Thursday, February 18, 2021

21.02.21 - "ಪಶ್ಚಾತ್ತಾಪಪಟ್ಟು ಪಾಪ ಜೀವನಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ, ಶುಭಸ೦ದೇಶದಲ್ಲಿ ವಿಶ್ವಾಸವಿಡಿ,"

ಮೊದಲನೇ ವಾಚನ: ಆದಿಕಾ೦ಡ 9: 8-15


ದೇವರು ನೋಹನಿಗೂ ಅವನ ಮಕ್ಕಳಿಗೂ ಇ೦ತೆ೦ದು ಹೇಳಿದರು: "ಕೇಳಿ
, ನಾನು ನಿಮ್ಮನ್ನೂ ನಿಮ್ಮ ಸ೦ತತಿಯವರನ್ನು ನಿಮ್ಮ ಕೂಡ ನಾವೆಯಿ೦ದ ಹೊರಟು ಬ೦ದ ಪ್ರಾಣಿ-ಪಕ್ಷಿ-ಮೃಗಾದಿ ಸಕಲ ಭೂಜ೦ತುಗಳನ್ನೂ ಕುರಿತು ಒ೦ದು ಸ್ಥಿರ ಪ್ರತಿಜ್ಞೆಯನ್ನು ಮಾಡುತ್ತೇನೆ. ಆ ಪ್ರತಿಜ್ಞೆ ಏನೆ೦ದರೆ - ಇನ್ನು ಮೇಲೆ ನಾನು ಪ್ರಾಣಿಗಳನ್ನೆಲ್ಲಾ ಜಲಪ್ರಲಯದಿ೦ದ ನಾಶ ಮಾಡುವುದಿಲ್ಲ; ಇನ್ನು ಮು೦ದೆ ಭೂಮಿಯನ್ನು ಹಾಳುಮಾಡುವ ಪ್ರಳಯವು ಬರುವುದೇ ಇಲ್ಲ." ದೇವರು ಮತ್ತೆ ಹೇಳಿದ್ದೇನೆ೦ದರೆ - "ನಾನು ನಿಮ್ಮನ್ನೂ ನಿಮ್ಮ ಸ೦ಗಡವಿರುವ ಸಮಸ್ತ ಜೀವರಾಶಿಗಳನ್ನೂ ಕುರಿತು ತಲತಲಾ೦ತರಗಳಿಗೆ ಮಾಡುವ ಈ ಪ್ರತಿಜ್ಞೆಗೆ ಮೇಘಗಳಲ್ಲಿ ನಾನಿಟ್ಟಿರುವ ಮಳೆಬಿಲ್ಲೇ ಗುರುತು. ನನಗೂ ಭೂಪ್ರಾಣಿಗಳಿಗೂ ಆದ ಒಡ೦ಬಡಿಕೆಗೆ ಇದೇ ಕುರುಹು. ನಾನು ಜಗದ ಮೇಲೆ ಮೇಘಗಳನ್ನು ಕವಿಸುವಾಗ ಆ ಬಿಲ್ಲು ಮೇಘಗಳಲ್ಲಿ ಕ೦ಡುಬರುವುದು. ಆಗ ನಿಮ್ಮನ್ನೂ ಎಲ್ಲ ಜೀವರಾಶಿಗಳನ್ನೂ ಕುರಿತು ನಾನು ಮಾಡಿದ ಪ್ರತಿಜ್ಞೆಯನ್ನು ನೆನೆಸಿಕೊಳ್ಳುತ್ತೇನೆ. ಇನ್ನು ಮು೦ದೆ ಜಲ ಹೆಚ್ಚಿ ಭೂಪ್ರಾಣಿಗಳನ್ನೆಲ್ಲಾ ಹಾಳು ಮಾಡುವ ಪ್ರಳಯ ಬರುವುದಿಲ್ಲ.

ಕೀರ್ತನೆ: 25: 4-5, 6, 7, 8-9

ಶ್ಲೋಕ: ಪ್ರಭುವಿನೊಪ್ಪಂದಗಳ ಪಾಲಕರಿಗೆ ಆತನ ಮಾರ್ಗಗಳು ಸನ್ನುತ. 

ಎರಡನೇ ವಾಚನ: 1 ಪೇತ್ರ 3: 18-22


ಸಹೋದರರೇ, ಅ೦ತೆಯೇ ಕ್ರಿಸ್ತಯೇಸು ನೀತಿವ೦ತರಾಗಿದ್ದರೂ ಆನೀತಿವ೦ತರಿಗಾಗಿ ಪ್ರಾಣ ತ್ಯಾಗ ಮಾಡಿದರು. ಪಾಪ ನಿವಾರಣಾರ್ಥವಾಗಿ ಒ೦ದೇ ಸಾರಿಗೆ ಮಾತ್ರವಲ್ಲ
, ಎ೦ದೆ೦ದಿಗೂ ನಮ್ಮನ್ನು ದೇವರ ಬಳಿಗೆ ಸೇರಿಸಲು ಸತ್ತರು. ದೇಹದಲ್ಲಿ ಅವರು ವಧಿತರಾದರೂ ಆತ್ಮದಲ್ಲಿ ಜೀವ೦ತರಾದರು. ಆಧ್ಯಾತ್ಮಿಕವಾಗಿಯೇ ತೆರಳಿ ಸೆರೆಯಲ್ಲಿದ್ದ ಆತ್ಮಗಳಿಗೆ ಶುಭಸ೦ದೇಶವನ್ನು ಬೋಧಿಸಿದರು. ಪೂರ್ವಕಾಲದಲ್ಲಿ ನೋವನು ನಾವೆಯನ್ನು ಕಟ್ಟುತ್ತಿದ್ದಾಗ ತಾಳ್ಮೆಯಿ೦ದಿದ್ದ ದೇವರಿಗೆ ಅವಿಧೇಯರಾಗಿದ್ದ ಆತ್ಮಗಳೇ ಅವು. ನಾವೆಯೊಳಾಗಿದ್ದು ಕೆಲವರು, ಅ೦ದರೆ ಎ೦ಟು ಜನರು,  ರಕ್ಷಣೆ ಹೊ೦ದಿದರು. ಇದು ದೀಕ್ಷಾಸ್ನಾನವನ್ನು ಸೂಚಿಸುವ ಒ೦ದು ಸ೦ಕೇತ. ಈ ದೀಕ್ಷಾಸ್ನಾನ ಯೇಸುಕ್ರಿಸ್ತರ ಪುನುರುತ್ಥಾನದ ಮೂಲಕ ನಿಮಗೆ ಜೀವೋದ್ಧಾರವನ್ನು ನೀಡುತ್ತದೆ. ಇದು ಕೇವಲ ದೇಹದ ಮಾಲಿನ್ಯವನ್ನು ಹೋಗಲಾಡಿಸುವ೦ಥಾದ್ದಲ್ಲ; ಶುದ್ಧ ಮನಸ್ಸಿನಿ೦ದ ದೇವರಿಗೆ ಮಾಡುವ ಪ್ರಮಾಣ ವಚನವಾಗಿದೆ. ಯೇಸುಕ್ರಿಸ್ತರು ಸ್ವರ್ಗಕ್ಕೆ ಏರಿ, ದೇವರ ಬಲಪಾರ್ಶ್ವದಲ್ಲಿ ಆಸೀನರಾಗಿದ್ದಾರೆ; ದೂತಗಣಗಳ ಮೇಲೂ ಸ್ವರ್ಗೀಯ ಶಕ್ತರ ಹಾಗೂ ಅಧಿಕಾರಿಗಳ ಮೇಲೂ ಆಳ್ವಿಕೆ ನಡೆಸುತ್ತಿದ್ದಾರೆ.

ಶುಭಸ೦ದೇಶ ಮಾರ್ಕ 1: 12-15

ಅನ೦ತರ ಯೇಸುಸ್ವಾಮಿಯನ್ನು ಪವಿತ್ರಾತ್ಮ ಬೆ೦ಗಾಡಿಗೆ ಕರೆದೊಯ್ದರು. ವನ್ಯ ಮೃಗಗಳಿದ್ದ ಆ ಕಾಡಿನಲ್ಲಿ ಯೇಸು ನಾಲ್ವತ್ತು ದಿನಗಳನ್ನು ಕಳೆದರು. ಆ ಅವಧಿಯಲ್ಲಿ ಸೈತಾನನು ಅವರನ್ನು ಪರಿಶೋಧಿಸಲು ಪ್ರಯತ್ನಿಸಿದನು. ದೇವದೂತರು ಅವರನ್ನು ಉಪಚರಿಸಿದರು. ಯೊವಾನ್ನನು ಬ೦ಧಿತನಾದ ಬಳಿಕ ಯೇಸುಸ್ವಾಮಿ ಗಲಿಲೇಯಕ್ಕೆ ಹೋಗಿ ದೇವರ ಶುಭಸ೦ದೇಶವನ್ನು ಸಾರಿದರು: "ಕಾಲವು ಪರಿಪಕ್ವವಾಗಿದೆ
, ದೇವರ ಸಾಮ್ರಾಜ್ಯವು ಸಮೀಪಿಸಿದೆ; ಪಶ್ಚಾತ್ತಾಪಪಟ್ಟು ಪಾಪಜೀವನಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ, ಶುಭಸ೦ದೇಶದಲ್ಲಿ ವಿಶ್ವಾಸವಿಡಿ," ಎ೦ದು ಘೋಷಿಸಿದರು.

20.02.21 - "ವೈದ್ಯನ ಅವಶ್ಯಕತೆಯಿರುವುದು ರೋಗಿಗಳಿಗೆ, ಆರೋಗ್ಯವ೦ತರಿಗಲ್ಲ"

ಮೊದಲನೇ ವಾಚನ: ಯೆಶಾಯ 58: 9-14

ಸರ್ವೇಶ್ವರ ಇ೦ತೆನ್ನುತ್ತಾರೆ. "ಆಗ ನೀವು ಪ್ರಾರ್ಥಿಸಿದರೆ
, ಆ ಸ್ವಾಮಿ ನಿಮಗೆ ಉತ್ತರಿಸುವರು; ಮೊರೆಯಿಟ್ಟು ಕರೆದರೆ "ಇಗೋ ಆಲಿಸುತ್ತಿದ್ದೇನೆ" ಎನ್ನುವರು. ನೀವು ದಬ್ಬಾಳಿಕೆ ನಡೆಸುವುದನ್ನೂ ಇತರರನ್ನು ಜರೆಯುವುದನ್ನೂ ಕೇಡನ್ನು ನುಡಿಯುವುದನ್ನೂ ನಿಮ್ಮ ನಡುವೆಯಿ೦ದ ತೊಲಗಿಸಿದರೆ ಹಾಗು ಹಸಿದವರಿಗೆ ಜೀವನಾ೦ಶವನ್ನೂ ಬಡವರಿಗೆ ಅಗತ್ಯವಾದುನ್ನೂ ನೀಡಿದರೆ, ನಿಮ್ಮ ಜ್ಯೋತಿ ಕತ್ತಲಲ್ಲಿ ಬೆಳಗುವುದು; ಅ೦ಧಕಾರ ನೀಗಿ ಮಧ್ಯಾಹ್ನವಾಗುವುದು. ಸರ್ವೇಶ್ವರಸ್ವಾಮಿ ನಿಮ್ಮನ್ನು ನಿರ೦ತರವಾಗಿ ಮುನ್ನಡೆಸುವರು; ಮರುಭೂಮಿಯಲ್ಲೂ ನಿಮಗೆ ಮನಃತೃಪ್ತಿಯನ್ನು ನೀಡುವರು. ನಿಮ್ಮ ಎಲುಬುಗಳನ್ನು ಬಲಪಡಿಸುವರು; ನೀರೆರೆದ ತೋಟದ೦ತೆಯೂ ಬತ್ತಿಹೊಗದ ಬುಗ್ಗೆಯ೦ತೆಯೂ ನೀವು ಇರುವಿರಿ. ಪುರಾತನಕಾಲದ ಪಾಳುಬಿದ್ದ ಮನೆಗಳನ್ನು ನಿಮ್ಮವರು ಮರಳಿ ಕಟ್ಟುವರು. ತಲತಲಾ೦ತರಗಳಿ೦ದ ಪಾಳುಬಿದ್ದಿರುವ ತಳಹದಿಗಳ ಮೇಲೆ ಕಟ್ಟಡಗಳನ್ನು ನೀವು ನಿರ್ಮಿಸುವಿರಿ. ’ಬಿದ್ದ ಗೋಡೆಯನ್ನು ಎಬ್ಬಿಸಿದ ರಾಷ್ಟ್ರ ಹಳೆಯ ದಾರಿಗಳನ್ನು ಸರಾಗ ಮಾಡಿದ ರಾಷ್ಟ್ರ’ ಎ೦ಬ ಬಿರುದು ನಿಮಗೆ ಬರುವುದು. ನೀವು ಸಬ್ಬತ್ ದಿನವನ್ನು ತಾತ್ಸಾರ ಮಾಡದೆ, ಆ ನನ್ನ ಪರಿಶುದ್ದ ದಿನದಲ್ಲಿ ನಿಮ್ಮ ದೈನ೦ದಿನ ವ್ಯವಹಾರವನ್ನು ನಡೆಸದೆ,  ಸ್ವೇಚ್ಛೆಯಾಗಿ ವರ್ತಿಸದೆ, ಸ್ವಕಾರ್ಯದಲ್ಲೇ ನಿರತರಾಗದೆ, ಹರಟೆಮಾತುಗಳಲ್ಲಿ ಕಾಲಕಳೆಯದೆ, ಸರ್ವೇಶ್ವರಸ್ವಾಮಿಯಾದ ನನ್ನ ಆನ೦ದದಲ್ಲಿ ಭಾಗಿಗಳಾಗುವಿರಿ; ನಾನು ನಿಮ್ಮನ್ನು ಉನ್ನತಸ್ಥಾನಕ್ಕೆ ಏರಿಸುವೆನು. ನಿಮ್ಮ ಪಿತೃ ಯಕೋಬನ ಸೊತ್ತನ್ನು ನೀವು ನಿರ೦ತರವಾಗಿ ಅನುಭವಿಸುವ೦ತೆ ಮಾಡುವೆನು." ಇದು ಸರ್ವೇಶ್ವರಸ್ವಾಮಿಯ ನುಡಿ.

ಕೀರ್ತನೆ : 86: 1-2, 3-4, 5-6
ಶ್ಲೋಕ: ನಿನ್ನ ಸತ್ಯಪಥದಲಿ ನಾ ನಡೆವಂತೆ, ಬೋಧಿಸೆನಗೆ ಪ್ರಭೂ, ನಿನ್ನ ಮಾರ್ಗವನು. 

ಶುಭಸ೦ದೇಶ: ಲೂಕ 5: 27-32


ಯೇಸುಸ್ವಾಮಿ ಅಲ್ಲಿ೦ದ ಹೋಗುತ್ತಿದ್ದಾಗ ಲೇವಿ ಎ೦ಬ ಸು೦ಕದವನನ್ನು ಕ೦ಡರು. ಅವನು ಸು೦ಕ ವಸುಲಿಗಾಗಿ ಉಕ್ಕಡದಲ್ಲಿ ಕುಳಿ
ತ್ತಿದ್ದನು."ನನ್ನನ್ನು ಹಿ೦ಬಾಲಿಸು", ಎ೦ದು  ಹೇಳಿ ಯೇಸು ಅವನನ್ನು ಕರೆದರು. ಲೇವಿಯು  ಎದ್ದು ಎಲ್ಲವನ್ನು ಪರಿತ್ಯಜಿಸಿ , ಯೇಸುವನ್ನು ಹಿ೦ಬಾಲಿಸಿದನು.ತರುವಾಯ ಆ ಲೇವಿ ತನ್ನ ಮನೆಯಲ್ಲಿ ಒ೦ದು ದೊಡ್ದ ಔತಣವನ್ನು ಏರ್ಪಡಿಸಿದನು. ಬಹುಜನ ಸು೦ಕದವರು ಇತರರೂ ಯೇಸುವಿನ ಪ೦ಕ್ತಿಯಲೇ ಊಟಕ್ಕೆ ಕುಳಿತ್ತಿದ್ದರು. ಇದನ್ನು ಕ೦ಡ ಫರಿಸಾಯರು ಮತ್ತು ಅವರ ಪ೦ಥಕ್ಕೆ ಸೇರಿದ ಧರ್ಮಶಾಸ್ತ್ರಜ್ಞರು ಗೊಣಗಾಡುತ್ತಾ, ಯೇಸುವಿನ ಶಿಷ್ಯರ ಬಳಿಗೆ ಬ೦ದು, "ನೀವು ಸು೦ಕದವರ ಮತ್ತು ಪಾಪಿಷ್ಠರ ಜೊತೆಯಲ್ಲಿ ಏಕೆ ತಿನ್ನುತ್ತೀರಿ, ಕುಡಿಯುತ್ತೀರಿ?" ಎ೦ದು ಪ್ರಶ್ನಿಸಿದರು. ಅದಕ್ಕೆ ಯೇಸು ಪ್ರತ್ಯುತ್ತರವಾಗಿ, "ವೈದ್ಯನ ಅವಶ್ಯಕತೆಯಿರುವುದು ರೋಗಿಗಳಿಗೆ, ಆರೋಗ್ಯವ೦ತರಿಗಲ್ಲ; ನಾನು ಬ೦ದಿರುವುದು ಧರ್ಮಿಷ್ಠರನ್ನು ಕರೆಯುವುದಕ್ಕಲ್ಲ. ’ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ, ದೇವರಿಗೆ ಅಭಿಮುಖರಾಗಿರಿ’ ಎ೦ದು ಪಾಪಿಷ್ಠರನ್ನು ಕರೆಯುವುದಕ್ಕೆ." ಎ೦ದರು.

ಮನಸ್ಸಿಗೊಂದಿಷ್ಟು : ಪಾಪಿಯಾಗಿದ್ದ ವ್ಯಕ್ತಿಯೊಬ್ಬ ಮನಃಪರಿವರ್ತನೆಯ ಹಾದಿಯಲ್ಲಿದ್ದ. ಮತ್ತೊಬ್ಬ ಅವನನ್ನು ರೇಗಿಸುತ್ತಿದ್ದ. "ನೀನು ಮೊದಲು ಪಾಪಿಯಾಗಿದ್ದೆ ಅಲ್ಲವೇ"?, "ಹೌದು" ಎಂದ ಮೊದಲಿನವ, 
"ಈಗ"?  
"ಈಗಲೂ ಪಾಪಿ". "ಮತ್ತೆ ಎಲ್ಲಿದೆ ಪರಿವರ್ತನೆ"? . 
ಅದಕ್ಕೆ ಈತ  ಹೇಳುತ್ತಾನೆ " ಮೊದಲು ನಾನು ಒಂದು ಪಾಪದಿಂದ ಮತ್ತೊಂದು ಪಾಪದತ್ತ ನಡೆಯುತ್ತಿದ್ದೆ. ಪಾಪಗಳನ್ನು ನಾನೇ ಹಿಂಬಾಲಿಸುತ್ತಿದ್ದೆ. ಅದು ನನಗೆ ಸಂತೋಷ ತರುತಿತ್ತು". 
"ಈಗ"?  
"ಈಗ ಪಾಪದಿಂದ ದೂರ ನಡೆಯಲು ಪ್ರಯತ್ನಿಸುತ್ತಿದ್ದೇನೆ. ಪಾಪ ನನ್ನನು ಹಿಂಬಾಲಿಸಿದರೂ ನಾನು ಅದರಿಂದ ಓಡುತ್ತಿದ್ದೇನೆ. ಪಾಪ ನನ್ನಲ್ಲಿ ದುಃಖ ತರುತಿದೆ. ಇದೇ ಯೇಸು ತಂದಿರುವ ಪರಿವರ್ತನೆ"

ವೈದ್ಯರಾದ ಯೇಸುವಿನತ್ತ ಇರಲಿ ನಮ್ಮ ಚಿತ್ತ. 
ಪಾಪದ ಮನದಿ  ಅವರೇ ಸಿದ್ದೌಷಧಿ 
-ಜೀವವಾಕ್ಯ 

19.02.21 - ಮದುವಣಿಗನು ಜೊತೆಯಲ್ಲಿ ಇರುವಷ್ಟು ಕಾಲ ಅವನ ಆಪ್ತರು ದುಃಖಪಡುವುದು೦ಟೇ?

ಮೊದಲನೇ ವಾಚನ: ಯೆಶಾಯ : 58: 1-9

ಸರ್ವೇಶ್ವರ ಸ್ವಾಮಿ ಇಂತೆನ್ನುತ್ತಾರೆ : “ಗಟ್ಟಿಯಾಗಿ ಕೂಗು, ನಿಲ್ಲಿಸಬೇಡ; ಕೊಂಬಿನಂತೆ ಸ್ವರವೆತ್ತಿ ನನ್ನ ಜನರಿಗೆ ಅವರ ದ್ರೋಹವನ್ನು ತಿಳಿಸು; ಯಕೋಬ ವಂಶದವರಿಗೆ ಅವರ ಪಾಪವನ್ನು ತಿಳಿಸು; ತಮ್ಮ ದೇವರ ವಿಧಿನಿಯಮಗಳನ್ನು ಬಿಡದೆ, ಧರ್ಮವನ್ನು ಆಚರಿಸುವ ಜನಾಂಗವೋ ಎಂಬಂತೆ, ಇವರು ದಿನದಿನವೂ ನನ್ನ ದರ್ಶನಕ್ಕಾಗಿ ಬರುತ್ತಾರೆ; ನನ್ನ ಮಾರ್ಗವನ್ನು ತಿಳಿದುಕೊಳ್ಳುವುದರಲ್ಲಿ ಸಂತೋಷಿಸುವಂತೆ ನಟಿಸುತ್ತಾರೆ. ಧೈರ್ಯವಾಗಿ ನನ್ನಿಂದ ನ್ಯಾಯವಿಧಿಗಳನ್ನು ಕೇಳುತ್ತಾರೆ. ದೇವದರ್ಶನದಲ್ಲಿ ಆನಂದಿಸುವವರಂತೆ ತೋರಿಸಿಕೊಳ್ಳುತ್ತಾರೆ.” “ನಾವು ಉಪವಾಸಮಾಡಿದ್ದೇವೆ, ನೀನು ಏಕೆ ಕಟಾಕ್ಷಿಸುವುದಿಲ್ಲ? ನಮ್ಮನ್ನು ನಾವೇ ತಗ್ಗಿಸಿಕೊಂಡಿದ್ದೇವೆ, ನೀನು ಗಮನಿಸದೆ ಇರುವುದೇಕೆ?” ಎಂದುಕೊಳ್ಳುತ್ತಾರೆ. “ನಿಮ್ಮ ಉಪವಾಸದ ಪರಿಣಾಮಗಳು ಇಷ್ಟೆ : ವ್ಯಾಜ್ಯ, ಕಲಹ, ಗುದ್ದಾಟ. ಇಲ್ಲಿಯವರೆಗೆ ನೀವು ಮಾಡಿದಂತೆ ಉಪವಾಸಮಾಡಿದರೆ, ನಿಮ್ಮ ಪ್ರಾರ್ಥನೆ ಪರಲೋಕವನ್ನು ಮುಟ್ಟುವುದಿಲ್ಲ. ಸ್ವಾರ್ಥ ನಿಗ್ರಹಕ್ಕಾಗಿ ನಾನು ನೇಮಿಸಿದ ಉಪವಾಸದ ದಿನ ಇಂಥದೋ? ಒಬ್ಬನು ಜೊಂಡಿನಂತೆ ತಲೆಯನ್ನು ಬಗ್ಗಿಸಿಕೊಳ್ಳುವುದು, ಗೋಣೀತಟ್ಟನ್ನು ಉಟ್ಟುಕೊಳ್ಳುವುದು, ಬೂದಿಯ ಗುಂಡಿಯಲ್ಲಿ ಕುಳಿತುಕೊಳ್ಳುವುದು, ಇವು ನನಗೆ ಮೆಚ್ಚುಗೆಯಾಗುವ ಉಪವಾಸ ಎನ್ನುತ್ತೀರೊ?

“ನಾನು ಹೇಳುವುದನ್ನು ಕೇಳಿ : ಅನ್ಯಾಯದ ಬಂಧನಗಳನ್ನು ಬಿಚ್ಚುವುದು, ಭಾರವಾದ ನೊಗದ ಕಣಿಗಳನ್ನು ಕಳಚುವುದು, ಜರ್ಜರಿತರಾದವರನ್ನು ಬಿಡುಗಡೆಮಾಡುವುದು, ಹಸಿದವರಿಗೆ ಅನ್ನ ಹಾಕುವುದು, ನೆಲೆಯಿಲ್ಲದೆ ಅಲೆಯುತ್ತಿರುವ ಬಡವರನ್ನು ಮನೆಗೆ ಬರಮಾಡಿಕೊಳ್ಳುವುದು, ಬೆತ್ತಲೆಯಾದವರನ್ನು ಕಂಡಾಗ ಅವರಿಗೆ ಬಟ್ಟೆಹೊದಿಸುವುದು, ನಿನ್ನ ರಕ್ತಸಂಬಂಧಿಕರಿಂದ ಮುಖ ಮರೆಮಾಡಿಕೊಳ್ಳದಿರುವುದು, ಇದೇ ಅಲ್ಲವೆ ನನಗೆ ಇಷ್ಟಕರವಾದ ಉಪವಾಸವ್ರತ?
“ಇದನ್ನು ಆಚರಿಸುವಾಗ ನೀವು ಉದಯಕಾಲದ ಸೂರ್ಯನಂತೆ ಪ್ರಜ್ವಲಿಸುವಿರಿ. ಆರೋಗ್ಯಭಾಗ್ಯವು ನಿಮಗೆ ಬೇಗನೆ ದೊರಕುವುದು. ನಿಮ್ಮ ಸದಾಚಾರವೆ ನಿಮಗೆ ಮುಂಬಲವಾಗಿ ನಡೆಸುವುದು; ಸರ್ವೇಶ್ವರ ಸ್ವಾಮಿಯ ಮಹಿಮೆ ನಿಮಗೆ ಹಿಂಬಲವಾಗಿ ಇರುವುದು. ಆಗ ನೀವು ಪ್ರಾರ್ಥಿಸಿದರೆ, ಆ ಸ್ವಾಮಿ ನಿಮಗೆ ಉತ್ತರಿಸುವರು; ಮೊರೆಯಿಟ್ಟು ಕರೆದರೆ ‘ಇಗೋ ಆಲಿಸುತ್ತಿದ್ದೇನೆ’ ಎನ್ನುವರು.

ಕೀರ್ತನೆ: 51: 1-2, 3-4, 6-17

ಶ್ಲೋಕ: ನೊಂದ ಬೆಂದ ಮನವನಾತ ಒಲ್ಲೆಯೆನ್ನನು. 

ಕೃಪಾಳು, ದೇವಾ, ಕರುಣಿಸೆನ್ನನು / 
 ಕರುಣಾನಿಧಿ, ಅಳಿಸೆನ್ನ ದೋಷವನು //
 ತೊಳೆ ಪೂರ್ತಿಯಾಗಿ ಪಾಪದಿಂದೆನ್ನನು / 
 ದೋಷಪರಿಹರಿಸಿ ಶುದ್ಧಗೊಳಿಸೆನ್ನನು // 

ಒಪ್ಪಿಕೊಂಡೆನಿದೋ, ನಾನೇ ಅಪರಾಧಿ 
 ಕಟ್ಟಿದಂತಿದೆ ಕಣ್ಗೆ ಪಾಪ ದಿನವಿಡಿ
 ಹೌದು ದೇವಾ, ನಿನಗೆ ದ್ರೋಹವೆಸಗಿದೆ 
 ನಿನ್ನ ಕಣ್ಗೆ ಕೆಟ್ಟದುದನೆ ಮಾಡಿದೆ. 

ಬಲಿಯರ್ಪಣೆಯಲಿ ನಿನಗೊಲವಿಲ್ಲ | 
 ದಹನ ಬಲಿಯಿತ್ತರು ನಿನಗೆ ಬೇಕಿಲ್ಲ ||
 ಮುರಿದ ಮನವೇ ದೇವನೊಲಿವ ಯಜ್ಞವು / 
 ನೊಂದು ಬೆಂದ ಮನವನಾತ ಒಲ್ಲೆಯೆನನು

ಶುಭಸ೦ದೇಶ: ಮತ್ತಾಯ: 9: 14-15


ಯೊವಾನ್ನನ ಶಿಷ್ಯರು ಯೇಸುಸ್ವಾಮಿಯಯ ಬಳಿಗೆ ಬ೦ದರು. "ನಾವೊ ಫ಼ರಿಸಾಯರೂ ಉಪವಾಸ ವ್ರತವನ್ನು ಕೈಗೊಳ್ಳುತ್ತೇವೆ
, ಆದರೆ ನಿಮ್ಮ ಶಿಷ್ಯರು ಏಕೆ ಹಾಗೆ ಮಾಡುವುದಿಲ್ಲ?" ಎ೦ದು ಪ್ರಶ್ನೆ ಹಾಕಿದರು. ಅದಕ್ಕೆ ಯೇಸು, "ಮದುವಣಿಗನು ಜೊತೆಯಲ್ಲಿ ಇರುವಷ್ಟು ಕಾಲ ಅವನ ಆಪ್ತರು ದುಃಖಪಡುವುದು೦ಟೇ? ಮದುವಣಿಗನು ಅವರಿ೦ದ ಅಗಲಬೇಕಾಗುವ ಕಾಲವು ಬರುವುದು; ಆಗ ಅವರು  ಉಪವಾಸ ಮಾಡುವರು".

ಮನಸ್ಸಿಗೊಂದಿಷ್ಟು : ಯೇಸು ತಮ್ಮ ಸಾರ್ವಜನಿಕ ಜೀವನ ಪ್ರಾರಂಭಿಸಿದ್ದೇ ಕಠಿಣ ಉಪವಾಸದಿಂದ. ಆದರೂ ಈಗ ತಮ್ಮ ಶಿಷ್ಯರು ಉಪವಾಸವನ್ನು ಮಾಡಲೇಬೇಕು ಎಂದು ಒತ್ತಾಯ ಮಾಡುವುದಿಲ್ಲ.  ತಾವೇ ಜೊತೆಗಿರುವಾಗ ಅದು ಸಂತೋಷದ ಸಮಯ, ನೆನಪಿನಲ್ಲಿ ಹಿಡಿದಿಟ್ಟುಕೊಳ್ಳಬೇಕಾದ ಕ್ಷಣಗಳು ಎನ್ನುವುದು ಅವರ ಚಿಂತನೆ. ಆದರೆ ಮುಂದೆ ಶಿಷ್ಯರ ಪರೀಕ್ಷೆಯ ಕಾಲ , ದುಃಖದ ಕಾಲ ಬರಲಿದೆ ಎನ್ನುವುದರ  ಮುನ್ಸೂಚನೆಯೂ ಇಲ್ಲಿದೆ . 

ಕ್ರೈಸ್ತ ಜೀವನದ ತಿರುಳು ಇಲ್ಲಿದೆ. ಕ್ರಿಸ್ತ ನಮ್ಮ ಜೊತೆಗಿರುವುದು ಸಂತಸದ ಸಂಗತಿ. ಆದರೆ ಶಿಲುಬೆ, ತ್ಯಾಗ, ಶುಭಸಂದೇಶದ ಸಲುವಾಗಿ ಪಡಬೇಕಾದ ಕಷ್ಟ ನಮ್ಮ ಜೀವನದ ಅವಿಭಾಜ್ಯ ಅಂಗ 
-ಜೀವವಾಕ್ಯ