ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

02.03.2019 - ದೇವರ ಸಾಮ್ರಾಜ್ಯ ಇಂಥವರದೇ.

ಮೊದಲನೇ ವಾಚನ: ಸಿರಾಖನು 17:1-15

ರ್ವೇಶ್ವರ ಮನುಷ್ಯನನ್ನು ಮಣ್ಣಿನಿಂದ ಸೃಷ್ಟಿಸಿದರು ಪುನಃ ಮಣ್ಣಿಗೇ ಅವನು ಸೇರುವಂತೆ ಮಾಡಿದರು. ಮಾನವನಿಗೆ ನಿಯಮಿತ ಕಾಲಗಳನ್ನೂ ದಿನಗಳನ್ನೂ ನೇಮಿಸಿದರು.  ಭೂಮಿಯ ಮೇಲಿರುವ ಸಕಲದರ ಮೇಲೆ ಅವನಿಗೆ ಅಧಿಕಾರ ವಹಿಸಿದರು. ತಮ್ಮ ಪ್ರತಿರೂಪದಲ್ಲಿಯೇ ಮಾನವನನ್ನು ಸೃಷ್ಟಿಸಿದರು. ಅವನಿಗೆ ಬೇಕಾದ ಶಕ್ತಿಯನು ಅನುಗ್ರಹಿಸಿದರು. ಮಾಡಿದರು ಎಲ್ಲಾ ಜೀವಿಗಳು ಮನುಷ್ಯನಿಗೆ ಭಯಪಡುವಂತೆ ಅಂತೆಯೇ ಮನುಷ್ಯನು ಪಶುಪಕ್ಷಿಗಳ ಮೇಲೆ ಒಡೆತನ ಮಾಡುವಂತೆ ಪಂಚೇಂದ್ರಿಯಗಳನ್ನು ಸರ್ವೇಶ್ವರ ಮನುಷ್ಯನಿಗೆ ದಯಪಾಲಿಸಿದರು. ಆರನೇದಾಗಿ, ತನ್ನ ಬುದ್ಧಿಶಕ್ತಿಯಲ್ಲಿ ಅವನು ಪಾಲುಗಾರನನ್ನಾಗಿ ಮಾಡಿದರು. ಇವುಗಳನ್ನೆಲ್ಲಾ ವಿಚಾರಿಸಿ ಗ್ರಹಿಸಿಕೊಳ್ಳಲು ಏಳನೇ ವರವನ್ನು ನೀಡಿದರು.  ಇದಲ್ಲದೆ, ತಿಳಿದುಕೊಳ್ಳಲು ಅವರಿಗೆ ಬುದ್ದಿಮತಿಯನ್ನು ನೀಡಿದರು. ನಾಲಗೆ, ಕಣ್ಣು, ಕಿವಿ, ಹೃದಯಗಳನ್ನು ದಯಪಾಲಿಸಿದರು. ಜ್ಞಾನವನ್ನೂ ಅರಿವನ್ನೂ ಅವನಲ್ಲಿ ತುಂಬಿಸಿದರು. ಒಳ್ಳೆಯದು ಕೆಟ್ಟದು ಯಾವುದೆಂಬುದನ್ನು ವಿವೇಚಿಸುವಂತೆ ಮಾಡಿದರು. ತನ್ನ ಕಾರ್ಯಗಳ ಮಹತ್ವವನ್ನು ಅವನಿಗೆ ತೋರಿಸಬೇಕೆಂದು ಇರಿಸಿದರು. ಅವನ ಅಂತಃಕರಣದ ಮೇಲೆ ತಮ್ಮ ದೃಷ್ಟಿಯನ್ನು. ತಮ್ಮ ಈ ಎಲ್ಲ ಕಾರ್ಯಗಳನು ಮನುಷ್ಯ ಹೊಗಳುವಂತೆ ಅನುಗ್ರಹಿಸಿದರು. ಸೌಲಭ್ಯವನ್ನು  ಅವನಿಗೆ. ವಂದಿಸುವರು ಜನರು ಆತನ ಪವಿತ್ರ ನಾಮವನು ಹೊಗಳುವರು ಆತನ ಕಾರ್ಯಗಳ ಮಹಿಮೆಯನು. ದಯಪಾಲಿಸಿದನಾತ ಅವರಿಗೆ ವಿವೇಕವನು ಸ್ವಾಸ್ಥ್ಯವಾಗಿ ನೀಡಿದನು ಜೀವದಾಯಕ ಧರ್ಮಶಾಸ್ತ್ರವನ್ನು. ನರರೊಂದಿಗೆ ಮಾಡಿಕೊಂಡನಾತ ಶಾಶ್ವತ ಒಡಂಬಡಿಕೆಯನು ತೋರಿಸಿಕೊಟ್ಟನು ಅವರಿಗೆ ತನ್ನ ವಿಧಿವಚನಗಳನು. ಮಾನವರ ಕಣ್ಣುಗಳು ಕಂಡವು ಆತನ ಮಹಿಮೆಯ ಪ್ರಭಾವವನು ಅವರ ಕಿವಿಗಳು ಕೇಳಿದವು ಆತನ ಧ್ವನಿಯ ಗಾಂಭೀರ್ಯವನು. 'ಎಲ್ಲಾ ದುಷ್ಟಕಾರ್ಯಗಳ ಬಗ್ಗೆ ಎಚ್ಚರಿಕೆ" ಎಂದು ವಿಧಿಸಿದನಾತ ನೆರೆಯವನನ್ನು ಕುರಿತ ನಿಯಮವನು ಆಜ್ಞಾಪಿಸಿದನಾತ ಮನುಷ್ಯರ ಮಾರ್ಗಗಳಿವೆ ನಿತ್ಯವೂ ದೇವರ ಎದುರಿಗೆ ಅವು ಮರೆಯಾಗಿರಲಾರವು ಆತನ ದೃಷ್ಟಿಗೆ.

ಕೀರ್ತನೆ: 103:13-14, 15-16, 17-18

ಶ್ಲೋಕ: ತಂದೆ ಕರುಣೆ ತೋರಿಸುವಂತೆ ಮಕ್ಕಳಿಗೆ, ಕನಿಕರಿಸುವನಾತ ತನಗೆ ಅಂಜುವವರಿಗೆ

ಶುಭಸಂದೇಶ: ಮಾರ್ಕ 10:13-16



ಕೆಲವರು, ತಮ್ಮ ಚಿಕ್ಕಮಕ್ಕಳನ್ನು ಮುಟ್ಟಿ ಹರಸಲೆಂದು ಅವುಗಳನ್ನು ಯೇಸುಸ್ವಾಮಿಯ ಬಳಿಗೆ ಕರೆತಂದರು. ಶಿಷ್ಯರು ಆ ಜನರನ್ನು ಗದರಿಸಿದರು. ಇದನ್ನು ಕಂಡ ಯೇಸು ಸಿಟ್ಟುಗೊಂಡು ಶಿಷ್ಯರಿಗೆ, "ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿ. ಅವರನ್ನು ತಡೆಯಬೇಡಿ; ದೇವರ ಸಾಮ್ರಾಜ್ಯ ಇಂಥವರದೇ. ದೇವರ ಸಾಮ್ರಾಜ್ಯವನ್ನು ಶಿಶುಭಾವದಿಂದ ಅಂಗೀಕರಿಸದೆ ಇರುವವನು ಅದನ್ನು ಎಂದಿಗೂ ಸೇರಲಾರನು, ಇದು ನಿಶ್ಚಯ," ಎಂದರು. ಆನಂತರ ಆ ಮಕ್ಕಳನ್ನು ಅಪ್ಪಿಕೊಂಡು ಅವುಗಳ ಮೇಲೆ ಕೈಗಳನ್ನಿರಿಸಿ ಹರಸಿದರು.

ಮನಸಿಗೊಂದಿಷ್ಟು : ದೇವರ ಸಾಮ್ರಾಜ್ಯವನ್ನು ತಡೆಯಿಲ್ಲದೆ ಪ್ರವೇಶಿಸಬಲ್ಲ ಮಕ್ಕಳಲ್ಲಿರುವಂತಹ 
ಸ್ವಭಾವಗಳಾದರೂ ಏನು? ದೀನತೆ, ಪೋಷರ ಮೇಲಿನ ಅಪರಮಿತ ನಂಬಿಕೆ-ಅವಲಂಬನೆ, ಕೆಟ್ತದರ ಬಗೆಗಿನ ಮರೆವು, ಪ್ರತಿಷ್ಠೆರಹಿತ ಮನಸ್ಸು, ದ್ವೇಷವಿಟ್ಟುಕೊಳ್ಳದ ತಿಳಿ ಮನಸು, ನೋವಿನ ಸಮಯದಲ್ಲಿ ತೆಕ್ಕೆಗೆ ಬೀಳುವ ಮುಗ್ದತೆ ಮುಂತಾದವುಗಳು. ಒಂದು ಮಗುವಿನಂತೆ ನಮ್ಮ ಮನಸು ಈ ಸ್ವಭಾವಗಳಿಗೆ ಹತ್ತಿರವಾದರೆ, ದೇವರಿಗೆ ಅವಲಂಬಿತವಾದರೆ ಸ್ವರ್ಗ ದೂರವಿಲ್ಲ.

ಪ್ರಶ್ನೆ : ನಮ್ಮೊಳಗಿನ ’ಮಗು’ ವಿನ ಪ್ರಮಾಣವೆಷ್ಟು? 

No comments:

Post a Comment