ಸಾಧಾರಣ ಕಾಲದ 26ನೇ ಬುಧವಾರ
ಮೊದಲನೇ ವಾಚನ: ಯೋಬ 9:1-12, 14-16

ಕೀರ್ತನೆ:88:10bc-11, 12-13,14-15
ಶ್ಲೋಕ: ಓ ಪ್ರಭೂ, ನನ್ನ ಕೂಗು ನಿನ್ನ ಕಿವಿಗೆ ಬೀಳಲಿ.
ಶುಭಸಂದೇಶ: ಲೂಕ 9:57-61
ಅವರೆಲ್ಲರೂ ದಾರಿಯಲ್ಲಿ ಹೋಗುತ್ತಿದ್ದಾಗ ಒಬ್ಬನು ಯೇಸುವಿಗೆ, "ನೀವು ಎಲ್ಲಿಗೆ ಹೋದರೂ ನಿಮ್ಮನ್ನು ಹಿಂಬಾಲಿಸುತ್ತೇನೆ," ಎಂದನು. ಯೇಸು ಅವನಿಗೆ, "ನರಿಗಳಿಗೆ ಗುಹೆಗಳುಂಟು; ಆಕಾಶದ ಪಕ್ಷಿಗಳಿಗೆ ಗೂಡುಗಳುಂಟು, ಆದರೆ ನರಪುತ್ರನಿಗೆ ತಲೆಯಿಡುವುದಕ್ಕೂ ಸ್ಥಳವಿಲ್ಲ," ಎಂದರು. ಇನ್ನೊಬ್ಬನಿಗೆ ಯೇಸು, "ನನ್ನನ್ನು ಹಿಂಬಾಲಿಸು," ಎಂದು ಹೇಳಿದಾಗ ಅವನು, "ಸ್ವಾಮೀ, ಮೊದಲು ನನ್ನ ತಂದೆಯ ಉತ್ತರಕ್ರಿಯೆಗಳನ್ನು ಮುಗಿಸುವ ತನಕ ಸಮಯಕೊಡಿ," ಎಂದನು. ಅವನಿಗೆ ಯೇಸು, "ಸತ್ತವರೇ ತಮ್ಮ ಸತ್ತವರನ್ನು ಸಮಾಧಿ ಮಾಡಿಕೊಳ್ಳಲಿ; ನೀನಾದರೋ, ಹೋಗು, ದೇವರ ಸಾಮ್ರಾಜ್ಯವನ್ನು ಪ್ರಚಾರಮಾಡು," ಎಂದು ಹೇಳಿದರು. ಮತ್ತೊಬ್ಬನು, "ನಿಮ್ಮನ್ನು ಹಿಂಬಾಲಿಸುತ್ತೇನೆ ಪ್ರಭೂ, ಆದರೆ ಮೊದಲು ಮನೆಯವರನ್ನು ಬೀಳ್ಕೊಟ್ಟು ಬರಲು ಅಪ್ಪಣೆ ಆಗಬೇಕು," ಎಂದನು. ಯೇಸು ಅವನನ್ನು ನೋಡಿ, "ನೇಗಿಲಿಗೆ ಕೈ ಹಾಕಿ ಹಿಂದಕ್ಕೆ ನೋಡುವವನು ದೇವರ ಸಾಮ್ರಾಜ್ಯಕ್ಕೆ ತಕ್ಕವನಲ್ಲ," ಎಂದರು.
ಚಿಂತನೆ: 'ದೇವರ ಮುಂದೆ ಸತ್ಯವಂತನಾಗಿರುವುದೆಂತು' ಎಂಬ ಮಹತ್ವದ ಮಾತಿ ಯೋಬನಿಂಬ ಇಂದಿನ ವಾಚನದಲ್ಲಿ ಬರುತ್ತದೆ. ’ಯಾವ ಜೀವಾತ್ಮನೂ ನಿರ್ದೋಷಿಯಲ್ಲ ನಿನ್ನ ಲೆಕ್ಕಕೆ’ ಎನ್ನುತದೆ ಕೀರ್ತನೆ 143:2. ದೇವರ ಮುಂದೆ ವಿನೀತರಾಗದೆ ವಿಧಿಯಿಲ್ಲ ಎಂಬ ಸಂದೇಶ ಇಲ್ಲಿದೆ. ಅಂತೆಯೇ ಶುಭಸಂದೇಶದಲ್ಲಿ ಶುಭಸಂದೇಶವನ್ನು ಸಾರುವ ಇಲ್ಲವೇ ದೇವರ ಚಿತ್ತಕ್ಕೆ ತಲೆ ಬಾಗುವಾಗ ಯಾವುದೂ ಅಡ್ಡ ಬರಬಾರದೆಂದು ಯೇಸು ಹೇಳುತ್ತಾರೆ. ಇಲ್ಲಿ ಯೇಸುವನ್ನು ಹಿಂಬಾಲಿಸ ಬಯಸಿದವರು ತಮ್ಮ ಸಾಮಜಿಕ ಬದ್ಧತೆಗಾಗಿ ಮಾತ್ರವೇ ಸಮಯ ಕೇಳಿದರು, ಅದು ಅವರ ಸೌಜನ್ಯದ ನಡೆಯೂ ಆಗಿತ್ತು. ಆದರೆ ದೇವರ ಚಿತ್ತಕ್ಕೆ ಅದೂ ಕೂಡ ಅಡ್ಡ ಬರಬಾರದೆಂಬ ಸಂದೇಶವನ್ನು ನಾವಿಲ್ಲಿ ಕಾಣಬಹುದು.
No comments:
Post a Comment