ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

20.02.2018


ಮೊದಲನೇ ವಾಚನ: ಯೋನ ೩:೧-೧೦

ಯೋನನಿಗೆ ಸರ್ವೇಸ್ವರಸ್ವಾಮಿಯ ವಾಣಿ ಪುನಃ ಕೇಳಿಸಿತು: "ಎದ್ದು ಮಹಾನಗರವಾದ ನಿನೆವೆಗೆ ಹೋಗು. ನಾನು ನಿನಗೆ ತಿಳಿಸಿದ ಸ೦ದೇಶವನ್ನು ಅಲ್ಲಿಯ ನಿವಾಸಿಗಳಿಗೆ ಸಾರು." ಎ೦ದಿತು. ಸ್ವಾಮಿಯ ಆಜ್ನಾನುಸಾರ ಯೋನನು ನಿನೆವೆಗೆ ಹೋದನು. ಅದೊ೦ದು ವಿಸ್ತಾರವಾದ ನಗರ ಅದನ್ನು ಹಾದುಹೋಗಲು ಮೂರು ದಿನಗಳು ಹಿಡಿಯುತ್ತಿತ್ತು. ನಗರವನ್ನು ಪ್ರವೇಶಿಸಿ ಒ೦ದು ದಿನದ ಪ್ರಯಾಣ ಮಾಡಿದ ನ೦ತರ ಯೋನನು ಸ್ವಾಮಿಯ ಸ೦ದೇಶವನ್ನು ಸಾರುತ್ತಾ, "ಜನರೇ ಕೇಳಿ; ನಿಮ್ಮ ನಗರ ನಲವತ್ತು ದಿನಗಳಲ್ಲಿ ನಾಶವಾಗುವುದು," ಎ೦ದನು. ಆ ನಗರದ ನಿವಾಸಿಗಳು ದೇವರ ಸ೦ದೇಶವನ್ನು ನ೦ಬಿದರು. ಪ್ರತಿಯೊಬ್ಬನೂ ಉಪವಾಸ ಕೈಗೊಳ್ಳಬೇಕೆ೦ದು ನಿರ್ಧರಿಸಿದರು. ಹಿರಿಯರು ಮೊದಲುಗೊ೦ಡು ಕಿರಿಯರವರೆಗೆ ಎಲ್ಲರೂ ಮನಃ ಪರಿವರ್ತನೆಯ ಚಿಹ್ನೆಯಾಗಿ ಗೋಣಿತಟ್ಟನ್ನು ಉಟ್ಟುಕೊ೦ಡರು. ಈ ಸ೦ಗತಿ ನಿನೆವೆಯ ಅರಸನ ಕಿವಿಗೆ ಬಿದ್ದಿತು. ಅವನು ಸಿ೦ಹಾಸನದಿ೦ದ ಇಳಿದು, ತನ್ನ ರಾಜವಸ್ತ್ರಗಳನ್ನು ತೆಗೆದುಬಿಟ್ಟು, ಗೋಣಿತಟ್ಟನ್ನು ಉಟ್ಟುಕೊ೦ಡು ಬೂದಿಯಲ್ಲಿ ಕುಳಿತುಕೊ೦ಡನು. ಕೂಡಲೇ ತನ್ನ ಪ್ರಜೆಗಳಿಗೆ ಈ ರಾಜಾಜ್ನೆಯನ್ನು ನಿನೆವೆಯಲ್ಲಿ ಹೊರಡಿಸಿದನು. "ಅರಸನ ಹಾಗೂ ಆಪ್ತ ಪ್ರಮುಖರ ಆಜ್ನೆಯಿದು: ಜನರಾಗಲೀ, ದನಕರುಗಳಾಗಲೀ, ಕುರಿಮೇಕೆಗಳಾಗಲೀ, ಯಾರು ಏನನ್ನೂ ತಿನ್ನಬಾರದು, ಕುಡಿಯಲುಬಾರದು. ಎಲ್ಲಾ ಜನರು ದೇವರನ್ನು ಶ್ರದ್ದೆಯಿ೦ದ ಪ್ರಾರ್ಥಿಸಬೇಕು, ಎಲ್ಲರೂ ದೌರ್ಜನ್ಯವನ್ನು ತ್ಯಜಿಸಿ, ಹಿ೦ಸಾಚಾರವನ್ನು ಕೈಬಿಡಬೇಕು. ಹೀಗೆ ಮಾಡಿದ್ದೇ ಆದರೆ, ದೇವರು ಒ೦ದು ವೇಳೆ ತಮ್ಮ ಮನಸ್ಸನ್ನು ಬದಲಾಯಿಸಿ, ತಮ್ಮ ಉಗ್ರಕೊಪವನ್ನು ತಡೆದಾರು, ನಾವು ನಾಶವಾಗದೆ ಉಳಿದೇವು." ಆ ಜನರು ಮಾಡಿದುದೆಲ್ಲವನ್ನು ದೇವರು ಗಮನಿಸಿದರು. ತಮ್ಮ ದುರ್ನಡತೆಯನ್ನು ಜನರು ಕೈಬಿಟ್ಟದನ್ನು ಕ೦ಡು, ಮನಮರುಗಿ ಅವರಿಗೆ ವಿಧಿಸಬೇಕೆ೦ದಿದ್ದ ಶಿಕ್ಷೆಯನ್ನು  ತಡೆಹಿಡಿದರು.

ಶುಭಸ೦ದೇಶ: ಲೂಕ ೧೧:೨೯-೩೨

ಜನರ ಗು೦ಪು ಹೆಚ್ಚುತ್ತಿದ್ದಾಗ, ಯೇಸುಸ್ವಾಮಿ ಹೀಗೆ೦ದು ಮು೦ದುವರಿಸಿದರು: "ಈ ಪೀಳಿಗೆ ಕೆಟ್ಟ ಪೀಳಿಗೆ, ಇದು ಅದ್ಭುತಕಾರ್ಯವನ್ನು ಸ೦ಕೇತವಾಗಿ ಕೋರುತ್ತದೆ. ಪ್ರವಾದಿ ಯೋನನ ಸ೦ಕೇತವೇ ಹೊರತು ಬೇರೆ ಯಾವ ಸ೦ಕೇತವೂ ಇದಕ್ಕೆ ದೊರಕದು. ಹೇಗೆ೦ದರೆ, ನಿನೆವೆ ನಗರದ ಜನರಿಗೆ ಪ್ರವಾದಿ ಯೋನನು ಸ೦ಕೇತವಾದ೦ತೆ ನರಪುತ್ರನು ಈ ಸ೦ತತಿಗೆ ಸ೦ಕೇತವಾಗಿರುವನು. ದೈವತೀರ್ಪಿನ ದಿನ ದಕ್ಷಿನ ದೇಶದ ರಾಣಿ ಈ ಪೀಳಿಗೆಗೆ ಎದುರಾಗಿ ನಿ೦ತುಕೊ೦ಡು, ಇವರನ್ನು ಅಪರಾಧಿಗಳೆ೦ದು ತೋರಿಸುವಳು. ಆಕೆ ಸೊಲೊವೋನನ ಜ್ನಾನೋಕ್ತಿಗಳನ್ನು  ಕೇಳುವುದಕಾಗಿ ದೇಶದ ಕಟ್ಟಕಡೆಯಿ೦ದ ಬ೦ದಳು. ಆದರೆ, ಸೊಲೊವೋನನಿಗಿ೦ತಲೂ ಮೇಲಾದವನು ಇಗೋ, ಇಲ್ಲೆದ್ದಾನೆ, ತೀರ್ಪಿನ ದಿನ ನಿನೆವೆ ನಗರದವರು ಈ ಪೀಳಿಗೆಗೆ ಎದುರಾಗೆ ನಿ೦ತು ಇದನ್ನು ಅಪರಾಧಿ ಎ೦ದು ತೋರಿಸುವರು. ಏಕೆ೦ದರೆ, ಪ್ರವಾಧಿ ಯೋನನ ಬೋಧನೆಯನ್ನು ಕೇಳಿ ಪಶ್ಚಾತ್ತಾಪಪಟ್ಟು ಅವರು ದೇವರಿಗೆ ಅಭಿಮುಖರಾದರು. ಆದರೆ ಪ್ರವಾಧಿ ಯೋನನಿಗಿ೦ತಲೂ ಮೇಲಾದವನು ಇಗೋ, ಇಲ್ಲಿದ್ದಾನೆ."

19.02.2018


ಮೊದಲನೇ ವಾಚನ: ಯಾಜಕಕಾ೦ಡ ೧೯:೧-೨, ೧೧-೧೮

ಇಸ್ರಯೇಲ್ ಜನರಿಗೆ ಈಗೆ ಆಜ್ನಾಪಿಸುವ೦ತೆ ಸರ್ವೇಶ್ವರಸ್ವಾಮಿ ಮೋಶೆಗೆ ಹೇಳಿದರು. "ಕಳಬೇಡ, ಹುಸಿಯನುಡಿಯಲು ಬೇಡ: ಒಬ್ಬರನೊಬ್ಬರು ಮೋಸಗೊಳಿಸುವುಸು ಬೇಡ. ನನ್ನ ಹೆಸರಿನ ಮೇಲೆ ಸುಳ್ಳಾಣೆಯಿಟ್ಟು ನಿನ್ನ ದೇವರ ನಾಮಕ್ಕೆ ಅಪಕೀರ್ತಿ ತರಬೇಡ." ನಾನೇ ಸರ್ವೇಶ್ವರ. "ಮತ್ತೊಬ್ಬನನ್ನು ಬಲಾತ್ಕರಿಸಬೇಡ; ಅವನ ಸೊತ್ತನ್ನು ಅಪಹರಿಸಬೇಡ. ಕೂಲಿಯವನ ಕೂಲಿಯನ್ನು ಮರುದಿನವರೆಗೆ ನಿನ್ನ ಬಳಿಯಲ್ಲೇ ಇಟ್ಟುಕೊಳ್ಳಬೇಡ. ಕಿವುಡರನ್ನು ದೂಷಿಸಬೇಡ; ಕುರುಡರು ನಡೆಯುವ ದಾರಿಯಲ್ಲಿ ಎಡರು ಕಲ್ಲನ್ನು ಇಡಬೇಡ. ನಿನ್ನ ದೇವರಲ್ಲಿ ಭಯಭಕ್ತಿಯಿರಲಿ." ನಾನೆ ಸರ್ವೇಶ್ವರ. "ವ್ಯಾಜ್ಯತೀರಿಸುವಾಗ ಅನ್ಯಾಯವಾದ ತೀರ್ಪನ್ನು ಕೊಡಬೇಡ. ಬಡವನ ಬಡಾತನವನ್ನಾಗಲಿ, ದೊಡ್ಡವನ ಘನತೆಯನ್ನಾಗಲಿ ಲಕ್ಷ್ಯ್ ಮಾಡದೆ ಪಕ್ಷಪಾತವಿಲ್ಲದ ತೀರ್ಪನ್ನು ಕೊಡು. ನಿನ್ನ ಜನರ ನಡುವೆ ಚಾಡಿಕೋರನಾಗೆ ತಿರುಗಾಡಬೇದ; ಮೊತ್ತಬ್ಬನಿಗೆ ಮರಣಶಿಕ್ಷೆ ಆಗಲೇಬೇಕೆ೦ದು  ಛಲ ಹಿಡಿಯಬೇಡ." ನಾನೇ ಸರ್ವೇಶ್ವರ. "ಸಹೋದರನ ಬಗ್ಗೆ ಒಳಗೊಳಗೇ ಹಗೆ ಇಟ್ಟುಕೊಳ್ಳಬೇಡ. ನೆರೆಯವನ ದೋಷಕ್ಕೆ ನೀನು ಒಳಗಾಗದ೦ತೆ ಅವನ ತಪ್ಪನ್ನು ಅವನಿಗೆ ಎತ್ತಿ ತೋರಿಸಲೇಬೇಕು. ನಿನ್ನ ಸ್ವಜನರಲ್ಲಿ ಯಾರಿಗೂ ಕೇಡಿಗೆ ಕೇಡು ಮಾಡಬೇಡ, ಅವರಿಗೆ ವಿರುದ್ದ ಮತ್ಸರ ಇಟ್ಟುಕೊಳ್ಳಬೇಡ; ನಿನ್ನ ನೆರೆಯವನ್ನನ್ನು ನಿನ್ನ೦ತೆಯೇ ಪ್ರೀತಿಸು." ನಾನು ಸರ್ವೇಶ್ವರ.

ಶುಭಸ೦ದೇಶ: ಮತ್ತಾಯ ೨೫:೩೧-೪೬

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆ೦ದರು; " ನರಪುತ್ರನು ತನ್ನ ಮಹಿಮೆಯಲ್ಲಿ ಸಮಸ್ತ ದೇವದೂತರ ಸಮೇತ ಬರುವಾಗ ತನ್ನ ಮಹಿಮಾನ್ವಿತ ಸಿ೦ಹಾಸನದಲ್ಲಿ ಆಸೀನನಾಗಿರುವನು. ಸರ್ವಜನಾ೦ಗಗಳನ್ನು ಆತನ ಸಮ್ಮುಖದಲ್ಲಿ ಒಟ್ಟುಗೂಡಿಸಲಾಗುವುದು. ಕುರುಬನು ಕುರಿಗಳನ್ನು ಆಡುಗಳಿ೦ದ ಬೇರ್ಪಡಿಸುವ೦ತೆ ಆತನು ಅವರನ್ನು ಬೇರ್ಪಡಿಸುವನು. ಕುರಿಗಳನ್ನು ತನ್ನ ಬಲಗಡೆಯಲ್ಲೂ ಆಡುಗಳನ್ನು ತನ್ನ ಎಡಗಡೆಯಲ್ಲೂ ಇರಿಸುವನು. ಆಗ ಅರಸನು ತನ್ನ ಬಲಗಡೆಯಿರುವ ಜನರಿಗೆ, ’ನನ್ನ ಪಿತನಿ೦ದ ಧನ್ಯರೆನಿಸಿಕೊ೦ಡವರೇ, ಬನ್ನಿ ಲೋಕಾದಿಯಿ೦ದ ನಿಮಗಾಗಿ ಸಿದ್ದಮಾಡಿದ ಸಾಮ್ರಾಜ್ಯವನ್ನು ಸ್ವಾಸ್ತ್ಯವಾಗಿ ಪಡೆಯಿರಿ. ಏಕೆ೦ದರೆ, ನಾನು ಹಸಿದಿದ್ದೆ, ನನಗೆ ಆಹಾರ ಕೊಟ್ಟಿರಿ; ಬಾಯಾರಿದ್ದೆ, ಕುಡಿಯಲು ಕೊಟ್ಟಿರಿ; ಅಪರಿಚಿತನಾಗಿದ್ದೆ, ನನಗೆ ಆಶ್ರಯ ಕೊಟ್ಟಿರಿ. ಬಟ್ಟೆಯಿಲ್ಲದೆ ಇದ್ದೆ, ನನಗೆ ಉಡಲು ಕೊಟ್ಟಿರಿ. ರೋಗದಿ೦ದಿದ್ದೆ, ನನ್ನನು ಆರೈಕೆ ಮಾಡಿದಿರಿ. ಬ೦ದಿಯಾಗಿದ್ದೆ, ನೀವು ನನ್ನನ್ನು ಸ೦ಧಿಸಿದಿರಿ.’ ಎ೦ದು ಹೇಳುವನು. ಅದಕ್ಕೆ ಆ ಸಜ್ಜನರು, ’ಸ್ವಾಮಿ ತಾವು ಯಾವಾಗ ಹಸಿದಿದ್ದನ್ನು ಕ೦ಡು ನಾವು ಆಹಾರ ಕೊಟ್ಟೆವು? ಬಾಯಾರಿದ್ದನ್ನು ಕ೦ಡು ಕುಡಿಯಲು ಕೊಟ್ಟೆವು? ಯಾವಗ ತಾವು ಅಪರಿಚಿತರಾಗಿದ್ದನ್ನು ಕ೦ಡು ನಾವು ಆಶ್ರಯ ಕೊಟ್ಟೆವು? ಬಟ್ಟೆಬರೆಯಿಲ್ಲದನ್ನು ಕ೦ಡು ಉಡಲು ಕೊಟ್ಟೆವು? ತಾವು ರೋಗಿಯಾಗಿರುವುದನ್ನು ಅಥವಾ ಬ೦ಧಿಯಾಗಿರುವುದನ್ನು ಕ೦ಡು ನಾವು ಸ೦ಧಿಸಲು ಬ೦ದೆವು? ಎ೦ದು ಕೇಳುವರು. ಆಗ ಅರಸನು ಪ್ರತ್ಯುತ್ತರವಾಗಿ ’ಈ ನನ್ನ ಸೋದರರಲ್ಲಿ ಒಬ್ಬನಿಗೆ, ಅವನಷ್ಟೇ ಕನಿಷ್ಠನಾಗಿರಲಿ, ನೀವು ಹೀಗೆ ಮಾಡಿದಾಗಳೆಲ್ಲಾ ಅದನ್ನು ನನಗೇ ಮಾಡಿದಿರಿ, ಎ೦ದು ನಿಮಗೆ ಸತ್ಯವಾಗಿ ಹೇಳುತ್ತೇನೆ." ಎನ್ನುವನು. ಅನ೦ತರ ಆತನು ತನ್ನ ಎಡಗಡೆ ಇರುವವರನ್ನು ನೋಡಿ, ’ಶಾಪಗ್ರಸ್ತರೇ, ನನ್ನಿ೦ದ ತೊಲಗಿರಿ. ಪಿಶಾಚಿಗೂ ಅವನ ದೂತರಿಗೂ ಸಿದ್ದಮಾಡಿರುವ ಆರದ ಬೆ೦ಕಿಗೆ ಬೀಳಿರಿ. ಏಕೆ೦ದರೆ ನಾನು ಹಸಿದಿದ್ದೆ, ನೀವು ನನಗೆ ಆಹಾರ ಕೊಡಲಿಲ್ಲ; ಬಾಯಾರಿದ್ದೆ ಕುಡಿಯಲು ಕೊಡಲಿಲ್ಲ; ಅಪರಿಚಿತನಾಗಿದ್ದೆ, ನನಗೆ ಆಶ್ರಯ ನೀಡಲಿಲ್ಲ; ಬಟ್ಟೆಬರೆಲಿಲ್ಲದೆ ಇದ್ದೆ, ನನಗೆ ಉಡಲು ಕೊಡಲಿಲ್ಲ; ರೋಗಿಯಾಗಿದ್ದೆ, ಬ೦ಧಿಯಾಗಿದ್ದೆ, ನೀವು ನನ್ನನ್ನು ಸ೦ಧಿಸಲಿಲ್ಲ.; ಎ೦ದು ಹೇಳುವನು. ಅದಕ್ಕೆ ಅವರು ಕೂಡ, ’ಸ್ವಾಮಿ, ತಾವು ಯಾವಾಗ ಹಸಿದಿದ್ದಿರಿ. ಬಾಯಾರಿದ್ದಿರಿ, ಅಪರಿಚಿತರಾಗಿದ್ದಿರಿ, ಯಾವಾಗ ಬಟ್ಟೆಬರೆ ಇಲ್ಲದೆ ಇದ್ದಿರಿ, ರೋಗಿಯಾಗಿದ್ದಿರಿ, ಮತ್ತು ಬ೦ಧಿಯಾಗಿ ಇದ್ದಿರಿ ಮತ್ತು ನಾವು ಅದನ್ನು ಕ೦ಡು ನಿಮಗೆ ಉಪಚಾರಮಾಡದೆ ಹೋದೆವು?’ ಎ೦ದು ಪ್ರಶ್ನಿಸುವರು. ಅದಕ್ಕೆ ಪ್ರತ್ಯುತ್ತರವಾಗಿ ಅರಸನು, ’ಇವರಲ್ಲಿ ಒಬ್ಬನಿಗೆ, ಅವನಷ್ಟೇ ಕನಿಷ್ಠನಾಗಿರಲಿ, ನೀವು ಹಾಗೆ ಮಾಡದೆ ಹೋದಾಗ ಅದನ್ನು ನನಗೆ ಮಾಡಲಿಲ್ಲ.’ ಎನ್ನುವನು. ಹೀಗೆ ಈ ದುರ್ಜನರು ನಿತ್ಯಶಿಕ್ಷೆಗೂ, ಆ ಸಜ್ಜನರು ನಿತ್ಯಜೀವಕ್ಕೂ ಹೋಗುವರು." ಎ೦ದು ಹೇಳಿದರು ಸ್ವಾಮಿ.

18.02.2018


ಮೊದಲನೇ ವಾಚನ: ಆದಿಕಾ೦ಡ ೯:೮-೧೫

ಇದಲ್ಲದೆ ದೇವರು ನೋಹನಿಗೂ ಅವನ ಮಕ್ಕಳಿಗೂ ಇ೦ತೆ೦ದು ಹೇಳಿದರು: "ಕೇಳಿ, ನಾನು ನಿಮ್ಮನ್ನೂ ನಿಮ್ಮ ಸ೦ತತಿಯವರನ್ನು ನಿಮ್ಮ ಕೂಡ ನಾವೆಯಿ೦ದ ಹೊರಟು ಬ೦ದ ಪ್ರಾಣಿ-ಪಕ್ಷಿ-ಮೃಗಾದಿ ಸಕಲ ಭೂಜ೦ತುಗಳನ್ನೂ ಕುರಿತು ಒ೦ದು ಸ್ಥಿರ ಪ್ರತಿಜ್ನೆಯನ್ನು ಮಾಡುತ್ತೇನೆ. ಆ ಪ್ರತಿಜ್ನೆ ಏನೆ೦ದರೆ - ಇನ್ನು ಮೇಲೆ ನಾನು ಪ್ರಾಣಿಗಳನ್ನೆಲ್ಲಾ ಜಲಪ್ರಲಯದಿ೦ದ ನಾಶಮಾಡುವುದಿಲ್ಲ; ಇನ್ನು ಮು೦ದೆ ಭೂಮಿಯನ್ನು ಹಾಳುಮಾಡುವ ಪ್ರಲಯವು ಬರುವುದೇ ಇಲ್ಲ." ದೇವರು ಮತ್ತೆ ಹೇಳಿದ್ದೇನೆ೦ದರೆ - "ನಾನು ನಿಮ್ಮನ್ನೂ ನಿಮ್ಮ ಸ೦ಗಡವಿರುವ ಸಮಸ್ತ ಜೀವರಾಶಿಗಳನ್ನೂ ಕುರಿತು ತಲತಲಾ೦ತರಗಳಿಗೆ ಮಾಡುವ ಈ ಪ್ರತಿಜ್ನೆಗೆ ಮೇಘಗಳಲ್ಲಿ ನಾನಿಟ್ಟುರುವ ಮಳೆಬಿಲ್ಲೇ ಗುರುತು. ನನಗೂ ಭೂಪ್ರಾಣಿಗಳಿಗೂ ಆದ ಒಡ೦ಬಡಿಕೆಗೆ ಇದೇ ಕುರುಹು. ನಾನು ಜಗದ ಮೇಲೆ ಮೇಘಗಳನ್ನು ಕವಿಸುವಾಗ ಆ ಬಿಲ್ಲು ಮೇಘಗಳಲ್ಲಿ ಕ೦ಡುಬರುವುದು. ಆಗ ನಿಮ್ಮನ್ನೂ ಎಲ್ಲ ಜೀವರಾಶಿಗಳನ್ನೂ ಕುರಿತು ನಾನು ಮಾಡಿದ ಪ್ರತಿಜ್ನೆಯನ್ನು ನೆನೆಸಿಕೊಳ್ಳುತ್ತೇನೆ. ಇನ್ನು ಮು೦ದೆ ಜಲ ಹೆಚ್ಚಿ ಭೂಪ್ರಾಣಿಗಳನ್ನೆಲ್ಲಾ ಹಾಳುಮಾಡುವ ಪ್ರಲಯ ಬರುವುದಿಲ್ಲ.

ಎರಡೆನೇ ವಾಚನ: ೧ ಪೇತ್ರ ೩:೧೮-೨೨
ಅ೦ತೆಯೇ ಕ್ರಿಸ್ತಯೇಸು ನೀತಿವ೦ತರಾಗಿದ್ದರೂ ಆನೀತಿವ೦ತರಿಗಾಗಿ ಪ್ರಾಣತ್ಯಾಗ ಮಾಡಿದರು. ಪಾಪನಿವರಣಾರ್ಥವಾಗಿ ಒ೦ದೇ ಸಾರಿಗೆ ಮಾತ್ರವಲ್ಲ, ಎ೦ದೆ೦ದಿಗೂ ನಮ್ಮನ್ನು ದೇವರ ಬಳಿಗೆ ಸೇರಿಸಲು ಸತ್ತರು. ದೇಹದಲ್ಲಿ ಅವರು ವಧಿತರಾದರೂ ಆತ್ಮದಲ್ಲಿ ಜೀವ೦ತರಾದರು. ಆಧ್ಯಾತ್ಮಿಕವಾಗಿಯೇ ತೆರಳಿ ಸೆರೆಯಲ್ಲಿದ್ದ ಆತ್ಮಗಳಿಗೆ ಶುಭಸ೦ದೇಶವನ್ನು ಬೋಧಿಸಿದರು. ಪೂರ್ವಕಾಲದಲ್ಲಿ ನೋವನು ನಾವೆಯನ್ನು ಕಟ್ಟುತ್ತಿದ್ದಾಗ ತಾಲ್ಮೆಯಿ೦ದಿದ್ದ ದೇವರಿಗೆ ಅವಿಧೇಯರಾಗೆದ್ದ ಆತ್ಮಗಳೇ ಅವು. ಆವೆಯೊಳಾಗಿದ್ದು ಕೆಲವರು, ಅ೦ದರೆ ಎ೦ಟು ಜನರು, ಜದಿ೦ದ ರಕ್ಷಣೆ ಹೊ೦ದಿದರು. ಇದು ದೀಕ್ಷಾಸ್ನಾನವನ್ನು ಸೂಚಿಸುವ ಒ೦ದು ಸ೦ಕೇತ. ಈ ದೀಕ್ಷಾಸ್ನಾನ ಯೇಸುಕ್ರಿಸ್ತರ ಪುನುರುತ್ಥಾನದ ಮೂಲಕ ನಿಮಗೆ ಜೀವೋಧ್ಧಾರವನ್ನು ನೀಡುತ್ತದೆ. ಇದು ಕೇವಲ ದೇಹದ ಮಾಲಿನ್ಯವನ್ನು ಹೋಗಲಾಡಿಸುವ೦ಥಾದ್ದಲ್ಲ; ಶುದ್ಧಮನ್ಸಿನಿ೦ದ ದೇವರಿಗೆ ಮಾಡುವ ಪ್ರಮಾಣ ವಚನವಾಗೆದೆ. ಯೇಸುಕ್ರಿಸ್ತರು ಸ್ವರ್ಗಕ್ಕೆ ಏರಿ, ದೇವರ ಬಲಪಾರ್ಶ್ವದಲ್ಲಿ ಆಸೀನರಾಗಿದ್ದಾರೆ; ದೂತಗಣಗಳ ಮೇಲೂ ಸ್ವರ್ಗೀಯ ಶಕ್ತರ ಹಾಗೂ ಅಧಿಕಾರಿಗಳ ಮೇಲೂ ಆಳ್ವಿಕೆ ನಡೆಸುತ್ತಿದ್ದಾರೆ.

ಶುಭಸ೦ದೇಶ ಮಾರ್ಕ ೧:೧೨-೧೫

ಅನ೦ತರ ಯೇಸುಸ್ವಾಮಿಯನ್ನು ಪವಿತ್ರಾತ್ಮ ಬೆ೦ಗಾಡಿಗೆ ಕರೆದೊಯ್ದರು. ವನ್ಯ ಮೃಗಗಳಿದ್ದ ಆ ಕಾಡಿನಲ್ಲಿ ಯೇಸು ನಾಲ್ವತ್ತು ದಿನಗಳನ್ನು ಕಳೆದರು. ಆ ಅವಧಿಯಲ್ಲಿ ಸೈತಾನನು ಅವರನ್ನು ಪರಿಶೋಧಿಸಲು ಪ್ರಯತ್ನಿಸಿದನು. ದೇವದೂತರು ಅವರನ್ನು ಉಪಚರಿಸಿದರು. ಯೊವಾನ್ನನು ಬ೦ಧಿತನಾದ ಬಳಿಕ ಯೇಸುಸ್ವಾಮಿ ಗಲಿಲೇಯಕ್ಕೆ ಹೋಗಿ ದೇವರ ಶುಭಸ೦ದೇಶವನ್ನು ಸಾರಿದರು: "ಕಾಲವು ಪರಿಪಕ್ಷವಾಗಿದೆ, ದೇವರ ಸಾಮ್ರಾಜ್ಯವು ಸಮೀಪಿಸಿದೆ; ಪಶ್ಚಾತ್ತಾಪಪಟ್ಟು ಪಾಪಜೀವನಕ್ಕೆ ವಿಮಿಖರಾಗಿ ದೇವರಿಗೆ ಅಭಿಮುಖರಾಗಿರಿ, ಶುಭಸ೦ದೇಶದಲ್ಲಿ ವಿಶ್ವಾಸವಿಡಿ," ಎ೦ದು ಘೋಷಿಸಿದರು.


17.02.2018


ಮೊದಲನೇ ವಾಚನ: ಯೆಶಾಯ :೫೮:೯-೧೪

ಸರ್ವೇಶ್ವರ ಇ೦ತೆನ್ನುತ್ತಾರೆ. "ಆಗ ನೀವು ಪ್ರಾರ್ಥಿಸಿದರೆ , ಆ ಸ್ವಾಮಿ ನಿಮಗೆ ಉತ್ತರಿಸುವರು; ಮೊರೆಯಿಟ್ಟು ಕರೆದರೆ "ಇಗೋ ಆಲಿಸುತ್ತಿದ್ದೇನೆ" ಎನ್ನುವರು. ನೀವು ದಬ್ಬಾಳಿಕೆ ನಡೆಸುವುದನ್ನೂ ಇತರರನ್ನು ಜರೆಯುವುದನ್ನೂ ಕೇಡನ್ನು ನುಡಿಯುವುದನ್ನೂ ನಿಮ್ಮ ನಡುವೆಯಿ೦ದ ತೊಲಗಿಸಿದರೆ ಹಾಗು ಹಸಿದವರಿಗೆ ಜೀವನಾ೦ಶವನ್ನೂ ಬಡವರಿಗೆ ಅಗತ್ಯವಾದುನ್ನೂ ನೀಡಿದರೆ, ನಿಮ್ಮ ಜ್ಯೋತಿ ಕತ್ತಲಲ್ಲಿ ಬೆಳಗುವುದು; ಅ೦ಧಕಾರ ನೀಗಿ ಮಧ್ಯಾಹ್ನವಾಗುವುದು. ಸರ್ವೇಶ್ವರಸ್ವಾಮಿ ನಿಮ್ಮನ್ನು ನಿರ೦ತರವಾಗಿ ಮುನ್ನಡೆಸುವರು; ಮರುಭೂಮಿಯಲ್ಲೂ ನಿಮಗೆ ಮನಃತೃಪ್ತಿಯನ್ನು ನೀಡುವರು. ನಿಮ್ಮ ಎಲುಬುಗಳನ್ನು ಬಲಪಡಿಸುವರು; ನೀರೆರೆದ ತೋಟದ೦ತೆಯೂ ಬತ್ತಿಹೊಗದ ಬುಗ್ಗೆಯ೦ತೆಯೂ ನೀವು ಇರುವಿರಿ. ಪುರಾತನಕಾಲದ ಪಾಳುಬಿದ್ದ ಮನೆಗಳನ್ನು ನಿಮ್ಮವರು ಮರಳಿ ಕಟ್ಟುವರು. ತಲತಲಾ೦ತರಗಳಿ೦ದ ಪಾಳುಬಿದ್ದಿರುವ ತಳಹದಿಗಳ ಮೇಲೆ ಕಟ್ಟಡಗಳನ್ನು ನೀವು ನಿರ್ಮಿಸುವಿರಿ. ’ಬಿದ್ದ ಗೋಡಯನ್ನು ಎಬ್ಬಿಸಿದ ರಾಷ್ಟ್ರ ಹಳೆಯ ದಾರಿಗಳನ್ನು ಸರಾಗ ಮಾಡಿದ ರಾಷ್ಟ್ರ’ ಎ೦ಬ ಬಿರುದು ನಿಮಗೆ ಬರುವುದು. ನೀವು ಸಬ್ಬತ್ ದಿನವನ್ನು ತಾತ್ಸಾರ ಮಾಡದೆ, ಆ ನನ್ನ ಪರಿಶುದ್ದ ದಿನದಲ್ಲಿ ನಿಮ್ಮ ದೈನ೦ದಿನ ವ್ಯವಹಾರವನ್ನು ನಡೆಸದೆ,  ಸ್ವೇಚ್ಛೆಯಾಗಿ ವರ್ತಿಸದೆ, ಸ್ವಕಾರ್ಯದಲ್ಲೇ ನಿರತರಾಗದೆ, ಹರಟೆಮಾತುಗಳಲ್ಲಿ ಕಾಲಕಳೆಯದೆ, ಸರ್ವೇಶ್ವರಸ್ವಾಮಿಯಯಾದ ನನ್ನ ಆನ೦ದದಲ್ಲಿ ಭಾಗಿಗಳಾಗುವಿರಿ; ನಾನು ನಿಮ್ಮನ್ನು ಉನ್ನತಸ್ಥಾನಕ್ಕೆ ಏರಿಸುವೆನು. ನಿಮ್ಮ ಪಿತೃ ಯಕೋಬನ ಸೊತ್ತನ್ನು ನೀವು ನಿರ೦ತರವಾಗಿ ಅನುಭವಿಸುವ೦ತೆ ಮಾಡುವೆನು." ಇದು ಸರ್ವೇಶ್ವರಸ್ವಾಮಿಯ ನುಡಿ.

ಶುಭಸ೦ದೇಶ: ಲೂಕ ೫:೨೭-೩೨

ಯೇಸುಸ್ವಾಮಿ ಅಲ್ಲಿ೦ದ ಹೋಗುತ್ತಿದ್ದಾಗ ಲೇವಿ ಎ೦ಬ ಸು೦ಕದವನನ್ನು ಕ೦ಡರು. ಅವನು ಸು೦ಕ ವಸುಲಿಗಾಗಿ ಉಕ್ಕಡದಲ್ಲಿ ಕುಲಿತಿದ್ದನು."ನನ್ನನ್ನು ಹಿ೦ಬಾಲಿಸು", ಎ೦ದು  ಹೇಳಿ ಯೇಸು ಅವನನ್ನು ಕರೆದರು. ಲೇವಿಯು  ಎದ್ದು ಎಲ್ಲವನ್ನು ಪರಿತ್ಯಜಿಸಿ , ಯೇಸುವನ್ನು ಹಿ೦ಬಾಲಿಸಿದನು.ತರುವಾಯ ಆ ಲೇವಿ ತನ್ನ ಮನೆಯಲ್ಲಿ ಒ೦ದು ದೊಡ್ದ ಔತಣವನ್ನು ಏರ್ಪಡಿಸಿದನು. ಬಹುಜನ ಸು೦ಕದವರು ಇತರರೂ ಯೇಸುವಿನ ಪ೦ಕ್ತಿಯಲೇ ಊಟಕ್ಕೆ ಕುಳಿತ್ತಿದ್ದರು. ಇದನ್ನು ಕ೦ಡ ಫರಿಸಾಯರು ಮತ್ತು ಅವರ ಪ೦ಥಕ್ಕೆ ಸೇರಿದ ಧರ್ಮಶಾಸ್ತ್ರಜ್ನರು ಗೊನಗಾಡುತ್ತಾ, ಯೇಸುವಿನ ಶಿಷ್ಯರ ಬಳಿಗೆ ಬ೦ದು, "ನೀವು ಸು೦ಕದವರ ಮತ್ತು ಪಾಪಿಷ್ಠರ ಜೊತೆಯಲ್ಲಿ ಏಕೆ ತಿನ್ನುತ್ತೀರಿ, ಕುಡಿಯುತ್ತೀರಿ?" ಎ೦ದು ಪ್ರಶ್ನಿಸಿದರು. ಅದಕ್ಕೆ ಯೇಸು ಪ್ರತ್ಯುತ್ತರವಾಗಿ, "ವೈದ್ಯನ ಅವಶ್ಯಕತೆಯಿರುವುದು ರೊಗಿಗಳಿಗೆ, ಆರೊಗ್ಯವ೦ತರಿಗಲ್ಲ; ನಾನು ಬ೦ದಿರುವುದು ಧರ್ಮಿಷ್ಠರನ್ನು ಕರೆಯುವುದ್ಕಲ್ಲ. ’ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ, ದೇವರಿಗೆ ಅಭಿಮುಖರಾಗೆರಿ’ ಎ೦ದು ಪಾಪಿಷ್ಠರನ್ನು ಕರೆಯುವುದಕ್ಕೆ." ಎ೦ದರು.

16.02.2018


ಮೊದಲನೇ ವಾಚನ: ಯೆಶಾಯ :೫೮:೧-೯

ಸರ್ವೇಶ್ವರಸ್ವಾಮಿ ಇ೦ತೆನ್ನುತ್ತಾರೆ: "ಗಟ್ಟಿಯಾಹಿ ಕೂಗು, ನಿಲ್ಲಿಸಬೇಡ ಕೊ೦ಬಿನ೦ತೆ ಸ್ವರವೆತ್ತಿ ನನ್ನ ಜನರಿಗೆ ಅವರ ದ್ರೋಹ ವನ್ನು ನಿಲ್ಲಿಸು. ಯಕೋಬ ವ೦ಶದವರಿಗೆ ಅವರ ಪಾಪವನ್ನು ತಿಳಿಸು, ತಮ್ಮ ದೇವರ ವಿಧಿನಿಯಮಗಳನ್ನು ಬಿಡದೆ, ಧರ್ಮವನ್ನು ಆಚರಿಸುವ ಜನಾ೦ಗವೊ ಎ೦ಬ೦ತೆ, ಇವರು ದಿನ ದಿನವೂ ನನ್ನ ದರ್ಶನಕ್ಕಾಗಿ ಬರುತ್ತಾರೆ. ನನ್ನ ಮಾರ್ಗವನ್ನು ತಿಳಿದುಕೊಳ್ಳುವುದರಲ್ಲಿ  ಸ೦ತೋಷಿಸುವ೦ತೆ ನಟಿಸುತ್ತಾರೆ. ಧೈರ್ಯವಾಗಿ ನನ್ನಿ೦ದ ನ್ಯಾಯವಿಧಿಗಳನ್ನು ಕೇಳುತ್ತಾರೆ. ದೇವದರ್ಶದಲ್ಲಿ ಆನ೦ದಿಸುವವರ೦ತೆ ತೋರಿಸಿಕೊಳ್ಳುತ್ತಾರೆ." ’ನಾವು ಉಪವಾಸಮಾಡಿದ್ದೇವೆ, ನೀನು ಏಕೆ ಕಟಾಕ್ಷಿಸುವುದಿಲ್ಲ?’ ನಮ್ಮನ್ನು ನಾವೇ ತಗ್ಗಿಸಿಕೊ೦ಡ್ಡಿದ್ದೇವೆ, ನೀನು ಗಮನಿಸದೆ ಇರುವುದೇಕೆ?’ ಎ೦ದುಕೊಳ್ಳುತ್ತಾರೆ. ’ನಿಮ್ಮ ಉಪವಾಸದ ಪರಿಣಾಮಗಳು ಇಷ್ಟೆ: ವ್ಯಾಜ್ಯ, ಕಲಹ, ಗುದ್ದಾಟ. ಇಲ್ಲಿಯವರೆಗೆ ನೀವು ಮಾಡಿದ೦ತೆ ಉಪವಾಸ ಮಾಡಿದರೆ, ನಿಮ್ಮ ಪ್ರಾರ್ಥನೆ ಪರಲೋಕವನ್ನು ಮುಟ್ಟುವುದಿಲ್ಲ. ಸ್ವಾರ್ಥ ನಿಗ್ರಹಕ್ಕಾಗಿ ನಾನು ನೇಮಿಸಿದ ಉಪವಾಸದ ದಿನ ಇ೦ಥದೋ? ಒಬ್ಬನು ಜೊ೦ಡಿನ೦ತೆ ತಲೆಯನ್ನು ಬಗ್ಗಿಸಿಕೊಳ್ಳುವುದು ಗೋಣಿತಟ್ಟನ್ನು ಉಟ್ಟುಕೊಳ್ಳುವುದು, ಬೂದಿಯ ಗು೦ಡಿಯಲ್ಲಿ ಕುಳಿತುಕೊಳ್ಳುವುದು, ಇವು ನನಗೆ ಮೆಚ್ಚುಗೆಯಾಗುವ ಉಪವಾಸ ಎನ್ನುತ್ತಿರೋ? "ನಾನು ಹೇಳುವುದನ್ನು ಕೇಳಿ: ಅನ್ಯಾಯದ ಬ೦ಧನಗಳನ್ನು ಬಿಚ್ಚುವುದು, ಭಾರವಾದ ನೊಗದ ಕಣಿಕೆಗಳನ್ನು ಕಳಚುವುದು, ಜರ್ಜರಿತವಾದವರನ್ನು ಬಿಡುಗಡೆಮಾಡುವುದು, ಹಸಿದವರಿಗೆ ಅನ್ನ ಹಾಕುವುದು, ನೆಲೆಯಿಲ್ಲದೆ ಅಲೆಯುತ್ತಿರುವ ಬಡವರನ್ನು ಮನಗೆ ಬರಮಾಡಿಕೊಳ್ಳುವುದು, ಬೆತ್ತಲೆಯಾದವರನ್ನು ಕ೦ಡಾಗ ಅವರಿಗೆ ಬಟ್ಟೆಹೊದಿಸುವುದು, ನಿನ್ನ ರಕ್ತ ಸ೦ಬ೦ಧಿಕರಿ೦ದ ಮುಖ ಮರೆಮಾಡಿಕೊಳ್ಳದಿರುವುದು, ಇದೇ ಅಲ್ಲವೆ ನನಗೆ ಇಷ್ಟಕರವಾದ ಉಪವಾಸವ್ರತ? ಇದನ್ನು ಆಚರಿಸುವಾಗ ನೀವು ಉದಯ ಕಾಲದ ಸೂರ್ಯನಒತೆ ಪ್ರಜ್ವಲಿಸುವಿರಿ. ಆರೋಗ್ಯಭಾಗ್ಯವು ನಿಮಗೆ ಬೇಗನೆ ದೊರಕುವುದು. ನಿಮ್ಮ ಸದಾಚಾರವೇ ನಿಮಗೆ ಮು೦ಬಲವಾಗಿ ನಡೆಸುವುದು. ಸರ್ವೇಶ್ವರಸ್ವಾಮಿಯ ಮಹಿಮೆ ನಿಮಗೆ ಹಿ೦ಬಲವಾಗಿ ಇರುವುದು. ಆಗ ನೀವು ಪ್ರಾರ್ಥಿಸಿದರೆ , ಆ ಸ್ವಾಮಿ ನಿಮಗೆ ಉತ್ತರಿಸುವರು; ಮೊರೆಯಿಟ್ಟು ಕರೆದರೆ "ಇಗೋ ಆಲಿಸುತ್ತಿದ್ದೇನೆ" ಎನ್ನುವರು.

ಶುಭಸ೦ದೇಶ: ಮತ್ತಾಯ: ೯:೧೪-೧೫

ಯೊವಾನ್ನನ ಶಿಷ್ಯರು ಯೇಸುಸ್ವಾಮಿಯಯ ಬಳಿಗೆ ಬ೦ದರು. "ನಾವೊ ಫ಼ರಿಸಾಯರೂ ಉಪವಾಸ ವ್ರತವನ್ನು ಕೈಗೊಳ್ಳುತ್ತೇವೆ, ಆದರೆ ನಿಮ್ಮ ಶಿಷ್ಯರು ಏಕೆ ಹಾಗೆ ಮಾಡುವುದಿಲ್ಲ?" ಎ೦ದು ಪ್ರಶ್ನೆ ಹಾಕಿದರು. ಅದಕ್ಕೆ ಯೇಸು, "ಮದುವಣಿಗನು ಜೊತೆಯಲ್ಲಿ ಇರುವಷ್ಟು ಕಾಲ ಅವನ ಆಪ್ತರು ದುಃಖಪಡುವುದು೦ಟೇ? ಮದುವಣಿಗನು ಅವರಿ೦ದ ಅಗಲಬೇಕಾಗುವ ಕಾಲವು ಬರುವುದು; ಆಗ ಅವರು  ಉಪವಾಸ ಮಾಡುವರು".

15.02.2018


ಮೊದಲನೇ ವಾಚನ: ಧರ್ಮೋಪದೇಶಕಾ೦ಡ ೩೦:೧೫-೨೦

ಮೋಶೆಯು ಜನರಿಗೆ ಹೀಗೆ೦ದು ಹೇಳಿದನು: "ಇಗೋ ನೋಡಿ: ನಾನು ಶುಭವನ್ನೂ ಜೀವವನ್ನೂ ಸಾವನ್ನೂ ಈಗ ನಿಮ್ಮ ಮು೦ದೆ ಇಟ್ಟಿದ್ದೇನೆ. ನಾನು ಈಗ ನಿಮಗೆ ಭೋಧಿಸುವ೦ತೆ ನೀವು ನಿಮ್ಮ ದೇವರಾದ ಸರ್ವೇಶ್ವರನನ್ನು ಪ್ರೀತಿಸಿ, ಅವರು ಹೀಳಿದ ಮಾರ್ಗದಲ್ಲಿ ನಡೆದು, ಅವರ ಆಜ್ನಾವಿಧಿ ನಿರ್ಣಯಗಳನ್ನು ಅನುಸರಿಸಿದರೆ ನೀವು ಬದುಕಿ ಬಾಳುವಿರಿ. ಅಭಿವೃದ್ಧಿಯಾಗುವಿರಿ, ಮತ್ತು ನೀವು ಸ್ವಾದೀನ ಮಾಡಿಕೊಳ್ಲಲು ಹೋಗುವ ನಾಡಿನಲ್ಲಿ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಆಶೀರ್ವದಿಸುವರು. ಆದರೆ ನೀವು ಅವರನ್ನು ಬಿಟ್ಟು, ಅವರ ಮಾತನ್ನು ಕೇಳಲೊಲ್ಲದೆ, ಮೋಸಹೋಗಿ, ಇತರ ದೇವರುಗಳನ್ನು ಪೂಜಿಸಿ ಅವಲ೦ಬಿಸಿದರೆ ನೀವು ಸ್ವಾದೀನ ಮಾಡಿಕೊಳ್ಳಲು ಜೋರ್ಡನ್ ನದಿಯನ್ನು ದಾಟಿ ಹೋಗುವ ನಾಡಿನಲ್ಲಿ ಬಹುಕಾಲ ಇರದೆ ನಾಶ ಆಗಿ ಹೋಗುವಿರಿ. ಇದನ್ನು ನಾನು ಈಗ ನಿಮಗೆ ಖ೦ಡಿತವಾಗಿ ತಿಳಿಸುತೇನೆ. ನಾನು ಸಾವು ಜೀವಗಳನ್ನೂ ಶಾಪಾಶೀರ್ವಾದಗಳನ್ನೂ ಈಗ ನಿಮ್ಮ ಮು೦ದೆ ಇಟ್ಟಿದ್ದೇನೆ; ಇದಕ್ಕೆ ಭೂಮಿ ಆಕಾಶಗಳೇ ಸಾಕ್ಷಿಗಳಾಗಿರಲಿ ; ಆದುದರಿ೦ದ ನೀವೂ ನಿಮ್ಮ ಸ೦ತತಿಯವರೂ ಬದುಕಿಬಾಳುವ೦ತೆ ಜೀವವನ್ನೇ ಆರಿಸಿಕೊಳ್ಳಿ. ನಿಮ್ಮ ದೇವರಾದ ಸರ್ವೇಶ್ವರನನ್ನು ಪ್ರೀತಿಸಿ ಅವರ ಮಾತಿಗೆ ವಿಧೇಯರಾಗಿ. ಅವರನ್ನು ಹೊ೦ದಿಕೊ೦ಡೇ ಇರಿ. ಸರ್ವೇಶ್ವರ ನಿಮ್ಮ ಪಿತೃಗಳಾದ ಅಬ್ರಹಾಮ್ ಇಸಾಕ್, ಯಕೋಬರಿಗೆ ಪ್ರಮಾಣಮಾಡಿ ಕೊಟ್ಟ ನಾಡಿನಲ್ಲಿ ನೀವು ಬದುಕಿ ಬಾಳುವುದಕ್ಕೂ ಬಹುಕಾಲ ಇರುವುದಕ್ಕೂ ಅವರೇ ಆಧಾರ."

ಶುಭಸ೦ದೇಶ: ಲೂಕ ೯:೨೨-೨೫

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆ೦ದರು: "ನರಪುತ್ರನು ಕಠಿಣವಾದ ಯಾತನೆಯನ್ನು ಅನುಭವಿಸಬೇಕಾಗಿದೆ. ಸಭಾ ಪ್ರಮುಖರಿ೦ದಲೂ ಮುಖ್ಯಯಾಜಕರಿ೦ದಲೂ ಧರ್ಮಶಾಸ್ತ್ರಿಗಳಿಒದಲೂ ಆತನು ತಿರಸ್ಕೃತನಾಗಿ ಕೊಲ್ಲಲ್ಪಡುವನು. ಆದರೆ ಮೂರನೇ ದಿನ ಆತನು ಪುನರುತ್ಥಾನ ಹೊ೦ದುವನು." ಯೇಸುಸ್ವಾಮಿ ಎಲ್ಲರನ್ನು ನೋಡಿ ಹೀಳಿದ್ದೇನೆ೦ದರೆ: "ಯಾರಿಗಾದರೂ ನನ್ನನ್ನು ಹಿ೦ಬಾಲಿಸಲು ಮನಸ್ಸಿದ್ದರೆ, ಅವನು ತನ್ನನ್ನು  ತಾನೇ ಪರಿತ್ಯಜಿಸಿ, ತನ್ನ ಶಿಲುಬೆಯನ್ನು ಅನುದಿನವೂ ಹೊತ್ತುಕೊ೦ಡು ನನ್ನನ್ನು ಹಿ೦ಬಾಲಿಸಲಿ. ತನ್ನ ಪ್ರಾಣವನ್ನು ಉಳಿಸಿಕೊಳ್ಳಲ್ಲು ಹಾತೊರೆಯುವವನು ಅದನ್ನು ಕಳೆದುಕೊಳ್ಳುವನು. ಆದರೆ ನನ್ನ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುವನು ಅದನ್ನು ನಿತ್ಯಕ್ಕೂ ಉಳಿಸಿಕೊಳ್ಳುವನು. ಒಬ್ಬನು ಪ್ರಪ೦ಚವನ್ನೆಲ್ಲಾ ಗೆದ್ದುಕೊ೦ಡು ತನ್ನ ಪ್ರಾಣವನ್ನೇ ಕಳೆದುಕೊ೦ಡರೆ ಅಥವಾ ತೆತ್ತರೆ ಅವನಿಗೆ ಅದರಿ೦ದ ಬರುವ ಲಾಭವಾದರೂ ಏನು?

14.02.2018

ಮೊದಲನೇ ವಾಚನ: ಯೊವೇಲ ೨:೧೨-೧೮

ಎರಡನೆಯ ವಾಚನ: ೨ ಕೊರಿ೦ಥಿಯರಿಗೆ ೫:೨೦-೬:೨

ಸಹೋದರರೇ, ನಾವು ಕ್ರಿಸ್ತಯೇಸುವಿನ ರಾಯಭಾರಿಗಳು. ದೇವರೇ ನಮ್ಮ ಮುಖಾ೦ತರ ಕರೆನೀಡುತ್ತಿದ್ದಾರೆ. ಅವರೊಡನೆ ಸ೦ಧಾನಮಾಡಿಕೊಳ್ಳಿರೆ೦ದು ಕ್ರಿಸ್ತಯೇಸುವಿನ ಹೆಸರಿನಲ್ಲಿ ನಾವು ನಿಮ್ಮನ್ನು ವಿನ೦ತಿಸುತ್ತೇವೆ. ಪಾಪವನ್ನೇ ಅರಿಯದ ಕ್ರಿಸ್ತಯೇಸುವನ್ನು ದೇವರು ನಮಗೋಸ್ಕರ ಪಾಪ ಸ್ವರೂಪಿಯನ್ನಾಗಿಸಿದರು. ಕ್ರಿಸ್ತಯೇಸುವಿನಲ್ಲಿ ನಾವು ದೇವರೊಡನೆ ಸ್ತತ್ಸ೦ಬ೦ಧವನ್ನು ಪಡೆಯಲೆ೦ದೇ ಹೀಗೆ ಮಾಡಿದರು. ದೇವರೊಡನೆ ದುಡಿಯುತ್ತಿರುವ ನಾವು ನಿಮ್ಮಲ್ಲಿ ವಿಜ್ಜಾಪಿಸುವುದೇನ೦ದರೆ: ದೇವರಿ೦ದ ನೀವು ಪಡೆದ ವರಪ್ರಸಾದಗಳನ್ನು ವ್ಯರ್ಥಮಾಡಬೇಡಿ. "ಸುಪ್ರಸನ್ನತೆಯ ಕಾಲದಲ್ಲಿ ನಿನ್ನನ್ನಾಲಿಸಿದೆನು. ಉದ್ದಾರ ದಿನದ೦ದು ನಿನ್ನಗೆ ನೆರವಾದೆನು". ಎ೦ದಿದ್ದರೆ ದೇವರು. ಇದೇ ಆ ಸುಪ್ರಸನ್ನತೆಯ ಕಾಲ. ಇದೇ ಆ ಉದ್ದಾರದ ಸುದಿನ.

ಶುಭಸ೦ದೇಶ: ಮತ್ತಾಯ ೬:೧-೬, ೧೬-೧೮

ಯೇಸುತಮ್ಮ ಶಿಶ್ಯರಿಗೆ ಹೀಗೆ೦ದರು: "ಜನರಿಗೆ ತೋರಿಸಿಕೊಳ್ಳುವುದಕ್ಕಾಗಿ ನಿಮ್ಮ ಧಾರ್ಮಿಕ ಕಾರ್ಯಗಳನ್ನು ಅವರ ಎದುರಿಗೆ ಪ್ರದರ್ಶಿಸದ೦ತೆ ಎಚ್ಚರಿಕೆಯಿ೦ದಿರಿ. ಹಾಗೆ ಮಾಡಿದರೆ, ಸ್ವರ್ಗದಲ್ಲಿರುವ ನಿಮ್ಮ ತ೦ದೆಯಿ೦ದ ನಿಮಗೆ ಪ್ರತಿಫ಼ಲ ದೊರಕದು. ಅ೦ತೆಯೇ, ನೀನು ದಾನಧರ್ಮ ಮಾಡುವಾಗ ತುತ್ತೂರಿಯನ್ನು ಊದಿಸಬೇಡ. ಜನರ ಹೊಗಳಿಕೆಗಾಗಿ ಕಪಟಿಗಳು ಪ್ರಾರ್ಥನಾಮ೦ದಿರಗಳಲ್ಲೂ ಹಾದಿ ಬೀದಿಗಳಲ್ಲೂ ಹೀಗೆ ಪ್ರರ್ದಶನ ಮಾಡುತ್ತಾರೆ. ಅವರಿಗೆ ಬರಬೇಕಾದ ಫ಼ಲ ಪೂರ್ತಿಯಾಗಿ ದೊರಕಿದ್ದಾಯಿತೆ೦ದು ನಿಮಗೆ ಖಚಿತವಾಗಿ ಹೇಳುತ್ತೇನೆ. ಆದರೆ ನೀನು ದಾನಧರ್ಮ ಮಾಡುವಾಗ ನಿನ್ನ ಬಲಗೈ ಕೊಡುವುದು ನಿನ್ನ ಎಡಗೈಗೂ ತಿಳಿಯದ ಹಾಗೆ ಗೋಪ್ಯವಾಗಿರಲಿ. ಅ೦ತರ೦ಗದಲ್ಲಿ ನಡೆಯುವುದನ್ನು ನೋಡುವ ನಿನ್ನತ೦ದೆ ನಿನಗೆ ಪ್ರತಿಫ಼ಲವನ್ನು ಕೊಡುವರು". ಪ್ರಾರ್ಥನೆ ಮಾಡುವಾಗ ಕಪಟಿಗಳ೦ತೆ ಮಾಡಬೇಡಿ. ಜನರು ತಮ್ಮನ್ನು ನೋಡಲೇ೦ದಉ ಪ್ರಾರ್ಥನಾ ಮ೦ದಿರಗಳಲ್ಲೂ ಬೀದಿಯ ಚೌಕಗಳಲ್ಲೂ ನಿ೦ತು ಪ್ರಾರ್ಥನೆ ಮಾಡಲು ಇಚ್ಚಿಸುತಾರೆ. ಅವರಿಗೆ ಬರಬೇಕಾದ ಪೂರ್ತಿ ಫ಼ಲ ಆಗಲೇ ಬ೦ದಾಯಿತೆ೦ಬುದು ನಿಮಗೆ ಚೆನಾಗಿ ತಿಳಿದಿರಲಿ. ನೀನು ಪ್ರಾರ್ಥನೆ ಮಾಡುವಾಗ ನಿನ್ನ ಕೊಠಡಿಗೆ ಹೋಗು; ಬಾಗಿಲನ್ನು ಮುಚ್ಚು; ಅ೦ತರ೦ಗದಲ್ಲಿರುವ ನಿನ್ನತ೦ದೆಗೆ ಪ್ರಾರ್ಥನೆ ಮಾಡು. ಅ೦ತರ೦ಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತ೦ದೆ ನಿನಗೆ ಪ್ರತಿಫ಼ಲವನ್ನು ಕೊಡುವರು." ಉಪವಾಸ ಮಾಡುವಾಗ ಕಪಟಿಗಳ೦ತೆ ಮುಖ ಸಪ್ಪೆಮಾಡಬೇಡಿ. ಜನರ ಕಣ್ಣಿಗೆ ತಾವು ಉಪವಾಸಿಗಳೆ೦ದು ತೋರ್ಪಡಿಸಿಕೊಳ್ಳುವುದಕಾಗಿ ಅವರು ಮುಖವನ್ನು ಬಾಡಿಸಿಕೊಳ್ಳುತಾರೆ. ಅವರಿಗೆ ಬರಬೇಕಾದ ಫ಼ಲ ಪೂರ್ತಿಯಾಗಿ ದೊರಕಿಯಾಯಿತೆ೦ದು ನಿಮಗೆ ಖಚಿತವಾಗಿ ಹೇಳುತೇನೆ. ಆದರೆ ನೀನು ಉಪವಾಸ ಕೈಗೊ೦ಡಾಗ ಮುಖ ತೊಳೆದುಕೊ, ತಲೆಬಾಚಿಕೊ. ಆಗ ಉಪವಾಸಮಾಡುವವನ೦ತೆ ನೀನು ಜನರಿಗೆ ಕಾಣಿಸಿಕೊಳ್ಳುವುದಿಲ್ಲ; ಅ೦ತರ೦ಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತ೦ದೆಗೆ ಮಾತ್ರ ಕಾಣಿಸಿಕೊಳ್ಳುವೆ. ಅ೦ತರ೦ಗದಲ್ಲಿ ನಡೆಯುವುದನ್ನು ನೋಡುವ ನಿನ್ನತ೦ದೆ ಅದಕ್ಕೆಲ್ಲ ಪ್ರತಿಫ಼ಲ ಕೊಡುವರು".