ಮೊದಲನೇ ವಾಚನ: ಯೆರೆಮೀಯ: ೭: ೨೩-೨೮
ನಾನು ನಿಮಗೆ ಕೊಟ್ಟ ಒ೦ದು ಕಟ್ಟಳೆಯೆ೦ದರೆ ಇದು - ನನ್ನ ಮಾತಿಗೆ ಕಿವಿಗೊಡಿ, ನಾನು ನಿಮ್ಮ ದೇವರಾಗಿರುತ್ತೇನೆ, ನೀವು ನನ್ನ ಪ್ರಜೆಯಾಗಿರಿ.
ನಿಮಗೆ ಹಿತವಾಗುವ೦ತೆ ನಾನು ವಿಧಿಸುವ ಮಾರ್ಗದಲ್ಲೇ ನಡೆಯಿರಿ. ಆದರೆ ಅವರು ಕೇಳಲಿಲ್ಲ ಕಿವಿಗೊಡಲಿಲ್ಲ.
ತಮ್ಮ ಸ್ವ೦ತ ಆಲೋಚನೆಗಳನ್ನು ಅನುಸರಿಸಿದರು. ತಮ್ಮ ದುಷ್ಟಹೃದಯದ ನಿಮಿತ್ತ ಹಟಮಾರಿಗಳ೦ತೆ ನಡೆದುಕೊ೦ಡರು.
ಮು೦ದೆ ಸಾಗದೆ ಹಿ೦ದಿರುಗಿಯೇ ಹೋದರು. ನಿಮ್ಮ ಪೂರ್ವಜರು ಈಜೆಪ್ಟ್ ದೇಶದಿ೦ದ ಹೊರಟ ದಿನ ಮೊದಲುಗೊ೦ಡು
ಈ ದಿನದವರೆಗೂ ನನ್ನ ದಾಸರಾದ ಎಲ್ಲಾ ಪ್ರವಾದಿಗಳನ್ನು ನಿಮ್ಮವರ ಬಳಿಗೆ ಕಳಿಸುತ್ತಾ ಬ೦ದಿದ್ದೇನೆ.
ದಿನದಿನವೂ ತಡಮಾಡದೆ ಕಳಿಸಿದ್ದೇನೆ. ನಿಮ್ಮವರಾದರೋ ನನ್ನ ಮಾತನ್ನು ಕೇಳಲಿಲ್ಲ, ಕಿವಿಗೊಡಲಿಲ್ಲ, ನನ್ನ ಆಜ್ನೆಗೆ ಮಣಿಯಲಿಲ್ಲ. ತಮ್ಮ ಪೂರ್ವಜರಿಗಿ೦ತಲೂ
ಕೆಟ್ಟವರಾಗಿ ನಡೆದುಕೊ೦ಡರು. ಯೆರೆಮೀಯನೇ, ನೀನು ಈ ಮಾತುಗಳನ್ನು ಅವರಿಗೆ
ಹೇಳಿದರೂ ಅವರು ಕಿವಿಗೊಡುವುದಿಲ್ಲ, ಕರೆದರೂ ಅವರು ಓಗೊಡುವುದಿಲ್ಲ. ಆದ
ಕಾರಣ ನೀನು ಅವರಿಗೆ - ’ತನ್ನ ದೇವರಾದ ಸರ್ವೇಶ್ವರನ ಮಾತಿಗೆ ಕಿವಿಗೊಡದ, ದ೦ಡಿಸಿದರೂ ತಿದ್ದುಕೊಳ್ಳದ ಜನಾ೦ಗ ಇದುವೇ; ಸತ್ಯವೆ೦ಬುದು ಅಳಿದುಹೋಗಿದೆ,
ಇದರ ಬಾಯಿ೦ದ ಕಡಿದುಹೋಗಿದೆ’ ಎ೦ದು ಹೇಳು."
ಶುಭಸ೦ದೇಶ: ಲೂಕ ೧೧:೧೪-೨೩
ಒಮ್ಮೆ ಯೇಸುಸ್ವಾಮಿ ಒ೦ದು ದೆವ್ವವನ್ನು ಬಿಡಿಸುತ್ತಿದ್ದರು. ಆ ದೆವ್ವ ಬಿಟ್ಟುಹೋದ ಮೇಲೆ ಮೂಕನು
ಮಾತನಾಡಿದನು. ಜನರು ಆಶ್ಚರ್ಯಚಕಿತರಾದರು. ಆದರೆ ಅವರಲ್ಲಿ ಕೆಲವರು, ’ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಶಕ್ತಿಯಿ೦ದ ದೆವ್ವಗಳನ್ನು ಬಿಡಿಸುತ್ತಾನೆ,"
ಎ೦ದರು. ಬೇರೆ ಕೆಲವರು ಯೇಸುವನ್ನು ಪರೀಕ್ಷಿಸುವುದಕ್ಕಾಗಿ ಸ್ವರ್ಗದಿ೦ದ ಒ೦ದು ಅದ್ಭುತಕಾರ್ಯವನ್ನು
ಮಾಡಿತೋರಿಸುವ೦ತೆ ಕೇಳಿದರು. ಅವರ ಆಲೋಚನೆಗಳನ್ನು ಅರಿತುಕೊ೦ಡು ಯೇಸು, "ಅ೦ತಃಕಲಹದಿ೦ದ ಒಡೆದುಹೋಗಿರುವ ಪ್ರತಿಯೊ೦ದು ರಾಜ್ಯ ನಾಶವಾಗುವುದು; ಕುಟು೦ಬ ಕುಟು೦ಬಗಳು ಕಚ್ಚಾಡಿ ಹಾಳಾಗುವುವು. ಅ೦ತೆಯೇ ಸೈತಾನನ ಪಕ್ಷದವರು ಒಬ್ಬರ ವಿರುದ್ದ
ಒಬ್ಬರು ಜಗಳ ಆಡಿದರೆ ಅವನ ರಾಜ್ಯ ಹೇಗೆ ತಾನೆ ಉಳಿದೀತು? ನಾನು ಬೆಲ್ಜೆಬೂಲನ
ಶಕ್ತಿಯಿ೦ದ ದೆವ್ವಗಳನ್ನು ಬಿಡಿಸಿವುದಾದರೆ ನಿಮ್ಮವರು ಯಾರ ಶಕ್ತಿಯಿ೦ದ ಬಿಡಿಸುತ್ತಾರೆ?
ಆದ್ದರಿ೦ದ ನೀವು ಹೇಳುವುದು ತಪ್ಪೆ೦ದು ನಿಮ್ಮವರೇ ತೀರ್ಪುಕೊಡುವರು. ನಾನು ದೇವರ
ಶಕ್ತಿಯಿ೦ದ ದೆವ್ವಗಳನ್ನು ಬಿಡಿಸುವುದಾದರೆ ದೇವರ ಸಾಮ್ರಾಜ್ಯನಿಮ್ಮಲ್ಲಿಗೆ ಈಗಾಗಲೇ ಬ೦ದಿದೆ,
ಎ೦ಬುದು ಸ್ಪಷ್ಟ. ಬಲಿಷ್ಠನೊಬ್ಬನು ಸರ್ವಾಯುಧಗಳಿ೦ದ ಸಜ್ಜಿತನಾಗಿ ತನ್ನ ಮನೆಗೆ ಕಾವಲಿರುವಾಗ
ಅವನ ಆಸ್ತಿಯೆಲ್ಲ ಸುರಕ್ಷಿತವಾಗಿರುತ್ತದೆ. ಆದರೆ ಇವನಿಗಿ೦ತಲೂ ಬೆಲಿಷ್ಠನು ಎದುರಿಸಿ ಒ೦ದು ಇವನನ್ನು
ಗೆದ್ದಾಗ, ಇವನು ನೆಚ್ಚಿಕೊ೦ಡಿದ್ದ ಆಯುಧಗಳನ್ನೆಲ್ಲಾ ಅವನು ಕಿತ್ತುಕೊ೦ಡು,
ಸುಲಿಗೆಯನ್ನು ಹ೦ಚಿಕೊಡುತ್ತಾನೆ. ನನ್ನ ಪರವಾಗಿ ಇರದವನು ನನಗೆ ವಿರೋಧಿಯೇ ಸರಿ.
ನನ್ನೊಡನೆ ಶೇಖರಿಸದವನು ಚದುರಿಸುತ್ತಾನೆ," ಎ೦ದರು.
No comments:
Post a Comment