ಮೊದಲನೆ ವಾಚನ: ವಿಮೋಚನಕಾಂಡ 16:2-4,12-15
ಮರುಭೂಮಿಯಲ್ಲಿ ಇಸ್ರಯೇಲರ ಸಮಾಜವೆಲ್ಲಾ ಮೋಶೆ ಮತ್ತು ಆರೋನರ
ವಿರುದ್ಧ ಗೊಣಗುಟ್ಟಿತು. "ಈ ಸಮಾಜವನ್ನೆಲ್ಲಾ ಹಸಿವೆಯಿಂದ
ಸಾಯಿಸಬೇಕೆಂದು ಈ ಮರಭೂಮಿಗೆ ನಮ್ಮನ್ನು
ಕರೆದು ತಂದಿದ್ದೀರಿ; ನಾವು ಈಜಿಪ್ಟನಲ್ಲಿದ್ದಾಗ ಸರ್ವೇಶ್ವರನ
ಕೈಯಿಂದಲ್ಲೇ ಸತ್ತಿದ್ದರೆ ಎಷ್ಟೋ ಲೇಸಾಗಿತ್ತು. ಆಗ ಮಾಂಸ ಪಾತ್ರೆಗಳ ಪಕ್ಕದಲ್ಲೇ
ಕುಳಿತು ಹೊಟ್ಟೇ ತುಂಬ ಊಟ ಮಾಡುತ್ತಿದ್ದೆವು." ಎಂದು ಗುಣಗಿದರು. ಆಗ
ಸರ್ವೇಶ್ವರ ಮೋಶೆಗೆ, "ಇಗೋ ನೋಡು, ಅಕಾಶದಿಂದ
ನಿಮಗೋಸ್ಕರ ಆಹಾರವನ್ನು ಸುರಿಸುವೆನು. ಈ ಜನರು ಪ್ರತಿದಿನವು
ಹೊರಗೆ ಹೋಗಿ ಆಯಾ ದಿನಕ್ಕೆ ಬೇಕಾದಷ್ಟು ಮಾತ್ರ ಕೂಡಿಸಿಕೊಳ್ಳಬೇಕು. ನನ್ನ ಕಟ್ಟಳೆಯ ಪ್ರಕಾರ
ನಡೆಯುವರೋ ಇಲ್ಲವೋ ಎಂದು ಇದರಿಂದ ಪರೀಕ್ಷಿಸಿ
ತಿಳಿಯುತ್ತೇನೆ. "ಇಸ್ರಯೇಲರ ಗೊಣಗಾಟ ನನಗೆ ಕೇಳಿಸಿತು. ಅವರಿಗೆ
"ಸಂಜೆ ಮಾಂಸವನ್ನೂ ಬೆಳಗ್ಗೆ ಬೇಕಾದಷ್ಟು ರೊಟ್ಟಿಯನ್ನೂ ತಿನ್ನುವಿರಿ; ಇದರಿಂದ ನಾನು ನಿಮ್ಮ ದೇವರಾದ
ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು'
ಎಂದು ಹೇಳು," ಎಂದರು. ಸಂಜೆಯಾಗುತ್ತಲೇ ಲಾವಕ್ಕಿಗಳು ಬಂದು ಅವರ ಪಾಳೆಯನ್ನು
ಮುಚ್ಚಿಕೊಂಡವು. ಬೆಳಿಗ್ಗೆ ಪಾಳೆಯದ ಸುತ್ತಲೂ ಮಂಜುಬಿದ್ದಿತು. ಆ ಮಂಜು ಆರಿಹೋದ ನಂತರ
ಮರುಭೂಮಿಯ ನೆಲದಲ್ಲಿ ಮಂಜಿನ ಹನಿಗಳಂತೆ ಏನೋ ಸಣ್ಣ ಸಣ್ಣ
ರವೆಗಳು ಕಾಣಿಸಿದವು. ಇಸ್ರಯೇಲರು ಅದನ್ನು ಕಂಡು ಇಂಥದೆಂದು ತಿಳಿಯದೆ
ಒಬ್ಬರಿಗೊಬ್ಬರು 'ಮನ್ನ'
ಎಂದರು. ಇದೇನಿರಬಹುದೆಂದು ವಿಚಾರಿಸಿದರು.
ಕೀರ್ತನೆ:
78:3-4, 23-24b, 25-54
ಶ್ಲೋಕ:
ಅನುಗ್ರಹಿಸಿದನು ಸ್ವರ್ಗದ ದವಸಧಾನ್ಯವನ್ನು
ಎರಡನೇ
ವಾಚನ ಎಫೆಸಿಯರಿಗೆ 4:17, 20-24
ಪ್ರಭುವಿನ ಹೆಸರಿನಲ್ಲಿ ನಾನು ನಿಮಗೆ ಒತ್ತಿಹೇಳುತ್ತೇನೆ:
ಇನ್ನು ಮುಂದೆ ನೀವು ಅನ್ಯ ಜನರಂತೆ ಜೀವಿಸುವುದನ್ನು
ತ್ಯಜಿಸಿರಿ. ಅವರ ಆಲೋಚನೆಗಳು ಹುರುಳಿಲ್ಲದವು.
ಕ್ರಿಸ್ತ ಯೇಸುವಿನಿಂದ ನೀವು ಇಂಥದ್ದೇನನ್ನು ಕಲಿಯಲಿಲ್ಲ
ಅವರ ವಿಷಯವಾಗಿ ನೀವು ಕೇಳಿದ್ದು ಮತ್ತು
ಕಲಿತದ್ದು ಅವರಲ್ಲಿರುವ ಸತ್ಯಕ್ಕೆ ಅನುಸಾರವಾಗಿತ್ತಲ್ಲವೇ? ಆದ್ದರಿಂದ ನೀವು ನಿಮ್ಮ ಹಿಂದಿನ
ನಡೆತೆಯನ್ನು ಅನುಸರಿಸದೆ ಹಳೆಯ ಸ್ವಭಾವವನ್ನು ಕಿತ್ತೊಗಿಯಿರಿ;
ಅದು ಕಾಮಾಭಿಲಾಷೆಯಿಂದ ಕಲುಷಿತವಾಗಿದೆ. ನಿಮ್ಮ ಹೃನ್ಮನಗಳು ನವೀಕೃತವಾಗಲಿ. ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ.
ಇದು ದೇವರ ಅನುರೂಪದಲ್ಲಿ ನಿರ್ಮಿತವಾದ
ಸ್ವಭಾವ; ದೇವರೊಂದಿಗೆ ಸತ್ಸಂಬಧವುಳ್ಳ ಹಾಗೂ ನೃಜವಾದ ಪಾವನ
ಸ್ವಭಾವ.
ಶುಭಸಂದೇಶ; ಯೊವಾನ್ನ 6:24-35
ಯೇಸು ಆಗಲಿ, ಅವರ
ಶಿಷ್ಯರಾಗಲಿ ಇಲ್ಲದ್ದನ್ನು ನೋಡಿ ಜನರು ಆ
ದೋಣಿಗಳನ್ನು ಹತ್ತಿ ಯೇಸುವನ್ನು ಹುಡುಕ್ಕುತ್ತಾ ಕಫರ್ನವುಮಿಗೆ ಬಂದರು. ಜನರು ಯೇಸುಸ್ವಾಮಿಯನ್ನು ಸರೋವರದ
ಆಚೆ ದಡದಲ್ಲಿ ಕಂಡೊಡನೆ, "ಗುರುದೇವಾ, ತಾವಿಲ್ಲಿಗೆ ಬಂದುದು ಯಾವಾಗ?" ಎಂದು ಕೇಳಿದರು. ಯೇಸು
ಅವರಿಗೆ, "ನಾನು ನಿಮಗೆ ಸತ್ಯವಾಗಿ
ಹೇಳುತ್ತೇನೆ: ನೀವು ನನ್ನನ್ನು
ಹುಡುಕಿಕೊಂಡು ಬಂದದ್ದು ಸೂಚಕ ಕಾರ್ಯಗಳನ್ನು ನೋಡಿ ಗ್ರಹಿಸಿಕೊಂಡಿದ್ದರಿಂದ ಅಲ್ಲ, ಹೊಟ್ಟೆ ತುಂಬುವಷ್ಟು
ರೊಟ್ಟಿ ಸಿಕ್ಕಿದ್ದರಿಂದ. ಅಳಿದುಹೋಗುವ ಅಹಾರಕ್ಕಾಗಿ ದುಡಿಯಬೇಡಿ; ಉಳಿಯುವ ಮತ್ತು ನಿತ್ಯಜೀವವನ್ನು ಈಯುವ ಅಹಾರಕ್ಕಾಗಿ ದುಡಿಯಿರಿ.
ಇಂಥ ಅಹಾರವನ್ನು ನಿಮಗೆ ನೀಡುವವನು ನರಪುತ್ರನೇ. ಏಕೆಂದರೆ, ಪಿತನಾದ ದೇವರು ತಮ್ಮ ಅಧಿಕಾರ ಮುದ್ರೆಯನ್ನು
ಆತನ ಮೇಲೆ ಒತ್ತಿದ್ದಾರೆ," ಎಂದು ಉತ್ತರಕೊಟ್ಟರು.
ಆಗ ಆ ಜನರು, "ದೇವರು
ಮೆಚ್ಚುವ ಕರ್ಯಗಳನ್ನು ನಾವು ಮಾಡಬೇಕಾದರೆ, ಏನು
ಮಾಡಬೇಕು?" ಎಃದು ಕೇಳಿದರು. ಅದಕ್ಕೆ
ಯೇಸು, "ದೇವರು ಕಳುಹಿಸಿದಾತನನ್ನು ನೀವು ವಿಶ್ವಾಸಿಸಬೇಕು. ಇದೇ
ಅವರು ಮೆಚ್ಚುವ ಕಾರ್ಯ," ಎಂದರು. ಅದಕ್ಕೆ ಆ ಜನರು, "ನಾವು
ನೋಡಿ ನಿಮ್ಮಲ್ಲಿ ವಿಶ್ವಾಸ ಇಡುವಂತೆ ನೀವು ಏನು ಮಾಡುವಿರಿ? ಯಾವ
ಸೂಚಕ ಕಾರ್ಯವನ್ನು ತೋರಿಸುವಿರಿ? ನಮ್ಮ ಪೂರ್ವಜರಿಗೆ ಮರುಭೂಮಿಯಲ್ಲಿ
ತಿನ್ನಲು "ಮನ್ನಾ" ಸಿಕ್ಕಿತು. ತಿನ್ನಲು ಅವರಿಗೆ ಸ್ವರ್ಗದಿಂದ ರೊಟ್ಟಿ ದೊರಕಿತು, ಎಂದು ಪವಿತ್ರ ಗ್ರಂಥವೇ ಹೇಳುತ್ತದೆಯಲ್ಲವೇ"
ಎಂದರು. ಯೇಸು ಅವರಿಗೆ, " ನಿಮಗೆ
ಸತ್ಯವಾಗಿ ಹೇಳುತ್ತೇನೆ; ಸ್ವರ್ಗದಿಂದ ನಿಮಗೆ ರೊಟ್ಟಿಯನ್ನು
ಕೊಟ್ಟವನು ಮೋಶೆಯಲ್ಲ; ನಿಮಗೆ ಸ್ವರ್ಗದಿಂದ ನಿಜವಾದ ರೊಟ್ಟಿಯನ್ನು ಕೊಡುವವರು ನನ್ನ ಪಿತನೇ, ಏಕಂದರೆ
ಸ್ವರ್ಗದಿಂದ ಇಳಿದು ಬಂದು ಲೋಕಕ್ಕೆ ಸಜ್ಜೀವವನ್ನೀಯುವಾತನೇ
ದೇವರು ಕೊಡುವ ರೊಟ್ಟಿ," ಎಂದು ಹೇಳಿದರು. ಅದಕ್ಕೆ
ಆ ಜನರು, ಅಂಥಾ ರೊಟ್ಟಿಯನ್ನೇ ನಮಗೆ
ಯಾವಾಗಲೂ ಕೊಡಿ," ಎಂದು ಕೇಳಿದರು. ಅಗ
ಯೇಸು, "ನಾನೇ ಜೀವದಾಯಕ ರೊಟ್ಟಿ,
ನನ್ನ ಬಳಿ ಬರುವವನಿಗೆ ಹಸಿವೇ
ಇರದು; ನನ್ನಲ್ಲಿ ವಿಶ್ವಾಸವಿಡುವವಿಗೆ ಎಂದಿಗೂ ದಾಹವಾಗದು.
No comments:
Post a Comment