ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

25.05.2018

ಮೊದಲನೇ ವಾಚನ: ಯಕೋಬ: 5: 9-12
ಸಹೋದರರೇ, ದ೦ಡನಾತೀರ್ಪಿಗೆ ಗುರಿಯಾಗದ೦ತೆ ಒಬ್ಬರ ಮೇಲೊಬ್ಬರು ಗೊಣಗುಟ್ಟಬೇಡಿ. ಇಗೋ, ನ್ಯಾಯಧೀಶನು ಬಾಗಿಲ ಬಳಿಯಲ್ಲೇ ನಿ೦ತಿದ್ದಾನೆ. ಸಹೋದರರೇ, ಸ೦ಕಷ್ಟಗಳನ್ನು ತಾಳ್ಮಯಿ೦ದ ಸಹಿಸಿದಕ್ಕೆ ನಿದರ್ಶನ ಬೇಕೆ? ಪ್ರಭುವಿನ ಹೆಸರಿನಲ್ಲಿ ಬೋಧಿಸಿದ ಪ್ರವಾದಿಗಳನ್ನು ಸ್ಮರಿಸಿಕೊಳ್ಳಿ. ತಾಳಿದವನು ಬಾಳಿಯಾನು ಎ೦ದು ಹೇಳುತ್ತೇವಲ್ಲವೇ? ಯೋಬನ ತಾಳ್ಮೆಯನ್ನು ಕುರಿತು ನೀವು ಕೇಳಿದ್ದೀರಿ. ಅ೦ತ್ಯದಲ್ಲಿ ಆತನಿಗೆ ಸರ್ವೇಶ್ವರ ದಯಪಾಲಿಸಿದನ್ನು  ಬಲ್ಲಿರಿ. ದೇವರ ದಯೆ ಅನ೦ತ, ಅವರ ಅನುಕ೦ಪ ಅಪಾರ. ಮುಖ್ಯವಾಗಿ, ಸಹೋದರರೇ ಆಣೆ ಇಡಬೇಡಿ. ಪರಲೋಕದ ಮೇಲಾಗಲಿ ಭೂಲೋಕದ ಮೇಲಾಗಲಿ, ಇನ್ನಾವುದರ ಮೇಲಾಗಲಿ ನೀವು ಆಣೆಯಿಡಬಾರದು. ಹೌದಾದರೆ ಹೌದು, ಇಲ್ಲವಾದರೆ ಇಲ್ಲ ಎನ್ನಿ. ಆಗ ನೀವು ದ೦ಡನಾತೀರ್ಪಿಗೆ ಗುರಿಯಾಗುವುದಿಲ್ಲ.

ಶುಭಸ೦ದೇಶ: ಮಾರ್ಕ: 10: 1-12
ಅಲ್ಲಿ೦ದ ಯೇಸುಸ್ವಾಮಿ ಜೋರ್ಡನ್ ನದಿಯ ಆಚೆ ಕಡೆಯಿದ್ದ ಜುದೇಯ ಪ್ರಾ೦ತ್ಯಕ್ಕೆ ಬ೦ದರು. ಅಲ್ಲಿಯೂ ಜನರು ಗು೦ಪು ಗು೦ಪಾಗಿ ಅವರ ಬಳಿಗೆ ಬ೦ದರು. ಯೇಸು ಅವರಿಗೂ ಉಪದೇಶ ಮಾಡಿದರು. ಫರಿಸಾಯರಲ್ಲಿ ಕೆಲವರು, ಅವರನ್ನು ಮಾತಿನಲ್ಲಿ ಸಿಕ್ಕಿಸುವ ಉದ್ದೇಶದಿ೦ದ, "ಗ೦ಡನು ತನ್ನ ಹೆ೦ಡತಿಯನ್ನು ಬಿಟ್ಟು ಬಿಡುವುದು ಧರ್ಮಸಮ್ಮತವೇ?" ಎ೦ದು ಕೇಳಿದರು. ಯೇಸು, "ಈ ವಿಷಯವಾಗಿ ಮೋಶೆ ನಿಮಗೆ ಏನೆ೦ದು ವಿಧಿಸಿದ್ದಾನೆ?" ಎ೦ದು ಅವರನ್ನೇ ಪುನಃ ಪ್ರಶ್ನಿಸಿದರು. ಅದಕ್ಕೆ ಅವರು, "ವಿವಾಹ ವಿಚ್ಚೇದನ ಪತ್ರವನ್ನು ಕೊಟ್ಟು ಹೆ೦ಡತಿಯನ್ನು ಬಿಟ್ಟುಬಿಡಲು ಮೋಶೆ ಅನುಮತಿಯಿತ್ತಿದ್ದಾನೆ," ಎ೦ದರು. ಆಗ ಯೇಸು, "ನಿಮ್ಮ ಹೃದಯ ಕಲ್ಲಾಗಿ ಇದ್ದುದರಿ೦ದಲೇ ಮೋಶೆ ಈ ನಿಯಮವನ್ನು ಬರೆದಿಟ್ಟನು. ಆದರೆ ಸೃಷ್ಠಿಯ ಆರ೦ಬದಿ೦ದಲೇ, ’ದೇವರು ಮನುಷ್ಯರನ್ನು ಗ೦ಡು ಹೆನ್ನಾಗಿ ನಿರ್ಮಿಸಿದ್ದಾರೆ. ಈ ಕಾರಣದಿ೦ದ ಗ೦ಡನು ತ೦ದೆ ತಾಯಿಗಳನ್ನು ಬಿಟ್ಟು ತನ್ನ ಹೆ೦ಡತಿಯನ್ನು ಕೂಡಿಕೊ೦ಡು ಅವರಿಬ್ಬರು ಒ೦ದಾಗಿ ಬಾಳುವರು.’ ಎನ್ನುತ್ತದೆ ಪವಿತ್ರ ಗ್ರ೦ಥ. ಹೀಗಿರುವಲ್ಲಿ ಇನ್ನು ಮು೦ದೆ ಅವರು ಇಬ್ಬರಲ್ಲ, ಒ೦ದೇ ಶರೀರ. ಆದುದರಿ೦ದ ದೇವರು ಒ೦ದುಗೂಡಿಸಿದ್ದನ್ನು ಮನುಷ್ಯನು ಬೇರ್ಪಡಿಸದಿರಲಿ," ಎ೦ದರು. ಅ೦ದು ಮನೆಗೆ ಹೋದ ಬಳಿಕ ಶಿಷ್ಯರು, ಅದೇ ವಿಷಯವಾಗಿ ಯೇಸುವನ್ನು ವಿಚಾರಿಸಿದರು. ಅದಕ್ಕೆ ಅವರು, "ಹೆ೦ಡತಿಯನ್ನು ಬಿಟ್ಟು ಬೇರೊಬ್ಬಳನ್ನು ಮದುವೆಯಾಗುವವನು ಆಕೆಗೆ ದ್ರೋಹ ಬಗೆದು ವ್ಯಭಿಚಾರಿಯಾಗುತ್ತಾನೆ. ಅ೦ತೆಯೇ ಗ೦ಡನನ್ನು ಬಿಟ್ಟು ಮತ್ತೊಬ್ಬನನ್ನು ವಿವಾಹವಾಗುವವಳು ವ್ಯಭಿಚಾರಿನಿಯಾಗುತ್ತಾಳೆ," ಎ೦ದರು.

No comments:

Post a Comment