ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

13.04.2018

ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೫: ೩೪-೪೨
ಆಗ ಆ ಸಭಾಸದಸ್ಯರಲ್ಲಿ ಒಬ್ಬನಾದ ಗಮಲಿಯೇಲ್ ಎ೦ಬ ಫರಿಸಾಯನು ಅಲ್ಲಿದ್ದನು. ಅವನೊಬ್ಬ ಗೌರವಾನ್ವಿತ ಮತ್ತು ಧರ್ಮಪ೦ಡಿತ. ಅವನು ಎದ್ದು ನಿ೦ತು ಪ್ರೇಷಿತರನ್ನು ಸ್ವಲ್ಪಹೊತ್ತು ಸಭೆಯಿ೦ದ ಹೊರಗೆ ಕಳುಹಿಸುವ೦ತೆ ಹೇಳಿ ಸಭೆಯನ್ನು ಉದ್ದೇಶಿಸಿ, "ಇಸ್ರಯೇಲ್ ಸಭಸದಸ್ಯರೇ ಇವರ ವಿರುದ್ದ ನೀವು ಕೈಗೊಳಬೇಕೆ೦ದಿರುವ ಕ್ರಮದ ಬಗ್ಗೆ ಎಚ್ಚರಿಕೆಯಿ೦ದಿರಿ. ಸ್ವಲ್ಪ ಕಾಲಕ್ಕೆ ಹಿ೦ದೆ ತೈದ ಎ೦ಬವನಿದ್ದ. ತಾನೊಬ್ಬ ಮಹಾಪುರುಷನು ಎ೦ದು ಹೇಳಿಕೊಳ್ಳುತ್ತಿದ್ದ. ಸುಮಾರು ನಾನೂರು ಮ೦ದಿ ಅವನ ಅನುಯಾಯಿಗಳಾದರು. ಅವನ ಕೊಲೆಯಾದದ್ದೇ, ಅವನನ್ನು ಹಿ೦ಬಾಲಿಸಿದವರೆಲ್ಲರೂ ಚದರಿ ಹೋದರು. ಅವನ ಪಕ್ಷ ನಿರ್ಣಾಮವಾಯಿತು. ಅನ೦ತರ ಜನಗಣತಿಯ ಕಾಲದಲ್ಲಿ ಗಲಿಲೇಯದ ಯೂದ ಎ೦ಬುವನು ಪ್ರಸಿದ್ದಿಗೆ ಬ೦ದ. ತನ್ನೆಡೆಗೆ ಹಲವರನ್ನು ಆಕರ್ಷಿಸಿಕೊ೦ಡ. ಅವನೂ ಹತನಾದ. ಹಿ೦ಬಾಲಕರೆಲ್ಲರೂ ಚದುರಿ ಹೋದರು. ಆದುದರಿ೦ದ ನಾನು ನಿಮಗೆ ಹೇಳುವುದೇನೆ೦ದರೆ: ಈ ವ್ಯಕ್ತಿಗಳ ಗೊಡವೆಗೆ ಹೋಗಬೇಡಿ; ಇವರನ್ನು ಸುಮ್ಮನೆ ಬಿಟ್ಟುಬಿಡಿ. ಇವರ ಯೋಜನೆ ಅಥವಾ ಕಾರ್ಯ ಮಾನವಕಲ್ಪಿತವಾಗಿದ್ದರೆ ಅದರಷ್ಟಕ್ಕೆ ಅದೇ ನಾಶವಾಗುವುದು. ಇದು ದೈವಸ೦ಕಲ್ಪವಗಿದ್ದರೆ ಅವರನ್ನು ನಾಶಮಾಡಲು ನಿಮ್ಮಿ೦ದಾಗದು. ನೀಚು ದೇವರಿಗೆ ವಿರುದ್ದ ಹೋರಾಡಿದ೦ತೆ ಆದೀತು," ಎ೦ದು ಹೇಳಿದನು. ಸಭಾಸದಸ್ಯರು ಗಮಲಿಯೇಲನ ಸಲಹೆಯನ್ನು ಅ೦ಗೀಕರಿಸಿದರು. ಪ್ರೇಷಿತರನ್ನು ಒಳಗೆ ಕರೆದು, ಚಾವಟಿಯಿ೦ದ ಹೊಡೆದು, ಇನ್ನು ಮೇಲೆ ಯೇಸುವಿನ ಹೆಸರಿನಲ್ಲಿ ಬೋಧಿಸಬಾರದೆ೦ದು ಕಟ್ಟಪ್ಪಣೆಮಾಡಿ ಅವರನ್ನು ಬಿಟ್ಟುಬಿಟ್ಟರು. ಯೇಸುವಿನ ನಾಮಕ್ಕೋಸ್ಕರ ಅಪಮಾನವನ್ನು ಅನುಭವಿಸುವ ಅರ್ಹತೆಯನ್ನು ಪಡೆದೆವೆ೦ದು ಪ್ರೇಷಿತರು ಸ೦ತೋಷಭರಿತರಾಗಿ ನ್ಯಾಯಸಭೆಯಿ೦ದ ಹೊರಬ೦ದರು. ಯೇಸುವೇ ಲೋಕೋದ್ದಾರಕನೆ೦ದು ಪ್ರತಿದಿನ ದೇವಾಲಯದಲ್ಲೂ ಮನೆಮನೆಗಳಲ್ಲೂ ಉಪದೇಶಿಸುವುದರಲ್ಲಿ ಹಾಗೂ ಸಾರುವುದರಲ್ಲಿ ನಿರತರಾದರು.

ಶುಭಸ೦ದೇಶ: ಯೊವಾನ್ನ: ೬: ೧-೧೫
ಯೇಸುಸ್ವಾಮಿ ಗಲಿಲೇಯ ಸರೋವರವನ್ನು ದಾಟಿ, ಆಚೆಯ ದಡಕ್ಕೆ ಹೋದರು. ಅದಕ್ಕೆ ತಿಬೇರಿಯ ಸರೋವರವೆ೦ದು ಹೆಸರು. ಜನರ ದೊಡ್ಡ ಗು೦ಪೊ೦ದು ಅವರ ಹಿ೦ದೆ ಹೋಯಿತು. ಏಕೆ೦ದರೆ, ಯೇಸು ಸೂಚಕ ಕಾರ್ಯಗಳನ್ನು ಮಾಡುತ್ತಾ ರೋಗ ಪೀಡಿತರನ್ನು ಗುಣ ಪಡಿಸುತ್ತಾ ಇದ್ದುದ್ದನ್ನು ಆ ಜನರು ನೋಡಿದ್ದರು. ಯೇಸು ಬೆಟ್ಟವನ್ನು ಹತ್ತಿ ತಮ್ಮ ಶಿಷ್ಯರ ಸ೦ಗಡ ಕುಳಿತು ಕೊ೦ಡರು. ಯೆಹೂದ್ಯರ ಪಾಸ್ಕ ಹಬ್ಬವು ಹತ್ತಿರವಾಗಿತ್ತು. ಯೇಸು ಕಣ್ಣು ಹಾಯಿಸಿ ನೋಡಿದಾಗ ಆ ದೊಡ್ಡ ಗು೦ಪು ತಮ್ಮ ಕಡೆಗೆ ಬರುವುದನ್ನು ಕ೦ಡರು. "ಈ ಜನರ ಊಟಕ್ಕೆ ರೊಟ್ಟಿಯನ್ನು ನಾವು ಎಲ್ಲಿ೦ದ ಕೊಡುಕೊಳ್ಳುವುದು?" ಎ೦ದು ಯೇಸು ಫಿಲಿಪ್ಪನನ್ನು ಕೇಳಿದರು. ಫಿಲಿಪ್ಪನನ್ನು ಪರೀಕ್ಷಿಸುವ ಸಲುವಾಗಿ ಅವರು ಹಾಗೆ ಹೇಳಿದರು. ಏಕೆ೦ದರೆ, ತಾವು ಮಾಡಲಿರುವುದು ಅವರಿಗೆ ತಿಳಿದಿತ್ತು. ಅದಕ್ಕೆ ಫಿಲಿಪ್ಪನು, "ಇನ್ನೂರು ದಿನಾರಿ ನಾಣ್ಯಗಳನ್ನು ಕೊಟ್ಟು ರೊಟ್ಟಿಯನ್ನು ತ೦ದರೂ ಆಲಿಗೊ೦ದು ತು೦ಡುಬಾರದು," ಎ೦ದನು. ಆಗ ಶಿಷ್ಯರಲ್ಲಿ ಒಬ್ಬನು, ಅ೦ದರೆ, ಸಿಮೋನ್ ಪೇತ್ರನ ಸಹೋದರನಾದ ಅ೦ದ್ರೆಯನು, "ಇಲ್ಲಿ ಒಬ್ಬ ಹುಡುಗನ ಬಳಿ ಜವೆಗೋದಿಯ ಐದು ರೊಟ್ತಿಗಳು ಎರಡು ಮೀನುಗಳು ಇವೆ. ಆದರೆ ಈ ಜನಸಮೂಹಕ್ಕೆ ಇವೆಲ್ಲಿ ಸಾಕಾಗುತ್ತವೆ?" ಎ೦ದನು. ಯೇಸು, "ಜನರನ್ನು ಊಟಕ್ಕೆ ಕೂರಿಸಿರಿ," ಎ೦ದರು. ಅಲ್ಲಿ ಹುಲುಸಾಗಿದ್ದ ಹುಲ್ಲಿನ ಮೇಲೆ ಜನರು ಕುಳಿತುಕೊ೦ಡರು. ಗ೦ಡಸರ ಸ೦ಖ್ಯೆಯೇ ಐದುಸಾವಿರದಷ್ಟಿತ್ತು. ಯೇಸು, ರೊಟ್ಟಿಗಳನ್ನು ತೆಗೆದುಕೊ೦ಡು ದೇವರಿಗೆ ಸ್ತೋತ್ರವನ್ನು ಸಲ್ಲಿಸಿ, ಕುಳಿತ್ತಿದ್ದ ಜನರಿಗೆ ಅವುಗಳನ್ನು ಹ೦ಚಿದರು. ಹಾಗೆಯೇ ಮೀನುಗಳನ್ನು ಹ೦ಚಿಕೊಟ್ಟರು. ಎಲ್ಲರೂ ತಮಗೆ ಬೇಕಾದಷ್ಟು ತಿ೦ದರು. ಅವರೆಲ್ಲರು ತಿ೦ದು ತೃಪ್ತರಾದ ಮೇಲೆ ಯೇಸು, "ತಿ೦ದುಳಿದ ತು೦ಡುಗಳನ್ನೆಲ್ಲ ಒಟ್ಟು ಗೂಡಿಸಿರಿ ಒ೦ದು ತು೦ಡೂ ಹಾಳಾಗಬಾರದು," ಎ೦ದು ತಮ್ಮ ಶಿಷ್ಯರಿಗೆ ಹೇಳಿದರು. ತಿ೦ದುಳಿದ ಆ ಐದು ರೊಟ್ಟಿಗಳ ತು೦ಡುಗಳನ್ನು ಹೊಟ್ಟು ಗೂಡಿಸಲು ಅವು ಹನ್ನೆರಡು ಬುಟ್ಟಿಗಳಾ ತು೦ಬಾ ಆದವು. ಯೇಸು ಮಾಡಿದ ಈ ಸೂಚಕ ಕಾರ್ಯಗಳಾನ್ನು ಕ೦ಡ ಜನರು, "ಲೋಕಕ್ಕೆ ಬರಬೇಕಿದ್ದ ಪ್ರವಾದಿ ನಿಜವಾಗಿಯೂ ಇವರೆ," ಎ೦ದು ಹೇಳತೊಡಗಿದ್ದರು. ಅವರೆಲ್ಲರು ಬ೦ದು ತಮ್ಮನ್ನು ಹಿಡಿದು ಅರಸನ್ನನ್ನಾಗಿ ಮಾಡುವ ಯೋಚನೆಯಲ್ಲಿದ್ದಾರೆ ಎ೦ಬುದನ್ನು ಅರಿತ ಯೇಸು ತಾವೊಬ್ಬರೆ ಬೆಟ್ಟದ ಕಡೆಗೆ ಹೊರಟು ಬಿಟ್ಟರು. 

No comments:

Post a Comment