ಕರ್ತರ ಪೂಜ್ಯ ಶರೀರ ಮತ್ತು ರಕ್ತದ ಮಹೋತ್ಸವ
ಮೋಶೆ
ಜನರ ಬಳಗೆ
ಬಂದು ಸರ್ವೇಶ್ವರನ
ಎಲ್ಲ ಆಜ್ಞೆಗಳನ್ನೂ,
, ವಿಧಿ ವಿಧಾನಗಳನ್ನೂ
ವಿವರಿಸಿದನು. ಜನರೆಲ್ಲರು,
"ಸರ್ವೇಶ್ವರ ಸ್ವಾಮಿಯ
ಆಜ್ಞೆಗಳನ್ನೆಲ್ಲಾ ಅನುಸರಿಸಿ,
ನಡೆಯುತ್ತೇವೆ," ಎಂದು
ಒಕ್ಕೊರಳಿಂದ ಉತ್ತರ
ಕೊಟ್ಟರು. ಮೋಶೆ
ಸರ್ವೇಶ್ವರನ ಆಜ್ಞೆಗಳನ್ನೆಲ್ಲ
ಬರೆದಿಟ್ಟನು. ಬೆಳಗ್ಗೆ
ಎದ್ದು ಆ
ಬೆಟ್ಟದಡಿಯಲ್ಲಿ ಒಂದು
ಬಲಿಪೀಠವನ್ನು ಕಟ್ಟಿಸಿದನು.
ಇಸ್ರಯೇಲರ ಹನ್ನೆರಡು
ಕುಲಗಳಿಗೆ ಹನ್ನೆರಡು
ಕಲ್ಲಿನ ಕಂಬಗಳನ್ನು
ಸ್ಥಾಪನೆ ಮಾಡಿಸಿದನು. ಇಸ್ರಯೇಲರ
ಯೌವನಸ್ಥರು ಸರ್ವೇಸ್ವರಸ್ವಾಮಿಗೆ
ದಹನ ಬಲಿಗಳನ್ನು
ಅರ್ಪಿಸುವಂತೆಯೂ ಸಮಾಧಾನದ
ಬಲಿಗಾಗಿ ಹೋರಿಗಳನ್ನು
ಅರ್ಪಿಸುವಂತೆಯೂ ಅಪ್ಪಣೆ ಕೊಟ್ಟನು.ಆ
ಬಲಿಪಶುಗಳ ರಕ್ತದಲಿ
ಅರ್ಧವನ್ನು ತೆಗೆದು
ಬಟ್ಟಲುಗಳಲ್ಲಿ ತುಂಬಿದನು.
ಮಿಕ್ಕ ಅರ್ಧವನ್ನು,
ಬಲಿಪೀಟದ ಮೇಲೆ
ಪ್ರೋಕ್ಷಿಸಿದನು. ತರುವಾಯ,
ನಿಬಂಧನ ಗ್ರಂಥವನ್ನು
ತೆಗೆದುಕೊಂಡು ಜನರಿಗೆ
ಕೇಳಿಸುವಂತೆ ಓದಿದನು.
ಅವರು ಅದನ್ನು
ಕೇಳಿದ ಮೇಲೆ,
"ಸರ್ವೇಶ್ವರಸ್ವಾಮಿಯ
ಆಜ್ಞೆಗಳನ್ನೆಲ್ಲಾ ಅನುಸರಿಸುತ್ತೇವೆ;
ಅವುಗಳಿಗೆ ವಿಧೇಯರಾಗಿರುತ್ತೇವೆ,"
ಎಂದರು. ಆಗ
ಮೋಶೆ ಬಟ್ಟಲುಗಳಲ್ಲಿದ್ದ
ರಕ್ತವನ್ನು ತಗೆದುಕೊಂಡು
ಜನರ ಮೇಲೆ
ಚಿಮುಕಿಸಿ, "ಇಗೋ,
ಈ ಗ್ರಂಥದಲ್ಲಿ ಹೇಳಿರುವ
ಎಲ್ಲಾ ಆಜ್ಞೆಗಳ
ಪ್ರಕಾರ ಸರ್ವೇಶ್ವರ
ನಿಮ್ಮ ಸಂಗಡ
ಮಾಡಿಕೊಂಡ ಒಡಂಬಡಿಕೆಯನ್ನು ಸ್ವಸ್ಥಪಡಿಸುವ ರಕ್ತ
ಇದೇ," ಎಂದರು.
ಕೀರ್ತನೆ: 116:12-13,15-16,17-18
ಶ್ಲೋಕ: ಎತ್ತಿ
ಹಿಡಿದೆನು ರಕ್ಷಣೆಯ
ಪಾನಪಾತ್ರೆಯನು ಪ್ರಖ್ಯಾತಪಡಿಸುವೆನು
ಪ್ರಭುವಿನ ನಾಮವನು.
ಎರಡನೇ ವಾಚನ: ಹಿಬ್ರಿಯರಿಗೆ 9:11-15
ಎರಡನೇ ವಾಚನ: ಹಿಬ್ರಿಯರಿಗೆ 9:11-15
ಕ್ರಿಸ್ತ
ಯೇಸು ಈಗಾಗಲೇ
ಪ್ರಧಾನ ಯಾಜಕರಾಗಿ
ಬಂದಿದ್ದಾರೆ. ಅವರು
ಅನುಗ್ರಹಿಸುವ ಸತ್ಪಲಗಳು
ಈಗಾಗಲೇ ನಮಗೆ
ದೊರೆತಿವೆ. ಅವರು
ಸೇವೆ ಸಲ್ಲಿಸುತ್ತಿರುವ ಗುಡಾರವು ಹಿಂದಿನವುಗಳಿಗಿಂತ
ಶ್ರೇಷ್ಟವಾದುದು ಮತ್ತು
ಪರಿಪೂರ್ಣವಾದುದು. ಇದು
ಕೈಯಿಂದ ಕಟ್ಟಿದ್ದಲ್ಲ,
ಇಹಲೋಕದ ಸೃಷ್ಟಿಗೆ
ಸಂಬಂದಪಟ್ಟಿದ್ದಲ್ಲ. ಇಂಥ
ಗರ್ಭಗುಡಿಯನ್ನು ಆವರು
ಒಮ್ಮೆಗೆ ಶಾಶ್ವತವಾಗಿ
ಪ್ರವೇಶಿಸಿದ್ದಾರೆ. ಹೋತಗಳ
ಅಥವಾ ಹೋರಿಕರುಗಳ
ರಕ್ತವನ್ನು ತೆಗೆದುಕೊಂಡು
ಅವರು ಪ್ರವೇಶಿಸಲಿಲ್ಲ.
ತಮ್ಮ ಸ್ವಂತ
ರಕ್ತವನ್ನೇ ತಗೆದುಕೊಂಡು
ಪ್ರವೇಶಿಸಿ ನಮಗೆ
ಶಾಶ್ವತ ಜೀವೋದ್ಧಾರವು ದೊರಕುವಂತೆ ಮಾಡಿದ್ದಾರೆ.
ಹೋತಹೋರಿಗಳ ರಕ್ತವನ್ನೂ
ಯಜ್ಞಪಶುಗಳ ಬೂದಿಯನ್ನೂ
ಮಲಿನರಾದವರ ಮೇಲೆ
ಚಿಮುಕಿಸುದರ ಮೂಲಕ
ಶಾರೀರಿಕ ಮೈಲಿಗೆಯನ್ನು
ಹೋಗಲಾಡಿಸಿ ಅವರನ್ನು
ಪರಿಶುದ್ದಗೊಳಿಸಬಹುದಾದರೆ, ಯೇಸುವಿನ
ರಕ್ತವು ಮತ್ತಷ್ಟು
ಹೆಚ್ಚಾಗಿ ನಮ್ಮನ್ನು
ಪರಿಶುದ್ದಗೊಳಿಸುತ್ತದಲ್ಲವೇ? ನಿತ್ಯಾತ್ಮದ ಮೂಲಕ ಅವರು
ತಮ್ಮನ್ನೇ ನಿಷ್ಕಳಂಕ
ಬಲಿಯಾಗಿ ದೇವರಿಗೆ
ಸಮರ್ಪಿಸಿದ್ದಾರೆ; ನಾವು
ಜೀವಸ್ವರೂಪರಾದ ದೇವರನ್ನು
ಆರಾಧಿಸುವಂತೆ, ಜಡ
ಕರ್ಮಗಳಿಂದ ನಮ್ಮನ್ನು
ಬಿಡುಗಡೆ ಮಾಡಿ ನಮ್ಮ
ಅಂತರಂಗವನ್ನು ಪರಿಶುದ್ದಗೊಳಿಸುತ್ತಾರೆ.
ಈ ಕಾರಣ,
ಯೇಸು ಹೊಸ
ಒಡಂಬಡಿಕೆಯನ್ನು ಏರ್ಪಡಿಸಿದ ಮಧ್ಯಸ್ಥರಾಗಿದ್ದಾರೆ. ದೈವಕರೆ
ಹೊಂದಿದವರು ದೇವರು
ವಾಗ್ದಾನ ಮಾಡಿದ
ಅಮರ ಸೌಭಾಗ್ಯವನ್ನು
ಭಾದ್ಯವಾಗಿ ಪಡೆಯುವಂತೆ
ಈ ಒಡಂಬಡಿಕೆಯನ್ನು
ಏರ್ಪಡಿಸಲಾಯಿತು. ಇದು
ಯೇಸುವಿನ ಮರಣದ
ಮೂಲಕವೇ ಉಂಟಾಯಿತು.
ಈ ಮರಣವು
ಹಳೆಯ ಹೊಡಂಬಡಿಕೆಯನ್ನು
ಮೀರಿ ಮಾಡಿದ
ಅಪರಾಧಗಳನ್ನೂ ಪರಿಹರಿಸುತ್ತದೆ.
ಶುಭಸಂದೇಶ: ಮಾರ್ಕ 14:12-16, 22-26
ಅಂದು
ಹುಳಿರಹಿತ ರೊಟ್ಟಿಯ
ಹಬ್ಬದ ಮೊದಲನೆಯ
ದಿನ. ಅಂದರೆ,
ಪಾಸ್ಕಹಬ್ಬದ ಕುರಿಮರಿಯನ್ನು
ಕೊಯ್ಯುವ ದಿನ.
ಶಿಷ್ಯರು ಯೇಸುಸ್ವಾಮಿಯ
ಬಳಿಗೆ ಬಂದು,
"ತಮಗೆ ಪಾಸ್ಕ ಭೋಜನವನ್ನು
ನಾವು ಎಲ್ಲಿ
ಸಿದ್ದಪಡಿಸಬೇಕೆನ್ನುತ್ತೀರಿ?" ಎಂದು
ಕೇಳಿದರು. ಯೇಸು
ಅವರಲ್ಲಿ ಇಬ್ಬರಿಗೆ,
"ನೀವು ಪಟ್ಟಣಕ್ಕೆ
ಹೋಗಿರಿ. ಅಲ್ಲಿ
ನೀರಿನ ಕೊಡವನ್ನು
ಹೊತ್ತವನೊಬ್ಬನು ನಿಮ್ಮನ್ನು
ಎದುರುಗೊಳ್ಳುವನು. ಅವನ
ಹಿಂದೆಯೇ ಹೋಗಿ,
ಅವನು ಯಾವ
ಮನೆಗೆ ಹೋಗುತ್ತಾನೋ
ಆ ಮನೆಯ
ಯಜಮಾನನಿಗೆ, "ನಮ್ಮ
ಗುರು, " ನನ್ನ
ಶಿಷ್ಯರ ಜೊತೆಯಲ್ಲಿ
ಪಾಸ್ಕ ಭೋಜನ
ಮಾಡಲು ನನಗೆ
ಕೊಠಡಿ ಎಲ್ಲಿ?"
ಎಂದು ಕೇಳುತ್ತಾರೆ,"
ಎಂದು ವಿಚಾರಿಸಿ.
ಅವನು ಮೇಲುಪ್ಪರಿಗೆಯಲ್ಲಿ
ಸಿದ್ದವಾಗಿರುವ ಹಾಗೂ
ಸುಸಜ್ಜಿತವಾದ ದೊಡ್ಡ
ಕೊಠಡಿಯನ್ನು ತೋರಿಸುವನು
ಅಲ್ಲಿ ನಮಗೆ
ಊಟ ಸಿದ್ಧ ಮಾಡರಿ,"
ಎಂದು ಹೇಳಿಕಳುಹಿಸಿದರು.
ಅವರು ಪಟ್ಟಣಕ್ಕೆ
ಹೋಗಿ, ಯೇಸು
ತಮಗೆ ಹೇಳಿದ ಪ್ರಕಾರ ಎಲ್ಲಾ
ವ್ಯವಸ್ಥಿತವಾಗಿರುವುದನ್ನು ಕಂಡು,
ಪಾಸ್ಕ ಭೋಜನವನ್ನು
ತಯಾರಿಸಿದರು. ಅವರೆಲ್ಲರೂ ಊಟ ಮಾಡುತ್ತಿರುವಾಗ, ಯೇಸುಸ್ವಾಮಿ ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ, ಅದನ್ನು ಮುರಿದು, ಶಿಷ್ಯರಿಗೆ ಕೊಡುತ್ತಾ, "ಇದನ್ನು ಸ್ವೀಕರಿಸಿ, ಇದು ನನ್ನ ಶರೀರ," ಎಂದರು. ಬಳಿಕ ಪಾನಪಾತ್ರೆಯನ್ನು ತೆಗೆದುಕೊಂಡು ಕೃತಜ್ಞತಾ ಸ್ತೋತ್ರವನ್ನು ಸಲ್ಲಿಸಿ, ಅದನ್ನು ಅವರಿಗೆ ಕೊಟ್ಟರು. ಅವರೆಲ್ಲರೂ ಅದರಿಂದ ಕುಡಿದರು. ಯೇಸು ಅವರಿಗೆ, "ಇದು ನನ್ನ ರಕ್ತ, ಸಮಸ್ತ ಜನರಿಗಾಗಿ ಸುರಿಸಲಾಗುವ ಒಡಂಬಡಿಕೆಯ ರಕ್ತ. ನಾನು ದೇವರ ಸಾಮ್ರಾಜ್ಯದಲ್ಲಿ ದ್ರಾಕ್ಷರಸವನ್ನು ಹೊಸದಾಗಿ ಕುಡಿಯುವ ದಿನದವರೆಗೂ ಅದನ್ನು ಇನ್ನು ಕುಡಿಯುವುದಿಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ," ಎಂದರು. ಬಳಿಕ ಅವರೆಲ್ಲರೂ ಕೀರ್ತನೆ ಹಾಡಿ, ಓಲಿವ್ ಗುಡ್ಡಕ್ಕೆ ಹೊರಟರು.
ಸಂತರಾದ ಚಾಲ್ಸ್ ಲುವಾಂಗ ಮತ್ತು ಸಂಗಡಿಗರು (ರಕ್ತಸಾಕ್ಷಿಗಳು)
ಸಂತರಾದ ಚಾಲ್ಸ್ ಲುವಾಂಗ ಮತ್ತು ಸಂಗಡಿಗರು (ರಕ್ತಸಾಕ್ಷಿಗಳು)
No comments:
Post a Comment