ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

04.07.23 - "ಯೇಸು ಎದ್ದು ನಿಂತು ಸುಂಟರಗಾಳಿಯನ್ನೂ ಸರೋವರವನ್ನೂ ಗದರಿಸಿದರು. ಆಗ ವಾತಾವರಣ ಪ್ರಶಾಂತವಾಯಿತು."

ಮೊದಲನೆಯ  ವಾಚನ : ಆದಿಕಾಂಡದಿಂದ  ಇಂದಿನ  ವಾಚನ  19:15-29

ಮೂಡುವುದಕ್ಕೆ  ಮುಂಚೆ  ದೂತರು  ಲೋಟನಿಗೆ,  " ಏಳುನಿನ್ನ  ಹೆಂಡತಿ  ಮತ್ತು  ಹೆಣ್ಣುಮಕ್ಕಳಿಬ್ಬರನ್ನು  ಕರೆದುಕೊಂಡು  ಬೇಗನೆ  ಹೊರಡು ಇಲ್ಲದಿದ್ದರೆ  ಊರಿಗೆ  ಬರಲಿರುವ  ದಂಡನೆಯಲ್ಲಿ  ನೀನೂ  ಸಿಕ್ಕಿಕೊಂಡು  ನಾಶವಾಗಬೇಕಾದೀತು, " ಎಂದು  ಹೇಳಿ  ತ್ವರೆಪಡಿಸಿದನು.  ಅವನು  ಇನ್ನೂ  ತಡಮಾಡುತ್ತಿರುವುದನ್ನು  ಕಂಡುಆ  ಮನುಷ್ಯರು  ಅವನನ್ನು  ಹಾಗು  ಅವನ  ಹೆಂಡತಿ  ಮಕ್ಕಳನ್ನು  ಕೈಹಿಡಿದು  ಹೊರಗೆ  ತಂದು  ಊರಾಚೆಗೆ  ಬಿಟ್ಟರು.  ಸರ್ವೇಶ್ವರಸ್ವಾಮಿಗೆ  ಅವನ  ಮೇಲೆ  ಅಷ್ಟು  ಕನಿಕರವಿತ್ತು.  ಊರ  ಹೊರಗೆ  ಬಿಟ್ಟಾದ  ಮೇಲೆ  ಆ  ಇಬ್ಬರಲ್ಲಿ  ಒಬ್ಬನು,  " ಪ್ರಾಣ  ಉಳಿಸಿಕೊಳ್ಳಬೇಕಾದರೆ  ಓಡಬೇಕುಹಿಂದಕ್ಕೆ  ತಿರುಗಿ  ನೋಡಬಾರದು ಬಯಲುಸೀಮೆಯಲ್ಲೂ  ನಿಲ್ಲದೆ  ಗುಡ್ಡಗಾಡಿಗೆ  ಓಡಬೇಕುಇಲ್ಲವಾದರೆ  ನಾಶವಾದೀತು !  "ಎಂದು  ಎಚ್ಚರಿಸಿದನು.  ಅದಕ್ಕೆ  ಲೋಟನು,  "ಸ್ವಾಮಿಅದು  ನನ್ನಿಂದಾಗದು ನಿಮ್ಮ  ದಾಸನ  ಮೇಲೆ  ಮರುಕವಿಟ್ಟುಪ್ರಾಣ  ಉಳಿಸಿದ್ದೇನೋ  ಮಹಾ  ಉಪಕಾರವಾಯಿತು ಆದರೆ  ಗುಡ್ಡಗಾಡಿಗೆ  ಓಡಿಹೋಗಲು  ನನ್ನಿಂದಾಗದುಅಲ್ಲಿಗೆ  ಸೇರುವುದಕ್ಕೆ  ಮುಂಚೆಯೇ  ಈ  ವಿಪತ್ತಿಗೆ  ಸಿಕ್ಕಿ  ಸತ್ತೇನು.  ಆದುದರಿಂದ  ಅಗೋಅಲ್ಲಿ  ಊರೊಂದು  ಕಾಣಿಸುತ್ತಿದೆ ಅದು  ಅಷ್ಟೇನು  ದೂರವಲ್ಲಚಿಕ್ಕ  ಊರುಹೌದಲ್ಲವೆ ಅಲ್ಲಿಗಾದರೂ  ಹೋಗಲು  ಅಪ್ಪಣೆಯಾದರೆ  ಪ್ರಾಣ  ಉಳಿಯುತ್ತದೆ, " ಎಂದನು.  ಅದಕ್ಕಾತನು, " ಸರಿಹಾಗೆಯೇ  ಆಗಲಿಈ  ನಿನ್ನ  ಕೋರಿಕೆಯನ್ನು  ನೆರವೇರಿಸುತ್ತೇನೆ.  ನೀನು  ಹೇಳಿದ  ಆ  ಊರನ್ನು  ಹಾಳುಮಾಡುವುದಿಲ್ಲ.  ಬೇಗನೆ  ಅಲ್ಲಿಗೆ  ಹೋಗಿ  ಸುರಕ್ಷಿತವಾಗಿರು.  ನೀನು  ಅಲ್ಲಿಗೆ  ಮುಟ್ಟುವ  ತನಕ  ನಾನು  ಏನನ್ನೂ  ಮಾಡಲಿಕ್ಕಾಗುವುದಿಲ್ಲ,  " ಎಂದನು.   ಲೋಟನು  ಆ  ಊರನ್ನು  ಚಿಕ್ಕದು  ಎಂದು  ಕರೆದುದಕ್ಕಾಗಿ  ಅದಕ್ಕೆ  "ಚೋಗರ್"  ಎಂದು  ಹೆಸರಾಯಿತು.  ಲೋಟನು  ಚೋಗುರನ್ನು  ಮುಟ್ಟುವಷ್ಟರಲ್ಲಿ  ಸೂರ್ಯೋದಯವಾಗಿತ್ತು.  ಆಗ  ಸರ್ವೇಶ್ವರಸ್ವಾಮಿ  ಸೊದೋಮ್ - ಗೊಮೋರಗಳ  ಮೇಲೆ  ಅಗ್ನಿಉರಿಯುತ್ತಿರುವ  ಗಂಧಕಮಳೆ  ಸುರಿಸಿದರು.  ಆ  ಪಟ್ಟಣಗಳನ್ನೂಇಡೀ  ಆ  ಬಯಲುಸೀಮೆಯನ್ನೂ  ಅವುಗಳ  ನಿವಾಸಿಗಳನ್ನೂ  ಹೊಲಗಳ  ಬೆಳೆಯೆಲ್ಲವನ್ನೂ  ಹಾಳುಮಾಡಿದರು.  ಲೋಟನ  ಹೆಂಡತಿಯೋಅವನ  ಹಿಂದೆ  ಬರುತ್ತಿದ್ದಾಗ  ಹಿಂದಿರುಗಿ  ನೋಡಿದಳು ಕೂಡಲೇ  ಉಪ್ಪಿನ  ಕಂಬವಾಗಿ  ಮಾರ್ಪಟ್ಟಳು.  ಇತ್ತ  ಅಬ್ರಾಮನು  ಬೆಳಿಗ್ಗೆ  ಎದ್ದು  ತಾನು  ಸರ್ವೇಶ್ವರಸ್ವಾಮಿ  ಸನ್ನಿಧಿಯಲ್ಲಿ  ನಿಂತಿದ್ದ  ಸ್ಥಳಕ್ಕೆ  ಮರಳಿ  ಬಂದನು.  ಸೊದೋಮ್ - ಗೊಮೋರ  ಹಾಗೂ  ಆ  ಬಯಲುಸೀಮೆಯತ್ತ  ಅವನು  ಕಣ್ಣು  ಹಾಯಿಸಿದಾಗಇಗೋಆ  ಪ್ರದೇಶದಿಂದ  ಹೊಗೆದೊಡ್ಡ  ಆವಿಗೆಯ  ಹೊಗೆಯಂತೆ  ಭುಗಿಲೇರುತ್ತಿತ್ತು.   ದೇವರು  ಆ  ಬಯಲುಸೀಮೆಯ  ಪಟ್ಟಣಗಳನ್ನು  ನಾಶಮಾಡಿದಾಗ  ಲೋಟನು  ವಾಸವಾಗಿದ್ದ  ಊರುಗಳನ್ನೇನೋ  ಹಾಳುಮಾಡಿದರು.  ಆದರೆ  ಅಬ್ರಾಮನನ್ನು  ನೆನಪಿಗೆ  ತಂದುಕೊಂಡು  ಲೋಟನನ್ನು ತಪ್ಪಿಸಿ  ಕಾಪಾಡಿದರು.

- ಪ್ರಭುವಿನ  ವಾಕ್ಯ

ಕೀರ್ತನೆ 26:2-3,9-10,11-12.
ಶ್ಲೋಕ: ಕೈಬಿಡದ ನಿನ್ನೊಲವು ನನ್ನ ಕಣ್ಮುಂದಿದೆ |

ಪರೀಕ್ಷಿಸು,  ಪ್ರಭೂ,  ಎನ್ನನ್ನು  ಪರಿಶೀಲಿಸು|

ಹೃನ್ಮನಗಳೆಲ್ಲವನು  ನೀ  ಪರಿಶೋಧಿಸು||

ಕೈಬಿಡದ  ನಿನ್ನೊಲವು  ನನ್ನ  ಕಣ್ಮುಂದಿದೆ|

ನೀ  ತೋರಿದ  ಸತ್ಯ  ಪಥದಲಿ,  ನಾ  ನಡೆದೆ||

 

ಪಾಪಿಗಳ  ಸಮೇತ  ಎನ್ನ  ಪ್ರಾಣವನಳಿಸಬೇಡಯ್ಯಾ|

ಕೊಳೆಪಾತಕರ  ಸಮೇತ  ಎನ್ನ  ಜೀವ  ತೆಗೆಯಬೇಡಯ್ಯಾ||

ಇದೆ    ಜನರ  ಕೈಗಳಲಿ  ಕೆಡಕುತನ|

ಬಲಗೈ  ತುಂಬ  ಲಂಚಕೋರತನ||

 

ನೀತಿಯ  ಪಥದೊಳು  ನಾ  ನಡೆವೆನಯ್ಯಾ|

ಕರುಣೆ  ತೋರುವ  ಪ್ರಭೂ,  ರಕ್ಷಿಸಯ್ಯಾ||

ಸಮತಳದಲಿ  ನಿಂತಿವೆ  ನನ್ನ  ಪಾದಗಳು|

ಸ್ತುತಿಸುವೆ  ನಾ  ಪ್ರಭುವನು  ಭಕ್ತರ  ಸಭೆಯೊಳು||

 ಘೋಷಣೆ       2 ತಿಮೊಥೇಯ  1:10

 ಅಲ್ಲೆಲೂಯ, ಅಲ್ಲೆಲೂಯ!

ಮೃತ್ಯುಶಕ್ತಿಯನ್ನು  ವಿನಾಶಗೊಳಿಸಿಅಮರಜೀವವನ್ನು  ಶುಭಸಂದೇಶದ  ಮೂಲಕ  ಬೆಳಕಿಗೆ  ತಂದವರು  ಯೇಸುವೇ,,

ಅಲ್ಲೆಲೂಯ!

ಶುಭಸಂದೇಶ  ವಾಚನ : ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 8:23-27

ಆ  ಕಾಲದಲ್ಲಿ  ಯೇಸು  ದೋಣಿಯನ್ನು  ಹತ್ತಿದರು.  ಶಿಷ್ಯರು  ಹತ್ತಿ  ಅವರ  ಸಂಗಡ  ಹೋದರು‌.  ಇದ್ದಕ್ಕಿದ್ದ  ಹಾಗೆ  ಸರೋವರದಲ್ಲಿ  ರಭಸವಾದ  ಬಿರುಗಾಳಿ  ಎದ್ದಿತು.  ದೋಣಿ  ಅಲೆಗಳಿಂದ  ಮುಳುಗಿ  ಹೋಗುವುದರಲ್ಲಿತ್ತು.  ಯೇಸುವಾದರೋ  ನಿದ್ರಾವಶರಾಗಿದ್ದರು.  ಶಿಷ್ಯರು  ಹತ್ತಿರಕ್ಕೆ  ಬಂದು  ಅವರನ್ನು  ಎಬ್ಬಿಸಿ,  "ಪ್ರಭೂಕಾಪಾಡಿನಾವು  ನೀರುಪಾಲಾಗುತ್ತಿದ್ದೇವೆ,  " ಎಂದರು.  ಅದಕ್ಕೆ  ಯೇಸು,  "ಅಲ್ಪ  ವಿಶ್ವಾಸಿಗಳೇನಿಮಗೇಕೆ  ಇಷ್ಟು  ಭಯ?  "ಎಂದರು.  ಅನಂತರ  ಎದ್ದುನಿಂತು  ಸುಂಟರಗಾಳಿಯನ್ನೂ  ಸರೋವರವನ್ನೂ  ಗದರಿಸಿದರು.  ಆಗ  ವಾತಾವರಣ  ಪ್ರಶಾಂತವಾಯಿತು.   ಶಿಷ್ಯರು  ನಿಬ್ಬೆರಗಾದರು. " ಗಾಳಿಯೂ  ಸರೋವರವೂ  ಇವರು  ಹೇಳಿದಂತೆ  ಕೆಳಬೇಕಾದರೆ  ಇವರೆಂತಹ  ವ್ಯಕ್ತಿಯಾಗಿರಬೇಕು ! " ಎಂದುಕೊಂಡರು.

-ಪ್ರಭುಕ್ರಿಸ್ತರ  ಶುಭಸಂದೇಶ


03.07.23 - ವಿಶ್ವಾಸರಹಿತನಾಗಿರಬೇಡ, ವಿಶ್ವಾಸಿಸು

ಮೊದಲನೇ ವಾಚನ : ಪ್ರೇಷಿತರ ಕಾರ್ಯಕಲಾಪಗಳು  : 10:24-35 


ಮರುದಿವಸ ಅವನು ಸೆಜರೇಯವನ್ನು ತಲುಪಿದನು. ಇತ್ತ ಕೊರ್ನೇಲಿಯನು ತಾನು ಆಹ್ವಾನಿಸಿದ ನೆಂಟರಿಷ್ಟರೊಡನೆಮತ್ತು ಆಪ್ತಮಿತ್ರರೊಡನೆ ಪೇತ್ರನಿಗಾಗಿ ಕಾಯುತ್ತಿದ್ದನು. ಪೇತ್ರನು ಮನೆಯನ್ನು ಪ್ರವೇಶಿಸುತ್ತಿದ್ದಂತೆ ಕೊರ್ನೇಲಿನು ಅವನನ್ನು ಎದುರಗೊಂಡುಪಾದಕ್ಕೆರಗಿಸಾಷ್ಟಾಂಗ ನಮಸ್ಕಾರ ಮಾಡಿದನು. ಪೇತ್ರನು ಅವನನ್ನು ಮೇಲಕ್ಕೆಬ್ಬಿಸಿ,   ಎದ್ದು ನಿಲ್ಲು,  ನಾನೂ ಒಬ್ಬ ಸಾಮಾನ್ಯ ಮನುಷ್ಯನೇ,” ಎಂದನು.

ಕೊರ್ನೇಲಿಯನೊಡನೆ ಮಾತನಾಡುತ್ತಾ ಪೇತ್ರನು ಮನೆಯೊಳಕ್ಕೆ ಬಂದಾಗ ಅಲ್ಲಿ ಅನೇಕ ಜನರು ಸಭೆ ಸೇರಿರುವುದನ್ನು ಕಂಡನು. ಪೇತ್ರನು ಅವರಿಗೆ, “ಯೆಹೂದ್ಯನೊಬ್ಬನು ಅನ್ಯಧರ್ಮದವರೊಡನೆ ಸಂಪರ್ಕ ಇಟ್ಟುಕೊಳ್ಳುವುದು ಅಥವಾ ಅವರಿಗೆ ಭೇಟಿಕೊಡುವುದು ಧರ್ಮನಿಷಿದ್ಧ ಎಂಬುದು ನಿಮಗೆ ತಿಳಿದೇ ಇದೆ. ಆದರೆ, ನಾನು ಯಾರನ್ನೂ ಅಶುದ್ಧ ಅಥವಾ ಅಸ್ಪೃಶ್ಯ ಎನ್ನಬಾರದೆಂದು ದೇವರು ನನಗೆ ತೋರಿಸಿಕೊಟ್ಟಿದ್ದಾರೆ. ಆದುದರಿಂದಲೇ ನೀವು ಹೇಳಿಕಳುಹಿಸಿದಾಗ ನಾನು ಯಾವ ಆಕ್ಷೇಪಣೆಮಾಡದೆ ಬಂದಿದ್ದೇನೆ. ಈಗ ನನ್ನನ್ನು ಕರೆದ ಕಾರಣವೇನೆಂದು ತಿಳಿಯಬಯಸುತ್ತೇನೆ,” ಎಂದನು.

ಆಗ ಕೊರ್ನೇಲಿಯನು, “ನಾನು ಮೂರು ದಿನಗಳ ಹಿಂದೆ ಮಧ್ಯಾಹ್ನ ಮೂರು ಗಂಟೆಯ ಇದೇ ಸಮಯದಲ್ಲಿ ಪ್ರಾರ್ಥನೆ ಮಾಡುತ್ತಾ ಇದ್ದೆ. ಹಠಾತ್ತನೆ ಶೋಭಾಯಮಾನ ವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬನು ನನ್ನೆದುರಿಗೆ ನಿಂತನು. ಅವನು, “ಕೊರ್ನೇಲಿಯಾ, ದೇವರು ನಿನ್ನ ಪ್ರಾರ್ಥನೆಯನ್ನು ಆಲಿಸಿದ್ದಾರೆ; ನಿನ್ನ ದಾನಧರ್ಮಗಳನ್ನು ಮೆಚ್ಚಿದ್ದಾರೆ. ಯಾರನ್ನಾದರೂ ಜೊಪ್ಪಕ್ಕೆ ಕಳುಹಿಸಿ ಪೇತ್ರ ಎಂದು ಕರೆಯಲಾದ ಸಿಮೋನನನ್ನು ಬರಮಾಡಿಕೊ. ಅವನು ಸಮುದ್ರತೀರದಲ್ಲಿ ವಾಸಿಸುತ್ತಿರುವ, ಚರ್ಮ ಹದಮಾಡುವ ಸಿಮೋನನ ಮನೆಯಲ್ಲಿ ತಂಗಿದ್ದಾನೆ,” ಎಂದನು. ಅಂತೆಯೇ ನಾನು ತಕ್ಷಣ ತಮ್ಮನ್ನು ಕರೆತರಲು ಕಳುಹಿಸಿದೆ. ತಾವು ಇಲ್ಲಿಗೆ ದಯಮಾಡಿಸಿದಿರಿ. ಪ್ರಭು ತಮಗೆ ಆಜ್ಞಾಪಿಸಿರುವುದನ್ನೆಲ್ಲಾ ಕೇಳಲು ನಾವೆಲ್ಲರೂ ಇಲ್ಲಿ ದೇವರ ಸನ್ನಿಧಿಯಲ್ಲಿ ಸೇರಿದ್ದೇವೆ,” ಎಂದನು.

ಆಗ ಪೇತ್ರನು ಹೀಗೆಂದು ಉಪದೇಶ ಮಾಡಿದನು: “ದೇವರು ಪಕ್ಷಪಾತಿಯಲ್ಲ. ವಿಷಯ ನನಗೆ ಮನದಟ್ಟಾಗಿದೆ. ದೇವರಿಗೆ ಭಯಪಟ್ಟು ಸತ್ಪುರುಷನಾಗಿ ಬಾಳುವವನು ಯಾವ ಜನಾಂಗದವನೇ ಆಗಿರಲಿ, ಅವನು ಅವರ ಮೆಚ್ಚುಗೆಗೆ ಪಾತ್ರನಾಗುತ್ತಾನೆ.

-ಪ್ರಭುವಿನ ವಾಕ್ಯ

ಎರಡನೇ ವಾಚನ  : ಹಿಬ್ರಿಯರಿಗೆ 1:2-3 


ಆದರೆ, ಇತ್ತೀಚಿನ ಅಂತಿಮ ದಿನಗಳಲ್ಲಿ ಅವರು ತಮ್ಮ ಪುತ್ರನ ಮುಖೇನ ನಮ್ಮೊಡನೆ ಮಾತನಾಡಿದ್ದಾರೆ. ದೇವರು ಇಡೀ ವಿಶ್ವವನ್ನು ಉಂಟುಮಾಡಿದ್ದು ಇವರ ಮುಖಾಂತರವೇ; ಸಮಸ್ತಕ್ಕೂ ಬಾಧ್ಯನನ್ನಾಗಿ ನೇಮಿಸಿರುವುದು ಇವರನ್ನೇ. ಇವರೇ ದೇವರ ಮಹಿಮೆಯ ತೇಜಸ್ಸು; ಇವರೇ ದೈವತ್ವದ ಪಡಿಯಚ್ಚು; ತಮ್ಮ ಶಕ್ತಿಯುತ ವಾಕ್ಯದಿಂದ ಇವರೇ ಸಮಸ್ತಕ್ಕೂ ಆಧಾರ; ನಮ್ಮ ಪಾಪಗಳನ್ನು ತೊಡೆದುಹಾಕಿ, ಸ್ವರ್ಗದಲ್ಲಿ ಮಹೋನ್ನತ ದೇವರ ಬಲಪಾರ್ಶ್ವದಲ್ಲಿ ಆಸೀನರಾಗಿರುವವರೂ ಇವರೇ.

-ಪ್ರಭುವಿನ ವಾಕ್ಯ

ಶುಭಸಂದೇಶ: ಯೊವಾನ್ನ20:24-29

ಹನ್ನೆರಡು ಮಂದಿಯಲ್ಲಿ ಒಬ್ಬನಾದ ದಿದುಮ ಎಂಬ ತೋಮನು, ಯೇಸು ಸ್ವಾಮಿ ಬಂದಾಗ ಶಿಷ್ಯರೊಡನೆ ಇರಲಿಲ್ಲ. ಉಳಿದ ಶಿಷ್ಯರು, “ನಾವು ಪ್ರಭುವನ್ನು ನೋಡಿದೆವು,” ಎಂದು ಹೇಳಿದರು. ಅದಕ್ಕೆ ಅವನು, “ಅವರ ಕೈಗಳಲ್ಲಿ ಮೊಳೆಗಳಿಂದಾದ ಗಾಯದ ಕಲೆಯನ್ನು ನಾನು ನೋಡಬೇಕು. ಮೊಳೆಗಳು ಜಡಿದಿದ್ದ ಜಾಗದಲ್ಲಿ ನನ್ನ ಬೆರಳನ್ನಿಡಬೇಕು, ಅವರ ಪಕ್ಕೆಯಲ್ಲಿ ನನ್ನ ಕೈಯನ್ನು ಇಟ್ಟು ನೋಡಬೇಕು. ಆ ಹೊರತು ನಾನು ನಂಬುವುದೇ ಇಲ್ಲ,” ಎಂದುಬಿಟ್ಟನು.

ಎಂಟು ದಿನಗಳು ಕಳೆದವು. ಶಿಷ್ಯರು ಪುನಃ ಒಳಗೆ ಒಟ್ಟುಗೂಡಿದ್ದರು. ತೋಮನೂ ಅವರೊಡನೆ ಇದ್ದನು. ಬಾಗಿಲುಗಳು ಮುಚ್ಚಿದ್ದರೂ ಯೇಸು ಬಂದು ಅವರ ನಡುವೆ ನಿಂತು, “ನಿಮಗೆ ಶಾಂತಿ” ಎಂದರು. ಆಮೇಲೆ ತೋಮನಿಗೆ, “ಇಗೋ ನೋಡು, ನನ್ನ ಕೈಗಳು; ನಿನ್ನ ಬೆರಳನ್ನು ತಂದು ಇಲ್ಲಿಡು. ನಿನ್ನ ಕೈಯನ್ನು ಚಾಚಿ ನನ್ನ ಪಕ್ಕೆಯಲ್ಲಿಡು. ವಿಶ್ವಾಸರಹಿತನಾಗಿರಬೇಡ, ವಿಶ್ವಾಸಿಸು,” ಎಂದು ಹೇಳಿದರು. ಆಗ ತೋಮನು, “ನನ್ನ ಪ್ರಭುವೇ, ನನ್ನ ದೇವರೇ,” ಎಂದನು. ಯೇಸು ಅವನಿಗೆ, “ನನ್ನನ್ನು ಕಂಡುದರಿಂದ ತಾನೆ ನಿನಗೆ ವಿಶ್ವಾಸ ಹುಟ್ಟಿತು? ಕಾಣದೆ ವಿಶ್ವಾಸಿಸುವವರು ಧನ್ಯರು,” ಎಂದು ಹೇಳಿದರು.

02.07.23 - ನನ್ನ ಶಿಷ್ಯನೆಂದು ಕುಡಿಯಲು ಒಂದು ಲೋಟ ತಣ್ಣೀರನ್ನು ಕೊಟ್ಟರೂ ಅದಕ್ಕೆ ತಕ್ಕ ಪ್ರತಿಫಲವನ್ನು ಪಡೆಯದೆ ಹೋಗನೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ

ಮೊದಲನೆಯ  ವಾಚನ ; ಅರಸರುಗಳ  ಎರಡನೆಯ  ಪತ್ರದಿಂದ  ಇಂದಿನ  ಮೊದಲನೆಯ  ವಾಚನ 4:8-11, 14-16


ಒಂದು  ಸಾರಿ  ಎಲೀಷನು  ಶೂನೇಮಿಗೆ  ಹೋದನು.  ಅಲ್ಲಿ  ಒಬ್ಬ  ಶ್ರೀಮಂತ  ಮಹಿಳೆ  ಇದ್ದಳು.   ಆಕೆ  ಅವನನ್ನು  ತನ್ನ  ಮನೆಯಲ್ಲಿ  ಊಟಮಾಡಬೇಕೆಂದು  ಒತ್ತಾಯಪಡಿಸಿದಳು.  ಅಂದಿನಿಂದ  ಅವನು    ಮಾರ್ಗವಾಗಿ  ಹೋಗುವಾಗಲೆಲ್ಲಾ    ಮನೆಯಲ್ಲೇ  ಊಟಮಾಡುತ್ತಿದ್ದನು.    ಮಹಿಳೆ  ತನ್ನ  ಗಂಡನಿಗೆ,  "ಯಾವಾಗಲೂ    ದಾರಿಯಿಂದ  ಹೋಗುತ್ತಾ  ಬರುತ್ತಾ  ಇರುವ    ವ್ಯಕ್ತಿ  ಒಬ್ಬ  ಸಂತನು  ಹಾಗು  ದೈವಪುರುಷನು  ಆಗಿರುತ್ತಾನೆಂದು  ನನಗೆ  ಗೊತ್ತಾಯಿತು.  ಆದುದರಿಂದ  ನಾವು  ಅವನಿಗಾಗಿ  ಮಾಳಿಗೆಯ  ಮೇಲೆ  ಒಂದು  ಸಣ್ಣ  ಕೋಣೆಯನ್ನು  ಕಟ್ಟಿಸೋಣ.  ಅದರಲ್ಲಿ  ಒಂದು  ಮಂಚಮೇಜುಕುರ್ಚಿದೀಪಸ್ತಂಭ  ಇವುಗಳನ್ನು  ಇಡೋಣಅವನು  ಅಲ್ಲಿಗೆ  ಬಂದಾಗೆಲ್ಲಾ  ಅದರಲ್ಲಿ  ವಾಸಮಾಡಲಿ, " ಎಂದು  ಹೇಳಿದಳು.  ಒಂದು  ದಿನ  ಎಲೀಷನು  ಅಲ್ಲಿಗೆ  ಬಂದು    ಕೋಣೆಯೊಳಗೆ  ಪ್ರವೇಶಿಸಿ  ದಣಿವಾರಿಸಿಕೊಂಡನು.  ಅಮೇಲೆ  ಎಲೀಷನು ಗೇಹಜಿಯನ್ನು,   "ನಾವು  ಆಕೆಗೆ  ಯಾವ  ಉಪಕಾರವನ್ನು  ಮಾಡಬಹುದು? " ಎಂದು  ಕೇಳಿದನು.  ಅವನು,  " ಆಕೆಗೆ  ಮಗನಿಲ್ಲಗಂಡನು  ಮುದಕನಾಗಿದ್ದಾನೆ, ' ಎಂದನು.  ಇದನ್ನು  ಕೇಳಿ  ಎಲೀಷನು    ಮಹಿಳೆಯನ್ನು ಕರೆಯಬೇಕೆಂದು. ಆಜ್ಞಾಪಿಸಿದನು.  ಅವನು  ಹೋಗಿ  ಕರೆದನು.  ಆಕೆ  ಬಂದು  ಬಾಗಿಲಿನ  ಹತ್ತಿರ  ನಿಂತಳು.  ಇಲೀಷನು  ಆಗೆಗೆ,  " ನೀನು  ಬರುವ  ವರ್ಷ  ಇದೇ  ಕಾಲದಲ್ಲಿ  ಒಬ್ಬ  ಮಗುನನ್ನು  ಅಪ್ಪಿಕೊಂಡಿರುವೆ, " ಎಂದನು.

ಪ್ರಭುವಿನ  ವಾಕ್ಯ


ಕೀರ್ತನೆ       89:1-2,15-16,17-18.V.1

ಶ್ಲೋಕ:   ಪ್ರಭೂ  ಕೀರ್ತಿಸುವೆನು  ಸದಾ  ನಿನ್ನಚಲ  ಪ್ರೀತಿಯನು ||

 

1.  ಪ್ರಭೂಕೀರ್ತಿಸುವೆನು ಸದಾ ನಿನ್ನಚಲ ಪ್ರೀತಿಯನು|

ಸಾರುವೆನು ತಲತಲಾಂತರಕು ನಿನ್ನ ಸತ್ಯತೆಯನು||

ನಿನ್ನಚಲ  ಪ್ರೀತಿ  ಪ್ರಭೂ ನನಗೆ ಶಾಶ್ವತ  ಸಿದ್ದ|

ನಿನ್ನ  ಸತ್ಯತೆ  ಆಗಸದಂತೆ  ಸ್ಥಿರ ಸ್ಥಾಪಿತ||

 

2.  ಧನ್ಯರು  ಪ್ರಭೂನಿನಗೆ  ಜಯಕಾರ  ಹಾಡುವವರು|

ನಿನ್ನ  ಮುಖದ  ಪ್ರಕಾಶದೊಳವರು  ನಡೆಯುವರು||

ಆನಂದಿಸುವರವರು  ಸದಾ  ನಿನ್ನ  ನಾಮದಲಿ|

ಪ್ರವರ್ಧಿಸುವರವರು  ನಿನ್ನ  ನ್ಯಾಯನೀತಿಯಲಿ||

 

3.  ಅವರ  ಶಕ್ತಿಸಾಮರ್ಥ್ಯದ  ಪ್ರತಿಭೆ  ನಿನ್ನದೆ|

ನಿನ್ನ  ದಯೆಯಿಂದ  ನಮಗೆ  ಕೋಡುಮೂಡಿದೆ||

ಗುರಾಣಿಯಂತಿಹ  ನಮ್ಮ  ರಾಜನು  ಪ್ರಭುವಿನವನೇ|

ಇಸ್ರಯೇಲಿನ  ಪರಮಪಾವನ  ಸ್ವಾಮಿಗೆ  ಸೇರಿದವನೇ||

 

ಎರಡನೆಯ  ವಾಚನ : ಪೌಲನು  ರೋಮನರಿಗೆ  ಬರೆದ  ಪತ್ರದಿಂದ ಇಂದಿನ ಎರಡನೆಯ ವಾಚನ 6:3-4, 8-11



 ಕ್ರಿಸ್ತ  ಯೇಸುವಿನವರಾಗಲು  ದೀಕ್ಷಾಸ್ನಾನ  ಹೊಂದಿರುವ  ನಾವು.  ಅವರ  ಮರಣದಲ್ಲಿ  ಪಾಲುಗಾರರಾಗಲು  ದೀಕ್ಷಾಸ್ನಾನ  ಪಡೆದೆವು  ಎಂಬುದು  ನಿಮಗೆ  ತಿಳಿಯದೆಹೀಗಿರಲಾಗಿದೀಕ್ಷಾಸ್ನಾನ  ಮಾಡಿಸಿಕೊಂಡಾಗ  ಅವರ  ಮರಣದಲ್ಲಿ  ಪಾಲುಗಾರರಾದ  ನಮಗೆ  ಅವರೊಡನೆ  ಸಮಾಧಿಯೂ  ಆಯಿತು.  ಆದುದರಿಂದ  ತಂದೆಯ  ಮಹಿಮಾಶಕ್ತಿಯಿಂದ  ಕ್ರಿಸ್ತ  ಯೇಸು  ಮರಣದಿಂದ  ಪುನರುತ್ಥಾನ  ಹೊಂದಿದ್ದಂತೆಯೇ  ನಾವು  ಸಹ  ಹೊಸ  ಜೀವವನ್ನು  ಹೊಂದಿ  ಬಾಳುತ್ತೇವೆ.  ಕ್ರಿಸ್ತ  ಯೇಸುವಿನೊಂದಿಗೆ  ನಾವು  ಮರಣ  ಹೊಂದಿದ್ದರೆ  ಅವರೊಡನೆ  ನಾವೂ  ಜೀವಿಸುತ್ತೇವೆ ಇದೇ  ನಮ್ಮ  ವಿಶ್ವಾಸ.  ಯೇಸುಕ್ರಿಸ್ತರನ್ನು  ಮರಣದಿಂದ  ಎಬ್ಬಿಸಲಾಯಿತು  ಎಂಬುದನ್ನು  ನಾವು  ಬಲ್ಲೆವು.  ಆದ್ದರಿಂದ  ಅವರು  ಇನ್ನು  ಎಂದಿಗೂ  ಸಾಯುವುದಿಲ್ಲ ಸಾವಿಗೆ  ಅವರ  ಮೇಲೆ  ಯಾವ  ಅಧಿಕಾರವೂ  ಇಲ್ಲ.  ಏಕೆಂದರೆಅವರು  ಪಾಪದ  ಪಾಲಿಗೆ  ಒಂದೇ  ಸಾರಿಗೆ  ಮಾತ್ರವಲ್ಲಎಂದೆಂದಿಗೂ  ಸತ್ತವರು.  ಅವರು  ಈಗ  ಜೀವಿಸುವುದು  ದೇವರಿಗಾಗಿಯೇ.  ಅಂತೆಯೇ  ನೀವೂ  ಸಹ  ಪಾಪದ  ಪಾಲಿಗೆ  ಸತ್ತವರೆಂದೂ  ದೇವರಿಗಾಗಿ  ಮಾತ್ರ  ಯೇಸುಕ್ರಿಸ್ತರಲ್ಲಿ  ಜೀವಿಸುವವರೆಂದೂ  ಪರಿಗಣಿಸಿರಿ.

 - ಪ್ರಭುವಿನ  ವಾಕ್ಯ 


ಘೋಷಣೆ                  ಪ್ರೇ. ಕಾ. ಕ. 16:14

ಅಲ್ಲೆಲೂಯ, ಅಲ್ಲೆಲೂಯ!

ನಿಮ್ಮ  ಬೋಧನೆಗೆ  ಕಿವಿಗೊಟ್ಟು  ಗ್ರಹಿಸುವಂತೆ ಪ್ರಭೂನಮ್ಮ  ಹೃದಯವನ್ನು  ತೆರೆಯಿರಿ ||

ಅಲ್ಲೆಲೂಯ!

 

ಶುಭಸಂದೇಶ  ವಾಚನ : ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 10:37-42



   ಕಾಲದಲ್ಲಿ  ಯೇಸು  ತಮ್ಮ  ಶಿಷ್ಯರಿಗೆ  ಹೀಗೆಂದರು: "ನನ್ನನ್ನು  ಪ್ರೀತಿಸುವುದಕ್ಕಿಂತ  ಹೆಚ್ಚಾಗಿ  ತನ್ನ  ತಂದೆಯನ್ನು  ಅಥವಾ  ತಾಯಿಯನ್ನು  ಪ್ರೀತಿಸುವವನು  ನನ್ನವನಾಗಲು  ಯೋಗ್ಯನಲ್ಲ.  ನನ್ನನ್ನು  ಪ್ರೀತಿಸುವುದಕ್ಕಿಂತ  ಹೆಚ್ಚಾಗಿ  ತನ್ನ  ಮಗನನ್ನು  ಅಥವಾ  ಮಗಳನ್ನು  ಪ್ರೀತಿಸುವವನು  ನನ್ನವನಾಗಲು  ಯೋಗ್ಯನಲ್ಲ.  ತನ್ನ  ಪ್ರಾಣವನ್ನು  ಕಾಪಾಡಿಕೊಳ್ಳುವವನು  ಅದನ್ನು  ಕಳೆದುಕೊಳ್ಳುತ್ತಾನೆ.  ನನಗೋಸ್ಕರವಾಗಿ  ತನ್ನ  ಪ್ರಾಣವನ್ನು  ಕಳೆದುಕೊಳ್ಳುವವನು  ಅದನ್ನು  ಕಾಪಾಡಿಕೊಳ್ಳುತ್ತಾನೆ.  ನಿಮ್ಮನ್ನು  ಸ್ವಾಗತಿಸುವವನು  ನನ್ನನ್ನು  ಸ್ವಾಗತಿಸುತ್ತಾನೆ ನನ್ನನ್ನು  ಸ್ವಾಗತಿಸುವವನು  ನನ್ನನ್ನು  ಕಳುಹಿಸಿಕೊಟ್ಟಾತನನ್ನೇ  ಸ್ವಾಗತಿಸುತ್ತಾನೆ.  ಪ್ರವಾದಿಯನ್ನು  ಪ್ರವಾದಿಯೆಂದು  ಸ್ವಾಗತಿಸುವವನು  ಪ್ರವಾದಿಗೆ  ಸಿಗುವ  ಪ್ರತಿಫಲವನ್ನು  ಪಡೆಯುತ್ತಾನೆ.  ಸತ್ಪುರುಷನನ್ನು  ಸತ್ಪುರುಷನೆಂದು  ಸ್ವಾಗತಿಸುವವನು  ಸತ್ಪುರುಷನಿಗೆ  ಸಿಗುವ  ಪ್ರತಿಫಲವನ್ನು  ಪಡೆಯುತ್ತಾನೆ.  ಯಾರಾದರೂ    ಚಿಕ್ಕವರಲ್ಲಿ  ಒಬ್ಬನಿಗೆ  ಅವನು  ನನ್ನ  ಶಿಷ್ಯನೆಂದು  ಕುಡಿಯಲು  ಒಂದು  ಲೋಟ  ತಣ್ಣೀರನ್ನು  ಕೊಟ್ಟರೂ  ಅದಕ್ಕೆ  ತಕ್ಕ  ಪ್ರತಿಫಲವನ್ನು  ಪಡೆಯದೆ  ಹೋಗನೆಂದು  ನಿಮಗೆ  ನಿಶ್ಚಯವಾಗಿ  ಹೇಳುತ್ತೇನೆ.

ಪ್ರಭುಕ್ರಿಸ್ತರ  ಶುಭಸಂದೇಶ