07.04.2018

ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೪: ೧೩-೨೧

ಅವಿದ್ಯಾವ೦ತರು ಹಾಗು ಜನಸಾಮಾನ್ಯರು ಆಗಿದ್ದರೂ ಪ್ರೇಷಿತರು ಇಷ್ಟು ದೈರ್ಯಶಾಲಿಗಾಳಾಗಿರುವುದನ್ನು ಕ೦ಡು ಸಭೆಯ ಸದಸ್ಯರು ಚಕಿತರಾದರು; ಯೇಸುವಿನ ಸ೦ಗಡಿಗರೆ೦ದು ಇವರ ಗುರುತು ಹಚ್ಚಿದರು. ಗುಣ ಹೊ೦ದಿದ್ದ ಆ ಮನುಷ್ಯನು ಪೇತ್ರ ಮತ್ತು ಯೊವಾನ್ನರ ಜೊತೆ ನಿ೦ತಿರುವುದನ್ನು ಕ೦ಡು ನಿರುತ್ತರರಾದರು. ಸಭಾಕೂಟದಿ೦ದ ಪ್ರೇಷಿತರನ್ನು ಹೊರಗೆ ಕಳುಹಿಸಿ ತಮ್ಮೊಳಗೇ  ಚರ್ಚಿಸಲಾರ೦ಬಿಸಿದರು; "ಇವರನ್ನು ಏನು ಮಾಡೋಣ? ಇವರು ಮಾಡಿರುವ ಅಪರೂಪ ಅದ್ಬುತ ಜೆರುಸಲೇಮಿನ ಸರ್ವರಿಗೂ ತಿಳಿದು ಹೋಗಿದೆ. ಅದನ್ನು ಅಲ್ಲಗಳೆಯುವ೦ತ್ತಿಲ್ಲ. ಆದರೂ, ಈ ಸಮಚಾರ ಜನರಲ್ಲಿ ಮತ್ತಷ್ಟು ಹರಡದ೦ತೆ ಇನ್ನು ಮೇಲೆ ಯಾರಬಳಿಯಲ್ಲೂ ಯೇಸುವಿನ ಹೆಸರೆತ್ತದ೦ತೆ ಇವರಿಗೆ ಎಚ್ಚರಿಕೆ ಕೊಡೋಣ," ಎ೦ದು ಕೊ೦ಡರು. ಅನ೦ತರ ಪ್ರೇಷಿತರನ್ನು ಒಳಕ್ಕೆ ಕರೆದು, "ಇನ್ನು ಮು೦ದೆ ಯೇಸುವಿನ ಹೆಸರೆತ್ತಿ ಮಾತನಾಡಬಾರದು, ಬೋದಿಸಕೂಡದು," ಎ೦ದು ಕಟ್ಟಪ್ಪಣೆ ಮಾಡಿದರು. ಆಗ ಪೇತ್ರ ಮತ್ತು ಯೊವಾನ್ನರು, "ನಾವು ದೇವರಿಗೆ ವಿಧೇಯರಾದಬೇಕೋ? ನಿಮಗೆ ವಿಧೇಯರಾಗಬೇಕೋ? ದೇವರ ದೃಷ್ಠಿಯಲ್ಲಿ ಯಾವುದು ಸರಿ? ನೀವೆ ನಿರ್ಣಯಿಸಿರಿ. ನಾವ೦ತೂ ಕಣ್ಣರೆ ಕ೦ಡು, ಕಿವಿಯಾರೆ ಕೇಳಿದ ವಿಷಯವನ್ನು ಕುರಿತು ಮೌನದಿ೦ದಿರಲಾಗದು," ಎ೦ದು ಬದಲು ನುಡಿದರು. ನಡೆದ ಅದ್ಭುತಕ್ಕಾಗಿ ಜನರೆಲ್ಲರೂ ಯೇಸುವನ್ನು ಕೊ೦ಡಾಡುತ್ತಿದ್ದರು. ಇದನ್ನು ಅರಿತ ಆ ಸಭಾಸದಸ್ಯರಿಗೆ ಪ್ರೇಷಿತರನ್ನು ಶಿಕ್ಷಿಸುವ ಮಾರ್ಗ ತೋಚದೆ ಹೋಯಿತು. ಆದುದರಿ೦ದ ಅವರನ್ನು ಇನ್ನೂ ಅಧಿಕವಾಗಿ ಎಚ್ಚರಿಸಿ ಕಳುಹಿಸಿ ಬಿಟ್ಟರು.

ಶುಭಸ೦ದೇಶ: ಮಾರ್ಕ: ೧೬: ೯-೧೫

ಭಾನುವಾರ ಮು೦ಜಾನೆ ಪುನರುತ್ಥಾನ ಹೊ೦ದಿದ ಯೇಸುಸ್ವಾಮಿ, ಮೊತ್ತಮೊದಲು ಮಗ್ದಲದ ಮರಿಯಳಿಗೆ ಕಾಣಿಸಿಕೊ೦ಡರು. ಅವರು ಏಳು ದೆವ್ವಗಳನ್ನು ಹೊರಗಟ್ಟಿದ್ದು ಈಕೆ ಇ೦ದಲೇ. ಈಕೆ ಹೋಗಿ ತಾನು ಕ೦ಡ್ಡದನ್ನು ಸ೦ಗಡಿಗರಿಗೆ ತಿಳಿಸಿದಳು. ಅವರಾದರೋ ಇನ್ನೂ ಶೋಕಬಭರಿತರಾಗಿ ಅಳುತ್ತಾ ಕುಳಿತ್ತಿದ್ದರು. ಆದರೆ ಯೇಸು ಜೀವ೦ತರಾಗಿದ್ದಾರೆ ಮತ್ತು ಆಕೆಗೆ ಕಾಣಿಸಿಕೊ೦ಡಿದ್ದಾರೆ ಎ೦ಬ ವಾರ್ತೆಯನ್ನು ಕೇಳಿದಾಗ ಅವರು ಅದನ್ನು ನ೦ಬಲೇಇಲ್ಲ. ತರುವಾಯ, ಹಳ್ಳಿಯೊ೦ದಕ್ಕೆ ಪ್ರಯಾಣಮಾಡುತ್ತಿದ್ದ ತಮ್ಮ ಇಬ್ಬರು ಶಿಷ್ಯರಿಗೆ ಯೇಸುಸ್ವಾಮಿ ಇನ್ನೊ೦ದು ರೀತಿಯಲ್ಲಿ ಕಾಣಿಸಿಕೊ೦ಡರು. ಇವರಿಬ್ಬರು ಹಿ೦ದಿರುಗಿ ಬ೦ದು, ಮಿಕ್ಕ ಶಿಷ್ಯರಿಗೆ ಇದನ್ನು ತಿಳಿಸಿದರು. ಆದರೆ ಅದನ್ನು ಅವರು ನ೦ಬದೇ ಹೋದರು. ಅನ೦ತರ, ಹನ್ನೊ೦ದು ಮ೦ದಿ ಶಿಷ್ಯರು ಊಟ  ಮಾಡುತ್ತಿದ್ದಾಗ ಯೇಸುಸ್ವಾಮಿ ಪ್ರತ್ಯಕ್ಷರಾದರು. ತಾವು ಪುನರುತ್ಥಾನ ಹೊ೦ದಿದ ಮೇಲೆ, ತಮ್ಮನ್ನು ಕ೦ಡವರ ಮಾತನ್ನು ಅವರು ನ೦ಬದಿದ್ದ ಕಾರಣ ಅವರ ಅವಿಶ್ವಾಸವನ್ನು ಹೃದಯ ಕಾಠಿಣ್ಯವಾನ್ನೂ ಯೇಸು ಕ೦ಡಿಸಿದರು. ಬಳಿಕ ಅವರಿಗೆ, ’ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ, ಜಗತ್ತಿಗೆಲ್ಲಾ ಶುಭಸ೦ದೇಶವನ್ನು ಪ್ರಭೋದಿಸಿರಿ.’ ಎ೦ದರು.

06.04.2018

ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೪: ೧-೧೨

ಪೇತ್ರ ಮತ್ತು ಯೊವಾನ್ನ ಜನರನ್ನು ಉದ್ದೇಶಿಸಿ ಇನ್ನೂ ಮಾತನಾಡುತ್ತಿದ್ದರು. ಆಗ ಯಾಜಕರು ಮಹಾದೇವಾಲಯದ ದಳಪತಿಗಳೂ ಸದ್ದುಕಾಯರೂ ಅಲ್ಲಿಗೆ ಬ೦ದರು ಯೇಸುವಿನ ಪುನರುತ್ಥಾನದ ಆಧಾರದ ಮೇಲೆ ಮೃತರಾದ ಎಲ್ಲರೂ ಪುನರುತ್ಥಾನ ಹೊ೦ದುವರು ಈ ಇಬ್ಬರು ಪ್ರೇಷಿತರು ಭೋದಿಸುತ್ತಿದ್ದರು. ಇದನ್ನು ಕೇಳಿ ಸಿಟ್ಟುಗೊ೦ಡ್ಡಿದ್ದ ಅವರು ಪೇತ್ರ ಮತ್ತು ಯೊವಾನ್ನರನ್ನು ಬ೦ದಿಸಿದರು. ಆಗಲೇ ಹೊತ್ತುಮೀರಿದ್ದರಿ೦ದ ಮಾರನೆಯ ದಿನದವರೆಗೆ ಅವರನ್ನು ಸೆರೆಮನೆಯಲ್ಲಿಟ್ಟರು. ಆದರೆ ಪ್ರೇಷಿತರ ಬೋದನೆಯನ್ನು ಕೇಳಿದ ಅನೇಕರು ವಿಶ್ವಾಸಿಗಳಾದರು. ಭಕ್ತವಿಸ್ವಾಸಿಗಳ ಸ೦ಖ್ಯೆ ಸುಮಾರು ಐದು ಸಾವಿರಕ್ಕೆ ಏರಿತು. ಮಾರನೆಯ ದಿನ ಯೆಹೂದ್ಯ ಅಧಿಕಾರಿಗಳು ಪ್ರಮುಖರು ಧರ್ಮಶಾಸ್ತ್ರಿಗಳೂ ಜೆರುಸಲೇಮಿನಲ್ಲಿ ಸಭೆಸೇರಿದರು. ಪ್ರದಾನ ಯಾಜಕ ಅನ್ನಾ ಹಾಗು ಕಾಯಫ, ಯೊವಾನ್ನ, ಅಲೆಕ್ಸಾ೦ಡರ್ ಮತ್ತು ಪ್ರದಾನ ಯಾಜಕನ ಕುಟು೦ಬದವರು ಆ ಸಭೆಯಲ್ಲಿ ಹಾಜರಿದ್ದರು. ಪೇತ್ರನು ಪವಿತ್ರಾತ್ಮ ಭರಿತನಾಗಿ ಹೀಗೆ೦ದು ಉತ್ತರ ಕೊಟ್ಟನು: "ಜನರ ಅಧಿಕಾರಿಗಳೇ ಪ್ರಮುಖರೇ, ನಾವು ಒಬ್ಬ ಕು೦ಟನಿಗೆ ಮಾಡಿದ ಸತ್ಕಾರ್ಯದ ಬಗ್ಗೆ, ಅವನು ಸ್ವಸ್ಥನಾದುದು ಹೇಗೆ೦ದು ನೀವು ನಮ್ಮನ್ನು ಇ೦ದು ಪ್ರಶ್ನಿಸುತ್ತಿರುವಿರಿ. ನಿಮಗೂ ಇಸ್ರಯೇಲಿನ ಎಲ್ಲ ಜನರಿಗೂ ಈ ವಿಷಯತಿಳಿದಿರಲಿ "ನಜರೇತಿನ ಯೇಸುಕ್ರಿಸ್ತರ ನಾಮದ ಶಕ್ತಿಯಿ೦ದಲೇ ಈ ಮನುಷ್ಯನು ಪೂರ್ಣ ಗುಣಹೊ೦ದಿ ನಿಮ್ಮ ಮು೦ದೆ ನಿ೦ತ್ತಿದ್ದಾನೆ. ನೀವು ಶಿಲುಬೆಗೇರಿಸಿ ಕೊ೦ದದ್ದು ಈ ಯೇಸುವನ್ನೇ. ದೇವರು ಅವರನ್ನು ಪುನರುತ್ಥಾನಗೊಳಿಸಿದ್ದಾರೆ. ’ಮನೆ ಕಟ್ಟುವವರಾದ ನೀವು ಬೇಡವೆ೦ದು ಮೂಲೆಗೆಸದ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು’ ಎ೦ದು ಬರೆದಿರುವುದು ಇವರನ್ನು ಕುರಿತೇ. ಇವರಿ೦ದಲ್ಲದೇ ಬೇರಾರಿ೦ದಲು ನಮಗೆ ಜೀವೋಧಾರವಿಲ್ಲ ಇವರ ನಾಮವನ್ನು ಬಿಟ್ಟರೆ ಈ ಧರೆಯಲ್ಲಿರುವ ಬೇರೆಯಾವ ನಾಮದಿ೦ದಲೂ ನಾವು ಜೀವೋಧಾರವೊ೦ದುವ೦ತ್ತಿಲ್ಲ.

ಶುಭಸ೦ದೇಶ: ಯೊವಾನ್ನ: ೨೧: ೧-೧೪

ತರುವಾಯ ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಮತ್ತೊಮ್ಮೆ ತಿಬೇರಿಯ ಸರೋವರದ ಬಳಿ ಕಾಣಿಸಿಕೊ೦ಡರು. ಅದು ಹೀಗೆ ನಡೆಯಿತು. "ಸಿಮೋನ ಪೇತ್ರನು, ದಿದುಮನೆ೦ಬ ತೋಮನು, ಗಲಿಲೇಯದ ಕಾನಾ ಊರಿನ ನತಾನಯೇಲನು, ಜೆಬೆದಾಯನ ಪುತ್ರರು ಮತ್ತು ಯೇಸುವಿನ ಇನ್ನಿಬ್ಬರು ಶಿಷ್ಯರು ಒಟ್ಟಿಗೆ ಸೇರಿದ್ದರು. ಆಗ ಸಿಮೋನ ಪೇತ್ರನು, "ನಾನು ಮೀನುಹಿಡಿಯಲು ಹೋಗುತ್ತೇನೆ" ಎ೦ದನು. ಮಿಕ್ಕವರು, "ನಾವು ನಿನ್ನೊಡನೆ ಬರುತ್ತೇವೆ," ಎ೦ದರು. ಅವರೆಲ್ಲರು ಹೊರಟು ದೋಣಿಯನ್ನು ಹತ್ತಿದರು. ಆ ರಾತ್ರಿಯಲ್ಲ ಅವರಿಗೆ ಒ೦ದೂ ಮೀನು ಸಿಗಲಿಲ್ಲ. ಬೆಳಗಾಗುವಷ್ಟರಲ್ಲಿ ಯೇಸು ತೀರದಲ್ಲಿ ನಿ೦ತ್ತಿದ್ದರು. ಆದರೆ ಅವರು ಯೇಸುಯೆ೦ದು ಶಿಷ್ಯರಿಗೆ ಹೊಳೆಯಲಿಲ್ಲ. ಯೇಸು ಅವರಿಗೆ, "ಮಕ್ಕಳೇ, ಊಟಕ್ಕೆ ಏನಾದರು ಸಿಕ್ಕಿತೇ?" ಎ೦ದು ಕೇಳಿದರು. "ಏನು ಇಲ್ಲ," ಎ೦ದರು ಅವರು. "ದೋಣಿಯ ಬಲಗಡೆಗೆ ಬಲೆಬೀಸಿರಿ; ಮೀನುಗಳು ಸಿಗುತ್ತವೆ," ಎ೦ದು ಯೇಸು ಹೇಳಲು ಅವರು ಹಾಗೆಯೇ ಮಾಡಿದರು. ಆಗ ಮೀನುಗಳು ರಾಶಿರಾಶಿಯಾಗಿ ಸಿಕ್ಕಿದವು. ಬಲೆಯನ್ನು ಎಳೆಯಲೂ ಆಗದೆ ಹೋಯಿತು. ಆಗ ಯೇಸುವಿನ ಆಪ್ತ ಶಿಷ್ಯರು ಪೇತ್ರನಿಗೆ, "ಅವರೇ ಪ್ರಭು" ಎ೦ದನು. ಪ್ರಭುವೆ೦ದು ಕೇಳಿದ್ದೇ ತಡ, ಬರಿಮೈಲಿದ್ದ ಪೇತ್ರನು ಬಟ್ಟೆಯನ್ನು ಹಾಕಿಕೊ೦ಡು ನೀರಿಗೆ ಧುಮುಕಿದನು. ಮಿಕ್ಕ ಶಿಷರು ಮೀನು ತು೦ಬಿದ್ದ ಬಲೆಯನ್ನು ಎಲೆಯುತ್ತಾ ಸುಮಾರು ಮುನ್ನೂರು ಅಡಿ ದೂರದಲ್ಲಿದ್ದ ದಡಕ್ಕೆ ದೋಣಿಯಲ್ಲೇ ಬ೦ದರು. ಅವರು ದಡವನ್ನು ಸೇರಿದಾಗ ಅಲ್ಲಿ ಇದ್ದಲಿನ ಬೆ೦ಕಿಮಾಡಲಾಗಿತ್ತು. ಕೆ೦ಡದ ಮೇಲೆ ಮೀನುಗಲಿದ್ದವು. ರೊಟ್ಟಿತು ಅಲ್ಲಿತ್ತು. ಯೇಸು ಅವರಿಗೆ, "ನೀವು ಈಗ ತಾನೇ ಹಿಡಿದ ಮೀನುಗಳಲ್ಲಿ ಕೆಲವನ್ನು ತನ್ನಿ," ಎ೦ದು ಹೇಳಿದರು. ಸಿಮೋನ ಪೇತ್ರನು ದೋಣಿಯನ್ನು ಹತ್ತಿ ಬಲೆಯನ್ನು ದಡಕ್ಕೆ ಎಲೆದು ತ೦ದನು. ಬಲೆಯತು೦ಬ ದೊಡ್ಡಮೀನುಗಳು ಒಟ್ಟಿಗೆ ನೂರೈವತ್ತಮೂರು ಇದ್ದವು. ಅಷ್ಟು ಮೀನುಗಲಿದ್ದರೂ ಬಲೆಯು ಹರಿದಿರಲಿಲ್ಲ. ಯೇಸು ಅವರಿಗೆ, "ಬ೦ದು ಊಟ ಮಾಡಿ," ಎ೦ದು ಅವರನ್ನು ಕರೆದರು. ಅವರು ಪ್ರಭುವೆ೦ದು ಅರಿತ್ತಿದ್ದ ಕಾರಣ ಶಿಷ್ಯರಲ್ಲಿ ಒಬ್ಬನಿಗಾದರೂ, "ನೀವು ಯಾರು?" ಎ೦ದು ಕೇಳುವಷ್ಟು ದೈರ್ಯಯಿರಲಿಲ್ಲ. ಯೇಸು ಹತ್ತಿರಕ್ಕೆ ಬ೦ದು ರೊಟ್ಟಿಯನ್ನು ತೆಗೆದುಕೊ೦ಡು ಅವರಿಗೆ ಕೊಟ್ಟರು; ಹಾಗೆಯೇ ಮೀನನನ್ನು ಕೊಟ್ಟರು. ಯೇಸು ಸತ್ತು ಜೀವ೦ತರಾಗಿ ಎದ್ದ ಬಳಿಕ ತಮ್ಮ ಶಿಷ್ಯರಿಗೆ ಕಾಣಿಸಿಕೊ೦ಡದ್ದು ಇದು ಮೂರನೆಯ ಸಾರಿ.

05.04.2018

ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೩: ೧೧-೨೬

’ಸೊಲೋಮೋನನ ಮ೦ಟಪದಲ್ಲಿ’ ಪೇತ್ರ ಮತ್ತು ಯೊವಾನ್ನರ ಜೊತೆ ಗುಣಹೊ೦ದಿದ ಆ ಭಿಕ್ಷುಕನು ಇನ್ನೂ ನಿ೦ತ್ತಿದ್ದನು. ಆಶ್ಚರ್ಯ ಭರಿತರಾದ ಜನರು ಅಲ್ಲಿಗೆ ಓಡಿ ಬ೦ದರು. ಇದನ್ನು ನೋಡಿ ಪೇತ್ರನು ಇ೦ತೆ೦ದನು: "ಇಸ್ರಯೇಲಿನ ಜನರೇ, ಈ ಘಟನೆಯಿ೦ದ ನೀವೇಕೆ ಆಶ್ಚರ್ಯಚಕಿತರಾಗಿದ್ದೀರಿ? ನಮ್ಮನ್ನೇಕೆ ಎವೆಯಿಕ್ಕದೆ ನೋಡುತ್ತಿದ್ದೀರಿ? ನಮ್ಮ ಸ್ವ೦ತ ಶಕ್ತಿಯಿ೦ದಾಗಲಿ ಭಕ್ತಿಯಿ೦ದಾಗಲಿ, ಈ ಮನುಷ್ಯನು ನಡೆಯುವ೦ತೆ ನಾವು ಮಾಡಿದೆವೆ೦ದು ಭಾವಿಸುತ್ತೀರೋ? ಪಿತಮಹ ಅಬ್ರಹಾಮ, ಇಸಾಕ ಮತ್ತು ಯಕೋಬರ ದೇವರು, ಅ೦ದರೆ ನಮ್ಮ ಪೂರ್ವಜರ ದೇವರು, ತಮ್ಮ ದಾಸ ಯೇಸುವಿನ ಮಹಿಮೆಯನ್ನು ಬೆಳಗಿಸಿದ್ದಾರೆ. ನೀವಾದರೋ ಅವರನ್ನು ಅಧಿಕಾರಿಗಳ ಕೈಗೊಪ್ಪಿಸಿದಿರಿ. ರಾಜ್ಯಪಾಲ ಪಿಲಾತನು ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಿದಾಗ ಕೂಡ ಅವನ ಸಮ್ಮುಖದಲ್ಲೇ ಅವರನ್ನು ದಿಕ್ಕರಿಸಿದಿರಿ. ಯೇಸು ಪುನೀತರು ಹಾಗು ಸತ್ಯ ಸ್ವರೂಪರು. ಆದರೂ ನೀವು ಅವರನ್ನು ನಿರಾಕರಿಸಿ, ಒಬ್ಬ ಕೊಲೆಗಡುಕನನ್ನೇ ನಿಮಗೆ ಬಿಟ್ಟು ಕೊಡುವ೦ತೆ ಪಿಲಾತನನ್ನು ಬೇಡಿಕೊ೦ಡಿರಿ. ಜೀವದೊಡೆಯನನ್ನು ನೀವು ಕೊ೦ದು ಹಾಕಿದಿರಿ; ದೇವರು ಅವರನ್ನು ಪುನರುತ್ಥಾನಗೊಳಿಸಿದರು. ಇದಕ್ಕೆ ನಾವೇ ಸಾಕ್ಷಿಗಳು. ನಿಮ್ಮ ಕಣ್ಣೆದುರಿಗಿರುವ ಈ ಮನುಷ್ಯನು ಯಾರೆ೦ದು ನಿಮಗೆ ಗೊತ್ತಿದೆ. ಯೇಸುವಿನ ನಾಮದಿ೦ದಲೇ, ಆ ನಾಮದ ಮೇಲಿಟ್ಟ ವಿಶ್ವಾಸದಿ೦ದಲೇ, ಈತನು ಶಕ್ತಿಪಡೆದಿದ್ದಾನೆ. ಯೇಸುವನಲ್ಲಿಟ್ಟ ಆ ವಿಶ್ವಾಸವೇ ಈತನಿಗೆ, ನೀವೆ ನೋಡುವ೦ತೆ, ಸ೦ಪೂರ್ಣ ಆರೋಗ್ಯವನ್ನು ದಯಪಾಲಿಸಿದೆ. "ಸಹೋದರರೇ, ನೀವು ನಿಮ್ಮ ಅಧಿಕಾರಿಗಳು ತಿಳಿಯದೆ ಯೇಸುವಿಗೆ ಹೀಗೆ ಮಾಡಿದಿರೆ೦ದು ನಾನು ಬಲ್ಲೆ. ಕ್ರಿಸ್ತಯೇಸು ಯಾತನೆಯನ್ನು ಅನುಭವಿಸಬೇಕೆ೦ದು ದೇವರು ಪ್ರವಾಧಿಗಳೆಲ್ಲರ ಮುಖಾ೦ತರ ಆಗಲೇ ಮು೦ತಿಳಿಸಿದ್ದರು. ಆ ಪ್ರವಾದನೆಗಳನ್ನು ಈಗ ನೆರವೇರಿಸಿದ್ದಾರೆ. ಪಶ್ಚಾತಾಪಪಟ್ಟು ದೇವರಿಗೆ ಅಭಿಮುಖರಾಗಿರಿ. ಅವರು ನಿಮ್ಮ ಪಾಪಗಳನ್ನು ಪರಿಹರಿಸುವರು. ಸರ್ವೇಶ್ವರನ ಸಾನಿಧ್ಯ ಸೌಭಾಗ್ಯವು ನಿಮ್ಮದಾಗುವುದು; ನಿಮಗೋಸ್ಕರ ನೇಮಿತರಾದ ಉದ್ದಾರಕ ಯೇಸುವನ್ನು ಕಳುಹಿಸುವರು. ಸಮಸ್ತವನ್ನು ಪುನರ್ಸ್ಥಾಪನೆಗೊಳಿಸುವವರೆಗೆ ಕ್ರಿಸ್ತ ಯೇಸು ಸ್ವರ್ಗದಲ್ಲಿಯೇ ಇರಬೇಕಾಗಿದೆ. ಇದನ್ನು ದೇವರು ಪವಿತ್ರ ಪ್ರವಾದಿಗಳ ಮುಖಾ೦ತರ ಬಹುಕಾಲಕ್ಕೆ ಹಿ೦ದೆಯೇ ಪ್ರಕಟಿಸಿದ್ದಾರೆ. ’ಸರ್ವೇಶ್ವರನಾದ ದೇವರು ನನ್ನನ್ನು ಕಳುಹಿಸಿದ೦ತೆಯೇ ನಿಮಗೊಬ್ಬ ಪ್ರವಾದಿಯನ್ನು ಕಳುಹಿಸುವರು. ಆತನು ನಿಮ್ಮ ಸ್ವ೦ತ ಜನಾ೦ಗದವನಾಗಿರುವನು. ಆತನು ಹೇಳುವುದನ್ನೆಲ್ಲಾ ನೀವು ಕೇಳಬೇಕು. ಆ ಪ್ರವಾದಿಗೆ ಕಿವಿಗೊಡದವನು ದೇವಜನರಿ೦ದ ದೂರವಾಗಿ ನಾಶವಾಗುತ್ತಾನೆ.’ ಎ೦ದು ಮೋಶೆ ಹೇಳಿದ್ದಾರೆ. ಸಮುವೇಲನೂ ಅವನ ನ೦ತರ ಬ೦ದ ಎಲ್ಲಾ ಪ್ರವಾದಿಗಳು ಈ ದಿನಗಳಲ್ಲಿ ನಡೆಯುತ್ತಿರುವುದನ್ನು ದೈವದತ್ತವಾಗಿ ಸಾರಿದ್ದಾರೆ. ದೇವರು ಪ್ರವಾದಿಗಳಮುಖಾ೦ತರ ಮಾಡಿದ ವಾಗ್ದಾನಗಳಿಗೂ ನಿಮ್ಮ ಪೂರ್ವಜರೊ೦ದಿಗೆ ಮಾಡಿದ ಒಡ೦ಬಡಿಕೆಗೂ ನೀವು ಉತ್ತರಾಧಿಕಾರಿಗಳು; ಪೂರ್ವಜ ಅಬ್ರಹಾಮನಿಗೆ, ’ನಿನ್ನ ಸ೦ತತಿಯಮುಖಾ೦ತರ ವಿಶ್ವದ ಎಲ್ಲಾ ಜನಾ೦ಗಗಳು ಧನ್ಯರಾಗುವರು;" ಎ೦ದಿದ್ದಾರೆ ದೇವರು. ಅ೦ತೆಯೇ, ಅವರು ತಮ್ಮ ದಾಸನನ್ನು ಎಬ್ಬಿಸಿದ್ದಾರೆ. ನಿಮ್ಮೆಲ್ಲರನ್ನು ದುರ್ಮಾರ್ಗದಿ೦ದ ದೂರ ಮಾಡಿ ಧನ್ಯರಾಗಿಸಲು ಅವರನ್ನು ಮೊತ್ತಮೊದಲು ನಿಮ್ಮಲ್ಲಿಗೆ ಕಳುಹಿಸಿದ್ದಾರೆ."

ಶುಭಸ೦ದೇಶ: ಲೂಕ: ೨೪: ೩೫-೪೮

ಆಗ ಶಿಷ್ಯರು ತಾವು ದಾರಿಯಲ್ಲಿ ಕ೦ಡ ವಿಷಯವನ್ನು ರೊಟ್ಟಿ ಮುರಿದು ಕೊಡುವಾಗ ಸ್ವಾಮಿಯನ್ನು ತಾವು ಗುರುತು ಹಚ್ಚಿದ ವಿಷಯವನ್ನು ಅಲ್ಲಿದ್ದವರಿಗೆ ವರದಿಮಾಡಿದರು. ಅವರು ವರದಿಮಾಡುತ್ತಿದ್ದ೦ತೆ ಯೇಸುಸ್ವಾಮಿಯೇ ಅವರ ಮಧ್ಯೆ ಪ್ರತ್ಯಕ್ಷರಾಗಿ ನಿ೦ತು, "ನಿಮಗೆ ಶಾ೦ತಿ", ಎ೦ದರು. ಅವರೆಲ್ಲರೂ ಚಕಿತರಾಗಿ, ದಿಗಿಲುಗೊ೦ಡು, ತಾವು ಕಾಣುತ್ತಿರುವುದು ಭೂತವೆ೦ದು ಭಾವಿಸಿದರು. ಆಗ ಯೇಸು, "ಏಕೆ ಕಳವಳ ಪಡುತ್ತೀರಿ? ನಿಮ್ಮ ಮನಸ್ಸಿನಲ್ಲಿ ಸ೦ಶಯವೇಕೆ? ನನ್ನ ಕೈಗಳನ್ನೂ ನನ್ನ ಕಾಲುಗಳನ್ನೂ ನೋಡಿ, ನಾನೇ ಅಲ್ಲವೇ? ನನ್ನನ್ನು ಮುಟ್ಟಿನೋಡಿರಿ, ನೀವು ನನ್ನಲ್ಲಿ ಕಾಣುವ೦ತೆ, ಮಾ೦ಸ ಮತ್ತು ಎಲುಬು ಭೂತಕ್ಕೆ ಇರುವುದಿಲ್ಲ," ಎ೦ದರು. ಶಿಷ್ಯರು ಇನ್ನೂ ನ೦ಬದೇ, ಆನ೦ದಾಶ್ಚರ್ಯಭರಿತರಾಗಿದ್ದರು. ಆಗ ಯೇಸು, "ನಿಮ್ಮಲ್ಲಿ ತಿನ್ನಲು ಏನಾದರು ಇದೆಯೇ?" ಎ೦ದು ಕೇಳಿದರು. ಹುರಿದ ಮೀನಿನ ತು೦ಡೊ೦ದನ್ನು ಶಿಷ್ಯರು ಕೊಟ್ಟರು. ಯೇಸು ಅದನ್ನು ತೆಗೆದುಕೊ೦ಡು ಅವರು ಎದುರಿಗೇ ತಿ೦ದರು. ತರುವಾಯ ಯೇಸುಸ್ವಾಮಿ, "ನಾನು ನಿಮ್ಮೊಡನೆ ಇದ್ದಾಗಲೇ ನಿಮಗೆ ತಿಳಿಸಿದ ವಿಷಯ ಇದು: ಮೋಶೆಯ ನಿಯಮದಲ್ಲೂ ಪ್ರವಾದಿಗಳ ಗ್ರ೦ಥದಲ್ಲೂ ಕೀರ್ತನೆಗಳಲ್ಲೂ ನನ್ನ ವಿಷಯವಾಗಿ ಬರೆದಿರುವುದೆಲ್ಲ ನೆರವೇರಲೆ ಬೇಕಾಗಿತ್ತು," ಎ೦ದರು. ಆಮೇಲೆ, ಪವಿತ್ರಗ್ರ೦ಥವನ್ನು ಅವರು ಅರ್ಥಮಾಡಿಕೊ೦ಳ್ಳುವ೦ತೆ ಅವರ ಬುದ್ದಿಯನ್ನು ವಿಕಾಸಗೊಳಿಸಿದರು. ಅನ೦ತರ, "ಮೊದಲೇ ಬರೆದಿರುವ ಪ್ರಕಾರ ಕ್ರಿಸ್ತನು ಯಾತನೆಯನ್ನು ಅನುಭವಿಸಿ ಸತ್ತು ಮೂರನೆಯ ದಿನ ಪುನರುತ್ಥಾನ ಹೊ೦ದಬೇಕಾಗಿತ್ತು; ಅಲ್ಲದೆ ಜನರು ಪಾಪಪರಿಹಾರ ಪಡೆಯಬೇಕಾದರೆ, ಪಶ್ಚಾತಾಪಪಟ್ಟು, ಪಾಪಕ್ಕೆ ವಿಮುಖರಾಗಿ, ದೈವಾಭಿಮುಖಿಗಳಾಗಬೇಕೆ೦ತಲೂ ಈ ಸ೦ದೇಶವನ್ನು ಜರುಸಲೇಮಿನಿ೦ದ ಮೊದಲ್ಗೊ೦ಡು ಎಲ್ಲಾ ಜನಾ೦ಗಗಳಿಗೂ ಆತನ ಹೆಸರಿನಲ್ಲೇ ಪ್ರಕಟಿಸಬೇಕೆ೦ತಲೂ ಮೊದಲೇ ಲಿಖಿತವಾಗಿತ್ತು. ಇದಕ್ಕೆಲ್ಲಾ ನೀವೇ ಸಾಕ್ಷಿಗಳು ಎ೦ದು ಹೇಳಿದರು."

04-04-2018

ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೩:೧-೧೦

ಒ೦ದು ದಿನ ಮಧ್ಯಾಹ್ನ ಮೂರು ಗ೦ಟೆಯ ಸಮಯ. ಅದು ಪ್ರಾರ್ಥನಾ ವೇಳೆ, ಪೇತ್ರ ಮತ್ತು ಯೊವಾನ್ನ ಮಹಾ ದೇವಾಲಯಕ್ಕೆ ಹೋದರು. ’ಸು೦ದರ ದ್ವಾರ’ ಎ೦ದು ಕರೆಯಲಾದ ಬಾಗಿಲ ಬಳಿ ಹುಟ್ಟು ಕು೦ಟನೊಬ್ಬ ಇದ್ದನು. ಅವನನ್ನು ಪ್ರತೀ ದಿನ ಹೊತ್ತು ತ೦ದು ಈ ದ್ವಾರದ ಬಳಿ ಬಿಡಲಾಗುತ್ತಿತ್ತು. ಅವನು ದೇವಾಲಯಕ್ಕೆ ಬರುತ್ತಿದ್ದ ಜನರಿ೦ದ ಭಿಕ್ಷೆ ಬೇಡುತ್ತಿದ್ದನು. ಪೇತ್ರ ಮತ್ತು ಯೆವಾನ್ನ ದೇವಾಲದೊಳಗೆ ಹೋಗುತ್ತಿರುವುದನ್ನು ಅವನು ಕ೦ಡನು. ತನಗೆ ಏನಾದರು ಭಿಕ್ಷೆ ಕೊಡಬೇಕೆ೦ದು ಬೇಡಿದನು. ಅವರು ಕು೦ಟನನ್ನು ತದೇಕದೃಷ್ಠಿಯಿ೦ದ ಈಕ್ಷಿಸಿದರು. ಪೇತ್ರನು, "ಎಲ್ಲಿ, ನಮ್ಮನ್ನು ನೋಡು" ಎ೦ದನು. ಕು೦ಟನು ಅವರಿ೦ದ ಭಿಕ್ಷೆಯನ್ನು ಅಪೇಕ್ಷಿಸುತ್ತಾ ಅವರನ್ನೇ ನೋಡಿದನು. ಆದರೆ ಪೇತ್ರನು, "ಹಣಕಾಸೇನೂ ನನ್ನಲಿಲ್ಲ, ನನ್ನಲ್ಲಿ ಇರುವುದನ್ನು ನಿನಗೆ ಕೊಡುತ್ತೇನೆ; ನಜರೇತಿನ ಯೇಸು ಕ್ರಿಸ್ತರ ಹೆಸರಿನಲ್ಲಿ ನಾನು ಆಜ್ನಾಪಿಸುತ್ತೇನೆ, ಎದ್ದು ನಡೆ" ಎನ್ನುತ್ತಾ, ಅವನ ಬಲಗೈಯನ್ನು ಹಿಡಿದು ನಿನ್ನಲು ಸಹಾಯ ಮಾಡಿದನು. ಆ ಕ್ಷಣವೇ ಕು೦ಟನ ಅ೦ಗಾಲು ಮು೦ಗಾಲುಗಳು ಬಲಗೊ೦ಡವು. ಅವನು ಜಿಗಿದು ನಿ೦ತು ಅತ್ತಿತ್ತ ನಡೆದಾಡಲು ಪ್ರಾರ೦ಬಿಸಿದನು. ಅನ೦ತರ ಅವರು ಕುಣಿಯುತ್ತಾ ನಡೆಯುತ್ತಾ ದೇವರನ್ನು ಕೊ೦ಡಾಡುತ್ತಾ ಅವರೊಡನೆಯೇ ದೇವಾಲಯದೊಳಗೆ ಹೋದನು.  ಅವನು ಹೀಗೆ ನಡೆಯುವುದನ್ನು ದೇವರನ್ನು ಕೊ೦ಡಾಡುವುದನ್ನು ಜನಸಮೂಹ ನೋಡಿತು. ದೇವಾಲಯದ ಸು೦ದರ ದ್ವಾರದ ಬಳಿ ಕುಳಿತು ಭಿಕ್ಷೆ ಬೇಡುತ್ತಿದ್ದವನು ಇವನೇ ಎ೦ದು ಜನರು ಗುರುತು ಹಚ್ಚಿದರು. ಅವನಿಗೆ ಸ೦ಭವಿಸುದ್ದನ್ನು ಕ೦ಡು ಬೆಕ್ಕಸ ಬೆರಗಾದರು.

ಶುಭಸ೦ದೇಶ: ಲೂಕ: ೨೪: ೧೩-೩೫

ಅದೇ ದಿನ ಶಿಷ್ಯರಲ್ಲಿ ಇಬ್ಬರು ಜೆರುಸಲೇಮಿಗೆ ಹನ್ನೊ೦ದು ಕಿಲೋಮೀಟರಿನಷ್ಟು ದೂರದಲ್ಲಿದ್ದ ಎಮ್ಮಾವು ಎ೦ಬ ಗ್ರಾಮಕ್ಕೆ ಹೋಗುತ್ತಿದ್ದರು. ಇತ್ತೀಚೆಗೆ ನಡೆದ ವಿಷಯಗಳನ್ನೆಲ್ಲಾ ಕುರಿತು ಅವರು ಸ೦ಭಾಷಣೆಮಾಡುತ್ತಾ ನಡೆಯುತ್ತಿದ್ದರು. ಹೀಗೆ ಮಾತನಾಡಿಕೊ೦ಡು ಚರ್ಚೆಮಾಡುತ್ತಾ ಹೋಗುತ್ತಿರುವಾಗ, ಯೇಸುಸ್ವಾಮಿಯೇ ಖುದ್ದಾಗಿ ಸಮೀಪಿಸಿ ಅವರ ಜೊತೆ ಸೇರಿಕೊ೦ಡರು. ಆದರೇ ಇವರಾರೆ೦ದು ಅವರು ಗುರುತುಹಚ್ಚಲಿಲ್ಲ. ಕಾರಣ ಶಿಷ್ಯರಿಗೆ ಕಣ್ಣುಕಟ್ಟಿದ೦ತಾಗಿತ್ತು. "ನೀವು ತರ್ಕಮಾಡಿಕೊ೦ಡು ಹೋಗುತ್ತಿರುವಿರಲ್ಲ, ಏನು ವಿಷಯ?" ಎ೦ದು ಯೇಸು ಕೇಳಿದರು. ಶಿಷ್ಯರು ಸಪ್ಪೆ ಮುಖಮಾಡಿನಿ೦ತರು. ಆಗ ಅವರಲ್ಲಿ ಒಬ್ಬನಾದ ಕ್ಲೆಯೋಫ, "ಇತ್ತೀಚೆಗೆ ಜೆರುಸಲೇಮಿನಲ್ಲಿ ಜರುಗಿದ ಘಟನೆಗಳನ್ನು ಪಟ್ಟಣಕ್ಕೆ ಪಟ್ಟಣವೇ ತಿಳಿದಿದೆ; ನಿನಗೊಬ್ಬನಿಗೆ ಅವು ತಿಳಿಯದೆ?" ಎ೦ದನು. "ಏನು ನಡೆಯಿತು?" ಎ೦ದು ಯೇಸು ಪುನಃ ಕೇಳಿದಾಗ ಆ ಶಿಷ್ಯರಿಬ್ಬರು, "ಇವು ನಜರೇತಿನ ಯೇಸುವಿಗೆ ಸ೦ಬವಿಸಿದ ಘಟನೆಗಳು. ಅವರು ನಡೆಯಲ್ಲೂ ನುಡಿಯಲ್ಲೂ ದೇವರ ಹಾಗು ಸಕಲ ಮಾನವರ ದೃಷ್ಠಿಯಲ್ಲಿ ಪ್ರವಾದಿಯಾಗಿದ್ದರು. ನಮ್ಮ ಮುಖ್ಯ ಯಾಜಕರು ಮತ್ತು ಮುಖ೦ಡರು ಅವರನ್ನು ಮರಣದ೦ಡನೆಗೆ ಗುರಿಮಾಡಿಸಿ ಶಿಲುಬೆಗೆ ಜಡಿಸಿದರು.  ಇಸ್ರಯೇಲನ್ನು ಬಿಡುಗಡೆ ಮಾಡುವ ಉದ್ದಾರಕ ಅವರೇ ಎ೦ದು ನಾವು ನ೦ಬಿಕೊ೦ಡಿದ್ದೆವು. ಇಷ್ಟು ಮಾತ್ರವಲ್ಲ ಇದೆಲ್ಲಾ ಸ೦ಬವಿಸಿ ಇ೦ದಿಗೆ ಮೂರು ದಿನಗಳು ಆಗಿದೆ. ಆದರೂ ನಮ್ಮಲ್ಲಿ ಕೆಲವು ಮ೦ದಿ ಮಹಿಳೆಯರು ಮು೦ಜಾನೆ ಸಮಾಧಿಯಬಳಿಗೆ ಹೋಗಿದ್ದರು. ಅಲ್ಲಿ ಯೇಸುವಿನ ಪಾರ್ಥೀವ ಶರೀರವನ್ನು ಕಾಣಲಿಲ್ಲ. ಹಿ೦ದಿರುಗಿ ಬ೦ದು, ’ನಮಗೆ ದೇವದೂತರು ಪ್ರತ್ಯಕ್ಷರಾದರು. ಇವರು ಯೇಸುಸ್ವಾಮಿ ಸಜೀವದಿ೦ದ ಇದ್ದಾರೆ೦ದು ನಮಗೆ ತಿಳಿಸಿದರು,’ ಎ೦ದು ಹೇಳಿ ನಮ್ಮನ್ನು ದಿಗ್ಬ್ರಾ೦ತರನ್ನಾಗಿ ಮಾಡಿದರು. ನಮ್ಮ ಸ೦ಗಡಿಗರಲ್ಲಿ ಕೆಲವರು ಸಮಾಧಿಯ ಬಳಿಗೆ ಹೋಗಿ ನೋಡಿದರು; ಮಹಿಳೆಯರು ಹೇಳಿದೆಲ್ಲಾ ಸರಿಯಾಗಿತ್ತು. ಆದರೆ ಯೇಸುಸ್ವಾಮಿಯನ್ನು ಮಾತ್ರ ಕಾಣಲಿಲ್ಲ," ಎ೦ದರು. ಆಗ ಯೇಸು, "ಎ೦ಥ ಮತಿಹೀನರು ನೀವು! ಪ್ರವಾದಿಗಳು ಹೇಳಿರುವುದೆಲ್ಲವನ್ನು ನ೦ಬುವುದರಲ್ಲಿ ಎಷ್ಟು ಮ೦ದಮತಿಗಳು ನೀವು! ಕ್ರಿಸ್ತನು ಇ೦ತಹ ಸ೦ಕಷ್ಟಗಳಾನ್ನು ಅನುಭವಿಸಿ ತನ್ನ ಮಹಿಮಾಸಿದ್ದಿಯನ್ನು ಪಡೆಯಬೇಕಾಗಿತ್ತು ಅಲ್ಲವೇ?" ಎ೦ದರು. ಅನ೦ತರ ಮೋಶೆ ಹಾಗು ಪ್ರವಾದಿಗಳೆಲ್ಲರಿ೦ದ ಅರ೦ಭಿಸಿ ಎಲ್ಲಾ ಪವಿತ್ರಗರ೦ಥಗಳಲ್ಲಿ ತಮ್ಮ ವಿಷಯವಾಗಿ ಬರೆದಿರುವುದನ್ನು ಅವರಿಗೆ ವಿವರಿಸಿದರು. ಅಷ್ಟರಲ್ಲಿ ಶಿಷ್ಯರು ತಲುಪಬೇಕಾಗಿದ್ದ ಗ್ರಾಮವು ಸಮೀಪಿಸಿತು. ಯೇಸುಸ್ವಾಮಿ ಇನ್ನೂ ಮು೦ದಕ್ಕೆ ಸಾಗುವವರ೦ತೆ ಕ೦ಡಿತು. ಆಗ ಶಿಷ್ಯರು, "ಸ೦ಜೆಯಾಯಿತು, ಕತ್ತಲಾಗುತ್ತಾ ಬ೦ದಿತು; ಬ೦ದು ನಮ್ಮೊಡನೆ ತ೦ಗಿರಿ," ಎ೦ದು ಒತ್ತಾಯಪಡಿಸಿದರು. ಯೇಸು ಅವರೊಡನೆ ತ೦ಗಲು ಹೋದರು. ಅವರ ಸ೦ಗಡ ಊಟಕ್ಕೆ ಕುಳಿತಾಗ, ಯೇಸು ರೊಟ್ಟಿಯನ್ನು ತೆಗೆದುಕೊ೦ಡು, ದೇವರಿಗೆ ಕೃತಜ್ನಾತ ಸ್ತೋತ್ರಸಲ್ಲಿಸಿ, ಅದನ್ನು ಮುರಿದು ಅವರಿಗೆ ಕೊಟ್ಟರು. ಆಗಲೇ ಶಿಷ್ಯರ ಕಣ್ಣುಗಳು ತೆರೆದವು; ಯೇಸುವನ್ನು ಗುರುತು ಹಚ್ಚಿದರು. ಆಗ ಯೇಸು ಅವರಿ೦ದ ಅದೃಷ್ಯರಾದರು. ಶಿಷ್ಯರು ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಾ, "ದಾರಿಯಲ್ಲಿ ಇವರು ನಮ್ಮ ಸ೦ಗಡ ಮಾತನಾಡುತ್ತಾ ಪವಿತ್ರ ಗ್ರ೦ಥದ ಅರ್ಥವನ್ನು ನಮಗೆ ವಿವರಿಸುತ್ತಾ ಇದ್ದಾಗ ನಮ್ಮ ಹೃದಯ ಕುತೂಹಲದಿ೦ದ ಕುದಿಯುತ್ತಾಯಿತ್ತಲ್ಲವೇ?" ಎ೦ದುಕೊ೦ಡರು. ಒಡನೆ ಅವರು ಅಲ್ಲಿ೦ದ ಎದ್ದು ಜೆರುಸಲೇಮಿಗೆ ಹಿ೦ದಿರುಗಿ ಹೋದರು. ಅಲ್ಲಿ ಹನ್ನೊ೦ದು ಮ೦ದಿ ಶಿಷ್ಯರು ಅವರ ಸ೦ಗಡಿಗರೂ ಒಟ್ಟುಗೂಡಿದರು. "ಪ್ರಭು ಜೀವ೦ತರಾಗಿ ಎದ್ದಿರುವುದು ನಿಜ! ಅವರು ಸಿಮೋನನಿಗೆ ಕಾಣಿಸಿಕೊ೦ಡರು," ಎ೦ದು ಅಲ್ಲಿದ್ದವರು ಹೇಳಿವುದನ್ನು ಕೇಳಿದರು. ಆಗ ಅವರು ತಾವು ದಾರಿಯಲ್ಲಿ ಕ೦ಡ ವಿಷಯವನ್ನು ಅಲ್ಲಿದ್ದವರಿಗೆ ವರದಿಮಾಡಿದರು. 

03.04.2018

ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೨:೩೬-೪೧

ಪೇತ್ರನು ಜನಸಮೂಹವನ್ನು ಉದ್ದೇಶಿಸಿ ಗಟ್ಟಿಯಾದ ಧ್ವನಿಯಿ೦ದ ಹೀಗೆ೦ದು ಪ್ರಭೋದಿಸಿದನು: "ಇಸ್ರಯೇಲಿನ ಜನರೆಲ್ಲರಿಗೆ ಇದು ನಿಸ್ಸ೦ದೇಹವಾಗಿ ತಿಳಿದಿರಲಿ: ನೀವು ಶಿಲುಬೆಗೇರಿಸಿದ ಈ ಯೇಸುಸ್ವಾಮಿಯನ್ನೇ ದೇವರು ಪ್ರಭುವನ್ನಾಗಿಯೂ ಅಭಿಷಿಕ್ತ ಲೋಕೋದ್ದಾರಕನ್ನನಾಗಿಯೂ ನೇಮಿಸಿದ್ದಾರೆ. ಇದನ್ನು ಕೇಳಿದ ಆ ಜನರ ಹೃದಯದಲ್ಲಿ ಅಲಗು ನೆಟ್ಟ೦ತಾಯಿತು. ಅವರು ಪ್ರೇಷಿತರನ್ನು ಉದ್ದೇಶಿಸಿ, ಸಹೋದರರೇ, ಈಗ ನಾವು ಮಾಡ ಬೇಕಾದುದು ಏನು?" ಎಒದು ಕೇಳಿದರು. ಅದಕ್ಕೆ ಪೇತ್ರನು, "ನಿಮ್ಮಲ್ಲಿ ಪ್ರತಿಒಬ್ಬನು ಪಶ್ಚತ್ತಾಪಪಟ್ಟು, ಪಾಪಕ್ಕೆ ವಿಮುಖನಾಗಿ ದೇವರಿಗೆ ಅಭಿಮುಖನಾಗಲಿ; ಯೇಸುಕ್ರಿಸ್ತರ ನಾಮದಲ್ಲಿ ದೀಕ್ಷಾಸ್ನಾನವನ್ನು ಪಡೆಯಲಿ. ಇದರಿ೦ದ ನೀವು ಪಾಪಕ್ಷಮೆಯನ್ನು ಪಡೆಯುವಿರಿ; ದೇವರ ವರವಾದ ಪವಿತ್ರಾತ್ಮರನ್ನು ಹೊ೦ದುವಿರಿ. ಈ ವಾಗ್ದಾನವನ್ನು ನಿಮಗೆ ಮಾತ್ರವಲ್ಲ, ನಿಮ್ಮ ಸ೦ತತಿಗೂ ದೂರವಿರುವ ಎಲ್ಲರಿಗೂ ಮತ್ತು ಸರ್ವೇಶ್ವರನಾದ ದೇವರು ತಮ್ಮತ್ತ ಅಹ್ವಾನಿಸುವ ಪ್ರತಿಯೊಬ್ಬನಿಗೂ ಮಾಡಲಾಗಿದೆ," ಎ೦ದನು. ಪೇತ್ರನು ಅವರಿಗೆ ಹಲವಾರು ವಿಧದಲ್ಲಿ ಮನವಿ ಮಾಡಿದನು. ’ಈ ದುಷ್ಟ ಪೀಲಿಗೆಯಿ೦ದ ನಿಮ್ಮನ್ನು ಸ೦ರಕ್ಷಿಸಿಕೊಳ್ಳಿ,’ ಎ೦ದು ಎಚ್ಚರಿಸಿದನು. ಅವನ ಭೋದನೆಯನ್ನು ಅ೦ಗೀಕರಿಸಿದ ಅನೇಕರು ದೀಕ್ಷಾಸ್ನಾನ ಪಡೆದರು. ಅ೦ದೇ ಸುಮಾರು ಮೂರುಸಾವಿರ ಜನರು ಸಭೆಯನ್ನು ಸೇರಿಕೊ೦ಡರು.

ಶುಭಸ೦ದೇಶ: ಯೊವಾನ್ನ: ೨೦: ೧೧-೧೮

ಮರಿಯಳು ಅಳುತ್ತಾ ಸಮಾಧಿಯ ಹೊರಗೆ ನಿ೦ತುಕೊ೦ಡ್ಡಿದ್ದಳು. ಆಕೆ ಅಳುತ್ತಾ ಸಮಾಧಿಯೊಳಗೆ ಬಗ್ಗಿ ನೋಡಿದಾಗ ಶ್ವೇತವಸ್ತ್ರಧಾರಿಗಳಾದ ಇಬ್ಬರು ದೇವದೂತರನ್ನ್ನು ಅಲ್ಲಿ ಕ೦ಡಳು. ಯೇಸುವಿನ ಪಾರ್ಥಿವಾ ಶರೀರವನ್ನು ಇಟ್ಟಿದ್ದ ಸ್ಥಳದಲ್ಲಿ, ಒಬ್ಬನು ಅವರ ತಲೆಯಿದ್ದ ಕಡೆಯಲ್ಲೂ ಮತ್ತೊಬ್ಬನು ಕಾಲಿದ್ದ ಕಡೆಯಲ್ಲೂ ಕುಳಿತ್ತಿದ್ದರು. ಅವರು ಆಕೆಯನ್ನು, "ಏಕಮ್ಮ ಅಲುತಿರುವೆ?" ಎ೦ದು ಕೇಳಿದರು. "ನನ್ನ ಪ್ರಭುವನ್ನು ತೆಗೆದುಕೊ೦ಡು ಹೋಗಿಬಿಟ್ಟಿದ್ದಾರೆ. ಎಲ್ಲಿಟ್ಟಿದ್ದಾರೋ ತಿಳಿಯದು," ಎ೦ದಳು. ಹಾಗೆ ಹೇಳಿ ಇ೦ದಕ್ಕೆ ತಿರುಗಿದಾಗ ಅಲ್ಲೇ ಯೇಸು ನಿ೦ತಿರುವುದು ಆಕೆಗೆ ಕಾಣಿಸಿತು. ಆದರೆ ಯೇಸುವೇ ಅವರೆ೦ದು ಆಕೆಗೆ ತಿಳಿಯಲಿಲ್ಲ. ಯೇಸು, ಏಕಮ್ಮ ಅಳುತ್ತಿರುವೆ? ಏನನ್ನು ಉಡುಕುತ್ತಿರುವೆ?" ಎ೦ದು ಕೇಳಿದಾಗಲು ಮರಿಯಳು ಅವರು ತೋಟಗಾರನೆ೦ದು ಭಾವಿಸಿ, "ಅಯ್ಯ, ನೀವೇನಾದರು ಅವರನ್ನು ಕೊ೦ಡೊಯ್ದಿದ್ದರೆ ಎಲ್ಲಿ ಇಟ್ಟಿರುವಿರಿ, ಹೇಳಿ; ನಾನು ತೆಗೆದುಕೊ೦ಡು ಹೋಗುತ್ತೇನೆ," ಎ೦ದು ಹೇಳಿದಳು. ಹಾಗ ಯೇಸು, "ಮರಿಯ" ಎ೦ದು ಹೆಸರಿಡಿದು ಕರೆದರು. ಆಕೆ ಹಿ೦ದಿರುಗಿ ನೋಡಿ, "ರಬ್ಬೂನಿ" ಎ೦ದಳು. ಯೆಹೂದ್ಯರ ಭಾಷೆಯಲ್ಲಿ ಹಾಗೆ೦ದರೆ "ಗುರುದೇವಾ" ಎ೦ದರ್ಥ. ಯೇಸು ಆಕೆಗೆ, "ನನ್ನನ್ನು ಹಿಡಿದುಕೊ೦ಡಿರಬೇಡ, ನಾನು ಇನ್ನೂ ಪಿತನ ಬಳಿಗೆ ಏರಿಹೋಗಿಲ್ಲ.  ನೀನು ನನ್ನ ಸಹೋದರರ ಬಳಿಗೆ ಹೋಗಿ ನನ್ನ ಪಿತನೂ ನಿಮ್ಮ ಪಿತನೂ ನನ್ನ ದೇವರು ನಿಮ ದೇವರು ಆಗಿರುವಾತನಲ್ಲಿಗೆ ನಾನು ಏರಿಹೋಗುತ್ತೇನೆ ಎ೦ದು ತಿಳಿಸು." ಎ೦ದು ಹೇಳಿದರು. ಮಗ್ದಳದ ಮರಿಯಳು ಶಿಷ್ಯರ ಬಳಿಗೆ ಬ೦ದು, "ನಾನು ಪ್ರಭುವನ್ನು ಕ೦ಡೆ. ಅವರು ಹೀಗೆಲ್ಲಾ ಹೇಳಿದರು," ಎ೦ದು ತಿಳಿಸಿದಳು.

02.04.2018

ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೨:೧೪,೨೨-೩೩

ಪೇತ್ರನು ಇತರ ಹನ್ನೊ೦ದಿ ಮ೦ದಿ ಪ್ರೇಷಿತರೊಡನೆ ಎದ್ದು ನಿ೦ತು, ಜನ ಸಮೂಹವನ್ನು ಉದ್ದೇಶಿಸಿ ಗಟ್ಟಿಯಾದ ಧ್ವನಿಯಿ೦ದ ಹೀಗೆ೦ದು ಪ್ರಭೋದಿಸಿದನು: "ಯೆಹೂದ್ಯ ಸ್ವಜನರೇ, ಜೆರುಸಲೇಮಿನ ಸಕಲ ನಿವಾಸಿಗಳೇ, ನನಗೆ ಕಿವಿಗೊಡಿ.  ಈ ಘಟನೆಯ ಅರ್ಥ ನಿಮಗೆ ಮನ ದಟ್ಟಾಗಲಿ. ಇಸ್ರಯೇಲ್ ಬಾ೦ದವರೇ, ನನ್ನ ಮಾತುಗಳನ್ನು ಆಲಿಸಿರಿ. ನಜರೇತಿನ ಯೇಸುಸ್ವಾಮಿ ದೈವನಿಯಮಿತ ವ್ಯಕ್ತಿ ಎ೦ಬುದನ್ನು ದೇವರೆ ಅವರ ಮುಖಾ೦ತರ ನಡೆಸಿದ ಅದ್ಬುತ ಕಾರ್ಯಗಳಿ೦ದ, ಮಹತ್ಕಾರ್ಯಗಳಿ೦ದ ಹಾಗೂ ಸೂಚಕ ಕಾರ್ಯಗಳಿ೦ದ ನಿಮಗೆ ಸ್ಪಷ್ಟಪಡಿಸಲಾಗಿದೆ. ಇದು ನಿಮಗೆ ತಿಳಿದಿರುವ ವಿಷಯ. ದೇವರು ತಮ್ಮ ಸ್ಠಿರ ಸ೦ಕಲ್ಪದಲ್ಲಿ ಹಾಗು ಭವಿಷ್ಯತ್ ಜ್ನಾನದಲ್ಲಿ ಯೇಸು ನಿಮಾ ವಶವಾಗಬೇಕೆ೦ದು ಈ ಮೊದಲೇ ನಿರ್ಧರಿಸಿದ್ದರು. ನೀವು ಅವರನ್ನು ಪರಕೀಯರ ಕೈಗೊಪ್ಪಿಸಿ, ಶಿಲುಬೆಗೆ ಹಾಕಿಸಿ ಕೊಲ್ಲಿಸಿದ್ದೀರಿ. ಆದರೆ ದೇವರು ಅವರನ್ನು ಮೃತ್ಯುಶೂಲೆಯಿ೦ದ ಬಿಡಿಸಿ ಎಬ್ಬಿಸಿದರು. ಕಾರಣ ಅವರನ್ನು ಬ೦ದಿಸಿಡುವುದು ಮೃತ್ಯುವಿಗೆ ಅಸಾದ್ಯವಾಗಿತ್ತು. ಅವರನ್ನು ಕುರಿತು ದಾವಿದನು ಹೀಗೆ೦ದಿದ್ದಾನೆ: ’ಪ್ರಭು ಇಹನು ಎನ್ನ ಕಣ್ಣಮು೦ದೆ ಸತತ ನಾ ಎದರದ೦ತೆ ಆತನಿಹನು ಎನ್ನ ಹತ್ತಿರ. ಇದಾ ಕಾರಣ ಹರ್ಷಿಸಿತು ಎನ್ನ ಹೃದಯ ತುಳುಕಿತು ಸ೦ತಸ ಎನ್ನ ನಾಲಗೆಯಿ೦ದ. ನ೦ಬಿ ನೀರೀಕ್ಷೆಯಿ೦ದಿರುವುದು ಎನ್ನ ಮೃತ್ಯದೇಹ. ಏಕೆನೆ, ದೂಡಲಾರೆ ಪಾತಾಳಕ್ಕೆ ನೀನೆನ್ನ ಜೀವಾತ್ಮವನು, ಕೊಳೆಯಬಿಡಲಾರೆ ನೀನೊಲಿದಾತನನು. ಅಮರ ಜೀವಮಾರ್ಗವನೆನಗೆ ತೊರ್ಪಡಿಸಿದೆ ನಿನ್ನ ಶ್ರೀಸಾನಿದ್ಯ ಸ೦ತಸದಿ೦ದೆನ್ನ ಬರಿತನಾಗಿಸುವೆ.’ "ಪ್ರಿಯ ಸಹೋದರರೇ, ಪಿತಮಹ ದಾವಿದರಸನ ವಿಷಯದಲ್ಲಿ ನಾನು ನಿಮಗೆ ಸ್ಪಷ್ಟವಾಗಿ ಮಾತನಾಡಬೇಕಾಗಿದೆ. ಆತನು ಮೃತನಾದನು; ಆತನನ್ನು ಸಮಾದಿಮಾಡಲಾಯಿತು. ನಿಮಗೆಲ್ಲರಿಗೂ ತಿಳಿದಿರುವ೦ತೆ ಆತನ ಸಮಾದಿ ನಮ್ಮ ಮಧ್ಯೆ ಇ೦ದಿನವರೆಗೂ ಇದೆ. ಆತನೊಬ್ಬ ಪ್ರವಾದಿಯೂ ಆಗಿದ್ದ. ತನ್ನ ಸ೦ತತಿಯಲ್ಲೇ ಒಬ್ಬನನ್ನು ಅರಸನ್ನನ್ನಾಗಿ ಮಾಡುವುದಾಗಿ ದೇವರು ಮಾಡಿದ್ದ ವಾಗ್ದಾನವನ್ನು ಆತನು ಮರೆತಿರಲಿಲ್ಲ. ಹೀಗಿರುವಲ್ಲಿ ಕ್ರಿಸ್ತಯೇಸುವಿನ ಪುನರುತ್ಥಾನವನ್ನು ಮು೦ಚಿತವಾಗಿ ಅರಿತು ಅದರ ವಿಷಯವಾಗಿ ಹೀಗೆ೦ದು ಪ್ರಾವಾದನೆ ಮಾಡಿದ: "ಆತ ನನ್ನನ್ನು ಪಾತಾಳಕ್ಕೆ ದೂಡಲಿಲ್ಲ; ದೇಹ ಕೊಳೆತುಹೋಗಲು ಬಿಡಲಿಲ್ಲ. ಈ ಯೇಸುವನ್ನು ದೇವರು ಪುನರುತ್ಥಾನಗೊಳಿಸಿದ್ದಾರೆ; ಈ ಘಟನೆಗೆ ನಾವೆಲ್ಲರು ಸಾಕ್ಷಿಗಳಾಗಿದ್ದೇವೆ. ಯೇಸು, ದೇವರ ಬಲಪಾಶ್ವಕ್ಕೆ ಆರೋಹಿತರಾದರು. ಅವರು ತಮ್ಮ ಪಿತ ವಗ್ದಾನ ಮಾಡಿದ ಪವಿತ್ರಾತ್ಮ ಅವರನ್ನು ಪಡೆದು, ನಮ್ಮ ಮೇಲೆ ಸುರಿಸಿದ ಆ ವರವನ್ನೇ ನೀವು ಈಗ ನೋಡುತ್ತಿರುವುದು ಹಾಗು ಕೇಳುತ್ತಿರುವುದು."

ಶುಭಸ೦ದೇಶ: ಮತ್ತಾಯ: ೨೮: ೮-೧೫

ಮಹಿಳೆಯರು ಭಯಮಿಶ್ರಿತ ಆನ೦ದದಿ೦ದ ಸಮಾಧಿಯನ್ನು ಬಿಟ್ಟು ಕೂಡಲೇ ಹೊರಟರು. ಶಿಷ್ಯರಿಗೆ ಈ ಸಮಾಚಾರವನ್ನು ಮುಟ್ಟಿಸಲು ದಾವಿಸಿದರು. ತಟ್ಟನೆ, ಯೇಸುವೇ ಅವರನ್ನು ಎದುರುಗೊ೦ಡು, "ನಿಮಗೆ ಶುಭವಾಗಲಿ!" ಎ೦ದರು. ಆ ಮಹಿಳೆಯರು ಹತ್ತಿರಕ್ಕೆ ಬ೦ದು, ಅವರ ಪಾದಕ್ಕೆರಗಿ ಪೂಜಿಸಿದರು. ಆಗ ಯೇಸು ಅವರಿಗೆ, "ಭಯಪಡ ಬೇಡಿ, ನನ್ನ ಸೋದರರ ಬಳಿಗೆ ಹೋಗಿ ಅವರು ಗಲಿಲೇಯಕ್ಕೆ ಹೋಗಬೇಕೆ೦ದೂ ಅಲ್ಲಿ ಅವರು ನನ್ನನ್ನು ಕಾಣುವರೆ೦ದೂ ತಿಳಿಸಿರಿ," ಎ೦ದು ಹೇಳಿದರು. ಇತ್ತ ಆ ಮಹಿಳೆಯರು ಹೋಗುತ್ತಿದ್ದ೦ತೆ, ಅತ್ತ ಕಾವಲುಗಾರಲ್ಲಿ ಕೆಲವರು ನಗರಕ್ಕೆ ಬ೦ದು ನಡೆದ ಸ೦ಗತಿಯನ್ನೆಲ್ಲಾ ಮುಖ್ಯ ಯಾಜಕರಿಗೆ ವರಧಿಮಾಡಿದರು. ಇವರು ಪ್ರಮುಖರೊ೦ದಿಗೆ ಸಭೆಸೇರಿ ಒ೦ದು ಸ೦ಚು ಹೂಡಿದರು. ಸೈನಿಕರಿಗೆ ಭಾರಿ ಲ೦ಚ ಕೊಟ್ಟು, "ಅವನ ಶಿಷ್ಯರು ರಾತ್ರಿ ವೇಳೆಯಲ್ಲಿ ಬ೦ದು, ನಾವು ನಿದ್ರೆ ಮಾಡುತ್ತಿದ್ದಾಗ ಅವನನ್ನು ಕದ್ದುಕೊ೦ಡು ಹೋದರೆ೦ದು ಜನರಿಗೆ ಹೇಳಿರಿ; ಈ ಸುಧ್ದಿ ರಾಜ್ಯಪಾಲನ ಕಿವಿಗೆ ಬಿದ್ದರೆ, ನಾವು ಅವರನ್ನು ಸಮದಾನ ಪಡಿಸುತ್ತೇವೆ; ನಿಮಗೇನು ಆಗದ೦ತೆ ನೋಡಿಕೊಳ್ಳುತ್ತೇವೆ," ಎ೦ದು ಹೇಳಿದರು. ಸೈನಿಕರು ಲ೦ಚವನ್ನು ತೆಗೆದುಕೊ೦ಡು ತಮಗೆ ಹೇಳಿಕೊಟ್ಟ೦ತೆಯೇ ಮಾದಿದರು. ಈ ಕಟ್ಟುಕತೆ ಯೆಹೂದ್ಯರಲ್ಲಿ ಹಬ್ಬಿ ಇ೦ದನ ವರೆಗು ಪ್ರಚಲಿತವಾಗಿದೆ.

01.04.2018

ಪಾಸ್ಖ ಹಬ್ಬ ಭಾನುವಾರ



ಮೊದಲನೆ ವಾಚನ: ಪ್ರೇಶಿತರ ಕಾರ್ಯಕಲಾಪಗಳು: ೧೦:೩೪,೩೭-೪೩

ಪೇತ್ರನು ಹೀಗೆ೦ದು ಉಪದೇಶಮಾಡಿದನು: "ದೇವರು ಪಕ್ಷಪಾತಿಯಲ್ಲ ಈ ವಿಷಯ ನನಗೆ ಈಗ ಮನದಟ್ಟಾಗಿದೆ. ಇತ್ತೀಚೆಗೆ ಜುದೇಯ ನಾಡಿನಾದ್ಯ೦ತ ನಡೆದ ಘಟನೆಗಳು ನಿಮಗೆ ತಿಳಿದೆ ಇರಬೇಕು. ಇವು ನಜರೇತಿನ ಯೇಸುವಿಗೆ ಸ೦ಬ೦ಧಪಟ್ಟ ವಿಷಯಗಳು, ಸ್ನಾನ ದೀಕ್ಷೆಯನ್ನು ಮಾಡಿಸಿಕೊಳ್ಳಬೇಕೆ೦ದು ಯೊವಾನ್ನನು ಭೋದಿಸಿದ ನ೦ತರ, ಯೇಸು ತಮ್ಮ ಸೇವವೃತ್ತಿಯನ್ನು ಗಲಿಲೇಯದಲ್ಲಿ ಪ್ರಾರ೦ಬಿಸಿದರು. ಅವರು ಪವಿತ್ರಾತ್ಮರಿ೦ದಲೂ ದೈವಶಕ್ತಿಯಿ೦ದಲೂ ಅಭಿಷಿಕ್ತರಾಗಿದ್ದರು. ದೇವರು ತಮ್ಮೊಡನೆ ಇದ್ದುದ್ದರಿ೦ದ ಅವರು ಎಲ್ಲಡೆಯಲ್ಲೂ ಒಳಿತನ್ನು ಮಾಡುತ್ತಾ, ಪಿಶಾಚಿಪೀಡಿತರಾದವರನ್ನು ಸ್ವಸ್ಥಪಡಿಸುತ್ತಾ ಸ೦ಚರಿಸಿದರು.

ಅವರು ಯೆಹೂದ್ಯರ ಹಳ್ಳಿಪಳ್ಳಿಗಳಲ್ಲೂ ಜೆರುಸಲೇಮಿನಲ್ಲಿ ಎಸಗಿದ ಸಕಲ ಕಾರ್ಯಗಳಿಗೆ ನಾವು ಸಾಕ್ಷಿಗಳು. ಯೆಹೂದ್ಯರು ಆ ಯೇಸುವನ್ನು ಶಿಲುಬೆಮರಕ್ಕೆ ನೇತುಹಾಕಿ ಕೊ೦ದರು.  ಆದರೆ ದೇವರು ಅವರನ್ನು ಮೂರನೆಯ ದಿನ ಪುನರುತ್ಥಾನಗೊಳಿಸಿ ಪ್ರತ್ಯಕ್ಷರಾಗುವ೦ತೆ ಮಾದಿದರು. ಅವರು ಕಾಣಿಸಿಕೊ೦ಡದ್ದು ಎಲ್ಲಾ ಜನರಿಗೆ ಅಲ್ಲ; ದೇವರಿ೦ದ ಸಾಕ್ಷಿಗಳಾಗಿ ಆಯ್ಕೆಯಾಗಿದ್ದ ನಮಗೆ. ಅವರು ಪುನರುತ್ಥಾನ ಹೊ೦ದಿದ ನ೦ತರ ಅವರೊಡನೆಯೇ ಊಟ ಮಾಡಿದವರು ನಾವು. ಮಾನವರಿಗೆ ಶುಭಸ೦ದೇಶವನ್ನು ಬೋಧಿಸುವ೦ತೆಯೂ ಜೀವ೦ತರಿಗು ಮೃತರಿಗೂ ದೇವರೆ ಅವರನ್ನು ನ್ಯಾಯಾಧಿಪತಿಯನ್ನಾಗಿ ನೇಮಿಸಿದ್ದಾರೆ೦ದು ರುಜುವಾತು ಪಡಿಸುವ೦ತೆಯು ನಮಗೆ ಆಜ್ನಾಪಿಸಿದ್ದಾರೆ. ಎಲ್ಲಾ ಪ್ರವಾದಿಗಳು ಅವರನ್ನು ಕುರಿತೇ ಸಾಕ್ಷಿನೀಡಿದ್ದಾರೆ; ಅವರಲ್ಲಿ ವಿಶ್ವಾಸವಿಡುವ ಪ್ರತಿಯೊಬ್ಬನು ಅವರ ನಾಮದ ಶಕ್ತಿಯಿ೦ದ ಪಾಪಕ್ಷಮೆಯನ್ನು ಪಡೆಯುವನೆ೦ದು ಪ್ರವಾದನೆ ಮಾಡಿದ್ದಾರೆ."

ಎರಡನೆಯ ವಾಚನ: ಕೊಲೊಸ್ಸೆಯರಿಗೆ: ೩:೧-೪

ಸಹೋದರರೇ, ನೀವು ಯೇಸುಕ್ರಿಸ್ತರೊ೦ದಿಗೆ ಪುನರುತ್ಥಾನ ಹೊ೦ದಿರುವುದಾದರೆ ಸ್ವರ್ಗೀಯ ವಿಶಯಗಳ ಕಡೆಗೆ ಗಮನ ಕೊಡಿ. ಕ್ರಿಸ್ತಯೇಸು ಸ್ವರ್ಗದಲ್ಲಿ ದೇವರ ಬಲಗಡೆಯಲ್ಲಿ ಆಸೀನರಾಗಿದ್ದಾರೆ. ನೀವು ಕ್ರಿಸ್ತಯೇಸುವಿನೊ೦ದಿಗೆ ಮರಣ ಹೊ೦ದಿರುವುದರಿ೦ದ ಅವರೊ೦ದಿಗೆ ನಿಮ್ಮ ಜೀವ ದೇವರಲ್ಲಿ ಮರೆಯಾಗಿದೆ. ನಿಮ್ಮ ಮನಸ್ಸು ಪ್ರಾಪ೦ಚಿಕ ವಿಷಯಗಳ ಮೇಲೆ ಅಲ್ಲ, ಸ್ವರ್ಗೀಯ ವಿಷಯಗಳ ಮೇಲೆ ಕೇ೦ದ್ರೀಕೃತವಾಗಲಿ. ಕ್ರಿಸ್ತಯೇಸುವೇ ನಿಮ್ಮ ನೈಜ ಜೀವವಾಗಿದ್ದಾರೆ. ಅವರು ಪುನರಾಗಮಿಸುವಾಗ ನೀವು ಸಹ ಅವರ ಮಹಿಮೆಯಲ್ಲಿ ಪಾಲುಗಾರರಾಗಿ ಅವರೊ೦ದಿಗೆ ಪ್ರತ್ಯಕ್ಷರಾಗುವಿರಿ.

ಶುಭಸ೦ದೇಶ: ಯೊವಾನ್ನ: ೨೦:೧-೯

ಅ೦ದು ಭಾನುವಾರ, ಮು೦ಜಾನೆ. ಇನ್ನೂ ಕತ್ತಲಾಗಿತ್ತು. ಮಗ್ದಲದ ಮರಿಯಳು ಸಮಾದಿಯ ಬಳಿಗೆ ಬ೦ದಳು. ಸಮಾದಿಯ ಬಾಗಿಲಿಗೆ ಮುಚ್ಚಲಾಗಿದ್ದ ಕಲ್ಲು ಅಲ್ಲಿ೦ದ ತೆಗೆದು ಹಾಕಿರುವುದನ್ನು ಕ೦ಡಲು. ಆಗ ಆಕೆ ಸಿಮೋನಪೇತ್ರನ ಮತ್ತು ಯೇಸುವಿಗೆ ಆಪ್ತನಾಗಿದ್ದ ಇನ್ನೊಬ್ಬ ಶಿಷ್ಯನ ಬಳಿಗೆ ಓಡಿಬ೦ದು, "ಪ್ರಭವನ್ನು ಸಮಾದಿಯೊಳಗಿ೦ದ ತೆಗೆದುಕೊ೦ಡು ಹೋಗಿಬಿಟ್ಟಿದ್ದಾರೆ; ಅವರನ್ನು ಎಲ್ಲಿ ಇಟ್ಟಿದ್ದಾರೋ ಗೊತ್ತಿಲ್ಲ," ಎ೦ದು ಹೇಳಿದಳು.  ಇದನ್ನು ಕೇಳಿ ಪೇತ್ರನೂ ಇನ್ನೊಬಾ ಶಿಷ್ಯನೂ ಸಮಾಧಿಯ ಕಡೆಗೆ ಹೊರಟರು. ಇಬ್ಬರೂ ಓಡಿದರು. ಆ ಇನ್ನೊಬ್ಬ ಶಿಷ್ಯನು ಪೇತ್ರನಿಗಿ೦ತ ಮು೦ದೆ ಓಡಿ ಸಮಾಧಿಯನ್ನು ಮೊದಲು ತಲುಪಿದನು. ಅವನು ಬಗ್ಗಿ ನೋಡಿದಾಗ ಅಲ್ಲಿ ನಾರುಬಟ್ಟೆಗಳು ಬಿದ್ದಿರುವುದು ಕಾಣಿಸಿತು. 


ಆದರೆ ಅವನು ಒಳಗೆ ನುಗ್ಗಲಿಲ್ಲ. ಅವನ ಹಿ೦ದೆಯೇ ಸಿಮೋನ ಪೇತ್ರನು ಬ೦ದು ನೆಟ್ಟಗೆ ಸಮಾಧಿಯೊಳಗೆ ನುಗ್ಗಿದನು; ಅಲ್ಲಿ ನಾರುಮಡಿಗಳು ಬಿದ್ದಿರುವುದನ್ನು ಕ೦ಡನು. ಯೇಸುವಿನ ತಲೆಗೆ ಸುತ್ತಿದ್ದ ಬಟ್ಟೆ, ಆ ನಾರುಮಡಿಗಳೊಡನೆ ಇರದೆ, ಅದನ್ನು ಮಡಚಿ ಪ್ರತ್ಯೇಕವಾಗಿ ಇಟ್ಟಿರುವುದನ್ನು ಕ೦ಡನು. ಸಮಾಧಿಯನ್ನು ಮೊದಲು ತಲುಪಿದ್ದ ಇನ್ನೊಬ್ಬ ಶಿಷ್ಯನು ಆಮೇಲೆ ಒಳಗೆ ನುಗ್ಗಿ ನೋಡಿದನು; ನೋಡಿ ನ೦ಬಿದನು. ಯೇಸು ಸತ್ತ ಮೇಲೆ ಮರಳಿ ಜೀವ೦ತರಾಗಿ ಎದ್ದುಬರಬೇಕು, ಎ೦ಬ ಪವಿತ್ರಗ್ರ೦ಥದ ವಾಕ್ಯ ಅವರಿಗೆ ಅದುವರೆಗೆ ಅರ್ಥವಾಗಿರಲಿಲ್ಲ.

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...