ಮೊದಲನೇ ವಾಚನ: ಯೆಶಾಯ 49:1-6
ಕಿವಿಗೊಡಿ ನನ್ನ ದ್ವೀಪನಿವಾಸಿಗಳೇ, ಆಲಿಸಿ ನನ್ನನ್ನು ದೂರದ ಜನಾಂಗಗಳೇ, ಸರ್ವೇಶ್ವರ ಕರೆದನೆನ್ನನ್ನು ಗರ್ಭದಲ್ಲಿದ್ದಾಗಲೇ; ಹೆಸರಿಟ್ಟನೆನಗೆ ನಾನು ತಾಯಿಯ ಉದರಲ್ಲಿದ್ದಾಗಲೇ; ಮಾಡಿದನು ನನ್ನ ನುಡಿಯನ್ನು ಹರಿಯವಾದ ಖಡ್ಗವನ್ನಾಗಿ, ಮುಚ್ಚಿಟ್ಟಿಹನು ನನ್ನನ್ನು ತನ್ನ ಕರದ ನೆರಳಿನಲ್ಲಿ, ರೂಪಿಸಿಹನು ನನ್ನನ್ನು ಚೂಪಾದ ಬಾಣವನ್ನಾಗಿ, ಬಚ್ಚಿಟ್ಟಿಹನು ನನ್ನನ್ನು ತನ್ನ ಬತ್ತಳಿಕೆಯಲ್ಲಿ. ಆತನೆನಗೆ ಇಂತೆಂದ: "ನೀನೆನ್ನ ದಾಸ; ನನ್ನ ಮಹಿಮೆ ಬೆಳಗಿಸುವ ಇಸ್ರಯೇಲ," ಇಂತೆಂದುಕೊಂಡೆ ನಾನಾಗ: ವ್ಯರ್ಥವಾಯಿತು ನನ್ನ ಸಾಮರ್ಥ್ಯವೆಲ್ಲ ಶೂನ್ಯವಾಗಿ ಹೋಯಿತು ನನ್ನ ಶಕ್ತಿಯೆಲ್ಲ ನನಗೆ ದೊರಕುವುದು ನ್ಯಾಯ ಸರ್ವೇಶ್ವರನ ಕೈಯಲ್ಲೇ, ನನಗೆ ಬರುವುದು ಬಹುಮಾನ ಆ ದೇವರಿಂದಲೇ, ಯಕೋಬ್ಯರನ್ನು ತನ್ನ ಬಳಿಗೆ ಕರೆತರಲು, ಇಸ್ರಯೇಲರನ್ನು ತನ್ನೊಂದಿಗೆ ಸೇರಿಸಿಕೊಳ್ಳಲು ತನ್ನ ದಾಸನನ್ನಾಗಿ ನನ್ನ ರೂಪಿಸಿದನು. ತಾಯ ಗರ್ಭದಲ್ಲಿದ್ದಾಗಲೇ ಮಾಡಿದನಿದನು. ಸನ್ಮಾನ್ಯನು ನಾನು ಸರ್ವೇಶ್ವರನ ದೃಷ್ಟಿಯಲಿ, ನನ್ನ ಶಕ್ತಿಸಾಮರ್ಥಯ ಇರುವುದು ಆ ದೇವರಲಿ. ಮತ್ತೆ ಆತ ಇಂತೆಂದನು ನನಗೆ: "ಮಹತ್ಕಾರ್ಯವೇನೂ ಅಲ್ಲ ನನ್ನ ದಾಸನಾದ ನಿನಗೆ ಕುಲಗಳನು ಉದ್ಧರಿಸುವ ಮಾತ್ರಕೆ ಇಸ್ರಯೇಲರಲಿ ರಕ್ಷಿತರಾದವರನ್ನು ಮರಳಿ ಬರಮಾಡುವ ಮಾತ್ರಕೆ. ನೇಮಿಸಿರುವೆನು ನಿನ್ನನ್ನು ಜ್ಯೋತಿಯನ್ನಾಗಿ ಸರ್ವಜನಾಂಗಗಳಿಗೆ ನನ್ನ ರಕ್ಷಣೆ ವ್ಯಾಪಿಸಿರುವಂತೆ ಮಾಡಲು ಜಗದ ಕಟ್ಟಕಡೆಯವರೆಗೆ."
ಕೀರ್ತನೆ: 71:1-2, 3-4, 5-6, 15, 17
ಶ್ಲೋಕ: ವರ್ಣಿಸುವೆನು ದಿನವೆಲ್ಲ ನಿನ್ನ ನ್ಯಾಯನೀತಿಯನು
ಶುಭಸಂದೇಶ: ಯೊವಾನ್ನ 13:21-23, 36-38
ಯೇಸುಸ್ವಾಮಿ ಮನಸ್ಸಿನಲ್ಲಿ ಬಹಳವಾಗಿ ನೊಂದುಕೊಂಡರು. ಅವರು, "ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನಿಮ್ಮಲ್ಲೊಬ್ಬನು ದ್ರೋಹ ಬಗೆದು ನನ್ನನ್ನು ಹಿಡಿದೊಪ್ಪಿಸುವನು," ಎಂದು ಸ್ಪಷ್ಟವಾಗಿ ಹೇಳಿದರು. ಯೇಸು ಯಾರನ್ನು ಕುರಿತು ಹಾಗೆಂದರೆಂದು ತಿಳಿಯದೆ ಶಿಷ್ಯರು ಒಬ್ಬರನ್ನೊಬ್ಬರು ಸಂಶಯದಿಂದ ನೋಡುವವರಾದರು. ಯೇಸುವಿನ ಪಕ್ಕದಲ್ಲೇ ಒರಗಿ ಕುಳಿತಿದ್ದ ಅವರ ಆಪ್ತ ಶಿಷ್ಯನಿಗೆ, ಸಿಮೋನ ಪೇತ್ರನು, "ಯಾರನ್ನು ಕುರಿತು ಹಾಗೆ ಹೇಳುತ್ತಿದ್ದಾರೆಂದು ಕೇಳು," ಎಂದು ಸನ್ನೆ ಮಾಡಿದನು. ಆಗ ಆ ಶಿಷ್ಯನು, ಯೇಸುವಿನ ಮಗ್ಗಲಿಗೆ ಸರಿದು, "ಅಂತವನು ಯಾರು ಪ್ರಭೂ?" ಎಂದು ಕೇಳಿದನು. ಯೇಸು, "ನಾನು ರೊಟ್ಟಿಯ ತುಂಡನ್ನು ಬಟ್ಟಲಿನಲ್ಲಿ ಅದ್ದಿ ಅದನ್ನು ಯಾರಿಗೆ ಕೊಡುತ್ತೇನೋ ಅವನೇ," ಎಂದು ಹೇಳಿ ರೊಟ್ಟಿಯ ತುಂಡನ್ನು ಅದ್ದಿ ಸಿಮೋನನ ಮಗ ಇಸ್ಕರಿಯೋತಿನ ಯೂದನಿಗೆ ಕೊಟ್ಟರು ಯೂದನು ಅದನ್ನು ತೆಗೆದುಕೊಂಡಿದ್ದೇ ತಡ, ಸೈತಾನನು ಹೊಕ್ಕನು. ಆಗ ಯೇಸು, "ನೀನು ಮಡಬೇಕೆಂದಿರುವುದನ್ನು ಬೇಗನೆ ಮಾಡಿಮುಗಿಸು," ಎಂದರು. ಊಟಕ್ಕೆ ಕುಳಿತಿದ್ದ ಶಿಷ್ಯರಿಗೆ, ಯೇಸು ಹಾಗೇಕೆ ಹೇಳಿದರೆಂದು ಅರ್ಥವಾಗಲಿಲ್ಲ ಯೂದನ ವಶದಲ್ಲಿ ಹಣದ ಚೀಲವಿದ್ದುದರಿಂದ, "ಹಬ್ಬಕ್ಕೆ ನಮಗೆ ಬೇಕಾದುದನ್ನು ಕೊಂಡು ಬಾ," ಎಂದೋ, "ಬಡವರಿಗೆ ಏನಾದರು ಕೊಡು' ಎಂದೋ, ಯೇಸು ಹೇಳಿರಬೇಕೆಂದು ಕೆಲವು ಶಿಷ್ಯರು ಭಾವಿಸಿದರು. ಆ ರೊಟ್ಟಿಯ ತುಂಡನ್ನು ತೆಗೆದುಕೊಂಡಕೂಡಲೇ ಯೂದನು ಎದ್ದು ಹೊರಟುಹೋದನು; ಆಗ ರಾತ್ರಿಯಾಗಿತ್ತು. ಯೂದನು ಹೊರಟು ಹೋದ ಮೇಲೆ ಯೇಸುಸ್ವಾಮಿ ಹೀಗೆಂ ದರು: "ಈಗ ನರಪುತ್ರನ ಮಹಿಮೆ ಪ್ರಕಟವಾಗುವುದು. ಆತನಲ್ಲಿ ದೇವರ ಮಹಿಮೆಯೂ ಪ್ರಕಟವಾಗುವುದು ದೇವರ ಮಹಿಮೆ ಆತನಲ್ಲಿ ಪ್ರಕಟವಾದರೆ, ದೇವರೆ ನರಪುತ್ರನ ಮಹಿಮೆಯನ್ನು ತಮ್ಮಲ್ಲಿ ಪ್ರಕಟಪಡಿಸುವರು. ಪ್ರಿಯ ಮಕ್ಕಳೇ, ಇನ್ನು ತುಸುಕಾಲ ಮಾತ್ರ ನಾನು ನಿಮ್ಮೊಡನೆ ಇರುತ್ತೇನೆ. ಆಮೇಲೆ ನೀವು ನನ್ನನ್ನು ಹುಡುಕುವಿರಿ, "ಆದರೆ ನಾನು ಹೋಗುವಲ್ಲಿಗೆ ನೀವು ಬರಲಾರಿರಿ' ಎಂದು ನಾನು ಯೆಹೂದ್ಯರಿಗೆ ಹೇಳಿದಂತೆಯೇ ನಿಮಗೂ ಹೇಳುತ್ತೇನೆ" ಎಂದರು. ಆಗ ಸಿಮೋನ ಪೇತ್ರನು, ಪ್ರಭುವೇ, ನೀವು ಹೋಗುವುದಾದರೂ ಎಲ್ಲಿಗೆ?" ಎಂದು ಕೇಳಿದನು. "ನಾನು ಹೋಗುವಲ್ಲಿಗೆ ನೀನು ಈಗ ಬರಲಾರೆ. ಆನಂತರ ಬರುವೆ," ಎಂದು ಯೇಸು ಉತ್ತರಕೊಡಲು ಪೇತ್ರನು, "ಈಗಲೇ ನಿಮ್ಮ ಹಿಂದೆ ಬರಲು ಏಕಾಗದು? ಪ್ರಭು, ನಿಮಗಾಗಿ ಪ್ರಾಣವನ್ನು ಕೊಡಲು ಸಿದ್ದನಿದ್ದೇನೆ," ಎಂದನು. ಆಗ ಯೇಸು, "ನನಗಾಗಿ ಪ್ರಾಣವನ್ನು ಕೊಡಲೂ ಸಿದ್ಧನಿರುವೆಯಾ? ನಾನು ನಿನಗೆ ನಿಜವಾಗಿ ಹೇಳುತ್ತೇನೆ ಕೇಳು: ನೀನು ನನ್ನನ್ನು ಅರಿಯೆನೆಂದು ಮೂರು ಬಾರಿ ತಿರಸ್ಕರಿಸುವ ತನಕ ನಾಳೆ ಮುಂಜಾನೆ ಕೋಳಿ ಕೂಗೂವುದಿಲ್ಲ," ಎಂದು ನುಡಿದರು.
ಮನಸಿಗೊಂದಿಷ್ಟು : ತಮ್ಮನ್ನು ಹಿಡಿದು ಕೊಡುವವನು ಯಾರು ಎಂದು ತಿಳಿದಿದ್ದರೂ ಯೇಸು ತೋರಿದ ಪ್ರೀತಿ, ಸಹನೆಯನ್ನು ವರ್ಣಿಸಲು ಸಾಧ್ಯವಿಲ್ಲ. ನಮ್ಮ ನಡುವಿನ ಜನರನ್ನು ಸುಲಭದಲ್ಲಿ ಹೀಯಾಳಿಸುವ ನಾವು ಇದರಿಂದ ಕಲಿಯಬಹುದಾದ ಪಾಠ ದೊಡ್ಡದು. ಇನ್ನೂ ನಾವು ಯೇಸುವಿನ ಆಪ್ತರು ಎನಿಸಿಕೊಂಡರೂ ಅಂದು ಪೇತ್ರ ಮಾಡಿದಂತೆ ನಮ್ಮ ನಡೆ ನುಡಿಗಳಿಂದ ಅವರನ್ನು ನಿರಾಕರಿಸುತ್ತಲೇ ಬಂದೆದ್ದೇವೆ. ಇತ್ತ ಪೇತ್ರ ಮನ ಪಶ್ಚಾತ್ತಪ ಪಟ್ಟು ಪ್ರೇಷಿತನಾಗಿ ಅಮರನಾದರೇ, ಜೂದ ಪಶ್ಚಾತ್ತಾಪ ಪಟ್ಟುಕೊಂಡರೂ ಸಕ್ರೀಯನಾಗಲಿಲ್ಲ.
ಪ್ರಶ್ನೆ : ನಮ್ಮ ಪಶ್ಚಾತ್ತಾಪ ಪೇತ್ರನಂತದ್ದೋ? ಜೂದನಂತದ್ದೋ
ಮನಸಿಗೊಂದಿಷ್ಟು : ತಮ್ಮನ್ನು ಹಿಡಿದು ಕೊಡುವವನು ಯಾರು ಎಂದು ತಿಳಿದಿದ್ದರೂ ಯೇಸು ತೋರಿದ ಪ್ರೀತಿ, ಸಹನೆಯನ್ನು ವರ್ಣಿಸಲು ಸಾಧ್ಯವಿಲ್ಲ. ನಮ್ಮ ನಡುವಿನ ಜನರನ್ನು ಸುಲಭದಲ್ಲಿ ಹೀಯಾಳಿಸುವ ನಾವು ಇದರಿಂದ ಕಲಿಯಬಹುದಾದ ಪಾಠ ದೊಡ್ಡದು. ಇನ್ನೂ ನಾವು ಯೇಸುವಿನ ಆಪ್ತರು ಎನಿಸಿಕೊಂಡರೂ ಅಂದು ಪೇತ್ರ ಮಾಡಿದಂತೆ ನಮ್ಮ ನಡೆ ನುಡಿಗಳಿಂದ ಅವರನ್ನು ನಿರಾಕರಿಸುತ್ತಲೇ ಬಂದೆದ್ದೇವೆ. ಇತ್ತ ಪೇತ್ರ ಮನ ಪಶ್ಚಾತ್ತಪ ಪಟ್ಟು ಪ್ರೇಷಿತನಾಗಿ ಅಮರನಾದರೇ, ಜೂದ ಪಶ್ಚಾತ್ತಾಪ ಪಟ್ಟುಕೊಂಡರೂ ಸಕ್ರೀಯನಾಗಲಿಲ್ಲ.
ಪ್ರಶ್ನೆ : ನಮ್ಮ ಪಶ್ಚಾತ್ತಾಪ ಪೇತ್ರನಂತದ್ದೋ? ಜೂದನಂತದ್ದೋ
No comments:
Post a Comment