ಮೊದಲನೇ ವಾಚನ: ಮೊದಲನೆಯ ವಾಚನ : ಹೊಶೇಯ 14:1-9
ಇಸ್ರಯೇಲ್,
ನಿನ್ನ ಸರ್ವೇಶ್ವರನಾದ ದೇವರ ಬಳಿಗೆ ಹಿಂದಿರುಗು. ನಿನ್ನ ಪಾಪದ್ರೋಹಗಳೇ ನಿನ್ನ ಪತನಕ್ಕೆ ಕಾರಣ. ಆದುದರಿಂದ
ಪಶ್ಚಾತ್ತಾಪದ ಮಾತುಗಳೊಂದಿಗೆ ದೇವರಿಗೆ ಅಭಿಮುಖವಾಗಿ, “ಪ್ರಭುವೇ, ನಮ್ಮ ಅಪರಾಧವನ್ನು ತೊಡೆದುಹಾಕು.
ನಮ್ಮಲ್ಲಿ ಒಳಿತಾದುದನ್ನೇ ಅಂಗೀಕರಿಸು. ನಿನಗೆ ಸ್ತುತಿಬಲಿಯನ್ನು ಸಮರ್ಪಿಸುವೆವು. ಅಸ್ಸೀರಿಯದಿಂದ
ನಮಗೆ ರಕ್ಷಣೆ ದೊರಕದು. ನಾವು ಕಾಳಗದ ಕುದುರೆಗಳ ಮೇಲೆ ಇನ್ನೆಂದೂ ಸವಾರಿಮಾಡೆವು. ನಮ್ಮ ಕೈಗಳು ನಿರ್ಮಿಸಿರುವ
ವಿಗ್ರಹಗಳನ್ನು ವೀಕ್ಷಿಸಿ, ‘ನೀವೇ ನಮ್ಮ ದೇವರು’ ಎಂದು ಜಪಿಸೆವು. ಓ ದೇವಾ, ದಿಕ್ಕಿಲ್ಲದವರಿಗೆ ಕರುಣೆ
ತೋರಿಸುವವನು ನೀನೇ,” ಎಂದು ಹೇಳು. ಸರ್ವೇಶ್ವರ ಇಂತೆನ್ನುತ್ತಾರೆ: ಪರಿಹರಿಸುವೆನು ಜನರ ಭ್ರಷ್ಟತನವನು
ಪ್ರೀತಿಸುವೆನು ಮನಃಪೂರ್ವಕವಾಗಿ ಅವರನು ತ್ಯಜಿಸಿಬಿಡುವೆನು ಅವರ ಮೇಲಿದ್ದ ಕೋಪವನು. ಇರುವೆನು ಇಸ್ರಯೇಲಿಗೆ
ಇಬ್ಬನಿಯಂತೆ ಅರಳುವುದು ಆ ನಾಡು ತಾವರೆಯಂತೆ ಬೇರೂರುವುದು ಲೆಬನೋನಿನ ದೇವದಾರು ವೃಕ್ಷದಂತೆ. ಹರಡಿಕೊಳ್ಳುವುದದು
ಮರದ ರೆಂಬೆಗಳಂತೆ ಕಂಗೊಳಿಸುವುದು ಚೆಲುವಾದ ಓಲಿವ ಮರದಂತೆ ಅದರ ಪರಿಮಳ ಮನೋಹರ ಲೆಬನೋನಿನ ಲತೆಗಳಂತೆ.
ಮರಳಿ ಆಶ್ರಯಿಸುವರು ನನ್ನ ನೆರಳನ್ನು ಆ ಜನತೆ ಅಭಿವೃದ್ಧಿಯಾಗುವರು ಉದ್ಯಾನವನದಂತೆ ಫಲಪ್ರದವಾಗುವರು
ಆ ಜನರು ದ್ರಾಕ್ಷಾಲತೆಯಂತೆ ಸುಪ್ರಸಿದ್ಧ ಅವರ ಕೀರ್ತಿ ಲೆಬನೋನಿನ ದ್ರಾಕ್ಷಾರಸದಂತೆ. ನುಡಿವುದು ಎಫ್ರಯಿಮ್,
“ನನಗಿನ್ನು ಬೇಡ ವಿಗ್ರಹಗಳ ಗೊಡವೆ". ಅದಕ್ಕೆ ಒಲಿದು ಕಟಾಕ್ಷಿಸುವವನು ನಾನೇ ಅದಕ್ಕೆ ಹಚ್ಚಹಸಿರಾದ
ತುರಾಯಿ ಮರದಂತಿರುವೆ ಅದಕ್ಕೆ ಫಲವನ್ನು ನೀಡುವವನು ನಾನೇ.” ಬುದ್ಧಿವಂತನು ಈ ಮಾತುಗಳನ್ನು ಗ್ರಹಿಸಿಕೊಳ್ಳಲಿ.
ವಿವೇಕಿಯು ಈ ನುಡಿಗಳನ್ನು ಅರ್ಥಮಾಡಿಕೊಳ್ಳಲಿ. ಸರ್ವೇಶ್ವರಸ್ವಾಮಿಯ ಮಾರ್ಗಗಳು ನೇರವಾದವುಗಳು. ಸನ್ಮಾರ್ಗಿಗಳು
ಅವುಗಳನ್ನು ಕೈಗೊಂಡು ನಡೆಯುವರು. ದುರ್ಮಾರ್ಗಿಗಳು ಅವುಗಳನ್ನು ಕೈಬಿಟ್ಟು ಮುಗ್ಗರಿಸಿ ಬೀಳುವರು.
ಕೀರ್ತನೆ: 81:6-8,8-9,10-11,14,17
ಶ್ಲೋಕ: ಈಜಿಪ್ಟಿನಿಂದ ಕರೆ ತಂದ ಸ್ವಾಮಿ ದೇವನು ನಾನು
ಶುಭಸಂದೇಶ: ಮಾರ್ಕ 12:28-34
ಈ ತರ್ಕವನ್ನು ಕೇಳುತ್ತಿದ್ದ
ಧರ್ಮಶಾಸ್ತ್ರಿ ಒಬ್ಬನು, ಯೇಸುಸ್ವಾಮಿ ಸದ್ದುಕಾಯರಿಗೆ ಸಮರ್ಪಕವಾದ ಉತ್ತರವನ್ನು ಕೊಟ್ಟಿದ್ದನ್ನು
ಮೆಚ್ಚಿ, ಅವರ ಬಳಿಗೆ ಬಂದು, “ಆಜ್ಞೆಗಳಲ್ಲೆಲ್ಲಾ ಪ್ರಪ್ರಥಮ ಆಜ್ಞೆ ಯಾವುದು?” ಎಂದು ಕೇಳಿದನು. ಯೇಸು ಅವನಿಗೆ,
“ಇಸ್ರಯೇಲ್ ಸಮಾಜವೇ ಕೇಳು: ನಮ್ಮ ದೇವರಾದ ಸರ್ವೇಶ್ವರ ಏಕೈಕ ಸರ್ವೇಶ್ವರ; ನಿನ್ನ
ದೇವರಾದ ಸರ್ವೇಶ್ವರನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ
ಮನಸ್ಸಿನಿಂದಲೂ ನಿನ್ನ ಪೂರ್ಣ ಶಕ್ತಿಯಿಂದಲೂ ಪ್ರೀತಿಸು. ಇದೇ ಪ್ರಪ್ರಥಮ ಆಜ್ಞೆ. “ನಿನ್ನನ್ನು
ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು. ಇದೇ ಎರಡನೆಯ ಆಜ್ಞೆ. ಇವೆರಡು ಆಜ್ಞೆಗಳಿಗಿಂತ ಶ್ರೇಷ್ಠವಾದ ಆಜ್ಞೆ ಬೇರೊಂದೂ ಇಲ್ಲ,” ಎಂದರು. ಇದನ್ನು ಕೇಳಿದ ಆ ಧರ್ಮಶಾಸ್ತ್ರಿ, “ಬೋಧಕರೇ, ಚೆನ್ನಾಗಿ ಹೇಳಿದಿರಿ. ದೇವರು ಒಬ್ಬರೇ, ಅವರ ಹೊರತು ಬೇರೆ ದೇವರಿಲ್ಲ, ಎಂದು ನೀವು ಹೇಳಿದ್ದು ಸತ್ಯ; ಅವರನ್ನು ನಾವು ಪೂರ್ಣ ಹೃದಯದಿಂದಲೂ ಪೂರ್ಣ ಜ್ಞಾನದಿಂದಲೂ ಪೂರ್ಣ ಶಕ್ತಿಯಿಂದಲೂ ಪ್ರೀತಿಸತಕ್ಕದ್ದು. ಇದಲ್ಲದೆ ನಮ್ಮನ್ನು ನಾವು ಪ್ರೀತಿಸಿಕೊಳ್ಳುವಂತೆಯೇ ನಮ್ಮ ನೆರೆಯವರನ್ನೂ ಪ್ರೀತಿಸತಕ್ಕದ್ದು. ಇವು ಎಲ್ಲಾ ದಹನ ಬಲಿಗಳಿಗಿಂತಲೂ ಯಜ್ಞಯಾಗಾದಿಗಳಿಗಿಂತಲೂ ಎಷ್ಟೋ ಮೇಲಾದುವು,” ಎಂದನು. ಅವನ ವಿವೇಕಪೂರ್ಣವಾದ ಉತ್ತರವನ್ನು ಮೆಚ್ಚಿ ಯೇಸು, “ನೀನು ದೇವರ ಸಾಮ್ರಾಜ್ಯದಿಂದ ದೂರವಿಲ್ಲ,” ಎಂದರು. ಇದಾದ ಬಳಿಕ ಯೇಸುವನ್ನು ಪ್ರಶ್ನಿಸುವುದಕ್ಕೆ ಯಾರೊಬ್ಬರೂ ಧೈರ್ಯಗೊಳ್ಳಲಿಲ್ಲ.
ಮನಸ್ಸಿಗೊಂದಿಷ್ಟು : ಇದ್ದ ನೂರಾರು ದೈವ ಆಜ್ಞೆಗಳನ್ನು ಹೇಗೆ ಪಾಲಿಸಿಬೇಕೆನ್ನುವ ಗೊಂದಲವನ್ನು ಯೇಸು ನಿವಾರಿಸುತ್ತಾರೆ. ದೈವ ಚಿತ್ತಕ್ಕೆ ತಲೆಬಾಗಿ,
ಪರರಿಗಾಗಿ ಮರುಗಿದ, ಕ್ಷಮಿಸಿದ, ಕೊನೆಗೆ ಪ್ರಾಣ ಕೊಟ್ಟ ಯೇಸು ಈ ಎರಡೂ ಆಜ್ಞೆಗಳ ಪೂರ್ಣ ಪರಿಪಾಲಕ. ಇದನ್ನು ಪಾಲಿಸುವವನು ಸ್ವರ್ಗ ಸಾಮ್ರಾಜ್ಯದಿಂದ ದೂರವಿಲ್ಲ ಎಂಬ ಮಾತು ನಮ್ಮನ್ನು ಸದಾ ಪ್ರೇರೇಪಿಸುತ್ತಿರಲಿ
ಪ್ರಶ್ನೆ : ಈ ಆಜ್ಞೆಗಳ ಪರಿಪಾಲಕರು ನಾವಾಗಿದ್ದೇವೆಯೇ?
ಪ್ರಭುವೇ,
ನಿಮ್ಮಂತೆ ಪರಿಪೂರ್ಣರಾಗುವ
ಭಾಗ್ಯ ನಮ್ಮದಾಗಲಿ
ಪರ ಪ್ರೀತಿಯ ಮೂಲಕವೇ
ನಮ್ಮ ದೈವ ಪ್ರೀತಿ
ಪರಿಪೂರ್ಣತೆ ಪಡೆಯಲಿ

ಕೀರ್ತನೆ: 81:6-8,8-9,10-11,14,17
ಶ್ಲೋಕ: ಈಜಿಪ್ಟಿನಿಂದ ಕರೆ ತಂದ ಸ್ವಾಮಿ ದೇವನು ನಾನು
ನನ್ನ ಜನರೇ, ಕಿವಿಗೊಡಿ
ನನ್ನ ಬುದ್ಧಿ ಮಾತಿಗೆ
ಶುಭಸಂದೇಶ: ಮಾರ್ಕ 12:28-34

ಪರರಿಗಾಗಿ ಮರುಗಿದ, ಕ್ಷಮಿಸಿದ, ಕೊನೆಗೆ ಪ್ರಾಣ ಕೊಟ್ಟ ಯೇಸು ಈ ಎರಡೂ ಆಜ್ಞೆಗಳ ಪೂರ್ಣ ಪರಿಪಾಲಕ. ಇದನ್ನು ಪಾಲಿಸುವವನು ಸ್ವರ್ಗ ಸಾಮ್ರಾಜ್ಯದಿಂದ ದೂರವಿಲ್ಲ ಎಂಬ ಮಾತು ನಮ್ಮನ್ನು ಸದಾ ಪ್ರೇರೇಪಿಸುತ್ತಿರಲಿ
ಪ್ರಶ್ನೆ : ಈ ಆಜ್ಞೆಗಳ ಪರಿಪಾಲಕರು ನಾವಾಗಿದ್ದೇವೆಯೇ?
ಪ್ರಭುವೇ,
ನಿಮ್ಮಂತೆ ಪರಿಪೂರ್ಣರಾಗುವ
ಭಾಗ್ಯ ನಮ್ಮದಾಗಲಿ
ಪರ ಪ್ರೀತಿಯ ಮೂಲಕವೇ
ನಮ್ಮ ದೈವ ಪ್ರೀತಿ
ಪರಿಪೂರ್ಣತೆ ಪಡೆಯಲಿ
No comments:
Post a Comment