ಮೊದಲನೇ ವಾಚನ: ಆದಿಕಾಂಡ 6:5-8; 7:1-5, 10
ಜಗತ್ತಿನಲ್ಲಿ ಮನುಜರ ಕೆಟ್ಟತನವು ಹೆಚ್ಚುತ್ತಲೇ ಇತ್ತು. ಅವರ ಮನದಾಲೋಚನೆಗಳು ಸದಾ ಕೆಟ್ಟದಾಗಿದ್ದವು. ಇದನ್ನು ಕಂಡ ಸರ್ವೇಶ್ವರ ಮನುಜನನ್ನು ಇಲ್ಲಿ ಸೃಷ್ಟಿಮಾಡಿದ್ದಕ್ಕಾಗಿ ವ್ಯಥೆಪಟ್ಟು, "ನಾನು ಸೃಷ್ಟಿಸಿದ ಮಾನವರನ್ನು ಈ ಜಗದಿಂದ ಅಳಿಸಿಬಿಡುತ್ತೇನೆ. ಅವರೊಂದಿಗೆ ಪ್ರಾಣಿಪಕ್ಷಿಗಳನ್ನು, ಕ್ರಿಮಿ ಕೀಟಗಳನ್ನು ಅಳಿಸಿ ಹಾಕುತ್ತೇನೆ. ಅವುಗಳನ್ನು ಉಂಟುಮಾಡಿದ್ದಕ್ಕಾಗಿ ನನಗೆ ದಃಖವಾಗುತ್ತಿದೆ," ಎಂದುಕೊಂಡರು. ಆದರೆ ನೋಹನ ವಿಷಯದಲ್ಲಿ ಸರ್ವೇಶ್ವರಸ್ವಾಮಿಗೆ ಮೆಚ್ಚುಗೆಯಿತ್ತು. ಸರ್ವೇಶ್ವರಸ್ವಾಮಿ ನೋಹನಿಗೆ, "ನೀನೂ ನಿನ್ನ ಮನೆಯವರೆಲ್ಲರೂ ನಾವೆಯನ್ನು ಸೇರಿಕೊಳ್ಳಿರಿ; ಈಗಿನ ಪೀಳಿಗೆಯಲ್ಲಿ ನೀನೊಬ್ಬನೇ ನನ್ನ ದೃಷ್ಟಿಗೆ ಸತ್ಪುರುಷ. ಎಲ್ಲ ಶುದ್ಧ ಪ್ರಾಣಿಗಳಲ್ಲಿ ಏಳೇಳು ಗಂಡುಹೆಣ್ಣುಗಳನ್ನು ಶುದ್ಧವಲ್ಲದ ಪ್ರಾಣಿಗಳಲ್ಲಿ ಎರಡೆರಡು ಗಂಡುಹೆಣ್ಣುಗಳನ್ನೂ ನಿನ್ನೊಂದಿಗೆ ಕರೆದುಕೊ. ಪಕ್ಷಿಗಳಲ್ಲಿಯೂ ಏಳೇಳು ಗಂಡುಹೆಣ್ಣುಗಳನ್ನು ತೆಗೆದುಕೊ. ಏಳು ದಿನಗಳಾದ ನಂತರ ಭೂಮಿಯ ಮೇಲೆ ನಲವತ್ತು ದಿನ ಹಗಲಿರುಳೆನ್ನದೆ ಮಳೆ ಸುರಿಸುವೆನು; ನಾನು ಸೃಷ್ಟಿ ಮಾಡಿದ ಜೀವರಾಶಿನಳನ್ನೆಲ್ಲ ಭೂಮಿಯಿಂದ ಆಳಿಸಿ ಹಾಕುವೆನು," ಎಂದು ಹೇಳಿದರು. ಸರ್ವೇಶ್ವರ ಆಜ್ಞಾಪಿಸಿದಂತೆಯೇ ನೋಹನು ಎಲ್ಲವನ್ನು ಮಾಡಿದನು. ಏಳು ದಿನಗಳಾದ ಬಳಿಕ ಜಲ ಪ್ರಳಯವಾಗತೊಡಗಿತು.
ಕೀರ್ತನೆ: 29:1, 2, 3-4, 9-10
ಶ್ಲೋಕ: ಅನುಗ್ರಹಿಸಲಿ ಪ್ರಭೂ, ತನ್ನ ಪ್ರಜೆಗೆ ಸುಕ್ಷೇಮವನು.
ಶುಭಸಂದೇಶ: ಮಾರ್ಕ 8:14-21

ಮನಸಿಗೊಂದಿಷ್ಟು : ೪೦೦೦ ಜನರಿಗೆ ಆಹಾರ ಒದಗಿಸಿದನ್ನು ನೋಡಿಯೂ , ಶಿಷ್ಯರು ಮರೆತು ಬಂದ ರೊಟ್ಟಿಗಳ ಬಗ್ಗೆ ಯೋಚಿಸುತ್ತಿದ್ದಾರೆ. ಅದು ಸಹಜವೂ ಆಗಿತ್ತು, ಏಕೆಂದರೆ ಅದು ಅವರ ಮುಂದಿನ ಊಟವಾಗಿತ್ತು. ಆದರೆ ಅವರ ಪೇಚಾಟವನ್ನು ಗಮನಿಸಿದ ಯೇಸು ಫರಿಸಾಯರ ಅವಿಶ್ವಾಸ ಹಾಗೂ ಹೆರೋದನ ದುಷ್ಟತನವನ್ನು ನೆನಪಿಸುತ್ತಾರೆ. ಅವಿಶ್ವಾಸದಷ್ಟೇ, ದುಷ್ಟತನದಷ್ಟೇ ಅನವಶ್ಯಕ ಪೇಚಾಟಗಳೂ ನಮ್ಮನ್ನು ದೇವರಿಂದ ದೂರವಾಗಿಸಬಹುದು.
ಪ್ರಶ್ನೆ : ಕ್ರಿಸ್ತನಿಂದ ನಮ್ಮನ್ನು ದೂರವಾಗಿಸುತ್ತಿರುವ ನಮ್ಮ ಚಿಂತೆ ಪೇಚಾಟಗಳು ಯಾವುವು?
1.NANAGE TIME ILLA YENNUVUDU
ReplyDelete2.NAANU MAADUVUDE SARI ANDUKOLLUVUDU
:-)
ReplyDelete