19.07.2018

ಪ್ರವಾದಿ ಯೆಶಾಯನ ಗ್ರಂಥದಿಂದ ವಾಚನ 26: 7-9, 12, 16-19

ನೇರವಾಗಿದೆ ಸಜ್ಜನನ ದಾರಿ
ಸುಗಮವಾಗಿದೆ ನಿನ್ನಿಂದ 
ಆತನ ಹಾದಿ.
ನಡೆವೆವು ನಾವುಸರ್ವೇಶ್ವರಾ
ನಿನ್ನ ನೀತಿ ಮಾರ್ಗದೊಳು
ಕಾದಿರುವೆವು ನಿನಗಾಗಿ 
ಭರವಸೆಯಿಟ್ಟು ನಿನ್ನೊಳು;
ನಿನ್ನ ನಾಮಸ್ಮರಣೆಯ ಬಯಕೆ 
ನಮ್ಮ ಅಂತರಾತ್ಮದೊಳು.
ಹಾರೈಸಿದೆ ಎನ್ನಾತ್ಮ 
ನಿನ್ನನು ಇರುಳೊಳು
ಅರಸಿತೆನ್ನ ಮನ 
ನಿನ್ನನು ಮುಂಜಾನೆಯೊಳು.
ನೀನೀಯುವಾಗ ಜಗಕೆ 
ನ್ಯಾಯ ತೀರ್ಪನು
ಕಲಿತುಕೊಳ್ಳುವರು ಭೂನಿವಾಸಿಗಳು ನ್ಯಾಯನೀತಿಯನುಸರ್ವೇಶ್ವರಾ
ನೀಡೆಮಗೆ ಶಾಂತಿ ಸಮಾಧಾನ
ನಮ್ಮ ಸತ್ಕಾರ್ಯಗಳೆಲ್ಲವೂ 
ನಿನ್ನ ಕೃಪಾಸಾಧನ.
ನಿನ್ನಾಶ್ರಯ ಕೋರಿದರುಸರ್ವೇಶ್ವರಾ
ಜನ ಇಕ್ಕಟ್ಟಿಗೆ ಸಿಕ್ಕಿದಾಗ
ಪ್ರಾರ್ಥನೆ ಗೈದರವರು ನಿನ್ನ ಶಿಕ್ಷೆಗೆ ಗುರಿಯಾದಾಗ.
ಹೆರಿಗೆ ಹತ್ತಿರವಾದ ಗರ್ಭಿಣಿ ಚೀರುವಂತೆ
ಯಾತನೆಪಡುವ ಬೇನೆಯಿಂದಾಕೆ ಅರಚುವಂತೆ
ಮಾಡಿರುವೆಸರ್ವೇಶ್ವರಾನಿನಗಾಗಿ ನಾವು ಮೊರೆಯಿಡುವಂತೆ.
ಪ್ರಸವ ವೇದನೆಪಟ್ಟು ನಾವು ಹಡೆದದ್ದು ಗಾಳಿಯನ್ನೆ,
ಆಗಲಿಲ್ಲ ಜಗಕೆ ನಮ್ಮಿಂದ ಯಾವ ರಕ್ಷಣೆ
ನೀಡಲಿಲ್ಲ ನಾವು ಜನ್ಮ ಲೋಕನಿವಾಸಿಗಳಿಗೆ.
ಬದುಕುವರು ನಿಧನರಾದ ನಮ್ಮ ಜನರು
ಜೀವದಿಂದೇಳುವುದು ನಮ್ಮವರ ಶವಗಳು.
ಎದ್ದು ಹರ್ಷಧ್ವನಿಗೈಯಲಿ ನೆಲದಲ್ಲಿ ಬಿದ್ದಿರುವವರು.
ನೀ ಸುರಿಸುವ ಇಬ್ಬನಿ ಜ್ಯೋತಿರ್ಮಯಆದುದರಿಂದ
ಸತ್ತವರು ಪುನರುತ್ಥಾನ ಹೊಂದುವರು ನೆಲದಿಂದ.

ಕೀರ್ತನೆ 102 : 12-14, 15-17

ಶ್ಲೋಕ ದೃಷ್ಟಿಸಿದನು ಪ್ರಭು ತನ್ನ ಉನ್ನತ ಪವಿತ್ರ ಸ್ಥಾನದಿಂದ

ಸಂತ ಮತ್ತಾಯರು ಬರೆದ ಶುಭಸಂದೇಶದಿಂದ ವಾಚನ 11: 28-30

ಆ ಸಮಯದಲ್ಲಿ ಯೇಸುಸ್ವಾಮಿಜನಸಮೂಹವನ್ನುದ್ದೇಶಿಸಿ: “ದುಡಿದುಭಾರಹೊತ್ತುಬಳಲಿ ಬೆಂಡಾಗಿರುವ ಸರ್ವಜನರೇನೀವೆಲ್ಲರೂ ನನ್ನ ಬಳಿಗೆ ಬನ್ನಿರಿನಾನು ನಿಮಗೆ ವಿಶ್ರಾಂತಿ ಕೊಡುತ್ತೇನೆನಾನು ವಿನಯಶೀಲನುದೀನಹೃದಯನುನನ್ನ ನೊಗಕ್ಕೆ ಹೆಗಲುಕೊಟ್ಟು ನನ್ನಿಂದ ಕಲಿತುಕೊಳ್ಳಿಆಗ ನಿಮಗೆ ವಿಶ್ರಾಂತಿ ಸಿಗುವುದುನನ್ನ ನೊಗ ಹಗುರನನ್ನ ಹೊರೆ ಸುಗಮ ಎಂದರು.

No comments:

Post a Comment

11.01.26 - "ಅವರು ನಮಗೆ ಪವಿತ್ರಾತ್ಮ ಅವರಿಂದಲೂ ಅಗ್ನಿಯಿಂದಲೂ ದಿಕ್ಷಾಸ್ನಾನ ಕೊಡುವರು"

ಮೊದಲನೇ ವಾಚನ: ಯೆಶಾಯ 40:1-5, 9-11 (ಯೆಶಾಯ: 41:1-4, 6-7) ನಿಮ್ಮ ದೇವರು ಇಂತೆನ್ನುತ್ತಾರೆ: "ಸಂತೈಸಿ, ನನ್ನ ಜನರನ್ನು ಸಂತೈಸಿರಿ. ಜೆರುಸಲೇಮಿನೊಡನೆ ಪ್ರೀತಿಯ...