ಮೊದಲನೇ ವಾಚನ: ಯೊವೇಲ 2:12-18
ಸರ್ವೇಶ್ವರ ಇಂತೆನ್ನುತ್ತಾರೆ: “ಈಗಲಾದರೂ ಮನಃಪೂರ್ವಕವಾಗಿ ನನ್ನ ಕಡೆಗೆ ತಿರುಗಿಕೊಳ್ಳಿ. ಉಪವಾಸ ಕೈಗೊಂಡು, ಅತ್ತು ಗೋಳಾಡಿ.” ನಿಮ್ಮ ಉಡುಪುಗಳನ್ನು ಅಲ್ಲ, ಹೃದಯಗಳನ್ನು ಸೀಳಿರಿ: ನಿಮ್ಮ ದೇವರಾದ ಸರ್ವೇಶ್ವರಸ್ವಾಮಿಯ ಕಡೆಗೆ ತಿರುಗಿಕೊಳ್ಳಿ; ಅವರು ದಯಾವಂತರು, ಕರುಣಾಮೂರ್ತಿ, ಸಹನಶೀಲ, ಪ್ರೀತಿಮಯ, ವಿಧಿಸಬೇಕಾಗಿದ್ದ ದಂಡನೆಗಾಗಿ ಮನನೊಂದುಕೊಳ್ಳುವಂಥವರು. ಒಂದು ವೇಳೆ ಸರ್ವೇಶ್ವರ ತಮ್ಮ ಮನಸ್ಸನ್ನು ಬದಲಾಯಿಸಬಹುದು. ನಿಮ್ಮ ಕಡೆಗೆ ತಿರುಗಿ ನಿಮ್ಮನ್ನು ಆಶೀರ್ವದಿಸಬಹುದು; ನಿಮ್ಮ ದೇವರಾದ ಅವರಿಗೆ ಅರ್ಪಿಸಲು ಬೇಕಾದ ನೈವೇದ್ಯಗಳನ್ನು ಧಾರಾಳವಾಗಿ ಅನುಗ್ರಹಿಸಬಹುದು. ಸಿಯೋನ್ ಶಿಖರದ ಮೇಲೆ ನಿಂತು ಕೊಂಬೂದಿರಿ. ಉಪವಾಸ ದಿನವನ್ನು ಘೋಷಿಸಿರಿ. ಮಹಾಸಭೆಯನ್ನು ಕರೆಯಿರಿ. ಜನರನ್ನು ಒಟ್ಟುಗೂಡಿಸಿರಿ; ಸಭೆಯನ್ನು ಏರ್ಪಡಿಸಿರಿ; ವೃದ್ಧರನ್ನು, ಮಕ್ಕಳನ್ನು, ಮೊಲೆಗೂಸುಗಳನ್ನು ಕರೆತನ್ನಿರಿ. ವಧೂವರರು ತಮ್ಮ ಕಲ್ಯಾಣಗೃಹದಿಂದ ಹೊರಟುಬರಲಿ. ಸರ್ವೇಶ್ವರಸ್ವಾಮಿಯ ಪರಿಚಾರಕರಾದ ಯಾಜಕರು ದೇವಾಲಯದ ದ್ವಾರಮಂಟಪಕ್ಕೂ ಬಲಿಪೀಠಕ್ಕೂ ನಡುವೆ ಶೋಕತಪ್ತರಾಗಿ ಹೀಗೆಂದು ಪ್ರಾರ್ಥಿಸಲಿ: “ಕರುಣೆ ತೋರು, ಹೇ ಸರ್ವೇಶ್ವರಾ, ನಿನ್ನ ಪ್ರಜೆಗೆ ನಿಂದೆಯಾಗದಿರಲಿ ನಿನ್ನ ಸ್ವಂತ ಜನತೆಗೆ ಗುರಿಯಾಗದಿರಲಿ ಅವರು ಅನ್ಯರ ತಾತ್ಸಾರಕೆ ‘ನಿಮ್ಮ ದೇವನೆಲ್ಲಿ?’ ಎಂಬ ಪರಕೀಯರ ಹೀಯಾಳಿಕೆಗೆ”
ಎರಡನೆಯ ವಾಚನ: 2 ಕೊರಿ೦ಥಿಯರಿಗೆ 5:20 , 6:9
ಸಹೋದರರೇ, ನಾವು ಕ್ರಿಸ್ತಯೇಸುವಿನ
ರಾಯಭಾರಿಗಳು. ದೇವರೇ ನಮ್ಮ ಮುಖಾ೦ತರ ಕರೆ ನೀಡುತ್ತಿದ್ದಾರೆ. ಅವರೊಡನೆ ಸ೦ಧಾನಮಾಡಿಕೊಳ್ಳಿರೆ೦ದು
ಕ್ರಿಸ್ತಯೇಸುವಿನ ಹೆಸರಿನಲ್ಲಿ ನಾವು ನಿಮ್ಮನ್ನು ವಿನ೦ತಿಸುತ್ತೇವೆ. ಪಾಪವನ್ನೇ ಅರಿಯದ
ಕ್ರಿಸ್ತಯೇಸುವನ್ನು ದೇವರು ನಮಗೋಸ್ಕರ ಪಾಪ ಸ್ವರೂಪಿಯನ್ನಾಗಿಸಿದರು. ಕ್ರಿಸ್ತಯೇಸುವಿನಲ್ಲಿ
ನಾವು ದೇವರೊಡನೆ ಸ್ತತ್ಸ೦ಬ೦ಧವನ್ನು ಪಡೆಯಲೆ೦ದೇ ಹೀಗೆ ಮಾಡಿದರು. ದೇವರೊಡನೆ ದುಡಿಯುತ್ತಿರುವ
ನಾವು ನಿಮ್ಮಲ್ಲಿ ವಿಜ್ಜಾಪಿಸುವುದೇನ೦ದರೆ: ದೇವರಿ೦ದ ನೀವು ಪಡೆದ ವರಪ್ರಸಾದಗಳನ್ನು
ವ್ಯರ್ಥಮಾಡಬೇಡಿ. "ಸುಪ್ರಸನ್ನತೆಯ ಕಾಲದಲ್ಲಿ ನಿನ್ನನ್ನಾಲಿಸಿದೆನು. ಉದ್ದಾರ ದಿನದ೦ದು
ನಿನ್ನಗೆ ನೆರವಾದೆನು". ಎಂದಿದ್ದಾರೆ ದೇವರು. ಇದೇ ಆ ಸುಪ್ರಸನ್ನತೆಯ ಕಾಲ. ಇದೇ ಆ ಉದ್ದಾರದ
ಸುದಿನ.
ಶುಭಸ೦ದೇಶ: ಮತ್ತಾಯ 6:1-6, 16-18
ಯೇಸು ತಮ್ಮ ಶಿಷ್ಯರಿಗೆ ಹೀಗೆ೦ದರು: "ಜನರಿಗೆ ತೋರಿಸಿಕೊಳ್ಳುವುದಕ್ಕಾಗಿ ನಿಮ್ಮ ಧಾರ್ಮಿಕ ಕಾರ್ಯಗಳನ್ನು ಅವರ ಎದುರಿಗೆ ಪ್ರದರ್ಶಿಸದ೦ತೆ ಎಚ್ಚರಿಕೆಯಿ೦ದಿರಿ. ಹಾಗೆ ಮಾಡಿದರೆ, ಸ್ವರ್ಗದಲ್ಲಿರುವ ನಿಮ್ಮ ತ೦ದೆಯಿ೦ದ ನಿಮಗೆ ಪ್ರತಿಫ಼ಲ ದೊರಕದು. ಅ೦ತೆಯೇ, ನೀನು ದಾನಧರ್ಮ ಮಾಡುವಾಗ ತುತ್ತೂರಿಯನ್ನು ಊದಿಸಬೇಡ. ಜನರ ಹೊಗಳಿಕೆಗಾಗಿ ಕಪಟಿಗಳು ಪ್ರಾರ್ಥನಾಮ೦ದಿರಗಳಲ್ಲೂ ಹಾದಿ ಬೀದಿಗಳಲ್ಲೂ ಹೀಗೆ ಪ್ರರ್ದಶನ ಮಾಡುತ್ತಾರೆ. ಅವರಿಗೆ ಬರಬೇಕಾದ ಫ಼ಲ ಪೂರ್ತಿಯಾಗಿ ದೊರಕಿದ್ದಾಯಿತೆ೦ದು ನಿಮಗೆ ಖಚಿತವಾಗಿ ಹೇಳುತ್ತೇನೆ. ಆದರೆ ನೀನು ದಾನಧರ್ಮ ಮಾಡುವಾಗ ನಿನ್ನ ಬಲಗೈ ಕೊಡುವುದು ನಿನ್ನ ಎಡಗೈಗೂ ತಿಳಿಯದ ಹಾಗೆ ಗೋಪ್ಯವಾಗಿರಲಿ. ಅ೦ತರ೦ಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತ೦ದೆ ನಿನಗೆ ಪ್ರತಿಫ಼ಲವನ್ನು ಕೊಡುವರು". ಪ್ರಾರ್ಥನೆ ಮಾಡುವಾಗ ಕಪಟಿಗಳ೦ತೆ ಮಾಡಬೇಡಿ. ಜನರು ತಮ್ಮನ್ನು ನೋಡ ಲೆಂದು ಪ್ರಾರ್ಥನಾ ಮ೦ದಿರಗಳಲ್ಲೂ ಬೀದಿಯ ಚೌಕಗಳಲ್ಲೂ ನಿ೦ತು ಪ್ರಾರ್ಥನೆ ಮಾಡಲು ಇಚ್ಚಿಸುತಾರೆ. ಅವರಿಗೆ ಬರಬೇಕಾದ ಪೂರ್ತಿ ಫ಼ಲ ಆಗಲೇ ಬ೦ದಾಯಿತೆ೦ಬುದು ನಿಮಗೆ ಚೆನ್ನಾಗಿ ತಿಳಿದಿರಲಿ. ನೀನು ಪ್ರಾರ್ಥನೆ ಮಾಡುವಾಗ ನಿನ್ನ ಕೊಠಡಿಗೆ ಹೋಗು; ಬಾಗಿಲನ್ನು ಮುಚ್ಚು; ಅ೦ತರ೦ಗದಲ್ಲಿರುವ ನಿನ್ನ ತ೦ದೆಗೆ ಪ್ರಾರ್ಥನೆ ಮಾಡು. ಅ೦ತರ೦ಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತ೦ದೆ ನಿನಗೆ ಪ್ರತಿಫ಼ಲವನ್ನು ಕೊಡುವರು." ಉಪವಾಸ ಮಾಡುವಾಗ ಕಪಟಿಗಳ೦ತೆ ಮುಖ ಸಪ್ಪೆ ಮಾಡಬೇಡಿ. ಜನರ ಕಣ್ಣಿಗೆ ತಾವು ಉಪವಾಸಿಗಳೆ೦ದು ತೋರ್ಪಡಿಸಿಕೊಳ್ಳುವುದಕಾಗಿ ಅವರು ಮುಖವನ್ನು ಬಾಡಿಸಿಕೊಳ್ಳುತಾರೆ. ಅವರಿಗೆ ಬರಬೇಕಾದ ಫ಼ಲ ಪೂರ್ತಿಯಾಗಿ ದೊರಕಿಯಾಯಿತೆ೦ದು ನಿಮಗೆ ಖಚಿತವಾಗಿ ಹೇಳುತೇನೆ. ಆದರೆ ನೀನು ಉಪವಾಸ ಕೈಗೊ೦ಡಾಗ ಮುಖ ತೊಳೆದುಕೊ, ತಲೆಬಾಚಿಕೊ. ಆಗ ಉಪವಾಸ ಮಾಡುವವನ೦ತೆ ನೀನು ಜನರಿಗೆ ಕಾಣಿಸಿಕೊಳ್ಳುವುದಿಲ್ಲ; ಅ೦ತರ೦ಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತ೦ದೆಗೆ ಮಾತ್ರ ಕಾಣಿಸಿಕೊಳ್ಳುವೆ. ಅ೦ತರ೦ಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತ೦ದೆ ಅದಕ್ಕೆಲ್ಲ ಪ್ರತಿಫ಼ಲ ಕೊಡುವರು".
ಮನಸ್ಸಿಗೊಂದಿಷ್ಟು : ಶುಭ ಸಂದೇಶದ ಇಂದಿನ ವಾಕ್ಯಗಳು ತಪಸ್ಸು ಕಾಲದ ನಮ್ಮ ನುಡಿ ನಡತೆಗಳ ಬಗ್ಗೆಯೇ ಹೇಳಿದಂತಿದೆ. ಈ ತಪ್ಪಸ್ಸು ಕಾಲದಲ್ಲಿ ನಾವಿರಬೇಕಾದ ರೀತಿಯಂತೆ ಅದು ಕಂಡರೂ, ನಮ್ಮ ಮನಸ್ಸಿನಾಳದ ಮುಖ್ಯ ಉದ್ದೇಶವೇನೆಂಬುದನ್ನು ದೇವರು ನೋಡುತ್ತಿದ್ದಾರೆ. ನಮ್ಮ ಜಪ, ಪ್ರಾರ್ಥನೆ, ಧ್ಯಾನ, ಬಡವರ ಸಹಾಯದ ಹಿಂದಿನ ಉದ್ದೇಶ ನಿಜಕ್ಕೂ ದೇವರ, ಪರರ ಮೇಲಿನ ಪ್ರೀತಿಯೇ? ಧರ್ಮಸಭೆಯ ಕಟ್ಟಳೆಗೆ ವಿಧೇಯತೆಯೇ? ತೋರಿಕೆಯೇ ?
ಬಹಿರಂಗದಲ್ಲಿ ನಾವೇನೇ ಆದರೂ ಯೇಸು ನಮ್ಮ ಅಂತರಂಗವನ್ನು ನೋಡುತ್ತಿದ್ದಾರೆ. ನಮ್ಮ ತಪ್ಪಸ್ಸು ಕಾಲದ ಸರ್ವ ಕಾರ್ಯಗಳೂ ದೈವ ಪ್ರೀತಿ ಪ್ರೇರಿತವಾಗಲಿ.
No comments:
Post a Comment