ಮೊದಲನೇ ವಾಚನ: ಆದಿಕಾಂಡ 32:22-32
ಆ ರಾತ್ರಿ ಯಕೋಬನು ತನ್ನ ಇಬ್ಬರು ಹೆಂಡತಿಯರನ್ನೂ ಇಬ್ಬರು ದಾಸಿಯರನ್ನೂ ಹನ್ನೊಂದು ಮಂದಿ ಮಕ್ಕಳನ್ನೂ ಕರೆದುಕೊಂಡು "ಯಬ್ಬೋಕ್" ಹೊಳೆಯನ್ನು ದಾಟುವ ಸ್ಥಳದಲ್ಲಿ ದಾಟಿದನು. ಅವರನ್ನೂ ತನ್ನ ಆಸ್ತಿಪಾಸ್ತಿಯನ್ನೂ ದಾಟಿಸಿದ ಮೇಲೆ ಯಕೋಬನು ಒಂಟಿಗನಾಗಿ ಹಿಂದೆ ನಿಂತಿದ್ದನು. ಯಾರೋ ಒಬ್ಬ ಪುರುಷ ಬೆಳಗಾಗುವ ತನಕ ಅವನ ಸಂಗಡ ಹೋರಾಡಿದನು. ಆ ಪುರುಷ ತಾನು ಗೆಲ್ಲದೆ ಇರುವುದನ್ನು ಕಂಡು ಯಕೋಬನ ತೊಡೆಯ ಕೀರನ್ನು ಮುಟ್ಟಿದ್ದರಿಂದ ಹೋರಾಡುತ್ತಿರುವಾಗಲೆ ಯಕೋಬನ ತೊಡೆಯ ಕೀಲು ತಪ್ಪಿತು. ಆ ಪುರುಷ, "ನನ್ನನ್ನು ಹೋಗಬಿಡು, ಬೆಳಗಾಗುತ್ತಿದೆ," ಎನ್ನಲು ಯಕೋಬನು, ನೀವು ನನ್ನನ್ನು ಆಶೀರ್ವದಿಸದ ಹೊರತು ನಿಮ್ಮನ್ನು ಹೋಗಬಿಡುವುದಿಲ್ಲ," ಎಂದನು. ಆ ಪುರುಷ, "ನಿನ್ನ ಹೆಸರೇನು?" ಎಂದು ಕೇಳಿದ್ದಕ್ಕೆ ಯಕೋಬನು, "ನನ್ನ ಹೆಸರು ಯಕೋಬ" ಎಂದನು. ಅವನು ಯಕೋಬನಿಗೆ, "ಇನ್ನು ಮೇಲೆ ನೀನು ಯಕೋಬ ಎನ್ನಿಸಿಕೊಳ್ಳುವುದಿಲ್ಲ," ಎಂದನು; ದೇವರ ಸಂಗಡ ಹಾಗು ಮನುಷ್ಯರ ಸಂಗಡ ಹೋರಾಡಿ ಗೆದ್ದವನಾದ್ದರಿಂದ ನಿನಗೆ "ಇಸ್ರಯೇಲ್" ಎಂದು ಹೆಸರುಂಟಾಗುವುದು," ಎಂದು ಹೇಳಿದನು. ಯಕೋಬನು ನಿಮ್ಮ ಹೆಸರನ್ನು ದಯವಿಟ್ಟು ನನಗೆ ತಿಳಿಸಬೇಕು", ಎಂದಾಗ ಆ ಪುರುಷ, "ನನ್ನ ಹೆಸರನ್ನು ವಿಚಾರಿಸುವುದೇಕೆ?" ಎಂದು ಹೇಳಿ ಅಲ್ಲೇ ಅವನನ್ನು ಆಶೀರ್ವದಿಸಿದನು. ಯಕೋಬನು, ನಾನು ದೇವರನ್ನು ಮುಖಾಮುಖಿಯಾಗಿ ಕಂಡಿದ್ದರೂ ಪ್ರಾಣಸಹಿತ ಉಳಿದಿದ್ದೇನಲ್ಲಾ!" ಎಂದುಕೊಂಡುಆ ಸ್ಥಳಕ್ಕೆ "ಪೆನೀಯೇಲ್" ಎಂದು ಹೆಸರಿಟ್ಟನು. ಅವನು ಪೆನೊವೇಲನು ದಾಟುತ್ತಿರುವಾಗ ಸೂರ್ಯೋದಯವಾಯಿತು; ಕೀಲುಕಳಚಿದ ತೊಡೆಯ ನಿಮತ್ತ ಅವನು ಕುಂಟಿಕೋಡೇ ನಡೆದನು. ಆ ಪುರುಷನು ಯಕೋಬನ ತೊಡೆಯ ಕೀಲನ್ನು ಮುಟ್ಟಿದರಿಂದ ಇಸ್ರಯೇಲರು ಇಂದಿನವರೆಗೂ ತೊಡೆಯ ಕೀಲಿನ ಮೇಲಿರುವ ಮಾಂಸವನ್ನು ತಿನ್ನುವುದಿಲ್ಲ.
ಕೀರ್ತನೆ: 17:1, 2-3, 6-7, 8, 15
ಶ್ಲೋಕ: ಸತ್ಯಸಂಧನಾದ ನಾನು ಸೇರುವೆ ನಿನ್ನ ಸಾನಿಧ್ಯವನ್ನು
ಶುಭಸಂದೇಶ: ಮತ್ತಾಯ 9:32-38
ಕುರುಡರು ಹೊರಟು ಹೋಗುತ್ತಿದ್ದ ಹಾಗೆ, ದೆವ್ವ ಹಿಡಿದಿದ್ದ ಒಬ್ಬ ಮೂಕನನ್ನು ಕೆಲವರು ಯೇಸುಸ್ವಾಮಿಯ ಬಳಿಗೆ ಕರೆತಂದರು. ದೆವ್ವ ಬಿಡಿಸಿದ ಮೇಲೆ ಆ ಮೂಕನಿಗೆ ಮಾತು ಬಂದಿತು. ಜನರೆಲ್ಲರೂ ಆಶ್ಚರ್ಯಚಕಿತರಾದರು. "ಇಂತಹ ಕಾರ್ಯವನ್ನು ನಾವು ಇಸ್ರಯೇಲಿನಲ್ಲಿ ಕಂಡಿದ್ದೇ ಇಲ್ಲ!" ಎಂದುಕೊಂಡರು. ಆದರೆ ಫರಿಸಾಯರು, "ಇವನು ದೆವ್ವಗಳೊಡೆಯನ ಶಕ್ತಿಯಿಂದಲೇ ದೆವ್ವಗಳನ್ನು ಬಿಡಿಸುತ್ತಾನೆ," ಎಂದರು. ಯೇಸುಸ್ವಾಮಿ, ಊರೂರುಗಳಲ್ಲೂ ಹಳ್ಳಿಹಳ್ಳಿಗಳಲ್ಲೂ ಸಂಚಾರ ಮಾಡುತ್ತಾ ಅಲ್ಲಿಯ ಪ್ರಾರ್ಥನಾಮಂದಿರಗಳಲ್ಲಿ ಬೋಧಿಸಿದರು. ಶ್ರೀ ಸಾಮ್ರಾಜ್ಯದ ಶುಭಸಂದೇಶವನ್ನು ಸಾರಿದರು. ಎಲ್ಲಾ ತರಹದ ರೋಗರುಜಿನಗಳನ್ನು ಗುಣಪಡಿಸಿದರು. ಆ ಜನಸಮೂಹವನ್ನು ಕಂಡಾಗ ಅವರ ಮನ ಕರಗಿತು. ಏಕೆಂದರೆ, ಕುರುಬನಿಲ್ಲದ ಕುರಿಗಳಂತೆ ಅವರು ತೊಳಲಿದ್ದರು ಹಾಗೂ ಬಳಲಿದ್ದರು. ಆದುದರಿಂದ ಯೇಸು ತಮ್ಮ ಶಿಷ್ಯರಿಗೆ, "ಬೆಳೆಯೇನೋ ಹೇರಳ; ಕೊಯಿಲುಗಾರರೋ ವಿರಳ; ಈ ಕಾರಣತನ್ನ ಕೊಯಿಲಿಗೆ ಆಳುಗಳನ್ನು ಕಳುಹಿಸುವಂತೆ ಬೆಳೆಯ ಯಜಮಾನನನ್ನು ಪ್ರಾರ್ಥಿಸಿರಿ," ಎಂದರು.
No comments:
Post a Comment