ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 4:13-21
ಅವಿದ್ಯಾವಂತರು ಹಾಗೂ ಜನ ಸಾಮಾನ್ಯರು ಆಗಿದ್ದರೂ, ಪ್ರೇಷಿತರು ಇಷ್ಟು ಧೈರ್ಯಶಾಲಿಗಳಾಗಿರುವುದನ್ನು ಕಂಡು ಸಭೆಯ ಸದಸ್ಯರು ಚಕಿತರಾದರು; ಯೇಸುವಿನ ಸಂಗಡಿಗರೆಂದು ಇವರ ಗುರುತು ಹಚ್ಚಿದರು ಗುಣ ಹೊಂದಿದ್ದ ಆ ಮನುಷ್ಯನು ಪೇತ್ರ ಮತ್ತು ಯೊವಾನ್ನರ ಜೋತೆ ನಿಂತಿರುವುದನ್ನು ಕಂಡು ನಿರುತ್ತರರಾದರು. ಸಭಾಕೂಟದಿಂದ ಪ್ರೇಷಿತರನ್ನು ಹೊರಗೆ ಕಳುಹಿಸಿ ತಮ್ಮೊಳಗೆ ಚರ್ಚಿಸಲಾರಂಭಿಸಿದರು: "ಇವರನ್ನು ಏನು ಮಾಡೋಣ? ಇವರು ಮಾಡಿರುವ ಅಪರೂಪ ಅದ್ಬುತ ಜೆರುಸಲೇಮಿನ ಸರ್ವರಿಗೂ ತಿಳಿದು ಹೋಗಿದೆ. ಅದನ್ನು ಅಲ್ಲಗಳೆಯುವಂತಿಲ್ಲ. ಆದರೂ, ಈ ಸಮಾಚಾರ ಜನರಲ್ಲಿ ಮತ್ತಷ್ಟು ಹರಡದಂತೆ ಇನ್ನು ಮೇಲೆ ಯಾರ ಬಳಿಯಲ್ಲೂ ಯೇಸುವಿನ ಹೆಸರೆತ್ತದಂತೆ ಇವರಿಗೆ ಎಚ್ಚರಿಕೆ ಕೊಡೋಣ," ಎಂದುಕೊಂಡರು. ಅನಂತರ ಪ್ರೇಷಿತರನ್ನು ಒಳಕ್ಕೆ ಕರೆದು, "ಇನ್ನು ಮುಂದೆ ಯೇಸುವಿನ ಹೆಸರೆತ್ತಿ ಮಾತನಾಡಬಾರದು, ಭೋಧಿಸ ಕೂಡದು," ಎಂದು ಕಟ್ಟಪ್ಪಣೆ ಮಾಡಿದರು ಆಗ ಪೇತ್ರ ಮತ್ತು ಯೊವಾನ್ನರು, "ನಾವು ದೇವರಿಗೆ ವಿಧೇಯರಾಗಿರಬೇಕೋ? ನಿಮಗೆ ವಿಧೇಯರಾಗಿರಬೇಕೋ ದೇವರ ದೃಷ್ಟಿಯಲ್ಲಿ ಯಾವುದು ಸರಿ? ನೀವೇ ನಿರ್ಣಯಿಸಿರಿ. ನಾವಂತೂ ಕಣ್ಣಾರೆ ಕಂಡು, ಕಿವಿಯಾರೆ ಕೇಳಿದ ವಿಷಯವನ್ನು ಕುರಿತು ಮೌನದಿಂದಿರಲಾಗದು," ಎಂದು ಬದಲು ನುಡಿದರು ನಡೆದ ಅದ್ಬುತಕ್ಕಾಗಿ ಜನರೆಲ್ಲರೂ ದೇವರನ್ನು ಕೊಂಡಾಡುತ್ತಿದ್ದರು. ಇದನ್ನು ಅರಿತ ಆ ಸಭಾಸದಸ್ಯರಿಗೆ ಪ್ರೇಷಿತರನ್ನು ಶಿಕ್ಷಿಸುವ ಮಾರ್ಗ ತೋಚದೆ ಹೋಯಿತು. ಆದುದರಿಂದ ಅವರನ್ನು ಇನ್ನೂ ಅಧಿಕವಾಗಿ ಎಚ್ಚರಿಸಿ ಕಳುಹಿಸಿಬಿಟ್ಟರು.
ಕೀರ್ತನೆ: 118:1, 14-15, 16-18, 19-21
ಶ್ಲೋಕ: ಸದುತ್ತರ ಪಾಲಿಸಿದ ಪ್ರಭೂ, ನಿನಗೆ ವಂದನೆ
ಶುಭಸಂದೇಶ: ಮಾರ್ಕ 16:9-15
ಭಾನುವಾರ ಮುಂಜಾನೆ ಪುನರುತ್ದಾನ ಹೊಂದಿದ ಯೇಸುಸ್ವಾಮಿ, ಮೊತ್ತಮೊದಲು ಮಗ್ದಲದ ಮರಿಯಳಿಗೆ ಕಾಣಿಸಿಕೊಂಡರು ಅವರು ಏಳು ದೆವ್ವಗಳನ್ನು ಹೊರಗಟ್ಟಿದ್ದು ಈಕೆಯಿಂದಲೇ. ಈಕೆ ಹೋಗಿ ತಾನು ಕಂಡದ್ದನ್ನು ಯೇಸುವಿನ ಸಂಗಡಿಗರಿಗೆ ತಿಳಿಸಿದಳು. ಅವರಾದರೋ ಇನ್ನೂ ಶೋಕಭರಿತರಾಗಿ ಅಳುತ್ತಾ ಕುಳಿತ್ತಿದ್ದರು. ಆದರೆ ಯೇಸು ಜೀವಂತರಾಗಿದ್ದಾರೆ ಮತ್ತು ಆಕೆಗೆ ಕಾಣಿಸಿಕೊಂಡಿದ್ದಾರೆ ಎಂಬ ವಾರ್ತೆಯನ್ನು ಕೇಳಿದಾಗ ಅವರು ಅದನ್ನು ನಂಬಲೇ ಇಲ್ಲ ತರುವಾಯ, ಹಳ್ಳಿಯೊಂದಕ್ಕೆ ಪ್ರಯಾಣ ಮಾಡುತ್ತಿದ್ದ ತಮ್ಮ ಇಬ್ಬರು ಶಿಷ್ಯರಿಗೆ ಯೇಸುಸ್ವಾಮಿ ಇನ್ನೊಂದು ರೀತಿಯಲ್ಲಿ ಕಾಣಿಸಿಕೊಂಡರು. ಇವರಿಬ್ಬರೂ ಹಿಂದಿರುಗಿ ಬಂದು, ಮಿಕ್ಕ ಶಿಷ್ಯರಿಗೆ ಇದನ್ನು ತಿಳಿಸಿದರು. ಆದರೆ ಅದನ್ನು ಅವರು ನಂಬದೆ ಹೋದರು. ಆನಂತರ, ಹನ್ನೊಂದು ಮಂದಿ ಶಿಷ್ಯರು ಊಟಮಾಡುತ್ತಿದ್ದಾಗ ಯೇಸುಸ್ವಾಮಿ ಪ್ರತ್ಯಕ್ಷರಾದರು. ತಾವು ಪುನರುತ್ದಾನ ಹೊಂದಿದ ಮೇಲೆ, ತಮ್ಮನ್ನು ಕಂಡವರ ಮಾತನ್ನು ಅವರು ನಂಬದಿದ್ದ ಕಾರಣ ಅವರ ಅವಿಶ್ವಾಸವನ್ನೂ ಹೃದಯ ಕಾಠಿಣ್ಯವನ್ನೂ ಯೇಸು ಖಂಡಿಸಿದರು. ಬಳಿಕ ಅವರಿಗೆ, "ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ, ಜಗತ್ತಿಗೆಲ್ಲಾ ಶುಭಸಂದೇಶವನ್ನು ಪ್ರಬೋಧಿಸಿರಿ," ಎಂದರು.
ಮನಸಿಗೊಂದಿಷ್ಟು : ಇಂದಿನ ಶುಭ ಸಂದೇಶ ಪ್ರತಿಯೊಬ್ಬ ಕ್ರೈಸ್ತನ ಕರ್ತವ್ಯವನ್ನು ನೆನಪಿಸುತ್ತಾ ಮುಗಿಯುತ್ತದೆ. ಶುಭ ಸಂದೇಶವನ್ನು ಸಾರದವರು ಖಂಡನೆಗೆ ಗುರಿಯಾಗದಿದ್ದರೂ ಯೇಸುವಿನ ನಿರಾಸೆಗಂತೂ ಖಂಡಿತ ಪ್ರಾತ್ರರು. ಯೇಸುವಿನ ಜೀವನ, ಪುನರುತ್ಥಾನವನ್ನು ಕೇಳಿ ಓದಿ, ವಿಶ್ವಾಸಿರುವ ನಾವು ಅಷ್ಟಕ್ಕೆ ತೃಪ್ತರಾಗದೆ ಯೇಸುವಿನ ಶುಭಸಂದೇಶ ಆಶಯಗಳನ್ನು ಜಗದಲ್ಲಿ ಸಾರಲು ಕರೆ ಹೊಂದಿದವರಾಗಿದ್ದೇವೆ.
ಪ್ರಶ್ನೆ : ಶುಭಸಂದೇಶವನ್ನು ನಾವು ಪ್ರಬೋಧಿಸುತ್ತಿದ್ದೇವೆಯೇ?
ಮನಸಿಗೊಂದಿಷ್ಟು : ಇಂದಿನ ಶುಭ ಸಂದೇಶ ಪ್ರತಿಯೊಬ್ಬ ಕ್ರೈಸ್ತನ ಕರ್ತವ್ಯವನ್ನು ನೆನಪಿಸುತ್ತಾ ಮುಗಿಯುತ್ತದೆ. ಶುಭ ಸಂದೇಶವನ್ನು ಸಾರದವರು ಖಂಡನೆಗೆ ಗುರಿಯಾಗದಿದ್ದರೂ ಯೇಸುವಿನ ನಿರಾಸೆಗಂತೂ ಖಂಡಿತ ಪ್ರಾತ್ರರು. ಯೇಸುವಿನ ಜೀವನ, ಪುನರುತ್ಥಾನವನ್ನು ಕೇಳಿ ಓದಿ, ವಿಶ್ವಾಸಿರುವ ನಾವು ಅಷ್ಟಕ್ಕೆ ತೃಪ್ತರಾಗದೆ ಯೇಸುವಿನ ಶುಭಸಂದೇಶ ಆಶಯಗಳನ್ನು ಜಗದಲ್ಲಿ ಸಾರಲು ಕರೆ ಹೊಂದಿದವರಾಗಿದ್ದೇವೆ.
ಪ್ರಶ್ನೆ : ಶುಭಸಂದೇಶವನ್ನು ನಾವು ಪ್ರಬೋಧಿಸುತ್ತಿದ್ದೇವೆಯೇ?
No comments:
Post a Comment