ಮೊದಲನೇ ವಾಚನ: ಧರ್ಮೋಪದೇಶಕಾಂಡ 26:16-19
ಮೋಶೆ ಜನರಿಗೆ ಹೀಗೆಂದನು: "ಈ ಆಜ್ಞಾವಿಧಿಗಳನ್ನು ನೀವು ಅನುಸರಿಸಬೇಕೆಂದು ನಮ್ಮ ದೇವರಾದ ಸರ್ವೇಶ್ವರ ನಿಮಗೆ ಇಂದು ಆಜ್ಞಾಪಿಸಿದ್ದಾರೆ. ಆದುದರಿಂದ ನೀವು ಪೂರ್ಣ ಹೃದಯದಿಂದಲೂ ಮನಸ್ಸಿನಿಂದಲೂ ಇವುಗಳನ್ನು ಕೈಗೊಂಡು ನಡೆಯಬೇಕು. ನಮಗೆ ಸರ್ವೇಶ್ವರನೇ ದೇವರಾಗಿರುವರೆಂದೂ ಹಾಗು ಅವರು ಹೇಳಿದ ಮಾರ್ಗದಲ್ಲೇ ನಡೆದು ಅವರ ಆಜ್ಞಾವಿಧಿ ನಿರ್ಣಯಗಳನ್ನು ಕೈಗೊಂಡು ಅವರ ಮಾತಿಗೆ ಲಕ್ಷ್ಯೆಕೊಡುವೆವೆಂದೂ ನೀವು ಈಗ ಒಡಂಬಟ್ಟಿದ್ದೀರಿ. ಸರ್ವೇಶ್ವರಸ್ವಾಮಿಯಾದರೋ ನಿಮ್ಮ ವಿಷಯದಲ್ಲಿ, 'ಇವರು ನನ್ನ ಆಜ್ಞೆಗಳನ್ನೆಲ್ಲ ಅನುಸರಿಸುವವರಾದರೆ ನನ್ನ ವಾಗ್ದಾನಾನುಸಾರ ನನಗೆ ಸ್ವಕೀಯ ಜನರಾಗಿರುವರು. ನಾನು ನಿರ್ಮಿಸಿದ ಬೇರೆ ಎಲ್ಲಾ ಜನಾಂಗಗಳಿಗಿಂತ ಇವರಿಗೆ ಹೆಚ್ಚಾದ ಕೀರ್ತಿ ಘನಮಾನಗಳನ್ನುಂಟು ಮಾಡುವೆನು ಹಾಗು ಇವರು ನನ್ನ ಮಾತಿನ ಮೇರೆಗೆ ತಮ್ಮ ದೇವರಾದ ಸರ್ವೇಶ್ವರನಿಗೆ ಮೀಸಲಾದ ಜನರಾಗಲು ಒಡಂಬಟ್ಟಿದ್ದಾರೆ,' ಎನ್ನುವರು."
ಕೀರ್ತನೆ: 119:1-2, 4-5, 7-8
ಶ್ಲೋಕ: ಪ್ರಭುವಿನ ಶಾಸ್ತ್ರಾನುಸಾರ ನಡೆವವರು ಧನ್ಯರು
ಶುಭಸಂದೇಶ: ಮತ್ತಾಯ 5:43-48
ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ಮಿತ್ರರನ್ನು ಪ್ರೀತಿಸು, ಶತ್ರುವನ್ನು ದ್ವೇಷಿಸು" ಎಂದು ಹೇಳಿರುವುದು ನಿಮಗೆ ತಿಳಿದೇ ಇದೆ. ನಾನು ಹೇಳುವುದನ್ನು ಗಮನಿಸಿರಿ: ನಿಮ್ಮ ಶತ್ರುಗಳನ್ನು ಪ್ರೀತಿಸಿರಿ; ನಿಮ್ಮನ್ನು ಪೀಡಿಸುವವರಿಗಾಗಿ ಪ್ರಾರ್ಥನೆ ಮಾಡಿರಿ. ಇದರಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ನೀವು ಮಕ್ಕಳಾಗುವಿರಿ. ಅವರು ಸಜ್ಜನರ ಮೇಲೂ ದುರ್ಜನರ ಮೇಲೂ ಅನೀತಿವಂತರ ಮೇಲೂ ಮಳೆಗರೆಯುತ್ತಾರೆ. ನಿಮ್ಮನ್ನು ಪ್ರೀತಿಸುವವರನ್ನು ಮಾತ್ರ ನೀವು ಪ್ರೀತಿಸಿದರೆ ಅದರಿಂದೇನು ಫಲ? ಸುಂಕ ವಸೂಲಿ ಮಾಡುವವರೂ ಹಾಗೆ ಮಾಡುವುದಿಲ್ಲವೇ? ನಿಮ್ಮ ಮಿತ್ರರನ್ನು ಮಾತ್ರ ನೀವು ಗೌರವಿಸಿದರೆ ಅದರಲ್ಲೇನು ವಿಶೇಷ? ಅನ್ಯ ಜನರೂ ಹಾಗೆ ಮಾಡುತ್ತಾರಲ್ಲವೇ? ಆದುದರಿಂದ ಸ್ವರ್ಗದಲ್ಲಿರುವ ನಮ್ಮ ತಂದೆ ಪರಿಪೂರ್ಣರಾಗಿರುವಂತೆ ನೀವೂ ಪರಿಪೂರ್ಣರಾಗಿರಿ."
ಮನಸಿಗೊಂದಿಷ್ಟು : ತಮ್ಮವರು ಹಾಗೂ ಅನ್ಯ ಜನರೂ ಎಂಬ ವಿಂಗಡಣೆಯನ್ನು ಯೇಸು ಮಾಡುತ್ತಾರೆ. ಈ ವಿಂಗಡನೆಗೆ ಬೇರೆ ಯಾವ ಮಾನದಂಡವು ಇಲ್ಲ. ಅದು ಕೇವಲ ತಮ್ಮ ವಾಕ್ಯಗಳಂತೆ ನಡೆಯುವವರು ಮತ್ತು ನಡೆಯದವರು ಎಂಬುದು ಮಾತ್ರ. ಯೇಸುವಿನ ಮಾತುಗಳಂತೆ ನಡೆಯುವವರು ಅನುಸರಿಸಬೇಕಾದ ಮಾರ್ಗ ಕಠಿಣ ಆದರೆ ಸುಂದರ. ಆದರೆ ಅದರಿಂದ ದೊರಕುವ ಬಹುಮಾನ ಸ್ವರ್ಗದ ತಂದೆಯ ಮಕ್ಕಳಾಗುವ ಸೌಭಾಗ್ಯ ಹಾಗೂ ತಂದೆಯಂತೆ ಪರಿಪೂರ್ಣವಾಗುವ ಪರಿಪೂರ್ಣತೆ
ಪ್ರಶ್ನೆ : ನಾವು ಯೇಸುವಿಗೆ ಸ್ವಂತ ಜನರಾಗಿದ್ದೇವೆಯೇ ಅಥವಾ ಇನ್ನೂ ಅನ್ಯರಾಗೇ ಉಳಿದಿದ್ದೇವೆಯೇ?
ಮನಸಿಗೊಂದಿಷ್ಟು : ತಮ್ಮವರು ಹಾಗೂ ಅನ್ಯ ಜನರೂ ಎಂಬ ವಿಂಗಡಣೆಯನ್ನು ಯೇಸು ಮಾಡುತ್ತಾರೆ. ಈ ವಿಂಗಡನೆಗೆ ಬೇರೆ ಯಾವ ಮಾನದಂಡವು ಇಲ್ಲ. ಅದು ಕೇವಲ ತಮ್ಮ ವಾಕ್ಯಗಳಂತೆ ನಡೆಯುವವರು ಮತ್ತು ನಡೆಯದವರು ಎಂಬುದು ಮಾತ್ರ. ಯೇಸುವಿನ ಮಾತುಗಳಂತೆ ನಡೆಯುವವರು ಅನುಸರಿಸಬೇಕಾದ ಮಾರ್ಗ ಕಠಿಣ ಆದರೆ ಸುಂದರ. ಆದರೆ ಅದರಿಂದ ದೊರಕುವ ಬಹುಮಾನ ಸ್ವರ್ಗದ ತಂದೆಯ ಮಕ್ಕಳಾಗುವ ಸೌಭಾಗ್ಯ ಹಾಗೂ ತಂದೆಯಂತೆ ಪರಿಪೂರ್ಣವಾಗುವ ಪರಿಪೂರ್ಣತೆ
ಪ್ರಶ್ನೆ : ನಾವು ಯೇಸುವಿಗೆ ಸ್ವಂತ ಜನರಾಗಿದ್ದೇವೆಯೇ ಅಥವಾ ಇನ್ನೂ ಅನ್ಯರಾಗೇ ಉಳಿದಿದ್ದೇವೆಯೇ?
ತಪಸ್ಸು ಕಾಲದಲ್ಲಿನ ಇಲ್ಲಿಯವರೆಗಿನ ಪ್ರಶ್ನೆಗಳು
Ø ಈ ತಪಸ್ಸು ಕಾಲದಲ್ಲಿ ನಮ್ಮ ಅಧ್ಯಾತ್ಮಿಕ ಗುರಿಗಳೇನು?
Ø ಶಿಲುಬೆ ಹೊತ್ತು ಹಿಂಬಾಲಿಸಲು ಸಿದ್ಧವಿದ್ದೇವೆಯೇ?
Ø ದೇವರ ಮುಂದೆ ನಾವು ತೋರಬಹುದಾದ ಆಸ್ತಿಗಳಾವುವು?
Ø ನಮಗೆ ಆ ದೈವೀಕ ವೈದ್ಯನ ಅವಶ್ಯಕತೆಯಿದೆ ಎಂಬ ಅರಿವು ನಮಗಿದೆಯೇ?
Ø ನಾವಿಂದು ಯಾವುದೆಲ್ಲವುಗಳಿಂದ ಜೀವಿಸುತ್ತಿದ್ದೇವೆ?
Ø ನಮ್ಮ ಜೀವನದಲ್ಲಿ ಹಸಿದವರಿಗೆ ನಾವಾಗೇ ಹೋಗಿ ಊಟವಿತ್ತ ಉದಾಹರಣೆಗಳೆಷ್ಟು?
Ø ನಮ್ಮ ಪ್ರಾರ್ಥನೆಯಲ್ಲಿ ನಿರರ್ಥಕ ಪದಗಳೆಷ್ಟು, ಸ್ವಾರ್ಥ ಬೇಡಿಕೆಗಳೆಷ್ಟು?
Ø ನಮ್ಮ ಹೃದಯವೂ ನೆನೆವೆ ನಗರದಂತಾಗಲು ಸಾಧ್ಯವಿಲ್ಲವೇ?
Ø ನಮಗಾಗಿ ನಾವು ಏನು ಅಪೇಕ್ಷಿಸುತ್ತೇವೆಯೋ ಅದನ್ನು ಇತರರಿಗೂ ಬಯಸುತ್ತಿದ್ದೇವೆಯೇ?
Ø ನಾವು ಮತ್ತೊಬ್ಬರನ್ನು ತುಚ್ಛೀಕರಿಸಿದ ಸಂದರ್ಭಗಳ ಲೆಕ್ಕ ನಮ್ಮಲ್ಲಿದೆಯೇ?
No comments:
Post a Comment