26.07.2018

ಸಂತ ಜೋವಾಕಿಂ ಮತ್ತು ಅನ್ನ, ಮಾತೆ ಮೇರಿಯ ತಂದೆತಾಯಿ




ಸಿರಾಖನ ಗ್ರಂಥದಿಂದ ವಾಚನ 44: 1, 10-15

ವಂದನೆ ಸಲ್ಲಿಸೋಣ ನಾವೀಗ 
ಪ್ರಸಿದ್ಧ ಪುರುಷರಿಗೆ
ನಮ್ಮನ್ನು ಪಡೆದ ನಮ್ಮ 
ಕುಲದ ಮೂಲಪಿತೃಗಳಿಗೆ.
ಅವರು ದಯಾಳುಗಳಾಗಿದ್ದರು
ಮರೆತುಹೋಗಲಿಲ್ಲ ಅವರ ಸತ್ಕಾರ್ಯಗಳು.
ಒಳ್ಳೆಯ ಸೊತ್ತು ಸದಾ ಉಳಿಯುವುದು 
ಅವರ ಪೀಳಿಗೆಯಲ್ಲಿ
ಅವರ ಮಕ್ಕಳೂ ಸಹ ನೆಲೆಯಾಗಿ ನಿಲ್ಲುವರು 
ಅದರ ಅನ್ವೇಷಣೆಯಲ್ಲಿ
ಉಳಿಯುವುದು ಅವರ ಸಂತಾನ ಎಂದೆಂದಿಗೂ
ಅವರ ಗೌರವ ಅಳಿಸಿಹೋಗದು.
ಸಮಾಧಾನದಲ್ಲಿ ಅವರ 
ದೇಹಗಳಿಗೆ ಸಮಾಧಿಯಾಯಿತು
ಜೀವಂತವಾಗುವುದು ಅವರ 
ಹೆಸರು ತಲತಲಾಂತರದವರೆಗೂ.
ಕುಲದವರು ಪ್ರಸಿದ್ದಪಡಿಸುವರು 
ಅವರ ಜ್ಞಾನವನು
ಸಭೆಯು ಸಾರುವುದು ಅವರ ಕೀರ್ತಿಯನು

ಕೀರ್ತನೆ 132 : 11, 13-14, 17-18

ಶ್ಲೋಕ : ಪಿತಾಮಹ ದಾವೀದರಸನ ಸಿಂಹಾಸನವನ್ನು
ಸರ್ವೇಶ್ವರನಾದ ದೇವರು ಆತನಿಗೆ ಕೊಡುವರು|

ಸಂತ ಮತ್ತಾಯನು ಬರೆದ ಶುಭಸಂದೇಶದಿಂದ ವಾಚನ  13: 16-17

ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು : ನೀವಾದರೋ ಭಾಗ್ಯವಂತರು. ನಿಮ್ಮ ಕಣ್ಣುಗಳು ಕಾಣುತ್ತವೆ, ಕಿವಿಗಳು ಕೇಳುತ್ತವೆ. ಎಷ್ಟೋ ಪ್ರವಾದಿಗಳು ಹಾಗೂ ಸತ್ಪುರುಷರು ನೀವು ನೋಡುವುದನ್ನು ನೋಡುವುದಕ್ಕೂ ಕೇಳುವುದನ್ನು ಕೇಳುವುದಕ್ಕೂ ಅಪೇಕ್ಷಿಸಿದರು. ಆದರೆ ಅವರು ನೋಡಲೂ ಇಲ್ಲ, ಕೇಳಲೂ ಇಲ್ಲ ಎಂಬುದು ನಿಮಗೆ ತಿಳಿದಿರಲಿ,’’ ಎಂದರು.



No comments:

Post a Comment

12.06.2026 - ದುಡಿದು, ಭಾರಹೊತ್ತು, ಬಳಲಿ ಬೆಂಡಾಗಿರುವ ಸರ್ವಜನರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿ ಕೊಡುತ್ತೇನೆ.

  ಯೇಸುವಿನ ಪವಿತ್ರ ಹೃದಯದ ಮಹೋತ್ಸವ ಮೊದಲನೇ ವಾಚನ: ಧರ್ಮೋಪದೇಶಕಾಂಡ 7:6-11 ಮೋಶೆಯು ಜನರಿಗೆ ಹೇಳಿದ್ದೇನೆಂದರೆ: "ನೀವು ನಿಮ್ಮ ದೇವರಾದ ಸರ್ವೇಶ್ವರನಿಗೆ ಮೀಸಲ...