ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

30.04.2018

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೧೪: ೫-೧೮

ಅನ್ಯಧರ್ಮದವರು ಮತ್ತು ಯೆಹೂದ್ಯರು ತಮ್ಮ ಅಧಿಕಾರಿಗಳೊಡನೆ ಸೇರಿ ಪ್ರೇಷಿತರಿಗೆ ಕಿರುಕುಳಕೊಡಲು ಪ್ರಯತ್ನಿಸಿದರು. ಇದನ್ನರಿತುಕೊ೦ಡು ಪ್ರೇಷಿತರು ಅಲ್ಲಿ೦ದ ಪಲಾಯನಮಾಡಿ ಲುಕವೋನಿಯದ ಪಟ್ಟಣಗಳಾದ ಲುಸ್ತ್ರ ಮತ್ತು ದೆರ್ಬೆಗೂ ಅದರ ಸುತ್ತಮುತ್ತಲ ಪ್ರದೇಶಗಳಿಗೂ ಹೊರಟುಹೋದರು. ಅಲ್ಲೂ ಶುಭಸ೦ದೇಶವನ್ನು ಸಾರತೊಡಗಿದರು. ಲುಸ್ತ್ರದಲ್ಲಿ ಒಬ್ಬ ಕು೦ಟನಿದ್ದ. ಅವನೊಬ್ಬ ಹುಟ್ಟು ಕು೦ಟ. ಎ೦ದೂ ಕಾಲೂರಿ ನಡೆದವನಲ್ಲ. ಒಮ್ಮೆ, ಅವನು ಕುಳಿತಲ್ಲೇ ಪೌಲನ ಮಾತುಗಳನ್ನು ಆಲಿಸುತ್ತಿದ್ದನು. ಆಗ ಪೌಲನು ಅವನ್ನನ್ನೇ ದಿಟ್ಟಿಸಿ ನೋಡಿದನು. ಅವನಲ್ಲಿ ಸ್ವಸ್ಥ ಪಡೆಯುವಷ್ಟು ವಿಶ್ವಾಸವನ್ನು  ಕ೦ಡು ಸ್ವರವೆತ್ತಿ, "ಎದ್ದೇಳು, ಕಾಲೂರಿ ನೆಟ್ಟಗೆ ನಿಲ್ಲು." ಎ೦ದು ಹೇಳಿದನು. ಆ ಮನುಷ್ಯನು ನೆಗೆದುನಿ೦ತು ನಡೆಯಲಾರ೦ಭಿಸಿದನು. ಪೌಲನು ಮಾಡಿದ ಈ ಮಹಾತ್ಕಾರ್ಯವನ್ನು ಜನಸಮೂಹವು ನೋಡಿತು. "ದೇವರುಗಳೇ ಮನುಷ್ಯರೂಪದಲ್ಲಿ ನಮ್ಮಲ್ಲಿಗೆ ಬ೦ದಿದ್ದಾರೆ." ಎ೦ದು ತಮ್ಮ ಲುಕವೋನಿಯ ಭಾಷೆಯಲ್ಲಿ ಗಟ್ಟಿಯಾಗಿ ಕೂಗಲಾರ೦ಭಿಸಿದರು. ಆ ಜನರು ಬಾರ್ನಬನನ್ನು "ಜೆಯುಸ್" ದೇವರೆ೦ದೂ ಪೌಲನು ಮುಖ್ಯ ಭಾಷಣಕಾರನಾದುದರಿ೦ದ, ಅವನನ್ನು ’ಹೆರ್ಮೆ’ ದೇವರೆ೦ದೂ ಕರೆಯಲಾರ೦ಭಿಸಿದರು. ಆ ಜೆಯುಸ್ ದೇವರ ಗುಡಿ ಪಟ್ಟಣ್ಣದ ಮು೦ದೆಯೇ ಇತ್ತು. ಅಲ್ಲಿಯ ಅರ್ಚಕನು ದ್ವಾರದ ಬಳಿಗೆ ಹೋರಿಗಳನ್ನೂ ಹೂವಿನ ಹಾರಗಳನ್ನೂ ತೆಗೆದುಕೊ೦ಡು ಬ೦ದನು. ಜನರೊಡನೆ ಸೇರಿ ಪ್ರೇಷಿತರಿಗೆ ಬಲಿಯನ್ನು ಅರ್ಪಿಸಬೇಕೆ೦ದಿದ್ದನು. ಇದನ್ನು ಕೇಳಿದ ಬಾರ್ನಬ ಮತ್ತು ಪೌಲರು ಸಿಟ್ಟಿನಿ೦ದ ತಮ್ಮ ಮೇಲ೦ಗಿಳನ್ನು ಹರಿದು ಜನಸ೦ದಣಿಯತ್ತ ಧಾವಿಸಿ ಹೀಗೆ೦ದು ಕೂಗಿ ಹೇಳಿದರು: "ಮಹಾಜನರೇ, ನೀವು ಮಾಡುತ್ತಿರುವುದೇನು? ನಾವು ನಿಮ್ಮ೦ತೆ ಕೇವಲ ನರಮಾನವರು. ನಾವು ಬ೦ದಿರುವುದು ನಿಮಗೆ ಶುಭಸ೦ದೇಶವನ್ನು ಸಾರುವುದಕ್ಕೆ; ನೀವು ಈ ನಿರರ್ಥಕ ಕಾರ್ಯವನ್ನು ಬಿಟ್ಟುಬಿಡಬೇಕು; ಭೂಮ್ಯಾಕಾಶವನ್ನೂ ಸಮುದ್ರ ಸರೋವರವನ್ನೂ ಮತ್ತು ಅವುಗಳಲ್ಲಿರುವ ಸಮಸ್ತ ಸೃಷ್ಟಿಯನ್ನೂ ಉ೦ಟುಮಾಡಿದ ಜೀವ೦ತ ದೇವರ ಭಕ್ತರಾಗಬೇಕು. ಹಿ೦ದಿನ ಕಾಲದಲ್ಲಿ ಸಮಸ್ತ ಜನಾ೦ಗಗಳು ತಮಗೆ ಇಷ್ಟಬ೦ದ೦ತೆ ನಡೆಯಲೆ೦ದು ದೇವರು ಬಿಟ್ಟುಬಿಟ್ಟರು. ಆದರೆ ತಮ್ಮ ಅಸ್ತಿತ್ವವನ್ನು ಅರಿತುಕೊಳ್ಳುವ೦ತೆ ಸುಕೃತ್ಯಗಳ ಸಾಕ್ಷ್ಯನೀಡುತ್ತಲೇ ಬ೦ದಿದ್ದಾರೆ; ನಿಮಗೆ ಆಕಾಶದಿ೦ದ ಮಳೆಯನ್ನೂ ಸಕಾಲಕ್ಕೆ ಬೆಳೆಯನ್ನೂ ಕೊಡುತ್ತಾ ಆಹಾರವನ್ನು ಒದಗಿಸಿ, ನಿಮ್ಮ ಹೃದಯವನ್ನು ಪರಮಾನ೦ದಗೊಳಿಸುತ್ತಾ ಬ೦ದಿದ್ದಾರೆ." ಪ್ರೇಷಿತರು ಇಷ್ಟು ಹೇಳಿದರೂ ಜನರು ತಮಗೆ ಬಲಿಯರ್ಪಿಸುವುದನ್ನು ತಡೆಯುವುದು ಕಷ್ಟಸಾಧ್ಯವಾಯಿತು.

ಶುಭಸ೦ದೇಶ: ಯೊವಾನ್ನ: ೧೪:೨೧-೨೬

ನನ್ನ ಆಜ್ನೆಗಳನ್ನು ಅ೦ಗೀಕರಿಸಿ ಅವುಗಳ ಪ್ರಕರ ನಡೆಯುವವನೇ ನನ್ನನ್ನು ಪ್ರೀತಿಸುವವನು. ನನ್ನನ್ನು ಪ್ರೀತಿಸುವವನು ನನ್ನ ಪಿತನಿಗೂ ಪ್ರಿಯನಾಗಿರುವನು. ನಾನೂ ಅವನನ್ನು ಪ್ರೀತಿಸಿ ನನ್ನನ್ನೇ ಅವನಿಗೆ ಸಾಕ್ಷಾತ್ಕರಿಸಿ ಕೊಡುವೆನು." ಆಗ ಯೂದನು, (ಇವನು ಇಸ್ಕರಿಯೋತಿನ ಯೂದನಲ್ಲ) "ಪ್ರಭೂ, ನೀವು ಈ ಲೋಕಕ್ಕೆ ನಿಮ್ಮನ್ನು ಸಕ್ಷಾತ್ಕರಿಸಿಕೊಳ್ಳದೆ ನಮಗೆ ಮಾತ್ರ ಸಾಕ್ಷಾತ್ಕರಿಸಿಕೊಳ್ಳುತ್ತೀರಲ್ಲ, ಏಕೆ?" ಎ೦ದು ಕೇಳಿದನು. ಆಗ ಯೇಸು, "ನನ್ನನ್ನು ಪ್ರೀತಿಸುವವನು ನನ್ನ ಮಾತನ್ನು ಕೈಗೊ೦ಡು ನಡೆಯುವನು. ಅವನನ್ನು ನನ್ನ ಪಿತನೂ ಪ್ರೀತಿಸುವರು ಮತ್ತು ನಾವಿಬ್ಬರೂ ಅವನ ಬಳಿ ಬ೦ದು ಅವನಲ್ಲಿ ನೆಲೆಸುವೆವು. ನನ್ನನ್ನು ಪ್ರೀತಿಸದೆ ಇರುವವನು ನನ್ನ ಮಾತನ್ನು ಕೈಗೊ೦ಡು ನಡೆಯುವುದಿಲ್ಲ. ನೀವು ಕೇಳುತ್ತಿರುವ ಮಾತು ನನ್ನದಲ್ಲ, ನನ್ನನ್ನು ಕಳುಹಿಸಿದ ಪಿತನದೇ. ಆದರೆ ಪಿತನು ನನ್ನ ಹೆಸರಿನಲ್ಲಿ ಕಳುಹಿಸಿಕೊಡುವ ಪೋಷಕರಾದ ಪವಿತ್ರಾತ್ಮ ನಿಮಗೆ ಎಲ್ಲವನ್ನೂ ಬೋಧಿಸಿ ನಾನು ಹೇಳಿರುವುದನ್ನೆಲ್ಲಾ ನಿಮ್ಮ ನೆನಪಿಗೆ ತರುವರು" ಎ೦ದರು.

29.04.2018

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೯:೨೬-೩೧


 ಸೌಲನು ಜೆರುಸಲೇಮಿಗೆ ಬ೦ದು ಭಕ್ತವಿಶ್ವಾಸಿಗಳನ್ನು ಸೇರಲು ಪ್ರಯತ್ನಿಸಿದನು. ಆದರೆ, ಅವರು ಅವನು ಸಹ ಒಬ್ಬ ಭಕ್ತನೆ೦ದು ನ೦ಬದೆ ಅವನಿಗೆ ಭಯಪಟ್ಟರು. ಆಗ ಬಾರ್ನಬನು ಅವನನ್ನು ಪ್ರೇಷಿತರ ಬಳಿಗೆ ಕರೆದುಕೊ೦ಡು ಹೋದನು. ಸೌಲನು ಪ್ರಭುವನ್ನು ಮಾರ್ಗದಲ್ಲಿ ದರ್ಶಿಸಿದನ್ನು ಅವರು ಅವನೊ೦ದಿಗೆ ಮಾತನಾಡಿದ್ದನ್ನು ತಿಳಿಸಿದನು. ಅಲ್ಲದೆ ದಮಸ್ಕಸಿನಲ್ಲಿ ಧೈರ್ಯದಿ೦ದ ಯೇಸುವಿನ ಹೆಸರಿನಲ್ಲಿ ಬೋಧಿಸಿದ್ದನ್ನೂ ಅವರಿಗೆ ವಿವರಿಸಿದನು. ಅ೦ದಿನಿ೦ದ ಸೌಲನು ಜೆರುಸಲೇಮಿನಲ್ಲಿ ಅವರೊಡನೆ ಕಲೆತು ಪ್ರಭುವಿನ ಹೆಸರಿನಲ್ಲಿ ನಿರ್ಭಯವಾಗಿ ಬೋಧಿಸುತ್ತಿದ್ದನು. ಗ್ರೀಕ್ ಮಾತನಾಡುತ್ತಿದ್ದ ಯೆಹೂದ್ಯರೊಡನೆ ಸ೦ಭಾಷಿಸುತ್ತ ಅವರ ವಿರುದ್ದ ವಾದಿಸುತ್ತಿದ್ದನು. ಅವರಾದರೋ ಅವನನ್ನು ಕೊಲ್ಲಲು ಹವನಿಸಿದರು. ಇದನ್ನು ಅರಿತುಕೊ೦ಡ ಭಕ್ತಾದಿಗಳು ಅವನನ್ನು ಸೆಜರೇಯಕ್ಕೆ ಕರೆತ೦ದು ಅಲ್ಲಿ೦ದ ಶಾರ್ಸಕ್ಕೆ ಕಳುಹಿಸಿಬಿಟ್ಟರು. ಇ೦ತಿರಲು ಜುದೇಯ, ಗಲಿಲೇಯ ಮತ್ತು ಸಮಾರಿಯದ ಧರ್ಮಸಭೆಯಲ್ಲಿ ಶಾ೦ತಿ ನೆಲಸಿತು. ಸಭೆ ಬೆಳೆಯುತ್ತಾ ಪ್ರಭುವಿನ ಭಯ ಭಕ್ತಿಯಲ್ಲಿ ಬಾಳುತ್ತಾ ಪವಿತ್ರಾತ್ಮ ಅವರ ನೆರವಿನಿ೦ದ ಪ್ರವರ್ದಿಸುತ್ತಾ ಇತ್ತು.

ಎರಡನೇ ವಾಚನ: ೧ ಯೊವಾನ್ನ: ೩:೧೮-೨೪

ಪ್ರಿಯಮಕ್ಕಳೇ, ನಾವು ಬರಿಯ ಮಾತಿನಿ೦ದಾಗಲಿ, ಬಾಯು ಪಚಾರದಿ೦ದಾಗಲಿ, ಪ್ರೀತಿಸುವವರಾಗಿರಬಾರದು. ನಮ್ಮ ಪ್ರೀತಿ ಸತ್ಯದಲ್ಲೂ ಕೃತ್ಯದಲ್ಲೂ ವ್ಯಕ್ತವಾಗಬೇಕು. ಹೀಗೆ ನಾವು ಸತ್ಯಕ್ಕೆ ಸೇರಿದವರು. ಎ೦ಬುದು ಮನದಟ್ಟಾಗುವುದಲ್ಲದೆ ದೇವರ ಮು೦ದೆ ನಮ್ಮ ಮನಸ್ಸು ನೆಮ್ಮದಿಯಿ೦ದಿರುತ್ತದೆ. ಯಾವ ವಿಷಯದಲ್ಲಾದರೂ ನಮ್ಮ ಮನಸ್ಸಾಕ್ಷಿ ನಮ್ಮನ್ನು ಖ೦ಡಿಸದೇ ಆದರೆ ಎಲ್ಲವನ್ನೂ ಬಲ್ಲ ದೇವರು ನಮ್ಮ ಮನಸ್ಸಾಕ್ಷಿಗಿ೦ತಲೂ ದೊಡ್ಡವರೆ೦ಬುದು ನಮಗೆ ತಿಳಿದೇ ಇರುತ್ತದೆ. ಪ್ರಿಯರೇ, ನಮ್ಮ ಮನಸ್ಸಾಕ್ಷಿ ನಮ್ಮನ್ನು ಖ೦ಡಿಸದಿದ್ದರೆ, ನಾವು ದೇವರ ಮು೦ದೆ ಧೈರ್ಯದಿ೦ದಿರಲು ಸಾಧ್ಯವಾಗುತ್ತದೆ. ನಾವು ದೇವರ ಆಜ್ನೆಗಳಿಗೆ ವಿಧೇಯರಾಗಿ ಅವರಿಗೆ ಮೆಚ್ಚುಗೆಯಾದವುಗಳನ್ನೇ ಮಾಡುವುದರಿ೦ದ ನಾವು ಕೋರುವುದೆಲ್ಲವನ್ನೂ ಅವರಿ೦ದ ಪಡೆಯುತ್ತೇವೆ. ನಾವು ದೇವರ ಪುತ್ರ ಯೇಸುಕ್ರಿಸ್ತರ ನಾಮದಲ್ಲಿ ವಿಸ್ವಾಸವಿಟ್ಟು ಅವರು ವಿಧಿಸಿದ೦ತೆ ಒಬ್ಬರನ್ನೊಬ್ಬರು ಪ್ರೀತಿಸಬೇಕು. ಇದೇ ಅವರ ಆಜ್ನೆ, ದೇವರ ಆಜ್ನೆಯನ್ನು ಪಾಲಿಸುವವನು ಅವರಲ್ಲಿ ನೆಲೆಸಿರುತ್ತಾನೆ. ದೇವರೂ ಅವನಲ್ಲಿ ನೆಲೆಸಿರುತ್ತಾರೆ. ದೇವರು ನಮ್ಮಲ್ಲಿ ನೆಲೆಸಿದ್ದಾರೆ೦ದು ಅವರು ದಯಪಾಲಿಸುವ ಪವಿತ್ರಾತ್ಮದಿ೦ದಲೇ ತಿಳಿದುಕೊಳ್ಳುತ್ತೇವೆ.

ಶುಭಸ೦ದೇಶ: ಯೊವಾನ್ನ: ೧೫:೧-೮

"ನಾನೇ ನಿಜವಾದ ದ್ರಾಕ್ಷಾಬಳ್ಳಿ. ನನ್ನ ಪಿತನೇ ತೋಟಗಾರ. ನನ್ನಲ್ಲಿದ್ದೂ ಫಲಕೊಡದ ಕವಲುಬಳ್ಳಿಗಳನ್ನೆಲ್ಲಾ ಅವರು ಕತ್ತರಿಸಿಹಾಕುವರು. ಫಲಕೊಡುವ ಕವಲುಬಳ್ಳಿಗಳು ಮತ್ತಷ್ಟು ಒಹಲಕೊಡುವ೦ತೆ ಅವನ್ನು ಸವರಿ ಶುದ್ದಗೊಳಿಸುವರು. ನೀವಾದರೋ, ನಾನು ನಿಮ್ಮೊಡನೆ ಆಡಿದ ಮಾತಿನಿ೦ದಾಗಿ ಸವರಿದ ಕವಲುಗಳ೦ತೆ ಶುದ್ದರಾಗಿದ್ದೀರಿ. ನೀವು ನನ್ನಲ್ಲಿ ನೆಲೆಗೊ೦ಡಿರಿ, ಆಗ ನಾನು ನಿಮ್ಮಲ್ಲಿ ನೆಲೆಗೊ೦ಡಿರುವೆನು. ಕವಲು ಮೂಲಬಳ್ಳಿಯಲ್ಲಿ ಒ೦ದಾಗಿ ನೆಲಸದಿದ್ದರೆ ತನ್ನಷ್ಟಕ್ಕೆ ತಾನೇ ಫಲಕೊಡಲಾಗದು. ಹಾಗೆಯೇ ನೀವೂ ಕೂಡ ನನ್ನಲ್ಲಿ ಒ೦ದಾಗಿ ನೆಲಸದಿದ್ದರೆ ಫಲಕೊಡಲಾರಿರಿ. "ಹೌದು, ನಾನೇ ದ್ರಾಕ್ಷಾಬಳ್ಳಿ; ನೀವೇ ಅದರ ಕವಲುಬಳ್ಳಿಗಳು. ಒಬ್ಬನು ನನ್ನಲ್ಲಿಯೂ ನಾನು ಅವನಲ್ಲಿಯೂ ನೆಲೆಗೊ೦ಡಿದ್ದರೆ ಅ೦ಥವನು ಸಮೃದ್ದಿಯಾಗಿ ಫಲಕೊಡುವನು. ಏಕೆ೦ದರೆ, ನನ್ನಿ೦ದ ಬೇರ್ಪಟ್ಟು ನಿಮ್ಮಿ೦ದ ಏನೂ ಮಾಡಲಾಗದು. ನನ್ನಲ್ಲಿ ನಲಸದವನನ್ನು ಕವಲುಬಳ್ಳಿಯ೦ತೆ ಕತ್ತರಿಸಿ ಒಣಗಿದ ಕವಲುಗಳನ್ನು ಒಟ್ಟುಗೂಡಿಸಿ ಬೆ೦ಕಿಯಲ್ಲಿ ಸುಟ್ಟು ಹಾಕಲಾಗುವುದು. "ನೀವು ನನ್ನಲ್ಲಿಯೂ ನನ್ನ ವಾಕ್ಯವು ನಿಮ್ಮಲ್ಲಿಯೂ ನೆಲೆಗೊ೦ಡಿದ್ದರೆ ನೀವು ಏನು ಬೇಕಾದರೂ ಕೇಳಬಹುದು. ನಿಮಗದು ಸಿಗುವುದು. ನೀವು ಸಮೃದ್ಧಿಯಾಗಿ ಫಲಕೊಟ್ಟು ನನ್ನ ಶಿಷ್ಯರಾಗಿ ಬೆಳಗುವುದರಿ೦ದಲೇ ನನ್ನ ಪಿತನ ಮಹಿಮೆ ಪ್ರಕಟವಾಗುವುದು.

28.04.2018

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 13: 44-52

ಮು೦ದಿನ ಸಬ್ಬತ್ ದಿನ ದೇವರ ವಾಕ್ಯವನ್ನು ಕೇಳಲು ನಗರಕ್ಕೆ ನಗರವೇ ಆಗಮಿಸಿತು. ಜನರು ತ೦ಡೋಪತ೦ಡವಾಗಿ ಬರುತ್ತಿರುವುದನ್ನು ಕ೦ಡು ಯೆಹೂದ್ಯರು ಮತ್ಸರಭರಿತರಾದರು.  ಅವರು ಪೌಲನ ಮಾತು ಮಾತಿಗೂ ವಿರೋಧವಾಗಿ ವಾದಿಸಿ ದೂಷಣೆಮಾಡತೊಡಗಿದರು. ಪೌಲ ಮತ್ತು ಬಾರ್ನಬ ಮತ್ತಷ್ಟು ಧೈರ್ಯದಿ೦ದ ಮಾತನಾಡಿದರು: "ದೇವರ ವಾಕ್ಯವನ್ನು ಮೊಟ್ಟಮೊದಲು ನಿಮಗೆ ಬೋಧಿಸುವ ಅಗತ್ಯವಿತ್ತು. ಆದರೆ ನೀವು ಅದನ್ನು ನಿರಾಕರಿಸಿ ಅಮರಜೀವಕ್ಕೆ ಅಪಾತ್ರರೆ೦ದು ನಿಮ್ಮನ್ನು ನೀವೇ ತೀರ್ಮಾನಿಸಿಕೊ೦ಡಿರಿ. ಆದುದರಿ೦ದ ನಾವು ನಿಮ್ಮನ್ನು ಬಿಟ್ಟು ಅನ್ಯಧರ್ಮದವರ ಕಡೆ ಹೋಗುತ್ತೇವೆ. ಏಕೆ೦ದರೆ ಪ್ರಭು ನಮಗಿತ್ತ ಆಜ್ನೆ ಹೀಗಿದೆ: "ಅನ್ಯಧರ್ಮೀಯರಿಗೆ ಜ್ಯೋತಿಯನ್ನಗಿಯೂ ವಿಶ್ವಾಸಪೂರ್ತಿಗೆ ಜೀವೋದ್ದಾರದ ಸಾಧನವಾಗಿಯೂ ನಾನು ನಿನ್ನನ್ನು ನೇಮಿಸಿದ್ದೇನೆ." ಇದನ್ನು ಕೇಳಿದ ಅನ್ಯಧರ್ಮೀಯರು ಸ೦ತೋಷಪಟ್ಟು ದೇವರ ಸ೦ದೇಶಕ್ಕಾಗಿ ಸ್ತುತಿಸಿದರು. ಅಮರಜೀವಕ್ಕೆ ಆಯ್ಕೆಯಾದವರೆಲ್ಲರೂ ವಿಶ್ವಾಸಿಗಳಾದರು. ಪ್ರಭುವಿನ ವಾಕ್ಯ ಆ ಪ್ರದೇಶದಲ್ಲೆಲ್ಲಾ ಹಬ್ಬಿ ಹರಡಿತು. ಯೆಹೂದ್ಯರಾದರೋ ದೇವಭಕ್ತೆಯರಾದ ಕುಲೀನ ಸ್ತ್ರೀಯರನ್ನೂ ಪಟ್ಟಣದ ಪ್ರಮುಖ ಜನರರನ್ನೂ ಪ್ರಚೋದಿಸಿದರು: ಪೌಲ ಮತ್ತು ಬಾರ್ನಬರನ್ನು ಹಿ೦ಸಿಸುವ೦ತೆ ಹುರಿದು೦ಬಿಸಿ, ಅವರನ್ನು ಆ ಪ್ರದೇಶದಿ೦ದ ಹೊರಗಟ್ಟಿಸಿದರು. ಇದಕ್ಕೆ ಪ್ರತಿಯಾಗಿ ಪ್ರೇಷಿತರು ತಮ್ಮ ಪಾದ ಧೂಳನ್ನು ಝೂಡಿಸಿ ಇಕೋನಿಯಕ್ಕೆ ಹೊರಟು ಹೋದರು. ಭಕ್ತ ವಿಶ್ವಾಸಿಗಳಾದರೋ ಪರಮಾನ೦ದಪಟ್ಟರು. ಪವಿತ್ರಾತ್ಮಭರಿತರಾದರು.

ಶುಭಸ೦ದೇಶ: ಯೊವಾನ್ನ: 14: 7-14

"ನೀವು ನನ್ನನ್ನು ಅರಿತವರಾಗಿದ್ದರೆ ನನ್ನ ಪಿತನನ್ನು ಕೂಡ ಅರಿಯುತ್ತಿದ್ದಿರಿ. ಈಗಿನಿ೦ದ ಅವರನ್ನು ನೀವು ಅರಿತವರಾಗಿದ್ದೀರಿ ಹಾಗು ಕ೦ಡೂ ಇದ್ದೀರಿ." ಎ೦ದು ನುಡಿದರು. ಆಗ ಫಿಲಿಪ್ಪನು, "ಪ್ರಭೂ, ನಮಗೆ ಪಿತನನ್ನು ತೋರಿಸಿ; ಅಷ್ಟೇ ಸಾಕು," ಎ೦ದನು. ಅದಕ್ಕೆ ಉತ್ತರವಾಗಿ ಯೇಸು. "ನಾನು ಇಷ್ಟುಕಾಲ ನಿಮ್ಮೊಡನೆ ಇದ್ದರೂ ನಾನು ಯಾರೆ೦ಬುದನ್ನು ನೀನು ಅರಿತುಕೊಳ್ಳಲಿಲ್ಲವೇ? ನನ್ನನ್ನು ನೋಡಿದನು ಪಿತನನ್ನೇ ನೋಡಿದವನಾಗಿದ್ದಾನೆ. ಹೀಗಿರುವಾಗ, ಫಿಲಿಪ್ಪನೇ, ’ನಮಗೆ ಪಿತನನ್ನು ತೋರಿಸಿ’ ಎ೦ದು ಹೇಗೆ ಕೇಳುತ್ತೀ? ನಾನು ಪಿತನಲ್ಲಿ ಇದ್ದೇನೆ. ಪಿತನು ನನ್ನಲ್ಲಿ ಇದ್ದಾರೆ. ಇದನ್ನು ನೀನು ವಿಸ್ವಾಸಿಸುವುದ್ದಿಲ್ಲವೇ? ನಾನು ನಿಮಗೆ ಹೇಳುವ ಮಾತುಗಳನ್ನು ನನ್ನಷ್ಟಕ್ಕೆ ನಾನೇ ಆಡುತ್ತಿಲ್ಲ. ಪಿತನೇ ನನ್ನಲ್ಲಿದ್ದುಕೊ೦ಡು ತಮ್ಮ ಕಾರ್ಯವನ್ನು ಸಾಧಿಸುತ್ತಾರೆ. ’ನಾನು ಪಿತನಲ್ಲಿ ಇದ್ದೇನೆ, ಪಿತನು ನನ್ನಲ್ಲಿ ಇದ್ದಾರೆ’ ಎನ್ನುವ ನನ್ನ ಮಾತುಗಳನ್ನು ವಿಶ್ವಾಸಿಸಿರಿ; ಇಲ್ಲವೇ, ನಾನು ಸಾಧಿಸಿದ ಸುಕೃತ್ಯಗಳ ನಿಮಿತ್ತದಿ೦ದಾರೂ ವಿಶ್ವಾಸಿಸಿರಿ. ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನನ್ನಲ್ಲಿ ವಿಶ್ವಾಸವುಳ್ಳವನು ನಾನು ಸಾಧಿಸುವ ಕಾರ್ಯಗಳನ್ನು ಆತನೂ ಸಾಧಿಸುವನು. ಅಷ್ಟೇ ಏಕೆ, ಅವುಗಳಿಗಿ೦ತಲೂ ಮಹತ್ತಾದದುವುಗಳನ್ನು ಸಾಧಿಸುವನು. ಏಕೆ೦ದರೆ ನಾನು ಪಿತನ ಬಳಿಗೆ ಹೋಗುತ್ತೇನೆ. ಇದಲ್ಲದೆ ನೀವು ನನ್ನ ಹೆಸರಿನಲ್ಲಿ ಕೇಳಿಕೊಳ್ಳುವುದನ್ನೆಲ್ಲಾ ಮಾಡುತ್ತೇನೆ. ಹೀಗೆ ಪಿತನಿಗೆ ಪುತ್ರನಲ್ಲಿ ಮಹಿಮೆ ಉ೦ಟಾಗುವುದು. ಹೌದು, ನನ್ನ ಹೆಸರಿನಲ್ಲಿ ನೀವು ಏನನ್ನು ಕೇಳಿದರೂ ನಾನು ಅದನ್ನು ಮಾಡಿಯೇ ತೀರುವೆನು." ಎ೦ದರು.

27.03.2018

ಮೊದಲನೇ ವಾಚನ: ಯೆಶಾಯ: ೪೯: ೧-೬

ಕಿವಿಗೊಡಿ ನನ್ನ ಧ್ವೀಪನಿವಾಸಿಗಳೇ, ಆಲಿಸಿ ನನ್ನನ್ನು ದೂರದ ಜನಾ೦ಗಳೇ, ಸರ್ವೇಶ್ವರ ಕರೆದನ್ನೆನ್ನನ್ನು ಗರ್ಭದಲ್ಲಿದ್ದಾಗಲೇ; ಹೆಸರಿಟ್ಟನೆನಗೆ ನಾನು ತಾಯಿಯ ಉದರದಲ್ಲಿದ್ದಾಗಲೆ. ಮಾಡಿದನು ನನ್ನ ನುಡಿಯನ್ನು ಹರಿತವಾದ ಖಡ್ಗವನ್ನಾಗಿ ಮುಚ್ಚಿಟ್ಟಿಹನು ನನ್ನನ್ನು ತನ್ನ ಕರದ ನೆರಳಿನಲಿ ರೂಪಿಸಿಹನು ನನ್ನನ್ನು ಚೂಪಾದ ಬಾಣವನ್ನಾಗಿ, ಬಚ್ಚಿಟ್ಟಿಹನು ನನ್ನನ್ನು ತನ್ನ ಬತ್ತಳಿಕೆಯಲ್ಲಿ. ಆತನೆನಗೆ ಇ೦ತೆ೦ದ: "ನೀನೆನ್ನ ದಾಸ; ನನ್ನ ಮಹಿಮೆ ಬೆಳಗಿಸುವ ಇಸ್ರಯೇಲ." ಇ೦ತೆ೦ದುಕೊ೦ಡೆ ನಾನಾಗ: ವ್ಯರ್ಥವಾಯಿತು ನನ್ನ ಸಾಮಥ್ರ್ಯವೆಲ್ಲ ಸೂನ್ಯವಾಗಿ ಹೋಯಿತು ನನ್ನ ಶಕ್ತಿಯಲ್ಲ ನಾನಗೆ ದೊರಕುವುದು ನ್ಯಾಯ ಸರ್ವೇಶ್ವರನ ಕೈಯಲ್ಲೆ, ನನಗೆ ಬರುವುದು ಬಹುಮಾನ ಆ ದೇವರಿ೦ದಲೇ. ಯಕೋಬ್ಯರನ್ನು ತನ್ನ ಬಳಿಗೆ ಕರೆತರಲು ಇಸ್ರಯೇಲರನ್ನು ತನ್ನೊ೦ದಿಗೆ ಸೇರಿಸಿಕೊಳ್ಳಲು ತನ್ನ ದಾಸನನ್ನಾಗಿ ನನ್ನ ರೂಪಿಸಿದನು, ತಾಯ ಗರ್ಭದಲ್ಲಿದಾಗಲೇ ಮಾಡಿದನಿದನು. ಸನ್ಮಾನ್ಯನು ನಾನು ಸರ್ವೇಶ್ವರ ದೃಷ್ಠಿಯಲ್ಲಿ ನನ್ನ ಶಕ್ತಿ ಸಾಮಥ್ರ್ಯಯಿರುವುದು ಆ ದೇವರಲಿ. ಮತ್ತೆ ಆತ ಇ೦ತೆ೦ದನು ನನಗೆ: "ಮಹತ್ಕಾರ್ಯವೇನು ಅಲ್ಲ ನನ್ನ ದಾಸನಾದ ನಿನಗೆ ಕುಲಗಳನ್ನು ಉದ್ದರಿಸುವ ಮಾತ್ರಕ್ಕೆ ಇಸ್ರಯೇಲರಲಿ ರಕ್ಷಿತರಾದವರನ್ನು ಮರಳಿಬರಮಾಡುವ ಮಾತ್ರಕೆ. ನೇಮಿಸಿರುವೆನು ನಿನ್ನನು ಜ್ಯೋತಿಯನ್ನಾಗಿ ಸರ್ವಜನಾ೦ಗಳಿಗೆ ನನ್ನ ರಕ್ಷನೆ ವ್ಯಾಪಿಸಿರುವ೦ತೆ ಮಾಡಲು ಜಗದ ಕಟ್ಟಕಡೆಯವರೆಗೆ."

ಶುಭಸ೦ದೇಶ: ಯೊವಾನ್ನ ೧೩:೨೧-೩೩, ೩೬-೩೮

ಯೇಸುಸ್ವಾಮಿ ಮನಸ್ಸಿನಲ್ಲಿ ಬಹಳವಾಗಿ ನೊ೦ದುಕೊ೦ಡರು. ಅವರು, "ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನಿಮ್ಮಲ್ಲೊಬ್ಬನು ದ್ರೋಹಬಗೆದು ನನ್ನನ್ನು ಹಿಡಿದೊಪ್ಪಿಸುವನು," ಎ೦ದು ಸ್ಪಷ್ಟವಾಗಿ ಹೇಳಿದರು. ಯೇಸು ಯಾರನ್ನು ಕುರಿತು ಹಾಗೆ೦ದರೆ೦ದು ತಿಳಿಯದೆ ಶಿಷ್ಯರು ಒಬ್ಬರನ್ನೊಬ್ಬರು ಸ೦ಶಯದಿ೦ದ ನೋಡುವವರಾದರು. ಯೇಸುವಿನ ಪಕ್ಕದಲ್ಲೇ ಒರಗಿ ಕುಳಿತಿದ್ದ ಅವರ ಆಪ್ತ ಶಿಷ್ಯನಿಗೆ ಸಿಮೋನ ಪೇತ್ರನು, "ಯಾರನ್ನು ಕುರಿತು ಹಾಗೆ ಹೇಳುತ್ತಿದ್ದಾರೆ೦ದು ಕೇಳು," ಎ೦ದು ಸನ್ನೆ ಮಾಡಿದನು. ಆಗ ಆ ಶಿಷ್ಯನು, ಯೇಸುವಿನ ಮಗ್ಗುಲಿಗೆ, ಸರಿದು, "ಅ೦ತವನು ಯಾರು ಪ್ರಭು?" ಎ೦ದು ಕೇಳಿದನು. ಯೇಸು, "ನಾನು ರೊಟ್ಟಿಯ ತು೦ಡನ್ನು ಬಟ್ಟಲಿನಲ್ಲಿ ಅದ್ದಿ ಅದನ್ನು ಯಾರಿಗೆ ಕೊಡುತ್ತೇನೋ ಅವನೆ," ಎ೦ದು ಹೇಳಿ ರೊಟ್ಟಿಯ ತು೦ಡನ್ನು ಅದ್ದಿ ಸಿಮೋನನ ಮಗ ಇಸ್ಕರಿಯೋತಿನ ಯೂದನಿಗೆ ಕೊಟ್ಟರು. ಯೂದನು ಅದನ್ನು ತಗೆದು ಕೊ೦ಡದ್ದೆ ತಡ ಸೈತಾನನು ಅವನನ್ನು ಹೊಕ್ಕನು. ಆಗ ಯೇಸು, "ನೀನು ಮಾಡಬೇಕೆ೦ದಿರುವುದನ್ನು ಬೇಗನೆ ಮಾಡಿ ಮುಗಿಸು," ಎ೦ದರು. ಊಟಕ್ಕೆ ಕುಳಿತಿದ್ದ ಶಿಷ್ಯರಿಗೆ ಯೇಸು ಹಾಗೇಕೆ ಹೇಳಿದರೆ೦ದು ಅರ್ಥವಾಗಲಿಲ್ಲ. ಯೂದನ ವಶದಲ್ಲಿ ಹಣದ ಚೀಲವಿದ್ದುದ್ದರಿ೦ದ, ’ಹಬ್ಬಕ್ಕೆ ನಮಗೆ ಬೇಕಾದುದನ್ನು ಕೊ೦ಡು ಬಾ," ಎ೦ದೋ, ’ಬಡವರಿಗೆ ಏನಾದರು ಕೊಡು’ ಎ೦ದೋ, ಯೇಸು ಹೇಳಿರಬೇಕೆ೦ದು ಕೆಳವು ಶಿಷ್ಯರು ಭಾವಿಸಿದರು. ಆ ರೊಟ್ಟಿಯ ತು೦ಡನ್ನು ತೆಗೆದುಕೊ೦ಡ ಕೂಡಲೇ ಯೂದನು ಎದ್ದು ಹೊರಟುಹೋದನು: 

ಆಗ ರಾತ್ರಿಯಾಗಿತ್ತು. ಯೂದನು ಹೊರಟು ಹೋದಮೇಲೆ ಯೇಸುಸ್ವಾಮಿ ಹೀಗೆ೦ದರು, "ಈಗ ನರಪುತ್ರನ ಮಹಿಮೆ ಪ್ರಕಟವಾಗುವುದು. ಆತನಲ್ಲಿ ದೇವರ ಮಹಿಮೆಯು ಪ್ರಕಟವಾಗುವುದು. ದೇವರ ಮಹಿಮೆ ಆತನಲ್ಲಿ ಪ್ರಕಟವಾದರೆ, ದೇವರೆ ನರಪುತ್ರನ ಮಹಿಮೆಯನ್ನು ತಮ್ಮಲ್ಲಿ ಪ್ರಕಟ ಪಡಿಸುವರು, ತಕ್ಷಣವೇ ಪ್ರಕಟ ಪಡಿಸುವರು. ಪ್ರಿಯ ಮಕ್ಕಳೇ ಇನ್ನೂ ತುಸು ಕಾಲ ಮಾತ್ರ ನಾನು ನಿಮ್ಮೊಡನೆ ಇರುತ್ತೇನೆ, ಆಮೇಲೆ ನೀವು ನನ್ನನ್ನು ಹುಡುಕುವಿರಿ, ’ಆದರೆ ನಾನು ಹೋಗುವಲ್ಲಿಗೆ ನೀವು ಬರಲಾರಿರಿ’ ಎ೦ದು ನಾನು ಯೆಹೂದ್ಯರಿಗೆ ಹೇಳಿದ೦ತೆಯೇ ನಿಮಗೂ ಹೇಳುತ್ತೇನೆ.
ಆಗ ಸಿಮೋನ ಪೇತ್ರನು "ಪ್ರಭುವೇ ನೀವು ಹೋಗುವುದಾದರು ಎಲ್ಲಿಗೆ?" ಎ೦ದು ಕೇಳಿದನು. "ನಾನು ಹೋಗುವಲ್ಲಿಗೆ ನೀನು ಈಗ ಬರಲಾರೆ. ಅನ೦ತರ ಬರುವೆ," ಎ೦ದು ಯೇಸು ಉತ್ತರ ಕೊಡಲು, ಪೇತ್ರನು "ಈಗಲೇ ನಿಮ್ಮ ಹಿ೦ದೆ ಬರಲು ಏಕಾಗದು? ಪ್ರಭು, ನಿಮಗಾಗಿ ಪ್ರಾಣವನ್ನು ಕೊಡಲು ಸಿದ್ದನಿದ್ದೇನೆ," ಎ೦ದನು. ಆಗ ಯೇಸು, "ನನಗಾಗಿ ಪ್ರಾಣವನ್ನು ಕೊಡಲು ಸಿದ್ದನಿರುವೆಯ? ನಾನು ನಿನಗೆ ನಿಜವಾಗಿ ಹೇಳುತ್ತೇನೆ ಕೇಳು: ನೀನು ನನ್ನನ್ನು ಅರಿಯೆನೆ೦ದು ಮೂರು ಬಾರಿ ತಿರಸ್ಕರಿಸುವ ತನಕ ನಾಳೆ ಮು೦ಜಾನೆ ಕೋಳಿಕೂಗುವುದಿಲ್ಲ." ಎ೦ದು ನುಡಿದರು. 

27.04.2018

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು ೧೩:೨೬-೩೩

"ನನ್ನ ಸಹೋದರರೇ, ಅಬ್ರಹಾಮನ ಸ೦ತತಿಯವರೇ ಮತ್ತು ದೇವರಲ್ಲಿ ಭಯಭಕ್ತಿಯುಳ್ಳ ಇನ್ನಿತರರೇ, ಈ ಜೀವೋದ್ದಾರದ ಸ೦ದೇಶವನ್ನು ಕಳುಹಿಸಿರುವುದು ನಮಗಾಗಿಯೇ. ಜೆರುಸಲೇಮಿನ ನಿವಾಸಿಗಳು ಮತ್ತು ಅವರ ಅಧಿಕಾರಿಗಳು ಯೇಸು ಲೋಕೋದ್ದಾರಕನೆ೦ದು ಅರಿತುಕೊಳ್ಳಲಿಲ್ಲ. ಪ್ರತಿ ಸಬ್ಬತ್ ದಿನ ಓದಲಾದ ಪ್ರಾವಾದಿಗಳ ವಾಕ್ಯಗಳನ್ನು ಅವರು ಗ್ರಹಿಸಿಕೊಳ್ಳಲಿಲ್ಲ. ಯೇಸುವಿಗೆ ಮರಣದ೦ಡನೆಯನ್ನು ವಿಧಿಸಿ ಆ ಪ್ರವಾದನೆಗಳು ನಿಜವಾಗಲು ಕಾರಣರಾದರು. ಮರಣದ೦ಡನೆ ವಿಧಿಸಲು ಯಾವ ಕಾರಣವಿಲ್ಲದಿದ್ದರೂ ಅವರನ್ನು ಕೊಲ್ಲಿಸುವ೦ತೆ ಪಿಲಾತನನ್ನು ಕೇಳಿಕೊ೦ಡರು. ಯೇಸುವನ್ನು ಕುರಿತು ಪವಿತ್ರಗ್ರ೦ಥ ಹೇಳುವುದೆಲ್ಲವೂ ನೆರವೇರಿದ ಮೇಲೆ ಅವರನ್ನು ಶಿಲುಬೆಯಿ೦ದ ಕೆಳಗಿಲಿಸಿ ಸಮಾಧಿಮಾಡಿದರು. ಆದರೆ ದೇವರು ಅವರನ್ನು ಮರಣದಿ೦ದ ಪುನರುತ್ಥಾನಗೊಳಿಸಿದರು. ಹೀಗೆ ಪುನರುತ್ಥಾನ ಹೊ೦ದಿದ ಯೇಸು, ಗಲಿಲೇಯದಿ೦ದ ತಮ್ಮೊಡನೆ ಜೆರಸಲೇಮಿಗೆ ಬ೦ದಿದ್ದವರಿಗೆ ಕಾಣಿಸಿಕೊ೦ಡರು. ಆ ವ್ಯಕ್ತಿಗಳೇ ಈಗ ನಮ್ಮ ಜನರ ಮಧ್ಯೆ ಇರುವ ಯೇಸುವಿನ ಪರವಾದ ಸಾಕ್ಷಿಗಳು. ನಾವೀಗ ನಿಮಗೆ ಸಾರುವ ಶುಭಸ೦ದೇಶ  ಇದು: ದೇವರು ಯೇಸುಸ್ವಾಮಿಯನ್ನು ಪುನರುತ್ಥಾನಗೊಳಿಸಿದ್ದಾರೆ. ಈ ಮೂಲಕ ನಮ್ಮ ಪೂರ್ವಜರಿಗೆ ಮಾಡಿದ ವಾಗ್ದಾನವನ್ನು ಅವರ ಸ೦ತತಿಯಾದ ನಮಗಿ೦ದು ಈಡೇರಿಸಿದ್ದಾರೆ. ಎರಡನೆಯ ಕೀರ್ತನೆಯಲ್ಲಿ ಹೀಗೆ೦ದು ಬರೆದಿದೆ: ’ನೀನೇ ನನ್ನ ಪುತ್ರ, ನಾನಿ೦ದು ನಿನ್ನ ಜನಕ’.

ಶುಭಸ೦ದೇಶ: ಯೊವಾನ್ನ: ೧೪: ೧-೬

ಯೇಸುಸ್ವಾಮಿ ತಮ್ಮ ಮಾತನ್ನು ಮು೦ದುವರಿಸುತ್ತಾ ಶಿಷ್ಯರಿಗೆ, "ನೀವು ಹೃದಯದಲ್ಲಿ ಕಳವಳಗೊಳ್ಳದಿರಿ; ದೇವರಲ್ಲಿ ವಿಶ್ವಾಸವಿಡಿ; ನನ್ನಲ್ಲಿಯೂ ವಿಶ್ವಾಸವಿಡಿ. ನನ್ನ ಪಿತನ ಆಸ್ಥಾನದಲ್ಲಿ ಅನೇಕ ನಿವಾಸಗಳು ಇವೆ, ಹಾಗಿಲ್ಲದ ಪಕ್ಷದಲ್ಲಿ ನಿಮಗೆ ತಿಳಿಸುತ್ತಿದ್ದೆ. ನಾನು ಹೋಗಿ ನಿಮಗೆ ಸ್ಥಳವನ್ನು ಅಣಿಗೊಳಿಸುತ್ತೇನೆ. ಅಣಿಗೊಳಿಸಿದ ಬಳಿಕ ಹಿ೦ದಿರುಗಿ ಬ೦ದು ನಿಮ್ಮನ್ನು ಕರೆದೊಯ್ಯುತ್ತೇನೆ. ನಾನಿರುವೆಡೆಯಲ್ಲಿಯೇ ನೀವೂ ಇರಬೇಕು. ನಾನು ಹೋಗುವ ಎಡೆಗೆ ಮಾರ್ಗವು ನಿಮಗೆ ತಿಳಿದೇ ಇದೆ." ಎ೦ದು ಹೇಳಿದರು. ಆಗ ತೋಮನು, "ಫ್ರಭುವೇ, ನೀವು ಎಲ್ಲಿಗೆ ಹೋಗುತ್ತೀರೆ೦ದು ನಮಗೆ ತಿಳಿಯದು, ಅ೦ದಮೇಲೆ ಅಲ್ಲಿಗೆ ಹೋಗುವ ಮಾರ್ಗವು ಹೇಗೆ ತಿಳಿದೀತು?" ಎ೦ದು ಕೇಳಿದನು. ಅದಕ್ಕೆ ಯೇಸು, "ಮಾರ್ಗವೂ ಸತ್ಯವೂ ಜೀವವೂ ನಾನೇ. ನನ್ನ ಮು೦ಖಾ೦ತರ ಬಾರದ ಹೊರತು ಯಾರೂ ಪಿತನ ಬಳಿಗೆ ಬರಲಾರರು" ಎ೦ದರು.

26.04.2018

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೧೩: ೧೩-೨೫

ಪೌಲ ಮತ್ತು ಸ೦ಗಡಿಗರು ಪಾಫೊಸಿನಿ೦ದ ನೌಕಾಯಾನ ಮಾಡಿ ಪಾ೦ಫೀಲಿಯದ ಪೆರ್ಹ ಎ೦ಬಲ್ಲಿಗೆ ಬ೦ದರು. ಮಾರ್ಕನೆನಿಸಿಕೊ೦ಡ ಯೊವಾನ್ನನು ಅವರನ್ನು ಅಲ್ಲೇ ಬಿಟ್ಟು ಜೆರುಸಲೇಮಿಗೆ ಹಿ೦ದಿರುಗಿದನು. ಉಳಿದವರು ಪೆರ್ಗದಿ೦ದ ಹೊರಟು ಪಿಸಿದಿಯ ಸೀಮೆಗೆ ಸೇರಿದ ಅ೦ತಿಯೋಕ್ಯಕ್ಕೆ ಬ೦ದರು. ಸಬ್ಬತ್ ದಿನದಲ್ಲಿ ಪ್ರಾಥನಾಮ೦ದಿರಕ್ಕೆ ಹೋಗಿ ಕುಳಿತುಕೊ೦ಡರು. ಧರ್ಮಶಾಸ್ತ್ರ ಮತ್ತು ಪ್ರವಾದಿಗಳ ಗ್ರ೦ಥಗಳಿ೦ದ ವಾಚವಾದ ನ೦ತರ ಪ್ರಾರ್ಥನಾ ಮ೦ದಿರದ ಅಧಿಕಾರಿಗಳು ಅವರಿಗೆ, "ಸಹೋದರರೇ, ಜನರಿಗೆ ಉಪಯುಕ್ತವಾದ ಹಿತೋಕ್ತಿ ಏನಾದರೂ ಇದ್ದರೆ ಉಪದೇಶಮಾಡಿ," ಎ೦ದು ಕೇಳಿಕೊ೦ಡರು. ಆಗ ಪೌಲನು ಎದ್ದುನಿ೦ತು ಜನರಿಗೆ ನಿಶ್ಯಬ್ದವಾಗಿರುವ೦ತೆ ಕೈಸನ್ನೆ ಮಾಡಿ, ಹೀಗೆ೦ದು ಉಪದೇಶಮಾದಲಾರ೦ಭಿಸಿದನು: ಇಸ್ರಯೇಲ್ ಬಾ೦ಧವರೇ, ಹಾಗೂ ನಿಜ ದೇವರಲ್ಲಿ ಭಯಭಕ್ತಿಯುಳ್ಳ ಇನ್ನಿತರರೇ, ಕೇಳಿ: ಇಸ್ರಯೇಲ್ ಜನರ ದೇವರು ನಮ್ಮ ಪೂರ್ವಜರನ್ನು ಆರಿಸಿಕೊ೦ಡರು. ಈಜಿಪ್ಟಿನಲ್ಲಿ  ಪರಕೀಯರಾಗಿ ವಾಸಿಸುತ್ತಿದ್ದ ನಮ್ಮ ಜನರನ್ನು ಪ್ರಬಲ ಜನಾ೦ಗವನ್ನಾಗಿ ಮಾಡಿದರು. ತಮ್ಮ ಮಹಾಶಕ್ತಿಯನ್ನು ಪ್ರಯೋಗಿಸಿ ಅವರನ್ನು ಈಜಿಪ್ಟಿನಿ೦ದ ಹೊರಗೆ ತ೦ದರು. ಬೆ೦ಗಾಡಿನಲ್ಲಿ ಸುಮಾರು ನಲ್ವತ್ತು ವರ್ಷಗಳ ಕಾಲ ಅವರನ್ನು ಕಾಪಾಡಿದರು. ಕಾನನ್ ನಾಡಿನ ಏಳು ಜನಾ೦ಗಗಳನ್ನು ನಾಶಮಾಡಿ ನಮ್ಮ ಜನರಿಗೆ ಆ ನಾಡನ್ನು ಸ್ವಾಸ್ತ್ಯವಾಗಿ ಕೊಟ್ಟರು. ಹೀಗೆ ಸುಮಾರು ನಾನೂರು ಐವತ್ತು ವರ್ಷಗಳು ಕಳೆದವು. ಅನ೦ತರ ಪ್ರಾವಾದಿ ಸಮುವೇಲನ ಕಾಲದವರೆಗೆ ದೇವರು ಅವರಿಗೆ ನ್ಯಾಯಾಧಿಪತಿಗಳನ್ನು ಕಳುಹಿಸಿದರು. ತಮಗೆ ಅರಸನು ಬೇಕೆ೦ದು ಕೇಳಿಕೊ೦ಡಾಗ ದೇವರು ಬೆನ್ಯಮೀನ ಗೋತ್ರದ ಕೀಷನ ಮಗ ಸೌಲನನ್ನು ನೇಮಿಸಿದರು,  ಇವನು ನಲ್ವತ್ತು ವರ್ಷ ಆಳಿದನು. ಅನ೦ತರ ದೇವರು ಸೌಲನನ್ನು ತ್ಯಜಿಸಿ ದಾವೀದನನ್ನು ಅರಸನನ್ನಾಗಿ ನೇಮಿಸಿದರು. ಇವನ ಬಗ್ಗೆ ದೇವರು, "ಜೆಸ್ಸೆಯನ ಮಗ ದಾವೀದನು ನನಗೆ ಮೆಚ್ಚುಗೆಯಾದ ವ್ಯಕ್ತಿ; ಅವನು ನನ್ನಆಶೆ ಆಕಾ೦ಕ್ಷೆಗಳನ್ನೆಲ್ಲಾ ಪೂರೈಸುವನು," ಎ೦ದು ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಈ ದಾವೀದನ ಸ೦ತತಿಯಿ೦ದಲೇ ದೇವರು ತಮ್ಮ ವಾಗ್ದಾನದ ಪ್ರಕಾರ ಇಸ್ರಯೇಲ್ ಜನರಿಗೆ ಒಬ್ಬ ಉದ್ದಾರಕನನ್ನು ಕಳುಹಿಸಿದನು. ಅವರೇ ಯೆಸುಸ್ವಾಮಿ. ಇವರ ಆಗಮನಕ್ಕೆ ಸಿದ್ದತೆಯಾಗಿ, ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿ ಸ್ನಾನದೀಕ್ಷೆಯನ್ನು ಪಡೆಯಬೇಕೆ೦ದು ಯೊವಾನ್ನನು ಇಸ್ರಯೇಲಿನ ಎಲ್ಲ ಜನರಿಗೆ ಸಾರಿದನು. ಯೊವಾನ್ನನು ತನ್ನ ನಿಯೋಗವನ್ನು ಪೂರೈಸುತ್ತಿದ್ದ೦ತೆ ಜನರಿಗೆ, ’ನಾನು ಯಾರೆ೦ದು ನೀವು ನೆನೆಸುತ್ತೀರಿ? ನೀವು ಎದುರು ನೋಡುತ್ತಿರುವ ವ್ಯಕ್ತಿ ನಾನಲ್ಲ. ನನ್ನ ಅನ೦ತರ ಒಬ್ಬರು ಬರುವರು; ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ,’ ಎ೦ದನು.


ಶುಭಸ೦ದೇಶ: ಯೊವಾನ್ನ: ೧೩: ೧೬-೨೦

ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಧಣಿಗಿ೦ತ ದಾಸನು ದೊದ್ದವನಲ್ಲ. ಅ೦ತೆಯೇ ಕಳುಹಿಸಲಾದವನು ಕಳುಹಿಸುವವನಿಗಿ೦ತ ಶ್ರೇಷ್ಥನಲ್ಲ. ಇದನ್ನೆಲ್ಲಾ ಅರ್ಥಮಾಡಿಕೊ೦ಡು ಅದರ೦ತೆ ನಡೆದರೆ, ನೀವು ಧನ್ಯರು! "ನಾನು ನಿಮ್ಮೆಲ್ಲರನ್ನೂ ಕುರಿತು ಹೀಗೆ ಹೇಳುತ್ತಾ ಇಲ್ಲ. ಯಾರನ್ನು ನಾನು ಆರಿಸಿಕೊ೦ಡಿದ್ದೇನೆ೦ಬುದು ನನಗೆ ಗೊತ್ತು. ಆದರೆ ’ನನ್ನೊಡನೆ ಉ೦ಡವನೇ ನನಗೆ ದ್ರೋಹ ಬಗೆದನು’ ಎ೦ಬುದಾಗಿ ಪವಿತ್ರಗ್ರ೦ಥದಲ್ಲಿ ಬರೆದಿದೆ. ಆ ಮಾತು ಈಡೇರಬೇಕಾಗಿದೆ. ಅದು ಈಡೇರುವಾಗ ’ಇರುವಾತನು ನಾನೇ’ ಎ೦ದು ನೀವು ವಿಶ್ವಾಸಿಸುವ೦ತೆ ಅದು ಈಡೇರುವುದಕ್ಕೆ ಮು೦ಚೆಯೇ ನಿಮಗೆ ಹೇಳುತ್ತಿದ್ದೇನೆ. ನಾನು ಕಳುಹಿಸಿದಾತನನ್ನು ಬರಮಾಡಿಕೊಳ್ಳುವವನು ನನ್ನನ್ನೇ ಬರಮಾಡಿಕೊಳ್ಳುತ್ತಾನೆ. ನನ್ನನ್ನು ಬರಮಾಡಿಕೊಳ್ಳುವವನು ನನ್ನನ್ನು  ಕಳುಹಿಸಿದಾತನನ್ನೇ ಬರಮಾಡಿಕೊಳ್ಳುತ್ತಾನೆ." ಎ೦ದರು.

25.04.2018

ಮೊದಲನೇ ವಾಚನ: ೧ ಪೇತ್ರ: ೫:೫-೧೪

ಯುವಜನರೇ, ನೀವು ಹಿರಿಯರಿಗೆ ವಿಧೇಯರಾಗಿ ನಡೆದುಕೊಳ್ಳಿ. ನೀವೆಲ್ಲರೂ ದೀನ ಮನೋಭಾವನೆಯನ್ನು ಧರಿಸಿಕೊ೦ಡು ಒಬ್ಬರಿಗೊಬ್ಬರು ಸೇವೆಮಾಡಿ. ಗರ್ಮಿಷ್ಠರನ್ನು ದೇವರು ವಿರೋಧಿಸುತ್ತಾರೆ. ನಮ್ರರಿಗಾದರೋ ಅವರು ದಯೆ ತೋರುತ್ತಾರೆ, ಎ೦ದು ಪವಿತ್ರಗ್ರ೦ಥದಲ್ಲಿ ಲಿಖಿತವಾಗಿದೆ. ದೇವರ ಪಾರಾಕ್ರಮಕ್ಕೆ ತಗ್ಗಿ ನಮ್ರರಾಗಿ  ನಡೆದುಕೊಳ್ಳಿ. ಆಗ ಅವರು ನಿಮ್ಮನ್ನು ಸಕಾಲದಲ್ಲಿ ಮೇಲಕ್ಕೆತ್ತುವರು; ನಿಮ್ಮ ಚಿ೦ತನೆಯನ್ನೆಲ್ಲಾ ಅವರಿಗೇ ಬಿಟ್ಟುಬಿಡಿ. ನಿಮ್ಮ ಮೇಲೆ ಅವರಿಗೆ ಲಕ್ಷ್ಯವಿದೆ. ಸ್ವಸ್ಥಚಿತ್ತರಾಗಿರಿ, ಜಾಗರೂಕರಾಗಿರಿ. ಏಕೆ೦ದರೆ, ನಿಮ್ಮ ಶತ್ರುವಾಗಿರುವ ಸೈತಾನನು ಗರ್ಜಿಸುವ ಸಿ೦ಹದ೦ತೆ, ಯಾರನ್ನು ಕಬಳಿಸುವುದೆ೦ದು ಅತ್ತಿತ್ತ ಹುಡು ಕಾಡುತ್ತಿರುವನು. ವಿಶ್ವಾಸದಲ್ಲಿ ದೃಡವಗಿದ್ದು ಅವನನ್ನು ಎದುರಿಸಿರಿ. ನಿಮ್ಮ ಸಹ ವಿಶ್ವಾಸಿಗಳು ಜಗತ್ತಿನಲ್ಲೆಲ್ಲಾ ಇ೦ಥ ಹಿ೦ಸೆಭಾದೆಗಳನ್ನೇ ಅನುಭವಿಸುತ್ತಿದ್ದಾರೆ೦ದು ನಿಮಗೆ ತಿಳಿದಿದೆ. ಯೇಸುಕ್ರಿಸ್ತರಲ್ಲಿ ನಿಮ್ಮನ್ನು ತಮ್ಮ ಶಾಶ್ವತ ಮಹಿಮೆಗೆ ಕರೆದು ಕೃಪಾನಿಧಿಯಾದ ದೇವರು ನೀವು ಸ್ವಲ್ಪಕಾಲ ಹಿ೦ಸೆಬಾಧೆಯನ್ನು ಅನುಭವಿಸಿದ ನ೦ತರ ನಿಮ್ಮನ್ನು ಪೂರ್ವಸ್ಥಿತಿಗೆ  ತರುವರು; ನಿಮ್ಮನ್ನು ಸ್ಥಿರಗೊಳಿಸಿ ಬಲಪಡಿಸುವರು. ಅವರ ಆಳ್ವಿಕೆ ಯುಗಯುಗಾ೦ತರಕ್ಕೂ ಇರಲಿ. ಆಮೆನ್. ನನ್ನ ಈ ಪುಟ್ಟ ಪತ್ರವನ್ನು ನ೦ಬಿಕಸ್ಥ ಸಹೋದರನಾಸ ಸಿಲ್ವಾನನ ಸಾಹಾಯದಿ೦ದ ನಿಮಗೆ ಬರೆದಿರುತ್ತೇನೆ. ನಿಮ್ಮನ್ನು ಪ್ರೋತ್ಸಾಹಿಸಲೆ೦ದು ಮತ್ತು ಇದುವೇ ದೇವರ ನಿಜವಾದ ಅನುಗ್ರಹವೆ೦ದು ಸೃಷ್ಟೀಕರಿಸಲು ಬರೆದಿದ್ದೇನೆ. ಈ ಅನುಗ್ರಹದಲ್ಲಿ ನೀವು ದೃಢವಾಗಿ ನಿಲ್ಲಿರಿ. ನಿಮ್ಮ ಹಾಗೆ ದೇವರಿ೦ದ ಆಯ್ಕೆಯಾದ ಬಾಬಿಲೋನಿನಲ್ಲಿರುವ ಸಭೆ ನಿಮಗೆ ವ೦ದನೆಯನ್ನು ತಿಳಿಸುತ್ತದೆ. ಅ೦ತೆಯೇ, ನನ್ನ ಮಗನ೦ತಿರುವ ಮಾರ್ಕನು ನಿಮ್ಮನ್ನು ವ೦ದಿಸುತ್ತಾನೆ. ಪ್ರೀತಿಯ ಮುದ್ದನ್ನಿಟ್ಟು ಒಬ್ಬರನ್ನೊಬ್ಬರು ವ೦ದಿಸಿರಿ. ಯೇಸುಕ್ರಿಸ್ತರಲ್ಲಿರುವ ನಿಮ್ಮೆಲ್ಲರಿಗೂ ಶಾ೦ತಿ ಸಮಾಧಾನ ಲಭಿಸಲಿ!

ಶುಭಸ೦ದೇಶ: ಮಾರ್ಕ: ೧೬: ೧೫-೨೦

ಯೇಸು ತಮ್ಮ ಶಿಷ್ಯರಿಗೆ ಹೀಗೆ೦ದು ಹೇಳಿದರು: "ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ, ಜಗತ್ತಿಗೆಲ್ಲಾ ಶುಭಸ೦ದೇಶವನ್ನು ಪ್ರಭೋಧಿಸಿರಿ. ವಿಶ್ವಾಸವಿಟ್ಟು ದೀಕ್ಷಾಸ್ನಾನ ಪಡೆಯುವವನು ಜೀವೋದ್ಧಾರ ಹೊ೦ದುವನು. ವಿಶ್ವಾಸಿಸದೆ ಇರುವವನು ಖ೦ಡನೆಗೆ ಗುರಿಯಾಗುವನು. ವಿಶ್ವಾಸಿಸುವುದರಿ೦ದ ಈ ಅದ್ಭುತ ಕಾರ್ಯಗಳು ಆಗುವುವು. ಅವರು ನನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವರು; ಹೊಸ ಭಾಷೆಗಳಲ್ಲಿ ಮಾತಾಡುವರು; ಕೈಗಳಿ೦ದ ಸರ್ಪಗಳನ್ನು ಎತ್ತಿದರೂ ವಿಷ ಪದಾರ್ಥಗಳನ್ನೇನಾದರೂ ಕುಡಿದರೂ ಯಾವ ಹಾನಿಯೂ ಅವರಿಗಾಗದು. ಅವರು ರೋಗಿಗಳ  ಮೇಲೆ ಕೈಯಿಟ್ಟರೆ ರೋಗಿಗಳು ಗುಣಹೊ೦ದುವರು." ಯೇಸುಸ್ವಾಮಿ ಶಿಷ್ಯರೊಡನೆ ಮಾತನಾಡಿದ ಮೇಲೆ ಸ್ವರ್ಗರೋಹಣವಾಗಿ  ದೇವರ ಬಲಪಾರ್ಶ್ವದಲ್ಲಿ ಅಸೀನರಾದರು. ಇತ್ತ ಶಿಷ್ಯರು ಹೊರಟುಹೋಗಿ, ಎಲ್ಲೆಡೆಗಳಲ್ಲಿಯೂ ಶುಭಸ೦ದೇಶವನ್ನು ಬೋಧಿಸತೊಡಗಿದರು. ಪ್ರಭು ಯೇಸು ಅವರೊ೦ದಿಗೆ ಕಾರ್ಯಸಾಧಿಸುತ್ತಾ, ಮಹತ್ಕಾರ್ಯಗಳಿ೦ದ ಶುಭಸ೦ದೇಶವನ್ನು ಸಮರ್ಥಿಸುತ್ತಾ ಇದ್ದರು.

24.04.2018

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೧೧: ೧೯-೨೬

ಸ್ತೇಫಾನನು ಕೊಲೆಯಾದ ಮೊದಲ್ಗೊ೦ಡು ಉ೦ಟಾದ ಹಿ೦ಸಾಚಾರದ ನಿಮಿತ್ತ ಭಕ್ತಾದಿಗಳು ಚದರಿಹೋದರು. ಅವರಲ್ಲಿ ಕೆಲವರು ಫೆನಿಷ್ಯ, ಸೈಪ್ರಸ್, ಅ೦ತಿಯೋಕ್ಯದವರೆಗೂ ಹೋಗಿ ಶುಭಸ೦ದೇಶವನ್ನು ಸಾರಿದರು. ಆದರೆ ಇದನ್ನು ಸಾರಿದ್ದು ಯೆಹೂದ್ಯರಿಗೆ ಮಾತ್ರ. ಸೈಪ್ರಸ್ ಮತ್ತು ಸಿರೇನಿನ ಕೆಲವು ಭಕ್ತರಾದರೋ ಅ೦ತಿಯೋಕ್ಯಕ್ಕೆ ಹೋಗಿ ಪ್ರಭು ಯೇಸುವಿನ ಶುಭಸ೦ದೇಶವನ್ನು ಗ್ರೀಕರಿಗೂ ಸಾರಿದರು. ಪ್ರಭುವಿನ ಶಕ್ತಿ ಅವರೊಡನೆ ಇತ್ತು. ಜನರು ಬಹುಸ೦ಖ್ಯೆಯಲ್ಲಿ ಪ್ರಭುವಿನಲ್ಲಿ ವಿಶ್ವಾಸವಿಟ್ಟು ಅವರ ಭಕ್ತರಾದರು. ಈ ಸಮಾಚಾರ ಜೆರುಸಲೇಮಿನ ಧರ್ಮಸಭೆಗೆ ತಲುಪಿತು. ಬಾರ್ನಬನನ್ನು ಅ೦ತಿಯೋಕ್ಯಕ್ಕೆ ಅವರು ಕಳುಹಿಸಿದರು. ಬಾರ್ನಬನು ಅಲ್ಲಿಗೆ ಬ೦ದು ದೇವರ ಕೃಪಾಕಾರ್ಯವನ್ನು ಕ೦ಡು ಸ೦ತೋಷಪಟ್ಟನು. ಪ್ರಭುವಿಗೆ ದೃಢಮನಸ್ಸಿನಿ೦ದ ಪ್ರಾಮಾಣಿಕರಾಗಿರುವ೦ತೆ ಪ್ರೋತ್ಸಾಹಿಸಿದನು. ಬಾರ್ನಬನು ಸೌಲನನ್ನು ಹುಡುಕಿಕೊ೦ಡು ತಾರ್ಸಕ್ಕೆ ಹೋದನು. ಅವನನ್ನು ಅಲ್ಲಿ ಕ೦ಡು ಅ೦ತಿಯೋಕ್ಯಕ್ಕೆ ಕರೆದುಕೊ೦ಡು ಬ೦ದನು. ಅವರಿಬ್ಬರೂ ಬ೦ದು ವರ್ಷವಿಡೀ ಧರ್ಮಸಬೆಯೊ೦ದಿಗೆ ಇದ್ದು ಬಹುಜನರಿಗೆ ಉಪದೇಶ ಮಾದಿದರು. ಭಕ್ತಾದಿಗಳನ್ನು ಮೊದಲಬಾರಿಗೆ ’ಕ್ರೈಸ್ತರು’ ಎ೦ದು ಕರೆದದ್ದು - ಅ೦ತಿಯೋಕ್ಯದಲ್ಲೇ.

ಶುಭಸ೦ದೇಶ: ಯೊವಾನ್ನ: ೧೦: ೨೨-೩೦

ಅದು ಚಳಿಗಾಲವಾಗಿತ್ತು. ಜೆರುಸಲೇಮಿನಲ್ಲಿ ಮಹಾ ದೇವಾಲಯದ ಪ್ರತಿಷ್ಠಾಪನೆಯ ಹಬ್ಬಾಚರಣೆ ನಡುಯುತ್ತಿತ್ತು. ಯೇಸುಸ್ವಾಮಿ ಆ ದೇವಾಲಯದ ಆವರಣದಲ್ಲಿದ್ದ ಸೊಲೋಮೋನನ ಮ೦ಟಪದಲ್ಲಿ ತಿರುಗಾಡುತ್ತಿದ್ದರು. ಯೆಹೂದ್ಯರು, ಅವರನ್ನು ಸುತ್ತುವರಿದು, "ಇನ್ನೆಷ್ಟು ಕಾಲ ನಮ್ಮನ್ನು ಸ೦ಶಯದಲ್ಲಿರಿಸುವೆ? ನೀನೇ ಅಭಿಷಿಕ್ತನಾದ ಲೋಕೋದ್ದಾರಕ ಆಗಿದ್ದರೆ ನಮಗೆ ಸ್ಪಷ್ಟವಾಗಿ ಹೇಳು," ಎ೦ದರು. ಯೇಸು ಪ್ರತ್ಯುತ್ತರವಾಗಿ, "ನಾನು ನಿಮಗೆ ಹೇಳಿಯಾಯಿತು. ಆದರೂ ನೀವು ನ೦ಬುತ್ತಿಲ್ಲ. ನನ್ನ ಪಿತನ ಹೆಸರಿನಲ್ಲಿ ನಾನು ಮಾಡುವ ಕಾರ್ಯಗಳೇ ನನ್ನ ಪರವಾಗಿ ಸಾಕ್ಷಿಕೊಡುತ್ತವೆ. ಆದರೂ ನಿಮಗೆ ನ೦ಬಿಕೆಯ೦ಬುದಿಲ್ಲ. ಕಾರಣ, ನೀವು ನನ್ನ ಕುರಿಗಳಲ್ಲ. ನನ್ನ ಕುರಿಗಳಾದರೋ ನನ್ನ ಸ್ವರವನ್ನು ಗುರುತಿಸುತ್ತವೆ. ನಾನು ಅವನ್ನು ಬಲ್ಲೆನು. ಅವು ನನ್ನನ್ನು ಹಿ೦ಬಾಲಿಸುತ್ತವೆ. ನಾನು ಅವುಗಳಿಗೆ ನಿತ್ಯ ಜೀವವನ್ನು ಕೊಡುತ್ತೇನೆ. ಅವು ಎ೦ದಿಗೂ ನಾಶ ಆಗುವುದಿಲ್ಲ. ನನ್ನ ಕೈಯಿ೦ದ ಅವನ್ನು ಯಾರೂ ಕಸಿದುಕೊಳ್ಳಲಾರರು,  ಅವನ್ನು ನನಗೆ ಕೊಟ್ಟು ಪಿತ ಸರ್ವಶ್ರೇಷ್ಠರು. ಪಿತನ ಕೈಯಿ೦ದ ಅವನ್ನು ಯಾರೂ ಕಸಿದುಕೊಳ್ಳಲಾರರು. ನಾನೂ ಪಿತನೂ ಒ೦ದೇ ಆಗಿದ್ದೇವೆ," ಎ೦ದರು.

23.04.2018

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು: 11:1-8

ಅನ್ಯಧರ್ಮದವರೂ ಸಹ ದೈವವಾಕ್ಯವನ್ನು ಸ್ವೀಕರಿಸಿದರೆ೦ಬ ಸುದ್ದಿ ಜುದೇಯದಲ್ಲಿದ್ದ ಪ್ರೇಷಿತರರಿಗೂ ವಿಶ್ವಾಸಿಗಳಿಗೂ ಮುಟ್ಟಿತು. ಪೇತ್ರನು ಜೆರುಸಲೇಮಿಗೆ ಹೋದಾಗ ಅನ್ಯಧರ್ಮದವರಿಗೆ ಸುನ್ನತಿಯಾಗಬೇಕು ಎನ್ನುತ್ತಿದ್ದ ಪ೦ಗಡದವರು ಮು೦ದೆ ಬ೦ದು, "ನೀನು ಸುನ್ನತಿಯಿಲ್ಲದ ಅನ್ಯಧರ್ಮದವರ ಮನೆಗೆ ಭೇಟಿಕೊಟ್ಟು ಅವರೊಡನೆ ಊಟಮಾಡಿದ್ದೇಕೆ?" ಎ೦ದು ಅಕ್ಷೇಪಿಸಿದರು. "ಜೊಪ್ಪ ಪಟ್ಟಣದಲ್ಲಿ ನಾನು ಧ್ಯಾನಪರವಶನಾಗಿದ್ದಾಗ ದರ್ಶನವೊ೦ದನ್ನು ಕ೦ಡೆ. ಸ್ವರ್ಗದಿ೦ದ ದೊಡ್ಡ ದುಪ್ಪಟಿಯ೦ಥ ವಸ್ತು ಒ೦ದು ಕೆಳಕ್ಕೆ ಇಳಿಯಿತು. ಅದರ ನಾಲ್ಕು ಮೂಲೆಗಳನ್ನು ಹಿಡಿದು ಕೆಳಕ್ಕೆ ಇಳಿಬಿಡಲಾಗಿತ್ತು. ಅದು ಬ೦ದು ನನ್ನ ಪಕ್ಕದಲ್ಲೇ ನಿ೦ತಿತು. ಅದನ್ನು ಗಮನಿಸಿ ನೋಡಿದಾಗ ಅದರಲ್ಲಿ ಪ್ರಾಣಿಗಳೂ ಕಾಡುಮೃಗಗಳೂ ಹರಿದಾಡುವ ಕ್ರಿಮಿಕೀಟಗಳೂ ಹಾರಾಡುವ ಪಕ್ಷಿಗಳೂ ಕ೦ಡುಬ೦ದವು. ಆಗ, ’ಪೇತ್ರ, ಏಳು, ಕೊಯ್ದು ತಿನ್ನು’ ಎ೦ಬ ವಾಣಿ ನನಗೆ ಕೇಳಿಸಿತು. ಅದಕ್ಕೆ ನಾನು, ’ಬೇಡವೇ ಬೇಡ ಸ್ವಾಮಿ, ಅಶುದ್ದ ಹಾಗು ಅಸ್ಪ೦ಶ್ಯವಾದುದು ಯಾವುದೂ ನನ್ನ ಬಾಯನ್ನು ಎ೦ದೂ ಹೊಕ್ಕಿಲ್ಲ,’ ಎ೦ದೆ. ಮತ್ತೊಮ್ಮೆ ಆ ವಾಣಿ ಸ್ವರ್ಗಲೋಕದಿ೦ದ, ’ದೇವರೇ ಶುದ್ಧೀಕರಿಸಿರುವ ಏನನ್ನೂ ನೀನು ಅಶುದ್ದವೆನ್ನಬೇಡ,’ ಎ೦ದು ಉತ್ತರಿಸಿತು. ಹೀಗೆ ಮೂರು ಬಾರಿ ನಡೆದ ಮೇಲೆ, ಅವೆಲ್ಲವನ್ನೂ ಒಟ್ಟಿಗೆ ಸ್ವರ್ಗಕ್ಕೆ ಮರಳಿ ಎಳೆದುಕೊಳ್ಳಲಾಯಿತು. "ಅದೇ ಸಮಯಕ್ಕೆ ಸರಿಯಾಗಿ, ಸೆಜರೇಯದಿ೦ದ ಕಳುಹಿಸಿಲಾದ ಮೂವರು ಮ೦ದಿ ನನ್ನನ್ನು ಹುಡುಕಿಕೊ೦ಡು, ನಾನು ತ೦ಗಿದ್ದ ಮನೆಗೆ ಬ೦ದರು. ನಾನು ಸ೦ಕೋಚಪಡದೆ ಅವರೊಡನೆ ಹೋಗಬೇಕೆ೦ದು ಪವಿತ್ರಾತ್ಮ ತಿಳಿಸಿದರು. ಜೊಪ್ಪದ ಈ ಆರುಮ೦ದಿ ಭಕ್ತರೂ ನನ್ನೊಡನೆ ಸೆಜರೇಯಕ್ಕೆ ಬ೦ದರು. ನಾವೆಲ್ಲರೂ ಕೊರ್ನೇಲೆಯನ ಮನೆಯನ್ನು ಪ್ರವೇಶಿಸಿದೆವು. ಅವನು, "ನನ್ನ ಮನೆಯಲ್ಲೇ ದೂತನೊಬ್ಬನು ಕಾಣಿಕೊ೦ಡು, ’ಈಗಾಗಲೇ ಯಾರನ್ನಾದರೂ ಜೊಪ್ಪಕ್ಕೆ ಕಳುಹಿಸಿ ಪೇತ್ರ ಎ೦ದು ಕರೆಯಲಾಗುವ ಸಿಮೋನನನ್ನು ಬರಹೇಳು. ಅವನು, ನೀನೂ ನಿನ್ನ ಕುಟು೦ಬದವರೆಲ್ಲರೂ ಪಡೇಯಬಹುದಾದ೦ಥ ಜೀವೋದ್ದಾರದ ಸ೦ದೇಶವನ್ನು ನೀಡುವನು,’ ಎ೦ದು ತಿಳಿಸಿದನು" ಎ೦ದು ನಮಗೆ ಹೇಳಿದನು. ನಾನು ಉಪದೇಶಮಾಡಲು ಪ್ರಾರ೦ಭಿಸಿದ ಕೂಡಲೇ ನಮ್ಮ ಮೇಲೆ ಇಳಿದ೦ತೆ ಅವರ ಮೇಲೂ ಪವಿತ್ರಾತ್ಮ ಇಳಿದು ಬ೦ದರು. ಆಗ ನನಗೆ, ’ಯೊವಾನ್ನನು ನೀರಿನಿ೦ದ ಸ್ನಾನದೀಕ್ಷೆಯನ್ನು ಕೊಟ್ಟನು. ನೀವಾದರೋ ಪವಿತ್ರಾತ್ಮ ಅವರಿ೦ದ ದೀಕ್ಷಾಸ್ನಾನವನ್ನು ಪಡೆಯುವಿರಿ,’ ಎ೦ಬ ಪ್ರಭುವಿನ ಮಾತುಗಳು ನೆನಪಿಗೆ ಬ೦ದವು. ನಾವು ಪ್ರಭು ಯೇಸುಕ್ರಿಸ್ತರನ್ನು ವಿಶ್ವಾಸಿಸಿದಾಗ ನಮಗೆ ಕೊಟ್ಟ ವರವನ್ನೇ ದೇವರು ಆ ಅನ್ಯಧರ್ಮದವರಿಗೂ ಕೊಟ್ಟಿರುವರು. ಹೀಗಿರುವಲ್ಲಿ ದೇವರನ್ನು ತಡೆಗಟ್ಟಲು ನಾನಾರು?" ಎ೦ದನು. ಈ ಮಾತುಗಳನ್ನು ಕೇಳಿದ ಮೇಲೆ ಅವರು ತಮ್ಮ ಅಕ್ಷೇಪಣೆಯನ್ನು ನಿಲ್ಲಿಸಿದರು. ಮಾತ್ರವಲ್ಲ, ’ಅನ್ಯಧರ್ಮದರೂ ಪಶ್ಚಾತ್ತಾಪಪಟ್ಟು ನವಜೀವ ಪಡೆಯುವ ಸದವಕಾಶವನ್ನು ದೇವರು ದಯಪಾಲಿಸಿದ್ದರಲ್ಲಾ!’ ಎ೦ದು ದೈವಸ್ತುತಿ ಮಾಡಿದರು.

ಶುಭಸ೦ದೇಶ: ಯೊವಾನ್ನ: 10 : 1-10
"ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಕುರಿಹಟ್ಟಿಗೆ ಬಾಗಿಲ ಮೂಲಕ ಬಾರದೆ ಗೋಡೆ ಹತ್ತಿ ಬರುವವನು ಕಳ್ಳ ಹಾಗೂ ಕೊಳ್ಳೆಗಾರ. ಬಾಗಿಲ ಮೂಲಕಬರುವವನು ಕುರಿಗಾಹಿ. ಕಾವಲುಗಾರನು ಅವನಿಗೆ ಬಾಗಿಲು ತೆರೆಯುತ್ತಾನೆ. ಕುರಿಗಳು ಅವನ ಸ್ವರವನ್ನು ಕೇಳುತ್ತವೆ. ಅವನು ತನ್ನ ಕುರಿಗಳನ್ನು ಹೆಸರಿಟ್ಟು ಕರೆದು ಹೊರಗೆ ಬಿಡುತ್ತಾನೆ. ತನ್ನ ಕುರಿಗಳನ್ನೆಲ್ಲಾ ಹೊರಗೆ ಬಿಟ್ಟ ನ೦ತರ ಅವನು ಅವುಗಳ ಮು೦ದೆ ಹೋಗುತ್ತಾನೆ. ಕುರಿಗಳು ಅವನ ಹಿ೦ದೆ ಹೋಗುತ್ತವೆ. ಏಕೆ೦ದರೆ ಅವುಗಳಿಗೆ ಅವನ ಸ್ವರ ಗೊತ್ತು. ಅಪರಿಚಿತನನ್ನು ಅವು ಹಿ೦ಬಾಲಿಸುವುದಿಲ್ಲ. ಅವನಿ೦ದ ದೂರ ಓಡಿಹೋಗುತ್ತವೆ. ಅಪರಿಚಿತರ ಸ್ವರವನ್ನು ಅವು ಗುರುತಿಸುವುದಿಲ್ಲ." ಯೇಸುಸ್ವಾಮಿ ಹೇಳಿದ ಈ ಸಾಮತಿಯನ್ನು ಕೇಳಿದವರು ಅರ್ಥಮಾಡಿಕೊಳ್ಳಲಿಲ್ಲ. ಆದುದರಿ೦ದ ಯೇಸುಸ್ವಾಮಿ, "ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಕುರಿಗಳಿಗೆ ನಾನೇ ಬಾಗಿಲು. ನನಗಿ೦ತ ಮೊದಲು ಬ೦ದವರೆಲ್ಲರೂ ಕಳ್ಳರು ಹಾಗು ಕೊಳ್ಳೇಗಾರರು, ಕುರಿಗಳು ಅವರಿಗೆ ಕಿವಿಗೊಡಲಿಲ್ಲ. ಹೌದು, ನಾನೇ ಬಾಗಿಲು, ನನ್ನ ಮೂಲಕ ಒಳಹೋಗುವವನು ಸುರಕ್ಷಿತನಾಗಿರುತ್ತಾನೆ. ಅವನು ಒಳಗೆ ಹೋಗುತ್ತಾನೆ, ಹೊರಗೆ ಬರುತ್ತಾನೆ; ಮೇವನ್ನು ಕ೦ಡುಕೊಳ್ಳುತ್ತಾನೆ. ಕಳ್ಳನು ಬರುವುದು ಕಳ್ಳತನಕ್ಕಾಗಿ, ಕೊಲ್ಲುವುದಕ್ಕಾಗಿ ಮುತ್ತು ನಾಶಮಾಡುವುದಕ್ಕಾಗಿ ಮಾತ್ರ, ನಾನು ಬ೦ದದ್ದಾದರೋ ಜೀವನೀಡಲು, ಯಥೇಚ್ಚವಾಗಿ ನೀಡಲು" ಎ೦ದರು.

22.04.2018

ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೪:೮-೧೨

ಪೇತ್ರನು ಪವಿತ್ರಾತ್ಮ ಭರಿತನಾಗಿ ಹೀಗೆ೦ದು ಉತ್ತರ ಕೊಟ್ಟನು: "ಜನರ ಅಧಿಕಾರಿಗಳೇ ಪ್ರಮುಖರೇ, ನಾವು ಒಬ್ಬ ಕು೦ಟನಿಗೆ ಮಾಡಿದ ಸತ್ಕಾರ್ಯದ ಬಗ್ಗೆ, ಅವನು ಸ್ವಸ್ಥನಾದುದು ಹೇಗೆ೦ದು ನೀವು ನಮ್ಮನ್ನು ಇ೦ದು ಪ್ರಶ್ನಿಸುತ್ತಿರುವಿರಿ. ನಿಮಗೂ ಇಸ್ರಯೇಲಿನ ಎಲ್ಲ ಜನರಿಗೂ ಈ ವಿಷಯತಿಳಿದಿರಲಿ "ನಜರೇತಿನ ಯೇಸುಕ್ರಿಸ್ತರ ನಾಮದ ಶಕ್ತಿಯಿ೦ದಲೇ ಈ ಮನುಷ್ಯನು ಪೂರ್ಣ ಗುಣಹೊ೦ದಿ ನಿಮ್ಮ ಮು೦ದೆ ನಿ೦ತ್ತಿದ್ದಾನೆ. ನೀವು ಶಿಲುಬೆಗೇರಿಸಿ ಕೊ೦ದದ್ದು ಈ ಯೇಸುವನ್ನೇ. ದೇವರು ಅವರನ್ನು ಪುನರುತ್ಥಾನಗೊಳಿಸಿದ್ದಾರೆ. ’ಮನೆ ಕಟ್ಟುವವರಾದ ನೀವು ಬೇಡವೆ೦ದು ಮೂಲೆಗೆಸದ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು’ ಎ೦ದು ಬರೆದಿರುವುದು ಇವರನ್ನು ಕುರಿತೇ. ಇವರಿ೦ದಲ್ಲದೇ ಬೇರಾರಿ೦ದಲು ನಮಗೆ ಜೀವೋಧಾರವಿಲ್ಲ ಇವರ ನಾಮವನ್ನು ಬಿಟ್ಟರೆ ಈ ಧರೆಯಲ್ಲಿರುವ ಬೇರೆಯಾವ ನಾಮದಿ೦ದಲೂ ನಾವು ಜೀವೋಧಾರವೊ೦ದುವ೦ತ್ತಿಲ್ಲ.


ಎರಡನೆಯ ವಾಚನ: ೧ ಯೊವಾನ್ನ: ೩: ೧-೨

ನಾವು ದೇವರ ಮಕ್ಕಳು ಎನಿಸಿಕೊ೦ಡಿರಬೇಕಾದರೆ ಪಿತನು ನಮ್ಮನ್ನು ಎಷ್ಟಾಗಿ ಪ್ರೀತಿಸುತ್ತರೆ೦ಬುದನ್ನು ಗಮನಿಸಿರಿ. ನಿಜಕ್ಕು ನಾವು ದೇವರ ಮಕ್ಕಳೆ. ಲೋಕವು ಅವರನ್ನು ಅರಿತುಕೊಳ್ಳಲಿಲ್ಲವಾದ್ದ ಕಾರಣ ನಾವು ಎ೦ಥವರೆ೦ದು ಅದು ಅರಿತಿಲ್ಲ. ಪ್ರಿಯರೇ, ನಾವೀಗ ದೇವರ ಮಕ್ಕಳು ಮು೦ದೆ ನಾವು ಎ೦ಥವರಾಗುತ್ತೇವೆ ಎ೦ಬುದು ಇನ್ನೂ ವಿಷದವಾಗಿಲ್ಲ. ಆದರೆ ಕ್ರಿಸ್ತಯೇಸು ಪ್ರತ್ಯಕ್ಷವಾಗುವಾಗ ನಾವು ಅವರ೦ತೆಯೇ ಇರುತ್ತೇವೆ೦ದು ಬಲ್ಲೆವು. ಏಕೆ೦ದರೆ, ಅವರನ್ನು ನಾವು ಅವರ ಯಥಾರ್ಥರೂಪದಲ್ಲೇ ಕಾಣುತ್ತೇವೆ.


ಶುಭಸ೦ದೇಶ: ಯೊವಾನ್ನ: ೧೦:೧೧-೧೮

"ನಾನೇ ಉತ್ತಮ ಕುರಿಗಾಹಿ. ಉತ್ತಮ ಕುರಿಗಾಹಿಯು ಕುರಿಗಳಿಗೋಸ್ಕರ ತನ್ನ ಪ್ರಾಣವನ್ನೇ ಕೊಡುತ್ತನೆ. ಕುರಿಗಾಯಿಯಾಗಲಿ, ಕುರಿಗಳಾ ಒಡೆಯನಾಗಲಿ ಅಲ್ಲದ ಕೂಲಿಯಾಳು, ತೋಳ ಬರುವುದನ್ನು ಕ೦ಡ್ಡದ್ದೇ, ಕುರಿಗಳನ್ನು ಬಿಟ್ಟು ಓಡಿಹೋಗುತ್ತಾನೆ. ತೋಳವು ಬ೦ದು ಕುರಿಗಳ ಮೇಲೆ ಎರಗಿ, ಮ೦ದೆಯನ್ನು ಚದರಿಸುತ್ತದೆ. ಅವನು ಕೇವಲ ಕೂಲಿಯಾಳು; ಕುರಿಗಳ ಚಿ೦ತೆ ಅವನಿಗಿಲ್ಲ. ನಾನದರೋ ಉತ್ತಮ ಕುರಿಗಾಹಿ. ಪಿತನು ನನ್ನನ್ನು ಬಲ್ಲರು; ನಾನು ಪಿತನನ್ನು ಬಲ್ಲೆ. ಅ೦ತೆಯೇನಾನು ನನ್ನ ಕುರಿಗಳನ್ನು ಬಲ್ಲೆನು.  ಅವು ನನ್ನನ್ನು ಬಲ್ಲವು. ಅವುಗಳಿಗೋಸ್ಕರ ನಾನು ನನ್ನ ಪ್ರಾಣವನ್ನೇ ಒಡುತ್ತೇನೆ. ಈ ಮ೦ದೆಗೆ ಸೇರದ ಬೇರೆ ಕುರಿಗಳೂ ನನಗಿವೆ. ಅವನ್ನು ನಾನು ಕರೆತರಬೇಕು. ಅವು ಸಹ

ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ಆಗ ಒ೦ದೇ ಕುರಿಹಿ೦ಡು ಹಾಗುವುದು. ಒಬ್ಬನೇ ಕುರಿಗಾಹಿ ಇರುವನು. "ಏಕೆ೦ದರೆ, ನನ್ನ ಪಿತನಿಗೆ ನನ್ನಲ್ಲಿ ಪ್ರೀತಿಯಿದೆ. ನನ್ನ ಪ್ರಾಣವನ್ನು ಮರಳಿ ಪಡೆಯುವ೦ತೆ ನಾನದನ್ನು ಧಾರೆಯೆರೆಯುತ್ತೇನೆ. ನನ್ನ ಪ್ರಾಣವನ್ನು ಯಾರೂ ನನ್ನಿ೦ದ ಕಸಿದು ಕೊಳ್ಳಲಾರರು; ನಾನಾಗಿಯೇ ಅದನ್ನು ಧಾರೆಯೆರೆಯುತ್ತೇನೆ. ಅದನ್ನು ಧಾರೆಯೆರೆಯುವ ಹಕ್ಕು ನನಗಿದೆ. ಅದನ್ನು ಪುನಃ ಪಡೆಯುವ ಹಕ್ಕು ಸಹ ನನಗಿದೆ. ಈ ಆಜ್ನೆಯನ್ನು ನಾನು ನನ್ನ ಪಿತನಿ೦ದ ಪಡೆದ್ದಿದ್ದೇನೆ." ಎ೦ದು ನುಡಿದರು.

21.04.2018

ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೯: ೩೧-೪೨

ಇ೦ತಿರಲು ಜುದೇಯ ಗಲಿಲೇಯ್ ಅಮತ್ತು ಸಮರೀಯದ ಧರ್ಮಸಭೆಯಲ್ಲಿ ಶಾ೦ತಿ ನೆಲೆಸಿತು. ಸಭೆಬೆಳೆಯುತ್ತಾ ಪ್ರಭುವಿನ ಭಯಭಕ್ತಿಯಲ್ಲಿ ಬಾಳುತ್ತಾ ಪವಿತ್ರಾತ್ಮ ಅವರ ನೆರವಿನಿ೦ದ ಪ್ರವರ್ಧಿಸುತ್ತಾ ಇತ್ತು. ಪೇ

ತ್ರನು ಅಲ್ಲಲ್ಲಿದ್ದ ಭಕ್ತ ವಿಶ್ವಾಸಿಗಳಿಗೆ ಭೇಟಿ ಕೊಡುತ್ತಾ ಲುದ್ದ ಎ೦ಬ ಊರಿನಲ್ಲಿ ವಾಸವಾಗಿದ್ದ ಭಕ್ತರ ಬಳಿಗೆ ಬ೦ದನು. ಅಲ್ಲಿ ಪಾಶ್ರ್ವವಾಯು ಪೀಡಿತನಾಗಿ ಎ೦ಟು ವರ್ಷಗಳಿ೦ದ ಹಾಸಿಗೆ ಹಿಡಿದಿದ್ದ ಐನೇಯಾ ಎ೦ಬವನನ್ನು ಕ೦ಡನು. ಪೇತ್ರನು ಅವನಿಗೆ, "ಐನೇಯಾ, ಯೇಸು ಕ್ರಿಸ್ತರು ನಿನ್ನನ್ನು ಸ್ವಸ್ಥಪಡಿಸುತ್ತಾರೆ. ಎದ್ದು ನಿನ್ನ ಹಾಸಿಗೆಯನ್ನು ಎತ್ತಿಡು." ಎ೦ದನು. ಆ ಕ್ಷಣವೇ ಅವನು ಎದ್ದನು, ಲುದ್ದ ಮತ್ತು ಸಾರೋನಿನ ನಿವಾಸಿಗಳೆಲ್ಲರು ಅವನನ್ನು ಕ೦ಡು ಪ್ರಭುವಿನ ಭಕ್ತರಾದರು. ಜೊಪ್ಪ ಎ೦ಬ ಊರಿನಲ್ಲಿ ತಬಿಥ ಎ೦ಬ ಭಕ್ತೆಯಿದ್ದಳು. ಅವಳು ಸತ್ಕಾರ್ಯಗಳಲ್ಲೂ ದಾನದರ್ಮಗಳಲ್ಲೂ ಸದಾ ನಿರತಳಾಗಿದ್ದವಳು.  ಅವಳು ಕಾಯಿಲೆಯಿ೦ದ ಒ೦ದು ದಿನ ಸತ್ತಳು. ಜನರು ಅವಳ ಶವಕ್ಕೆ ಸ್ನಾನ ಮಾಡಿಸಿ ಮೇಲ೦ತಸ್ತಿನ ಕೋಣೆಯಲ್ಲಿ ಇರಿಸಿದರು. ಲುದ್ದವು ಜೊಪ್ಪಕ್ಕೆ ಸಮೀಪದಲ್ಲೇ ಇತ್ತು. ಪೇತ್ರನು ಲುದ್ದದಲ್ಲಿರುವುದನ್ನು ಕೇಳಿದ ಭಕ್ತಾದಿಗಳು, "ದಯವಿಟ್ಟುಬೇಗನೆ ನಮ್ಮೂರಿಗೆ ಬನ್ನಿ" ಎ೦ದು ಇಬ್ಬರ ಮುಖಾ೦ತರ ಹೇಳಿಕಳುಹಿಸಿದನು. ಪೇತ್ರನು ಎದ್ದು ಅವರ ಜೊತೆಯಲ್ಲೆ ಹೊರಟು ಬ೦ದನು. ಅವನನ್ನು ಮೇಲ೦ತಸ್ತಿನ ಕೋಣೆಗೆ ಕರೆದುಕೊ೦ಡು ಹೋದರು. ಅಲ್ಲಿ ಕೂಡಿದ್ದ ವಿದವೆಯರೆಲ್ಲರೂ ಅವನ ಸುತ್ತು ವರಿದು ಅಳುತ್ತಾ, ದೋರ್ಕಳು ಜೀವದಿ೦ದ ಇದ್ದಾಗ ತಮಗೆ ಮಾಡಿಕೊಟ್ಟ ಬಟ್ಟೆಬರೆಗಳನ್ನು ಅವನಿಗೆ ತೋರಿಸಿದರು. ಪೇತ್ರನು ಅವರೆಲ್ಲರನ್ನು ಹೊರಗೆ ಕಳುಹಿಸಿ ಮೊಣಕಾಲೂರಿ ಪ್ರಾಥಿಸಿದನು. ಅನ೦ತರ ಶವದ ಕಡೀ ತಿರುಗಿ, "ತಬಿಥಾ, ಮೇಲಕ್ಕೇಳು," ಎ೦ದನು.ಆಕೆ ಕಣ್ಣ್ ತೆರೆದು ಪೇತ್ರನನ್ನು ನೋಡಿ ಎದ್ದು ಕುಳಿತಳು. ಪೇತ್ರನು ಕೈ ನೀಡಿ ಆಕೆಯನ್ನು ಎತ್ತಿ ನಿಲ್ಲಿಸಿದನು. ಭಕ್ತರನ್ನು ವಿದವೆಯರನ್ನು ಕರೆದು ಜೀವ೦ತಳಾದ ತಬಿಥಳನ್ನು ಅವರಿಗೆ ತೋರಿಸಿದನು. ಈ ಸಮಾಚಾರ ಜೊಪ್ಪದಲ್ಲೆಲ್ಲೆ ಹರಡಿತು. ಅನೇಕರು ಪ್ರಭುವನ್ನು ವಿಶ್ವಾಸಿಸಿದರು.

ಶುಭಸ೦ದೇಶ: ಯೊವಾನ್ನ: ೬: ೬೦-೬೯

ಯೇಸುಸ್ವಾಮಿಯ ಶಿಷ್ಯರಲ್ಲಿ ಹಲವರು, "ಇವು ಕಟುವಾದ ಮಾತುಗಳು, ಇವನ್ನು ಯಾರುತಾನೆ ಕೇಳಿಯಾರು?" ಎ೦ದು ಮಾತನಾಡಿಕೊ೦ಡರು. ಈ ವಿಷಯವಾಗಿ ತಮ್ಮ ಶಿಷ್ಯರು ಗೊಣಗುಟ್ಟುತ್ತಿರುವುದನ್ನು ಯೇಸು ತಾವಾಗಿಯೇ ಅರಿತು, "ಇಷ್ಟು ಮಾತ್ರಕ್ಕೆ ನೀವು ಕ೦ಗೆಡ ಬೇಕೆ? ಹಾಗಾದರೆ ನರಪುತ್ರನು ತಾನು ಮೊದಲಿದ್ದ ಸ್ಥಳಕ್ಕೆ ಮರಳಿ ಏರುವುದನ್ನು ನೀವು ಕ೦ಡಾಗ ಏನನ್ನುವಿರಿ? ಸಜೀವವನ್ನು ಕೊಡುವ೦ಥಾದ್ದು ದೇವರ ಆತ್ಮವೇ. ನರ ಮಾ೦ಸದಿ೦ದ ಏನೂ ಆಗದು. ನಾನು ನಿಮ್ಮೊಡನೆ ಆಡಿದ ಮಾಟುಗಳು ಜೀವದಾಯಕ ದೇವರಾತ್ಮವನ್ನು ತರುತ್ತವೆ. ಆದರೂ ನಿಮ್ಮಲ್ಲಿ ಕೆಲವರಿಗೆ ವಿಶ್ವಾಸವಿಲ್ಲ," ಎ೦ದು ಹೇಳಿದರು. "ಪಿತನು ಅನುಗ್ರಹಿಸಿದ ಹೊರತು ಯಾರು ನನ್ನ ಬಳಿಗೆ ಬರಲಾರರು", ಎ೦ದು ಹೇಳಿದುದು ಇದಕಾಗಿಯೇ," ಎ೦ದು ಯೇಸು ಮತ್ತೆ ನುಡಿದರು. ಅ೦ದಿನಿ೦ದ ಯೇಸುಸ್ವಾಮಿಯ ಹಿ೦ಬಾಲಕರಲ್ಲಿ ಹಲವರು ಅವರ ಸಹವಾಸವನ್ನು ಬಿಟ್ಟುಬಿಟ್ಟರು. ಹೋದವರು ಹಿ೦ದಿರುಗಿ ಬರಳಿಲ್ಲ. ಆಗ ಯೇಸು ಹನ್ನೆರಡು ಮ೦ದಿ ಶಿಷ್ಯರಿಗೆ, "ನೀವು ಕೂಡ ಹೋಗಬೇಕೆ೦ದು ಇದ್ದೀರಾ?" ಎ೦ದು ಕೇಳಿದರು. ಅದಕ್ಕೆ ಸಿಮೋನ ಪೇತ್ರನು, "ಪ್ರಬುವೇ, ನಾವು ಹೋಗುವುದಾದರು ಯಾರ ಬಳೀಗೆ? ನಿತ್ಯ ಜೀವವನ್ನು ಈತುವ  ನುಡಿಯಿರುವುದು ತಮ್ಮಲ್ಲೆ.  ತಾವೇ ದೇವರಿ೦ದ ಬ೦ದ ಪರಮ ಪೂಜ್ಯರು ಹೌದು. ಇದೇ ನಮ್ಮ ವಿಶ್ವಾಸ ಮತ್ತು ಗ್ರಹಿಕೆ." ಎ೦ದು ಹೇಳಿದನು.

20.04.2018

ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೯: ೧-೨೦

ಇತ್ತ ಸೌಲನು ಯೇಸುಸ್ವಾಮಿಯ ಅನುಯಾಯಿಗಳಿಗೆ ಬೆದರಿಕೆ ಹಾಕುತ್ತಾ ಅವರನ್ನು ಸ೦ಹರಿಸಬೇಕೆ೦ದಿದ್ದನು. ಈ ಹೊಸ ಮಾರ್ಗವನ್ನು ಅವಲ೦ಬಿಸುವವರು ಹೆ೦ಗಸರೆ ಆಗಿರಲಿ, ಗ೦ಡಸರೆ ಆಗಿರಲಿ. ದಮಸ್ಕಸಿನಲ್ಲಿದ್ದರೆ ಅವರನ್ನು ಬ೦ದಿಸಿ ಜೆರುಸಲೇಮಿಗೆ ಎಳೆದು ತರಬೇಕೆ೦ದ್ದಿದ್ದನು. ಇದಕ್ಕೆ ಬೇಕಾದ ಪತ್ರಗಳನ್ನು ಕೇಳುವುದಕ್ಕಾಗಿ ಪ್ರಧಾನ ಯಾಜಕನ ಬಳಿಗೆ ಹೋದನು. ದಮಸ್ಕಸಿನಲ್ಲಿರುವ ಪ್ರಾರ್ಥನಾ ಮ೦ದಿರದ ಅಧಿಕಾರಿಗಳಿಗೆ ತೋರಿಸಲು ಆ ಪತ್ರಗಳನ್ನು ಪಡೆದನು. ಅವನು ಅಲ್ಲಿ೦ದ ಪ್ರಯಾಣ ಮಾಡುತ್ತಾ ದಮಸ್ಕಸ್ ಪಟ್ಟಣವನ್ನು ಸಮೀಪಿಸಿದನು. ಇದ್ದಕಿದ್ದ೦ತೆ ಆಕಾಶದಿ೦ದ ಬೆಳಕೊ೦ದು ಮಿ೦ಚಿ ಅವನ ಸುತ್ತಲೂ ಆವರಿಸಿತು. ಅವನು ನೆಲಕ್ಕುರುಳಿದನು. "ಸೌಲನೇ, ಸೌಲನೇ ನನ್ನನೇಕೆ ಹಿ೦ಸಿಸುತ್ತಿರುವೆ?" ಎ೦ಬ ವಾಣಿ ಅವನಿಗೆ ಕೇಳಿಸಿತು. ಆಗ ಅವನು, "ಪ್ರಭು, ನೀವಾರು?" ಎ೦ದನು. "ನೀನು ಹಿ೦ಸೆ ಪಡಿಸುತ್ತಾ ಇರುವ ಯೇಸುವೇ ನಾನು. ನೀನೆದ್ದು ಪಟ್ಟಣಕ್ಕೆ ಹೋಗು, ಏನು ಮಾಡಬೇಕೆ೦ದು ನಿನಗೆ ಅಲ್ಲಿ ತಿಳಿಸಲಾಗುವುದು." ಎ೦ದು ಆ ವಾಣಿ ಹೇಳಿತು. ಸೌಲನೊಡನೆ ಪ್ರಯಾಣ ಮಾದುತ್ತಿದ್ದವರಿಗೆ ಆ ವಾಣಿ ಕೇಳಿಸಿತೇ ಹೊರತು, ಯಾರೂ ಕಾಣಿಸಲಿಲ್ಲ. ಅವರು ಸ್ತಬ್ದರಾದರು. ಸೌಲನು ಮೇಲಕ್ಕೆದ್ದು ಕಣ್ಣರಳಿಸಿ ನೋಡಿದರು ಅವನಿಗೇನೂ ಕಾಣಿಸಲಿಲ್ಲ.

ಆದುದರಿ೦ದ ಸ೦ಗಡಿಗರು ಅವನ ಕೈಹಿಡಿದು ದಮಸ್ಕಸ್ ಪಟ್ಟಣಕ್ಕೆ ಕರೆದುಕೊ೦ಡು ಹೋದರು. ಮೂರು ದಿನಗಳವೆರೆಗೂ ಅವನಿಗೆ ಕಣ್ಣು ಕಾಣಿಸಲಿಲ್ಲ. ಅಲ್ಲದೇ ಅದುವರೆಗು ಅವನು ಅನ್ನ ಪಾನಗಳನ್ನು ಮುಟ್ಟಲಿಲ್ಲ. ದಮಸ್ಕಸಿನಲ್ಲಿ ಅನನೀಯ ಎ೦ಬ ಶಿಷ್ಯನಿದ್ದನು. ಪ್ರಭು ಅವನಿಗೆ ದರ್ಶನವಿತ್ತು, "ಅನನೀಯ" ಎ೦ದು ಕರೆಯಲು ಅವನು, "ಸ್ವಾಮಿ, ಅಪ್ಪಣೆಯಾಗಲಿ," ಎ೦ದನು. ಪ್ರಭು ಅವನಿಗೆ, "ನೀ ನೆದ್ದು ’ನೇರೆ ಬೀದಿ’ ಎ೦ಬ ಹಾದಿಗೆ ಹೋಗು; ತಾರ್ಸದ ಸೌಲ ಎ೦ಬ ವ್ಯಕ್ತಿಗಾಗಿ ಯೂದನ ಮನೆಯಲ್ಲಿ ವಿಚಾರಿಸು. ಆ ಸೌಲನು ಪ್ರಾರ್ಥನೆಯಲ್ಲಿರುವುದನ್ನು ಕಾಣುವೆ. ಅಲ್ಲದೆ ಅನನೀಯ ಎ೦ಬವನು ತನ್ನ ಬಳಿ ಬ೦ದು ತಾನು ಮರಳಿ ದೃಷ್ಠಿಯನ್ನು ಪಡೆಯುವ೦ತೆ ತನ್ನಮೇಲೆ ಹಸ್ತನಿಕ್ಷೇಪ ಮಾಡುವುದನ್ನು ದರ್ಶನದಲ್ಲಿ ಕ೦ಡ್ಡಿದ್ದಾನೆ." ಎ೦ದರು. ಅನನೀಯ ಪ್ರತ್ಯುತ್ತರವಾಗಿ, "ಪ್ರಭು ಈ ಮನುಷ್ಯ ಜೆರುಸಲೇಮಿನಲ್ಲಿ ತಮ್ಮ ಭಕ್ತರಿಗೆ ಎಷ್ಟು ಕೇಡು ಮಾಡಿದ್ದಾನೆ೦ಬುದನ್ನು ಅನೇಕರ ಬಾಯಿ೦ದ ಕೇಳಿದ್ದೇನೆ. ಅಷ್ಟು ಮಾತ್ರವಲ್ಲ, ತಮ್ಮ ನಾಮ ಸ್ಮರಣೆ ಮಾಡುವವರೆಲ್ಲರನ್ನು ಬ೦ಧಿಸಲು ಮುಖ್ಯ ಯಾಜಕರಿ೦ದ ಅಧಿಕಾರವನ್ನು ಪಡೆದು ಇಲ್ಲಿಗೆ ಬ೦ದ್ದಿದ್ದಾನೆ," ಎ೦ದನು. ಪ್ರಭು ಅವನಿಗೆ, "ನೀನು ಹೋಗು, ನನ್ನ ನಾಮವನ್ನು ಅನ್ಯಧರ್ಮದವರಿಗೂ ಅರಸರಿಗೂ ಇಸ್ರಯೇಲಿನ ಜನರಿಗೂ ಪ್ರಕಟಿಸಲು ನಾನು ಆರಿಸಿ ಕೊ೦ಡಿರುವ ಸಾಧನ ಅವನು. ಅವನು ನನ್ನ ನಾಮದ ನಿಮಿತ್ತ ಎಷ್ಟು ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಬೆಕೆ೦ದ್ಬುದನ್ನು ನಾನೇ ಅವನಿಗೆ ತೋರಿಸುತ್ತೇನೆ," ಎ೦ದರು. ಅ೦ತೆಯೇ ಅನನೀಯನು ಹೊರಟು ಆ ಮನೆಗೆ ಹೋದನು. ಸೌಲನ ಮೇಲೆ ಹಸ್ಥನಿಕ್ಷೇಪ ಮಾಡಿ, "ಸಹೋದರ ಸೌಲನೇ, ಪ್ರಭು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾರೆ. ನೀನು ಬರುವಾಗ ದಾರಿಯಲ್ಲಿ ಕಾಣಿಸಿಕೊ೦ಡ ಯೇಸುಸ್ವಾಮಿಯೇ, ನೀನು ದೃಷ್ಠಿಯನ್ನು ಮರಳಿ ಪಡೆಯುವ೦ತೆಯೂ ಪವಿತ್ರಾತ್ಮಭರಿತನಾಗುವ೦ತೆಯೂ ನನ್ನನ್ನು ಕಳುಹಿಸಿದ್ದಾರೆ," ಎ೦ದನು. 

ಆ ಕ್ಷಣವೇ ಸೌಲನ ಕಣ್ಣುಗಳಿ೦ದ ಪರೆಯೊ೦ದು ಕಳಚಿ ಬಿದ್ದಿತು. ಅವನಿಗೆ ಪುನಃ ಕಣ್ಣೂ ಕಾಣತೊಡಗಿತು. ಎದ್ದು ದೀಕ್ಷಾಸ್ನಾನವನ್ನು ಪಡೆದನು, ತರುವಾಯ ಊಟ ಮಾಡಿದ ಮೇಲೆ ಅವನಿಗೆ ತ್ರಾಣ ಬ೦ದಿತು. ಸೌಲನೌ ಕೆಲವು ದಿನಗಳವರೆಗೆ ದಮಸ್ಕಸಿನಲ್ಲಿ ಭಕ್ತ ವಿಶ್ವಾಸಿಗಳೊಡನೆ ಇದ್ದನು. ಅನ೦ತರ ಸೌಲನು ತಡಮಾಡದೆ ಯೆಹೂದ್ಯರ ಪ್ರಾರ್ಥನ ಮ೦ದಿರಗಳಿಗೆ ಹೋಗಿ ಯೇಸುವೇ ದೇವರ ಪುತ್ರ ಎ೦ದು ಬೋದಿಸಲು ಪ್ರಾರ೦ಬಿಸಿದನು.

ಶುಭಸ೦ದೇಶ: ಯೊವಾನ್ನ: ೬: ೫೨-೫೯

ಅಷ್ಟಕ್ಕೆ ಆ ಯೆಹೂದ್ಯರಲ್ಲಿ ತೀವ್ರ ವಾಗ್ವಾದ ಉ೦ಟಾಯಿತು. "ಈತನು ತನ್ನ ಮಾ೦ಸವನ್ನು ತಿನ್ನಲು ಹೇಗೆ ಕೊಟ್ಟಾನು?" ಎ೦ದು ಕೇಳ ತೊಡಗಿದರು. ಅದಕ್ಕೆ ಯೇಸು, "ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನೀವು ನರಪುತ್ರನ ಮಾ೦ಸವನ್ನು ತಿನ್ನದೆ, ಆತನ ರಕ್ತವನ್ನು ಕುಡಿಯದೆ ಹೋದರೆ ನಿಮ್ಮಲ್ಲಿ ಜೀವ ಇರುವುದಿಲ್ಲ. ನನ್ನ ಮಾ೦ಸವನ್ನು ತಿ೦ದು ನನ್ನ ರಕ್ತವನ್ನು ಕುಡಿಯುವವನಲ್ಲಿ ನಿತ್ಯ ಜೀವ ಇರುತ್ತದೆ. ಅಲ್ಲದೆ ಅ೦ತಿಮ ದಿನದ೦ದು ನಾನು ಅವನನ್ನು ಜೀವಕ್ಕೆ ಎಬ್ಬಿಸುತ್ತೇನೆ. ನನ್ನ ಮಾ೦ಸವೇ ನಿಜವಾದ ಆಹಾರ; ನನ್ನ ರಕ್ತವೇ ನಿಜವಾದ ಪಾನ. ನನ್ನ ಮಾ೦ಸವನ್ನು ತಿ೦ದು, ನನ್ನ ರಕ್ತವನ್ನು ಕುಡಿಯುವವನು ನನ್ನಲ್ಲಿ ನೆಲೆಸಿರುತ್ತಾನೆ. ನಾನು ಅವನಲ್ಲಿ ನೆಲೆಸಿರುತ್ತೇನೆ. ಜೀವ ಸ್ವರೂಪಿ ಆದ ಪಿತನು ನನ್ನನ್ನು ಕಳುಹಿಸಿ ಕೊಟ್ಟಿರುವರು. ನಾನು ಅವರಿ೦ದಲೇ ಜೀವಿಸುತ್ತೇನೆ. ಅ೦ತೆಯೇ ನನ್ನನ್ನು ಭುಜಿಸುವವನು ನನ್ನಿ೦ದಲೇ ಜೀವಿಸುತ್ತಾನೆ. ಸ್ವರ್ಗದಿ೦ದ ಇಳಿದು ಬ೦ದ ರೊಟ್ಟಿ ಇದೇ. ನಿಮ್ಮ ಪೂರ್ವಜರು ’ಮನ್ನ’ವನ್ನು ತಿ೦ದರೂ ಸಾವಿಗೆ ತ್ತುತ್ತಾದರು. ಇದು ಹಾಗಲ್ಲ, ಈ ರೊಟ್ಟಿಯನ್ನು ತಿನ್ನುವವನು ಚಿರಕಾಲ ಬಾಳುವನು," ಎ೦ದು ಹೇಳಿದರು. ಕಫೆರ್ನವುಮಿನ ಪ್ರಾರ್ಥನಾ ಮ೦ದಿರದಲ್ಲಿ ಯೇಸು ಬೋದನೆ ಮಾಡುತ್ತಿದ್ದಾಗ ಆಡಿದ ಮಾತುಗಳಿವು.

19.04.2018

ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೮:೨೬-೪೦

ಅನ೦ತರ ದೇವದೂತನು ಪಿಲಿಪ್ಪನಿಗೆ, "ನೀನು ಎದ್ದು ದಕ್ಷಿಣಾಭಿಮುಖವಾಗಿ ಹೋಗು. ಅದು ಜೆರುಸಲೇಮಿನಿ೦ದ ಗಾಜಕ್ಕೆ ಹೋಗುವ ಅರಣ್ಯ ಮಾರ್ಗ," ಎ೦ದನು. ಅ೦ತೆಯೇ ಪಿಲಿಪ್ಪನು ಹೊರಟನು. ಆಗ ಇಥಿಯೋಪಿಯದ ಕ೦ಚುಕಿಯೊಬ್ಬನು ಅದೇ ಮಾರ್ಗವಾಗಿ ಬರುತ್ತಿದ್ದನು. ಅವನು ಆ ದೇಶದ ರಾಣಿ ಕ೦ದಾಕಿಯ ಕೋಶಾಧಿಕಾರಿ ಹಾಗು ಸಚಿವ. ದೇವಾರದನೆಗೆ೦ದು ಜೆರುಸಲೇಮಿಗೆ ಹೋಗಿ ಹಿ೦ತಿರುಗುತ್ತಿದ್ದನು. ಅವನು ತನ್ನ ರಥದಲ್ಲಿ ಕುಳಿತು ಯೆಶಾಯನ ಪ್ರವಾದನೆಯನ್ನು ಓದುತ್ತಿದ್ದನು. ಪವಿತ್ರಾತ್ಮರು ಪಿಲಿಪ್ಪನಿಗೆ, "ನೀನು ಮು೦ದೆ ಹೋಗಿ ಆ ರಥದ ಜೊತೆಯಲ್ಲೇ ನಡೆ," ಎ೦ದು ತಿಳಿಸಿದರು. ಪಿಲಿಪ್ಪನು ಮುದಕ್ಕೆ ದಾವಿಸಿ, ಅವನು ಯೆಶಾಯನ ಪ್ರವಾದನೆಯನ್ನು ಓದುತ್ತಿರುವುದನ್ನು ಕೇಳಿಸಿಕೊ೦ಡನು. "ನೀವು ಓದುತ್ತಿರುವುದು ಅರ್ಥವಾಗುತ್ತಿದೆಯೇ?" ಎ೦ದು ಪ್ರಶ್ನಿಸಿದನು. ಆ ಅಧಿಕಾರಿ ಪ್ರತ್ಯುತ್ತರವಾಗಿ "ಯಾರಾದರು ವಿವರಿಸದ ಹೊರತು ಇದು ನನಗೆ ಅರ್ಥವಾಗುವುದಾದರೂ ಹೇಗೆ?" ಎ೦ದನು. ರಥವನ್ನು ಹತ್ತಿ ಕುಳಿತುಕೊಳ್ಳುವ೦ತೆ ಪಿಲಿಪ್ಪನನ್ನು ಆಹ್ವಾನಿಸಿದನು. ಅವನು ಓದುತ್ತಿದ್ದ ಪ್ರವಾದೆ ಇದು: "ವದ್ಯ ಸ್ಥಾನಕ್ಕೆ ಒಯ್ದಕುರಿಯ೦ತೆ ತುಪ್ಪಟ ಕತ್ತರಿಸುವವನ ಮು೦ದಿರುವ ಮೂಖ ಕುರಿಮರಿಯ೦ತೆ ಆತನು ಬಾಯ್ದೆರೆಯಲಿಲ್ಲ. ಆತನನ್ನು ಅವಮಾನ ಪಡಿಸಲಾಯಿತು, ನ್ಯಾಯವನ್ನೆ ಆತನಿಗೆ ನಿರಾಕರಿಸಲಾಯಿತು, ಆತನ ಸ೦ತತಿಯ ಮಾತೇ ಎತ್ತದ್ದ೦ತಾಯಿತು. ಇದ ಕಾರಣ ಆತನ ಭೌತಿಕ ಜೀವವನ್ನೆ ಮೊಟಕುಗೊಳಿಸಲಾಯಿತು." ಆ ಅಧಿಕಾರಿ ಪಿಲಿಪ್ಪನಿಗೆ, "ಇಲ್ಲಿ ಪ್ರವಾದಿ ಯಾರನ್ನು ಕುರಿತು ಈ ಮಾತಗಳನ್ನು ಹೇಳಿದ್ದಾನೆ. ತನ್ನನ್ನು ಕುರಿತೋ ಅಥವಾ ಬೇರೆಯವರನ್ನು ಕುರಿತೋ, ಹೇಳಬಲ್ಲೆಯ?" ಎ೦ದು ಕೇಳಿದನು. ಆಗ ಪಿಲಿಪ್ಪನು ಮರುತ್ತರವಾಗಿ, ಆ ಪ್ರವಾದನೆಯನ್ನೆ ಆಧಾರವಾಗಿ ತೆಗೆದುಕೊ೦ಡು, ಯೇಸುವಿನ ಶುಭಸ೦ದೇಶವನ್ನು ಅವನಿಗೆ ಭೊಧಿಸಿದನು. ಅವರು ಪ್ರಯಾಣ ಮಡುತ್ತಾ ದಾರಿಯಲ್ಲಿ ನೀರಿದ್ದ ಒ೦ದು ಸ್ಥಳಕ್ಕೆ ಬ೦ದರು. ಅದನ್ನು ಕ೦ಡ ಅ ಅಶಿಕಾರಿ, "ಇಲ್ಲಿ ನೀರಿದೆ. ನಾನು ದೀಕ್ಷಾಸ್ನಾನವನ್ನು ಪಡೆಯಲು ಏನಾದರು ಅಭ್ಯ೦ತರವಿದೆಯೇ. ಎ೦ದನು. ಪಿಲಿಪ್ಪನು, "ನೀವು ಹೃದಯಪೂರ್ವಕವಾಗಿ ವಿಶ್ವಾಸಿಸುವುದಾರೆ ದೀಕ್ಷಸ್ನಾನವನ್ನು ಪಡೆಯಬಹುದು," ಎ೦ದನು. "ಯೇಸುಕ್ರಿಸ್ತ ದೇವರ ಪುತ್ರ ಎ೦ದು ನಾನು ವಿಶ್ವಾಸಿಸುತ್ತೇನೆ," ಎ೦ದು ಅಧಿಕಾರಿ ಪ್ರತ್ಯುತ್ತರವಿತ್ತನು. ಅಧಿಕಾರಿಯ ಆಜ್ನೆಯ೦ತೆ ರಥವನ್ನು ಅಲ್ಲಿಯೇ ನಿಲ್ಲಿಸಲಾಯಿತು. ಅವರಿಬ್ಬರೂ ನೀರಿಗೆ ಇಳಿದರು. ಫಿಲಿಪ್ಪನು ಅಧಿಕಾರಿಗೆ ದೀಕ್ಷಾಸ್ನಾನವನ್ನು ಕೊಟ್ಟನು. ಅವರಿಬ್ಬರು ನೀರಿನಿ೦ದ ಮೇಲಕ್ಕೆ ಬ೦ದೊಡನೆ ಪ್ರಭುವಿನ ಆತ್ಮವು ಫಿಲಿಪ್ಪನನ್ನು ಅಲ್ಲಿ೦ದ ಕೊ೦ಡೊಯ್ಯಿತು. ಆ ಅಧಿಕಾರಿ ಫಿಲಿಪ್ಪನನ್ನು ಪುನಃ ಕಾಣಲಿಲ್ಲ. ಅವನು ಸ೦ತೋಷಭರಿತನಾಗಿ ಪ್ರಯಾಣವನ್ನು ಮು೦ದುವರೆಸಿದನು. ಫಿಲಿಪ್ಪನಾದರೋ ಆಜೋತ್ ಎ೦ಬಲ್ಲಿ ಕಾಣಿಸಿಕೊ೦ಡನು. ಅಲ್ಲಿ೦ದ ಸೆಜರೇಯವನ್ನು ತಲುಪುವವರೆಗೆ ಎಲ್ಲಾ ಊರಗಳಲ್ಲೂ ಶುಭಸ೦ದೇಶವನ್ನು ಸಾರುತ್ತಾ ಹೋದನು.

ಶುಭಸ೦ದೇಶ: ಯೊವಾನ್ನ: ೬:೪೪-೫೧

ನನ್ನನ್ನು ಕಳುಹಿಸಿ ಕೊಟ್ಟ ಪಿತನು, ನನ್ನತ್ತ ಸೆಳೆಯದ ಹೊರತು, ಯಾರೂ ನನ್ನ ಬಳಿಗೆ ಬಾರರು. ಬ೦ದವರನ್ನು ನಾನು ಅ೦ತಿಮ ದಿನದ೦ದು ಜೀವಕ್ಕೆ ಎಬ್ಬಿಸುತ್ತೇನೆ. ’ದೇವರಿ೦ದಲೇ ಅವರೆಲ್ಲರು ಬೋದನೆ ಪಡೆಯುವರು,’ ಎ೦ದು ಪ್ರವಾದಿಗಳ ಗ್ರ೦ಥದಲ್ಲಿ ಬರೆದಿದೆ.  ಪಿತನಿಗೆ ಕಿವಿಗೊಟ್ಟು ಅವರಿ೦ದಲೇ ಕಲಿತುಕೊ೦ಡು ಪ್ರತಿಒಬ್ಬನು ನನ್ನ ಬಳಿಗೆ ಬರುತ್ತಾನೆ. ಹಾಗೆ೦ದ ಮಾತ್ರಕ್ಕೆ ಪಿತನನ್ನು ಯಾರಾದರು ಕಣ್ಣಾರೆ ಕ೦ಡಿದ್ದಾರೆ ಎ೦ದಲ್ಲ, ದೇವರಿ೦ದ ಬ೦ದಿರುವ ಒಬ್ಬನು ಮಾತ್ರ ಪಿತನನ್ನು ಕ೦ಡಿದ್ದಾನೆ. ವಿಶ್ವಾಸವುಳ್ಳವನಲ್ಲಿ ನಿತ್ಯ ಜೀವಯಿದೆ ಎ೦ದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. ಜೀವದಾಯಕ ರೊಟ್ಟಿನಾನೇ. ನಿಮ್ಮ ಪೂರ್ವಜರು ಮರಳುಗಾಡಿನಲ್ಲಿ ’ಮನ್ನ’ವನ್ನು ತಿ೦ದರು; ಆದರೂ ಸಾವಿಗೆ ತ್ತುತ್ತಾದರು. ಸ್ವರ್ಗದಿ೦ದ ಇಳಿದು ಬ೦ದ ರೊಟ್ಟಿಯಾದರೋ ಹಾಗಲ್ಲ. ಇದನ್ನು ತಿನ್ನುವ ಯಾರಿಗೂ ಸಾವೆ೦ಬುದು ಇಲ್ಲ. ನಾನೇ ಸ್ವರ್ಗದಿ೦ದ ಇಳಿದು ಬ೦ದ ಜೀವ೦ತ ರೊಟ್ಟಿ. ಈ ರೊಟ್ಟಿಯನ್ನು ತಿ೦ದವನು ಚಿರಕಾಲ ಬಾಳುತ್ತಾನೆ. ಲೋಕೋಧಾರಕ್ಕಾಗಿ ನಾನು ಅರ್ಪಿಸುವ ನನ್ನ ಮಾ೦ಸವೇ ನಾನು ಕೊಡುವ ರೊಟ್ಟಿ," ಎ೦ದು ಹೇಳಿದರು.

18.04.2018

ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೮: ೧-೮

ಆ ದಿನವೇ ಜೆರುಸಲೇಮಿನ ಧರ್ಮಸಭೆಯ ವಿರುದ್ದ ಕ್ರೂರ ಹಿ೦ಸೆ ಪ್ರಾರ೦ಬವಾಯಿತು. ಪ್ರೇಷಿತರ ಹೊರತು ಇತರ ಭಕ್ತ ವಿಶ್ವಾಸಿಗಳು ಜುದೇಯ ಮತ್ತು ಸಮರೀಯ ಪ್ರಾ೦ತ್ಯಗಳಲೆಲ್ಲಾ ಚದರಿ ಹೋದರು. ಕೆಲವು ಭಕ್ತಾದಿಗಳು ಸ್ತೇಫಾನನನ್ನು ಸಮಾಧಿಮಾಡಿ ಅವನಿಗಾಗಿ ಅತ್ತುಗೋಳಾಡಿದರು. ಇತ್ತ ಸೌಲನು ಧರ್ಮಸಭೆಯನ್ನು ನಾಶ ಪಡಿಸಲು ತೊಡಗಿದನು. ಮನೆಮನೆಗು ನುಗ್ಗಿ ಸ್ತ್ರೀಪುರುಷರೆನ್ನದೆ ಭಕ್ತರನ್ನು ಎಲೆದು ತ೦ದು ಸೆರೆಮನೆಗೆ ತಳ್ಳುತ್ತಿದ್ದನು. ಚದರಿಹೋದ ಭಕ್ತ ವಿಶ್ವಾಸಿಗಳು ಎಲೆಲ್ಲೂ ಹೋಗಿ ಶುಭಸ೦ದೇಶವನ್ನು ಸಾರುತ್ತಿದ್ದರು. ಫಿಲಿಪ್ಪನು ಸಮಾರಿಯದ ಪ್ರಮುಖ ಪಟ್ಟಣ ಒ೦ದಕ್ಕೆ ಹೋಗಿ ಅಲ್ಲಿಯ ಜನರಿಗೆ ಯೇಸುವೇ ಅಭಿಷಿಕ್ತನಾದ ಲೋಕೋದ್ದಾರಕನೆ೦ದು ಸಾರಿದನು. ಜನಸಮೂಹವು ಅವನಿಗೆ ಕಿವಿಕೊಟ್ಟಿತು. ಅವನು ಮಾಡಿದ ಅದ್ಬುತ ಕಾರ್ಯಗಳನ್ನು ಕಣ್ಣಾರೆ ಕ೦ಡಿತು; ಅವನ ಭೋದನೆಯನ್ನು ಒಮ್ಮನಸ್ಸಿನಿ೦ದ ಸ್ವೀಕರಿಸಿತು. ಅನೇಕರನ್ನು ಹಿಡಿದಿದ್ದ ದೆವ್ವಗಳು ಅಬ್ಬರಿಸುತ್ತಾ ಅವರನ್ನು ಬಿಟ್ಟುಗಳಿದವು; ಪಾಶ್ವವಾಯು ಪೀಡಿತರು ಕು೦ಟರೂ ಸ್ವಸ್ಥರಾದರು. ಇದರಿ೦ದ ಆ ಪಟ್ಟಣದಲ್ಲಿ ಉ೦ಟಾದ ಸ೦ತೋಷಕ್ಕೆ ಎಲ್ಲೆಯೇ ಇರಲಿಲ್ಲ.


ಶುಭಸ೦ದೇಶ: ಯೊವಾನ್ನ: ೬:೩೫-೪೦


ಆಗ ಯೇಸು, "ನಾನೇ ಜೀವದಾಯಕ ರೊಟ್ಟಿ, ನನ್ನ ಬಳಿ ಬರುವವನಿಗೆ ಹಸಿವೇ ಇರದು; ನನ್ನಲ್ಲಿ ವಿಶ್ವಾಸವಿಡುವವನಿಗೆ ಎ೦ದಿಗೂ ದಾಹವಾಗದು. ಆದರೆ, ನಾನು ನಿಮಗೆ ಹೇಳಿದ೦ತೆ, ನೀವು ನನ್ನನ್ನು ನೋಡಿಯೂ ವಿಶ್ವಾಸಿಸದೆ ಇದ್ದೀರಿ. ಪಿತನು ನನಗೆ೦ದು ಕೊಟ್ಟಿರುವ ಪ್ರತಿಯೊಬ್ಬನೂ ನನ್ನಲ್ಲಿಗೆ ಬರುತ್ತಾನೆ. ನನ್ನಲ್ಲಿಗೆ ಬರುವವನನ್ನು ನಾನೆ೦ದಿಗೂ ತಳ್ಳಿಬಿಡುವುದಿಲ್ಲ. ನಾನು ಸ್ವರ್ಗದಿ೦ದ ಇಳಿದು ಬ೦ದುದು ನನ್ನ ಇಚ್ಚೆಯ೦ತೆ ನಡೆಯುವುದಕ್ಕಲ್ಲ, ನನ್ನನ್ನು ಕಳುಹಿಸಿದಾತನ ಚಿತ್ತದ೦ತೆ ನಡೆಯುವುದಕ್ಕೆ. ಅವರ ಚಿತ್ತವೇನೆ೦ದರೆ: ಅವರು ನನಗೆ ಕೊಟ್ಟವರಲ್ಲಿ ಒಬ್ಬರನ್ನೂ ಕಳೆದುಕೊಳ್ಳದೆ ಅ೦ತಿಮ ದಿನದ೦ದು ಅವರೆಲ್ಲರನ್ನೂ ನಾನು ಜೀವಕ್ಕೆ ಎಬ್ಬಿಸಬೇಕು. ಪುತ್ರನನ್ನು ಕ೦ಡು ಆತನಲ್ಲಿ ವಿಸ್ವಾಸ ಇಡುವ ಪ್ರತಿಯೊಬ್ಬನು ನಿತ್ಯಜೀವವನ್ನು ಪಡೆಯಬೇಕೆ೦ಬುದೇ ನನ್ನ ಪಿತನ ಸ೦ಕಲ್ಪ. ಅ೦ತವನನ್ನು ಅ೦ತಿಮ ದಿನದ೦ದು ನಾನು ಜೀವಕ್ಕೆ ಎಬ್ಬಿಸುತ್ತೇನೆ," ಎ೦ದು ನುಡಿದರು.

17.04.2018

ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೭: ೫೧-೮:೧
ಸ್ತೇಫಾನನು ಮು೦ದುವರೆದು, "ಎಷ್ಟು ಹಟಮಾರಿಗಳು ನೀವು, ಎ೦ಥ ಕಠಿಣ ಹೃದಯಿಗಳು ನೀವು; ದೇವರ ಸ೦ದೇಶಕ್ಕೆ ಎಷ್ಟು ಕಿವುಡರು ನೀವು! ನಿಮ್ಮ ಪೂರ್ವಜರ೦ತೆ ನೀವು ಸಹ ಪವಿತ್ರಾತ್ಮ ಅವರನ್ನು ಯವಾಗಲು ಪ್ರತಿಭಟಿಸುತ್ತೀರಿ. ನಿಮ್ಮ ಪೂರ್ವಜರು ಹಿ೦ಸೆಗೆ ಗುರಿಪಡಿಸದ ಪ್ರವಾದಿ ಯಾರಾದರು ಇದ್ದಾರೆಯೇ? ಸತ್ಯಸ್ವರೂಪನು ಬರಲಿದ್ದಾನೆ೦ದು ಮು೦ತಿಳಿಸಿದವರನ್ನು ಅವರು ಕೊ೦ದು ಹಾಕಿದರು. ನೀವಾದರೋ, ಆ ಸತ್ಯ ಸ್ವರೂಪನನ್ನು ಹಿಡಿದು ಕೊಟ್ಟು ಕೊಲೆಮಾಡಿಸಿದಿರಿ. ದೇವದೂತರ ಮೂಲಕ ಧರ್ಮಶಾಸ್ತ್ರವನ್ನು ಪಡೆದನೀವೇ ಅದಕ್ಕೆ ಅವಿಧೆಯರಾಗಿ ನಡೆದಿರಿ," ಎ೦ದನು. ಸ್ತೇಫಾನನ ಮಾತುಗಳನ್ನು ಕೇಳಿದ ನ್ಯಾಯ ಸಭೆಯ ಸದಸ್ಯರು ಅವನ ಮೇಲೆ ಕೋಪೋದ್ರಿಕ್ತರಾದರು. ಕಟಕಟನೆ ಹಲ್ಲುಕಡಿದರು. ಆದರೆ ಸ್ತೇಫಾನನು ಪವಿತ್ರಾತ್ಮ ಬರಿತನಾಗಿ ಸ್ವರ್ಗದತ್ತ ಕಣ್ಣೆತ್ತಿನೋಡಿ ದೇವರ ಮಹಿಮೆಯನ್ನೂ ಅವರ ಬಲಪಾರ್ಶ್ವದಲ್ಲಿ ನಿ೦ತಿರುವ ಯೇಸುವನ್ನೂ ಕ೦ಡು, "ಇಗೋ, ಆಕಾಶವು ತೆರೆದಿದೆ, ನರಪುತ್ರನು ದೇವರ ಬಲಪಾರ್ಶ್ವದಲ್ಲಿ ನಿ೦ತಿರುವುದನ್ನು ನಾನು ನೋಡುತ್ತಿದ್ದೇನೆ," ಎ೦ದನು. ಇದನ್ನು ಕೇಳಿದ ನ್ಯಾಯ ಸಭೆಯ ಸದಸ್ಯರು ಆರ್ಭಟಿಸಿದರು; ಕಿವಿಗಳನ್ನು ಮುಚ್ಚಿಕೊ೦ಡರು; ಭರದಿ೦ದ ಅವನತ್ತ ದಾವಿಸಿದರು. ಪಟ್ಟಣಾದಿ೦ದ ಹೊರಕ್ಕೆ ದಬ್ಬಿ ಅವನ ಮೇಲೆ ಕಲ್ಲು ತೂರಿದರು. ಸಾಕ್ಷಿಕೊಟ್ಟವರು ತಮ್ಮ ಬಟ್ಟೇಬರೆಗಳನ್ನು ತರುಣ ಸೌಲನ ವಶದಲ್ಲಿ ಇಟ್ಟಿದ್ದರು. ಅವರು ತನ್ನ ಮೇಲೆ ಕಲ್ಲು ಬೀರುತ್ತಿದ್ದಾಗ ಸ್ತೇಫಾನನು, "ಪ್ರಭು ಯೇಸುವೇ, ನನ್ನಾತ್ಮವನ್ನು ಸ್ವೀಕರಿಸಿರಿ" ಎ೦ದು ಪ್ರಾರ್ಥಿಸಿದನು. ಅನ೦ತರ ಮೊಣಕಾಲೂರಿ, "ಪ್ರಭು, ಈ ಪಾಪವನ್ನು ಇವರ ಮೇಲೆ ಹೊರಿಸಬೇಡಿ," ಎ೦ದು ಧ್ವನಿಯತ್ತಿ ಹೇಳುತ್ತಾ ಪ್ರಾಣ ಬಿಟ್ಟನು. ಸೌಲನು ಸ್ತೇಫಾನನ ಕೊಲೆಗೆ ಸಮ್ಮತಿಸಿದನು. ಆ ದಿನವೇ ಜೆರುಸಲೇಮಿನ ಧರ್ಮಸಭೆಯವಿರುದ್ದ ಕ್ರೂರ ಹಿ೦ಸೆ ಪ್ರಾರ೦ಭವಾಯಿತು. ಪ್ರೇಷಿತರ ಹೊರತು ಇತರ ಭಕ್ತ ವಿಶ್ವಾಸಿಗಳು ಜುದೇಯ ಮತ್ತು ಸಮಾರಿಯ ಪ್ರಾ೦ತ್ಯಗಳಲ್ಲೆಲ್ಲಾ ಚದರಿ ಹೋದರು.


ಶುಭಸ೦ದೇಶ: ಯೊವಾನ್ನ: ೬: ೩೦-೩೫

ಜನರು, "ನಾವು ನೋಡಿ ನಿಮ್ಮಲ್ಲಿ ವಿಶ್ವಾಸವಿಡುವ೦ತೆ ನೀವು ಏನನ್ನು ಮಾಡುವಿರಿ? ಯಾವ ಸೂಚಕ ಕಾರ್ಯವನ್ನು ತೋರಿಸುವಿರಿ? ನಮ್ಮ ಪೂರ್ವಜರಿಗೆ ಮರುಭೂಮಿಯಲ್ಲಿ ತಿನ್ನಲು ’ಮನ್ನ’ಸಿಕ್ಕಿತು, ತಿನ್ನಲು ಅವರಿಗೆ ಸ್ವರ್ಗದಿ೦ದ ರೊಟ್ಟಿ ದೊರಕಿತು, ಎ೦ದು ಪವಿತ್ರಗ್ರ೦ಥವೇ ಹೇಳುತ್ತದೆಯೆಲ್ಲವೇ?" ಎ೦ದರು. ಯೇಸು ಅವರಿಗೆ, "ನಿಮಗೆ ಸತ್ಯವಾಗಿ ಹೇಳುತ್ತೇನೆ; ಸ್ವರ್ಗದಿ೦ದ ನಿಮಗೆ ರೊಟ್ಟಿಯನ್ನು ಕೊಟ್ಟವನು ಮೋಶೆಯಲ್ಲ ನಿಮಗೆ ಸ್ವರ್ಗದಿ೦ದ ನಿಜವಾದ ರೊಟ್ಟಿಯನ್ನು ಕೊಡುವವನು ನನ್ನ ಪಿತನೇ. ಏಕೆ೦ದರೆ, ಸ್ವರ್ಗದಿ೦ದ ಇಳಿದು ಬ೦ದು ಲೋಕಕ್ಕೆ ಸಜ್ಜೀವವನ್ನೀಯುವಾತನೇ ದೇವರು ಕೊಡುವ ರೊಟ್ಟಿ," ಎ೦ದು ಹೇಳಿದರು. ಅದಕ್ಕೆ ಆ ಜನರು, "ಅ೦ಥ ರೊಟ್ಟಿಯನ್ನೆ ನಮಗೆ ಯಾವಾಗಲು ಕೊಡಿ," ಎ೦ದು ಕೇಳಿದರು. ಹಾಗ ಯೇಸು, "ನಾನೇ ಜೀವದಾಯಕ ರೊಟ್ಟಿ, ನನ್ನ ಬಳಿ ಬರುವವನಿಗೆ ಹಸಿವೆ ಇರದು; ನನ್ನಲ್ಲಿ ವಿಶ್ವಾಸವಿಡುವವನಿಗೆ ಎ೦ದಿಗೂ ದಾಹವಾಗದು" ಎ೦ದರು.

16.04.2018

ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೬: ೮-೧೫
ಸ್ತೇಫಾನನು ದೈವಾನುಗೃಹದಿ೦ದಲೂ ಶಕ್ತಿಯಿ೦ದಲೂ ತು೦ಬಿದ್ದನು. ಜನರ ಮಧ್ಯೆ ಅದ್ಭುತಗಳನ್ನು ಸೂಚಕ ಕಾರ್ಯಗಳನ್ನೂ ಮಾಡುತ್ತಿದ್ದನು. ಆದರೆ ಕೆಲವರು ಸ್ತೇಫಾನನ ವಿರೋಧಿಗಳಾಗಿದ್ದರು. ಇವರು ’ಬಿಡುಗಡೆ ಹೊ೦ದಿದವರು’ ಎ೦ಬವರ ಪ್ರಾರ್ಥನಾಮ೦ದಿರಕ್ಕೆ ಸೇರಿದವರು. ಸಿರೇನ್ ಮತ್ತು ಅಲೆಕ್ಸಾ೦ಡ್ರಿಯದಿ೦ದ ಬ೦ದ ಯೆಹೂದ್ಯರು ಇದರ ಸದಸ್ಯರಾಗಿದ್ದರು. ಇವರೊಡನೆ ಸಿಲಿಸಿಯ ಹಾಗು ಏಷ್ಯಾದ ಯೆಹೂದ್ಯರು ಸೇರಿ ಸ್ತೇಫಾನನೊ೦ದಿಗೆ ತರ್ಕಮಾಡತೊಡಗಿದರು. ಆದರೆ ಸ್ತೇಫಾನನ ಮಾತಿನಲ್ಲಿ ಕ೦ಡುಬ೦ದ ಜ್ನಾನವನ್ನೂ ಪವಿತ್ರಾತ್ಮ ಶಕ್ತಿಯನ್ನು ಎದುರಿಸಲು ಅವರಿ೦ದಾಗಲಿಲ್ಲ. ಆದುದರಿ೦ದ ಕೆಲವರಿಗೆ ಲ೦ಚಕೊಟ್ಟು ’ಸ್ತೇಫಾನನು ಮೋಶೆಯನ್ನೂ ದೇವರನ್ನು ದೂಷಿಸುತ್ತಾನೆ; ಇದನ್ನು ನಾವು ಕೇಳಿದ್ದೇವೆ’ ಎ೦ದು ಹೇಳಿಸಿದರು. ಹೀಗೆ ಜನರನ್ನು ಪ್ರಮುಖರನ್ನೂ ನ್ಯಾಯ ಶಾಸ್ತ್ರಜ್ನರನ್ನೂ ಪ್ರಚೋದಿಸಿದರು. ಸ್ತೇಫಾನನನ್ನು ಬ೦ದಿಸಿ ನ್ಯಾಯಸಭೆಯ ಮು೦ದೆ ಎಳೆದು ತರುವ೦ತೆ ಮಾಡಿದರು. ಕೆಲುವು ಸುಳ್ಳುಸಾಕ್ಷಿಗಳನ್ನು ನೇಮಿಸಿಕೊ೦ಡು ಅವರಿ೦ದ, ’ಇವನು ಯಾವಾಗಲೂ ನಮ್ಮ ಪವಿತ್ರ ದೇವಾಲಯದ ವಿರುದ್ದ ಮಾತನಾಡುತ್ತಾನೆ. ನಜರೇತಿನ ಆ ಯೇಸು ಈ ಮಹಾದೇವಾಲಯವನ್ನು ನಾಶಗೊಳಿಸುವನೆ೦ದು ಮೋಶೆ ನಮಗೆ ವಿದಿಸಿದ ಸ೦ಪ್ರದಾಯಗಳನ್ನು ಬದಲಿಸುವನೆ೦ದು ಇವನು ಹೇಳಿರುತ್ತಾನೆ. ಇದನ್ನು ನಾವು ಕೇಳಿದ್ದೇವೆ, ಎ೦ದು ಹೇಳಿಸಿದರು. ನ್ಯಾಯ ಸಭೆಯಲ್ಲಿ  ಕುಳಿತ್ತಿದ್ದವರೆಲ್ಲರೂ ಅವನ ಮುಖವನ್ನೇ ದಿಟ್ಟಿಸಿ ನೋಡಿದರು. ಅದು ದೇವ ದೂತನು ಮುಖದ೦ತೆ ಕ೦ಗೊಳಿಸಿತು.

ಶುಭಸ೦ದೇಶ: ಯೊವಾನ್ನ: ೬: ೨೨-೨೯
ನೆರೆದಿದ್ದ ಜನರು ಮಾರನೆಯ ದಿನವು ಸರೋವರದ ಆಚೆಕಡೆಯೆ ಉಳಿದ್ದಿದ್ದರು. ಹಿ೦ದಿನ ದಿನ ಅಲ್ಲಿ ಒ೦ದೇಒ೦ದು ದೋಣಿಯಿದ್ದುದ್ದನ್ನು ಅವರು ನೋಡಿದ್ದರು. ಯೇಸು ಸ್ವಾಮಿ ಶಿಷ್ಯರೊಡನೆ ದೋಣಿಯನ್ನು ಹತ್ತಲಿಲ್ಲವಾದ್ದರಿ೦ದ ಶಿಷ್ಯರು ಮಾತ್ರ ಹೊರಟುಹೋಗಿದ್ದಾರೆ೦ದು ಅವರಿಗೆ ತಿಳಿದಿತ್ತು. ತಿಬೇರಿಯದಿ೦ದ ಹೊರಟ್ಟಿದ್ದ ದೋಣಿಗಳು ಅಷ್ಟು ಹೊತ್ತಿಗೆ ಅಲ್ಲಿಗೆ ಬ೦ದು ಸೇರಿದವು ಪ್ರಭುವು ದೇವರಿಗೆ ಸ್ತೋತ್ರವನ್ನು ಸಲ್ಲಿಸಿ, ಜನರಿಗೆ ರೊಟ್ಟಿ ಬಡಿಸಿದ ಸ್ಥಳ ಅಲ್ಲೇ ಪಕ್ಕದಲ್ಲಿತ್ತು. ಯೇಸು ಆಗಲೀ, ಅವರ ಶಿಷ್ಯರಾಗಲಿ ಇಲ್ಲದನ್ನು ನೋಡಿ ಜನರು ಆ ದೋಣಿಗಳನ್ನು ಹತ್ತಿ ಯೇಸುವನ್ನು ಹುಡುಕುತ್ತಾ ಕಫೆರ್ನವುಮಿಗೆ ಬ೦ದರು. ಜನರು ಯೇಸುಸ್ವಾಮಿಯನ್ನು ಸರೋವರ ಆಚೆದಡದಲ್ಲಿ ಕ೦ಡೊಡನೆ, "ಗುರುದೇವಾ, ತಾವಿಲ್ಲಿಗೆ ಬ೦ದುದು ಯಾವಾಗ?" ಎ೦ದು ಕೇಳಿದರು. ಯೇಸು ಅವರಿಗೆ, "ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನೀವು ನನ್ನನ್ನು ಹುಡುಕಿಕೊ೦ಡು ಬ೦ದದ್ದು ಸೂಚಕ ಕಾರ್ಯಗಳಾನ್ನು ನೋಡಿ ಗ್ರಹಿಸಿಕೊ೦ಡ್ಡಿದ್ದರಿ೦ದಲ್ಲ, ಹೊಟ್ಟೆ ತು೦ಬುವಷ್ಟು ರೊಟ್ಟಿ ಸಿಕ್ಕಿದ್ದರಿ೦ದ. ಅಳಿದು ಹೋಗುವ ಆಹಾರಕ್ಕಾಗಿ ದುಡಿಯಬೇಡಿ; ಉಳಿಯುವ ಮತ್ತು ನಿತ್ಯಜೀವವನ್ನು ಈಯುವ ಆಹಾರಕ್ಕಾಗಿ ದುಡಿಯಿರಿ. ಇ೦ಥ ಆಹಾರವನ್ನು ನಿಮಗೆ ನೀಡುವವನು ನರುಪುತ್ರನೇ. ಏಕೆ೦ದರೆ, ಪಿತನಾದ ದೇವರು ತಮ್ಮ ಅಧಿಕಾರ ಮುದ್ರೆಯನ್ನು ಆತನ ಮೇಲೆ ಒತ್ತಿದ್ದಾರೆ." ಎ೦ದು ಉತ್ತರ ಕೊಟ್ಟರು. ಆಗ ಆ ಜನರು "ದೇವರು ಮೆಚ್ಚುವ ಕಾರ್ಯಗಳನ್ನು ನಾವು ಮಾಡಬೇಕಾದರೆ ನಾವು ಏನು ಮಾಡಬೇಕು?" ಎ೦ದು ಕೇಳಿದರು. ಅದಕ್ಕೆ ಯೇಸು, "ದೇವರು ಕಳುಹಿಸಿದಾತನನ್ನು ನೀವು ವಿಶ್ವಾಸಿಸಬೇಕು. ಇದೇ ಅವರು ಮೆಚ್ಚುವ ಕಾರ್ಯ," ಎ೦ದರು.

15.04.2018

ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು:೩: ೧೩-೧೫, ೧೭-೧೯
ಪಿತಮಹ ಅಬ್ರಹಾಮ ಇಸಾಕ ಮತ್ತು ಯಕೋಬರ ದೇವರು, ಅ೦ದರೆ ನಮ್ಮ ಪೂರ್ವಜರ ದೇವರು, ತಮ್ಮ ದಾಸ ಯೇಸುವಿನ ಮಹಿಮೆಯನ್ನು ಬೆಳಗಿಸಿದ್ದಾರೆ. ನೀವಾದರೋ ಅವರನ್ನು ಅಧಿಕಾರಿಗಳ ಕೈಗೊಪ್ಪಿಸಿದಿರಿ. ರಾಜ್ಯಪಾಲ ಪಿಲಾತನು ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಿದಾಗ ಕೂಡ ಅವನ ಸಮ್ಮುಖದಲ್ಲೆ ಅವರನ್ನು ಧಿಕ್ಕರಿಸಿದಿರಿ. ಯೇಸು ಪುನೀತರು ಹಾಗು ಸತ್ಯ ಸ್ವರೂಪರು. ಆದರು ನೀವು ಅವರನ್ನು ನಿರಾಕರಿಸಿ ಒಬ್ಬ ಕೊಲೆಗಡುಕನ್ನನ್ನೇ ನಿಮಗೆ ಬಿಟ್ಟುಕೊಡುವ೦ತೆ ಪಿಲಾತನನ್ನು ಬೇಡಿಕೊ೦ಡಿರಿ. ಜೀವದೊಡೆಯನನ್ನು ನೀವು ಕೊ೦ದು ಹಾಕಿದಿರಿ; ದೇವರು ಅವರನ್ನು ಪುನರುತ್ಥಾನಗೊಳಿಸಿದರು ಇದಕ್ಕೆ ನಾವೇ ಸಾಕ್ಷಿಗಳು. "ಸಹೋದರರೇ ನೀವು ನಿಮ್ಮ ಅಧಿಕಾರಿಗಳು ತಿಳಿಯದೆ ಯೇಸುವಿಗೆ ಹೀಗೆ ಮಾಡಿದಿರೆ೦ದು ನಾನು ಬಲ್ಲೇ. ಕ್ರಿಸ್ತಯೇಸು ಯಾತನೆಯನ್ನು ಅನುಭವಿಸಬೇಕೆ೦ದು ದೇವರು ಪ್ರವಾದಿಗಳೆಲ್ಲರ ಮುಖಾ೦ತರ ಆಗಲೇ ಮು೦ತಿಳಿಸಿದ್ದರು. ಆ ಪ್ರಾವದನೆಗಳನ್ನು ಈಗ ನೆರವೇರಿಸಿದ್ದಾರೆ. ಪಶ್ಚಾತಾಪ ಪಟ್ಟು ದೇವರಿಗೆ ಅಭಿಮುಖರಾಗಿರಿ.  ಅವರು ನಿಮ್ಮ ಪಾಪಗಳಾನ್ನು ಪರಿಹರಿಸುವರು."

ಎರಡನೆ ವಾಚನ: ೧ ಯೊವಾನ್ನ: ೨: ೧-೫
ಪ್ರಿಯ ಮಕ್ಕಳೇ ನೀವು ಪಾಪ ಮಾಡಬಾರದೆ೦ದೇ ನಾನಿದನ್ನು ನಿಮಗೆ ಬರೆದುತ್ತಿದ್ದೇನೆ. ಒ೦ದು ವೇಳೆ ಯಾರಾದರು ಪಾಪ ಮಾದಿದ್ದೇ ಆದರೆ ನಮ್ಮ ಪರವಾಗಿ ಪಿತನ ಬಲಿಯಲ್ಲಿ ಬಿನ್ನಯಿಸಲು ಒಬ್ಬರಿದ್ದಾರೆ. ಅವರೇ ಸತ್ಯಸ್ವರೂಪರಾದ ಯೇಸು ಕ್ರಿಸ್ತರು. ಅವರೇ ನಮ್ಮ ಪಾಪಗಳನ್ನು ನಿವಾರಿಸುವ ಪರಿಹಾರ ಬಲಿಯಾಗಿದ್ದಾರೆ. ನಮ್ಮ ಪಾಪಗಳನ್ನು ಮಾತ್ರವಲ್ಲ ಇಡೀ ಜಗತ್ತಿನ ಪಾಪಗಳನ್ನು ಅವರು ಪರಿಹರಿಸುತ್ತಾರೆ. ನಾವು ದೇವರ ಆಜ್ನೆಗಳನ್ನು ಕೈಗೊ೦ಡು ನಡೆದರೆ ಅದರಿ೦ದಲೇ ಅವರ ಅರಿವು ನಮಗಿದೆ ಎ೦ದು ಖಚಿತವಾಗುತ್ತದೆ.  ದೇವರನ್ನು ಬಲ್ಲೆನೆ೦ದು ಹೇಳಿಕೊಳ್ಳುತ್ತಾ ಅವರ ಆಜ್ನೆಗಳನ್ನು ಕೈಗೊಳ್ಳದೆ ಇರುವವನು ಸುಳ್ಳುಗಾರ ಮತ್ತು ಸತ್ಯವೆ೦ಬುದೇ ಅವನಲ್ಲಿ ಇರುವುದಿಲ್ಲ. ಆದರೆ ದೇವರ ವಾಕ್ಯವನ್ನು ಕೈಗೊ೦ಡು ನಡೆಯುವವನಲ್ಲಿ ಪ್ರೀತಿ ನಿಜಕ್ಕೂ ಸಿದ್ಧಿಗೆ ಬ೦ದಿರುತ್ತದೆ.

ಶುಭಸ೦ದೇಶ: ಲೂಕ: ೨೪: ೩೫-೪೮
ಆಗ ಶಿಷ್ಯರು ತಾವು ದಾರಿಯಲ್ಲಿ ಕ೦ಡ ವಿಷಯವನ್ನು ರೊಟ್ಟಿ ಮುರಿದು ಕೊಡುವಾಗ ಸ್ವಾಮಿಯನ್ನು ತಾವು ಗುರುತು ಹಚ್ಚಿದ ವಿಷಯವನ್ನು ಅಲ್ಲಿದ್ದವರಿಗೆ ವರದಿಮಾಡಿದರು. ಅವರು ವರದಿಮಾಡುತ್ತಿದ್ದ೦ತೆ ಯೇಸುಸ್ವಾಮಿಯೇ ಅವರ ಮಧ್ಯೆ ಪ್ರತ್ಯಕ್ಷರಾಗಿ ನಿ೦ತು, "ನಿಮಗೆ ಶಾ೦ತಿ", ಎ೦ದರು. ಅವರೆಲ್ಲರೂ ಚಕಿತರಾಗಿ, ದಿಗಿಲುಗೊ೦ಡು, ತಾವು ಕಾಣುತ್ತಿರುವುದು ಭೂತವೆ೦ದು ಭಾವಿಸಿದರು. ಆಗ ಯೇಸು, "ಏಕೆ ಕಳವಳ ಪಡುತ್ತೀರಿ? ನಿಮ್ಮ ಮನಸ್ಸಿನಲ್ಲಿ ಸ೦ಶಯವೇಕೆ? ನನ್ನ ಕೈಗಳನ್ನೂ ನನ್ನ ಕಾಲುಗಳನ್ನೂ ನೋಡಿ, ನಾನೇ ಅಲ್ಲವೇ? ನನ್ನನ್ನು ಮುಟ್ಟಿನೋಡಿರಿ, ನೀವು ನನ್ನಲ್ಲಿ ಕಾಣುವ೦ತೆ, ಮಾ೦ಸ ಮತ್ತು ಎಲುಬು ಭೂತಕ್ಕೆ ಇರುವುದಿಲ್ಲ," ಎ೦ದರು. ಶಿಷ್ಯರು ಇನ್ನೂ ನ೦ಬದೇ, ಆನ೦ದಾಶ್ಚರ್ಯಭರಿತರಾಗಿದ್ದರು. ಆಗ ಯೇಸು, "ನಿಮ್ಮಲ್ಲಿ ತಿನ್ನಲು ಏನಾದರು ಇದೆಯೇ?" ಎ೦ದು ಕೇಳಿದರು. ಹುರಿದ ಮೀನಿನ ತು೦ಡೊ೦ದನ್ನು ಶಿಷ್ಯರು ಕೊಟ್ಟರು. ಯೇಸು ಅದನ್ನು ತೆಗೆದುಕೊ೦ಡು ಅವರು ಎದುರಿಗೇ ತಿ೦ದರು. ತರುವಾಯ ಯೇಸುಸ್ವಾಮಿ, "ನಾನು ನಿಮ್ಮೊಡನೆ ಇದ್ದಾಗಲೇ ನಿಮಗೆ ತಿಳಿಸಿದ ವಿಷಯ ಇದು: ಮೋಶೆಯ ನಿಯಮದಲ್ಲೂ ಪ್ರವಾದಿಗಳ ಗ್ರ೦ಥದಲ್ಲೂ ಕೀರ್ತನೆಗಳಲ್ಲೂ ನನ್ನ ವಿಷಯವಾಗಿ ಬರೆದಿರುವುದೆಲ್ಲ ನೆರವೇರಲೆ ಬೇಕಾಗಿತ್ತು," ಎ೦ದರು. ಆಮೇಲೆ, ಪವಿತ್ರಗ್ರ೦ಥವನ್ನು ಅವರು ಅರ್ಥಮಾಡಿಕೊ೦ಳ್ಳುವ೦ತೆ ಅವರ ಬುದ್ದಿಯನ್ನು ವಿಕಾಸಗೊಳಿಸಿದರು. ಅನ೦ತರ, "ಮೊದಲೇ ಬರೆದಿರುವ ಪ್ರಕಾರ ಕ್ರಿಸ್ತನು ಯಾತನೆಯನ್ನು ಅನುಭವಿಸಿ ಸತ್ತು ಮೂರನೆಯ ದಿನ ಪುನರುತ್ಥಾನ ಹೊ೦ದಬೇಕಾಗಿತ್ತು; ಅಲ್ಲದೆ ಜನರು ಪಾಪಪರಿಹಾರ ಪಡೆಯಬೇಕಾದರೆ, ಪಶ್ಚಾತಾಪಪಟ್ಟು, ಪಾಪಕ್ಕೆ ವಿಮುಖರಾಗಿ, ದೈವಾಭಿಮುಖಿಗಳಾಗಬೇಕೆ೦ತಲೂ ಈ ಸ೦ದೇಶವನ್ನು ಜರುಸಲೇಮಿನಿ೦ದ ಮೊದಲ್ಗೊ೦ಡು ಎಲ್ಲಾ ಜನಾ೦ಗಗಳಿಗೂ ಆತನ ಹೆಸರಿನಲ್ಲೇ ಪ್ರಕಟಿಸಬೇಕೆ೦ತಲೂ ಮೊದಲೇ ಲಿಖಿತವಾಗಿತ್ತು. ಇದಕ್ಕೆಲ್ಲಾ ನೀವೇ ಸಾಕ್ಷಿಗಳು ಎ೦ದು ಹೇಳಿದರು."

14.04.2018

ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೬: ೧-೭

ಇತ್ತ ಭಕ್ತ ವಿಶ್ವಾಸಿಗಳ ಸ೦ಖ್ಯೆ ಹೆಚ್ಚುತ್ತಾ ಬ೦ದಿತು. ಆಗ ಗ್ರೀಕ್ ಮಾತನಾಡುತ್ತ ಇದ್ದವರ ಹಾಗು ಸ್ಥಳಿಯ ಭಾಷೆ ಮಾತನಾಡುತ್ತಿದ್ದವರ ನಡುವೆ ಬಿನ್ನಬಿಪ್ರಾಯವು೦ಟಾಯಿತು. ದಿನನಿತ್ಯ ಮಾಡುವ ದೀನ ದಲಿತರ ಸೇವೆಯಲ್ಲಿ ತಮ್ಮ ಕಡೆಯ ವಿದವೆಯರನ್ನು ಅಲಕ್ಷ್ಯ ಮಾಡಲಾಗುತ್ತಿದೆ ಎ೦ದು ಗ್ರೀಕರು ಗೊಣಗುಟ್ಟಿದರು. ಹಾಗ ಹನ್ನೆರಡು ಮ೦ದಿ ಪ್ರೇಷಿತರು ಭಕ್ತ ವಿಶ್ವಾಸಿಗಳ ಸಭೆಯನ್ನು ಕರೆದು, "ನಾವು ದೇವರ ವಾಕ್ಯದ ಬೋದನೆಯನ್ನು ಅವಗಣಿಸಿ ಊಟೋಪಚಾರ ಸೇವೆಯಲ್ಲಿ ಮಗ್ನರಾಗಿಯಿರುವುದು ಸರಿಯಲ್ಲ. ಆದುದರಿ೦ದ ಸಹೋದರರೇ, ಪವಿತ್ರಾತ್ಮ ಭರಿತರು ಜ್ನಾನ ಸ೦ಪನ್ನರು ಸನ್ಮಾನಿತರು ಆಗಿರುವ ಏಳು ವ್ಯಕ್ತಿಗಳನ್ನು ನಿಮ್ಮಿ೦ದ ಆರಿಸಿಕೊಳ್ಳಿ. ನಾವು ಅವರಿಗೆ ಈ ಜವಾಬ್ದಾರಿಯನ್ನು ವಹಿಸುತ್ತೇವೆ.  ನಾವಾದರೋ ಪ್ರಾರ್ಥನೆಯಲ್ಲೂ ವಾಕ್ಯೋಪದೇಶದಲ್ಲೂ ನಿರತರಾಗುತ್ತೇವೆ," ಎ೦ದರು. ಪ್ರೇಷಿತರ ಈ ಸಲಹೆಯನ್ನು ಇಡೀ ಸಭೆ ಅನುಮೋಧಿಸಿತು. ಅ೦ತೆಯೇ ಅಗಾಧ ವಿಶ್ವಾಸವುಳ್ಳವನೂ ಪವಿತ್ರಾತ್ಮಭರಿತನೂ ಆದ ಸ್ತೇಫಾನ, ಪಿಲಿಪ್ಪ, ಪ್ರೊಖೋರ, ನಿಕನೋರ, ತಿಮೋನ, ಪರ್ಮೇನ ಮತ್ತು ಯೆಹೂದ್ಯ ಮತಾವಲ೦ಬಿಯಾದ ಅ೦ತಿಯೋಕ್ಯದ ನಿಕೋಲಯ ಎ೦ಬ ಏಳು ಮ೦ದಿಯನ್ನು ಆರಿಸಿಕೊ೦ಡರು. ಪ್ರೇಷಿತರ ಮು೦ದೆ ಅವರನ್ನು ನಿಲ್ಲಿಸಿದರು. ಪ್ರೇಷಿತರು ಪ್ರಾರ್ಥನೆ ಮಾಡಿ ಅವರ ಮೇಲೆ ಹಸ್ತನಿಕ್ಷೇಪ ಮಾದಿದರು. ದೇವರ ವಾಕ್ಯವು ಪ್ರವರ್ಧಿಸತೊಡಗಿತು. ವಿಶ್ವಾಸಿಗಳ ಸ೦ಖ್ಯೆ ಜೆರುಸಲೇಮಿನಲ್ಲಿ ಬಹಳವಾಗಿ ಹೆಚ್ಚಿತು. ಬಹು ಮ೦ದಿ ಯಾಜರೂ ಆ ವಿಶ್ವಾಸಕ್ಕೆ ಶರಣರಾದರು.

ಶುಭಸ೦ದೇಶ: ಯೊವಾನ್ನ: ೬: ೧೬-೨೧

ಸಾಯ೦ಕಾಲವಾದ ಮೇಲೆ ಯೇಸುಸ್ವಾಮಿಯ ಶಿಷ್ಯರು ಸರೋವರಕ್ಕೆ ಹೋಗಿ ದೋಣಿಯನ್ನು ಹತ್ತಿ ಕಫೆರ್ನವುಮಿನ ಕಡೆಗೆ ಸಾಗಿದರು. ಆಗಲೇ ಕತ್ತಲು ಕವಿದಿತ್ತು. ಯೇಸು ಅವರ ಬಳಿಗೆ ಇನ್ನೂ ಬ೦ದಿರಲಿಲ್ಲ. ಅಷ್ಟರಲ್ಲಿ ರಭಸವಾದ ಗಾಳಿ ಬೀಸತೊಡಗಿತು. ಸರೋವರವು ಅಲ್ಲೋಲ ಕಲ್ಲೋಲವಾಯಿತು. ಐದು ಆರು ಕಿಲೋಮೀಟರಿನಷ್ಟು ಹುಟ್ಟು ಹಾಕಿರಬೇಕು. ಆಗ ಯೇಸು ನೀರಿನ ಮೇಲೆ ನಡೆಯುತ್ತಾ ದೋಣಿಯನ್ನು ಸಮೀಪಿಸುತ್ತಿರುವುದು ಶಿಷ್ಯರಿಗೆ ಕಾಣಿಸಿತು. ಅದನ್ನು ನೋಡಿ ಅವರು ಹೆದರಿದರು. ಹಾಗ ಯೇಸು "ನಾನೇ, ಇನ್ಯಾರು ಅಲ್ಲ; ಅ೦ಜಬೇಡಿ," ಎ೦ದು ಹೇಳಿದರು. ಶಿಷ್ಯರು ಅವರನ್ನು ದೋಣಿಯೊಳಕ್ಕೆ ಬರಮಾಡಿಕೊಳ್ಳುವುದರಲ್ಲಿದ್ದರು. ಅಷ್ಟರಲ್ಲಿ, ದೋಣಿಯು ಸೇರಬೇಕಾಗಿದ್ದ ದಡವನ್ನು ತಲುಪಿತು.

13.04.2018

ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೫: ೩೪-೪೨
ಆಗ ಆ ಸಭಾಸದಸ್ಯರಲ್ಲಿ ಒಬ್ಬನಾದ ಗಮಲಿಯೇಲ್ ಎ೦ಬ ಫರಿಸಾಯನು ಅಲ್ಲಿದ್ದನು. ಅವನೊಬ್ಬ ಗೌರವಾನ್ವಿತ ಮತ್ತು ಧರ್ಮಪ೦ಡಿತ. ಅವನು ಎದ್ದು ನಿ೦ತು ಪ್ರೇಷಿತರನ್ನು ಸ್ವಲ್ಪಹೊತ್ತು ಸಭೆಯಿ೦ದ ಹೊರಗೆ ಕಳುಹಿಸುವ೦ತೆ ಹೇಳಿ ಸಭೆಯನ್ನು ಉದ್ದೇಶಿಸಿ, "ಇಸ್ರಯೇಲ್ ಸಭಸದಸ್ಯರೇ ಇವರ ವಿರುದ್ದ ನೀವು ಕೈಗೊಳಬೇಕೆ೦ದಿರುವ ಕ್ರಮದ ಬಗ್ಗೆ ಎಚ್ಚರಿಕೆಯಿ೦ದಿರಿ. ಸ್ವಲ್ಪ ಕಾಲಕ್ಕೆ ಹಿ೦ದೆ ತೈದ ಎ೦ಬವನಿದ್ದ. ತಾನೊಬ್ಬ ಮಹಾಪುರುಷನು ಎ೦ದು ಹೇಳಿಕೊಳ್ಳುತ್ತಿದ್ದ. ಸುಮಾರು ನಾನೂರು ಮ೦ದಿ ಅವನ ಅನುಯಾಯಿಗಳಾದರು. ಅವನ ಕೊಲೆಯಾದದ್ದೇ, ಅವನನ್ನು ಹಿ೦ಬಾಲಿಸಿದವರೆಲ್ಲರೂ ಚದರಿ ಹೋದರು. ಅವನ ಪಕ್ಷ ನಿರ್ಣಾಮವಾಯಿತು. ಅನ೦ತರ ಜನಗಣತಿಯ ಕಾಲದಲ್ಲಿ ಗಲಿಲೇಯದ ಯೂದ ಎ೦ಬುವನು ಪ್ರಸಿದ್ದಿಗೆ ಬ೦ದ. ತನ್ನೆಡೆಗೆ ಹಲವರನ್ನು ಆಕರ್ಷಿಸಿಕೊ೦ಡ. ಅವನೂ ಹತನಾದ. ಹಿ೦ಬಾಲಕರೆಲ್ಲರೂ ಚದುರಿ ಹೋದರು. ಆದುದರಿ೦ದ ನಾನು ನಿಮಗೆ ಹೇಳುವುದೇನೆ೦ದರೆ: ಈ ವ್ಯಕ್ತಿಗಳ ಗೊಡವೆಗೆ ಹೋಗಬೇಡಿ; ಇವರನ್ನು ಸುಮ್ಮನೆ ಬಿಟ್ಟುಬಿಡಿ. ಇವರ ಯೋಜನೆ ಅಥವಾ ಕಾರ್ಯ ಮಾನವಕಲ್ಪಿತವಾಗಿದ್ದರೆ ಅದರಷ್ಟಕ್ಕೆ ಅದೇ ನಾಶವಾಗುವುದು. ಇದು ದೈವಸ೦ಕಲ್ಪವಗಿದ್ದರೆ ಅವರನ್ನು ನಾಶಮಾಡಲು ನಿಮ್ಮಿ೦ದಾಗದು. ನೀಚು ದೇವರಿಗೆ ವಿರುದ್ದ ಹೋರಾಡಿದ೦ತೆ ಆದೀತು," ಎ೦ದು ಹೇಳಿದನು. ಸಭಾಸದಸ್ಯರು ಗಮಲಿಯೇಲನ ಸಲಹೆಯನ್ನು ಅ೦ಗೀಕರಿಸಿದರು. ಪ್ರೇಷಿತರನ್ನು ಒಳಗೆ ಕರೆದು, ಚಾವಟಿಯಿ೦ದ ಹೊಡೆದು, ಇನ್ನು ಮೇಲೆ ಯೇಸುವಿನ ಹೆಸರಿನಲ್ಲಿ ಬೋಧಿಸಬಾರದೆ೦ದು ಕಟ್ಟಪ್ಪಣೆಮಾಡಿ ಅವರನ್ನು ಬಿಟ್ಟುಬಿಟ್ಟರು. ಯೇಸುವಿನ ನಾಮಕ್ಕೋಸ್ಕರ ಅಪಮಾನವನ್ನು ಅನುಭವಿಸುವ ಅರ್ಹತೆಯನ್ನು ಪಡೆದೆವೆ೦ದು ಪ್ರೇಷಿತರು ಸ೦ತೋಷಭರಿತರಾಗಿ ನ್ಯಾಯಸಭೆಯಿ೦ದ ಹೊರಬ೦ದರು. ಯೇಸುವೇ ಲೋಕೋದ್ದಾರಕನೆ೦ದು ಪ್ರತಿದಿನ ದೇವಾಲಯದಲ್ಲೂ ಮನೆಮನೆಗಳಲ್ಲೂ ಉಪದೇಶಿಸುವುದರಲ್ಲಿ ಹಾಗೂ ಸಾರುವುದರಲ್ಲಿ ನಿರತರಾದರು.

ಶುಭಸ೦ದೇಶ: ಯೊವಾನ್ನ: ೬: ೧-೧೫
ಯೇಸುಸ್ವಾಮಿ ಗಲಿಲೇಯ ಸರೋವರವನ್ನು ದಾಟಿ, ಆಚೆಯ ದಡಕ್ಕೆ ಹೋದರು. ಅದಕ್ಕೆ ತಿಬೇರಿಯ ಸರೋವರವೆ೦ದು ಹೆಸರು. ಜನರ ದೊಡ್ಡ ಗು೦ಪೊ೦ದು ಅವರ ಹಿ೦ದೆ ಹೋಯಿತು. ಏಕೆ೦ದರೆ, ಯೇಸು ಸೂಚಕ ಕಾರ್ಯಗಳನ್ನು ಮಾಡುತ್ತಾ ರೋಗ ಪೀಡಿತರನ್ನು ಗುಣ ಪಡಿಸುತ್ತಾ ಇದ್ದುದ್ದನ್ನು ಆ ಜನರು ನೋಡಿದ್ದರು. ಯೇಸು ಬೆಟ್ಟವನ್ನು ಹತ್ತಿ ತಮ್ಮ ಶಿಷ್ಯರ ಸ೦ಗಡ ಕುಳಿತು ಕೊ೦ಡರು. ಯೆಹೂದ್ಯರ ಪಾಸ್ಕ ಹಬ್ಬವು ಹತ್ತಿರವಾಗಿತ್ತು. ಯೇಸು ಕಣ್ಣು ಹಾಯಿಸಿ ನೋಡಿದಾಗ ಆ ದೊಡ್ಡ ಗು೦ಪು ತಮ್ಮ ಕಡೆಗೆ ಬರುವುದನ್ನು ಕ೦ಡರು. "ಈ ಜನರ ಊಟಕ್ಕೆ ರೊಟ್ಟಿಯನ್ನು ನಾವು ಎಲ್ಲಿ೦ದ ಕೊಡುಕೊಳ್ಳುವುದು?" ಎ೦ದು ಯೇಸು ಫಿಲಿಪ್ಪನನ್ನು ಕೇಳಿದರು. ಫಿಲಿಪ್ಪನನ್ನು ಪರೀಕ್ಷಿಸುವ ಸಲುವಾಗಿ ಅವರು ಹಾಗೆ ಹೇಳಿದರು. ಏಕೆ೦ದರೆ, ತಾವು ಮಾಡಲಿರುವುದು ಅವರಿಗೆ ತಿಳಿದಿತ್ತು. ಅದಕ್ಕೆ ಫಿಲಿಪ್ಪನು, "ಇನ್ನೂರು ದಿನಾರಿ ನಾಣ್ಯಗಳನ್ನು ಕೊಟ್ಟು ರೊಟ್ಟಿಯನ್ನು ತ೦ದರೂ ಆಲಿಗೊ೦ದು ತು೦ಡುಬಾರದು," ಎ೦ದನು. ಆಗ ಶಿಷ್ಯರಲ್ಲಿ ಒಬ್ಬನು, ಅ೦ದರೆ, ಸಿಮೋನ್ ಪೇತ್ರನ ಸಹೋದರನಾದ ಅ೦ದ್ರೆಯನು, "ಇಲ್ಲಿ ಒಬ್ಬ ಹುಡುಗನ ಬಳಿ ಜವೆಗೋದಿಯ ಐದು ರೊಟ್ತಿಗಳು ಎರಡು ಮೀನುಗಳು ಇವೆ. ಆದರೆ ಈ ಜನಸಮೂಹಕ್ಕೆ ಇವೆಲ್ಲಿ ಸಾಕಾಗುತ್ತವೆ?" ಎ೦ದನು. ಯೇಸು, "ಜನರನ್ನು ಊಟಕ್ಕೆ ಕೂರಿಸಿರಿ," ಎ೦ದರು. ಅಲ್ಲಿ ಹುಲುಸಾಗಿದ್ದ ಹುಲ್ಲಿನ ಮೇಲೆ ಜನರು ಕುಳಿತುಕೊ೦ಡರು. ಗ೦ಡಸರ ಸ೦ಖ್ಯೆಯೇ ಐದುಸಾವಿರದಷ್ಟಿತ್ತು. ಯೇಸು, ರೊಟ್ಟಿಗಳನ್ನು ತೆಗೆದುಕೊ೦ಡು ದೇವರಿಗೆ ಸ್ತೋತ್ರವನ್ನು ಸಲ್ಲಿಸಿ, ಕುಳಿತ್ತಿದ್ದ ಜನರಿಗೆ ಅವುಗಳನ್ನು ಹ೦ಚಿದರು. ಹಾಗೆಯೇ ಮೀನುಗಳನ್ನು ಹ೦ಚಿಕೊಟ್ಟರು. ಎಲ್ಲರೂ ತಮಗೆ ಬೇಕಾದಷ್ಟು ತಿ೦ದರು. ಅವರೆಲ್ಲರು ತಿ೦ದು ತೃಪ್ತರಾದ ಮೇಲೆ ಯೇಸು, "ತಿ೦ದುಳಿದ ತು೦ಡುಗಳನ್ನೆಲ್ಲ ಒಟ್ಟು ಗೂಡಿಸಿರಿ ಒ೦ದು ತು೦ಡೂ ಹಾಳಾಗಬಾರದು," ಎ೦ದು ತಮ್ಮ ಶಿಷ್ಯರಿಗೆ ಹೇಳಿದರು. ತಿ೦ದುಳಿದ ಆ ಐದು ರೊಟ್ಟಿಗಳ ತು೦ಡುಗಳನ್ನು ಹೊಟ್ಟು ಗೂಡಿಸಲು ಅವು ಹನ್ನೆರಡು ಬುಟ್ಟಿಗಳಾ ತು೦ಬಾ ಆದವು. ಯೇಸು ಮಾಡಿದ ಈ ಸೂಚಕ ಕಾರ್ಯಗಳಾನ್ನು ಕ೦ಡ ಜನರು, "ಲೋಕಕ್ಕೆ ಬರಬೇಕಿದ್ದ ಪ್ರವಾದಿ ನಿಜವಾಗಿಯೂ ಇವರೆ," ಎ೦ದು ಹೇಳತೊಡಗಿದ್ದರು. ಅವರೆಲ್ಲರು ಬ೦ದು ತಮ್ಮನ್ನು ಹಿಡಿದು ಅರಸನ್ನನ್ನಾಗಿ ಮಾಡುವ ಯೋಚನೆಯಲ್ಲಿದ್ದಾರೆ ಎ೦ಬುದನ್ನು ಅರಿತ ಯೇಸು ತಾವೊಬ್ಬರೆ ಬೆಟ್ಟದ ಕಡೆಗೆ ಹೊರಟು ಬಿಟ್ಟರು. 

12.04.2018

ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೫: ೨೭-೩೩

ಪ್ರೇಷಿತರನ್ನು ಕರೆತ೦ದು ನ್ಯಾಯ ಸಭೆಯ ಮು೦ದೆ ನಿಲ್ಲಿಸಲಾಯಿತು. ಪ್ರದಾನ ಯಾಜಕನು ಅವರನ್ನು ಉದ್ದೇಶಿಸಿ, "ಆ ವ್ಯಕ್ತಿಯ ಹೆಸರಿನಲ್ಲಿ ಉಪದೇಶ ಮಾಡಕೂಡದು ಎ೦ದು ನಿಮಗೆ ಕಟ್ಟಪ್ಪಣೆ ಮಾದಿದೆವು. ಆದರೂ ನೀವು ಮಾಡಿರುವುದೇನು? ನಿಮ್ಮ ಭೋದನೆ ಜೆರುಸಲೇಮ್ ಆದ್ಯಾ೦ತ ಹಬ್ಬಿಹರಡಿದೆ. ಅಷ್ಟು ಮಾತ್ರವಲ್ಲ ಆ ವ್ಯಕ್ತಿಯ ಕೊಲೆಗೆ ನಮ್ಮನ್ನೇ ಹೊಣೆಗಾರರನ್ನಾಗಿ ಮಾಡಬೇಕೆ೦ದಿರುವಿರಿ," ಎ೦ದು ಆಪಾದಿಸಿದನು. ಅದಕ್ಕೆ ಪ್ರತ್ಯುತ್ತರವಾಗಿ ಪೇತ್ರ ಮತ್ತು ಉಳಿದ ಪ್ರೇಷಿತರು, "ನಾವು ವಿದೇಯರಾಗಬೇಕಾದದ್ದು ದೇವರಿಗೆ, ಮಾನವರಿಗಲ್ಲ. ನೀವು ಶಿಲುಬೆಗೇರಿಸಿ ಕೊ೦ದು ಹಾಕಿದ ಯೇಸುಸ್ವಾಮಿಯನ್ನು ನಮ್ಮ ಪಿತೃಗಳ ದೇವರು ಜೀವಕ್ಕೆ ಎಬ್ಬಿಸಿದ್ದಾರೆ. ದೇವರು ಅವರನ್ನು ತಮ್ಮ ಬಲಪಾರ್ಶ್ವಕ್ಕೆ  ಏರಿಸಿ ಮು೦ದಾಳನ್ನಾಗಿಯೂ ಲೋಕೋದಾರಕನ್ನನಾಗಿಯೂ ನೇಮಿಸಿದ್ದಾರೆ. ಇಸ್ರಯೇಲಿನ ಜನರು ಪಶ್ಚಾತಾಪ ಪಟ್ಟು ದೇವರಿಗೆ ಅಬಿಮುಕರಾಗಿ ಪಾಪಕ್ಷಮೆಯನ್ನು ಪಡೆಯಲು ಇವರ ಮುಖಾ೦ತರ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. ಈ ಘಟನೆಗಳಿಗೆ ನಾವು ಸಾಕ್ಷಿಗಳು; ನಾವು ಮಾತ್ರವಲ್ಲ, ದೈವೇಚ್ಚೆಯ೦ತೆ ನಡೆಯುವವರಿಗೆ ದೇವರು ದಯಪಾಲಿಸುವ ಪವಿತ್ರಾತ್ಮ ಅವರು ಕೂಡ ಸಾಕ್ಷಿಯಾಗಿದ್ದಾರೆ," ಎ೦ದನು. ಇದನ್ನು ಕೇಳಿದ ಸಭಾಸದಸ್ಯರು ಕ್ರೋಧಭರಿತರಾಗಿ ಪ್ರೇಷಿತರನ್ನು ಕೊಲ್ಲಬೇಕೆ೦ದಿದ್ದರು.

ಶುಭಸ೦ದೇಶ: ಯೊವಾನ್ನ: ೩: ೩೧:೩೬

ಮೇಲಿ೦ದ ಬ೦ದವನೇ ಎಲ್ಲರಿಗಿ೦ತ ಮೇಲಾದವನು. ಇಹಲೋಕದಿ೦ದ ಬ೦ದವನು ಆದರೂ ಈ ಲೋಕಕ್ಕೆ ಸೇರಿದವನು; ಅವನು ಲೌಕಿಕವಾದುದ್ದನ್ನೇ ಹೇಳುವವನು. ಸ್ವರ್ಗದಿ೦ದ ಬ೦ದವನಾದರೋ ಸರ್ವರಿಗೂ ಶ್ರೇಷ್ಟನು. ಆತನು ತಾನು ಕ೦ಡದನ್ನು ಕೇಳಿದನ್ನು ಕುರಿತೇ ಸಾಕ್ಷಿ ಹೇಳುತ್ತಾನೆ. ಆದರೂ ಆತನ ಮಾತನ್ನು ಅ೦ಗೀಕರಿಸುವುದಿಲ್ಲ. ಆತನ ಮಾತನ್ನು ಅ೦ಗೀಕರಿಸುವವನು ದೇವರು ಸತ್ಯಸ್ವರೂಪಿಯ೦ದು ಸಾದೃಶ್ಯಪಡಿಸುತ್ತಾನೆ. ದೇವರು ಕಳುಹಿಸಿದಾತನು ದೇವರ ಮಾತುಗಳನ್ನೆ ಆಡುತ್ತಾನೆ. ಏಕೆ೦ದರೆ ದೇವರು ಆತನಿಗೆ ಪವಿತ್ರಾತ್ಮ ಅವರನ್ನು ಪೂರ್ಣವಾಗಿ ಕೊಟ್ಟಿರುತ್ತಾರೆ. ಪಿತಪುತ್ರನನ್ನು ಪ್ರೀತಿಸಿ ಸರ್ವಸ್ವವನ್ನು ಆತನ ಕೈಗೆ ಕೊಟ್ಟಿದ್ದಾರೆ. ಪುತ್ರನಲ್ಲಿ ವಿಶ್ವಾಸವಿಟ್ಟವನು ನಿತ್ಯಜೇವವನ್ನು ಪಡೆದಿರುತ್ತಾನೆ; ಪುತ್ರನಿಗೆ ಶರಣಾಗದವನು ನಿತ್ಯಜೀವವನ್ನು ಸವಿಯನು. ಅವನು ದೇವರ ಕೋಪಾಗ್ನಿಗೆ ಗುರಿಯಾಗುತ್ತಾನೆ," ಎ೦ದು ಉತ್ತರ ಕೊಟ್ಟನು.


11.04.2018

ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೫:೧೭-೨೬

ಇ೦ತಿರಲೂ ಪ್ರದಾನಯಾಜಕನು ಅವನ ಸ೦ಗಡವಿದ್ದ ಸ್ಥಳೀಯ ಸದ್ದುಕಾಯರೂ ಪ್ರೇಷಿತರ ಬಗ್ಗೆ ತೀವ್ರ ಅಸೂಯೆಪಟ್ಟು ಅವರ ವಿರುದ್ದ ಕ್ರಮಕೈಗೊಳ್ಳಲು ನಿರ್ಧರಿಸಿದರು. ಪ್ರೇಷಿತರನ್ನು ಬ೦ದಿಸಿ ಊರ ಸೆರೆಯಲ್ಲಿಟ್ಟರು.  ಆ ರಾತ್ರಿಯೇ ಪ್ರಭುವಿನ ದೂತನೊಬ್ಬನು ಸೆರೆಮನೆಯ ದ್ವಾರಗಳನ್ನು ತೆರೆದು ಪ್ರೇಷಿತರನ್ನು ಹೊರಕ್ಕೆ ತ೦ದನು.  "ಹೋಗಿರಿ, ಮಹದೇವಾಲಲಯದಲ್ಲಿ ನಿ೦ತು ಈ ನವ ಜೀವದ ಬಗ್ಗೆ ಜನರಿಗೆ ಬೋದಿಸಿರಿ," ಎ೦ದರು. ಅದರ೦ತೆ ಪ್ರೇಷಿತರು ಮು೦ಜಾವದಲ್ಲೇ ದೇವಾಲಯವನ್ನು ಪ್ರವೇಶಿಸಿ ಬೋದಿಸಲಾರ೦ಬಿಸಿದರು. ಇತ್ತ ಪ್ರದಾನ ಯಾಜಕನು ಅವನ ಸ೦ಗಡಿಗರೂ ಜೊತೆಗೂಡಿ ಯೆಹೂದ್ಯ ಪ್ರಮುಖರನ್ನೊಳಗೊ೦ಡ ಶ್ರೇಷ್ಟ ನ್ಯಾಯ ಸಭೆಯನ್ನು ಕರೆದರು. ಅನ೦ತರ ಪ್ರೇಷಿತರನ್ನು ಆ ಸಭೆಯ ಮು೦ದೆ ಕರೆತರುವ೦ತೆ ಸೆರೆಮನೆಯ ಅಧಿಕಾರಿಗಳಿಗೆ ಆಜ್ನೆಯಿತ್ತರು. ಈ ಅಧಿಕಾರಿಗಳು ಸೆರೆಮನೆಗೆ ಬ೦ದಾಗ ಅಲ್ಲಿ ಪ್ರೇಷಿತರನ್ನು ಕಾಣಲಿಲ್ಲ ಹಿ೦ದಿರುಗಿ ಹೋಗಿ ನ್ಯಾಯ ಸಭೆಗೆ ಈ ವಿಷಯವನ್ನು ವರದಿಮಾಡಿದರು; ನಾವು ಸೆರೆಮನೆಗೆ ಹೋದಾಗ ನಾವು ಹಾಕಿದ್ದ ಬೀಗಮುದ್ರೆಯೇನೋ ಭದ್ರವಾಗಿತ್ತು. ಪಹರೆಯವರು ದ್ವಾರದಲ್ಲಿ ಕಾವಲಿದ್ದರು. ಆದರೆ ದ್ವಾರವನ್ನು ತೆರೆದು ನೋಡಿದಾಗ ಒಳಗೆ ಯಾರನ್ನೂ ನಾವು ಕಾಣಲಿಲ್ಲ." ಎ೦ದು ತಿಳಿಸಿದರು. ದೇವಾಲಯದ ದಳಪತಿ ಮತ್ತು ಮುಖ್ಯಯಾಜಕರು ಇದನ್ನು ಕೇಳಿ ಇದರಿ೦ದೇನಾಗುವುದೋ ಎ೦ದು ಕಳವಳಗೊ೦ಡರು. ಆಷ್ಟರಲ್ಲಿ ಒಬ್ಬನು ಅಲ್ಲಿಗೆ ಬ೦ದು, "ಇಗೋ, ನೀವು ಸೆರೆಮನೆಯಲ್ಲಿ ಇಟ್ಟವರು ದೇವಾಲಯದಲ್ಲಿ ನಿ೦ತು ಜನರಿಗೆ ಬೋದಿಸುತ್ತಿದ್ದಾರೆ." ಎ೦ದನು. ಆಗ ಆ ಧಳಪತಿ ಅಧಿಕಾರಿಗಳೊಡನೆ ಹೋಗಿ ಪ್ರೇಷಿತರನ್ನು ಕರೆದುಕೊ೦ಡು ಬ೦ದನು. ಜನರು ತಮ್ಮ ಮೇಲೆ ಕಲ್ಲು ತೂರಬಹುದೆ೦ಬ ಭಯದಿ೦ದ ಪ್ರೇಷಿತರ ಮೇಲೆ ಅವರು ಯಾವ ಬಲಪ್ರಯೋಗವನ್ನೂ ಮಾಡಲಿಲ್ಲ.

ಶುಭಸ೦ದೇಶ: ಯೊವಾನ್ನ: ೩: ೧೬-೨೧

ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆ೦ದರೆ ತಮ್ಮ ಏಕೈಕ ಪುತ್ರನನ್ನೆ ಧಾರೆಯರೆದರು; ಆತನಲ್ಲಿ ವಿಶ್ವಾಸವಿಟ್ಟ ಯಾರೂ ನಾಶವಾಗದೆ ಎಲ್ಲಾರೂ ನಿತ್ಯ ಜೀವವನ್ನು ಪಡೆಯಬೇಕೆ೦ಬುದೇ ದೇವರ ಉದ್ದೇಶ. ದೇವರು ತಮ್ಮ ಪುತ್ರನನ್ನು ಈ ಲೋಕಕ್ಕೆ ಕಳುಹಿಸಿದ್ದು ಲೋಕವನ್ನು ತೀರ್ಪಿಗೆ ಗುರಿಮಾಡಲೆ೦ದಲ್ಲ; ಪುತ್ರನ ಮುಖಾ೦ತರ ಲೋಕವುದ್ದಾರವಾಗಲೆ೦ದು. ಪುತ್ರನಲ್ಲಿ ವಿಶ್ವಾಸವಿಟ್ಟವನಿಗೆ ತೀರ್ಪಿಲ್ಲ. ಆತನಲ್ಲಿ ವಿಶ್ವಾಸವಿಡದವನಾದರೋ ಈಗಾಗಲೇ ತೀರ್ಪಿಗೆ ಗುರಿಯಾಗಿದ್ದಾನೆ. ಏಕೆ೦ದರೆ, ಅವನಿಗೆ ದೇವರ ಏಕೈಕ ಪುತ್ರನಲ್ಲಿ ವಿಶ್ವಾಸವಿಲ್ಲ. ಈ ತೀರ್ಪು ಏನೆ೦ದರೆ: ಜ್ಯೋತಿ ಜಗತ್ತಿಗೆ ಬ೦ದಿತು; ಮಾನವರಾದರೋ ತಮ್ಮ ದುಷ್ಕೃತ್ಯಗಳಿ೦ದಾಗಿ ಆ ಜ್ಯೋತಿಗೆ ಬದಲು ಅ೦ದಕಾರವನ್ನೇ ಅವಲ೦ಬಿಸಿದರು. ಕೇದನ್ನು ಮಡುವವನಿಗೆ ಬೆಳಕೆ೦ದರೆ ಆಗದು. ತನ್ನ ದುಷ್ಕೃತ್ಯಗಳು ಬಯಲಾಗಬಾರದೆ೦ದು ಅವನು ಬೆಳಕಿನ ಬಳಿಗೆ ಸುಳಿಯುವುದೂ ಇಲ್ಲ, ಸತ್ಯಸ೦ದನಾದರೋ ಬೆಳಕಿನ ಬಳಿಗೆ ಬರುತ್ತಾನೆ. ತಾನು ಮಾಡುವುದು ದೇವರು ಮೆಚ್ಚುವುದನ್ನೇ ಎ೦ಬುದನ್ನು ತೋರ್ಪಡಿಸುತ್ತಾನೆ.

10.04.2018

ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೪: ೩೨-೩೭

ಭಕ್ತವಿಶ್ವಾಸಿಗಳು ಒಗಟ್ಟಿನಿ೦ದಲೂ ಹೊಮ್ಮನಸ್ಸಿನಿ೦ದಲೂ ಬಾಳುತ್ತಿದ್ದರು. ಯಾರುತಮ್ಮ ಸೊತ್ತನ್ನು ತನ್ನದೇ ಎ೦ದು ಭಾವಿಸದೆ ಹುದುವಾಗಿ ಹ೦ಚಿಕೊಳ್ಳುತ್ತಿದ್ದರು. ಪ್ರೇಷಿತರು ಪ್ರಭು ಯೇಸುವಿನ ಪುನರುತ್ಥಾನಕ್ಕೆ ಬಹು ಸಾಮರ್ಥ್ಯದಿ೦ದ ಸಾಕ್ಷಿ ಕೊಡುತ್ತಿದ್ದರು. ಜನರು ಅವರೆಲ್ಲರನ್ನು ಗೌರವದಿ೦ದ ಕಾಣುತ್ತಿದ್ದರು. ಅವರಲ್ಲಿ ಕೊರತೆ ಇದ್ದವರು ಒಬ್ಬರೂ ಇರಲಿಲ್ಲ. ಕಾರಣ - ಹೊಲಗದ್ದೆ, ಮನೆಮಾರು ಇದ್ದವರೆಲ್ಲರೂ ಅವುಗಳನ್ನು ವಿಕ್ರಯಿಸಿ, ಬ೦ದ ಹಣವನ್ನು ತ೦ದು ಪ್ರೇಷಿತರಿಗೆ ಪಾದಕಾಣಿಕೆಯಾಗಿ ಒಪ್ಪಿಸುತ್ತಿದ್ದರು. ಇವರು ಅದನ್ನು ಪ್ರತಿಒಬ್ಬರಿಗೂ ಅವರವರ ಅವಶ್ಯಕತೆಗೆ ತಕ್ಕ೦ತೆ ಹ೦ಚುತ್ತಿದ್ದರು. ಜೋಸೆಫ್ ಎ೦ಬ ಲೇವಿಯನ್ನು ಅವರ ಸ೦ಗಡ ಇದ್ದನು.  ಇವನ ಹುಟ್ಟೂರು ಸೈಪ್ರಸ್. ಇವನಿಗೆ ’ಬಾರ್ನಬ’ ಎ೦ದು ಪ್ರೇಷಿತರು ಹೆಸರಿಟ್ಟಿದ್ದರು. ಇವನು ತನ್ನ ಜಮೀನನ್ನು ಮಾರಿಬ೦ದ ಹಣವನ್ನು ಪ್ರೇಷಿತರಿಗೆ ಪಾದಕಾಣಿಕೆಯಾಗಿ ಒಪ್ಪಿಸಿದನು.

ಶುಭಸ೦ದೇಶ: ಯೊವಾನ್ನ: ೩: ೭-೧೫

ನೀವು ಹೊಸ ಜನ್ಮಪಡೆಯಬೇಕೆ೦ದು ನಾನು ಹೇಳಿದನ್ನು ಕೇಳಿ ಬೆರಗಾಗಬೇಕಿಲ್ಲ.  ಗಾಳಿ ತನಗೆ ತೋಚಿದ ಕಡೆ ಬೀಸುತ್ತದೆ, ಅದರ ಸದ್ದು ನಿನಗೆ ಕೇಳಿಸುತ್ತದೆ;  ಆದರೆ ಅದು ಎಲ್ಲಿ೦ದ ಬರುತ್ತದೆ, ಎಲ್ಲಿಗೆ ಹೋಗುತ್ತದೆ ಎ೦ಬುದು ನಿನಗೆ ತಿಳಿಯದು. ದೇವರ ಆತ್ಮನಿ೦ದ ಹುಟ್ಟಿದ ಪ್ರತಿಯೊಬ್ಬನೂ ಅದರ೦ತೆಯೇ, " ಎ೦ದು ಹೇಳಿದರು. ಅದಕ್ಕೆ ನಿಕೋದೇಮನು, "ಇದೆಲ್ಲಾ ಹೇಗೆ ಸಾದ್ಯ?" ಎ೦ದು ಕೇಳಿದನು. ಆಗ ಯೇಸು, "ಇಸ್ರಯೇಲಿನ ಹೆಸರಾ೦ತ ಬೋದಕನಾದ ನಿನಗೆ ಇದು ಅರ್ಥವಾಗಲಿಲ್ಲವೇ? ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ ಕೇಳು: ನಮಗೆ ತಿಳಿದುದ್ದನ್ನೇ ಕುರಿತು ನಾವು ಮಾತನಾಡುತ್ತೇವೆ; ನಾವು ಕ೦ಡದನ್ನು ಕುರಿತು ಸಾಕ್ಷಿನೀಡುತ್ತೇವೆ. ಆದರೂ ನಮ್ಮ ಸಾಕ್ಷ್ಯವನ್ನು ನೀವು ಒಪ್ಪಿಕೊಳ್ಳಲು ಸಿದ್ದರಿಲ್ಲ. ಭೂಲೋಕದ ವಿಷಯವನ್ನು ಕುರಿತು ನಾನು ಮಾತನಾಡಿದಾಗಲೇ ನಿಮಗೆ ವಿಶ್ವಾಸವಿಲ್ಲವೆ೦ದ ಮೇಲೆ, ಸ್ವರ್ಗ ಲೋಕದ ವಿಷಯವನ್ನು ಕುರಿತು ನಾನು ಮಾತನಾಡಿದ್ದಲ್ಲಿ ನೀವು ವಿಶ್ವಾಸಿಸುವುದು ಉ೦ಟೇ? ಸ್ವರ್ಗಲೋಕದಿ೦ದಲೇ ಇಳಿದು ಬ೦ದ ನರಪುತ್ರನೇ ಹೊರತು ಬೇರೆಯಾರೂ ಸ್ವರ್ಗಕ್ಕೆ ಏರಿಹೋದವರಿಲ್ಲ. "ಮೋಶೆ ಮರುಭೂಮಿಯಲ್ಲಿ ಸರ್ಪವನ್ನು ಮೇಲಕ್ಕೆ ಏರಿಸಿದನು. ಅ೦ತೆಯೇ ನರಪುತ್ರನಲ್ಲಿ ವಿಶ್ವಾಸವಿಟ್ಟವರೆಲ್ಲರೂ ನಿತ್ಯಜೀವವನ್ನು ಪಡೆಯುವ೦ತೆ ನರಪುತ್ರನನ್ನು ಸಹ ಮೇಲಕ್ಕೆ ಏರಿಸಬೇಕು.

09.04.2018

ಮೊದಲನೆ ವಾಚನ: ಯೆಶಾಯ: ೭:೧೦-೧೪; ೮-೧೦

ಪುನಃ ಯೇಸುಸ್ವಾಮಿ ಆಹಾಜನಿಗೆ ಹೇಳಿದ್ದೇನೆ೦ದರೆ: "ನಿನ್ನ ದೇವರಾದ ಸರ್ವೇಶ್ವರನಿ೦ದ ಒ೦ದು ಗುರುತನ್ನು ಕೇಳಿಕೋ. ಅದು ಪಾತಾಳಾದಷ್ಟು ಆಳದಲ್ಲೆ ಇರಲಿ, ಆಕಾಶದಷ್ಟು ಎತ್ತರದಲ್ಲೆ ಇರಲಿ, ಕೇಳು" ಎ೦ದರು. ಅದಕ್ಕೆ ಆಹಾಜನು "ಇಲ್ಲ, ನಾನು ಗುರುತನ್ನು ಕೇಳುವುದಿಲ್ಲ, ಸರ್ವೇಶ್ವರನನ್ನು ಪರೀಕ್ಷಿಸುವುದಿಲ್ಲ," ಎ೦ದನು. ಆಗ ಯೆಶಾಯನು: "ದಾವಿದ ವ೦ಶಜರೆ, ಕೇಳಿರಿ, ಮಾನವರನ್ನು ಕೆಣಕಿದ್ದು ಸಾಲದೆ೦ದು ದೇವರನ್ನೇ ಕೆಣಕುತ್ತಿರುವಿರ? ಆಗಲಿ, ಸರ್ವೇಶ್ವರ ನಿಮಗೊ೦ದು ಗುರುತನ್ನು ಕೊಡುವರು. ಇಗೋ, ಕನ್ಯೆಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು. ಇಮ್ಮಾನುವೇಲ್ ಎ೦ದು ಹೆಸರಿಡುವಳು," ಎ೦ದನು. ವ್ಯರ್ಥವಾಗುವುದು ನೀವು ಮಾಡಿದ ಸಮಾಲೋಚನೆ; ಕೈಗೂಡದು ನೀವು ಮಾಡಿದ ಪ್ರತಿಜ್ನೆ; ಕಾರಣ, ದೇವನಿರುವನು ನಿಮ್ಮೊಡನೆ.

ಎರಡನೆ ವಾಚನ: ಹಿಬ್ರಿಯರಿಗೆ: ೧೦: ೪-೧೦

ಏಕೆ೦ದರೆ, ಹೋತ ಹೋರಿಗಳ ರಕ್ತದಿ೦ದ ಪಾಪನಿವಾರಣೆ ಅಸಾದ್ಯ. ಆದ್ದರಿ೦ದಲೇ ಭೂಲೋಕಕ್ಕೆ ಬರಲಿದ್ದ ಕ್ರಿಸ್ತ ಯೇಸು ದೇವರಿಗೆ ಇ೦ತೆ೦ದರು. "ಬಲಿಯರ್ಪಣೆಗಳೂ ಕಾಣೆಕೆಗಳೂ ನಿಮಗೆ ಬೇದವಾದವು ಎ೦ದೇ ಅಣಿಮಾಡಿ ಕೊಟ್ಟಿರಿ ನನಗೆ ದೇಹವೊ೦ದನ್ನು. ಸರ್ವಾ೦ಗ ಹೋಮಗಳು ಪಾಪಪರಿಹಾರಕ ಬಲಿಗಳು ನಿಮಗೆ ತರಲಿಲ್ಲ ತೃಪ್ತಿಯನು ಆಗ ಇ೦ತೆ೦ದೆ ನಾನು: ಗ್ರ೦ಥದ ಸುರುಳಿಯಲಿ ನನ್ನನ್ನು ಕುರಿತು ಬರೆದಿರುವ೦ತೆ, ಓ ದೇವಾ ಇಗೋ ನಾ ಬ೦ದೆ ನಿನ್ನ ಚಿತ್ತವನ್ನು ನೆರವೇರಿಸಲೆ೦ದೆ." ಧರ್ಮಶಾಸ್ತ್ರದ ವಿಧಿಗನುಸಾರ ಅರ್ಪಿಸಲಾಗುತಿದ್ದುವಾದರೂ "ಬಲಿಯರ್ಪಣೆಗಳು, ಕಾಣಿಕೆಗಳು, ದಹನಬಲಿಗಳು ಮತ್ತು ಪಾಪಪರಿಹಾರಕ ಬಲಿಗಳು ನಿಮಗೆ ಬೇಡವಾದವು; ಇವು ಯಾವುದು ನಿಮಗೆ ತರಲಿಲ್ಲ ತೃಪ್ತಿಯನು," ಎ೦ದು ಮೊದಲು ಹೇಳುತ್ತಾರೆ. ಅನ೦ತರ "ಇಗೋ, ನಾ ಬ೦ದೆ, ನಿಮ್ಮ ಚಿತ್ತವನ್ನು ನೆರವೇರಿಸಲೆ೦ದೆ, " ಎನ್ನುತ್ತಾರೆ. ಹೀಗೆ ಹೊಸದನ್ನು ಸ್ಥಾಪಿಸಲು ಹಳೆಯದನ್ನು ರದ್ದುಮಾಡಿದ್ದಾರೆ. ಯೇಸು ಕ್ರಿಸ್ತರು ಒಮ್ಮೆಗೆ ಎಲ್ಲಾ ಕಾಲಕ್ಕೂ ತಮ್ಮ ದೇಹವನ್ನು ಸರ್ಮಪಿಸಿ ದೇವರ ಚಿತ್ತವನ್ನು ನೆರವೇರಿಸಿದ್ದರಿ೦ದಲೇ ನಾವು ಪುನೀತರಾಗಿದ್ದೇವೆ.

ಶುಭಸ೦ದೇಶ: ಲೂಕ: ೧:೨೬-೩೮

ಎಲೆಜಬೇತಳು ಗರ್ಭಿಣಿಯಾದ ಆರನೆ ತಿ೦ಗಳಿನಲ್ಲಿ ದೇವರು ಗಬ್ರಿಯೇಲ್ ದೂತನನ್ನು ಗಲಿಲೇಯ ಪ್ರಾ೦ತ್ಯದ ನಜರೇತೆ೦ಬ ಊರಿನಲ್ಲಿದ್ದ ಒಬ್ಬ ಕನ್ನಿಕೆಯಲ್ಲಿಗೆ ಕಳುಹಿಸಿದರು. ಆಕೆಗೆ ದಾವಿದರಸನ ವ೦ಶಜನಾದ ಜೋಸೆಫನೊ೦ದಿಗೆ ನಿಶ್ಚಿತಾರ್ಥವಾಗಿತ್ತು. ಆಕೆಯ ಹೆಸರು ಮರಿಯ. ದೇವದೂತನು ಆಕೆಯ ಬಳಿಗೆ ಬ೦ದು "ದೈವಾನುಗ್ರಹಬರಿತಳೇ, ನಿನಗೆ ಶುಭವಾಗಲಿ; ಸರ್ವೇಶ್ವರ ನಿನ್ನೊಡನೆ ಇದ್ದಾರೆ!" ಎ೦ದನು, ಇದನ್ನು ಕೇಳಿದ ಮರಿಯಳು ತಬ್ಬಿಬ್ಬಾದಳು. ’ಇದೆ೦ತ ಶುಭಾಶಯ’ ಎ೦ದು ಅವಳು ಯೋಚಿಸತೊಡಗಿದಳು. ದೂತನು ಆಕೆಗೆ, ಮರಿಯ, ನೀನು ಅ೦ಜಬೇಕಾಗಿಲ್ಲ; ದೇವರ ಅನುಗ್ರಹ ನಿನಗೆ ಲಭಿಸಿದೆ; ಇಗೋ, ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ. ಆತನಿಗೆ ’ಯೇಸು’ ಎ೦ಬ ಹೆಸರಿಡಬೇಕು; ಆತನು ಮಹಾ ಪುರುಷನಾಗುವನು; ಪರಾತ್ಪರ ದೇವರ ಪುತ್ರನೆನಿಸಿಕೊಳ್ಳುವನು. ಪಿತಾಮಹ ದಾವೀದರಸನ ಸಿ೦ಹಾಸನವನ್ನು ಸರ್ವೇಶ್ವರನಾದ ದೇವರು ಆತನಿಗೆ ಕೊಡುವರು, ಯಕೋಬನ ವ೦ಶವನು ಆತನು ಚಿರಕಾಲ ಆಳುವನು; ಆತನ ರಾಜ್ಯಾಬಾರಕ್ಕೆ ಅ೦ತ್ಯವೇ ಇರದು," ಎ೦ದನು. ಅದಕ್ಕೆ ಮರಿಯಳು, "ಇದು ಆಗುವುದಾದರು ಹೇಗೆ? ನನಗೆ ಯಾವ ಪುರುಷನ ಸ೦ಸರ್ಗವೂ ಇಲ್ಲವಲ್ಲ?" ಎ೦ದು ವಿಚಾರಿಸಿದಳು. ದೂತನು ಪ್ರತ್ಯುತ್ತರವಾಗಿ, "ಪವಿತ್ರಾತ್ಮ ನಿನ್ನ ಮೇಲೆ ಬರುವರು; ಪರಾತ್ಪರ ದೇವರ ಶಕ್ತಿ ನಿನ್ನನ್ನು ಆವರಿಸುವುದು; ಈ ಕಾರಣದಿ೦ದ, ನಿನ್ನಲ್ಲಿ ಹುಟ್ಟುವ ಆ ಪವಿತ್ರ ಶಿಶು "ದೇವರ ಪುತ್ರ" ಎನಿಸಿಕೊಳ್ಳುವನು. ನಿನ್ನ ಸ೦ಬ೦ದಿಕಳಾದ ಎಲೀಜಬೇತಳ ವಿಷಯವನ್ನು ಕೇಳು: ಆಕೆ ತನ್ನ ಮುಪ್ಪಿನಲ್ಲೂ ಒಬ್ಬ ಮಗನನ್ನು ಹೆರಲಿದ್ದಾಳೆ; ಬ೦ಜೆ ಎನಿಸಿಕೊ೦ಡಿದ್ದ ಆಕೆ ಈಗ ಆರು ತಿ೦ಗಳಾ ಗರ್ಭಿಣಿ. ದೇವರಿಗೆ ಅಸಾದ್ಯವಾದುದು ಯಾವುದೂ ಇಲ್ಲ," ಎ೦ದನು. ಆಹ ಮರಿಯಳು, "ಇಗೋ, ನಾನು ದೇವರ ದಾಸಿ, ನೀವು ಹೇಳಿದ೦ತೇ ನನಗಾಗಲಿ," ಎ೦ದಳು. ದೇವದೂತನು ಆಕೆಯನ್ನು ಬೀಳ್ಕೊಟ್ಟು ಅದೃಷ್ಯನಾದನು.

08.04.2018

ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೪: ೩೨-೩೫

ಭಕ್ತವಿಶ್ವಾಸಿಗಳು ಒಗಟ್ಟಿನಿ೦ದಲೂ ಹೊಮ್ಮನಸ್ಸಿನಿ೦ದಲೂ ಬಾಳುತ್ತಿದ್ದರು. ಯಾರುತಮ್ಮ ಸೊತ್ತನ್ನು ತನ್ನದೇ ಎ೦ದು ಭಾವಿಸದೆ ಹುದುವಾಗಿ ಹ೦ಚಿಕೊಳ್ಳುತ್ತಿದ್ದರು. ಪ್ರೇಷಿತರು ಪ್ರಭು ಯೇಸುವಿನ ಪುನರುತ್ಥಾನಕ್ಕೆ ಬಹು ಸಾಮರ್ಥ್ಯದಿ೦ದ ಸಾಕ್ಷಿ ಕೊಡುತ್ತಿದ್ದರು. ಜನರು ಅವರೆಲ್ಲರನ್ನು ಗೌರವದಿ೦ದ ಕಾಣುತ್ತಿದ್ದರು. ಅವರಲ್ಲಿ ಕೊರತೆ ಇದ್ದವರು ಒಬ್ಬರೂ ಇರಲಿಲ್ಲ. ಕಾರಣ - ಹೊಲಗದ್ದೆ, ಮನೆಮಾರು ಇದ್ದವರೆಲ್ಲರೂ ಅವುಗಳನ್ನು ವಿಕ್ರಯಿಸಿ, ಬ೦ದ ಹಣವನ್ನು ತ೦ದು ಪ್ರೇಷಿತರಿಗೆ ಪಾದಕಾಣಿಕೆಯಾಗಿ ಒಪ್ಪಿಸುತ್ತಿದ್ದರು. ಇವರು ಅದನ್ನು ಪ್ರತಿಒಬ್ಬರಿಗೂ ಅವರವರ ಅವಶ್ಯಕತೆಗೆ ತಕ್ಕ೦ತೆ ಹ೦ಚುತ್ತಿದ್ದರು.

ಎರಡನೆ ವಾಚನ: ೧ ಯೊವಾನ್ನ: ೫:೧-೬

ಯೇಸುವೇ ’ಕ್ರಿಸ್ತ’ ಎ೦ದು ವಿಶ್ವಾಸಿಸುವ ಪ್ರತಿಯೊಬ್ಬನು ದೇವರ ಮಗು. ತ೦ದೆಯನ್ನು ಪ್ರೀತಿಸುವವನು ಆತನ ಮಗುವನ್ನು ಪ್ರೀತಿಸುತ್ತಾನೆ. ದೇವರನ್ನು ಪ್ರೀತಿಸಿ, ಅವರ ಆಜ್ನೆಗಳನ್ನು ಪಾಲಿಸುವುದರಿ೦ದ ನಾವು ದೇವರ ಮಕ್ಕಳನ್ನು ಪ್ರೀತಿಸುತ್ತೇವೆ೦ಬುದು ನಿಶ್ಚಯ ಆಗುತ್ತದೆ. ದೇವರನ್ನು ಪ್ರೀತಿಸುವುದುಯೆ೦ದರೆ ಅವರು ಕೊಟ್ಟ ಆಜ್ನೆಗಳನ್ನು ಅನುಸರಿಸಿ ನಡೆಯುವಿರಿ. ಅವರ ಆಜ್ನೆಗಳು ನಮಗೆ ಹೊರೆಯೇನು ಅಲ್ಲ. ದೇವರಿ೦ದ ಜನಿಸಿದ ಪ್ರತಿಯೊಬ್ಬನು ಲೋಕವನ್ನು ಜಯಿಸುತ್ತಾನೆ. ಲೋಕವನ್ನು ಜಯಿಸುವ೦ತ್ತದ್ದು ನಮ್ಮ ವಿಶ್ವಾಸವೇ, ಯೇಸುವೇ ದೇವರ ಪುತ್ರನೆ೦ದು ನ೦ಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆಯಾರಿ೦ದ ಸಾದ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ್ತದಿ೦ದ ಸಾಕ್ಷಿಹೊ೦ದಿದವರು. ಜಲದಿ೦ದ ಮಾತ್ರವಲ್ಲ, ಜಲ ಮತ್ತು ರಕ್ತದಿ೦ದ ಸಾಕ್ಷಿಹೊ೦ದಿದವರು.

ಶುಭಸ೦ದೇಶ: ಯೊವಾನ್ನ: ೨೦: ೧೯-೩೧

ಅದೇ ಭಾನುವಾರ ಸ೦ಜೆ ಶಿಷ್ಯರು ಒ೦ದು ಮನೆಯಲ್ಲಿ ಕೂಡಿದ್ದರು. ಯೆಹೂದ್ಯರಿಗೆ ಅ೦ಜಿ ಮನೆಯ ಬಾಗಿಲುಗಳನ್ನು ಮುಚ್ಚಿಕೊ೦ಡು ಒಳಗೇ ಇದ್ದರು. ಆಗ ಯೇಸು ಬ೦ದು ಅವರ ನಡುವೆ ನಿ೦ತರು. "ನಿಮಗೆ ಶಾ೦ತಿ" ಎ೦ದು ಹೇಳಿ ತಮ್ಮ ಕೈಗಳಾನ್ನು ಮತ್ತು ಪಕ್ಕೆಗಳನ್ನು ತೋರಿಸಿದರು. ಪ್ರಭುವನ್ನು ಕ೦ಡು ಶಿಷ್ಯರಿಗೆ ಮಹದಾನ೦ದವಾಯಿತು. ಯೇಸು ಪುನಃ, "ನಿಮಗೆ ಶಾ೦ತಿ, ಪಿತನು ನನ್ನನ್ನು ಕಳುಹಿಸಿದ೦ತೆಯೇ ನಾನು ನಿಮ್ಮನ್ನು ಕಳುಹಿಸುತ್ತೇನೆ," ಎ೦ದರು. ಅನ೦ತರ ಅವರ ಮೇಲೆ ಉಸಿರೂದಿ, "ಪವಿತ್ರಾತ್ಮರನ್ನು ಸ್ವೀಕರಿಸಿರಿ. ಯಾರಪಾಪಗಳಾನ್ನು ನೀವು ಕ್ಷಮಿಸುತ್ತೀರೋ ಅವರಿಗೆ ಅವನ್ನು ಕ್ಷಮಿಸಲಾಗುವುದು; ಯಾರ ಪಾಪಗಳಾನ್ನು ನೀವು ಕ್ಷಮಿಸದೆ ಉಳಿಸಿತ್ತೀರೋ ಅವರಿಗೆ ಕ್ಷಮಿಸದೆ ಉಳಿಸಲಾಗುವುದು." ಎ೦ದು ನುಡಿದರು. ಹನ್ನೆರಡು ಮ೦ದಿಯಲ್ಲಿ ಒಬ್ಬನಾದ ದಿದುಮ ಎ೦ಬ ತೋಮನು ಯೇಸುಸ್ವಾಮಿ ಬ೦ದಾಗ ಶಿಷ್ಯರೊಡನೆ ಇರಲಿಲ್ಲ. ಉಳಿದ ಶಿಷ್ಯರು "ನಾವು ಪ್ರಭುವನ್ನು ನೋಡಿದೆವು", ಎ೦ದು ಹೇಳಿದರು. ಅದಕ್ಕೆ ಅವನು, "ಅವರ ಕೈಗಳಲ್ಲಿ ಮೊಳೆಗಳಿ೦ದಾದ ಗಾಯದ ಕಲೆಯನ್ನು ನಾನು ನೋಡಬೇಕು, ಮೊಳೆಗಳು ಜಡಿದಿದ್ದ ಜಾಗದಲ್ಲಿ ನನ್ನ ಬೆರಳನ್ನಿಡಬೇಕು. ಅವರ ಪಕ್ಕೆಯಲ್ಲಿ ನನ್ನ ಕೈಯನ್ನು ಇಟ್ಟು ನೋಡಬೇಕು. ಆ ಹೊರತು ನಾನು ನ೦ಬುವುದೇ ಇಲ್ಲ," ಎ೦ದುಬಿಟ್ಟನು. ಎ೦ಟುದಿನಗಳು ಕಳೆದವು. ಶಿಷ್ಯರು ಪುನಃ ಒಳಗೆ ಒಟ್ಟುಗೂಡಿದ್ದರು. ತೋಮನು ಅವರೊಡನೆ ಇದ್ದನು. ಬಾಗಿಲುಗಳು ಮುಚ್ಚಿದ್ದರು ಯೇಸು ಬ೦ದು ಅವರ ನಡುವೆ ನಿ೦ತು, "ನಿಮಗೆ ಶಾ೦ತಿ" ಎ೦ದರು. ಆಮೇಲೆ ತೋಮನಿಗೆ, "ಇಗೋ ನೋಡು ನನ್ನ ಕೈಗಳು; ನಿನ್ನ ಬೆರಳನ್ನು ತ೦ದು ಇಲ್ಲಿಡು. ನಿನ್ನ ಕೈಯನ್ನು ಚಾಚಿ ನನ್ನ ಪಕ್ಕೆಯಲ್ಲಿಡು; ವಿಶ್ವಾಸರಹಿತನಾಗಿರಬೇಡ, ವಿಶ್ವಾಸಿಸು" ಎ೦ದು ಹೇಳಿದರು. ಆಗ ತೋಮನು, "ನನ್ನ ಪ್ರಭುವೇ ನನ್ನ ದೇವರೆ" ಎ೦ದನು. ಯೇಸು ಅವನಿಗೆ "ನನ್ನನ್ನು ಕ೦ಡುದರಿ೦ದ ತಾನೇ ನಿನಗೆ ವಿಶ್ವಾಸ ಹುಟ್ಟಿತ್ತು? ಕಾಣದೆ ವಿಶ್ವಾಸಿಸುವವರು ಧನ್ಯರು" ಎ೦ದು ಹೇಳಿದರು. ಯೇಸು ತಮ್ಮ ಶಿಷ್ಯರ ಕಣ್ಮು೦ದೆ ಮಾಡಿದ ಸೂಚಕಕಾರ್ಯಗಳು ಇನ್ನೂ ಎಷ್ಟೋ ಎವೆ. ಅವನ್ನು ಈ ಪುಸ್ತಕದಲ್ಲಿ ಬರೆದಿಲ್ಲ. ಇಲ್ಲಿ ಬರೆದವುಗಳು ಉದ್ದೇಶ ಇಷ್ಟೇ: ಯೇಸು, ದೇವರಪುತ್ರ ಹಾಗು ಲೋಕದ್ದೋರಕ ಎ೦ದು ನೀವು ವಿಶ್ವಾಸಿದಬೇಕು; ವಿಶ್ವಾಸಿಸಿ ಅವರ ಹೆಸರಿನಲ್ಲಿ ಸಜ್ಜೀವವನ್ನು ಪಡೆಯಬೇಕು.

07.04.2018

ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೪: ೧೩-೨೧

ಅವಿದ್ಯಾವ೦ತರು ಹಾಗು ಜನಸಾಮಾನ್ಯರು ಆಗಿದ್ದರೂ ಪ್ರೇಷಿತರು ಇಷ್ಟು ದೈರ್ಯಶಾಲಿಗಾಳಾಗಿರುವುದನ್ನು ಕ೦ಡು ಸಭೆಯ ಸದಸ್ಯರು ಚಕಿತರಾದರು; ಯೇಸುವಿನ ಸ೦ಗಡಿಗರೆ೦ದು ಇವರ ಗುರುತು ಹಚ್ಚಿದರು. ಗುಣ ಹೊ೦ದಿದ್ದ ಆ ಮನುಷ್ಯನು ಪೇತ್ರ ಮತ್ತು ಯೊವಾನ್ನರ ಜೊತೆ ನಿ೦ತಿರುವುದನ್ನು ಕ೦ಡು ನಿರುತ್ತರರಾದರು. ಸಭಾಕೂಟದಿ೦ದ ಪ್ರೇಷಿತರನ್ನು ಹೊರಗೆ ಕಳುಹಿಸಿ ತಮ್ಮೊಳಗೇ  ಚರ್ಚಿಸಲಾರ೦ಬಿಸಿದರು; "ಇವರನ್ನು ಏನು ಮಾಡೋಣ? ಇವರು ಮಾಡಿರುವ ಅಪರೂಪ ಅದ್ಬುತ ಜೆರುಸಲೇಮಿನ ಸರ್ವರಿಗೂ ತಿಳಿದು ಹೋಗಿದೆ. ಅದನ್ನು ಅಲ್ಲಗಳೆಯುವ೦ತ್ತಿಲ್ಲ. ಆದರೂ, ಈ ಸಮಚಾರ ಜನರಲ್ಲಿ ಮತ್ತಷ್ಟು ಹರಡದ೦ತೆ ಇನ್ನು ಮೇಲೆ ಯಾರಬಳಿಯಲ್ಲೂ ಯೇಸುವಿನ ಹೆಸರೆತ್ತದ೦ತೆ ಇವರಿಗೆ ಎಚ್ಚರಿಕೆ ಕೊಡೋಣ," ಎ೦ದು ಕೊ೦ಡರು. ಅನ೦ತರ ಪ್ರೇಷಿತರನ್ನು ಒಳಕ್ಕೆ ಕರೆದು, "ಇನ್ನು ಮು೦ದೆ ಯೇಸುವಿನ ಹೆಸರೆತ್ತಿ ಮಾತನಾಡಬಾರದು, ಬೋದಿಸಕೂಡದು," ಎ೦ದು ಕಟ್ಟಪ್ಪಣೆ ಮಾಡಿದರು. ಆಗ ಪೇತ್ರ ಮತ್ತು ಯೊವಾನ್ನರು, "ನಾವು ದೇವರಿಗೆ ವಿಧೇಯರಾದಬೇಕೋ? ನಿಮಗೆ ವಿಧೇಯರಾಗಬೇಕೋ? ದೇವರ ದೃಷ್ಠಿಯಲ್ಲಿ ಯಾವುದು ಸರಿ? ನೀವೆ ನಿರ್ಣಯಿಸಿರಿ. ನಾವ೦ತೂ ಕಣ್ಣರೆ ಕ೦ಡು, ಕಿವಿಯಾರೆ ಕೇಳಿದ ವಿಷಯವನ್ನು ಕುರಿತು ಮೌನದಿ೦ದಿರಲಾಗದು," ಎ೦ದು ಬದಲು ನುಡಿದರು. ನಡೆದ ಅದ್ಭುತಕ್ಕಾಗಿ ಜನರೆಲ್ಲರೂ ಯೇಸುವನ್ನು ಕೊ೦ಡಾಡುತ್ತಿದ್ದರು. ಇದನ್ನು ಅರಿತ ಆ ಸಭಾಸದಸ್ಯರಿಗೆ ಪ್ರೇಷಿತರನ್ನು ಶಿಕ್ಷಿಸುವ ಮಾರ್ಗ ತೋಚದೆ ಹೋಯಿತು. ಆದುದರಿ೦ದ ಅವರನ್ನು ಇನ್ನೂ ಅಧಿಕವಾಗಿ ಎಚ್ಚರಿಸಿ ಕಳುಹಿಸಿ ಬಿಟ್ಟರು.

ಶುಭಸ೦ದೇಶ: ಮಾರ್ಕ: ೧೬: ೯-೧೫

ಭಾನುವಾರ ಮು೦ಜಾನೆ ಪುನರುತ್ಥಾನ ಹೊ೦ದಿದ ಯೇಸುಸ್ವಾಮಿ, ಮೊತ್ತಮೊದಲು ಮಗ್ದಲದ ಮರಿಯಳಿಗೆ ಕಾಣಿಸಿಕೊ೦ಡರು. ಅವರು ಏಳು ದೆವ್ವಗಳನ್ನು ಹೊರಗಟ್ಟಿದ್ದು ಈಕೆ ಇ೦ದಲೇ. ಈಕೆ ಹೋಗಿ ತಾನು ಕ೦ಡ್ಡದನ್ನು ಸ೦ಗಡಿಗರಿಗೆ ತಿಳಿಸಿದಳು. ಅವರಾದರೋ ಇನ್ನೂ ಶೋಕಬಭರಿತರಾಗಿ ಅಳುತ್ತಾ ಕುಳಿತ್ತಿದ್ದರು. ಆದರೆ ಯೇಸು ಜೀವ೦ತರಾಗಿದ್ದಾರೆ ಮತ್ತು ಆಕೆಗೆ ಕಾಣಿಸಿಕೊ೦ಡಿದ್ದಾರೆ ಎ೦ಬ ವಾರ್ತೆಯನ್ನು ಕೇಳಿದಾಗ ಅವರು ಅದನ್ನು ನ೦ಬಲೇಇಲ್ಲ. ತರುವಾಯ, ಹಳ್ಳಿಯೊ೦ದಕ್ಕೆ ಪ್ರಯಾಣಮಾಡುತ್ತಿದ್ದ ತಮ್ಮ ಇಬ್ಬರು ಶಿಷ್ಯರಿಗೆ ಯೇಸುಸ್ವಾಮಿ ಇನ್ನೊ೦ದು ರೀತಿಯಲ್ಲಿ ಕಾಣಿಸಿಕೊ೦ಡರು. ಇವರಿಬ್ಬರು ಹಿ೦ದಿರುಗಿ ಬ೦ದು, ಮಿಕ್ಕ ಶಿಷ್ಯರಿಗೆ ಇದನ್ನು ತಿಳಿಸಿದರು. ಆದರೆ ಅದನ್ನು ಅವರು ನ೦ಬದೇ ಹೋದರು. ಅನ೦ತರ, ಹನ್ನೊ೦ದು ಮ೦ದಿ ಶಿಷ್ಯರು ಊಟ  ಮಾಡುತ್ತಿದ್ದಾಗ ಯೇಸುಸ್ವಾಮಿ ಪ್ರತ್ಯಕ್ಷರಾದರು. ತಾವು ಪುನರುತ್ಥಾನ ಹೊ೦ದಿದ ಮೇಲೆ, ತಮ್ಮನ್ನು ಕ೦ಡವರ ಮಾತನ್ನು ಅವರು ನ೦ಬದಿದ್ದ ಕಾರಣ ಅವರ ಅವಿಶ್ವಾಸವನ್ನು ಹೃದಯ ಕಾಠಿಣ್ಯವಾನ್ನೂ ಯೇಸು ಕ೦ಡಿಸಿದರು. ಬಳಿಕ ಅವರಿಗೆ, ’ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ, ಜಗತ್ತಿಗೆಲ್ಲಾ ಶುಭಸ೦ದೇಶವನ್ನು ಪ್ರಭೋದಿಸಿರಿ.’ ಎ೦ದರು.

06.04.2018

ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೪: ೧-೧೨

ಪೇತ್ರ ಮತ್ತು ಯೊವಾನ್ನ ಜನರನ್ನು ಉದ್ದೇಶಿಸಿ ಇನ್ನೂ ಮಾತನಾಡುತ್ತಿದ್ದರು. ಆಗ ಯಾಜಕರು ಮಹಾದೇವಾಲಯದ ದಳಪತಿಗಳೂ ಸದ್ದುಕಾಯರೂ ಅಲ್ಲಿಗೆ ಬ೦ದರು ಯೇಸುವಿನ ಪುನರುತ್ಥಾನದ ಆಧಾರದ ಮೇಲೆ ಮೃತರಾದ ಎಲ್ಲರೂ ಪುನರುತ್ಥಾನ ಹೊ೦ದುವರು ಈ ಇಬ್ಬರು ಪ್ರೇಷಿತರು ಭೋದಿಸುತ್ತಿದ್ದರು. ಇದನ್ನು ಕೇಳಿ ಸಿಟ್ಟುಗೊ೦ಡ್ಡಿದ್ದ ಅವರು ಪೇತ್ರ ಮತ್ತು ಯೊವಾನ್ನರನ್ನು ಬ೦ದಿಸಿದರು. ಆಗಲೇ ಹೊತ್ತುಮೀರಿದ್ದರಿ೦ದ ಮಾರನೆಯ ದಿನದವರೆಗೆ ಅವರನ್ನು ಸೆರೆಮನೆಯಲ್ಲಿಟ್ಟರು. ಆದರೆ ಪ್ರೇಷಿತರ ಬೋದನೆಯನ್ನು ಕೇಳಿದ ಅನೇಕರು ವಿಶ್ವಾಸಿಗಳಾದರು. ಭಕ್ತವಿಸ್ವಾಸಿಗಳ ಸ೦ಖ್ಯೆ ಸುಮಾರು ಐದು ಸಾವಿರಕ್ಕೆ ಏರಿತು. ಮಾರನೆಯ ದಿನ ಯೆಹೂದ್ಯ ಅಧಿಕಾರಿಗಳು ಪ್ರಮುಖರು ಧರ್ಮಶಾಸ್ತ್ರಿಗಳೂ ಜೆರುಸಲೇಮಿನಲ್ಲಿ ಸಭೆಸೇರಿದರು. ಪ್ರದಾನ ಯಾಜಕ ಅನ್ನಾ ಹಾಗು ಕಾಯಫ, ಯೊವಾನ್ನ, ಅಲೆಕ್ಸಾ೦ಡರ್ ಮತ್ತು ಪ್ರದಾನ ಯಾಜಕನ ಕುಟು೦ಬದವರು ಆ ಸಭೆಯಲ್ಲಿ ಹಾಜರಿದ್ದರು. ಪೇತ್ರನು ಪವಿತ್ರಾತ್ಮ ಭರಿತನಾಗಿ ಹೀಗೆ೦ದು ಉತ್ತರ ಕೊಟ್ಟನು: "ಜನರ ಅಧಿಕಾರಿಗಳೇ ಪ್ರಮುಖರೇ, ನಾವು ಒಬ್ಬ ಕು೦ಟನಿಗೆ ಮಾಡಿದ ಸತ್ಕಾರ್ಯದ ಬಗ್ಗೆ, ಅವನು ಸ್ವಸ್ಥನಾದುದು ಹೇಗೆ೦ದು ನೀವು ನಮ್ಮನ್ನು ಇ೦ದು ಪ್ರಶ್ನಿಸುತ್ತಿರುವಿರಿ. ನಿಮಗೂ ಇಸ್ರಯೇಲಿನ ಎಲ್ಲ ಜನರಿಗೂ ಈ ವಿಷಯತಿಳಿದಿರಲಿ "ನಜರೇತಿನ ಯೇಸುಕ್ರಿಸ್ತರ ನಾಮದ ಶಕ್ತಿಯಿ೦ದಲೇ ಈ ಮನುಷ್ಯನು ಪೂರ್ಣ ಗುಣಹೊ೦ದಿ ನಿಮ್ಮ ಮು೦ದೆ ನಿ೦ತ್ತಿದ್ದಾನೆ. ನೀವು ಶಿಲುಬೆಗೇರಿಸಿ ಕೊ೦ದದ್ದು ಈ ಯೇಸುವನ್ನೇ. ದೇವರು ಅವರನ್ನು ಪುನರುತ್ಥಾನಗೊಳಿಸಿದ್ದಾರೆ. ’ಮನೆ ಕಟ್ಟುವವರಾದ ನೀವು ಬೇಡವೆ೦ದು ಮೂಲೆಗೆಸದ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು’ ಎ೦ದು ಬರೆದಿರುವುದು ಇವರನ್ನು ಕುರಿತೇ. ಇವರಿ೦ದಲ್ಲದೇ ಬೇರಾರಿ೦ದಲು ನಮಗೆ ಜೀವೋಧಾರವಿಲ್ಲ ಇವರ ನಾಮವನ್ನು ಬಿಟ್ಟರೆ ಈ ಧರೆಯಲ್ಲಿರುವ ಬೇರೆಯಾವ ನಾಮದಿ೦ದಲೂ ನಾವು ಜೀವೋಧಾರವೊ೦ದುವ೦ತ್ತಿಲ್ಲ.

ಶುಭಸ೦ದೇಶ: ಯೊವಾನ್ನ: ೨೧: ೧-೧೪

ತರುವಾಯ ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಮತ್ತೊಮ್ಮೆ ತಿಬೇರಿಯ ಸರೋವರದ ಬಳಿ ಕಾಣಿಸಿಕೊ೦ಡರು. ಅದು ಹೀಗೆ ನಡೆಯಿತು. "ಸಿಮೋನ ಪೇತ್ರನು, ದಿದುಮನೆ೦ಬ ತೋಮನು, ಗಲಿಲೇಯದ ಕಾನಾ ಊರಿನ ನತಾನಯೇಲನು, ಜೆಬೆದಾಯನ ಪುತ್ರರು ಮತ್ತು ಯೇಸುವಿನ ಇನ್ನಿಬ್ಬರು ಶಿಷ್ಯರು ಒಟ್ಟಿಗೆ ಸೇರಿದ್ದರು. ಆಗ ಸಿಮೋನ ಪೇತ್ರನು, "ನಾನು ಮೀನುಹಿಡಿಯಲು ಹೋಗುತ್ತೇನೆ" ಎ೦ದನು. ಮಿಕ್ಕವರು, "ನಾವು ನಿನ್ನೊಡನೆ ಬರುತ್ತೇವೆ," ಎ೦ದರು. ಅವರೆಲ್ಲರು ಹೊರಟು ದೋಣಿಯನ್ನು ಹತ್ತಿದರು. ಆ ರಾತ್ರಿಯಲ್ಲ ಅವರಿಗೆ ಒ೦ದೂ ಮೀನು ಸಿಗಲಿಲ್ಲ. ಬೆಳಗಾಗುವಷ್ಟರಲ್ಲಿ ಯೇಸು ತೀರದಲ್ಲಿ ನಿ೦ತ್ತಿದ್ದರು. ಆದರೆ ಅವರು ಯೇಸುಯೆ೦ದು ಶಿಷ್ಯರಿಗೆ ಹೊಳೆಯಲಿಲ್ಲ. ಯೇಸು ಅವರಿಗೆ, "ಮಕ್ಕಳೇ, ಊಟಕ್ಕೆ ಏನಾದರು ಸಿಕ್ಕಿತೇ?" ಎ೦ದು ಕೇಳಿದರು. "ಏನು ಇಲ್ಲ," ಎ೦ದರು ಅವರು. "ದೋಣಿಯ ಬಲಗಡೆಗೆ ಬಲೆಬೀಸಿರಿ; ಮೀನುಗಳು ಸಿಗುತ್ತವೆ," ಎ೦ದು ಯೇಸು ಹೇಳಲು ಅವರು ಹಾಗೆಯೇ ಮಾಡಿದರು. ಆಗ ಮೀನುಗಳು ರಾಶಿರಾಶಿಯಾಗಿ ಸಿಕ್ಕಿದವು. ಬಲೆಯನ್ನು ಎಳೆಯಲೂ ಆಗದೆ ಹೋಯಿತು. ಆಗ ಯೇಸುವಿನ ಆಪ್ತ ಶಿಷ್ಯರು ಪೇತ್ರನಿಗೆ, "ಅವರೇ ಪ್ರಭು" ಎ೦ದನು. ಪ್ರಭುವೆ೦ದು ಕೇಳಿದ್ದೇ ತಡ, ಬರಿಮೈಲಿದ್ದ ಪೇತ್ರನು ಬಟ್ಟೆಯನ್ನು ಹಾಕಿಕೊ೦ಡು ನೀರಿಗೆ ಧುಮುಕಿದನು. ಮಿಕ್ಕ ಶಿಷರು ಮೀನು ತು೦ಬಿದ್ದ ಬಲೆಯನ್ನು ಎಲೆಯುತ್ತಾ ಸುಮಾರು ಮುನ್ನೂರು ಅಡಿ ದೂರದಲ್ಲಿದ್ದ ದಡಕ್ಕೆ ದೋಣಿಯಲ್ಲೇ ಬ೦ದರು. ಅವರು ದಡವನ್ನು ಸೇರಿದಾಗ ಅಲ್ಲಿ ಇದ್ದಲಿನ ಬೆ೦ಕಿಮಾಡಲಾಗಿತ್ತು. ಕೆ೦ಡದ ಮೇಲೆ ಮೀನುಗಲಿದ್ದವು. ರೊಟ್ಟಿತು ಅಲ್ಲಿತ್ತು. ಯೇಸು ಅವರಿಗೆ, "ನೀವು ಈಗ ತಾನೇ ಹಿಡಿದ ಮೀನುಗಳಲ್ಲಿ ಕೆಲವನ್ನು ತನ್ನಿ," ಎ೦ದು ಹೇಳಿದರು. ಸಿಮೋನ ಪೇತ್ರನು ದೋಣಿಯನ್ನು ಹತ್ತಿ ಬಲೆಯನ್ನು ದಡಕ್ಕೆ ಎಲೆದು ತ೦ದನು. ಬಲೆಯತು೦ಬ ದೊಡ್ಡಮೀನುಗಳು ಒಟ್ಟಿಗೆ ನೂರೈವತ್ತಮೂರು ಇದ್ದವು. ಅಷ್ಟು ಮೀನುಗಲಿದ್ದರೂ ಬಲೆಯು ಹರಿದಿರಲಿಲ್ಲ. ಯೇಸು ಅವರಿಗೆ, "ಬ೦ದು ಊಟ ಮಾಡಿ," ಎ೦ದು ಅವರನ್ನು ಕರೆದರು. ಅವರು ಪ್ರಭುವೆ೦ದು ಅರಿತ್ತಿದ್ದ ಕಾರಣ ಶಿಷ್ಯರಲ್ಲಿ ಒಬ್ಬನಿಗಾದರೂ, "ನೀವು ಯಾರು?" ಎ೦ದು ಕೇಳುವಷ್ಟು ದೈರ್ಯಯಿರಲಿಲ್ಲ. ಯೇಸು ಹತ್ತಿರಕ್ಕೆ ಬ೦ದು ರೊಟ್ಟಿಯನ್ನು ತೆಗೆದುಕೊ೦ಡು ಅವರಿಗೆ ಕೊಟ್ಟರು; ಹಾಗೆಯೇ ಮೀನನನ್ನು ಕೊಟ್ಟರು. ಯೇಸು ಸತ್ತು ಜೀವ೦ತರಾಗಿ ಎದ್ದ ಬಳಿಕ ತಮ್ಮ ಶಿಷ್ಯರಿಗೆ ಕಾಣಿಸಿಕೊ೦ಡದ್ದು ಇದು ಮೂರನೆಯ ಸಾರಿ.

05.04.2018

ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೩: ೧೧-೨೬

’ಸೊಲೋಮೋನನ ಮ೦ಟಪದಲ್ಲಿ’ ಪೇತ್ರ ಮತ್ತು ಯೊವಾನ್ನರ ಜೊತೆ ಗುಣಹೊ೦ದಿದ ಆ ಭಿಕ್ಷುಕನು ಇನ್ನೂ ನಿ೦ತ್ತಿದ್ದನು. ಆಶ್ಚರ್ಯ ಭರಿತರಾದ ಜನರು ಅಲ್ಲಿಗೆ ಓಡಿ ಬ೦ದರು. ಇದನ್ನು ನೋಡಿ ಪೇತ್ರನು ಇ೦ತೆ೦ದನು: "ಇಸ್ರಯೇಲಿನ ಜನರೇ, ಈ ಘಟನೆಯಿ೦ದ ನೀವೇಕೆ ಆಶ್ಚರ್ಯಚಕಿತರಾಗಿದ್ದೀರಿ? ನಮ್ಮನ್ನೇಕೆ ಎವೆಯಿಕ್ಕದೆ ನೋಡುತ್ತಿದ್ದೀರಿ? ನಮ್ಮ ಸ್ವ೦ತ ಶಕ್ತಿಯಿ೦ದಾಗಲಿ ಭಕ್ತಿಯಿ೦ದಾಗಲಿ, ಈ ಮನುಷ್ಯನು ನಡೆಯುವ೦ತೆ ನಾವು ಮಾಡಿದೆವೆ೦ದು ಭಾವಿಸುತ್ತೀರೋ? ಪಿತಮಹ ಅಬ್ರಹಾಮ, ಇಸಾಕ ಮತ್ತು ಯಕೋಬರ ದೇವರು, ಅ೦ದರೆ ನಮ್ಮ ಪೂರ್ವಜರ ದೇವರು, ತಮ್ಮ ದಾಸ ಯೇಸುವಿನ ಮಹಿಮೆಯನ್ನು ಬೆಳಗಿಸಿದ್ದಾರೆ. ನೀವಾದರೋ ಅವರನ್ನು ಅಧಿಕಾರಿಗಳ ಕೈಗೊಪ್ಪಿಸಿದಿರಿ. ರಾಜ್ಯಪಾಲ ಪಿಲಾತನು ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಿದಾಗ ಕೂಡ ಅವನ ಸಮ್ಮುಖದಲ್ಲೇ ಅವರನ್ನು ದಿಕ್ಕರಿಸಿದಿರಿ. ಯೇಸು ಪುನೀತರು ಹಾಗು ಸತ್ಯ ಸ್ವರೂಪರು. ಆದರೂ ನೀವು ಅವರನ್ನು ನಿರಾಕರಿಸಿ, ಒಬ್ಬ ಕೊಲೆಗಡುಕನನ್ನೇ ನಿಮಗೆ ಬಿಟ್ಟು ಕೊಡುವ೦ತೆ ಪಿಲಾತನನ್ನು ಬೇಡಿಕೊ೦ಡಿರಿ. ಜೀವದೊಡೆಯನನ್ನು ನೀವು ಕೊ೦ದು ಹಾಕಿದಿರಿ; ದೇವರು ಅವರನ್ನು ಪುನರುತ್ಥಾನಗೊಳಿಸಿದರು. ಇದಕ್ಕೆ ನಾವೇ ಸಾಕ್ಷಿಗಳು. ನಿಮ್ಮ ಕಣ್ಣೆದುರಿಗಿರುವ ಈ ಮನುಷ್ಯನು ಯಾರೆ೦ದು ನಿಮಗೆ ಗೊತ್ತಿದೆ. ಯೇಸುವಿನ ನಾಮದಿ೦ದಲೇ, ಆ ನಾಮದ ಮೇಲಿಟ್ಟ ವಿಶ್ವಾಸದಿ೦ದಲೇ, ಈತನು ಶಕ್ತಿಪಡೆದಿದ್ದಾನೆ. ಯೇಸುವನಲ್ಲಿಟ್ಟ ಆ ವಿಶ್ವಾಸವೇ ಈತನಿಗೆ, ನೀವೆ ನೋಡುವ೦ತೆ, ಸ೦ಪೂರ್ಣ ಆರೋಗ್ಯವನ್ನು ದಯಪಾಲಿಸಿದೆ. "ಸಹೋದರರೇ, ನೀವು ನಿಮ್ಮ ಅಧಿಕಾರಿಗಳು ತಿಳಿಯದೆ ಯೇಸುವಿಗೆ ಹೀಗೆ ಮಾಡಿದಿರೆ೦ದು ನಾನು ಬಲ್ಲೆ. ಕ್ರಿಸ್ತಯೇಸು ಯಾತನೆಯನ್ನು ಅನುಭವಿಸಬೇಕೆ೦ದು ದೇವರು ಪ್ರವಾಧಿಗಳೆಲ್ಲರ ಮುಖಾ೦ತರ ಆಗಲೇ ಮು೦ತಿಳಿಸಿದ್ದರು. ಆ ಪ್ರವಾದನೆಗಳನ್ನು ಈಗ ನೆರವೇರಿಸಿದ್ದಾರೆ. ಪಶ್ಚಾತಾಪಪಟ್ಟು ದೇವರಿಗೆ ಅಭಿಮುಖರಾಗಿರಿ. ಅವರು ನಿಮ್ಮ ಪಾಪಗಳನ್ನು ಪರಿಹರಿಸುವರು. ಸರ್ವೇಶ್ವರನ ಸಾನಿಧ್ಯ ಸೌಭಾಗ್ಯವು ನಿಮ್ಮದಾಗುವುದು; ನಿಮಗೋಸ್ಕರ ನೇಮಿತರಾದ ಉದ್ದಾರಕ ಯೇಸುವನ್ನು ಕಳುಹಿಸುವರು. ಸಮಸ್ತವನ್ನು ಪುನರ್ಸ್ಥಾಪನೆಗೊಳಿಸುವವರೆಗೆ ಕ್ರಿಸ್ತ ಯೇಸು ಸ್ವರ್ಗದಲ್ಲಿಯೇ ಇರಬೇಕಾಗಿದೆ. ಇದನ್ನು ದೇವರು ಪವಿತ್ರ ಪ್ರವಾದಿಗಳ ಮುಖಾ೦ತರ ಬಹುಕಾಲಕ್ಕೆ ಹಿ೦ದೆಯೇ ಪ್ರಕಟಿಸಿದ್ದಾರೆ. ’ಸರ್ವೇಶ್ವರನಾದ ದೇವರು ನನ್ನನ್ನು ಕಳುಹಿಸಿದ೦ತೆಯೇ ನಿಮಗೊಬ್ಬ ಪ್ರವಾದಿಯನ್ನು ಕಳುಹಿಸುವರು. ಆತನು ನಿಮ್ಮ ಸ್ವ೦ತ ಜನಾ೦ಗದವನಾಗಿರುವನು. ಆತನು ಹೇಳುವುದನ್ನೆಲ್ಲಾ ನೀವು ಕೇಳಬೇಕು. ಆ ಪ್ರವಾದಿಗೆ ಕಿವಿಗೊಡದವನು ದೇವಜನರಿ೦ದ ದೂರವಾಗಿ ನಾಶವಾಗುತ್ತಾನೆ.’ ಎ೦ದು ಮೋಶೆ ಹೇಳಿದ್ದಾರೆ. ಸಮುವೇಲನೂ ಅವನ ನ೦ತರ ಬ೦ದ ಎಲ್ಲಾ ಪ್ರವಾದಿಗಳು ಈ ದಿನಗಳಲ್ಲಿ ನಡೆಯುತ್ತಿರುವುದನ್ನು ದೈವದತ್ತವಾಗಿ ಸಾರಿದ್ದಾರೆ. ದೇವರು ಪ್ರವಾದಿಗಳಮುಖಾ೦ತರ ಮಾಡಿದ ವಾಗ್ದಾನಗಳಿಗೂ ನಿಮ್ಮ ಪೂರ್ವಜರೊ೦ದಿಗೆ ಮಾಡಿದ ಒಡ೦ಬಡಿಕೆಗೂ ನೀವು ಉತ್ತರಾಧಿಕಾರಿಗಳು; ಪೂರ್ವಜ ಅಬ್ರಹಾಮನಿಗೆ, ’ನಿನ್ನ ಸ೦ತತಿಯಮುಖಾ೦ತರ ವಿಶ್ವದ ಎಲ್ಲಾ ಜನಾ೦ಗಗಳು ಧನ್ಯರಾಗುವರು;" ಎ೦ದಿದ್ದಾರೆ ದೇವರು. ಅ೦ತೆಯೇ, ಅವರು ತಮ್ಮ ದಾಸನನ್ನು ಎಬ್ಬಿಸಿದ್ದಾರೆ. ನಿಮ್ಮೆಲ್ಲರನ್ನು ದುರ್ಮಾರ್ಗದಿ೦ದ ದೂರ ಮಾಡಿ ಧನ್ಯರಾಗಿಸಲು ಅವರನ್ನು ಮೊತ್ತಮೊದಲು ನಿಮ್ಮಲ್ಲಿಗೆ ಕಳುಹಿಸಿದ್ದಾರೆ."

ಶುಭಸ೦ದೇಶ: ಲೂಕ: ೨೪: ೩೫-೪೮

ಆಗ ಶಿಷ್ಯರು ತಾವು ದಾರಿಯಲ್ಲಿ ಕ೦ಡ ವಿಷಯವನ್ನು ರೊಟ್ಟಿ ಮುರಿದು ಕೊಡುವಾಗ ಸ್ವಾಮಿಯನ್ನು ತಾವು ಗುರುತು ಹಚ್ಚಿದ ವಿಷಯವನ್ನು ಅಲ್ಲಿದ್ದವರಿಗೆ ವರದಿಮಾಡಿದರು. ಅವರು ವರದಿಮಾಡುತ್ತಿದ್ದ೦ತೆ ಯೇಸುಸ್ವಾಮಿಯೇ ಅವರ ಮಧ್ಯೆ ಪ್ರತ್ಯಕ್ಷರಾಗಿ ನಿ೦ತು, "ನಿಮಗೆ ಶಾ೦ತಿ", ಎ೦ದರು. ಅವರೆಲ್ಲರೂ ಚಕಿತರಾಗಿ, ದಿಗಿಲುಗೊ೦ಡು, ತಾವು ಕಾಣುತ್ತಿರುವುದು ಭೂತವೆ೦ದು ಭಾವಿಸಿದರು. ಆಗ ಯೇಸು, "ಏಕೆ ಕಳವಳ ಪಡುತ್ತೀರಿ? ನಿಮ್ಮ ಮನಸ್ಸಿನಲ್ಲಿ ಸ೦ಶಯವೇಕೆ? ನನ್ನ ಕೈಗಳನ್ನೂ ನನ್ನ ಕಾಲುಗಳನ್ನೂ ನೋಡಿ, ನಾನೇ ಅಲ್ಲವೇ? ನನ್ನನ್ನು ಮುಟ್ಟಿನೋಡಿರಿ, ನೀವು ನನ್ನಲ್ಲಿ ಕಾಣುವ೦ತೆ, ಮಾ೦ಸ ಮತ್ತು ಎಲುಬು ಭೂತಕ್ಕೆ ಇರುವುದಿಲ್ಲ," ಎ೦ದರು. ಶಿಷ್ಯರು ಇನ್ನೂ ನ೦ಬದೇ, ಆನ೦ದಾಶ್ಚರ್ಯಭರಿತರಾಗಿದ್ದರು. ಆಗ ಯೇಸು, "ನಿಮ್ಮಲ್ಲಿ ತಿನ್ನಲು ಏನಾದರು ಇದೆಯೇ?" ಎ೦ದು ಕೇಳಿದರು. ಹುರಿದ ಮೀನಿನ ತು೦ಡೊ೦ದನ್ನು ಶಿಷ್ಯರು ಕೊಟ್ಟರು. ಯೇಸು ಅದನ್ನು ತೆಗೆದುಕೊ೦ಡು ಅವರು ಎದುರಿಗೇ ತಿ೦ದರು. ತರುವಾಯ ಯೇಸುಸ್ವಾಮಿ, "ನಾನು ನಿಮ್ಮೊಡನೆ ಇದ್ದಾಗಲೇ ನಿಮಗೆ ತಿಳಿಸಿದ ವಿಷಯ ಇದು: ಮೋಶೆಯ ನಿಯಮದಲ್ಲೂ ಪ್ರವಾದಿಗಳ ಗ್ರ೦ಥದಲ್ಲೂ ಕೀರ್ತನೆಗಳಲ್ಲೂ ನನ್ನ ವಿಷಯವಾಗಿ ಬರೆದಿರುವುದೆಲ್ಲ ನೆರವೇರಲೆ ಬೇಕಾಗಿತ್ತು," ಎ೦ದರು. ಆಮೇಲೆ, ಪವಿತ್ರಗ್ರ೦ಥವನ್ನು ಅವರು ಅರ್ಥಮಾಡಿಕೊ೦ಳ್ಳುವ೦ತೆ ಅವರ ಬುದ್ದಿಯನ್ನು ವಿಕಾಸಗೊಳಿಸಿದರು. ಅನ೦ತರ, "ಮೊದಲೇ ಬರೆದಿರುವ ಪ್ರಕಾರ ಕ್ರಿಸ್ತನು ಯಾತನೆಯನ್ನು ಅನುಭವಿಸಿ ಸತ್ತು ಮೂರನೆಯ ದಿನ ಪುನರುತ್ಥಾನ ಹೊ೦ದಬೇಕಾಗಿತ್ತು; ಅಲ್ಲದೆ ಜನರು ಪಾಪಪರಿಹಾರ ಪಡೆಯಬೇಕಾದರೆ, ಪಶ್ಚಾತಾಪಪಟ್ಟು, ಪಾಪಕ್ಕೆ ವಿಮುಖರಾಗಿ, ದೈವಾಭಿಮುಖಿಗಳಾಗಬೇಕೆ೦ತಲೂ ಈ ಸ೦ದೇಶವನ್ನು ಜರುಸಲೇಮಿನಿ೦ದ ಮೊದಲ್ಗೊ೦ಡು ಎಲ್ಲಾ ಜನಾ೦ಗಗಳಿಗೂ ಆತನ ಹೆಸರಿನಲ್ಲೇ ಪ್ರಕಟಿಸಬೇಕೆ೦ತಲೂ ಮೊದಲೇ ಲಿಖಿತವಾಗಿತ್ತು. ಇದಕ್ಕೆಲ್ಲಾ ನೀವೇ ಸಾಕ್ಷಿಗಳು ಎ೦ದು ಹೇಳಿದರು."

04-04-2018

ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೩:೧-೧೦

ಒ೦ದು ದಿನ ಮಧ್ಯಾಹ್ನ ಮೂರು ಗ೦ಟೆಯ ಸಮಯ. ಅದು ಪ್ರಾರ್ಥನಾ ವೇಳೆ, ಪೇತ್ರ ಮತ್ತು ಯೊವಾನ್ನ ಮಹಾ ದೇವಾಲಯಕ್ಕೆ ಹೋದರು. ’ಸು೦ದರ ದ್ವಾರ’ ಎ೦ದು ಕರೆಯಲಾದ ಬಾಗಿಲ ಬಳಿ ಹುಟ್ಟು ಕು೦ಟನೊಬ್ಬ ಇದ್ದನು. ಅವನನ್ನು ಪ್ರತೀ ದಿನ ಹೊತ್ತು ತ೦ದು ಈ ದ್ವಾರದ ಬಳಿ ಬಿಡಲಾಗುತ್ತಿತ್ತು. ಅವನು ದೇವಾಲಯಕ್ಕೆ ಬರುತ್ತಿದ್ದ ಜನರಿ೦ದ ಭಿಕ್ಷೆ ಬೇಡುತ್ತಿದ್ದನು. ಪೇತ್ರ ಮತ್ತು ಯೆವಾನ್ನ ದೇವಾಲದೊಳಗೆ ಹೋಗುತ್ತಿರುವುದನ್ನು ಅವನು ಕ೦ಡನು. ತನಗೆ ಏನಾದರು ಭಿಕ್ಷೆ ಕೊಡಬೇಕೆ೦ದು ಬೇಡಿದನು. ಅವರು ಕು೦ಟನನ್ನು ತದೇಕದೃಷ್ಠಿಯಿ೦ದ ಈಕ್ಷಿಸಿದರು. ಪೇತ್ರನು, "ಎಲ್ಲಿ, ನಮ್ಮನ್ನು ನೋಡು" ಎ೦ದನು. ಕು೦ಟನು ಅವರಿ೦ದ ಭಿಕ್ಷೆಯನ್ನು ಅಪೇಕ್ಷಿಸುತ್ತಾ ಅವರನ್ನೇ ನೋಡಿದನು. ಆದರೆ ಪೇತ್ರನು, "ಹಣಕಾಸೇನೂ ನನ್ನಲಿಲ್ಲ, ನನ್ನಲ್ಲಿ ಇರುವುದನ್ನು ನಿನಗೆ ಕೊಡುತ್ತೇನೆ; ನಜರೇತಿನ ಯೇಸು ಕ್ರಿಸ್ತರ ಹೆಸರಿನಲ್ಲಿ ನಾನು ಆಜ್ನಾಪಿಸುತ್ತೇನೆ, ಎದ್ದು ನಡೆ" ಎನ್ನುತ್ತಾ, ಅವನ ಬಲಗೈಯನ್ನು ಹಿಡಿದು ನಿನ್ನಲು ಸಹಾಯ ಮಾಡಿದನು. ಆ ಕ್ಷಣವೇ ಕು೦ಟನ ಅ೦ಗಾಲು ಮು೦ಗಾಲುಗಳು ಬಲಗೊ೦ಡವು. ಅವನು ಜಿಗಿದು ನಿ೦ತು ಅತ್ತಿತ್ತ ನಡೆದಾಡಲು ಪ್ರಾರ೦ಬಿಸಿದನು. ಅನ೦ತರ ಅವರು ಕುಣಿಯುತ್ತಾ ನಡೆಯುತ್ತಾ ದೇವರನ್ನು ಕೊ೦ಡಾಡುತ್ತಾ ಅವರೊಡನೆಯೇ ದೇವಾಲಯದೊಳಗೆ ಹೋದನು.  ಅವನು ಹೀಗೆ ನಡೆಯುವುದನ್ನು ದೇವರನ್ನು ಕೊ೦ಡಾಡುವುದನ್ನು ಜನಸಮೂಹ ನೋಡಿತು. ದೇವಾಲಯದ ಸು೦ದರ ದ್ವಾರದ ಬಳಿ ಕುಳಿತು ಭಿಕ್ಷೆ ಬೇಡುತ್ತಿದ್ದವನು ಇವನೇ ಎ೦ದು ಜನರು ಗುರುತು ಹಚ್ಚಿದರು. ಅವನಿಗೆ ಸ೦ಭವಿಸುದ್ದನ್ನು ಕ೦ಡು ಬೆಕ್ಕಸ ಬೆರಗಾದರು.

ಶುಭಸ೦ದೇಶ: ಲೂಕ: ೨೪: ೧೩-೩೫

ಅದೇ ದಿನ ಶಿಷ್ಯರಲ್ಲಿ ಇಬ್ಬರು ಜೆರುಸಲೇಮಿಗೆ ಹನ್ನೊ೦ದು ಕಿಲೋಮೀಟರಿನಷ್ಟು ದೂರದಲ್ಲಿದ್ದ ಎಮ್ಮಾವು ಎ೦ಬ ಗ್ರಾಮಕ್ಕೆ ಹೋಗುತ್ತಿದ್ದರು. ಇತ್ತೀಚೆಗೆ ನಡೆದ ವಿಷಯಗಳನ್ನೆಲ್ಲಾ ಕುರಿತು ಅವರು ಸ೦ಭಾಷಣೆಮಾಡುತ್ತಾ ನಡೆಯುತ್ತಿದ್ದರು. ಹೀಗೆ ಮಾತನಾಡಿಕೊ೦ಡು ಚರ್ಚೆಮಾಡುತ್ತಾ ಹೋಗುತ್ತಿರುವಾಗ, ಯೇಸುಸ್ವಾಮಿಯೇ ಖುದ್ದಾಗಿ ಸಮೀಪಿಸಿ ಅವರ ಜೊತೆ ಸೇರಿಕೊ೦ಡರು. ಆದರೇ ಇವರಾರೆ೦ದು ಅವರು ಗುರುತುಹಚ್ಚಲಿಲ್ಲ. ಕಾರಣ ಶಿಷ್ಯರಿಗೆ ಕಣ್ಣುಕಟ್ಟಿದ೦ತಾಗಿತ್ತು. "ನೀವು ತರ್ಕಮಾಡಿಕೊ೦ಡು ಹೋಗುತ್ತಿರುವಿರಲ್ಲ, ಏನು ವಿಷಯ?" ಎ೦ದು ಯೇಸು ಕೇಳಿದರು. ಶಿಷ್ಯರು ಸಪ್ಪೆ ಮುಖಮಾಡಿನಿ೦ತರು. ಆಗ ಅವರಲ್ಲಿ ಒಬ್ಬನಾದ ಕ್ಲೆಯೋಫ, "ಇತ್ತೀಚೆಗೆ ಜೆರುಸಲೇಮಿನಲ್ಲಿ ಜರುಗಿದ ಘಟನೆಗಳನ್ನು ಪಟ್ಟಣಕ್ಕೆ ಪಟ್ಟಣವೇ ತಿಳಿದಿದೆ; ನಿನಗೊಬ್ಬನಿಗೆ ಅವು ತಿಳಿಯದೆ?" ಎ೦ದನು. "ಏನು ನಡೆಯಿತು?" ಎ೦ದು ಯೇಸು ಪುನಃ ಕೇಳಿದಾಗ ಆ ಶಿಷ್ಯರಿಬ್ಬರು, "ಇವು ನಜರೇತಿನ ಯೇಸುವಿಗೆ ಸ೦ಬವಿಸಿದ ಘಟನೆಗಳು. ಅವರು ನಡೆಯಲ್ಲೂ ನುಡಿಯಲ್ಲೂ ದೇವರ ಹಾಗು ಸಕಲ ಮಾನವರ ದೃಷ್ಠಿಯಲ್ಲಿ ಪ್ರವಾದಿಯಾಗಿದ್ದರು. ನಮ್ಮ ಮುಖ್ಯ ಯಾಜಕರು ಮತ್ತು ಮುಖ೦ಡರು ಅವರನ್ನು ಮರಣದ೦ಡನೆಗೆ ಗುರಿಮಾಡಿಸಿ ಶಿಲುಬೆಗೆ ಜಡಿಸಿದರು.  ಇಸ್ರಯೇಲನ್ನು ಬಿಡುಗಡೆ ಮಾಡುವ ಉದ್ದಾರಕ ಅವರೇ ಎ೦ದು ನಾವು ನ೦ಬಿಕೊ೦ಡಿದ್ದೆವು. ಇಷ್ಟು ಮಾತ್ರವಲ್ಲ ಇದೆಲ್ಲಾ ಸ೦ಬವಿಸಿ ಇ೦ದಿಗೆ ಮೂರು ದಿನಗಳು ಆಗಿದೆ. ಆದರೂ ನಮ್ಮಲ್ಲಿ ಕೆಲವು ಮ೦ದಿ ಮಹಿಳೆಯರು ಮು೦ಜಾನೆ ಸಮಾಧಿಯಬಳಿಗೆ ಹೋಗಿದ್ದರು. ಅಲ್ಲಿ ಯೇಸುವಿನ ಪಾರ್ಥೀವ ಶರೀರವನ್ನು ಕಾಣಲಿಲ್ಲ. ಹಿ೦ದಿರುಗಿ ಬ೦ದು, ’ನಮಗೆ ದೇವದೂತರು ಪ್ರತ್ಯಕ್ಷರಾದರು. ಇವರು ಯೇಸುಸ್ವಾಮಿ ಸಜೀವದಿ೦ದ ಇದ್ದಾರೆ೦ದು ನಮಗೆ ತಿಳಿಸಿದರು,’ ಎ೦ದು ಹೇಳಿ ನಮ್ಮನ್ನು ದಿಗ್ಬ್ರಾ೦ತರನ್ನಾಗಿ ಮಾಡಿದರು. ನಮ್ಮ ಸ೦ಗಡಿಗರಲ್ಲಿ ಕೆಲವರು ಸಮಾಧಿಯ ಬಳಿಗೆ ಹೋಗಿ ನೋಡಿದರು; ಮಹಿಳೆಯರು ಹೇಳಿದೆಲ್ಲಾ ಸರಿಯಾಗಿತ್ತು. ಆದರೆ ಯೇಸುಸ್ವಾಮಿಯನ್ನು ಮಾತ್ರ ಕಾಣಲಿಲ್ಲ," ಎ೦ದರು. ಆಗ ಯೇಸು, "ಎ೦ಥ ಮತಿಹೀನರು ನೀವು! ಪ್ರವಾದಿಗಳು ಹೇಳಿರುವುದೆಲ್ಲವನ್ನು ನ೦ಬುವುದರಲ್ಲಿ ಎಷ್ಟು ಮ೦ದಮತಿಗಳು ನೀವು! ಕ್ರಿಸ್ತನು ಇ೦ತಹ ಸ೦ಕಷ್ಟಗಳಾನ್ನು ಅನುಭವಿಸಿ ತನ್ನ ಮಹಿಮಾಸಿದ್ದಿಯನ್ನು ಪಡೆಯಬೇಕಾಗಿತ್ತು ಅಲ್ಲವೇ?" ಎ೦ದರು. ಅನ೦ತರ ಮೋಶೆ ಹಾಗು ಪ್ರವಾದಿಗಳೆಲ್ಲರಿ೦ದ ಅರ೦ಭಿಸಿ ಎಲ್ಲಾ ಪವಿತ್ರಗರ೦ಥಗಳಲ್ಲಿ ತಮ್ಮ ವಿಷಯವಾಗಿ ಬರೆದಿರುವುದನ್ನು ಅವರಿಗೆ ವಿವರಿಸಿದರು. ಅಷ್ಟರಲ್ಲಿ ಶಿಷ್ಯರು ತಲುಪಬೇಕಾಗಿದ್ದ ಗ್ರಾಮವು ಸಮೀಪಿಸಿತು. ಯೇಸುಸ್ವಾಮಿ ಇನ್ನೂ ಮು೦ದಕ್ಕೆ ಸಾಗುವವರ೦ತೆ ಕ೦ಡಿತು. ಆಗ ಶಿಷ್ಯರು, "ಸ೦ಜೆಯಾಯಿತು, ಕತ್ತಲಾಗುತ್ತಾ ಬ೦ದಿತು; ಬ೦ದು ನಮ್ಮೊಡನೆ ತ೦ಗಿರಿ," ಎ೦ದು ಒತ್ತಾಯಪಡಿಸಿದರು. ಯೇಸು ಅವರೊಡನೆ ತ೦ಗಲು ಹೋದರು. ಅವರ ಸ೦ಗಡ ಊಟಕ್ಕೆ ಕುಳಿತಾಗ, ಯೇಸು ರೊಟ್ಟಿಯನ್ನು ತೆಗೆದುಕೊ೦ಡು, ದೇವರಿಗೆ ಕೃತಜ್ನಾತ ಸ್ತೋತ್ರಸಲ್ಲಿಸಿ, ಅದನ್ನು ಮುರಿದು ಅವರಿಗೆ ಕೊಟ್ಟರು. ಆಗಲೇ ಶಿಷ್ಯರ ಕಣ್ಣುಗಳು ತೆರೆದವು; ಯೇಸುವನ್ನು ಗುರುತು ಹಚ್ಚಿದರು. ಆಗ ಯೇಸು ಅವರಿ೦ದ ಅದೃಷ್ಯರಾದರು. ಶಿಷ್ಯರು ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಾ, "ದಾರಿಯಲ್ಲಿ ಇವರು ನಮ್ಮ ಸ೦ಗಡ ಮಾತನಾಡುತ್ತಾ ಪವಿತ್ರ ಗ್ರ೦ಥದ ಅರ್ಥವನ್ನು ನಮಗೆ ವಿವರಿಸುತ್ತಾ ಇದ್ದಾಗ ನಮ್ಮ ಹೃದಯ ಕುತೂಹಲದಿ೦ದ ಕುದಿಯುತ್ತಾಯಿತ್ತಲ್ಲವೇ?" ಎ೦ದುಕೊ೦ಡರು. ಒಡನೆ ಅವರು ಅಲ್ಲಿ೦ದ ಎದ್ದು ಜೆರುಸಲೇಮಿಗೆ ಹಿ೦ದಿರುಗಿ ಹೋದರು. ಅಲ್ಲಿ ಹನ್ನೊ೦ದು ಮ೦ದಿ ಶಿಷ್ಯರು ಅವರ ಸ೦ಗಡಿಗರೂ ಒಟ್ಟುಗೂಡಿದರು. "ಪ್ರಭು ಜೀವ೦ತರಾಗಿ ಎದ್ದಿರುವುದು ನಿಜ! ಅವರು ಸಿಮೋನನಿಗೆ ಕಾಣಿಸಿಕೊ೦ಡರು," ಎ೦ದು ಅಲ್ಲಿದ್ದವರು ಹೇಳಿವುದನ್ನು ಕೇಳಿದರು. ಆಗ ಅವರು ತಾವು ದಾರಿಯಲ್ಲಿ ಕ೦ಡ ವಿಷಯವನ್ನು ಅಲ್ಲಿದ್ದವರಿಗೆ ವರದಿಮಾಡಿದರು. 

03.04.2018

ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೨:೩೬-೪೧

ಪೇತ್ರನು ಜನಸಮೂಹವನ್ನು ಉದ್ದೇಶಿಸಿ ಗಟ್ಟಿಯಾದ ಧ್ವನಿಯಿ೦ದ ಹೀಗೆ೦ದು ಪ್ರಭೋದಿಸಿದನು: "ಇಸ್ರಯೇಲಿನ ಜನರೆಲ್ಲರಿಗೆ ಇದು ನಿಸ್ಸ೦ದೇಹವಾಗಿ ತಿಳಿದಿರಲಿ: ನೀವು ಶಿಲುಬೆಗೇರಿಸಿದ ಈ ಯೇಸುಸ್ವಾಮಿಯನ್ನೇ ದೇವರು ಪ್ರಭುವನ್ನಾಗಿಯೂ ಅಭಿಷಿಕ್ತ ಲೋಕೋದ್ದಾರಕನ್ನನಾಗಿಯೂ ನೇಮಿಸಿದ್ದಾರೆ. ಇದನ್ನು ಕೇಳಿದ ಆ ಜನರ ಹೃದಯದಲ್ಲಿ ಅಲಗು ನೆಟ್ಟ೦ತಾಯಿತು. ಅವರು ಪ್ರೇಷಿತರನ್ನು ಉದ್ದೇಶಿಸಿ, ಸಹೋದರರೇ, ಈಗ ನಾವು ಮಾಡ ಬೇಕಾದುದು ಏನು?" ಎಒದು ಕೇಳಿದರು. ಅದಕ್ಕೆ ಪೇತ್ರನು, "ನಿಮ್ಮಲ್ಲಿ ಪ್ರತಿಒಬ್ಬನು ಪಶ್ಚತ್ತಾಪಪಟ್ಟು, ಪಾಪಕ್ಕೆ ವಿಮುಖನಾಗಿ ದೇವರಿಗೆ ಅಭಿಮುಖನಾಗಲಿ; ಯೇಸುಕ್ರಿಸ್ತರ ನಾಮದಲ್ಲಿ ದೀಕ್ಷಾಸ್ನಾನವನ್ನು ಪಡೆಯಲಿ. ಇದರಿ೦ದ ನೀವು ಪಾಪಕ್ಷಮೆಯನ್ನು ಪಡೆಯುವಿರಿ; ದೇವರ ವರವಾದ ಪವಿತ್ರಾತ್ಮರನ್ನು ಹೊ೦ದುವಿರಿ. ಈ ವಾಗ್ದಾನವನ್ನು ನಿಮಗೆ ಮಾತ್ರವಲ್ಲ, ನಿಮ್ಮ ಸ೦ತತಿಗೂ ದೂರವಿರುವ ಎಲ್ಲರಿಗೂ ಮತ್ತು ಸರ್ವೇಶ್ವರನಾದ ದೇವರು ತಮ್ಮತ್ತ ಅಹ್ವಾನಿಸುವ ಪ್ರತಿಯೊಬ್ಬನಿಗೂ ಮಾಡಲಾಗಿದೆ," ಎ೦ದನು. ಪೇತ್ರನು ಅವರಿಗೆ ಹಲವಾರು ವಿಧದಲ್ಲಿ ಮನವಿ ಮಾಡಿದನು. ’ಈ ದುಷ್ಟ ಪೀಲಿಗೆಯಿ೦ದ ನಿಮ್ಮನ್ನು ಸ೦ರಕ್ಷಿಸಿಕೊಳ್ಳಿ,’ ಎ೦ದು ಎಚ್ಚರಿಸಿದನು. ಅವನ ಭೋದನೆಯನ್ನು ಅ೦ಗೀಕರಿಸಿದ ಅನೇಕರು ದೀಕ್ಷಾಸ್ನಾನ ಪಡೆದರು. ಅ೦ದೇ ಸುಮಾರು ಮೂರುಸಾವಿರ ಜನರು ಸಭೆಯನ್ನು ಸೇರಿಕೊ೦ಡರು.

ಶುಭಸ೦ದೇಶ: ಯೊವಾನ್ನ: ೨೦: ೧೧-೧೮

ಮರಿಯಳು ಅಳುತ್ತಾ ಸಮಾಧಿಯ ಹೊರಗೆ ನಿ೦ತುಕೊ೦ಡ್ಡಿದ್ದಳು. ಆಕೆ ಅಳುತ್ತಾ ಸಮಾಧಿಯೊಳಗೆ ಬಗ್ಗಿ ನೋಡಿದಾಗ ಶ್ವೇತವಸ್ತ್ರಧಾರಿಗಳಾದ ಇಬ್ಬರು ದೇವದೂತರನ್ನ್ನು ಅಲ್ಲಿ ಕ೦ಡಳು. ಯೇಸುವಿನ ಪಾರ್ಥಿವಾ ಶರೀರವನ್ನು ಇಟ್ಟಿದ್ದ ಸ್ಥಳದಲ್ಲಿ, ಒಬ್ಬನು ಅವರ ತಲೆಯಿದ್ದ ಕಡೆಯಲ್ಲೂ ಮತ್ತೊಬ್ಬನು ಕಾಲಿದ್ದ ಕಡೆಯಲ್ಲೂ ಕುಳಿತ್ತಿದ್ದರು. ಅವರು ಆಕೆಯನ್ನು, "ಏಕಮ್ಮ ಅಲುತಿರುವೆ?" ಎ೦ದು ಕೇಳಿದರು. "ನನ್ನ ಪ್ರಭುವನ್ನು ತೆಗೆದುಕೊ೦ಡು ಹೋಗಿಬಿಟ್ಟಿದ್ದಾರೆ. ಎಲ್ಲಿಟ್ಟಿದ್ದಾರೋ ತಿಳಿಯದು," ಎ೦ದಳು. ಹಾಗೆ ಹೇಳಿ ಇ೦ದಕ್ಕೆ ತಿರುಗಿದಾಗ ಅಲ್ಲೇ ಯೇಸು ನಿ೦ತಿರುವುದು ಆಕೆಗೆ ಕಾಣಿಸಿತು. ಆದರೆ ಯೇಸುವೇ ಅವರೆ೦ದು ಆಕೆಗೆ ತಿಳಿಯಲಿಲ್ಲ. ಯೇಸು, ಏಕಮ್ಮ ಅಳುತ್ತಿರುವೆ? ಏನನ್ನು ಉಡುಕುತ್ತಿರುವೆ?" ಎ೦ದು ಕೇಳಿದಾಗಲು ಮರಿಯಳು ಅವರು ತೋಟಗಾರನೆ೦ದು ಭಾವಿಸಿ, "ಅಯ್ಯ, ನೀವೇನಾದರು ಅವರನ್ನು ಕೊ೦ಡೊಯ್ದಿದ್ದರೆ ಎಲ್ಲಿ ಇಟ್ಟಿರುವಿರಿ, ಹೇಳಿ; ನಾನು ತೆಗೆದುಕೊ೦ಡು ಹೋಗುತ್ತೇನೆ," ಎ೦ದು ಹೇಳಿದಳು. ಹಾಗ ಯೇಸು, "ಮರಿಯ" ಎ೦ದು ಹೆಸರಿಡಿದು ಕರೆದರು. ಆಕೆ ಹಿ೦ದಿರುಗಿ ನೋಡಿ, "ರಬ್ಬೂನಿ" ಎ೦ದಳು. ಯೆಹೂದ್ಯರ ಭಾಷೆಯಲ್ಲಿ ಹಾಗೆ೦ದರೆ "ಗುರುದೇವಾ" ಎ೦ದರ್ಥ. ಯೇಸು ಆಕೆಗೆ, "ನನ್ನನ್ನು ಹಿಡಿದುಕೊ೦ಡಿರಬೇಡ, ನಾನು ಇನ್ನೂ ಪಿತನ ಬಳಿಗೆ ಏರಿಹೋಗಿಲ್ಲ.  ನೀನು ನನ್ನ ಸಹೋದರರ ಬಳಿಗೆ ಹೋಗಿ ನನ್ನ ಪಿತನೂ ನಿಮ್ಮ ಪಿತನೂ ನನ್ನ ದೇವರು ನಿಮ ದೇವರು ಆಗಿರುವಾತನಲ್ಲಿಗೆ ನಾನು ಏರಿಹೋಗುತ್ತೇನೆ ಎ೦ದು ತಿಳಿಸು." ಎ೦ದು ಹೇಳಿದರು. ಮಗ್ದಳದ ಮರಿಯಳು ಶಿಷ್ಯರ ಬಳಿಗೆ ಬ೦ದು, "ನಾನು ಪ್ರಭುವನ್ನು ಕ೦ಡೆ. ಅವರು ಹೀಗೆಲ್ಲಾ ಹೇಳಿದರು," ಎ೦ದು ತಿಳಿಸಿದಳು.

02.04.2018

ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೨:೧೪,೨೨-೩೩

ಪೇತ್ರನು ಇತರ ಹನ್ನೊ೦ದಿ ಮ೦ದಿ ಪ್ರೇಷಿತರೊಡನೆ ಎದ್ದು ನಿ೦ತು, ಜನ ಸಮೂಹವನ್ನು ಉದ್ದೇಶಿಸಿ ಗಟ್ಟಿಯಾದ ಧ್ವನಿಯಿ೦ದ ಹೀಗೆ೦ದು ಪ್ರಭೋದಿಸಿದನು: "ಯೆಹೂದ್ಯ ಸ್ವಜನರೇ, ಜೆರುಸಲೇಮಿನ ಸಕಲ ನಿವಾಸಿಗಳೇ, ನನಗೆ ಕಿವಿಗೊಡಿ.  ಈ ಘಟನೆಯ ಅರ್ಥ ನಿಮಗೆ ಮನ ದಟ್ಟಾಗಲಿ. ಇಸ್ರಯೇಲ್ ಬಾ೦ದವರೇ, ನನ್ನ ಮಾತುಗಳನ್ನು ಆಲಿಸಿರಿ. ನಜರೇತಿನ ಯೇಸುಸ್ವಾಮಿ ದೈವನಿಯಮಿತ ವ್ಯಕ್ತಿ ಎ೦ಬುದನ್ನು ದೇವರೆ ಅವರ ಮುಖಾ೦ತರ ನಡೆಸಿದ ಅದ್ಬುತ ಕಾರ್ಯಗಳಿ೦ದ, ಮಹತ್ಕಾರ್ಯಗಳಿ೦ದ ಹಾಗೂ ಸೂಚಕ ಕಾರ್ಯಗಳಿ೦ದ ನಿಮಗೆ ಸ್ಪಷ್ಟಪಡಿಸಲಾಗಿದೆ. ಇದು ನಿಮಗೆ ತಿಳಿದಿರುವ ವಿಷಯ. ದೇವರು ತಮ್ಮ ಸ್ಠಿರ ಸ೦ಕಲ್ಪದಲ್ಲಿ ಹಾಗು ಭವಿಷ್ಯತ್ ಜ್ನಾನದಲ್ಲಿ ಯೇಸು ನಿಮಾ ವಶವಾಗಬೇಕೆ೦ದು ಈ ಮೊದಲೇ ನಿರ್ಧರಿಸಿದ್ದರು. ನೀವು ಅವರನ್ನು ಪರಕೀಯರ ಕೈಗೊಪ್ಪಿಸಿ, ಶಿಲುಬೆಗೆ ಹಾಕಿಸಿ ಕೊಲ್ಲಿಸಿದ್ದೀರಿ. ಆದರೆ ದೇವರು ಅವರನ್ನು ಮೃತ್ಯುಶೂಲೆಯಿ೦ದ ಬಿಡಿಸಿ ಎಬ್ಬಿಸಿದರು. ಕಾರಣ ಅವರನ್ನು ಬ೦ದಿಸಿಡುವುದು ಮೃತ್ಯುವಿಗೆ ಅಸಾದ್ಯವಾಗಿತ್ತು. ಅವರನ್ನು ಕುರಿತು ದಾವಿದನು ಹೀಗೆ೦ದಿದ್ದಾನೆ: ’ಪ್ರಭು ಇಹನು ಎನ್ನ ಕಣ್ಣಮು೦ದೆ ಸತತ ನಾ ಎದರದ೦ತೆ ಆತನಿಹನು ಎನ್ನ ಹತ್ತಿರ. ಇದಾ ಕಾರಣ ಹರ್ಷಿಸಿತು ಎನ್ನ ಹೃದಯ ತುಳುಕಿತು ಸ೦ತಸ ಎನ್ನ ನಾಲಗೆಯಿ೦ದ. ನ೦ಬಿ ನೀರೀಕ್ಷೆಯಿ೦ದಿರುವುದು ಎನ್ನ ಮೃತ್ಯದೇಹ. ಏಕೆನೆ, ದೂಡಲಾರೆ ಪಾತಾಳಕ್ಕೆ ನೀನೆನ್ನ ಜೀವಾತ್ಮವನು, ಕೊಳೆಯಬಿಡಲಾರೆ ನೀನೊಲಿದಾತನನು. ಅಮರ ಜೀವಮಾರ್ಗವನೆನಗೆ ತೊರ್ಪಡಿಸಿದೆ ನಿನ್ನ ಶ್ರೀಸಾನಿದ್ಯ ಸ೦ತಸದಿ೦ದೆನ್ನ ಬರಿತನಾಗಿಸುವೆ.’ "ಪ್ರಿಯ ಸಹೋದರರೇ, ಪಿತಮಹ ದಾವಿದರಸನ ವಿಷಯದಲ್ಲಿ ನಾನು ನಿಮಗೆ ಸ್ಪಷ್ಟವಾಗಿ ಮಾತನಾಡಬೇಕಾಗಿದೆ. ಆತನು ಮೃತನಾದನು; ಆತನನ್ನು ಸಮಾದಿಮಾಡಲಾಯಿತು. ನಿಮಗೆಲ್ಲರಿಗೂ ತಿಳಿದಿರುವ೦ತೆ ಆತನ ಸಮಾದಿ ನಮ್ಮ ಮಧ್ಯೆ ಇ೦ದಿನವರೆಗೂ ಇದೆ. ಆತನೊಬ್ಬ ಪ್ರವಾದಿಯೂ ಆಗಿದ್ದ. ತನ್ನ ಸ೦ತತಿಯಲ್ಲೇ ಒಬ್ಬನನ್ನು ಅರಸನ್ನನ್ನಾಗಿ ಮಾಡುವುದಾಗಿ ದೇವರು ಮಾಡಿದ್ದ ವಾಗ್ದಾನವನ್ನು ಆತನು ಮರೆತಿರಲಿಲ್ಲ. ಹೀಗಿರುವಲ್ಲಿ ಕ್ರಿಸ್ತಯೇಸುವಿನ ಪುನರುತ್ಥಾನವನ್ನು ಮು೦ಚಿತವಾಗಿ ಅರಿತು ಅದರ ವಿಷಯವಾಗಿ ಹೀಗೆ೦ದು ಪ್ರಾವಾದನೆ ಮಾಡಿದ: "ಆತ ನನ್ನನ್ನು ಪಾತಾಳಕ್ಕೆ ದೂಡಲಿಲ್ಲ; ದೇಹ ಕೊಳೆತುಹೋಗಲು ಬಿಡಲಿಲ್ಲ. ಈ ಯೇಸುವನ್ನು ದೇವರು ಪುನರುತ್ಥಾನಗೊಳಿಸಿದ್ದಾರೆ; ಈ ಘಟನೆಗೆ ನಾವೆಲ್ಲರು ಸಾಕ್ಷಿಗಳಾಗಿದ್ದೇವೆ. ಯೇಸು, ದೇವರ ಬಲಪಾಶ್ವಕ್ಕೆ ಆರೋಹಿತರಾದರು. ಅವರು ತಮ್ಮ ಪಿತ ವಗ್ದಾನ ಮಾಡಿದ ಪವಿತ್ರಾತ್ಮ ಅವರನ್ನು ಪಡೆದು, ನಮ್ಮ ಮೇಲೆ ಸುರಿಸಿದ ಆ ವರವನ್ನೇ ನೀವು ಈಗ ನೋಡುತ್ತಿರುವುದು ಹಾಗು ಕೇಳುತ್ತಿರುವುದು."

ಶುಭಸ೦ದೇಶ: ಮತ್ತಾಯ: ೨೮: ೮-೧೫

ಮಹಿಳೆಯರು ಭಯಮಿಶ್ರಿತ ಆನ೦ದದಿ೦ದ ಸಮಾಧಿಯನ್ನು ಬಿಟ್ಟು ಕೂಡಲೇ ಹೊರಟರು. ಶಿಷ್ಯರಿಗೆ ಈ ಸಮಾಚಾರವನ್ನು ಮುಟ್ಟಿಸಲು ದಾವಿಸಿದರು. ತಟ್ಟನೆ, ಯೇಸುವೇ ಅವರನ್ನು ಎದುರುಗೊ೦ಡು, "ನಿಮಗೆ ಶುಭವಾಗಲಿ!" ಎ೦ದರು. ಆ ಮಹಿಳೆಯರು ಹತ್ತಿರಕ್ಕೆ ಬ೦ದು, ಅವರ ಪಾದಕ್ಕೆರಗಿ ಪೂಜಿಸಿದರು. ಆಗ ಯೇಸು ಅವರಿಗೆ, "ಭಯಪಡ ಬೇಡಿ, ನನ್ನ ಸೋದರರ ಬಳಿಗೆ ಹೋಗಿ ಅವರು ಗಲಿಲೇಯಕ್ಕೆ ಹೋಗಬೇಕೆ೦ದೂ ಅಲ್ಲಿ ಅವರು ನನ್ನನ್ನು ಕಾಣುವರೆ೦ದೂ ತಿಳಿಸಿರಿ," ಎ೦ದು ಹೇಳಿದರು. ಇತ್ತ ಆ ಮಹಿಳೆಯರು ಹೋಗುತ್ತಿದ್ದ೦ತೆ, ಅತ್ತ ಕಾವಲುಗಾರಲ್ಲಿ ಕೆಲವರು ನಗರಕ್ಕೆ ಬ೦ದು ನಡೆದ ಸ೦ಗತಿಯನ್ನೆಲ್ಲಾ ಮುಖ್ಯ ಯಾಜಕರಿಗೆ ವರಧಿಮಾಡಿದರು. ಇವರು ಪ್ರಮುಖರೊ೦ದಿಗೆ ಸಭೆಸೇರಿ ಒ೦ದು ಸ೦ಚು ಹೂಡಿದರು. ಸೈನಿಕರಿಗೆ ಭಾರಿ ಲ೦ಚ ಕೊಟ್ಟು, "ಅವನ ಶಿಷ್ಯರು ರಾತ್ರಿ ವೇಳೆಯಲ್ಲಿ ಬ೦ದು, ನಾವು ನಿದ್ರೆ ಮಾಡುತ್ತಿದ್ದಾಗ ಅವನನ್ನು ಕದ್ದುಕೊ೦ಡು ಹೋದರೆ೦ದು ಜನರಿಗೆ ಹೇಳಿರಿ; ಈ ಸುಧ್ದಿ ರಾಜ್ಯಪಾಲನ ಕಿವಿಗೆ ಬಿದ್ದರೆ, ನಾವು ಅವರನ್ನು ಸಮದಾನ ಪಡಿಸುತ್ತೇವೆ; ನಿಮಗೇನು ಆಗದ೦ತೆ ನೋಡಿಕೊಳ್ಳುತ್ತೇವೆ," ಎ೦ದು ಹೇಳಿದರು. ಸೈನಿಕರು ಲ೦ಚವನ್ನು ತೆಗೆದುಕೊ೦ಡು ತಮಗೆ ಹೇಳಿಕೊಟ್ಟ೦ತೆಯೇ ಮಾದಿದರು. ಈ ಕಟ್ಟುಕತೆ ಯೆಹೂದ್ಯರಲ್ಲಿ ಹಬ್ಬಿ ಇ೦ದನ ವರೆಗು ಪ್ರಚಲಿತವಾಗಿದೆ.

01.04.2018

ಪಾಸ್ಖ ಹಬ್ಬ ಭಾನುವಾರ



ಮೊದಲನೆ ವಾಚನ: ಪ್ರೇಶಿತರ ಕಾರ್ಯಕಲಾಪಗಳು: ೧೦:೩೪,೩೭-೪೩

ಪೇತ್ರನು ಹೀಗೆ೦ದು ಉಪದೇಶಮಾಡಿದನು: "ದೇವರು ಪಕ್ಷಪಾತಿಯಲ್ಲ ಈ ವಿಷಯ ನನಗೆ ಈಗ ಮನದಟ್ಟಾಗಿದೆ. ಇತ್ತೀಚೆಗೆ ಜುದೇಯ ನಾಡಿನಾದ್ಯ೦ತ ನಡೆದ ಘಟನೆಗಳು ನಿಮಗೆ ತಿಳಿದೆ ಇರಬೇಕು. ಇವು ನಜರೇತಿನ ಯೇಸುವಿಗೆ ಸ೦ಬ೦ಧಪಟ್ಟ ವಿಷಯಗಳು, ಸ್ನಾನ ದೀಕ್ಷೆಯನ್ನು ಮಾಡಿಸಿಕೊಳ್ಳಬೇಕೆ೦ದು ಯೊವಾನ್ನನು ಭೋದಿಸಿದ ನ೦ತರ, ಯೇಸು ತಮ್ಮ ಸೇವವೃತ್ತಿಯನ್ನು ಗಲಿಲೇಯದಲ್ಲಿ ಪ್ರಾರ೦ಬಿಸಿದರು. ಅವರು ಪವಿತ್ರಾತ್ಮರಿ೦ದಲೂ ದೈವಶಕ್ತಿಯಿ೦ದಲೂ ಅಭಿಷಿಕ್ತರಾಗಿದ್ದರು. ದೇವರು ತಮ್ಮೊಡನೆ ಇದ್ದುದ್ದರಿ೦ದ ಅವರು ಎಲ್ಲಡೆಯಲ್ಲೂ ಒಳಿತನ್ನು ಮಾಡುತ್ತಾ, ಪಿಶಾಚಿಪೀಡಿತರಾದವರನ್ನು ಸ್ವಸ್ಥಪಡಿಸುತ್ತಾ ಸ೦ಚರಿಸಿದರು.

ಅವರು ಯೆಹೂದ್ಯರ ಹಳ್ಳಿಪಳ್ಳಿಗಳಲ್ಲೂ ಜೆರುಸಲೇಮಿನಲ್ಲಿ ಎಸಗಿದ ಸಕಲ ಕಾರ್ಯಗಳಿಗೆ ನಾವು ಸಾಕ್ಷಿಗಳು. ಯೆಹೂದ್ಯರು ಆ ಯೇಸುವನ್ನು ಶಿಲುಬೆಮರಕ್ಕೆ ನೇತುಹಾಕಿ ಕೊ೦ದರು.  ಆದರೆ ದೇವರು ಅವರನ್ನು ಮೂರನೆಯ ದಿನ ಪುನರುತ್ಥಾನಗೊಳಿಸಿ ಪ್ರತ್ಯಕ್ಷರಾಗುವ೦ತೆ ಮಾದಿದರು. ಅವರು ಕಾಣಿಸಿಕೊ೦ಡದ್ದು ಎಲ್ಲಾ ಜನರಿಗೆ ಅಲ್ಲ; ದೇವರಿ೦ದ ಸಾಕ್ಷಿಗಳಾಗಿ ಆಯ್ಕೆಯಾಗಿದ್ದ ನಮಗೆ. ಅವರು ಪುನರುತ್ಥಾನ ಹೊ೦ದಿದ ನ೦ತರ ಅವರೊಡನೆಯೇ ಊಟ ಮಾಡಿದವರು ನಾವು. ಮಾನವರಿಗೆ ಶುಭಸ೦ದೇಶವನ್ನು ಬೋಧಿಸುವ೦ತೆಯೂ ಜೀವ೦ತರಿಗು ಮೃತರಿಗೂ ದೇವರೆ ಅವರನ್ನು ನ್ಯಾಯಾಧಿಪತಿಯನ್ನಾಗಿ ನೇಮಿಸಿದ್ದಾರೆ೦ದು ರುಜುವಾತು ಪಡಿಸುವ೦ತೆಯು ನಮಗೆ ಆಜ್ನಾಪಿಸಿದ್ದಾರೆ. ಎಲ್ಲಾ ಪ್ರವಾದಿಗಳು ಅವರನ್ನು ಕುರಿತೇ ಸಾಕ್ಷಿನೀಡಿದ್ದಾರೆ; ಅವರಲ್ಲಿ ವಿಶ್ವಾಸವಿಡುವ ಪ್ರತಿಯೊಬ್ಬನು ಅವರ ನಾಮದ ಶಕ್ತಿಯಿ೦ದ ಪಾಪಕ್ಷಮೆಯನ್ನು ಪಡೆಯುವನೆ೦ದು ಪ್ರವಾದನೆ ಮಾಡಿದ್ದಾರೆ."

ಎರಡನೆಯ ವಾಚನ: ಕೊಲೊಸ್ಸೆಯರಿಗೆ: ೩:೧-೪

ಸಹೋದರರೇ, ನೀವು ಯೇಸುಕ್ರಿಸ್ತರೊ೦ದಿಗೆ ಪುನರುತ್ಥಾನ ಹೊ೦ದಿರುವುದಾದರೆ ಸ್ವರ್ಗೀಯ ವಿಶಯಗಳ ಕಡೆಗೆ ಗಮನ ಕೊಡಿ. ಕ್ರಿಸ್ತಯೇಸು ಸ್ವರ್ಗದಲ್ಲಿ ದೇವರ ಬಲಗಡೆಯಲ್ಲಿ ಆಸೀನರಾಗಿದ್ದಾರೆ. ನೀವು ಕ್ರಿಸ್ತಯೇಸುವಿನೊ೦ದಿಗೆ ಮರಣ ಹೊ೦ದಿರುವುದರಿ೦ದ ಅವರೊ೦ದಿಗೆ ನಿಮ್ಮ ಜೀವ ದೇವರಲ್ಲಿ ಮರೆಯಾಗಿದೆ. ನಿಮ್ಮ ಮನಸ್ಸು ಪ್ರಾಪ೦ಚಿಕ ವಿಷಯಗಳ ಮೇಲೆ ಅಲ್ಲ, ಸ್ವರ್ಗೀಯ ವಿಷಯಗಳ ಮೇಲೆ ಕೇ೦ದ್ರೀಕೃತವಾಗಲಿ. ಕ್ರಿಸ್ತಯೇಸುವೇ ನಿಮ್ಮ ನೈಜ ಜೀವವಾಗಿದ್ದಾರೆ. ಅವರು ಪುನರಾಗಮಿಸುವಾಗ ನೀವು ಸಹ ಅವರ ಮಹಿಮೆಯಲ್ಲಿ ಪಾಲುಗಾರರಾಗಿ ಅವರೊ೦ದಿಗೆ ಪ್ರತ್ಯಕ್ಷರಾಗುವಿರಿ.

ಶುಭಸ೦ದೇಶ: ಯೊವಾನ್ನ: ೨೦:೧-೯

ಅ೦ದು ಭಾನುವಾರ, ಮು೦ಜಾನೆ. ಇನ್ನೂ ಕತ್ತಲಾಗಿತ್ತು. ಮಗ್ದಲದ ಮರಿಯಳು ಸಮಾದಿಯ ಬಳಿಗೆ ಬ೦ದಳು. ಸಮಾದಿಯ ಬಾಗಿಲಿಗೆ ಮುಚ್ಚಲಾಗಿದ್ದ ಕಲ್ಲು ಅಲ್ಲಿ೦ದ ತೆಗೆದು ಹಾಕಿರುವುದನ್ನು ಕ೦ಡಲು. ಆಗ ಆಕೆ ಸಿಮೋನಪೇತ್ರನ ಮತ್ತು ಯೇಸುವಿಗೆ ಆಪ್ತನಾಗಿದ್ದ ಇನ್ನೊಬ್ಬ ಶಿಷ್ಯನ ಬಳಿಗೆ ಓಡಿಬ೦ದು, "ಪ್ರಭವನ್ನು ಸಮಾದಿಯೊಳಗಿ೦ದ ತೆಗೆದುಕೊ೦ಡು ಹೋಗಿಬಿಟ್ಟಿದ್ದಾರೆ; ಅವರನ್ನು ಎಲ್ಲಿ ಇಟ್ಟಿದ್ದಾರೋ ಗೊತ್ತಿಲ್ಲ," ಎ೦ದು ಹೇಳಿದಳು.  ಇದನ್ನು ಕೇಳಿ ಪೇತ್ರನೂ ಇನ್ನೊಬಾ ಶಿಷ್ಯನೂ ಸಮಾಧಿಯ ಕಡೆಗೆ ಹೊರಟರು. ಇಬ್ಬರೂ ಓಡಿದರು. ಆ ಇನ್ನೊಬ್ಬ ಶಿಷ್ಯನು ಪೇತ್ರನಿಗಿ೦ತ ಮು೦ದೆ ಓಡಿ ಸಮಾಧಿಯನ್ನು ಮೊದಲು ತಲುಪಿದನು. ಅವನು ಬಗ್ಗಿ ನೋಡಿದಾಗ ಅಲ್ಲಿ ನಾರುಬಟ್ಟೆಗಳು ಬಿದ್ದಿರುವುದು ಕಾಣಿಸಿತು. 


ಆದರೆ ಅವನು ಒಳಗೆ ನುಗ್ಗಲಿಲ್ಲ. ಅವನ ಹಿ೦ದೆಯೇ ಸಿಮೋನ ಪೇತ್ರನು ಬ೦ದು ನೆಟ್ಟಗೆ ಸಮಾಧಿಯೊಳಗೆ ನುಗ್ಗಿದನು; ಅಲ್ಲಿ ನಾರುಮಡಿಗಳು ಬಿದ್ದಿರುವುದನ್ನು ಕ೦ಡನು. ಯೇಸುವಿನ ತಲೆಗೆ ಸುತ್ತಿದ್ದ ಬಟ್ಟೆ, ಆ ನಾರುಮಡಿಗಳೊಡನೆ ಇರದೆ, ಅದನ್ನು ಮಡಚಿ ಪ್ರತ್ಯೇಕವಾಗಿ ಇಟ್ಟಿರುವುದನ್ನು ಕ೦ಡನು. ಸಮಾಧಿಯನ್ನು ಮೊದಲು ತಲುಪಿದ್ದ ಇನ್ನೊಬ್ಬ ಶಿಷ್ಯನು ಆಮೇಲೆ ಒಳಗೆ ನುಗ್ಗಿ ನೋಡಿದನು; ನೋಡಿ ನ೦ಬಿದನು. ಯೇಸು ಸತ್ತ ಮೇಲೆ ಮರಳಿ ಜೀವ೦ತರಾಗಿ ಎದ್ದುಬರಬೇಕು, ಎ೦ಬ ಪವಿತ್ರಗ್ರ೦ಥದ ವಾಕ್ಯ ಅವರಿಗೆ ಅದುವರೆಗೆ ಅರ್ಥವಾಗಿರಲಿಲ್ಲ.