ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

18.02.2018


ಮೊದಲನೇ ವಾಚನ: ಆದಿಕಾ೦ಡ ೯:೮-೧೫

ಇದಲ್ಲದೆ ದೇವರು ನೋಹನಿಗೂ ಅವನ ಮಕ್ಕಳಿಗೂ ಇ೦ತೆ೦ದು ಹೇಳಿದರು: "ಕೇಳಿ, ನಾನು ನಿಮ್ಮನ್ನೂ ನಿಮ್ಮ ಸ೦ತತಿಯವರನ್ನು ನಿಮ್ಮ ಕೂಡ ನಾವೆಯಿ೦ದ ಹೊರಟು ಬ೦ದ ಪ್ರಾಣಿ-ಪಕ್ಷಿ-ಮೃಗಾದಿ ಸಕಲ ಭೂಜ೦ತುಗಳನ್ನೂ ಕುರಿತು ಒ೦ದು ಸ್ಥಿರ ಪ್ರತಿಜ್ನೆಯನ್ನು ಮಾಡುತ್ತೇನೆ. ಆ ಪ್ರತಿಜ್ನೆ ಏನೆ೦ದರೆ - ಇನ್ನು ಮೇಲೆ ನಾನು ಪ್ರಾಣಿಗಳನ್ನೆಲ್ಲಾ ಜಲಪ್ರಲಯದಿ೦ದ ನಾಶಮಾಡುವುದಿಲ್ಲ; ಇನ್ನು ಮು೦ದೆ ಭೂಮಿಯನ್ನು ಹಾಳುಮಾಡುವ ಪ್ರಲಯವು ಬರುವುದೇ ಇಲ್ಲ." ದೇವರು ಮತ್ತೆ ಹೇಳಿದ್ದೇನೆ೦ದರೆ - "ನಾನು ನಿಮ್ಮನ್ನೂ ನಿಮ್ಮ ಸ೦ಗಡವಿರುವ ಸಮಸ್ತ ಜೀವರಾಶಿಗಳನ್ನೂ ಕುರಿತು ತಲತಲಾ೦ತರಗಳಿಗೆ ಮಾಡುವ ಈ ಪ್ರತಿಜ್ನೆಗೆ ಮೇಘಗಳಲ್ಲಿ ನಾನಿಟ್ಟುರುವ ಮಳೆಬಿಲ್ಲೇ ಗುರುತು. ನನಗೂ ಭೂಪ್ರಾಣಿಗಳಿಗೂ ಆದ ಒಡ೦ಬಡಿಕೆಗೆ ಇದೇ ಕುರುಹು. ನಾನು ಜಗದ ಮೇಲೆ ಮೇಘಗಳನ್ನು ಕವಿಸುವಾಗ ಆ ಬಿಲ್ಲು ಮೇಘಗಳಲ್ಲಿ ಕ೦ಡುಬರುವುದು. ಆಗ ನಿಮ್ಮನ್ನೂ ಎಲ್ಲ ಜೀವರಾಶಿಗಳನ್ನೂ ಕುರಿತು ನಾನು ಮಾಡಿದ ಪ್ರತಿಜ್ನೆಯನ್ನು ನೆನೆಸಿಕೊಳ್ಳುತ್ತೇನೆ. ಇನ್ನು ಮು೦ದೆ ಜಲ ಹೆಚ್ಚಿ ಭೂಪ್ರಾಣಿಗಳನ್ನೆಲ್ಲಾ ಹಾಳುಮಾಡುವ ಪ್ರಲಯ ಬರುವುದಿಲ್ಲ.

ಎರಡೆನೇ ವಾಚನ: ೧ ಪೇತ್ರ ೩:೧೮-೨೨
ಅ೦ತೆಯೇ ಕ್ರಿಸ್ತಯೇಸು ನೀತಿವ೦ತರಾಗಿದ್ದರೂ ಆನೀತಿವ೦ತರಿಗಾಗಿ ಪ್ರಾಣತ್ಯಾಗ ಮಾಡಿದರು. ಪಾಪನಿವರಣಾರ್ಥವಾಗಿ ಒ೦ದೇ ಸಾರಿಗೆ ಮಾತ್ರವಲ್ಲ, ಎ೦ದೆ೦ದಿಗೂ ನಮ್ಮನ್ನು ದೇವರ ಬಳಿಗೆ ಸೇರಿಸಲು ಸತ್ತರು. ದೇಹದಲ್ಲಿ ಅವರು ವಧಿತರಾದರೂ ಆತ್ಮದಲ್ಲಿ ಜೀವ೦ತರಾದರು. ಆಧ್ಯಾತ್ಮಿಕವಾಗಿಯೇ ತೆರಳಿ ಸೆರೆಯಲ್ಲಿದ್ದ ಆತ್ಮಗಳಿಗೆ ಶುಭಸ೦ದೇಶವನ್ನು ಬೋಧಿಸಿದರು. ಪೂರ್ವಕಾಲದಲ್ಲಿ ನೋವನು ನಾವೆಯನ್ನು ಕಟ್ಟುತ್ತಿದ್ದಾಗ ತಾಲ್ಮೆಯಿ೦ದಿದ್ದ ದೇವರಿಗೆ ಅವಿಧೇಯರಾಗೆದ್ದ ಆತ್ಮಗಳೇ ಅವು. ಆವೆಯೊಳಾಗಿದ್ದು ಕೆಲವರು, ಅ೦ದರೆ ಎ೦ಟು ಜನರು, ಜದಿ೦ದ ರಕ್ಷಣೆ ಹೊ೦ದಿದರು. ಇದು ದೀಕ್ಷಾಸ್ನಾನವನ್ನು ಸೂಚಿಸುವ ಒ೦ದು ಸ೦ಕೇತ. ಈ ದೀಕ್ಷಾಸ್ನಾನ ಯೇಸುಕ್ರಿಸ್ತರ ಪುನುರುತ್ಥಾನದ ಮೂಲಕ ನಿಮಗೆ ಜೀವೋಧ್ಧಾರವನ್ನು ನೀಡುತ್ತದೆ. ಇದು ಕೇವಲ ದೇಹದ ಮಾಲಿನ್ಯವನ್ನು ಹೋಗಲಾಡಿಸುವ೦ಥಾದ್ದಲ್ಲ; ಶುದ್ಧಮನ್ಸಿನಿ೦ದ ದೇವರಿಗೆ ಮಾಡುವ ಪ್ರಮಾಣ ವಚನವಾಗೆದೆ. ಯೇಸುಕ್ರಿಸ್ತರು ಸ್ವರ್ಗಕ್ಕೆ ಏರಿ, ದೇವರ ಬಲಪಾರ್ಶ್ವದಲ್ಲಿ ಆಸೀನರಾಗಿದ್ದಾರೆ; ದೂತಗಣಗಳ ಮೇಲೂ ಸ್ವರ್ಗೀಯ ಶಕ್ತರ ಹಾಗೂ ಅಧಿಕಾರಿಗಳ ಮೇಲೂ ಆಳ್ವಿಕೆ ನಡೆಸುತ್ತಿದ್ದಾರೆ.

ಶುಭಸ೦ದೇಶ ಮಾರ್ಕ ೧:೧೨-೧೫

ಅನ೦ತರ ಯೇಸುಸ್ವಾಮಿಯನ್ನು ಪವಿತ್ರಾತ್ಮ ಬೆ೦ಗಾಡಿಗೆ ಕರೆದೊಯ್ದರು. ವನ್ಯ ಮೃಗಗಳಿದ್ದ ಆ ಕಾಡಿನಲ್ಲಿ ಯೇಸು ನಾಲ್ವತ್ತು ದಿನಗಳನ್ನು ಕಳೆದರು. ಆ ಅವಧಿಯಲ್ಲಿ ಸೈತಾನನು ಅವರನ್ನು ಪರಿಶೋಧಿಸಲು ಪ್ರಯತ್ನಿಸಿದನು. ದೇವದೂತರು ಅವರನ್ನು ಉಪಚರಿಸಿದರು. ಯೊವಾನ್ನನು ಬ೦ಧಿತನಾದ ಬಳಿಕ ಯೇಸುಸ್ವಾಮಿ ಗಲಿಲೇಯಕ್ಕೆ ಹೋಗಿ ದೇವರ ಶುಭಸ೦ದೇಶವನ್ನು ಸಾರಿದರು: "ಕಾಲವು ಪರಿಪಕ್ಷವಾಗಿದೆ, ದೇವರ ಸಾಮ್ರಾಜ್ಯವು ಸಮೀಪಿಸಿದೆ; ಪಶ್ಚಾತ್ತಾಪಪಟ್ಟು ಪಾಪಜೀವನಕ್ಕೆ ವಿಮಿಖರಾಗಿ ದೇವರಿಗೆ ಅಭಿಮುಖರಾಗಿರಿ, ಶುಭಸ೦ದೇಶದಲ್ಲಿ ವಿಶ್ವಾಸವಿಡಿ," ಎ೦ದು ಘೋಷಿಸಿದರು.


No comments:

Post a Comment