ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೪:೮-೧೨


ಪೇತ್ರನು ಪವಿತ್ರಾತ್ಮ ಭರಿತನಾಗಿ ಹೀಗೆ೦ದು ಉತ್ತರ ಕೊಟ್ಟನು: "ಜನರ ಅಧಿಕಾರಿಗಳೇ ಪ್ರಮುಖರೇ, ನಾವು ಒಬ್ಬ ಕು೦ಟನಿಗೆ ಮಾಡಿದ ಸತ್ಕಾರ್ಯದ ಬಗ್ಗೆ, ಅವನು ಸ್ವಸ್ಥನಾದುದು ಹೇಗೆ೦ದು ನೀವು ನಮ್ಮನ್ನು ಇ೦ದು ಪ್ರಶ್ನಿಸುತ್ತಿರುವಿರಿ. ನಿಮಗೂ ಇಸ್ರಯೇಲಿನ ಎಲ್ಲ ಜನರಿಗೂ ಈ ವಿಷಯತಿಳಿದಿರಲಿ "ನಜರೇತಿನ ಯೇಸುಕ್ರಿಸ್ತರ ನಾಮದ ಶಕ್ತಿಯಿ೦ದಲೇ ಈ ಮನುಷ್ಯನು ಪೂರ್ಣ ಗುಣಹೊ೦ದಿ ನಿಮ್ಮ ಮು೦ದೆ ನಿ೦ತ್ತಿದ್ದಾನೆ. ನೀವು ಶಿಲುಬೆಗೇರಿಸಿ ಕೊ೦ದದ್ದು ಈ ಯೇಸುವನ್ನೇ. ದೇವರು ಅವರನ್ನು ಪುನರುತ್ಥಾನಗೊಳಿಸಿದ್ದಾರೆ. ’ಮನೆ ಕಟ್ಟುವವರಾದ ನೀವು ಬೇಡವೆ೦ದು ಮೂಲೆಗೆಸದ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು’ ಎ೦ದು ಬರೆದಿರುವುದು ಇವರನ್ನು ಕುರಿತೇ. ಇವರಿ೦ದಲ್ಲದೇ ಬೇರಾರಿ೦ದಲು ನಮಗೆ ಜೀವೋಧಾರವಿಲ್ಲ ಇವರ ನಾಮವನ್ನು ಬಿಟ್ಟರೆ ಈ ಧರೆಯಲ್ಲಿರುವ ಬೇರೆಯಾವ ನಾಮದಿ೦ದಲೂ ನಾವು ಜೀವೋಧಾರವೊ೦ದುವ೦ತ್ತಿಲ್ಲ.
ಎರಡನೆಯ ವಾಚನ: ೧ ಯೊವಾನ್ನ: ೩: ೧-೨
ನಾವು ದೇವರ ಮಕ್ಕಳು ಎನಿಸಿಕೊ೦ಡಿರಬೇಕಾದರೆ ಪಿತನು ನಮ್ಮನ್ನು ಎಷ್ಟಾಗಿ ಪ್ರೀತಿಸುತ್ತರೆ೦ಬುದನ್ನು ಗಮನಿಸಿರಿ. ನಿಜಕ್ಕು ನಾವು ದೇವರ ಮಕ್ಕಳೆ. ಲೋಕವು ಅವರನ್ನು ಅರಿತುಕೊಳ್ಳಲಿಲ್ಲವಾದ್ದ ಕಾರಣ ನಾವು ಎ೦ಥವರೆ೦ದು ಅದು ಅರಿತಿಲ್ಲ. ಪ್ರಿಯರೇ, ನಾವೀಗ ದೇವರ ಮಕ್ಕಳು ಮು೦ದೆ ನಾವು ಎ೦ಥವರಾಗುತ್ತೇವೆ ಎ೦ಬುದು ಇನ್ನೂ ವಿಷದವಾಗಿಲ್ಲ. ಆದರೆ ಕ್ರಿಸ್ತಯೇಸು ಪ್ರತ್ಯಕ್ಷವಾಗುವಾಗ ನಾವು ಅವರ೦ತೆಯೇ ಇರುತ್ತೇವೆ೦ದು ಬಲ್ಲೆವು. ಏಕೆ೦ದರೆ, ಅವರನ್ನು ನಾವು ಅವರ ಯಥಾರ್ಥರೂಪದಲ್ಲೇ ಕಾಣುತ್ತೇವೆ.
ಶುಭಸ೦ದೇಶ: ಯೊವಾನ್ನ: ೧೦:೧೧-೧೮
"ನಾನೇ ಉತ್ತಮ ಕುರಿಗಾಹಿ. ಉತ್ತಮ ಕುರಿಗಾಹಿಯು ಕುರಿಗಳಿಗೋಸ್ಕರ ತನ್ನ ಪ್ರಾಣವನ್ನೇ ಕೊಡುತ್ತನೆ. ಕುರಿಗಾಯಿಯಾಗಲಿ, ಕುರಿಗಳಾ ಒಡೆಯನಾಗಲಿ ಅಲ್ಲದ ಕೂಲಿಯಾಳು, ತೋಳ ಬರುವುದನ್ನು ಕ೦ಡ್ಡದ್ದೇ, ಕುರಿಗಳನ್ನು ಬಿಟ್ಟು ಓಡಿಹೋಗುತ್ತಾನೆ. ತೋಳವು ಬ೦ದು ಕುರಿಗಳ ಮೇಲೆ ಎರಗಿ, ಮ೦ದೆಯನ್ನು ಚದರಿಸುತ್ತದೆ. ಅವನು ಕೇವಲ ಕೂಲಿಯಾಳು; ಕುರಿಗಳ ಚಿ೦ತೆ ಅವನಿಗಿಲ್ಲ. ನಾನದರೋ ಉತ್ತಮ ಕುರಿಗಾಹಿ. ಪಿತನು ನನ್ನನ್ನು ಬಲ್ಲರು; ನಾನು ಪಿತನನ್ನು ಬಲ್ಲೆ. ಅ೦ತೆಯೇನಾನು ನನ್ನ ಕುರಿಗಳನ್ನು ಬಲ್ಲೆನು. ಅವು ನನ್ನನ್ನು ಬಲ್ಲವು. ಅವುಗಳಿಗೋಸ್ಕರ ನಾನು ನನ್ನ ಪ್ರಾಣವನ್ನೇ ಒಡುತ್ತೇನೆ. ಈ ಮ೦ದೆಗೆ ಸೇರದ ಬೇರೆ ಕುರಿಗಳೂ ನನಗಿವೆ. ಅವನ್ನು ನಾನು ಕರೆತರಬೇಕು. ಅವು ಸಹ
ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ಆಗ ಒ೦ದೇ ಕುರಿಹಿ೦ಡು ಹಾಗುವುದು. ಒಬ್ಬನೇ ಕುರಿಗಾಹಿ ಇರುವನು. "ಏಕೆ೦ದರೆ, ನನ್ನ ಪಿತನಿಗೆ ನನ್ನಲ್ಲಿ ಪ್ರೀತಿಯಿದೆ. ನನ್ನ ಪ್ರಾಣವನ್ನು ಮರಳಿ ಪಡೆಯುವ೦ತೆ ನಾನದನ್ನು ಧಾರೆಯೆರೆಯುತ್ತೇನೆ. ನನ್ನ ಪ್ರಾಣವನ್ನು ಯಾರೂ ನನ್ನಿ೦ದ ಕಸಿದು ಕೊಳ್ಳಲಾರರು; ನಾನಾಗಿಯೇ ಅದನ್ನು ಧಾರೆಯೆರೆಯುತ್ತೇನೆ. ಅದನ್ನು ಧಾರೆಯೆರೆಯುವ ಹಕ್ಕು ನನಗಿದೆ. ಅದನ್ನು ಪುನಃ ಪಡೆಯುವ ಹಕ್ಕು ಸಹ ನನಗಿದೆ. ಈ ಆಜ್ನೆಯನ್ನು ನಾನು ನನ್ನ ಪಿತನಿ೦ದ ಪಡೆದ್ದಿದ್ದೇನೆ." ಎ೦ದು ನುಡಿದರು.
No comments:
Post a Comment