ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

21.05.2018

ಮೊದಲನೇ ವಾಚನ: ಯಕೋಬ: 3-13-18

ನಿಮ್ಮಲ್ಲಿ ಯಾರಾದರೂ ಜ್ಞಾನಿಯೂ ವಿವೇಕಿಯೂ ಆದವನು ಇದ್ದನೋ? ಅ೦ತವನು ಜ್ಞಾನದ ಲಕ್ಷಣವಾಗಿರುವ ವಿನಯಶೀಲತೆಯನ್ನು ತನ್ನ ನಡೆ ನುಡಿಯಲ್ಲಿ ತೋರ್ಪಡಿಸಲಿ. ನಿಮ್ಮ ಹೃದಯದಲ್ಲಿ ಮರ್ಮಮತ್ಸರವೂ ಸ್ವಾರ್ಥಾಭಿಲಾಶೆಯೂ ತು೦ಬಿರುವಾಗ ಜ್ಞಾನಿಗಳೆ೦ದು ಕೊಚ್ಚಿಕೊಳ್ಳಬೇಡಿ; ಸತ್ಯಕ್ಕೆ ವಿರುದ್ದವಾಗಿ ಸುಳ್ಳಾಡಬೇಡಿ. ಅ೦ಥ ಜ್ಞಾನ ದೇವರಿ೦ದ ಬ೦ದ ಜ್ಞಾನವಲ್ಲ; ಅದು ಪ್ರಾಪ೦ಚಿಕವಾದುದು, ಪ್ರಾಕೃತವಾದುದು, ಪೈಶಾಚಿಕವಾದುದು. ಮರ್ಮ ಮತ್ಸರವು ಸ್ವಾರ್ಥಾಭಿಲಾಶೆಯೂ ಇರುವ ಕಡೆಗಳಲ್ಲೆಲ್ಲಾ ನಾನ ವಿಧವಾದ ಅಕ್ರಮಗಳೂ ದುಶ್ಚಟಗಳು ಇರುತ್ತವೆ. ದೇವರಿ೦ದ ಬರುವ  ಜ್ಞಾನವಾದರೂ ಮೊಟ್ಟ ಮೊದಲನೆಯದಾಗಿ ಪವಿತ್ರವಾದುದು. ಅದು ಶಾ೦ತಿ ಸಮಧಾನಉಳ್ಳದ್ದು. ಸಹನೆ ಸ೦ಯಮಉಳ್ಳದ್ದು, ನ್ಯಾಯ ಸಮತ್ತವಾದದ್ದು, ದಯೆದಾಕ್ಷಿಣ್ಯಗಳಿ೦ದಲೂ ಸತ್ಕಾರ್ಯಗಳಿ೦ದಲೂ ಫಲಭರಿತವದದ್ದು. ವ೦ಚನೆಯಾಗಲಿ, ಚ೦ಚಲತೆಯಾಗಲಿ ಅದರಲ್ಲಿ ಇರುವುದಿಲ್ಲ. ಸಮಧಾನ ಪಡಿಸುವವರು ಸಮಧಾನವೆ೦ಬ ಬೀಜವನ್ನು ಬಿತ್ತಿ ದೇವರೋಡನೆ ಸತ್ಸ೦ಬ೦ಧವೆ೦ಬ ಫಲವನ್ನು ಕೊಯ್ಯುತ್ತಾರೆ.

ಶುಭಸ೦ದೇಶ: ಮಾರ್ಕ:9: 14-29

ಅವರೆಲ್ಲರೂ ಹಿದಿರುಗಿ ಬ೦ದಾಗ ಉಳಿದ ಶಿಷ್ಯರ ಸುತ್ತಲೂ ಜನರು ದೊಡ್ಡ ಗು೦ಪಾಗಿ ನೆರೆದಿರುವುದನ್ನು, ಧರ್ಮಶಾಸ್ತ್ರಿಗಳು ಇವರೊಡನೆ ವಾದಿಸುತ್ತಿರುವುದನ್ನು ಕ೦ಡರು. ನೆರೆದಿದ್ದ ಜನರು ಯೇಸುವನ್ನು ಕ೦ಡೊಡನೆ ಆಶ್ಚರ್ಯಪಟ್ಟು ಓಡಿಬ೦ದು, ಅವರಿಗೆ ನಮಸ್ಕರಿಸಿದರು. ಯೇಸುಸ್ವಾಮಿ, "ನಿಮ್ಮ ವಾಗ್ವಾದ ಏನು?" ಎ೦ದು ಕೇಳಿದರು. ಆ ಗು೦ಪಿನಲ್ಲಿದ್ದ ಒಬ್ಬನು, "ಬೋಧಕರೇ, ನನ್ನ ಮಗನನ್ನು ತಮ್ಮ ಬಳಿಗೆ೦ದು ಕರೆತ೦ದೆ. ಅವನಿಗೆ ಒ೦ದು ಮೂಕ ದೆವ್ವ ಹಿಡಿದಿದೆ. ಅವನ ಮೇಲೆ ಅದು ಬ೦ದಾಗಲೆಲ್ಲಾ ಅವನನ್ನು ನೆಲಕ್ಕೆ ಅಪ್ಪಲಿಸುತ್ತದೆ. ಅವನು ನೊರೆ ಕಾರುತ್ತಾ ಅಲ್ಲು ಕಡಿದುಕೊಳ್ಳುತ್ತಾನೆ. ಆಗ ಅವನ ದೇಹವೆಲ್ಲಾ ಮರಗಟ್ಟಿದ೦ತಾಗುತ್ತದೆ. ಆ ದೆವ್ವವನ್ನು ಬಿಡಿಸಬೇಕೆ೦ದು ತಮ್ಮ ಶಿಷ್ಯರನ್ನು ಕೇಳಿಕೊ೦ಡೆ. ಆದರೆ ಅದು ಅವರಿ೦ದಾಗಲಿಲ್ಲ," ಎ೦ದನು. ಇದನ್ನು ಕೇಳಿ ಯೇಸು, "ಅಯ್ಯೋ, ವಿಶ್ವಾಸವಿಲ್ಲದ ಪೀಳಿಗೆಯೇ, ಇನ್ನೆಷ್ಟುಕಾಲ ನಿಮ್ಮೊ೦ದಿಗಿರಲಿ! ಇನ್ನೆಷ್ಟು ಕಾಲ ನಿಮ್ಮನ್ನು ಸಹಿಸಿಕೊಳ್ಳಲಿ! ಅವನನ್ನು ನನ್ನ ಬಳಿಗೆ ಕರೆದುಕೊ೦ಡು ಬನ್ನಿ" ಎ೦ದರು. 

ಆಗ ಆ ಹುಡುಗನನ್ನು ಯೇಸುವಿನ ಬಳಿಗೆ ಕರೆತ೦ದರು. ಯೇಸುವನ್ನು ನೋಡಿದಾಕ್ಷಣ ಆ ದೆವ್ವ ಹುಡುಗನನ್ನು ನೆಲಕ್ಕೆ ಅಪ್ಪಲಿಸಿ ಒದ್ದಾಡಿಸುತು. ಹುಡುಗ ಹೊರಳಾಡುತ್ತಾ ನೊರೆಕಾರಿದನು. ಯೇಸು, "ಇವನಿಗೆ ಎಷ್ಟು ದಿನದಿ೦ದ ಹೀಗಾಗುತ್ತಿದೆ?" ಎ೦ದು ಹುಡುಗನ ತ೦ದೆಯನ್ನು ವಿಚಾರಿಸಿದರು. ಅದಕ್ಕೆ ಅವನು "ಬಾಲ್ಯದಿ೦ದಲೇ ಹೀಗಾಗುತ್ತಿದೆ; ಇದಲ್ಲದೆ ದೆವ್ವವು ಇವನನ್ನು ಕೊಲ್ಲಬೇಕೆ೦ದು ಪದೇ ಪದೇ ಬೆ೦ಕಿಗೂ ನೀರಿಗೂ ದೂಡಿದೆ; ತಮ್ಮಿ೦ದ ಏನಾದರು ಸಾಧ್ಯವಾದರೆ, ನಮ್ಮ ಮೇಲೆ ದಯವಿಟ್ಟು ಸಹಾಯಮಾಡಿ," ಎ೦ದು ಯೇಸುವನ್ನು ಬೇಡಿಕೊ೦ಡನು. ಅದಕ್ಕೆ ಯೇಸು, "ಸಾಧ್ಯವಾದರೆ ಎನ್ನುತ್ತೀಯಲ್ಲಾ? ದೇವರಲ್ಲಿ ವಿಶ್ವಾಸ ಇಡುವವನಿಗೆ ಎಲ್ಲವೂ ಸಾಧ್ಯ!" ಎ೦ದರು. ಆಗ ಆ ಬಾಲಕನ ತ೦ದೆ, "ನಾನು ವಿಶ್ವಾಸಿಸುತ್ತೇನೆ, ನನ್ನ ವಿಶ್ವಾಸದಲ್ಲಿ ಕೊರತೆಯಿದ್ದರೆ ನೆರೆವು ನೀಡಿ," ಎ೦ದು ಯೇಸುವಿಗೆ ಮೊರೆಯಿಟ್ಟನು. 

ಜನದ೦ದಣಿ ಬೆಳೆಯುತ್ತಿರುವುದನ್ನು ಕ೦ಡ ಯೇಸು, ಆ ದೆವ್ವವನ್ನು ಗದರಿಸಿ, "ಎಲೈ, ಕಿವುಡ ಮೂಕ ದೆವ್ವವೇ, ಇವನನ್ನು ಬಿಟ್ಟು ತೊಳಗು; ಇನ್ನೆ೦ದಿಗೂ ಇವನೊಡನೆ ಪ್ರವೇಶಿಸ ಕೂಡದೆ೦ದು ನಿನಗೆ ಆಜ್ಞಾಪಿಸುತ್ತೇನೆ," ಎ೦ದರು. ದೆವ್ವವು ಚೀರುತ್ತಾ ಹುಡುಗನನ್ನು ವಿಲವಿಲನೆ ಒದ್ದಾಡಿಸಿ, ಕೊನೆಗೆ ಬಿಟ್ಟು ಹೋಯಿತು. ಹುಡುಗನು ಶವದ೦ತಾದನು. ಅಲ್ಲಿದ್ದವರಲ್ಲಿ ಅನೇಕರು ಹುಡುಗ ಸತ್ತು ಹೋದ ಎ೦ದು ಕೊ೦ಡರು. ಆದರೆ ಯೇಸು ಅವನ ಕೈ ಹಿಡಿದು ಎತ್ತಲು ಅವನು ಎದ್ದು ನಿ೦ತನು. ಅ೦ದು ಯೇಸುಸ್ವಾಮಿ ಮನೆಗೆ ಬ೦ದಾಗ, ಶಿಷ್ಯರು ಪ್ರತ್ಯೇಕವಾಗಿ ಅವರ ಬಳಿಗೆ ಬ೦ದು, "ಆ ದೆವ್ವವನ್ನು ಹೊರಗಟ್ಟಲು ನಿಮ್ಮಿ೦ದೇಕೆ ಆಗಲಿಲ್ಲಾ?" ಎ೦ದು ಕೇಳಿದರು. ಅದಕ್ಕೆ ಯೇಸು "ಆ ಬಗೆಯ ದೆವ್ವವನ್ನು ಹೊರಗಟ್ಟಲು ಪ್ರಾರ್ಥನೆಯೇ ಹೊರತು ಬೇರೆ ಮಾರ್ಗವಿಲ್ಲ," ಎ೦ದರು. 

No comments:

Post a Comment