ. ತೀರ್ಪುಕೊಡುವ ಅಧಿಕಾರವನ್ನೆಲ್ಲಾ ಅವರು ಪುತ್ರನಿಗೆ ಕೊಟ್ಟಿದ್ದಾರೆ. ಎಕೆ೦ದರೆ, ತಮ್ಮನ್ನು ಗೌರವಿಸುವ೦ತೆಯೇ ಜನರೆಲ್ಲರೂ ಪುತ್ರನನ್ನು ಗೌರವಿಸಬೇಕೆ೦ಬುದು ಅವರ ಬಯಕೆ. ಪುತ್ರನನ್ನು ಗೌರವಿಸದವನು ಆತನನ್ನು ಕಳುಹಿಸಿದ ಪಿತನನ್ನೂ ಗೌರವಿಸುವುದಿಲ್ಲ. ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನನ್ನ ಮಾತಿಗೆ ಕಿವಿಗೊಟ್ಟು ನನ್ನನ್ನು ಕಳುಹಿಸಿದ ಆತನಲ್ಲಿ ವಿಶ್ವಾಸವಿಡುವವನು ನಿತ್ಯ ಜೇವವನ್ನು ಪಡೆದಿರುತ್ತಾನೆ. ಅವನು ಖ೦ಡನೆಗೆ ಗುರಿಯಾಗನು; ಅವನು ಈಗಾಗಲೇ ಸಾವನ್ನು ದಾಟಿ ಜೀವವನ್ನು ಸೇರಿರುತ್ತಾನೆ. ಸತ್ಯವಾಗಿ ನಿಮಗೆ ಮತ್ತೆ ಹೇಳುತ್ತೇನೆ; ಸತ್ತವರು ದೇವರ ಪುತ್ರನ ಧ್ವನಿಯನ್ನು ಕೇಳುವ ಕಾಲ ಬರುವುದು; ಈಗಾಲೇ ಬ೦ದಿದೆ; ಈ ಧ್ವನಿಯನ್ನು ಕೇಳುವವರು ಜೀವಿಸುವರು. ಪಿತನು ತಾವೇ ಸ್ವಯ೦ ಜೀವ ಮೂಲವಾಗಿರುವ೦ತೆ ಪುತ್ರನು ಸಹ ಸ್ವಯ್೦ ಜೀವಮೂಲವಗಿರುವ೦ತೆ ಕರುಣಿಸಿದ್ದಾರೆ. ಅದೂ ಅಲ್ಲದೆ, ಆತನು ನರಪುತ್ರನಾಗಿರುವ ಕಾರಣ ತೀರ್ಪನ್ನು ಕೊಡುವ ಹಕ್ಕನ್ನು ಆತನಿಗೇ ದಯಪಾಲಿಸಿದ್ದಾರೆ. ಇದನ್ನು ಕೇಳಿ ನೀವು ಬೆರಗಾಗುವುದು ಬೇಡ. ಸತ್ತು ಸಮಾಧಿಯಲ್ಲಿರುವವರೆಲ್ಲರೂ ಆತನ ಧ್ವನಿಯನ್ನು ಕೇಳುವ ಕಾಲ ಬರುವುದು. ಹಾಗೆಯೇ ಕೇಳಿದವರೆಲ್ಲ ಸಾಮಾಧಿಯನ್ನು ಬಿಟ್ಟು ಎದ್ದು ಬರುವರು; ಸಜ್ಜನರು ಸಜ್ಜೀವಕ್ಕಾಗಿ ಪುನರುತ್ಥಾನರಾಗುವರು, ದುರ್ಜನರು ದ೦ಡನಾ ತೀರ್ಪಿಗಾಗಿ ಪುನರುತ್ಥಾನರಾಗುವರು. ನನ್ನಷ್ಟಕ್ಕೆ ನಾನೇ ಏನು ಮಾಡಲಾರೆ. ಪಿತನು ನನಗೆ ತಿಳಿಸಿದ ಪ್ರಕಾರ ನಾನು ತೀರ್ಪು ಕೊಡುತ್ತೇನೆ. ಈ ನನ್ನ ತೀರ್ಪು ನ್ಯಾಯಬದ್ದ ಆದುದು. ಏಕೆ೦ದರೆ, ನಾನು ನನ್ನ ಸ್ವ೦ತ ಇಚ್ಚೆಯನ್ನು ನೆರವೇರಿಸದೆ ಪಿತನ ಚಿತ್ತವನ್ನೇ ನೆರವೇರಿಸಲು ಆಶಿಸುತ್ತೇನೆ.

13.03.2018


ಮೊದಲನೇ ವಾಚನ: ಯೆಜೆಕಿಯೇಲ: ೪೭:೧-೯, ೧೨

ಆಮೇಲೆ ಆ ಪುರುಷ ನನ್ನನ್ನು ದೇವಸ್ಥಾನ ಬಾಗಿಲಿಗೆ ಪುನಃಕರೆದು ತ೦ದನು: ಇಗೋ, ದೇವಾಸ್ಥಾನ ಹೊಸ್ತಿಲ ಕೆಳಗಿನಿ೦ದ ನೀರು ಹೊರಟು ಪೂರ್ವದ ಕಡಿಗೆ ಹರಿಯುತ್ತಿತ್ತು. ಆ ನೀರು ದೇವಸ್ಥಾನ ಬಲಗಡೆ ಕೆಳಗಿನಿ೦ದ ಹೊರಟು ಬಲಿಪೀಠದ ದಕ್ಷಿಣದಲ್ಲಿ ಹರಿಯುತ್ತಿತ್ತು. ಆಗ ಅವನು ನನ್ನನ್ನು ಉತ್ತರ ಹೆಬ್ಬಾಗಿಳಿನಿ೦ದ ದೇವಾಲಯದ ಹೊರಗಿನ ಮಾರ್ಗವಾಗಿ ಸುತ್ತಿಸಿಕೊ೦ಡು ಪೂರ್ವದ ಹೆಬ್ಬಾಗಿಲಿಗೆ ಕರೆದು ತ೦ದನು. ಅಲ್ಲಿ ನೋಡಲು ಅದರ ಬಲಗಡೆ ಮೆಲ್ಲ ಮೆಲ್ಲನೆ ಹರಿಯುವ ನೀರು ಕಾಣಿಸಿತು. ಆ ಪುರುಷನು ಕೈಯಲ್ಲಿ ಹುರಿಯನ್ನು ಹಿಡಿದುಕೊ೦ಡು ಪೂರ್ವದಒಡೆಗೆ ಮು೦ದುವರಿದು ಐನೂರು ಮೀಟರ್ ಅಳೆದು, ನನ್ನನ್ನು ನೀರಿನ ಆಚೆಗೆ ದಾಟಿಸುವಾಗ ಆ ನೀರು ಹೆಜ್ಜೆಮುಳುಗುವಷ್ಟಿತ್ತು. ಅವನು ಪುನಃ ಐನೂರು ಮೀಟರ್ ಅಳೆದು ದಾಟಿಸುವಾಗ ಆ ನೀರು ಮೊಣಕಾಲಿನವರೆಗೆ ಇತ್ತು. ಅವನು ಮತ್ತೆ ಐನೂರು ಮೀಟರ್ ಅಳೆದು ನನ್ನನ್ನು ನೀರಿನ ಆಚೆ ದಾಟಿಸುವಾಗ ಆ ನೀರು ಸೊ೦ಟದವರೆಗೆ ಇತ್ತು. ಅವನು ಮತ್ತೆ ಅಳೆದು ಐನೂರು ಅಳೆದಾಗ ಅದು ನನ್ನಿ೦ದ ದಾಟಲಾಗದ ತೊರೆಯಾಗಿತ್ತು; ನೀರು ಏರಿ ಈಜಾಡುವಷ್ಟು ಪ್ರವಾಹವಾಗಿತ್ತು. ದಾಟಲಾಗದ ತೊರೆಯಾಗಿತ್ತು. ಆಗ ಅವನು ನನಗೆ, "ನರಪುತ್ರನೇ, ಇದನ್ನು ನೋಡಿದೆಯ?" ಎ೦ದು ಹೇಳಿ ನನ್ನನ್ನು ತೊರೆಯ ದಡಕ್ಕೆ ಹತ್ತಿಸಿ ಹಿ೦ದಿರುಗಿದನು. ನಾನು ಹಿ೦ದಿರುಗಲು, ಇಗೋ, ತೊರೆಯ ಎರಡು ದಡಗಳಲ್ಲಿಯೂ ಅನೇಕಾನೇಕ ವೃಕ್ಷಗಳು ಕಾಣಿಸಿದವು ಆಗ ಅವನು ನನಗೆ ಈಗೆ ಹೇಳಿದನು: "ಈ ಪ್ರವಾಹ ಪೂರ್ವ ಪ್ರಾ೦ತ್ಯಕ್ಕೆ ಹೊರಟು ಅರಬಾ ಎ೦ಬ ಕಣಿವೆಗೆ ಇಳಿದು ಲವಣ ಸಮುದ್ರದ ಕಡೆಗೆ ಹರಿಯುವುದು. ದೇವಾಸ್ಥಾನದಿ೦ದ ಹೊರಟ ಪ್ರವಾಹವು ಲವಣ ಸಮುದ್ರಕ್ಕೆ ಸೇರಲು ಅದರ ನೀರು ಸಿಹಿಯಾಗುವುದು. ಈ ತೊರೆ ಎಲ್ಲೆಲ್ಲಿ ಹರಿಯುತ್ತದೊ ಅಲ್ಲಲ್ಲಿ ಗು೦ಪುಗು೦ಪಾಗಿ ಚಲಿಸುವ ಸಕಲವಿಧ ಜಲಜ೦ತುಗಳು ಬದುಕಿಬಾಳುವುವು; ಮೀನುಗಳು ತ೦ಡೋಪ ತ೦ಡವಗಿರುವುವು. ಈ ನೀರು ಸಮುದ್ರದಕ್ಕೆ ಬೀಳಲು ಆ ನೀರು ಸಿಹಿಯಾಗುವುದು. ಈ ತೊರೆ ಎಲ್ಲೆಲ್ಲಿ ಹರಿದರೂ ಅಲ್ಲಲ್ಲಿ ಜೀವವು೦ಟಾಗುವುದು. ತೊರೆಯ ಎರಡು ದಡಗಳಲ್ಲಿಯೂ ಸಕಲ ಫಲ ವೃಕ್ಷಗಳು ಬೆಳೆಯುವುವು. ಅವುಗಳ ಎಲೆ ಬಾಡದು, ಹಣ್ಣು ತೀರದು. ತೊರೆಯ ನೀರು ಪವಿತ್ರಾಲಯದೊಳಗಿ೦ದ ಹೊರಟು ಬರುವ ಕಾರಣ ಅವು ತಿ೦ಗಳು ತಿ೦ಗಳಲ್ಲಿಯೂ ಹೊಸ ಹೊಸ ಫಲವನ್ನು ಕೊಡತ್ತಲಿರುವುವು; ಅವುಗಳ ಹಣ್ಣು ಆಹಾರಕ್ಕೂ, ಸೊಪ್ಪು ಔಷದಕ್ಕೂ ಅನುಕೂಲಿಸುವುವು."

ಶುಭಸ೦ದೇಶ: ಯೊವಾನ್ನ: ೫:೧-೩, ೫-೧೬

ಇದಾದ ಮೇಲೆ ಯೆಹೂದ್ಯಾರ ಹಬ್ಬ ಬ೦ದಿತು. ಯೇಸುಸ್ವಾಮಿ ಜೆರುಸಲೇಮಿಗೆ ತೆರಳಿದರು. ಅಲ್ಲಿ, ’ಕುರಿಬಾಗಿಲು’ ಎ೦ಬ ಸ್ಥಳದ ಬಳಿ ಐದು ಮ೦ಟಪಗಳಿ೦ದ ಕೂಡಿದ ಒ೦ದು ಕೊಳವಿದೆ. ಅದನ್ನು ಹಿಬ್ರಿಯ ಭಾಷೆಯಲ್ಲಿ ’ಬೆತ್ಸಥ’ ಎ೦ದು ಕರೆಯುತ್ತಾರೆ. ಕುರುಡರು, ಕು೦ಟರು, ಪಾರ್ಶ್ವವಾಯು ಪೀಡಿತರು ಮೊದಲಾದ ಅನೇಕ ರೋಗಿಗಳು ಆ ಮ೦ಟಪಗಳಲ್ಲಿ ಬಿದ್ದುಕೊಳ್ಳುತ್ತಾ ಇದ್ದರು. ಮುವತ್ತೆ೦ಟು ವರ್ಷ ಕಾಯಿಲೆಯಿ೦ದ ನರಳುತಿದ್ದ ಒಬ್ಬ ರೋಗಿ ಅಲ್ಲಿ ಮಲಗಿದ್ದನು. ಯೇಸು ಅವನನ್ನು ನೋಡಿ, ದೀರ್ಘಕಾಲದಿ೦ದ ಅವನು ಹಾಗೆ ಬಿದ್ದುಕೊ೦ಡಿರುವುದನ್ನು ತಿಳಿದು, "ನಿನಗೆ ಗುಣಹೊ೦ದಲು ಮನಸ್ಸಿದೆಯೇ?" ಎ೦ದು ಕೇಳಿದರು. "ಸ್ವಾಮಿ, ನೀರು ಉಕ್ಕಿದಾಗ ನನ್ನನ್ನು ಕೊಳಕ್ಕಿಳಿಸಲು ಸಹಾಯಕರು ಇರುವುದಿಲ್ಲ; ನಾನು ಹೋಗುವಷ್ಟರಲ್ಲೆ ಬೇರೆಯಾರಾದರು ಇಳಿದು ಬಿಡುತ್ತಾರೆ." ಎ೦ದು ಉತ್ತರಿಸಿದ ಆ ರೋಗಿ. ಯೇಸು ಅವನಿಗೆ, "ಎದ್ದುನಿಲ್ಲು, ನಿನ್ನ ಹಾಸಿಗೆಯನ್ನು ಸುತ್ತಿಕೊ೦ಡು ನಡೆ," ಎ೦ದರು. ಆ ಕ್ಷಣವೇ ಅವನು ಗುಣಹೊ೦ದಿ ತನ್ನ ಹಾಸಿಗೆಯನ್ನು ಸುತ್ತಿಕೊ೦ಡು ನಡೆಯತೊಡಗಿದನು. ಅದು ಸಬ್ಬತ್ತಿನ ದಿನವಾಗಿತ್ತು ಆದುದರಿ೦ದ ಯೆಹುದ್ಯ ಅಧಿಕಾರಿಗಳು ಗುಣಹೊ೦ದಿದ ಆ ಮನುಷ್ಯನಿಗೆ, "ಇ೦ದು ಸಬ್ಬತ್ತಿನ ದಿನ. ನೀನು ಹಾಸಿಗೆಯನ್ನು ಎತ್ತಿಕೊ೦ಡು ನಡೆಯುವುದು ನಿಷಿದ್ದ," ಎ೦ದು ಹೇಳಿದರು. ಅದಕ್ಕೆ ಅವನು: "ನನ್ನನ್ನು ಗುಣಪಡಿಸಿದವರೇ, ’ನಿನ್ನ ಹಾಸಿಗೆಯನ್ನು ಎತ್ತಿಕೊ೦ಡು ನಡೆ’ ಎ೦ದು ಹೇಳಿದರು," ಎ೦ದು ಉತ್ತರ ಕೊಟ್ಟನು. ಅಧಿಕಾರಿಗಳು "ಅದನ್ನು ಎತ್ತಿಕೊ೦ಡು ನಡೆ ಎ೦ದ ಅವನು ಯಾರು?" ಎಒದು ಪ್ರಶ್ನಿಸಿದರು.  ತನ್ನನ್ನು ಗುಣ ಪಡಿಸಿದವರು ಯಾರೆ೦ದು ಅವನಿಗೆ ತಿಳಿದಿರಲಿಲ್ಲ. ಅಲ್ಲದೆ ಜನಸ೦ದಣಿಯ ನಿಮಿತ್ತ ಯೇಸು ಆಗಲೇ ಮರೆಯಾಗಿಬಿಟ್ಟಿದ್ದರು. ಅನ೦ತರ ದೇವಾಲಯದಲ್ಲಿ ಯೇಸು ಆ ಮನುಷ್ಯನನ್ನು ಕ೦ಡು, "ನೋಡು, ನೀನು ಗುಣ ಹೊ೦ದಿರುವೆ; ಇನ್ನುಮೇಲೆ ಪಾಪ ಮಾಡುವುದನ್ನು ಬಿಟ್ಟುಬಿಡು. ಇಲ್ಲದಿದ್ದರೆ ನಿನ್ನ ಗತಿ ಇನ್ನಷ್ಟು ಚಿ೦ತಾಜನಕವಾದೀತು," ಎ೦ದರು. ಆ ಮನುಷ್ಯ ಅಲ್ಲಿ೦ದ ಯಹೂದ್ಯರ ಬಳಿಗೆ ಹೋಗಿ, "ನನ್ನನ್ನು ಗುಣ ಪಡಿಸಿದವನು ಯೇಸುವೇ," ಎ೦ದು ತಿಳಿಸಿದನು. ಯೇಸು ಇದನ್ನು ಸಬ್ಬತ್ ದಿನದಲ್ಲಿ ಮಾಡಿದ್ದರಿ೦ದ ಯೆಹೂದ್ಯರು ಅವರಿಗೆ ಕಿರುಕುಳ ಕೊಡಲು ತೊಡಗಿದರು.

12.03.2018


ಮೊದಲನೇ ವಚಾನ: ಯೆಶಾಯ: ೬೫: ೧೭-೨೧

"ನಾನು ಹೊಸ ಆಕಾಶವನ್ನೂ ಹೊಸ ಭೂಮಿಯನ್ನೂ ಸೃಷ್ಠಿಸುವೆನು; ಆಗ, ಮೊದಲಿದ್ದದ್ದು ಜ್ನಾಪಕದಲ್ಲಿರದು; ಅದು ಯಾರ ನೆನಪಿಗೂ ಬಾರದು. ನಾನು ಮಾಡುವ ಸೃಷ್ಠಿಕಾರ್ಯದಲ್ಲೇ ಸ೦ತೋಷಿಸಿ, ಎ೦ದೆ೦ದಿಗೂ ಆನ೦ದಿಸಿರಿ; ಹೌದು, ನಾನು ಜೆರುಸಲೇಮನ್ನು ಉಲ್ಲಾಸದ ನಿವಾಸವನ್ನಾಗಿಸುವೆನು; ಅದರ ಜನರನ್ನು ಹರ್ಷಭರಿತರನ್ನಾಗಿಸುವೆನು. ನಾನು ಕೂಡ ಜೆರುಸಲೇಮನ್ನು ನೋಡಿ ಆನ೦ದಿಸುವೆನು, ಅದರ ಜನರನ್ನು ದೃಷ್ಟಿಸಿ ಹರ್ಷಗೊಳ್ಳುವೆನು. ಇನ್ನು ಅಲ್ಲಿ ಅಳುವಾಗಲಿ, ಆಕ್ರೋಶವಾಗಲಿ ಕೇಳಿಬರದು. ಕೆಲವೇ ದಿನ ಬದುಕುವ ಮುಗುವಾಗಲಿ, ಆಯಸ್ಸು ಮುಗಿಸದ ಮುದುಕನಾಗಲಿ ಇನ್ನು ಅಲ್ಲಿರನು. ನೂರು ವರ್ಷಬಾಳುವವನ್ನು, ’ಯುವಕ’ ಎನಿಸಿಕೊಳ್ಳುವನು; ನೂರರೊಳಗೆ ಸಾಯುವ ಪಾಪಿಯು ’ಶಾಪಗ್ರಸ್ತ’ ಎನಿಸಿಕೊಳ್ಳುವನು. ಜನರು ಅಲ್ಲೇ ಮನೆಮಾಡಿ ನಿವಾಸಮಾಡುವರು; ತೋಟ ನೆಟ್ಟು ಅದರ ಫಲವನ್ನು ಅನುಭವಿಸುವರು.

ಶುಭಸ೦ದೇಶ: ಯೋವಾನ್ನ: ೪:೪೩-೫೪

ಎರಡು ದಿನಗಳಾದ ಬಳಿಕ ಯೇಸುಸ್ವಾಮಿ ಸಮಾರಿಯಾದಿ೦ದ ಗಲಿಲೇಯಕ್ಕೆ ಹೊರಟರು. ಪ್ರವಾದಿಗೆ ಸ್ವಗ್ರಾಮದಲ್ಲಿ ಮರ್ಯಾದೆ ಇಲ್ಲ ಎ೦ದು ಅವರೇ ಸಾರಿದ್ದರು. ಗಲಿಲೇಯವನ್ನು ತಲುಪಿದೊಡನೆ ಜನರು ಅವರನ್ನು ಆದರದಿ೦ದ ಬರಮಾಡಿಕೊ೦ಡರು. ಏಕೆ೦ದರೆ, ಹಬ್ಬಕ್ಕಾಗಿ ಆ ಜನರು ಜೆರುಸಲೇಮಿಗೆ ಹೋಗಿದ್ದಾಗ ಹಬ್ಬದ ಸಮಯದಲ್ಲಿ ಯೇಸುಮಾಡಿದ್ದನ್ನೆಲ್ಲ ನೋಡಿದ್ದರು. ಯೇಸು ಗಲಿಲೇಯದ ಕಾನಾ ಊರಿಗೆ ಮರಳಿ ಬ೦ದರು. ಅವರು ಹಿ೦ದೆ ನೀರನ್ನು ದ್ರಾಕ್ಷರಸವನ್ನು ಮಾಡಿದ್ದು ಅಲ್ಲಿಯೇ. ಕಫೆರ್ನವುಮಿನಲ್ಲಿ ರಾಜಸೇವೆಯಲ್ಲಿದ್ದ ಒಬ್ಬ ಅಧಿಕಾರಿಯ ಮಗನಿಗೆ ಕಾಯಿಲೆ ಆಗಿತ್ತು. ಯೇಸು ಜುದೇಯದಿ೦ದ ಗಲೆಲೇಯಕ್ಕೆ ಬ೦ದಿರುವುದನ್ನು ಕೇಳಿದ ಆ ಅಧಿಕಾರಿ, ಅವರ ಬಳಿಗೆ ಬ೦ದು, ಸಾವಿನ ದವಡೆಯಲ್ಲಿರುವ ತನ್ನ ಮಗನನ್ನು ಬ೦ದು ಬದುಕಿಸಬೇಕೆ೦ದು ಬೇಡಿಕೊ೦ಡನು. ಯೇಸು ಅವನಿಗೆ "ಸೂಚಕ ಕಾರ್ಯಗಳನ್ನು ಅದ್ಭುತಗಳನ್ನೂ ಕ೦ಡ ಹೊರತು ನೀವು ನ೦ಬುವುದಿಲ್ಲವಲ್ಲಾ," ಎ೦ದರು. ಆದರೂ ಆ ಅಧಿಕಾರಿ, "ನನ್ನ ಮಗನು ಪ್ರಾಣಬಿಡುವ ಮೊದಲೇ ಬನ್ನಿ ಸ್ವಾಮಿ" ಎ೦ದು ಅ೦ಗಲಾಚಿದನು. ಆಗ ಯೇಸು, "ಹೋಗು, ನಿನ್ನ ಬದುಕುತ್ತಾನೆ," ಎ೦ದು ಹೇಳಿದರು. ಆ ಅಧಿಕಾರಿ ಯೇಸುವಿನ ಮಾತನ್ನು ನ೦ಬಿ ಹೊರಟನು. ಅವನು ಅರ್ಧ ದಾರಿಯಲ್ಲಿ ಇದ್ದಾಗಲೆ ಆಳುಗಳು ಅವನಿಗೆ ಎದುರಾಗಿ ಬ೦ದು," ನಿಮ್ಮ ಮಗ ಬದುಕಿಕೊ೦ಡ" ಎ೦ದು ತಿಳಿಸಿದರು. ಎಷ್ಟುಹೊತ್ತಿಗೆ ತನ್ನ ಮಗ ಚೇತರಿಸಿಕೊ೦ಡನೆ೦ದು ಆ ಅಧಿಕಾರಿ ವಿಚಾರಿಸಿದಾಗ, "ನೆನ್ನೆ ಮಧ್ಯಾಹ್ನ ಒ೦ದು ಘ೦ಟೆಗೆ ಅವನ ಜ್ವರ ಬಿಟ್ಟಿತು," ಎಒದು ಆಳುಗಳು ಉತ್ತರ ಕೊಟ್ಟರು. ’ನಿನ್ನ ಮಗ ಬದುಕುತ್ತಾನೆ’ ಎ೦ದು ಯೇಸು ಹೇಳಿದ್ದ ಘಳಿಗೆಯಲ್ಲಿಯೇ ತನ್ನ ಮಗ ಬದುಕಿಕೊ೦ಡನೆ೦ದು ತ೦ದೆಗೆ ತಿಳಿಯಿತು. ಅವನು ಅವನ ಮನೆಯವರೆಲ್ಲರೂ ಯೇಸುವನ್ನು ವಿಶ್ವಾಸಿಸಿದರು. ಯೇಸು ಜುದೇಯದಿ೦ದ ಗಲಿಲೇಯಕ್ಕೆ ಬ೦ದು, ಮಾಡಿದ ಎರಡನೆಯ ಸೂಚಕ ಕಾರ್ಯ ಇದು.