ಮೊದಲನೆಯ ವಾಚನ ; ಅರಸರುಗಳ ಎರಡನೆಯ ಪತ್ರದಿಂದ ಇಂದಿನ ಮೊದಲನೆಯ ವಾಚನ 4:8-11, 14-16
ಒಂದು ಸಾರಿ ಎಲೀಷನು ಶೂನೇಮಿಗೆ ಹೋದನು. ಅಲ್ಲಿ ಒಬ್ಬ ಶ್ರೀಮಂತ ಮಹಿಳೆ ಇದ್ದಳು. ಆಕೆ ಅವನನ್ನು ತನ್ನ ಮನೆಯಲ್ಲಿ ಊಟಮಾಡಬೇಕೆಂದು ಒತ್ತಾಯಪಡಿಸಿದಳು. ಅಂದಿನಿಂದ ಅವನು ಆ ಮಾರ್ಗವಾಗಿ ಹೋಗುವಾಗಲೆಲ್ಲಾ ಆ ಮನೆಯಲ್ಲೇ ಊಟಮಾಡುತ್ತಿದ್ದನು. ಆ ಮಹಿಳೆ ತನ್ನ ಗಂಡನಿಗೆ, "ಯಾವಾಗಲೂ ಈ ದಾರಿಯಿಂದ ಹೋಗುತ್ತಾ ಬರುತ್ತಾ ಇರುವ ಆ ವ್ಯಕ್ತಿ ಒಬ್ಬ ಸಂತನು ಹಾಗು ದೈವಪುರುಷನು ಆಗಿರುತ್ತಾನೆಂದು ನನಗೆ ಗೊತ್ತಾಯಿತು. ಆದುದರಿಂದ ನಾವು ಅವನಿಗಾಗಿ ಮಾಳಿಗೆಯ ಮೇಲೆ ಒಂದು ಸಣ್ಣ ಕೋಣೆಯನ್ನು ಕಟ್ಟಿಸೋಣ. ಅದರಲ್ಲಿ ಒಂದು ಮಂಚ, ಮೇಜು, ಕುರ್ಚಿ, ದೀಪಸ್ತಂಭ ಇವುಗಳನ್ನು ಇಡೋಣ; ಅವನು ಅಲ್ಲಿಗೆ ಬಂದಾಗೆಲ್ಲಾ ಅದರಲ್ಲಿ ವಾಸಮಾಡಲಿ, " ಎಂದು ಹೇಳಿದಳು. ಒಂದು ದಿನ ಎಲೀಷನು ಅಲ್ಲಿಗೆ ಬಂದು ಆ ಕೋಣೆಯೊಳಗೆ ಪ್ರವೇಶಿಸಿ ದಣಿವಾರಿಸಿಕೊಂಡನು. ಅಮೇಲೆ ಎಲೀಷನು ಗೇಹಜಿಯನ್ನು, "ನಾವು ಆಕೆಗೆ ಯಾವ ಉಪಕಾರವನ್ನು ಮಾಡಬಹುದು? " ಎಂದು ಕೇಳಿದನು. ಅವನು, " ಆಕೆಗೆ ಮಗನಿಲ್ಲ, ಗಂಡನು ಮುದಕನಾಗಿದ್ದಾನೆ, ' ಎಂದನು. ಇದನ್ನು ಕೇಳಿ ಎಲೀಷನು ಆ ಮಹಿಳೆಯನ್ನು ಕರೆಯಬೇಕೆಂದು. ಆಜ್ಞಾಪಿಸಿದನು. ಅವನು ಹೋಗಿ ಕರೆದನು. ಆಕೆ ಬಂದು ಬಾಗಿಲಿನ ಹತ್ತಿರ ನಿಂತಳು. ಇಲೀಷನು ಆಗೆಗೆ, " ನೀನು ಬರುವ ವರ್ಷ ಇದೇ ಕಾಲದಲ್ಲಿ ಒಬ್ಬ ಮಗುನನ್ನು ಅಪ್ಪಿಕೊಂಡಿರುವೆ, " ಎಂದನು.
ಕೀರ್ತನೆ 89:1-2,15-16,17-18.V.1
ಶ್ಲೋಕ: ಪ್ರಭೂ ಕೀರ್ತಿಸುವೆನು ಸದಾ ನಿನ್ನಚಲ ಪ್ರೀತಿಯನು ||
1. ಪ್ರಭೂ, ಕೀರ್ತಿಸುವೆನು
ಸದಾ ನಿನ್ನಚಲ ಪ್ರೀತಿಯನು|
ಸಾರುವೆನು ತಲತಲಾಂತರಕು ನಿನ್ನ ಸತ್ಯತೆಯನು||
ನಿನ್ನಚಲ ಪ್ರೀತಿ ಪ್ರಭೂ
ನನಗೆ ಶಾಶ್ವತ ಸಿದ್ದ|
ನಿನ್ನ ಸತ್ಯತೆ ಆಗಸದಂತೆ ಸ್ಥಿರ
ಸ್ಥಾಪಿತ||
2. ಧನ್ಯರು ಪ್ರಭೂ, ನಿನಗೆ ಜಯಕಾರ ಹಾಡುವವರು|
ನಿನ್ನ ಮುಖದ ಪ್ರಕಾಶದೊಳವರು ನಡೆಯುವರು||
ಆನಂದಿಸುವರವರು
ಸದಾ ನಿನ್ನ ನಾಮದಲಿ|
ಪ್ರವರ್ಧಿಸುವರವರು
ನಿನ್ನ ನ್ಯಾಯನೀತಿಯಲಿ||
3. ಅವರ ಶಕ್ತಿಸಾಮರ್ಥ್ಯದ ಪ್ರತಿಭೆ ನಿನ್ನದೆ|
ನಿನ್ನ ದಯೆಯಿಂದ ನಮಗೆ ಕೋಡುಮೂಡಿದೆ||
ಗುರಾಣಿಯಂತಿಹ
ನಮ್ಮ ರಾಜನು ಪ್ರಭುವಿನವನೇ|
ಇಸ್ರಯೇಲಿನ ಪರಮಪಾವನ ಸ್ವಾಮಿಗೆ ಸೇರಿದವನೇ||
ಎರಡನೆಯ ವಾಚನ : ಪೌಲನು ರೋಮನರಿಗೆ ಬರೆದ ಪತ್ರದಿಂದ ಇಂದಿನ ಎರಡನೆಯ ವಾಚನ 6:3-4, 8-11
ಘೋಷಣೆ ಪ್ರೇ. ಕಾ. ಕ. 16:14
ಅಲ್ಲೆಲೂಯ, ಅಲ್ಲೆಲೂಯ!
ನಿಮ್ಮ ಬೋಧನೆಗೆ ಕಿವಿಗೊಟ್ಟು ಗ್ರಹಿಸುವಂತೆ
| ಪ್ರಭೂ, ನಮ್ಮ ಹೃದಯವನ್ನು ತೆರೆಯಿರಿ
||
ಅಲ್ಲೆಲೂಯ!
ಶುಭಸಂದೇಶ ವಾಚನ : ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 10:37-42
ಪ್ರಭುಕ್ರಿಸ್ತರ ಶುಭಸಂದೇಶ
Please send daily gospel readings
ReplyDeleteHi, will surely send
ReplyDelete