ಯೇಸುವಿನ ಪವಿತ್ರ ಹೃದಯದ ಮಹೋತ್ಸವ
ಮೊದಲನೇ ವಾಚನ:ಹೊಶೇಯ
11:1, 3-4, 8-9
ಎರಡನೇ
ವಾಚನ: ಎಫೆಸಿಯರಿಗೆ
3:8-12, 14-19
ದೇವಜನರಲ್ಲೆಲ್ಲಾ
ನಾನು ಅತ್ಯಲ್ಪನು.
ಆದರೂ ಯೇಸುಕ್ರಿಸ್ತರ
ಅಪರಿಮಿತ ಆಧ್ಯಾತ್ಮಿಕ
ಸಿರಿಸಂಪತ್ತಿನ ಬಗ್ಗೆ
ಅನ್ಯಜನರಿಗೆ ಪ್ರಭೋಧಿಸುವ
ಸೌಭಾಗ್ಯ ನನ್ನದಾಯಿತು.
ಸಮಸ್ತವನ್ನು ಸೃಷ್ಟಿಸಿದ
ದೇವರ ಆದಿಯಿಂದಲೂ
ಗುಪ್ತವಾಗಿಟ್ಟಿದ್ದ ತಮ್ಮ
ಯೋಜನೆಯನ್ನು ಈಡೇರಿಸುವ
ವಿಧಾನವನ್ನು ಸರ್ವಜನರಿಗೆ
ತಿಳಿಯಪಡಿಸುವುದಕ್ಕಾಗಿ ನನ್ನನ್ನು
ಆರಿಸಿಕೊಂಡಿರುವರು. ಹೀಗೆ
ಧರ್ಮಸಭೆಯ ಮೂಲಕ
ದೇವರ ಬಹುರೂಪದ
ಜ್ಞಾನವು ಅಶರೀರ
ಶಕ್ತಿಗಳ ಅಧಿಕಾರಿಗಳಿಗೂ
ಅಧಿಪತಿಗಳಿಗೂ ಈಗಿನ ಕಾಲದಲ್ಲಿ
ತಿಳಿಯಬೇಕೆಂಬುದೇ ಅವರ
ಉದ್ದೇಶವಾಗಿತ್ತು. ತಮ್ಮ
ಪೂರ್ವ ಸಂಕಲ್ಪದಂತೆಯೇ
ಇದನ್ನು ದೇವರು
ನಮ್ಮ ಪ್ರಭುವಾದ
ಯೇಸುಕ್ರಿಸ್ತರಲ್ಲಿ ಕಾರ್ಯಗತಗೊಳಿಸಿದರು.
ಯೇಸುಕ್ರಿಸ್ತರಲ್ಲಿ ನಾವಿಟ್ಟಿರುವ
ವಿಶ್ವಾಸದ ಮೂಲಕ
ಅವರಲ್ಲಿ ಒಂದಾಗಿ,
ದೇವರ ಸಾನ್ನಿಧ್ಯವನ್ನು
ಸೇರುವ ದೈರ್ಯ
ಹಾಗು ಭರವಸೆ
ನಮಗಿದೆ. ಈ
ಕಾರಣ ನಾನು
ಮೊಣಕಾಲೂರಿ ಪಿತನಲ್ಲಿ
ಪ್ರಾರ್ಥಿಸುತ್ತೇನೆ; ಸ್ವರ್ಗಲೋಕದಲ್ಲೂ
ಭೂಲೋಕದಲ್ಲೂ ಪ್ರತಿ
ಕುಟುಂಬವು ತನ್ನ
ಹೆಸರನ್ನು ಪಡೆದಿರುವುದು
ಅವರಿಂದಲೇ. ಅವರು
ತಮ್ಮ ಮಹಿಮೆಯ
ಸಂಪನ್ಮೂಲಗಳಿಂದ ಪವಿತ್ರಾತ್ಮ
ಅವರ ಮುಖಾಂತರ
ನಿಮ್ಮ ಅಂತರಂಗವನ್ನು
ಬಲಗೊಳಿಸಲಿ; ನಿಮ್ಮ
ವಿಶ್ವಾಸದ ಫಲವಾಗಿ,
ಯೇಸುಕ್ರಿಸ್ತರು ನಿಮ್ಮ
ಹೃದಯಗಳಲ್ಲಿ ಸದಾ
ವಾಸಿಸಲಿ ಮತ್ತು
ನಿಮ್ಮ ಜೀವನವು
ಪ್ರೀತಿಯಲ್ಲಿ ಬೇರೂರಿ
ಸದೃಢವಾಗಿ ನಿಲ್ಲಲಿ.
ಹೀಗೆ ದೇವಜನರೆಲ್ಲರೊಡನೆ,
ಕ್ರಿಸ್ತ ಯೇಸುವಿನ
ಅಗಾಧ ಪ್ರೀತಿಯ
ಉದ್ದ--ಅಗಲ,
ಆಳ--ಎತ್ತರ
ಎಷ್ಟೆಂಬುದನ್ನು ನೀವು
ಗ್ರಹಿಸಿಕೊಳ್ಳುವಂತಾಗಲಿ. ಹೌದು
ಜ್ಞಾನವನ್ನು ಮೀರಿದ
ಈ ಪ್ರೀತಿಯನ್ನು ಅರಿತುಕೊಳ್ಳಲು
ಆಸಕ್ತರಾಗಬೇಕು, ದೇವರ
ಪರಿಪೂರ್ಣತೆಯಿಂದ ತುಂಬಿದವರಾಗಬೇಕು
ಎಂದು ನಾನು
ಬೇಡಿಕೊಳ್ಳುತ್ತೇನೆ.
ಶುಭಸಂದೇಶ: ಯೊವಾನ್ನ
19:31-37
ಅಂದು
ಪಾಸ್ಕ ಹಬ್ಬದ
ಹಿಂದಿನ ದಿನ.
ಮಾರನೆಯ ದಿನ
ಸಬ್ಬತ್ ದಿನವೂ
ದೊಡ್ಡ ಹಬ್ಬವೂ
ಆಗಿತ್ತು. ಸಬ್ಬತ್
ದಿನದಂದು ಶವಗಳು
ಶಿಲುಬೆಯ ಮೇಲೆ
ತೂಗಾಡುವುದು ಸರಿಯಲ್ಲ
ಎಂದುಕೊಂಡು ಶಿಲುಬೆಗೇರಿಸಲಾಗಿದ್ದವರ
ಕಾಲುಗಳನ್ನು ಮುರಿದು ಅವರ
ಶವವನ್ನು ಅಂದೇ
ತೆಗೆಯಿಸಿಬಿಡಲು ಯೆಹೂದ್ಯರು
ಪಿಲಾತನಿಂದ ಅಪ್ಪಣೆ
ಕೇಳಿಕೊಂಡರು. ಅಂತೆಯೇ
ಸೈನಿಕರು ಬಂದು
ಯೇಸುವಿನೊಡನೆ ಶಿಲುಬೆಗೇರಿಸಲಾಗಿದ್ದ
ಮೊದಲನೆಯವನ ಮತ್ತು
ಎರಡನೆಯವನ ಕಾಲುಗಳನ್ನು
ಮುರಿದರು. ತರುವಾಯ
ಯೇಸುವಿನ ಬಳಿಗೆ
ಬಂದರು. ಯೇಸು
ಆಗಲೇ ಸತ್ತುಹೋಗಿರುವುದನ್ನು
ಕಂಡು, ಅವರ
ಕಾಲುಗಳನ್ನು ಮುರಿಯಲಿಲ್ಲ.
ಆದರೂ ಸೈನಿಕರಲ್ಲಿ
ಒಬ್ಬನು ಈಟಿಯಿಂದ
ಅವರ ಪಕ್ಕೆಯನ್ನು
ತಿವಿದನು. ಕೂಡಲೆ
ರಕ್ತವೂ, ನೀರೂ
ಅಲ್ಲಿಂದ ಹೊರಗೆ
ಹರಿದು ಬಂತು.
ಇದು ಕಣ್ಣಾರೆ
ಕಂಡವನ ಹೇಳಿಕ.
ಈ ಹೇಳಿಕೆ
ಸತ್ಯವಾದುದು; ತಾನು
ಸತ್ಯವನ್ನೇ ನುಡಿಯುತ್ತಿದ್ದೇನೆಂಬ
ಅರಿವು ಅವನಿಗೆ
ಇದೆ. ನೀವು
ವಿಶ್ವಾಸಿಸಬೇಕೆಂದೇ ಆತನು
ಇದನ್ನು ಹೇಳಿದ್ದಾನೆ.
"ಆತನ ಎಲುಬೊಂದನ್ನು
ಮುರಿಯಕೂಡದು" ಎಂದು
ಪವಿತ್ರಗ್ರಂಥದಲ್ಲಿ ಬರೆದಿದೆ.
ಆ ವಾಕ್ಯ
ನೆರವೇರುವಂತೆ ಹೀಗೆ
ನಡೆಯಿತು. " ತಾವು
ಇರಿದವನನ್ನೇ ಅವರು
ನಿರೀಕ್ಷಿಸುವರು ಎನ್ನುತ್ತದೆ
ಇನ್ನೊಂದು ವಾಕ್ಯ.
No comments:
Post a Comment