ಸಂತ ಯೊವನ್ನನು ಬರೆದ ಶುಭ ಸಂದೇಶದಿಂದ ವಾಚನ - 12:20-32
"ಆದರೆ ನನ್ನನ್ನು ಭೂಮಿಯಿಂದ ಮೇಲೇರಿಸಿದಾಗ, ನಾನೆಲ್ಲರನ್ನು ನನ್ನೆಡೆಗೆ ಸೆಳೆದುಕೊಳ್ಳುತ್ತೇನೆ"
ಆರಾಧನೆಗೆಂದು ಹಬ್ಬಕ್ಕೆ ಬಂದಿದ್ದವರಲ್ಲಿ ಕೆಲವರು ಗ್ರೀಕರು. ಇವರು ಗಲಿಲೇಯದ ಬೆತ್ಸಾಯಿಅದ ಎಂಬ ಊರಿನವರಾದ ಫಿಲಿಪ್ಪನ ಬಳಿ ಬಂದು, ’ಅಯ್ಯಾ, ನಾವು ಯೇಸುವನ್ನು ನೋಡಬೇಕೆಂದಿದ್ದೇವೆ," ಎಂದು ಕೇಳಿಕೊಂಡರು.ಫಿಲಿಪ್ಪನು ಬಂದು ಅಂದ್ರೇಯನಿಗೆ ಹೇಳಿದನು.ಅವರಿಬ್ಬರೂ ಹೋಗಿ ಯೇಸುವಿಗೆ ಈ ವಿಷಯವನ್ನು ದರು.ಅದಕ್ಕೆ ಯೇಸು "ನರಪುತ್ರನು ಮಹಿಮೆಯನ್ನು ಹೊಂದುವ ಗಳಿಗೆ ಬಂದಿದೆ.ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ; ಗೋಧಿಯ ಕಾಳು ಭೂಮಿಯಲ್ಲಿ ಬಿದ್ದು ಸಾಯದಿದ್ದರೆ ಅದು ಒಂಟಿಯಾಗಿ ಊಳಿಯುತ್ತದೆ:ಅದು ಸತ್ತರೆ ಮಾತ್ರ ಸಮೃದ್ಢಿಯಾದ ಫಲವನ್ನು ಕೊಡುತ್ತದೆ.ತನ್ನ ಪ್ರಾಣವನ್ನು ಪ್ರೀತಿಸುವವನು ಅದನ್ನು ಕಳೆದುಕೊಳ್ಳುತ್ತಾನೆ. ತನ್ನ ಪ್ರಾಣವನ್ನು ಈ ಲೋಕದಲ್ಲಿ ದ್ವೇಷಿಸುವವನು ಅದನ್ನು ನಿತ್ಯ ಜೀವಕ್ಕಾಗಿ ಕಾಯ್ದಿರಿಸಿಕೊಳ್ಳುತ್ತಾನೆ. ನನ್ನ ಸೇವೆ ಮಾಡಬೇಕೆಂದಿರುವವನು ನನ್ನನು ಹಿಂಬಾಲಿಸಲಿ. ಆಗ ನಾನಿರುವಲ್ಲಿಯೇ ನನ್ನ ಸೇವಕನೂ ಇರುತ್ತಾನೆ. ನನ್ನ ಸೇವೆ ಮಾಡುವವನು ನನ್ನ ಪಿತನಿಂದ ಸನ್ಮಾನ ಹೊಂದುತ್ತಾನೆ," ಎಂದರು.
ಯೇಸುಸ್ವಾಮಿ ತಮ್ಮ ಮಾತನ್ನು ಮುಂದುವರಿಸುತ್ತಾ," ಈಗ ನನಾತ್ಮ ತತ್ತರಿಸುತ್ತಿದೆ. ನಾನು ಏನೆಂದು ಹೇಳಲಿ?’ಪಿತನೇ, ಗಳಿಗೆಯಿಂದ ನನ್ನನ್ನು ಕಾಪಾಡು’ ಎನ್ನಲೇ? ಇಲ್ಲಾ, ಅದಕ್ಕೆ ಬದಲಾಗಿ ಇದನ್ನು ಅನುಭವಿಸಲೆಂದೇ ನಾನು ಈ ಗಳಿಗೆಗೆ ಕಾಲಿಟ್ಟಿದ್ದೇನೆ. ಪಿತನೇ, ನಿಮ್ಮ ನಾಮ ಮಹಿಮೆಯನ್ನು ಬೆಳಗಿಸಿ," ಎಂದು ನುಡಿದರು. ಆಗ,"ಹೌದು ಆ ಮಹಿಮೆಯನ್ನು ಬೆಳಗಿಸಿದ್ದೇನೆ, ಪುನ: ಬೆಳಗಿಸುತ್ತೇನೆ" ಎಂಬ ಸ್ವರ್ಗೀಯ ವಾಣಿ ಕೇಳಿಸಿತು. ಅಲ್ಲಿ ನಿಂತಿಕೊಂಡಿದ್ದ ಜನರು ಆ ವಾಣಿಯನ್ನು ಕೇಳಿ,’ ಇದೇನು ಗುಡುಗಿನ ಸದ್ದು?" ಎಂದರು. ಕೆಲವರು " ದೇವದೂತನೊಬ್ಬ ಆತನೊಡನೆ ಮಾತನಾಡಿದನು," ಎಂದರು. ಯೇಸುಸ್ವಾಮಿ,"ಈ ವಾಣಿಯಾದುದು ನಿಮಗಾಗಿ,ನನಗಾಗಿ ಅಲ್ಲ.ಈಗ ಈ ಲೋಕವು ನ್ಯಾಯ ತೀರ್ಪಿಗೆ ಒಳಗಾಗುವುದು.ಇದೀಗಲೇ ಈ ಲೋಕದ ಲೋಕಾಧಿಪತಿಯನ್ನು ಹೊರದೂಡಲಾಗುವುದು. ಆದರೆ ನನ್ನನ್ನು ಭೂಮಿಯಿಂದ ಮೇಲೇರಿಸಿದಾಗ, ನಾನೆಲ್ಲರನ್ನು ನನ್ನೆಡೆಗೆ ಸೆಳೆದುಕೊಳ್ಳುತ್ತೇನೆ" ಎಂದು ನುಡಿಡರು.
No comments:
Post a Comment