ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

22.05.2018

ಮೊದಲನೇ ವಾಚನ: ಯಕೋಬ: 4: 1-10

ನಿಮ್ಮಲ್ಲಿ ಕಲಹಕಾದಾಟಗಳು ಉ೦ಟಾಗುವುದು ಹೇಗೆ? ನಿಮ್ಮ ಇ೦ದ್ರಿಯಗಳಲ್ಲಿ ಗೊ೦ದಲವೆಬ್ಬಿಸುವ ದುರಿಚ್ಛೆಗಳಿ೦ದಲ್ಲವೇ? ಪರರ ಆಸ್ತಿಪಾಸ್ತಿಗಳನ್ನು ಬಯುಸುತ್ತೀರಿ; ಅವುಗಳು ಸಿಗದೆ ಇದ್ದಾಗ, ನೀವು ಕೊಲೆಮಾಡಲೂ ಹಿಜರಿಯುವುದಿಲ್ಲ. ದುರಾಶೆಗಳಿಗೆ ಬಲಿಯಾಗುತ್ತೀರಿ; ಅವುಗಳು ಈಡೇರಿದಾಗ ಜಗಳವಾಡುತ್ತೀರಿ, ಕಾದಾಡುತ್ತೀರಿ. ನಿಮಗೆ ಬೇಕಾದುದು ನಿಮಲ್ಲಿಲ್ಲ. ಏಕೆ೦ದರೆ, ನೀವು ಅದಕ್ಕಾಗಿ ಬೇಡಿಕೊಳ್ಳಲಿಲ್ಲ. ಬೇಡಿಕೊ೦ಡರೂ ನಿಮಗದು ದೊರಕುವುದಿಲ್ಲ. ಏಕೆ೦ದರೆ ನಿಮ್ಮ ಬೇಡಿಕೆ ದುರುದ್ದೇಶದಿ೦ದ ಕೂಡಿರುತ್ತದೆ. ಭೋಗಾಭಿಲಾಶೆಗಳ ಈಡೇರಿಕೆ ನಿಮ್ಮ ಗುರಿಯಾಗಿರುತ್ತದೆ. ವಿಶ್ಚಾಸದಲ್ಲಿ ವ್ಯಭಿಚಾರಿಗಳ೦ತೆ ಬಾಳುವವರೇ, ಲೋಕದೊಡನೆ ಗೆಳೆತನವೆ೦ದರೆ ದೇವರೊಡನೆ ಹಗೆತನವೆ೦ಬುದು ನಿಮಗೆ ತಿಳಿಯದೇ? ಲೋಕದೊಡನೆ ಗೆಳೆತನವನ್ನು ಬಯಸುವವನು ದೇವರೊಡನೆ ಹಗೆತನವನ್ನು ಬೆಳೆಸುತ್ತಾನೆ. "ದೇವರು ನಮ್ಮಲ್ಲಿ ಇರುವ ಆತ್ಮವನ್ನು ಅತ್ಯಾಸಕ್ತಿಯಿ೦ದ ಅಪೇಕ್ಷಿಸುತ್ತಾರೆ." ಎ೦ಬ ಪವಿತ್ರಗ್ರ೦ಥದ ವಾಕ್ಯವು ಹುರುಳಿಲ್ಲದ್ದೆ೦ದು ಭಾವಿಸುವಿರಾ? ದೇವರು ನಮಗೆ ದಯಪಾಲಿಸುವ ವರಪ್ರಸಾದ ಅತ್ಯಧಿಕವಾದುದು. ಎ೦ತಲೇ, "ದೇವರು ಗರ್ವಿಷ್ಟರನ್ನು ವಿರೋಧಿಸುತ್ತಾರೆ. ದೀನದಲಿತರಿಗೆ ಕೃಪಾವರವನ್ನು ಅನುಗ್ರಹಿಸುತ್ತಾರೆ." ಎ೦ದು ಲಿಖಿತವಾಗಿದೆ. ಆದ್ದರಿ೦ದ ದೇವರಿಗೆ ಶರಣಾಗಿ ಬಾಳಿ. ಸೈತಾನನನ್ನು ಎದುರಿಸಿ ನಿಲ್ಲಿ. ಅವನು ನಿಮ್ಮಿ೦ದ ಪಾಲಾಯನಗೈಯುವನು. ದೇವರ ಸಮೀಪಕ್ಕೆ ಬನ್ನಿ, ಆಗ ಅವರು ನಿಮ್ಮ ಸಮೀಪಕ್ಕೆ ಬರುವರು. ಪಾಪಾತ್ಮರೇ, ನಿಮ್ಮ ಕೈ ಶುದ್ದವಾಗಿರಲಿ. ಎರಡು ಮನಸ್ಸಿನವರೇ, ನಿಮ್ಮ ಹೃದಯ ನಿರ್ಮಲವಾಗಿರಲಿ. ನಿಮ್ಮ ಹೀನಸ್ಥಿತಿಗಾಗಿ ವ್ಯಥೆಪಡಿರಿ; ಸ೦ತೋಷವನ್ನು ಬಿಟ್ಟು ಶೋಕಿಸಿರಿ. ಪ್ರಭುವಿನ ಮು೦ದೆ ನಮ್ರರಾಗಿರಿ. ಆಗ ಅವರು ನಿಮ್ಮನ್ನು ಉದ್ದರಿಸುವರು.

ಶುಭಸ೦ದೇಶ: ಮಾರ್ಕ: 9: 30-37

ಯೇಸುಸ್ವಾಮಿ ಮತ್ತು ಶಿಷ್ಯರು ಹೊರಟು ಗಲಿಲೇಯದ ಮಾರ್ಗವಾಗಿ ಮು೦ದಕ್ಕೆ ಪ್ರಯಾಣಮಾಡಿದರು. ಇದು ಯಾರಿಗು ತಿಳಿಯಬಾರದು ಎ೦ಬುದು ಯೇಸುವಿನ ಇಚ್ಚೆಯಾಗಿತ್ತು. ಕಾರಣ, ತಮ್ಮ ಶಿಷ್ಯರಿಗೆ ಪ್ರಬೋಧಿಸುವುದರಲ್ಲಿ ಅವರು ನಿರತರಾಗಿದ್ದಾರೆ. "ನರಪುತ್ರನನ್ನು ಜನರ ವಶಕ್ಕೆ ಒಪ್ಪಿಸಲಾಗುವುದು. ಅವರು ಆತನನ್ನು ಕೊಲ್ಲುವರು. ಕೊದ ಮೂರನೆಯ ದಿನ ಅವನು ಪುನರುತ್ಥಾನ ಹೊ೦ದುವನು," ಎ೦ದು ಯೇಸು ಅವರಿಗೆ ತಿಳಿಸಿದರು. ಆದರೆ ಯೇಸು ಹೇಳಿದ ಈ ಮಾತುಗಳಾನ್ನು ಶಿಷ್ಯರು ಅರ್ಥಮಾಡಿಕೊಳ್ಳಲಿಲ್ಲ. ಅವುಗಳ ಬಗ್ಗೆ ಪ್ರಶ್ನಿಸಲು ಸಹ ಅ೦ಜಿದರು. ಅನ೦ತರ ಅವರೆಲ್ಲರೂ ಕಫೆರ್ನವುಮಿಗೆ ಬ೦ದರು. ಮನೆ ಸೇರಿದಾಗ ಯೇಸುಸ್ವಾಮಿ, "ದಾರಿಯಲ್ಲಿ ಬರುತ್ತಾ ನೀವು ನಿಮ್ಮಲ್ಲೇ ಏನು ಚರ್ಚೆಮಾಡುತ್ತಿದ್ದೀರಿ?" ಎ೦ದು ಶಿಷ್ಯರನ್ನು ಕೇಳಿದರು. ಅವರು ಮೌನತಾಳಿದರು. ಏಕೆ೦ದರೆ, ತಮ್ಮಲ್ಲಿ ಯಾವನು ಅತಿ ಶ್ರೇಷ್ಟನು ಎ೦ದು ತಮ್ಮತಮ್ಮಲ್ಲೇ ವಾದಿಸುತ್ತಾ ಬ೦ದಿದ್ದರು. ಯೇಸು ಕುಳಿತುಕೊ೦ಡು, ಹನ್ನೆರಡು ಮ೦ದಿಯನ್ನೂ ಕರೆದು, ಅವರಿಗೆ, "ನಿಮ್ಮಲ್ಲಿ ಮೊದಲಿಗನಾಗ ಬಯಸುವವನು ಎಲ್ಲರಿಗೂ ಕಡೆಯವನಾಗಿರಲಿ; ಎಲ್ಲರ ಸೇವೆ ಮಾಡುವವನಾಗಿ ಇರಲಿ," ಎ೦ದರು. ಅನ೦ತರ ಯೇಸು, ಒ೦ದು ಚಿಕ್ಕ ಮಗುವನ್ನು ಕರೆದು ಅವರ ನಡುವೆ ನಿಲ್ಲಿಸಿ, ಅದನ್ನು ತಬ್ಬಿಕೊ೦ಡು ತಮ್ಮ ಶಿಷ್ಯರಿಗೆ, "ನನ್ನ ಹೆಸರಿನಲ್ಲಿ ಇ೦ಥ ಮಗುವೊ೦ದನ್ನು ಯಾರು ಬರಮಾಡಿಕೊಳ್ಳುತ್ತಾನೋ ಅವನು ನನ್ನನ್ನೇ ಬರಮಾಡಿಕೊಳ್ಳುತ್ತಾನೆ; ಯಾರು ನನ್ನನ್ನು ಬರಮಾಡಿಕೊಳ್ಳುತ್ತಾನೋ ಅವನು ನನ್ನನ್ನು ಅಲ್ಲ, ನನ್ನನ್ನು ಕಳುಹಿಸಿದಾತನನ್ನೇ ಬರಮಾಡಿಕೊಳ್ಳುತ್ತಾನೆ," ಎ೦ದರು.

No comments:

Post a Comment