ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

12.11.2023 - "ಜಾಗೃತರಾಗಿರಿ ! ಏಕೆಂದರೆ ಆ ದಿನವಾಗಲಿ, ಆ ಗಳಿಗೆಯಾಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು."

 ಮೊದಲನೆಯ  ವಾಚನ : ಸುಜ್ಞಾನ  ಗ್ರಂಥ 6:12-16


ಸುಜ್ಞಾನವೆಂಬಾಕೆ  ತೇಜೋಪುಂಜಳಾಗಿ  ಇರುವಳುಅವಳ  ಕಾಂತಿ  ಕುಂದದುಪ್ರೀತಿಸುವವರಿಗೆ  ಸಹಜವಾಗಿ  ಗೋಚರ  ಆಗುವಳುಅರಸುವವರಿಗೆ  ಸಿಕ್ಕುವಳುತನ್ನನ್ನು  ತಿಳಿಯಲಪೇಕ್ಷಿಸುವವರ  ಹತ್ತಿರಕ್ಕೆತಾನೇ  ಬಂದು  ತಿಳಿಯಪಡಿಸಿಕೊಳ್ಳುತ್ತಾಳೆಅವಳನ್ನು  ಹುಡುಕಲು  ನಸುಕಿನಲೇ  ಏಳುವ  ಪರಿಶ್ರಮ  ಬೇಡಕಾರಣ  ತನ್ನ  ಬಾಗಿಲಲೇ  ಅವಳು  ಕುಳಿತಿರುವುದನ್ನೆ  ಕಾಣುವನಾತಅವಳ  ಮೇಲೆ  ನಿಗವಿಟ್ಟಿರುವವನು  ಬುದ್ದಿ  ಸಂಪನ್ನನಾಗುವನುಅವಳನ್ನೆ  ಕಾಯುತ್ತಿರುವನು   ಚಿಂತೆಯಿಂದ  ಬೇಗ  ಮುಕ್ತನಾಗುವನುಸುಜ್ಞಾನ  ತನಗೆ  ಯೋಗ್ಯರಾದವರನು  ಅರಸುತ್ತ  ಸಂಚರಿಸುತ್ತಾಳೆಹಾದಿಯಲ್ಲಿ  ಅವರಿಗೆ  ಪ್ರಸನ್ನಳಾಗಿ  ಕಾಣಿಸಿಕೊಳ್ಳುತ್ತಾಳೆಅವರ  ಪ್ರತಿಯೊಂದು  ಆಲೋಚನೆಯಲ್ಲೂ  ಅವರೊಂದಿಗಿರುತ್ತಾಳೆ.

ಕೀರ್ತನೆ:                        63:1-7

ಶ್ಲೋಕದೇವಾನೀ  ಎನ್ನ  ದೇವಾ  ನಿನಗಾಗಿ  ನಾ  ಕಾದಿರುವೆ |

1.  ದೇವಾನೀಯೆನ್ನ  ದೇವಾನಿನಗಾಗಿ  ನಾ  ಕಾದಿರುವೆ|

ನಿರ್ಜಲ  ಮರುಭೂಮಿಯಲಿ  ನೀರಿಗಾಗಿ  ಹಾತೊರೆವಂತೆ|

ನಿನಗೋಸ್ಕರ  ಎನ್ನ  ತನು  ಸೊರಗಿದೆ,   ಮನ   ಬಾಯಾರಿದೆ||

 

2.  ನಿನ್ನ  ಮಂದಿರದಲಿ  ನನಗಾದ  ದರ್ಶನದಲಿ|

ನಿನ್ನ  ಶಕ್ತಿ  ಪ್ರತಿಭೆಯನು  ಕಂಡಿರುವೆನಲ್ಲಿ||

ಪ್ರಾಣಕ್ಕಿಂತ  ಮಿಗಿಲಾದುದು  ನಿನ್ನಚಲ  ಪ್ರೀತಿ|

ಎಡೆಬಡದೆ  ಮಾಳ್ಪುದು  ನನ್ನೀ  ತುಟಿ  ನಿನ್ನ  ಸ್ತುತಿ||

 

3.  ನಿನ್ನ  ಸ್ತುತಿಸುವೆ  ಜೀವಮಾನ  ಪರಿಯಂತ|

ಕೈ  ಮುಗಿವೆ  ನಿನ್ನ  ನಾಮದ  ಸ್ಮರಣಾರ್ಥ||

ಮೃಷ್ಟಾನ್ನ  ತಿಂದಂತೆ  ಎನ್ನ  ಮನ  ಸಂತೃಪ್ತ

ಸಂಭ್ರಮದಿಂದ  ನಿನ್ನ  ಹೊಗಳುವುದು  ಬಾಯ್ತುಂಬ||

ಎರಡನೆಯ  ವಾಚನ : ಪೌಲನು  ಥೆಸಲೋನಿಯರಿಗೆ  ಬರೆದ  ಮೊದಲನೆಯ  ಪತ್ರ  :4:13-18

Uploading: 318570 of 318570 bytes uploaded.

ಸಹೋದರರೇಮೃತರ  ಮುಂದಿನ  ಸ್ಥಿತಿಗತಿಯ  ವಿಷಯವಾಗಿ  ನೀವು  ತಿಳಿದಿರಬೇಕು  ಎಂಬುದೇ  ನಮ್ಮ  ಬಯಕೆಏಕೆಂದರೆನಂಬಿಕೆ  ನಿರೀಕ್ಷೆಯಿಲ್ಲದ  ಇತರರಂತೆ  ಮೃತರಿಗಾಗಿ  ನೀವು  ದುಃಖಿಸಬಾರದುಯೇಸು  ಸತ್ತು  ಪುನರುತ್ಥಾನ  ಹೊಂದಿದರೆಂದು  ನಾವು  ವಿಶ್ವಾಸಿಸುತ್ತೇವೆ  ಅಲ್ಲವೇಹಾಗೆಯೇಕ್ರಿಸ್ತ  ಯೇಸುವಿನಲ್ಲಿ  ವಿಶ್ವಾಸವಿಟ್ಟು  ಮರಣಹೊಂದಿದವರನ್ನು  ದೇವರು  ಯೇಸುಕ್ರಿಸ್ತರೊಡನೆ  ಮರಳಿ  ಕರೆದುಕೊಳ್ಳುತ್ತಾರೆಪ್ರಭುವಿನ  ವಾಕ್ಯದ  ಆಧಾರದ  ಮೇಲೆ  ನಾವು  ನಿಮಗೆ  ಹೇಳುತ್ತೇವೆ:   ಪ್ರಭು  ಪುನರಾಗಮಿಸುವಾಗಇನ್ನೂ  ಬದುಕಿರುವ  ನಾವು  ಮೃತರಾಗಿರುವ  ಇತರರಿಗಿಂತಲೂ  ಮುಂದಿನವರಾಗುವುದಿಲ್ಲಆಜ್ಞಾಘೋಷವಾದಾಗಪ್ರಧಾನ  ದೂತನ  ಧ್ವನಿಯು  ಕೇಳಿಬಂದಾಗದೇವರ  ತುತೂರಿ  ನಾದಗೈದಾಗಪ್ರಭುವೇ  ಸ್ವರ್ಗದಿಂದ  ಇಳಿದು  ಬರುತ್ತಾರೆಆಗಕ್ರಿಸ್ಥಸ್ತರಾಗಿ  ಮೃದರಾದವರು  ಮೊದಲು  ಎದ್ದು  ಬರುತ್ತಾರೆಆಮೇಲೆಇನ್ನೂ  ಬದುಕಿರುವ  ನಾವು  ಎದ್ದುಬಂದವರೊಡನೆ  ಆಕಾಶಮಂಡಲದಲ್ಲಿ  ಪ್ರಭುವನ್ನು  ಎದುರುಗೊಳ್ಳಲು  ಮೇಘಾರೂಢರಾಗಿ  ಮೇಲಕ್ಕೆ  ಒಯ್ಯಲ್ಪಡುತ್ತೇವೆ.   ಹೀಗೆ  ಸರ್ವದಾ  ನಾವು  ಪ್ರಭುವಿನೊಂದಿಗೆ  ಇರುತ್ತೇವೆಆದ್ದರಿಂದ  ಮಾತುಗಳಿಂದ  ಒಬ್ಬರನ್ನೊಬ್ಬರು  ಸಂತೈಸಿಕೊಳ್ಳಿ.

ಘೋಷಣೆ

ಅಲ್ಲೆಲೂಯ, ಅಲ್ಲೆಲೂಯ!

ನೀವು  ಸಹ  ಸಿದ್ದರಾಗಿರಿ;  ಏಕೆಂದರೆ  ನರಪುತ್ರನು  ನೀವು  ನಿರೀಕ್ಷಿಸದ  ಗಳಿಗೆಯಲ್ಲಿ  ಬರುವನು, ಅಲ್ಲೆಲೂಯ!

ಶುಭಸಂದೇಶ : ಮತ್ತಾಯ 25:1-13


ಆ  ಕಾಲದಲ್ಲಿ  ಯೇಸು,  ತಮ್ಮ  ಶಿಷ್ಯರಿಗೆ  ಹೀಗೆಂದರು:  "ಆ  ದಿನಗಳಲ್ಲಿ  ಸ್ವರ್ಗಸಾಮ್ರಾಜ್ಯ  ಹೇಗಿರುವುದು  ಎನ್ನುವುದಕ್ಕೆ  ಈ  ಸಾಮತಿಯನ್ನು  ಕೊಡಬಹುದು:   ಹತ್ತು  ಮಂದಿ  ಕನ್ಯೆಯರು  ದೀಪಾರತಿ  ಹಿಡಿದು  ಮದುವಣಿಗನನ್ನು  ಎದುರುಗೊಳ್ಳಲು  ಹೋದರು.  ಅವರಲ್ಲಿ  ಐವರು  ವಿವೇಕಿಗಳು,  ಐವರು  ಅವಿವೇಕಿಗಳು.  ಅವಿವೇಕಿಗಳು  ದೀಪಗಳನ್ನು  ತೆಗೆದುಕೊಂಡರೇ  ಹೊರತು  ಜೊತೆಗೆ  ಎಣ್ಣೆಯನ್ನು  ತೆಗೆದುಕೊಳ್ಳಲಿಲ್ಲ.  ವಿವೇಕಿಗಳಾದರೋ  ದೀಪಗಳ  ಜೊತೆಗೆ  ಬುಡ್ಡಿಗಳಲ್ಲಿ  ಎಣ್ಣೆಯನ್ನೂ   ತೆಗೆದುಕೊಂಡರು.  ಮದುವಣಿಗ  ಬರುವುದು  ತಡವಾಯಿತು.  ಅವರೆಲ್ಲರೂ  ತೂಕಡಿಸುತ್ತಾ  ಹಾಗೇ  ನಿದ್ರೆಹೋದರು.  ನಡುರಾತ್ರಿಯ  ವೇಳೆ.  "ಇಗೋ,  ಮದುವಣಿಗ   ಬರುತ್ತಿದ್ದಾನೆ ;  ಬನ್ನಿ,  ಆತನನ್ನು  ಎದುರುಗೊಳ್ಳಿ, 'ಎಂಬ  ಕೂಗು  ಕೇಳಿಸಿತು.  ಕನ್ಯೆಯರೆಲ್ಲರೂ  ಎದ್ದರು.  ತಮ್ಮತಮ್ಮ  ದೀಪದ  ಬತ್ತಿಯನ್ನು  ಸರಿಮಾಡಿದರು.  ಅವಿವೇಕಿಗಳು,  'ನಮ್ಮ  ದೀಪಗಳು ಆರಿಹೋಗುತ್ತಾ   ಇವೆ;  ನಿಮ್ಮ  ಎಣ್ಣೆಯಲ್ಲಿ  ನಮಗೂ  ಕೊಂಚ  ಕೊಡಿ, 'ಎಂದು  ವಿವೇಕಿಗಳನ್ನು  ಕೇಳಿಕೊಂಡರು.  ಅದಕ್ಕೆ  ಅವರು,  'ನಿಮಗೆ  ಕೊಟ್ಟರೆ  ನಮಗೂ  ನಿಮಗೂ  ಸಾಲದೆ  ಹೋದೀತು.  ನೀವು  ಅಂಗಡಿಗೆ  ಹೋಗಿ  ಕೊಂಡುಕೊಂಡರೆ  ಒಳ್ಳೆಯದು, ' ಎಂದರು.  ಅಂತೆಯೇ  ಅವರು  ಎಣ್ಣೆಯನ್ನು  ಕೊಂಡುಕೊಳ್ಳಲು  ಹೋದಾಗ  ಮದುವಣಿಗನು  ಬಂದೇಬಿಟ್ಟನು.  ಸಿದ್ದರಾಗಿದ್ದವರು  ಅವರ  ಸಂಗಡ  ವಿವಾಹ  ಮಹೋತ್ಸವಕ್ಕೆ  ಹೋದರು.  ಕಲ್ಯಾಣಮಂಟಪದ  ಬಾಗಿಲುಗಳನ್ನು  ಮುಚ್ಚಲಾಯಿತು.  ಉಳಿದ  ಕನ್ಯೆಯರು  ಅನಂತರ  ಬಂದರು.  'ಸ್ವಾಮೀ,  ಸ್ವಾಮೀ,  ನಮಗೆ  ಬಾಗಿಲು  ತೆರೆಯಿರಿ, 'ಎಂದು  ಕೂಗಿಕೊಂಡರು.  ಅದಕ್ಕೆ  ಉತ್ತರವಾಗಿ  ಆ  ಮದುವಣಿಗ,  'ಅದಾಗದು,  ನೀವು  ಯಾರೋ  ನನಗೆ  ಗೊತ್ತಿಲ್ಲ,  'ಎಂದುಬಿಟ್ಟ.  ಆದ್ದರಿಂದ  ಜಾಗೃತರಾಗಿರಿ !  ಏಕೆಂದರೆ  ಆ  ದಿನವಾಗಲಿ,  ಆ  ಗಳಿಗೆಯಾಗಲಿ  ಯಾವಾಗ  ಬರುತ್ತದೆಂದು  ನಿಮಗೆ  ತಿಳಿಯದು."

No comments:

Post a Comment