ಮೊದಲನೇ ವಾಚನ: ಹಿಬ್ರಿಯರಿಗೆ 13:15-17, 20-21

ಕೀರ್ತನೆ: ಪ್ರಭು ಕುರಿಗಾಹಿಯಾಗಿರಲು ನನಗೆ ಕುಂದುಕೊರತೆಗಳೆಲ್ಲಿಯವು ಎನಗೆ?
ಶುಭಸಂದೇಶ: ಮಾರ್ಕ 6:30-34
ಪ್ರೇಷಿತರು ಯೇಸುಸ್ವಾಮಿಯ ಬಳಿಗೆ ಹಿಂದಿರುಗಿ ಬಂದು ತಾವು ಮಾಡಿದ ಸಕಲ ಕಾರ್ಯಕಲಾಪಗಳ ಹಾಗೂ ನೀಡಿದ ಬೋಧನೆಯ ವರದಿಯನ್ನು ಒಪ್ಪಿಸಿದರು. ಜನರು ಗುಂಪುಗುಂಪಾಗಿ ಎಡೆಬಿಡದೆ ಬರುತ್ತಾ ಹೋಗುತ್ತಾ ಇದ್ದುದರಿಂದ ಯೇಸುವಿಗೆ ಮತ್ತು ಅವರ ಶಿಷ್ಯರಿಗೆ ಊಟಮಾಡಲೂ ಬಿಡುವಿರಲಿಲ್ಲ. ಆದುದರಿಂದ ಯೇಸು, 'ಬನ್ನಿ, ಪ್ರತ್ಯೇಕವಾಗಿ ನಾವು ನಿರ್ಜನ ಪ್ರದೇಶಕ್ಕೆ ಹೋಗಿ ಸ್ವಲ್ಪ ವಿಶ್ರಮಿಸಿಕೊಂಡು ಬರೋಣ," ಎಂದರು. ಅಂತೆಯೇ ಅವರೆಲ್ಲರೂ ಪ್ರತ್ಯೇಕವಾಗಿ ದೋಣಿಯನ್ನು ಹತ್ತಿ ಏಕಾಂತ ಪ್ರದೇಶಕ್ಕೆ ಹೊರಟರು. ಆದರೆ ಅವರು ಹೋಗುತ್ತಿರುವುದನ್ನು ಕಂಡು ಗರುತಿಸಿದ ಅನೇಕರು ಎಲ್ಲಾ ಊರುಗಳಿಂದ ಕಾಲ್ದಾರಿಯಲ್ಲಿ ತ್ವರಿತವಾಗಿ ಸಾಗಿ ಅವರಿಗೆ ಮುಂಚಿತವಾಗಿಯೇ ಆ ಸ್ಥಳವನ್ನು. ಸೇರಿದರು ಯೇಸು ದೋಣಿಯಿಂದ. ಇಳಿದಾಗ ಅಲ್ಲಿ ದೊಡ್ಡ ಜನಸಮುಹವೇ ಸೇರಿತತ್ತು. ಆ ಜನರು ಕುರುಬನಿಲ್ಲದ ಕುರಿಗಳಂತಿರುವುದನ್ನು ಕಂಡು, ಯೇಸುವಿ ನ ಮನ ಕರಗಿತು; ಅನೇಕ ವಿಷಯಗಳನ್ನು ಕುರಿತು ಅವರಿಗೆ ಉಪದೇಶವಿತ್ತರು.
ಮನಸಿಗೊಂದಿಷ್ಟು : "ನಿರ್ಜನ, ಏಕಾಂತದಲ್ಲಿ ದೇವರನ್ನು ಎದುರಿಸುವ ಹಾಗೂ ಜನ ಜಂಗುಳಿಯಲ್ಲಿ ಮನುಷ್ಯರ ಸೇವೆ ಮಾಡುವುದರಲ್ಲಿ ನಿಜವಾದ ಕ್ರೈಸ್ತೀಯ ಜೀವನದ ಜೀವಾಳವಿದೆ" ಎನ್ನುತ್ತಾರೆ ವಿಲ್ಲಿಯಂ ಬಾರ್ಕ್ಲೇ.
ಪ್ರಶ್ನೆ : ದಿನ ನಿತ್ಯದ ಜಂಜಾಟದಲ್ಲಿ ದೇವರೊಡನೆ ಸಂಭಾಷಣೆಗೆ ಬೇಕಾದ ಏಕಾಂತಕ್ಕೆ, ವಿಶ್ರಮಕ್ಕೆ ನಮ್ಮಲ್ಲಿ ಎಷ್ಟು ಸಮಯವಿದೆ?
No comments:
Post a Comment