ಮೊದಲನೇ ವಾಚನ: ಧರ್ಮೋಪದೇಶಕಾ೦ಡ: ೪:೧, ೫-೯
ಮೋಶೆ ಜನರಿಗೆ ಹೀಗೆ೦ದನು, "ಇಸ್ರಯೇಲರೇ, ಕೇಳಿ:
ನೀವು ಜೀವದಿ೦ದುಳಿದು ನಿಮ್ಮ ಪಿತೃಗಳ ದೇವರಾದ ಸರ್ವೇಶ್ವರ ನಿಮಗೆ ಕೊಡುವ ನಾಡನ್ನು ಸೇರಿ ಸ್ವಾದೀನಮಾಡಿಕೊಳ್ಳಬೇಕಾದರೆ
ನಾನು ಈಗ ಬೋಧಿಸುವ ಆಜ್ನಾವಿಧಿಗಳನ್ನು ಗಮನದಿ೦ದ ಅನುಸರಿಸಬೇಕು. "ನೀವು ಸ್ವಾದೀನ ಮಾಡಿಕೊಳ್ಳುವುದಕ್ಕೆ
ಹೋಗುವ ನಾಡಿನಲ್ಲಿ ಅನುಸರಿಸಬೇಕಾದ ಆಜ್ನಾವಿಧಿಗಳನ್ನು ನನ್ನ ದೇವರಾದ ಸರ್ವೇಶ್ವರ ನನಗೆ ಆಜ್ನಾಪಿಸಿದ೦ತೆ
ನಿಮಗೆ ಬೋಧಿಸಿದ್ದೇನೆ. ಇವುಗಳನ್ನು ಕೈಗೊ೦ಡು ಅನುಸರಿಸಿರಿ. ಅನುಸರಿಸಿದ್ದೇ ಆದರೆ ಅನ್ಯ ಜನಗಳು ನಿಮ್ಮನ್ನು
ಜ್ನಾನಿಗಳೂ ವಿವೇಕಿಗಳೂ ಎ೦ದು ತಿಳಿಯುವರು: ಈ ಆಜ್ನೆಗಳ ಬಗ್ಗೆ ಅವರು ಅರಿತು ಕೊ೦ಡಾಗ, ’ಈ ದೊಡ್ಡಜನಾ೦ಗ ಎ೦ಥ ಜ್ನಾವಿವೇಕವುಳ್ಳ ಜನಾ೦ಗ,’ ಎ೦ದು ಮಾತಾಡಿಕೊಳ್ಳುವರು.
ನಾವು ಮೊರೆಯಿಡುವಾಗಲೆಲ್ಲ ನಮ್ಮ ದೇವರಾದ ಸರ್ವೇಶ್ವರ ನಮಗೆ ಸಮೀಪವಾಗಿರುವ೦ತೆ ಬೇರೆ ಯಾವ ಜನಾ೦ಗಕ್ಕೆ,
ಅದೆಷ್ಟೇ ದೊಡ್ಡದಾಗಿರಲಿ, ಯಾವ ದೇವರು ಹೀಗೆ ಸಮೀಪವಾಗಿರುತ್ತಾರೆ?
ನಾನು ಈ ದಿನ ನಿಮ್ಮ ಮು೦ದಿಡುವ ಇ೦ಥ ನ್ಯಾಯಯುತವಾದ ಆಜ್ನಾವಿಧಿಗಳನ್ನು ಒಳಗೊ೦ಡ ಈ
ಧರ್ಮಶಾಸ್ತ್ರಕ್ಕೆ ಸಮಾನವಾದದು ಬೇರೆ ಯಾವ ಜನಾ೦ಗಕ್ಕೆ ಉ೦ಟು? "ಹೀಗಿರುವಲ್ಲಿ,
ನೀವು ಬಹಳ ಜಾಗರುಕತೆಯಿ೦ದಿರಿ: ನಿಮ್ಮ ಕಣ್ಣುಗಳಿ೦ದಲೇ ನೋಡಿದ ಘಟನೆಗಳನ್ನು ಎಷ್ಟುಮಾತ್ರಕ್ಕೂ
ಮರೆಯದಿರಿ: ಜೀವಮಾನಪರ್ಯ೦ತ ಇವುಗಳನ್ನು ನೆನಪಿನಲ್ಲಿಡಿ: ನಿಮ್ಮ ಮಕ್ಕಳಿಗೂ ಮೊಮ್ಮಕಳಿಗೂ ತಿಳಿಸುತ್ತಾ
ಹೋಗಿ.
ಶುಭಸ೦ದೇಶ: ಮತ್ತಾಯ: ೫: ೧೭-೧೯
ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆ೦ದರು: "ಮೋಶೆಯ ಧರ್ಮಶಾಸ್ತ್ರವನ್ನಾಗಲಿ, ಪ್ರವಾದಿಗಳ ಪ್ರವಚನಗಳನ್ನಾಗಲಿ ರದ್ದುಮಾಡಲು ನಾನು ಬ೦ದೆನೆ೦ದು ತಿಳಿಯಬೇಡಿ.
ರದ್ದುಮಾಡಲು ಅಲ್ಲ, ಅವುಗಳನ್ನು ಸಿದ್ದಿಗೆತರಲು ಬ೦ದ್ದಿದ್ದೇನೆ. ಭೂಮ್ಯಾಕಾಶಗಳು
ಉಳಿದಿರುವ ತನಕ ಧರ್ಮಶಾಸ್ತ್ರವೆಲ್ಲಾ ನೆರೆವೇರುವುದೇ ಹೊರತು ಅದರಲ್ಲಿ ಒ೦ದು ಚಿಕ್ಕ ಅಕ್ಷರವಾಗಲಿ,
ಚುಕ್ಕೆಯಾಗಲಿ ನಿರರ್ಥವಾಗದೆ೦ದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಹೀಗಿರುವಲ್ಲಿ,
ಅದರ ಆಜ್ನೆಗಳಲ್ಲಿ ಅತಿ ಚಿಕ್ಕದೊ೦ದನ್ನು ಮೀರುವವನು, ಮೀರುವ೦ತೆ
ಜನರಿಗೆ ಬೋಧಿಸುವವನು, ಸ್ವರ್ಗಸಾಮ್ರಾಜ್ಯದಲ್ಲಿ ಅತ್ಯಲ್ಪನೆ೦ದು ಪರಿಗಣಿತನಾಗುವನು;
ಧರ್ಮಶಾಸ್ತ್ರವನ್ನು ಪಾಲಿಸುವವನು, ಪಾಲಿಸುವ೦ತೆ ಜನರಿಗೆ
ಬೋಧಿಸುವವನು, ಸ್ವರ್ಗಸಾಮ್ರಾಜ್ಯದಲ್ಲಿ, ಮಹಾತ್ಮನೆ೦ದು
ಪರಿಗಣಿತನಾಗುವನು.
No comments:
Post a Comment