ಮೊದಲನೇ: ವಾಚನ:
2 ಪೇತ್ರ 1:2-7
ದೇವರ ಮತ್ತು
ಪ್ರಭು ಯೇಸುಕೀಸ್ತರ
ಬಗ್ಗೆ ನೀವು
ಪಡೆಯುತ್ತಿರುವ ಜ್ಞಾನಾರ್ಜನೆಯು
ನಿಮಗೆ ಕೃಪಾಶೀರ್ವಾದವನ್ನೂ
ಶಾಂತಿ ಸಮಾಧಾನವನ್ನೂ
ಅಧಿಕಾಧಿಕವಾಗಿ ತರಲಿ!
ತಮ್ಮ ಸ್ವಂತ
ಮಹಿಮೆಯಲ್ಲೂ ಸೌಭಾಗ್ಯದಲ್ಲೂ
ಭಾಗಿಗಳಾಗಲು ದೇವರು
ನಮ್ಮನ್ನು ಕರೆದಿದ್ದಾರೆ.
ಅವರನ್ನು ಅರಿತುಕೊಳ್ಳುವುದರ
ಮೂಲಕ ನಾವು
ಭಕ್ತಿಯುತ ಜೀವನವನ್ನು
ನಡೆಸಲು ಬೇಕಾದುದೆಲ್ಲವನ್ನೂ
ಆ ಯೇಸುವಿನ
ದಿವ್ಯಶಕ್ತಿಯಿಂದ ಪಡೆದಿದ್ದೇವೆ.
ಹೀಗೆ ನೀವು
ಲೋಕದಲ್ಲಿ ಆಶಾಪಾಶಗಳಿಂದ
ಉಂಟಾಗುವ ಭ್ರಷ್ಟಾಚಾರದಿಂದ
ತಪ್ಪಿಸಿಕೊಂಡು ದೈವಿಕ
ಸ್ವಭಾವದಲ್ಲಿ ಪಾಲುಗಾರರಾಗುವಂತೆ,
ದೇವರು ಅಮೂಲ್ಯವೂ
ಅತ್ಯುತ್ತಮವೂ ಆದ
ವಾಗ್ದನಗಳನ್ನು ಅನುಗ್ರಹಿಸಿದ್ದಾರೆ.
ಈ ಕಾರಣ,
ನೀವು ಪೂರ್ಣಾಸಕ್ತಿಯಿಂದ
ನಿಮ್ಮ ವಿಶ್ವಾಸಕ್ಕೆ
ಸದ್ಗುಣವನ್ನು, ಸದ್ಗುಗುಣಕ್ಕೆ
ಸುಜ್ಞಾನವನ್ನು ಸೇರಿಸಿರಿ.
ಸುಜ್ಞಾನಕ್ಕೆ ಸಂಯಮವನ್ನು,
ಸಂಯಮಕ್ಕೆ ಸ್ಥೈರ್ಯವನ್ನು,
ಸ್ಥೈರ್ಯಕ್ಕೆ ಸದ್ಬಕ್ತಿಯನ್ನು
ಕೂಡಿಸಿರಿ. ಈ
ನಿಮ್ಮ ಸದ್ಬಕ್ತಿಗೆ
ಸೋದರ ಸ್ನೇಹವನ್ನು,
ಸೋದರ ಸ್ನೇಹಕ್ಕೆ
ಪ್ರೀತಿಯನ್ನು ಬೆರೆಸಿರಿ.
ನಂತರ
ಯೇಸುಸ್ವಾಮಿ ಅವರೊಡನೆ
ಸಾಮತಿಗಳ ರೂಪದಲ್ಲಿ
ಮಾತನಾಡತೊಡಗಿದರು: "ಒಬ್ಬನು
ದ್ರಾಕ್ಷಿಯಾ ತೋಟ
ಒಂದನ್ನು ಮಾಡಿ,
ಅದರ ಸುತ್ತ
ಬೇಲಿ ಹಾಕಿಸಿದ;
ದ್ರಾಕ್ಷಾರಸವನ್ನು ತಗೆಯಲು
ಆಲೆಯನ್ನು ಹೂಡಿಸಿ,
ಕಾವಲಿಗೆ ಅಟ್ಟಣೆಯನ್ನು
ಕಟ್ಟಿಸಿದ. ಬಳಿಕ
ತೋಟವನ್ನು ಗೇಣಿದಾರರಿಗೆ
ವಹಿಸಿ, ಹೊರನಾಡಿಗೆ
ಹೊರಟು ಹೋದ.
ಫಲಕಾಲವು ಬಂದಾಗ
ತನಗೆ ಬರತಕ್ಕ
ಪಾಲನ್ನು ತರುವುದಕ್ಕಾಗಿ
ಒಬ್ಬ ಸೇವಕನನ್ನು
ಗೇಣಿದಾರರ ಬಳಿಗೆ
ಕಳುಹಿಸಿದ. ಆದರೆ
ಅವರು ಆ
ಸೇವಕನನ್ನು ಹಿಡಿದು,
ಹೊಡೆದು, ಬರಿಗೈಯಲ್ಲಿ
ಹಿಂದಕ್ಕೆ ಅಟ್ಟಿದರು
ತೋಟದ ಯಜಮಾನ
ಪುಃನ ಇನ್ನೊಬ್ಬ
ಸೇವಕನನ್ನು ಕಳುಹಿಸಿದ.
ಅವರು ಅವನ
ತಲೆಯ ಮೇಲೆ
ಹೊಡೆದು, ಅವಮಾನ
ಮಾಡಿ ಕಳುಹಿಸಿದರು.
ಯಜಮಾನ ಆಮೇಲೆ
ಮತ್ತೊಬ್ಬ ಸೇವಕನನ್ನು
ಕಳುಹಿಸಿದ. ಇವನನ್ನು
ಅವರು ಕೊಂದುಹಾಕಿದರು.
ಇನ್ನೂ ಅನೇಕರನ್ನು
ಕಳುಹಿಸಲು ಅವರಲ್ಲಿ
ಕೆಲವರನ್ನು ಹೊಡೆದರು,
ಕೆಲವರನ್ನು ಕಡಿದು
ಹಾಕಿದರು. ಯಜಮಾನನಿಗೆ
ಇನ್ನು ಉಳಿದಿದ್ದವನೆಂದರೆ
ಅವನ ಮುದ್ದು
ಮಗನೊಬ್ಬನೇ. " ನನ್ನ
ಮಗನಿಗಾದರೂ ಅವರು
ಮರ್ಯಾದೆಕೊಟ್ಟಾರು," ಎಂದು
ಭಾವಿಸಿ ಕಟ್ಟಕಡಗೆ
ಆ ಯಜಮಾನ
ತನ್ನ ಮಗನನ್ನೇ
ಅವರ ಬಳಿಗೆ
ಕಳುಹಿಸಿದ. ಆದರೆ
ಆ ಗೇಣಿದಾರರು,
"ತೋಟಕ್ಕೆ ಇವನೇ
ಉತ್ತರಾಧಿಕಾರಿ; ಬನ್ನಿ,
ಇವನನ್ನು ಮುಗಿಸಿಬಿಡೋಣ.
ಆಗ ಈ
ಆಸ್ತಿ ನಮದಾಗುವುದು."
ಎಃದು ಒಳಸಂಚು
ಹೂಡಿ, ಅವನನ್ನು
ಹಿಡಿದು, ಕೊಂದುಹಾಕಿ
ತೋಟದ ಆಚೆಗೆ
ಎಸೆದುಬಿಟ್ಟರು. ಇಂತಹ
ಪರಿಸ್ಥಿತಯಲ್ಲಿ ಆ
ತೋಟದ ಯಜಮಾನ
ಏನು ಮಾಡುವನು?
ಅವನು ಬಂದು
ಆ ಗೇಣಿದಾರರನ್ನು
ಸಂಹರಿಸಿ ತೋಟವನ್ನು
ಬೇರೆ ಗೇಣಿದಾರರಿಗೆ
ಒಪ್ಪಿಸುವನು. ಪವಿತ್ರಗ್ರಂಥದಲ್ಲಿ:
"ಮನೆಕಟ್ಟುವವರು ಬೇಡವೆಃದು
ಬಿಸಾಡಿದ ಕಲ್ಲೇ
ಪ್ರಮುಖ ಮೂಲೆಗಲ್ಲಾಯಿತು;
ಸರ್ವೇಶ್ವರನಿಂದಲೇ ಆದ
ಈ ಕಾರ್ಯ
ನಮ್ಮ ಕಣ್ಣಿಗೆ
ಅದೆಂಥ ಆಶ್ಚರ್ಯ!"
ಎಂಬ ವಾಕ್ಯವನ್ನು
ನೀವು ಓದಿಲ್ಲವೇ?"
ಎಂದರು ತಮ್ಮನ್ನು
ಕುರಿತೇ ಈ
ಸಾಮತಿಯನ್ನು ಹೇಳುತ್ತಿದ್ದಾರೆಂದು
ಅರ್ಥಮಾಡಿಕೊಂಡ ಆ
ಯೆಹೂದ್ಯ ಮುಖಂಡರು
ಯೇಸುವನ್ನು ಹಿಡಿದು
ಬಂದಿಸಲು ಯತ್ನಿಸಿದರು.
ಆದರೆ ಜನ
ಸಮೂಹಕ್ಕೆ ಭಯಪಟ್ಟು
ಅವರನ್ನು ಬಿಟ್ಟು
ಹೋದರು.
![]() |
ಈ ವಾಚನದ ಸವಿಸ್ತಾರ ಓದಿಗೆ ಇಲ್ಲಿ ಕ್ಲಿಕ್ ಮಾಡಿ |
ಕೀರ್ತನೆ: 91:1-2,14-16
ಶ್ಲೋಕ: ಪ್ರಭುವೇ
ದುರ್ಗವೂ ನಾ
ನಂಬಿದ ದೇವನು
ಶುಭಸಂದೇಶ: ಮಾರ್ಕ
12: 14-16
![]() |
ಹೊಂಚು ಹಾಕುತ್ತಿರುವ ಗೇಣಿಗಾರರು |
No comments:
Post a Comment