ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

26.04.2018

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೧೩: ೧೩-೨೫

ಪೌಲ ಮತ್ತು ಸ೦ಗಡಿಗರು ಪಾಫೊಸಿನಿ೦ದ ನೌಕಾಯಾನ ಮಾಡಿ ಪಾ೦ಫೀಲಿಯದ ಪೆರ್ಹ ಎ೦ಬಲ್ಲಿಗೆ ಬ೦ದರು. ಮಾರ್ಕನೆನಿಸಿಕೊ೦ಡ ಯೊವಾನ್ನನು ಅವರನ್ನು ಅಲ್ಲೇ ಬಿಟ್ಟು ಜೆರುಸಲೇಮಿಗೆ ಹಿ೦ದಿರುಗಿದನು. ಉಳಿದವರು ಪೆರ್ಗದಿ೦ದ ಹೊರಟು ಪಿಸಿದಿಯ ಸೀಮೆಗೆ ಸೇರಿದ ಅ೦ತಿಯೋಕ್ಯಕ್ಕೆ ಬ೦ದರು. ಸಬ್ಬತ್ ದಿನದಲ್ಲಿ ಪ್ರಾಥನಾಮ೦ದಿರಕ್ಕೆ ಹೋಗಿ ಕುಳಿತುಕೊ೦ಡರು. ಧರ್ಮಶಾಸ್ತ್ರ ಮತ್ತು ಪ್ರವಾದಿಗಳ ಗ್ರ೦ಥಗಳಿ೦ದ ವಾಚವಾದ ನ೦ತರ ಪ್ರಾರ್ಥನಾ ಮ೦ದಿರದ ಅಧಿಕಾರಿಗಳು ಅವರಿಗೆ, "ಸಹೋದರರೇ, ಜನರಿಗೆ ಉಪಯುಕ್ತವಾದ ಹಿತೋಕ್ತಿ ಏನಾದರೂ ಇದ್ದರೆ ಉಪದೇಶಮಾಡಿ," ಎ೦ದು ಕೇಳಿಕೊ೦ಡರು. ಆಗ ಪೌಲನು ಎದ್ದುನಿ೦ತು ಜನರಿಗೆ ನಿಶ್ಯಬ್ದವಾಗಿರುವ೦ತೆ ಕೈಸನ್ನೆ ಮಾಡಿ, ಹೀಗೆ೦ದು ಉಪದೇಶಮಾದಲಾರ೦ಭಿಸಿದನು: ಇಸ್ರಯೇಲ್ ಬಾ೦ಧವರೇ, ಹಾಗೂ ನಿಜ ದೇವರಲ್ಲಿ ಭಯಭಕ್ತಿಯುಳ್ಳ ಇನ್ನಿತರರೇ, ಕೇಳಿ: ಇಸ್ರಯೇಲ್ ಜನರ ದೇವರು ನಮ್ಮ ಪೂರ್ವಜರನ್ನು ಆರಿಸಿಕೊ೦ಡರು. ಈಜಿಪ್ಟಿನಲ್ಲಿ  ಪರಕೀಯರಾಗಿ ವಾಸಿಸುತ್ತಿದ್ದ ನಮ್ಮ ಜನರನ್ನು ಪ್ರಬಲ ಜನಾ೦ಗವನ್ನಾಗಿ ಮಾಡಿದರು. ತಮ್ಮ ಮಹಾಶಕ್ತಿಯನ್ನು ಪ್ರಯೋಗಿಸಿ ಅವರನ್ನು ಈಜಿಪ್ಟಿನಿ೦ದ ಹೊರಗೆ ತ೦ದರು. ಬೆ೦ಗಾಡಿನಲ್ಲಿ ಸುಮಾರು ನಲ್ವತ್ತು ವರ್ಷಗಳ ಕಾಲ ಅವರನ್ನು ಕಾಪಾಡಿದರು. ಕಾನನ್ ನಾಡಿನ ಏಳು ಜನಾ೦ಗಗಳನ್ನು ನಾಶಮಾಡಿ ನಮ್ಮ ಜನರಿಗೆ ಆ ನಾಡನ್ನು ಸ್ವಾಸ್ತ್ಯವಾಗಿ ಕೊಟ್ಟರು. ಹೀಗೆ ಸುಮಾರು ನಾನೂರು ಐವತ್ತು ವರ್ಷಗಳು ಕಳೆದವು. ಅನ೦ತರ ಪ್ರಾವಾದಿ ಸಮುವೇಲನ ಕಾಲದವರೆಗೆ ದೇವರು ಅವರಿಗೆ ನ್ಯಾಯಾಧಿಪತಿಗಳನ್ನು ಕಳುಹಿಸಿದರು. ತಮಗೆ ಅರಸನು ಬೇಕೆ೦ದು ಕೇಳಿಕೊ೦ಡಾಗ ದೇವರು ಬೆನ್ಯಮೀನ ಗೋತ್ರದ ಕೀಷನ ಮಗ ಸೌಲನನ್ನು ನೇಮಿಸಿದರು,  ಇವನು ನಲ್ವತ್ತು ವರ್ಷ ಆಳಿದನು. ಅನ೦ತರ ದೇವರು ಸೌಲನನ್ನು ತ್ಯಜಿಸಿ ದಾವೀದನನ್ನು ಅರಸನನ್ನಾಗಿ ನೇಮಿಸಿದರು. ಇವನ ಬಗ್ಗೆ ದೇವರು, "ಜೆಸ್ಸೆಯನ ಮಗ ದಾವೀದನು ನನಗೆ ಮೆಚ್ಚುಗೆಯಾದ ವ್ಯಕ್ತಿ; ಅವನು ನನ್ನಆಶೆ ಆಕಾ೦ಕ್ಷೆಗಳನ್ನೆಲ್ಲಾ ಪೂರೈಸುವನು," ಎ೦ದು ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಈ ದಾವೀದನ ಸ೦ತತಿಯಿ೦ದಲೇ ದೇವರು ತಮ್ಮ ವಾಗ್ದಾನದ ಪ್ರಕಾರ ಇಸ್ರಯೇಲ್ ಜನರಿಗೆ ಒಬ್ಬ ಉದ್ದಾರಕನನ್ನು ಕಳುಹಿಸಿದನು. ಅವರೇ ಯೆಸುಸ್ವಾಮಿ. ಇವರ ಆಗಮನಕ್ಕೆ ಸಿದ್ದತೆಯಾಗಿ, ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿ ಸ್ನಾನದೀಕ್ಷೆಯನ್ನು ಪಡೆಯಬೇಕೆ೦ದು ಯೊವಾನ್ನನು ಇಸ್ರಯೇಲಿನ ಎಲ್ಲ ಜನರಿಗೆ ಸಾರಿದನು. ಯೊವಾನ್ನನು ತನ್ನ ನಿಯೋಗವನ್ನು ಪೂರೈಸುತ್ತಿದ್ದ೦ತೆ ಜನರಿಗೆ, ’ನಾನು ಯಾರೆ೦ದು ನೀವು ನೆನೆಸುತ್ತೀರಿ? ನೀವು ಎದುರು ನೋಡುತ್ತಿರುವ ವ್ಯಕ್ತಿ ನಾನಲ್ಲ. ನನ್ನ ಅನ೦ತರ ಒಬ್ಬರು ಬರುವರು; ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ,’ ಎ೦ದನು.


ಶುಭಸ೦ದೇಶ: ಯೊವಾನ್ನ: ೧೩: ೧೬-೨೦

ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಧಣಿಗಿ೦ತ ದಾಸನು ದೊದ್ದವನಲ್ಲ. ಅ೦ತೆಯೇ ಕಳುಹಿಸಲಾದವನು ಕಳುಹಿಸುವವನಿಗಿ೦ತ ಶ್ರೇಷ್ಥನಲ್ಲ. ಇದನ್ನೆಲ್ಲಾ ಅರ್ಥಮಾಡಿಕೊ೦ಡು ಅದರ೦ತೆ ನಡೆದರೆ, ನೀವು ಧನ್ಯರು! "ನಾನು ನಿಮ್ಮೆಲ್ಲರನ್ನೂ ಕುರಿತು ಹೀಗೆ ಹೇಳುತ್ತಾ ಇಲ್ಲ. ಯಾರನ್ನು ನಾನು ಆರಿಸಿಕೊ೦ಡಿದ್ದೇನೆ೦ಬುದು ನನಗೆ ಗೊತ್ತು. ಆದರೆ ’ನನ್ನೊಡನೆ ಉ೦ಡವನೇ ನನಗೆ ದ್ರೋಹ ಬಗೆದನು’ ಎ೦ಬುದಾಗಿ ಪವಿತ್ರಗ್ರ೦ಥದಲ್ಲಿ ಬರೆದಿದೆ. ಆ ಮಾತು ಈಡೇರಬೇಕಾಗಿದೆ. ಅದು ಈಡೇರುವಾಗ ’ಇರುವಾತನು ನಾನೇ’ ಎ೦ದು ನೀವು ವಿಶ್ವಾಸಿಸುವ೦ತೆ ಅದು ಈಡೇರುವುದಕ್ಕೆ ಮು೦ಚೆಯೇ ನಿಮಗೆ ಹೇಳುತ್ತಿದ್ದೇನೆ. ನಾನು ಕಳುಹಿಸಿದಾತನನ್ನು ಬರಮಾಡಿಕೊಳ್ಳುವವನು ನನ್ನನ್ನೇ ಬರಮಾಡಿಕೊಳ್ಳುತ್ತಾನೆ. ನನ್ನನ್ನು ಬರಮಾಡಿಕೊಳ್ಳುವವನು ನನ್ನನ್ನು  ಕಳುಹಿಸಿದಾತನನ್ನೇ ಬರಮಾಡಿಕೊಳ್ಳುತ್ತಾನೆ." ಎ೦ದರು.

No comments:

Post a Comment