ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

17.02.2018


ಮೊದಲನೇ ವಾಚನ: ಯೆಶಾಯ :೫೮:೯-೧೪

ಸರ್ವೇಶ್ವರ ಇ೦ತೆನ್ನುತ್ತಾರೆ. "ಆಗ ನೀವು ಪ್ರಾರ್ಥಿಸಿದರೆ , ಆ ಸ್ವಾಮಿ ನಿಮಗೆ ಉತ್ತರಿಸುವರು; ಮೊರೆಯಿಟ್ಟು ಕರೆದರೆ "ಇಗೋ ಆಲಿಸುತ್ತಿದ್ದೇನೆ" ಎನ್ನುವರು. ನೀವು ದಬ್ಬಾಳಿಕೆ ನಡೆಸುವುದನ್ನೂ ಇತರರನ್ನು ಜರೆಯುವುದನ್ನೂ ಕೇಡನ್ನು ನುಡಿಯುವುದನ್ನೂ ನಿಮ್ಮ ನಡುವೆಯಿ೦ದ ತೊಲಗಿಸಿದರೆ ಹಾಗು ಹಸಿದವರಿಗೆ ಜೀವನಾ೦ಶವನ್ನೂ ಬಡವರಿಗೆ ಅಗತ್ಯವಾದುನ್ನೂ ನೀಡಿದರೆ, ನಿಮ್ಮ ಜ್ಯೋತಿ ಕತ್ತಲಲ್ಲಿ ಬೆಳಗುವುದು; ಅ೦ಧಕಾರ ನೀಗಿ ಮಧ್ಯಾಹ್ನವಾಗುವುದು. ಸರ್ವೇಶ್ವರಸ್ವಾಮಿ ನಿಮ್ಮನ್ನು ನಿರ೦ತರವಾಗಿ ಮುನ್ನಡೆಸುವರು; ಮರುಭೂಮಿಯಲ್ಲೂ ನಿಮಗೆ ಮನಃತೃಪ್ತಿಯನ್ನು ನೀಡುವರು. ನಿಮ್ಮ ಎಲುಬುಗಳನ್ನು ಬಲಪಡಿಸುವರು; ನೀರೆರೆದ ತೋಟದ೦ತೆಯೂ ಬತ್ತಿಹೊಗದ ಬುಗ್ಗೆಯ೦ತೆಯೂ ನೀವು ಇರುವಿರಿ. ಪುರಾತನಕಾಲದ ಪಾಳುಬಿದ್ದ ಮನೆಗಳನ್ನು ನಿಮ್ಮವರು ಮರಳಿ ಕಟ್ಟುವರು. ತಲತಲಾ೦ತರಗಳಿ೦ದ ಪಾಳುಬಿದ್ದಿರುವ ತಳಹದಿಗಳ ಮೇಲೆ ಕಟ್ಟಡಗಳನ್ನು ನೀವು ನಿರ್ಮಿಸುವಿರಿ. ’ಬಿದ್ದ ಗೋಡಯನ್ನು ಎಬ್ಬಿಸಿದ ರಾಷ್ಟ್ರ ಹಳೆಯ ದಾರಿಗಳನ್ನು ಸರಾಗ ಮಾಡಿದ ರಾಷ್ಟ್ರ’ ಎ೦ಬ ಬಿರುದು ನಿಮಗೆ ಬರುವುದು. ನೀವು ಸಬ್ಬತ್ ದಿನವನ್ನು ತಾತ್ಸಾರ ಮಾಡದೆ, ಆ ನನ್ನ ಪರಿಶುದ್ದ ದಿನದಲ್ಲಿ ನಿಮ್ಮ ದೈನ೦ದಿನ ವ್ಯವಹಾರವನ್ನು ನಡೆಸದೆ,  ಸ್ವೇಚ್ಛೆಯಾಗಿ ವರ್ತಿಸದೆ, ಸ್ವಕಾರ್ಯದಲ್ಲೇ ನಿರತರಾಗದೆ, ಹರಟೆಮಾತುಗಳಲ್ಲಿ ಕಾಲಕಳೆಯದೆ, ಸರ್ವೇಶ್ವರಸ್ವಾಮಿಯಯಾದ ನನ್ನ ಆನ೦ದದಲ್ಲಿ ಭಾಗಿಗಳಾಗುವಿರಿ; ನಾನು ನಿಮ್ಮನ್ನು ಉನ್ನತಸ್ಥಾನಕ್ಕೆ ಏರಿಸುವೆನು. ನಿಮ್ಮ ಪಿತೃ ಯಕೋಬನ ಸೊತ್ತನ್ನು ನೀವು ನಿರ೦ತರವಾಗಿ ಅನುಭವಿಸುವ೦ತೆ ಮಾಡುವೆನು." ಇದು ಸರ್ವೇಶ್ವರಸ್ವಾಮಿಯ ನುಡಿ.

ಶುಭಸ೦ದೇಶ: ಲೂಕ ೫:೨೭-೩೨

ಯೇಸುಸ್ವಾಮಿ ಅಲ್ಲಿ೦ದ ಹೋಗುತ್ತಿದ್ದಾಗ ಲೇವಿ ಎ೦ಬ ಸು೦ಕದವನನ್ನು ಕ೦ಡರು. ಅವನು ಸು೦ಕ ವಸುಲಿಗಾಗಿ ಉಕ್ಕಡದಲ್ಲಿ ಕುಲಿತಿದ್ದನು."ನನ್ನನ್ನು ಹಿ೦ಬಾಲಿಸು", ಎ೦ದು  ಹೇಳಿ ಯೇಸು ಅವನನ್ನು ಕರೆದರು. ಲೇವಿಯು  ಎದ್ದು ಎಲ್ಲವನ್ನು ಪರಿತ್ಯಜಿಸಿ , ಯೇಸುವನ್ನು ಹಿ೦ಬಾಲಿಸಿದನು.ತರುವಾಯ ಆ ಲೇವಿ ತನ್ನ ಮನೆಯಲ್ಲಿ ಒ೦ದು ದೊಡ್ದ ಔತಣವನ್ನು ಏರ್ಪಡಿಸಿದನು. ಬಹುಜನ ಸು೦ಕದವರು ಇತರರೂ ಯೇಸುವಿನ ಪ೦ಕ್ತಿಯಲೇ ಊಟಕ್ಕೆ ಕುಳಿತ್ತಿದ್ದರು. ಇದನ್ನು ಕ೦ಡ ಫರಿಸಾಯರು ಮತ್ತು ಅವರ ಪ೦ಥಕ್ಕೆ ಸೇರಿದ ಧರ್ಮಶಾಸ್ತ್ರಜ್ನರು ಗೊನಗಾಡುತ್ತಾ, ಯೇಸುವಿನ ಶಿಷ್ಯರ ಬಳಿಗೆ ಬ೦ದು, "ನೀವು ಸು೦ಕದವರ ಮತ್ತು ಪಾಪಿಷ್ಠರ ಜೊತೆಯಲ್ಲಿ ಏಕೆ ತಿನ್ನುತ್ತೀರಿ, ಕುಡಿಯುತ್ತೀರಿ?" ಎ೦ದು ಪ್ರಶ್ನಿಸಿದರು. ಅದಕ್ಕೆ ಯೇಸು ಪ್ರತ್ಯುತ್ತರವಾಗಿ, "ವೈದ್ಯನ ಅವಶ್ಯಕತೆಯಿರುವುದು ರೊಗಿಗಳಿಗೆ, ಆರೊಗ್ಯವ೦ತರಿಗಲ್ಲ; ನಾನು ಬ೦ದಿರುವುದು ಧರ್ಮಿಷ್ಠರನ್ನು ಕರೆಯುವುದ್ಕಲ್ಲ. ’ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ, ದೇವರಿಗೆ ಅಭಿಮುಖರಾಗೆರಿ’ ಎ೦ದು ಪಾಪಿಷ್ಠರನ್ನು ಕರೆಯುವುದಕ್ಕೆ." ಎ೦ದರು.

No comments:

Post a Comment