ಸಾಧಾರಣ ಕಾಲದ 25ನೇ - ಸೋಮವಾರ
ಮೊದಲನೇ ವಾಚನ: ಜ್ಞಾನೋಕ್ತಿಗಳು: 3: 27-34
ನಿನ್ನ ಕೈಲಾದಾಗ ಉಪಕಾರ ಮಾಡು. ಕೇಳುವವರಿಗೆ ಅದನ್ನು ನಿರಾಕರಿಸಬೇಡ. ನೆರೆಯವನಿಗೆ ನೀಡಲು ಇದೀಗಲೇ ನಿನ್ನಲ್ಲಿರುವಾಗ, "ಹೋಗಿ ಬಾ, ನಾಳೆ ಕೊಡುತ್ತೇನೆ" ಎನ್ನಬೇಡ. ಕೇಡನ್ನು ಬಗೆಯಬೇಡ ನೆರೆಯವನಿಗೆ, ಪಕ್ಕದಲ್ಲೇ ನಂಬಿಕೆಯಿಂದ ವಾಸಿಸುವವನಿಗೆ. ನಿನಗೆ ಕೇಡು ಮಾಡದವನ ಸಂಗಡ ಕಾರಣವಿಲ್ಲದೆ ಜಗಳವಾಡ ಬೇಡ. ಹಿಂಸಾತ್ಮಕನನ್ನು ನೋಡಿ ಹೊಟ್ಟೆಕಿಚ್ಚು ಪಡಬೇಡ, ಅವನ ನಡತೆಯನ್ನು ಎಷ್ಟು ಮಾತ್ರಕ್ಕೂ ಅನುಸರಿಸ ಬೇಡ. ವಕ್ರ ಬುದ್ದಿಯವನು ಸರ್ವೇಶ್ವರನಿಗೆ ಅಸಹ್ಯನು, ಸತ್ಯಸಂಧರು ಆತನಿಗೆ ಪ್ರೀತಿ ಪಾತ್ರರು. ದುರುಳರ ಮನೆಯನ್ನು ಸರ್ವೇಶ್ವರ ಶಪಿಸುವನು; ನೀತಿವಂತರ ನಿವಾಸವನ್ನು ಆತ ಆಶೀರ್ವವದಿಸುವನು. ಅಪಹಾಸ್ಯ ಮಾಡುವವರನ್ನು ಆತ ಅಪಹಾಸ್ಯ ಮಾಡುವನು; ನಮ್ರರಿಗಾದರೋ ಕೃಪಾರ್ಶೀವಾದವನು ಅನುಗ್ರಹಿಸುವನು.
ಕೀರ್ತನೆ: 15: 2-3ಎ, 3ಬಿಸಿ-4ಎಬಿ, 5
ಶ್ಲೋಕ: ಅರ್ಹನಾರು ಪ್ರಭೂ, ನಿನ್ನ ಪವಿತ್ರ ಶಿಖರದಲಿ ವಾಸವಾಗಿರಲು?
ಶುಭಸಂದೇಶ: ಲೂಕ: 8: 16-18
"ದೀಪವನ್ನು ಹಚ್ಚಿ ಯಾರೂ ಅದನ್ನು ಪಾತ್ರೆಯಿಂದ ಮುಚ್ಚಿಡುವುದಿಲ್ಲ; ಮಂಚದ ಕೆಳಗೆ ಬಚ್ಚಿಡುವುದಿಲ್ಲ. ಮನೆಯೊಳಕ್ಕೆ ಬರುವವರಿಗೆ ಬೆಳಕು ಕಾಣಿಸುವಂತೆ ಅದನ್ನು ದೀಪಸ್ಥಂಭದ ಮೇಲಿಡುತ್ತಾರೆ. ಬಟ್ಟಬಯಲಾಗದ ಮುಚ್ಚುಮರೆಯಿಲ್ಲ; ಬೆಳಕಿಗೆ ಬಾರದ ಹಾಗೂ ರಟ್ಟಾಗದ ಗುಟ್ಟಿಲ್ಲ. "ಆದ್ದರಿಂದ ನೀವು ಕಿವಿಕೊಡುವಾಗ ಎಚ್ಚರಿಕೆಯಿಂದಿರಿ; ಏಕೆಂದರೆ, ಉಳ್ಳವನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ, ಇಲ್ಲದವನಿಂದ ತನಗಿದೆ ಎಂದುಕೊಳ್ಳುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ," ಎಂದರು ಯೇಸುಸ್ವಾಮಿ.
ಚಿಂತನೆ: ಶುಭ ಸಂದೇಶವನ್ನು ನಮ್ಮದೇ
ಆದ ರೀತಿಯಲ್ಲಿ ಸಾರುವ
ಅವಕಾಶ, ಪ್ರತಿಭೆಗಳಿದ್ದರೂ ಸುಮ್ಮನಿರುವ ನಮ್ಮಂಥವರನ್ನು ಇಂದಿನ ಶುಭ ಸಂದೇಶ ಎಚ್ಚರಿಸುತ್ತಿದೆ. ದೀಪ ಮುಚ್ಚಿಟ್ಟುಕೊಂಡರೆ ಕ್ರಮೇಣ ಅದೂ ಆರಿಹೋಗುತ್ತದೆ ಎಂಬ ಅರ್ಥವನ್ನು ಕೊನೆಯ ಸಾಲಿನಲ್ಲಿ ಕಾಣಬಹುದು. ನಾವು ದೇವರಿಂದ ವರ ಪಡೆದವರು ಎಂದು ಬೀಗುವುದಕ್ಕಿಂತ ಆ ವರವು ಮಿಕ್ಕವರಿಗೂ ಸಿಗುವಂಥಹ ಪ್ರಯತ್ನ ನಮ್ಮದಾಗಬೇಕು. ಜ್ಞಾನೋಕ್ತಿಗಳು ಸಹಾ ಈ ನಿಟ್ಟಿನಲ್ಲಿ ಒಂದಷ್ಟು
ಮಾರ್ಗಗಳನ್ನು ಸೂಚಿಸುತ್ತದೆ
No comments:
Post a Comment