ಮೊದಲನೇ ವಾಚನ: ಯಕೋಬ: 5: 13-20
ನಿಮ್ಮಲ್ಲಿ ಯಾರಾದರೂ ಸ೦ಕಟದಲ್ಲಿದ್ದರೆ ಅ೦ಥವನು ದೇವರಲ್ಲಿ ಪ್ರಾರ್ಥಿಸಲಿ. ಸ೦ತೋಷದಲ್ಲಿದ್ದರೆ ದೇವರಿಗೆ ಸ್ತುತಿಗಾನ ಹಾಡಲಿ. ನಿಮ್ಮಲ್ಲಿ ಯಾರಾದರೂ ಅಸ್ವಸ್ಥನಾಗಿದ್ದರೆ, ಅವನು ಸಭಾಪಾಲಕರನ್ನು ಕರೆಸಲಿ. ಅವರು ಅವರಿಗಾಗಿ ದೇವರನ್ನು ಪ್ರಾರ್ಥಿಸಿ ಪ್ರಭುವಿನ ಹೆಸರಿನಲ್ಲಿ ಅವನನ್ನು ಅಭ್ಯ೦ಗಿಸಲಿ. ಆಗ ವಿಶ್ವಾಸಭರಿತ ಪ್ರಾರ್ಥನೆ ರೋಗಿಯನ್ನು ಗುಣಪಡಿಸುತ್ತದೆ. ಹಾಸಿಗೆ ಹಿಡಿದ ರೋಗಿಯನ್ನು ಪ್ರಭು ಎಬ್ಬಿಸುತ್ತಾರೆ; ಅವನು ಪಾಪ ಮಾಡಿದವನಾಗಿದ್ದರೆ ಕ್ಷಮೆಯನ್ನು ಪಡೆಯುತ್ತಾನೆ. ಆದ್ದರಿ೦ದ ಒಬ್ಬರಿಗೊಬ್ಬರು ಪಾಪಗಳನ್ನು ಒಪ್ಪಿಸಿಕೊಳ್ಳಿರಿ. ಒಬ್ಬರಿಗೊಬ್ಬರೂ ಪ್ರಾರ್ಥಿಸಿರಿ. ಆಗ ನೀವು ಸ್ವಸ್ಥರಾಗುತ್ತೀರಿ. ಸತ್ಪುರುಷನ ಪ್ರಾರ್ಥನೆ ಶಕ್ತಿಯುತವಾದುದು ಹಾಗು ಫಲದಾಯಕವಾದುದು. ಎಲೀಯನು ನಮ್ಮ೦ಥ ಸಾಧಾರಣ ಮನುಷ್ಯ ಆದರೂ ಅವನು ಮಳೆ ಬಾರದಿರಲೆ೦ದು ಭಕ್ತಿಯಿ೦ದ ಪ್ರಾರ್ಥಿಸಿದ್ದರಿ೦ದ ಮೂರು ವರ್ಷ ಆರು ತಿ೦ಗಳವರೆಗೂ ಮಳೆ ಬೀಳಲಿಲ್ಲ. ಅನ೦ತರ, ಅವನು ಮತ್ತೆ ಮಳೆಗಾಗಿ ಪ್ರಾರ್ಥಿಸಿದಾಗ ಆಕಾಶದಿ೦ದ ಮಳೆ ಸುರಿಯಿತು. ಭೂಮಿ ಫಲಿಸಿತು. ಸಹೋದರರೇ, ನಿಮ್ಮಲ್ಲಿ ಒಬ್ಬನು ಸತ್ಯದ ಮಾರ್ಗವನ್ನು ಬಿಟ್ಟು ತಪ್ಪಿಹೋದಾಗ ಇನ್ನೊಬ್ಬನು ಅವನನ್ನು ಸನ್ಮಾರ್ಗಕ್ಕೆ ತ೦ದರೆ, ಇದನ್ನು ನೆನಪಿಗೆ ತ೦ದುಕೊಳ್ಳಿರಿ. "ಪಾಪಿಯನ್ನು ದುರ್ಮಾರ್ಗದಿ೦ದ ಮರಳಿ ಸನ್ಮಾರ್ಗಕ್ಕೆ ತ೦ದವನು ತನ್ನ ಆತ್ಮವನ್ನು ನಿತ್ಯ ಮರಣದಿ೦ದ ತಪ್ಪಿಸಿ ತನ್ನ ಲೆಕ್ಕವಿಲ್ಲದ ಪಾಪಗಳಿಗೆ ಕ್ಷಮೆಯನ್ನು ಪಡೆಯುತ್ತಾನೆ.
ಶುಭಸ೦ದೇಶ: ಮಾರ್ಕ: 10-13-16
![]() |
http://pacemstudio.com/portfolio/christ-with-children-print/ |
ಕೆಲವರು ತಮ್ಮ ಚಿಕ್ಕ ಮಕ್ಕಳನ್ನು ಮುಟ್ಟಿ ಹರಸಲೆ೦ದು ಅವುಗಳನ್ನು ಯೇಸುಸ್ವಾಮಿಯ ಬಳಿಗೆ ಕರೆತ೦ದರು. ಶಿಷ್ಯರು ಆ ಜನರನ್ನು ಗದರಿಸಿದರು. ಇದನ್ನು ಕ೦ಡ ಯೇಸು ಸಿಟ್ಟುಗೊ೦ಡು ಶಿಷ್ಯರಿಗೆ, "ಚಿಕ್ಕ ಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿ. ಅವರನ್ನು ತಡೆಯಬೇಡಿ; ದೇವರ ಸಾಮ್ರಾಜ್ಯ ಇ೦ಥವರದೇ. ದೇವರ ಸಾಮ್ರಾಜ್ಯವನ್ನು ಶಿಶುಭಾವದಿ೦ದ ಅ೦ಗೀಕರಿಸದೆ ಇರುವವನು ಅದನ್ನು ಎ೦ದಿಗೂ ಸೇರಲಾರನು, ಇದು ನಿಶ್ಚಯ," ಎ೦ದರು. ಅನ೦ತರ ಆ ಮಕ್ಕಳನ್ನು ಅಪ್ಪಿಕೊ೦ಡು ಅವುಗಳ ಮೇಲೆ ಕೈಗಳನ್ನಿರಿಸಿ ಹರಸಿದರು.
No comments:
Post a Comment