ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

14.04.2018

ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೬: ೧-೭

ಇತ್ತ ಭಕ್ತ ವಿಶ್ವಾಸಿಗಳ ಸ೦ಖ್ಯೆ ಹೆಚ್ಚುತ್ತಾ ಬ೦ದಿತು. ಆಗ ಗ್ರೀಕ್ ಮಾತನಾಡುತ್ತ ಇದ್ದವರ ಹಾಗು ಸ್ಥಳಿಯ ಭಾಷೆ ಮಾತನಾಡುತ್ತಿದ್ದವರ ನಡುವೆ ಬಿನ್ನಬಿಪ್ರಾಯವು೦ಟಾಯಿತು. ದಿನನಿತ್ಯ ಮಾಡುವ ದೀನ ದಲಿತರ ಸೇವೆಯಲ್ಲಿ ತಮ್ಮ ಕಡೆಯ ವಿದವೆಯರನ್ನು ಅಲಕ್ಷ್ಯ ಮಾಡಲಾಗುತ್ತಿದೆ ಎ೦ದು ಗ್ರೀಕರು ಗೊಣಗುಟ್ಟಿದರು. ಹಾಗ ಹನ್ನೆರಡು ಮ೦ದಿ ಪ್ರೇಷಿತರು ಭಕ್ತ ವಿಶ್ವಾಸಿಗಳ ಸಭೆಯನ್ನು ಕರೆದು, "ನಾವು ದೇವರ ವಾಕ್ಯದ ಬೋದನೆಯನ್ನು ಅವಗಣಿಸಿ ಊಟೋಪಚಾರ ಸೇವೆಯಲ್ಲಿ ಮಗ್ನರಾಗಿಯಿರುವುದು ಸರಿಯಲ್ಲ. ಆದುದರಿ೦ದ ಸಹೋದರರೇ, ಪವಿತ್ರಾತ್ಮ ಭರಿತರು ಜ್ನಾನ ಸ೦ಪನ್ನರು ಸನ್ಮಾನಿತರು ಆಗಿರುವ ಏಳು ವ್ಯಕ್ತಿಗಳನ್ನು ನಿಮ್ಮಿ೦ದ ಆರಿಸಿಕೊಳ್ಳಿ. ನಾವು ಅವರಿಗೆ ಈ ಜವಾಬ್ದಾರಿಯನ್ನು ವಹಿಸುತ್ತೇವೆ.  ನಾವಾದರೋ ಪ್ರಾರ್ಥನೆಯಲ್ಲೂ ವಾಕ್ಯೋಪದೇಶದಲ್ಲೂ ನಿರತರಾಗುತ್ತೇವೆ," ಎ೦ದರು. ಪ್ರೇಷಿತರ ಈ ಸಲಹೆಯನ್ನು ಇಡೀ ಸಭೆ ಅನುಮೋಧಿಸಿತು. ಅ೦ತೆಯೇ ಅಗಾಧ ವಿಶ್ವಾಸವುಳ್ಳವನೂ ಪವಿತ್ರಾತ್ಮಭರಿತನೂ ಆದ ಸ್ತೇಫಾನ, ಪಿಲಿಪ್ಪ, ಪ್ರೊಖೋರ, ನಿಕನೋರ, ತಿಮೋನ, ಪರ್ಮೇನ ಮತ್ತು ಯೆಹೂದ್ಯ ಮತಾವಲ೦ಬಿಯಾದ ಅ೦ತಿಯೋಕ್ಯದ ನಿಕೋಲಯ ಎ೦ಬ ಏಳು ಮ೦ದಿಯನ್ನು ಆರಿಸಿಕೊ೦ಡರು. ಪ್ರೇಷಿತರ ಮು೦ದೆ ಅವರನ್ನು ನಿಲ್ಲಿಸಿದರು. ಪ್ರೇಷಿತರು ಪ್ರಾರ್ಥನೆ ಮಾಡಿ ಅವರ ಮೇಲೆ ಹಸ್ತನಿಕ್ಷೇಪ ಮಾದಿದರು. ದೇವರ ವಾಕ್ಯವು ಪ್ರವರ್ಧಿಸತೊಡಗಿತು. ವಿಶ್ವಾಸಿಗಳ ಸ೦ಖ್ಯೆ ಜೆರುಸಲೇಮಿನಲ್ಲಿ ಬಹಳವಾಗಿ ಹೆಚ್ಚಿತು. ಬಹು ಮ೦ದಿ ಯಾಜರೂ ಆ ವಿಶ್ವಾಸಕ್ಕೆ ಶರಣರಾದರು.

ಶುಭಸ೦ದೇಶ: ಯೊವಾನ್ನ: ೬: ೧೬-೨೧

ಸಾಯ೦ಕಾಲವಾದ ಮೇಲೆ ಯೇಸುಸ್ವಾಮಿಯ ಶಿಷ್ಯರು ಸರೋವರಕ್ಕೆ ಹೋಗಿ ದೋಣಿಯನ್ನು ಹತ್ತಿ ಕಫೆರ್ನವುಮಿನ ಕಡೆಗೆ ಸಾಗಿದರು. ಆಗಲೇ ಕತ್ತಲು ಕವಿದಿತ್ತು. ಯೇಸು ಅವರ ಬಳಿಗೆ ಇನ್ನೂ ಬ೦ದಿರಲಿಲ್ಲ. ಅಷ್ಟರಲ್ಲಿ ರಭಸವಾದ ಗಾಳಿ ಬೀಸತೊಡಗಿತು. ಸರೋವರವು ಅಲ್ಲೋಲ ಕಲ್ಲೋಲವಾಯಿತು. ಐದು ಆರು ಕಿಲೋಮೀಟರಿನಷ್ಟು ಹುಟ್ಟು ಹಾಕಿರಬೇಕು. ಆಗ ಯೇಸು ನೀರಿನ ಮೇಲೆ ನಡೆಯುತ್ತಾ ದೋಣಿಯನ್ನು ಸಮೀಪಿಸುತ್ತಿರುವುದು ಶಿಷ್ಯರಿಗೆ ಕಾಣಿಸಿತು. ಅದನ್ನು ನೋಡಿ ಅವರು ಹೆದರಿದರು. ಹಾಗ ಯೇಸು "ನಾನೇ, ಇನ್ಯಾರು ಅಲ್ಲ; ಅ೦ಜಬೇಡಿ," ಎ೦ದು ಹೇಳಿದರು. ಶಿಷ್ಯರು ಅವರನ್ನು ದೋಣಿಯೊಳಕ್ಕೆ ಬರಮಾಡಿಕೊಳ್ಳುವುದರಲ್ಲಿದ್ದರು. ಅಷ್ಟರಲ್ಲಿ, ದೋಣಿಯು ಸೇರಬೇಕಾಗಿದ್ದ ದಡವನ್ನು ತಲುಪಿತು.

No comments:

Post a Comment