ಮೊದಲನೆಯ ವಾಚನ: ಸಿರಾಖನ ಗ್ರಂಥದಿಂದ ಇಂದಿನ ವಾಚನ 17:1-15
ಸರ್ವೇಶ್ವರ ಮನುಷ್ಯನನ್ನು ಮಣ್ಣಿನಿಂದ ಸೃಷ್ಟಿಸಿದರು. ಪುನಃ ಮಣ್ಣಿಗೇ ಅವನು ಸೇರುವಂತೆ ಮಾಡಿದರು. ಮಾನವನಿಗೆ ನಿಯಮಿತ ಕಾಲಗಳನ್ನೂ ದಿನಗಳನ್ನೂ ನೇಮಿಸಿದರು. ಭೂಮಿಯ ಮೇಲಿರುವ ಸಕಲದರ ಮೇಲೆ ಅವನಿಗೆ ಅಧಿಕಾರವಹಿಸಿದರು. ತಮ್ಮ ಪ್ರತಿರೂಪದಲ್ಲಿಯೇ ಮಾನವನನ್ನು ಸೃಷ್ಟಿಸಿದರು. ಅವನಿಗೆ ಬೇಕಾದ ಶಕ್ತಿಯನು ಅನುಗ್ರಹಿಸಿದರು. ಮಾಡಿದರು ಎಲ್ಲಾ ಜೀವಿಗಳು ಮನುಷ್ಯನಿಗೆ ಭಯಪಡುವಂತೆ, ಅಂತೆಯೇ ಮನುಷ್ಯನು ಪಶುಪಕ್ಷಿಗಳ ಮೇಲೆ ಒಡೆತನ ಮಾಡುವಂತೆ ಪಂಚೇಂದ್ರಿಯಗಳನ್ನು ಸರ್ವೇಶ್ವರ ಮನುಷ್ಯನಿಗೆ ದಯಪಾಲಿಸಿದರು. ತನ್ನ ಬುದ್ಧಿಶಕ್ತಿಯಲ್ಲಿ ಅವನು ಪಾಲುಗಾರನನ್ನಾಗಿ ಮಾಡಿದರು. ಇವುಗಳನ್ನೆಲ್ಲಾ ವಿಚಾರಿಸಿ ಗ್ರಹಿಸಿಕೊಳ್ಳಲು ವರವನ್ನು ನೀಡಿದರು. ಇದಲ್ಲದೆ, ತಿಳಿದುಕೊಳ್ಳಲು ಅವರಿಗೆ ಬುದ್ಧಿಮತಿಯನ್ನು ನಿಡಿದರು. ನಾಲಗೆ, ಕಣ್ಣು, ಕಿವಿ, ಹೃದಯಗಳನ್ನು ದಯಪಾಲಿಸಿದರು. ಜ್ಞಾನವನ್ನೂ ಅರಿವನ್ನೂ ಅವನಲ್ಲಿ ತುಂಬಿಸಿದರು. ಒಳ್ಳೆಯದು ಕೆಟ್ಟದು ಯಾವುದೆಂಬುದನ್ನು ವಿವೇಚಿಸುವಂತೆ ಮಾಡಿದರು. ತನ್ನ ಕಾರ್ಯಗಳ ಮಹತ್ವವನ್ನು ಅವನಿಗೆ ತೋರಿಸಬೇಕೆಂದು ಇರಿಸಿದರು. ಅವನ ಅಂತಃಕರಣದ ಮೇಲೆ ತಮ್ಮ ದೃಷ್ಟಿಯನು. ತಮ್ಮ ಈ ಎಲ್ಲ ಕಾರ್ಯಗಳನು ಮನುಷ್ಯ ಹೊಗಳುವಂತೆ, ಅನುಗ್ರಹಿಸಿದರು ಸೌಲಭ್ಯವನ್ನು ಅವನಿಗೆ. ವಂದಿಸುವರು ಜನರು ಆತನ ಪವಿತ್ರ ನಾಮವನು, ಹೊಗಳುವರು ಆತನ ಕಾರ್ಯಗಳ ಮಹಿಮೆಯನು. ದಯಪಾಲಿಸಿದನಾತ ಅವರಿಗೆ ವಿವೇಕವನು, ಸ್ವಾಸ್ತ್ಯವಾಗಿ ನೀಡಿದನು ಜೀವದಾಯಕ ಧರ್ಮಶಾಸ್ತ್ರವನು. ನರರೊಂದಿಗೆ ಮಾಡಿಕೊಂಡನಾತ ಶಾಶ್ವತ ಒಡಂಬಡಿಕೆಯನು, ತೋರಿಸಿಕೊಟ್ಟನು ಅವರಿಗೆ ತನ್ನ ವಿಧಿವಚನಗಳನು. ಮಾನವರ ಕಣ್ಣುಗಳು ಕಂಡವು ಆತನ ಮಹಿಮೆಯ ಪ್ರಭಾವವನು, ಅವರ ಕಿವಿಗಳು ಕೇಳಿದವು ಆತನ ಧ್ವನಿಯ ಗಾಂಭೀರ್ಯವನು. 'ಎಲ್ಲಾ ದುಷ್ಟಕಾರ್ಯಗಳ ಬಗ್ಗೆ ಎಚ್ಚರಿಕೆ " ಎಂದು ವಿಧಿಸಿದನಾತ, ನೆರೆಯವನನ್ನು ಕುರಿತ ನಿಯಮವನು ಆಜ್ಞಾಪಿಸಿದನಾತ, ಮನುಷ್ಯರ ಮಾರ್ಗಗಳಿವೆ ನಿತ್ಯವೂ ದೇವರ ಎದುರಿಗೆ, ಅವು ಮರೆಯಾಗಿರಲಾರವು ಆತನ ದೃಷ್ಟಿಗೆ.
ಕೀರ್ತನೆ: 103 : 13-18
ಶ್ಲೋಕ: ಭಯಭಕ್ತರಿಗೆ ಪ್ರಭುವಿನ ಪ್ರೀತಿಯಾದರೋ ಯುಗಯುಗಾಂತರಕು.
ತಂದೆ ಕರುಣೆ ತೋರಿಸಿದಂತೆ ಮಕ್ಕಳಿಗೆ|
ಕನಿಕರಿಸುವನಾತ ತನಗೆ ಅಂಜುವವರಿಗೆ||
ಏಕೆನೆ, ನಮ್ಮ ಸ್ವಭಾವವನು ಆತನು ಬಲ್ಲ|
ನಾವು ಹುಡಿ ಮಣ್ಣೆಂದವನಿಗೆ ತಿಳಿದಿದೆಯಲ್ಲಾ||
ಮಾನವನ ಆಯುಷ್ಕಾಲ ಹುಲ್ಲಿಗೆ ಸಮಾನ|
ಹೊಲದ ಹೂವಿನಂತೆ ಅವನ ಬೆಡಗು ಬಿನ್ನಾಣ||
ಬಿದ್ದು ಹೋಗುವುದಾ ಹೂವು ಗಾಳಿಯ ಬಡಿತಕ್ಕೆ|
ಅದರ ವಿಧಿನಿಯಮಗಳು ನೆನಪಿನಲ್ಲಿಟ್ಟು ನಡೆವವರಿಗೆ||
ಭಯಭಕ್ತರಿಗೆ ಪ್ರಭುವಿನ ಪ್ರೀತಿಯಾದರೋ ಯುಗಯುಗಾಂತರಕು|
ಅವರ ಮಕ್ಕಳ ಮಕ್ಕಳಿಗೆ ಆತನ ನೀತಿಯು ತಲೆತಲಾಂತರಕು||
ಅಂತೆಯೇ ಆತನ ನಿಬಂಧನೆಗಳನು ಕೈಗೊಳ್ಳುವವರಿಗೆ|
ಆತನ ವಿಧಿನಿಯಮಗಳು ನೆನಪಿನಲ್ಲಿಟ್ಟು ನಡೆವವರಿಗೆ||
ಘೋಷಣೆ ಕೀರ್ತನೆ 27:11
ಅಲ್ಲೆಲೂಯ, ಅಲ್ಲೆಲೂಯ!
ಬೋಧಿಸೆನಗೆ ಪ್ರಭೂ, ನಿನ್ನ ಮಾರ್ಗವನು | ಶತ್ರುರಹಿತ ಹಾದಿಯಲಿ ನಡೆಸು ಎನ್ನನು ||
ಅಲ್ಲೆಲೂಯ!
ಶುಭಸಂದೇಶ: ಮಾರ್ಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ: 10:13-18
ಆ ಕಾಲದಲ್ಲಿ ಕೆಲವರು, ತಮ್ಮ ಚಿಕ್ಕಮಕ್ಕಳನ್ನು ಮುಟ್ಟಿ ಹರಸಲೆಂದು ಅವುಗಳನ್ನು ಯೇಸುವಿನ ಬಳಿಗೆ ಕರೆತಂದರು. ಶಿಷ್ಯರು ಆ ಜನರನ್ನು ಗದರಿಸಿದರು. ಇದನ್ನು ಕಂಡ ಯೇಸು ಸಿಟ್ಟುಗೊಂಡು ಶಿಷ್ಯರಿಗೆ, "ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿ. ಅವರನ್ನು ತಡೆಯಬೇಡಿ; ದೇವರ ಸಾಮ್ರಾಜ್ಯ ಇಂಥವರದೇ. ದೇವರ ಸಾಮ್ರಾಜ್ಯವನ್ನು ಶಿಶುಭಾವದಿಂದ ಅಂಗೀಕರಿಸದೆ ಇರುವವನು ಅದನ್ನು ಎಂದಿಗೂ ಸೇರಲಾರನು, ಇದು ಶಿಶ್ಚಯ, "ಎಂದರು. ಅನಂತರ ಆ ಮಕ್ಕಳನ್ನು ಅಪ್ಪಿಕೊಂಡು ಅವುಗಳ ಮೇಲೆ ಕೈಗಳನ್ನಿರಿಸಿ ಹರಸಿದರು.
No comments:
Post a Comment