13.03.25 - ಹುಡುಕಿದವನಿಗೆ ಸಿಗುವುದು

ಮೊದಲನೇ ವಾಚನ: ಎಸ್ತೇರಳು 14(3):12, 14-16, 23-25

ರಣ ಭಯದಿಂದ ಕಂಗೆಟ್ಟ ರಾಣಿ ಎಸ್ತೇರಳು ಸರ್ವೇಶ್ವರನ ಆಶ್ರಯವನ್ನು ಕೋರಿದಳು. ಇಸ್ರಯೇಲರ ದೇವರಾದ ಸರ್ವೇಶ್ವರನಿಗೆ ಪ್ರಾರ್ಥನೆಮಾಡುತ್ತಾ ಈ ಪರಿ ಮೊರೆಯಿಟ್ಟಳು: "ನನ್ನ ಸರ್ವೇಶ್ವರಾ, ಅರಸನೇ, ತಾವೊಬ್ಬರೇ ದೇವರು, ಒಬ್ಬಂಟಿಗಳು ನಾನು, ತಾವೇ ನನಗೆ ನೆರವು. ನನ್ನ ಪ್ರಾಣಕ್ಕ ಗಂಡಾಂತರ ಬಂದಿಹ ಈ ವೇಳೆಯಲಿ ತಮ್ಮನಲ್ಲದೆ ಯಾರನ್ನು ಆಶ್ರಯಿಸಲಿ? ತಾವಾರಿಸಿಕೊಂಡಿರಿ ಸಕಲ ರಾಷ್ಟ್ರಗಳಂದ ಇಸ್ರಯೇಲರನ್ನು ತಮ್ಮ ಪ್ರಜೆಯಾಗಲು ಪ್ರತ್ಯೇಕಿಸಿದಿರಿ, ನಮ್ಮ ಪೂರ್ವಜರನ್ನು. ತಪ್ಪದೆ ಈಡೇರಿಸಿದಿರಿ ತಮ್ಮ ವಾಗ್ದಾನಗಳನ್ನು ಕುಟುಂಬದವರಿಂದ ಬಾಲ್ಯದಿಂದಲೇ ನಾ ಕಲಿತ ಈ ಪಾಠವನ್ನು. ಸರ್ವೇಶ್ಯರಾ, ನಮ್ಮನ್ನು ತಂದುಕೊಳ್ಳಿ ನೆನಪಿಗೆ ಆಪತ್ತಿನಲ್ಲಿ ನೆರವಿತ್ತು ಧೈರ್ಯನೀಡಿ ನಮಗೆ ರಾಜಾಧಿರಾಜ, ಒಡೆಯ ತಾವು ಸಕಲ ದೇವರುಗಳಿಗೆ. ಕರುಣಿಸಿ, ಸಂಹರಾಜನ ಮುಂದೆ ನಿಂತು ನಾ ವಾದಿಸುವಂತೆ ಈ ರಾಜನು ಶತ್ರು ಹಾಮಾನನನ್ನು ದ್ವೇಷಿಸುವಂತೆ ಆ ಶತ್ರು  ಹಾಗು ಅವನ ಸಂಗಡಿಗರು ನಾಶವಾಗುವಂತೆ. ಸರ್ವೇಶ್ವರ, ರಕ್ಷಿಸಿ ನೆರವಿತ್ತು ಈ ಒಬ್ಬಂಟಿಗಳಿಗೆ, ಯಾರನ್ನು ಆಶ್ರಯಿಸಲಿ ನಾನು. ತಮ್ಮನ್ನಲ್ಲದೆ?

ಕೀರ್ತನೆ: 138: 1-2, 2-3, 7-8

ಶ್ಲೋಕ: ಸರ್ವೇಶ್ವರಾ, ಮೊರೆಯಿಟ್ಟಾಗ ದಯಪಾಲಿಸಿದೆ ಎನಗೆ ಸದುತ್ತರವನು

ಮತ್ತಾಯ : 7: 7-12

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ಕೇಳಿರಿ, ನಿಮಗೆ ಕೊಡಲಾಗುವುದು; ಹುಡುಕಿರಿ, ನಿಮಗೆ ಸಿಗುವುದು; ತಟ್ಟಿರಿ, ನಿಮಗೆ ಬಾಗಿಲು ತೆರೆಯಲಾಗುವುದು. ಏಕೆಂದರೆ ಕೇಳಿಕೊಳ್ಳುವ  ಪ್ರತಿಯೊಬ್ಬನಿಗೂ ಕೊಡಲಾಗುವುದು, ಹುಡುಕಿದವನಿಗೆ ಸಿಗುವುದು, ತಟ್ಟುವವನಿಗೆ ಬಾಗಿಲು ತೆರೆಯಲಾಗುವುದು. ನಿಮ್ಮಲ್ಲಿ ಯಾವನು ತಾನೇ ತನ್ನ ಮಗ ರೊಟ್ಟಿಯನ್ನು ಕೇಳಿದರೆ ಕಲ್ಲನ್ನು ಕೊಟ್ಟಾನು? ಮೀನನ್ನು ಕೇಳಿದರೆ ಹಾವನ್ನು ಕೊಟ್ಟಾನು? ಕೆಟ್ಟವರಾದ ನೀವೇ ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡಬಲ್ಲವರಾದರೆ, ಅದಕ್ಕಿಂತಲೂ ಎಷ್ಟೋ ಹೆಚ್ಚಾಗಿ ಸ್ವರ್ಗದಲ್ಲಿರುವ ನಿಮ್ಮ ತಂದೆ ತಮ್ಮನ್ನು ಕೇಳಿಕೊಳ್ಳುವವರಿಗೆ ಒಳ್ಳೆಯ ಕೊಡುಗೆಗಳನ್ನು ಕೊಡಬಲ್ಲರು! ಜನರು ನಿಮಗೆ ಏನೇನು ಮಾಡಬೇಕೆಂದು ನೀವು ಅಪೇಕ್ಷಿಸುತ್ತೀರೋ, ಅದನ್ನೇ ನೀವು ಅವರಿಗೆ ಮಾಡಿ. ಧರ್ಮಶಾಸ್ತ್ರದ ಹಾಗೂ ಪ್ರವಾದನೆಗಳ ಸಾರ ಇವೇ."

ಮನಸಿಗೊಂದಿಷ್ಟು : ದೇವರು ನಮ್ಮ ಎಲ್ಲ ಪ್ರಾರ್ಥನೆಗಳಿಗೆ ಉತ್ತರಿಸುತ್ತಾರೆ. ಆದರೆ ಅವರು ಉತ್ತರಿಸುವುದು ಅವರದೇ ಆದ ವಿಧ, ವಿವೇಕ, ಸಮಯ ಹಾಗೂ ಪ್ರೀತಿಯಲ್ಲಿ. ಅವರ ಚಿತ್ತ ಸಮಯದಲ್ಲಿ ವಿಶ್ವಾಸವಿಟ್ಟು ನಮ್ಮ ಪ್ರಾರ್ಥನೆಯ ಈಡೇರುವಿಕೆಗಾಗಿ ಕಾಯುವುದಷ್ಟೇ ನಮ್ಮ ಕೆಲಸ. ಅಂತಿಮವಾಗಿ  ನಾವು ಕೇಳಿದ್ದಕ್ಕಿಂತ ಉತ್ತಮವಾದುದ್ದನ್ನೇ ನೀಡುವ ದೇವರು ಎಂಬ ನಮ್ಮ ನಂಬಿಕೆ ನಮ್ಮನ್ನು ಕಾಯುತ್ತದೆ. 

ಪ್ರಶ್ನೆ: ನಮಗಾಗಿ ನಾವು ಏನು ಅಪೇಕ್ಷಿಸುತ್ತೇವೆಯೋ ಅದನ್ನು ಇತರರಿಗೂ ಬಯಸುತ್ತಿದ್ದೇವೆಯೇ?

No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...