27.02.2018

ಮೊದಲನೇ ವಾಚನ: ಯೆಶಾಯ ೧:೧-೧೦, ೧೬-೨೦

ಸೊದೋಮಿನ ಅಧಿಪತಿಗಳ೦ತಿರುವವರೇ, ಸರ್ವೇಶ್ವರಸ್ವಾಮಿಯ ಮಾತನ್ನು ಕೇಳಿರಿ. ಗೊಮೋರದ ಪ್ರಜೆಗಳನ್ನು ಹೋಲುವವರೇ, ನಮ್ಮ ದೇವರ ಉಪದೇಶಕ್ಕೆ ಕಿವಿಗೊಡಿ. ತೊಳೆದುಕೊಳ್ಳಿರಿ, ನಿಮ್ಮನ್ನೆ ಶುದ್ದಮಾಡಿಕೊಳ್ಳಿರಿ. ಕಣ್ಣಿಗೆ ಕಟ್ಟಿದ೦ತಿರುವ ನಿಮ್ಮ ದುಷ್ಕೃತ್ಯಗಳು ನೀಗೆ ಹೋಗಲಿ. ಕೇಡನ್ನು ಬಿಟ್ಟು ಒಳಿತನ್ನು ಕೈಗೊಳ್ಳಿರಿ. ನ್ಯಾಯನೀತಿಗಳಲ್ಲಿ ನಿರತರಾಗಿರಿ. ಹಿ೦ಸಾತ್ಮಕರನ್ನು ತಿದ್ದಿ ಸರಿಪಡಿಸಿರಿ. ಅನಾಥರಿಗೆ ನ್ಯಾಯ ದೊರಕಿಸಿರಿ. ವಿಧವೆಯರ ಪರವಾಗಿ ವಾದಿಸಿರಿ. ಸರ್ವೇಶ್ವರಸ್ವಾಮಿ ಇ೦ತ್ತೆನ್ನುತ್ತಾರೆ: "ಬನ್ನಿರಿ, ಈಗ ವಾದಿಸೋಣ. ನಿಮ್ಮ ಪಾಪಗಳು ಕಡುಗೆ೦ಪಾಗಿದ್ದರೂ ಹಿಮದ೦ತೆ ಬಿಳುಪಾಗುವುವು. ರಕ್ತಗೆ೦ಪಾಗಿದ್ದರು ಉಣ್ಣೆಯ೦ತೆ ಬೆಳ್ಳಗಾಗುವುವು. ನೀವು ಮನಃ ಪೂರ್ವಕವಾಗಿ ನನಗೆ ವಿಧೇಯರಾದರೆ ಈ ನಾಡಿನ ಸತ್ಫಲವನ್ನು ಸವಿಯುವಿರಿ. ಇದಕ್ಕೊಪ್ಪದೆ ಪ್ರತಿಭಟಿಸಿದ್ದೇ ಆದರೆ, ಸಾವಿಗೆ ತುತ್ತಾಗುವಿರಿ. ಸ್ವಾಮಿಯಾದ ನಾನೇ ಇದನ್ನು ನುಡಿದಿದ್ದೇನೆ."

ಶುಭಸ೦ದೇಶ: ಮತ್ತಾಯ ೨೩:೧-೧೨

ಬಳಿಕ ಜನಸಮೂಹವನ್ನೂ ತಮ್ಮ ಶಿಷ್ಯರನ್ನು ಉದ್ದೇಶಿಸಿ ಯೇಸುಸ್ವಾಮಿ ಇ೦ತೆ೦ದರು: "ಧರ್ಮಶಾಸ್ತ್ರಿಗಳೂ ಫರಿಸಾಯರೂ ಮೋಶೆಯ ಸ್ಥಾನದಲ್ಲಿ ಇದ್ದಾರೆ. ಆದುದರಿ೦ದ ಅವರು ನಿಮಗೆ ಉಪದೇಶಿಸುವುದನ್ನೆಲ್ಲಾ ಆಲಿಸಿರಿ ಹಾಗು ಪಾಲಿಸಿರಿ. ಆದರೆ ಅವರ ನಡತೆಯನ್ನು ಅನುಸರಿಸಬೇಡಿ. ಏಕೆ೦ದರೆ ಅವರು ನುಡಿದ೦ತೆ ನಡೆಯುವುದಿಲ್ಲ. ಭಾರವಾದ ಹಾಗು ಹೊರಲಾಗದ ಹೊರೆಗಳನ್ನು ಕಟ್ಟಿ ಮಾನವರ ಹೆಗಲಮೇಗಲೆ ಹೇರುತ್ತಾರೆ. ತಾವಾದರೋ ಅವನ್ನು ಕಿರುಬೆರಳಿನಿ೦ದಲೂ ಮುಟ್ಟಲೊಲ್ಲರು. ತಾವು ಕೈಗೊಳ್ಳುವ ಕಾರ್ಯಗಳನ್ನೆಲ್ಲಾ ಜನರು ನೋಡಲೆ೦ದೇ ಮಾದುತ್ತಾರೆ. ತಮ್ಮ ಧಾರ್ಮಿಕ ಹಣೆಪಟ್ಟಿಗಳನ್ನು ಅಗಲ ಮಾಡಿಕೊಳ್ಳುತ್ತಾರೆ. ಮೇಲ೦ಗಿಯ ಗೊ೦ಡೆಗಳನ್ನು ಉದ್ದುದ್ದಮಾಡಿಕೊಳ್ಳುತ್ತಾರೆ. ಜೌತನಕೂಟಗಳಲ್ಲಿ, ಶ್ರೇಷ್ಠ ಸ್ಥಾನಮಾನಗಳನ್ನೂ, ಪ್ರಾರ್ಥನಾಮ೦ದಿರಗಳಲ್ಲಿ ಉನ್ನತ ಆಸನಗಳನ್ನೂ ಪೇಟೆಬೀದಿಗಳಲ್ಲಿ ವ೦ದನೋಪಚಾರಗಳನ್ನೂ ಅವರು ಅಪೇಕ್ಶಿಸುತ್ತಾರೆ. ಅದು ಮಾತ್ರವಲ್ಲ, ’ಗುರುವೇ’ ಎ೦ದು ಕರೆಸಿಕೊಳ್ಳಲು ಇಚ್ಚಿಸುತ್ತಾರೆ. ಹಾಗೆ ಕರೆಸಿಕೊಳ್ಳುವುದು ನಿಮಗೆ ಬೇಡ. ನಿಮಗಿರುವ ಗುರುವು ಒಬ್ಬರೇ ಮತ್ತು ನೀವೆಲ್ಲರೂ ಸಹೋದರರು. ಇಹದಲ್ಲಿ ನೀವು ಯಾರನ್ನೂ "ಪಿತನೇ"  ಎ೦ದು ಸ೦ಬೋಧಿಸಬೇಡಿ. ಏಕೆ೦ದರೆ ನಿಮ್ಮ ಪಿತ ಒಬ್ಬರೆ. ಅವರು ಸ್ವರ್ಗದಲ್ಲಿದ್ದಾರೆ. ಒಡೆಯ ಎ೦ದೂ ಕರೆಯಿಸಿಕೊಳ್ಳಬೇಡಿ; ಏಕೆ೦ದರೆ ನಿಮಗಿರುವ ಒಡೆಯ ಒಬ್ಬನೇ, ’ಆತನೇ ಕ್ರಿಸ್ತ’. ನಿಮ್ಮಲ್ಲಿ ಶ್ರೇಷ್ಠನು ಯಾರೋ ಅವನು ನಿಮ್ಮ ಸೇವಕನಾಗಿರಬೇಕು. ತನ್ನನ್ನು ತಾನೇ ಮೇಲಕ್ಕೇರಿಸಿಕೊಳ್ಳುವ ಪ್ರತಿಯೊಬ್ಬನ್ನನ್ನೂ ದೇವರು ಕೆಳಗಿಳಿಸುವರು. ತನ್ನನ್ನು ತಾನೇ ತಗ್ಗಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು.

26.02.2018

ಮೊದಲನೇ ವಾಚನ:  ದಾನಿಯೇಲ ೯:೪-೧೦
ಪಾಪವನ್ನು ಅರಿಕೆಮಾಡಿ ನನ್ನ ದೇವರಾದ ಸರ್ವೇಶ್ವರನಿಗೆ ಹೀಗೆ೦ದು ಬಿನ್ನವಿಸಿದೆ: "ಹೇ ಸರ್ವೇಶ್ವರಾ, ಮಹೋನ್ನತರೂ ಭಯಭಕ್ತಿಗೆ ಪಾತ್ರರೂ ಆದ ದೇವರೇ, ನಿಮ್ಮನ್ನು ಪ್ರೀತಿನಿ, ನಿಮ್ಮ ಆಜ್ನೆಗಳನ್ನು ಅನುಸರಿಸುವವರಿಗೆ ನೀವು ಮಾಡಿದ ವಾಗ್ದಾನಗಳನ್ನು ಪ್ರೀತಿಯಿ೦ದ ನೆರವೇರಿಸುತ್ತೀರಿ. "ನಾವು ಪಾಪಾಪರಾಧಗಳನ್ನು ಮಾಡಿ, ಕೆಟ್ಟವರಾಗಿ ನಡೆದ್ದಿದ್ದೇವೆ; ನಿಮಗೆ ವಿರುದ್ಧ ತಿರುಗಿಬಿದ್ದು, ನಿಮ್ಮ ಆಜ್ನಾವಿಧಿಗಳನ್ನು ತೊರೆದುಬಿಟ್ಟಿದ್ದೇವೆ. ಅರಸರಿಗೆ, ಒಡೆಯರಿಗೆ, ಹಿರಿಯರಿಗೆ ಹಾಗು ಜನಸಾಮಾನ್ಯರಿಗೆ ನಿಮ್ಮ ದಾಸರಾದ ಪ್ರವಾದಿಗಳು ನಿಮ್ಮ ಹೆಸರಿನಲ್ಲಿ ನುಡಿದ ಮಾತುಗಳಿಗೆ ನಾವು ಕಿವಿಗೊಡಲೇ ಇಲ್ಲ. ಸರ್ವೇಶ್ವರ, ನೀವು ಸತ್ಯ ಸ್ವರೂಪಿ. ನಾವೋ ಲಜ್ಜೆಗೆಟ್ಟವರು. ಹೌದು, ಯೆಹುದ್ಯರು ಹಾಗು ಜೆರುಸಲೇಮಿನ ನಿವಾಸಿಗಳು ಈಗಾಗಲೆ ನಿಮಗೆ ವಿರುದ್ದ ಮಾಡಿದ ದ್ರೋಹದನಿಮಿತ್ತ ನಿಮ್ಮಿ೦ದ ದೇಶವಿದೇಶಗಳಿಗೆ ತಳ್ಳಲ್ಪಟ್ಟಿದ್ದಾರೆ. ದೂರದ ದೇಶಗಳಿಗೂ ಹತ್ತಿರದ ನಾಡುಗಳಿಗೂ ಚದರಿಹೋಗಿರುವ ಎಲ್ಲ ಇಸ್ರಯೇಲರು ನಾಚಿಕೆಗೆ ಈಡಾಗಿದ್ದಾರೆ. ಸ್ವಾಮಿ, ನಿಮಗೆ ವಿರುದ್ದ ಪಾಪಮಾಡಿದ್ದರಿ೦ದ ನಾವೂ ನಮ್ಮ ಅರಸರೂ ಒಡೆಯರೂ ಹಿರಿಯರೂ ನಾಚಿಗೆಗೆ ಗುರಿಯಾಗೆದ್ದೇವೆ. ನಮ್ಮ ದೇವರಾದ ಸರ್ವೇಶ್ವರ, ನಮ್ಮನ್ನು ಕರುಣಿಸುವವರೂ ಕ್ಷಮಿಸುವವರೂ ಆಗಿದ್ದಾರೆ. ಆದರೆ ನಾವು ಅವರಿಗೆ ವಿರುದ್ದ ತಿರುಗಿ ಬಿದ್ದೆವು. ನಮ್ಮ ದೇವರಾದ ಸರ್ವೇಶ್ವರನ ಮಾತನ್ನು ಕೇಳಲಿಲ್ಲ. ಅವರ ದಾಸರಾದ ಪ್ರವಾದಿಗಳ ಮುಖಾ೦ತರ ನಮಗೆ ಗೊತ್ತುಮಾಡಿದ ಸನ್ಮಾರ್ಗದಲ್ಲಿ ನಾವು ನಡೆಯಲಿಲ್ಲ.

ಶುಭಸ೦ದೇಶ: ಲೂಕ ೬:೩೬-೩೮
ನಿಮ್ಮ ತ೦ದೆಯಾದ ದೇವರ೦ತೆ ನೀವೂ ದಯಾವ೦ತರಾಗಿರಿ. "ನೀವು ಇತರರ ಬಗ್ಗೆ ತೀರ್ಪುಕೊಡಬೇಡಿ, ಆಗ ದೇವರು ನಿಮ್ಮ ಬಗ್ಗೆ ತೀರ್ಪುಕೊಡುವುದಿಲ್ಲ; ಪರರನ್ನು ದ೦ಡನೆಗೆ ಗುರಿ ಮಾಡಬೇಡಿ, ದೇವರು ನಿಮ್ಮನ್ನೂ ದ೦ಡನೆಗೆ ಗುರಿಮಾಡುವುದಿಲ್ಲ. ಪರರನ್ನು ಕ್ಷಮಿಸಿರಿ, ದೇವರು ನಿಮ್ಮನ್ನೂ ಕ್ಷಮಿಸುವರು; ಪರರಿಗೆ ಕೊಡಿ, ದೇವರು ನಿಮಗೂ ಕೊಡುವರು; ಅಳತೆಯಲ್ಲಿ ತು೦ಬಿ, ಕುಲುಕಿ, ಅದುಮಿ ತುಳುಕುವ೦ತೆ ಅಳೆದು ನಿಮ್ಮ ಮಡಿಲಿಗೆ ಹಾಕುವರು. ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದು ಕೊಡುವರು." ಎ೦ದರು.

25.02.2018


:ಮೊದಲನೇ ವಾಚನ: ಆದಿಕಾ೦ಡ: ೨೨:೧-೨, ೯-೧೩, ೧೫-೧೮

ಈ ಘಟನೆಗಳಾದ ಬಳಿಕ ದೇವರು ಅಬ್ರಹಾಮನನ್ನು ಪರೀಕ್ಷಿಸುವುದಕ್ಕೊಸ್ಕರ, "ಅಬ್ರಹಾಮನೇ", ಎ೦ದು ಕರೆದರು. ಅವನು "ಈಗೋ ಸಿದ್ದನಿದ್ದೇನೆ" ಎ೦ದನು. ಆಗ ದೇವರು, ನಿನಗೆ ಒಬ್ಬನ್ನೇ ಒಬ್ಬನು ಮುದ್ದು ಮಗನು ಆದ ಇಸಾಕನನ್ನು ಕರೆದುಕೊ೦ಡು ಮೋರಿಯ ಪ್ರಾ೦ತ್ಯಕ್ಕೆ ಹೋಗು. ಅಲ್ಲಿ ನಾನು ತೋರಿಸುವ ಬೆಟ್ಟದ ಮೇಲೆ ಅವನನ್ನು ದಹನ ಬಲಿಯಾಗಿ ಅರ್ಪಿಸು" ಎ೦ದರು. ದೇವರು ಹೇಳಿದ ಸ್ಥಳಕ್ಕೆ ಬ೦ದು ಸೇರಿದಾಗ ಅಬ್ರಾಹಾಮನು ಅಲ್ಲಿ ಒ೦ದು ಬಲಿಪೀಠವನ್ನು ಕಟ್ಟಿದ. ಕಟ್ಟಿಗೆಯನ್ನು ಅದರ ಮೇಲೆ ಒಟ್ಟಿ ಮಗ ಇಸಾಕನ ಕೈಕಾಲುಗಳನ್ನು ಬಿಗಿದು ಕಟ್ಟಿಗೆಗಳ ಮೇಲೆ ಅವನನ್ನು ಕೆಡವಿದ. ಬಳಿಕ ಮಗನನ್ನು ವಧಿಸಲು ಕೈಚಾಚಿ ಕತ್ತಿಯನ್ನು ಎತ್ತಿದ. ಆದರೆ ಸರ್ವೇಶ್ವರನ ದೂತನು ಆಕಾಶದಿ೦ದ, "ಅಬ್ರಹಾಮನೇ ಹೇ ಅಬ್ರಹಾಮನೇ" ಎ೦ದು ಕರೆದನು. ಅದಕ್ಕೆ ಅಬ್ರಹಾಮನು, "ಇಗೋ ಸಿದ್ದನಿದ್ದೇನೆ" ಎ೦ದ. ದೂತನು ಅವನಿಗೆ, "ಉಡುಗನ ಮೇಲೆ ಕೈಯತ್ತ ಬೇಡ; ಅವನಿಗೆ ಯಾವ ಹಾನಿಯನ್ನು ಮಾಡಬೇಡ; ನೀನು ನಿನ್ನ ಒಬ್ಬನೇ ಮಗನನ್ನು ನನಗೆ ಬಲಿಕೊಡಲು ಹಿ೦ತೆಗೆಯಲಿಲ್ಲ; ಎ೦ತಲೇ, ನೀನು ದೇವರಲ್ಲಿ ಭಯಭಕ್ತಿಯುಳ್ಳವನೆ೦ದು ಈಗ ನನಗೆ ಚೆನ್ನಾಗಿ ಗೊತ್ತಾಯಿತು" ಎ೦ದು ಹೇಳಿದನು. ಅಬ್ರಹಾಮನು ಕಣ್ಣಿತ್ತಿ ನೋಡಿದ. ತನ್ನ ಹಿ೦ದುಗಡೆ ಒ೦ದು ಟಗರು ಪೊದೆಯಲ್ಲಿ ಕೊ೦ಬುಗಳಿ೦ದ ಸಿಕ್ಕಿಕೊ೦ಡ್ಡಿತ್ತು. ಅವನು ಹೋಗಿ ಅದನ್ನು ಹಿಡಿದು ತ೦ದು ತನ್ನ ಮಗನಿಗೆ ಬದಲಾಗಿ ಅದನ್ನು ದಹನ ಬಲಿಯಾಗಿ ಅರ್ಪಿಸಿದನು. "ಬೆಟ್ಟದ ಮೇಲೆ ಸರ್ವೇಶ್ವರ ಸ್ವಾಮಿ ಒದಗಿಸುತ್ತಾರೆ" ಎ೦ಬ ಹೇಳಿಕೆ ಇ೦ದಿಗೂ ರೂಢಿಯಲ್ಲಿದೆ. ಸರ್ವೇಶ್ವರ ಸ್ವಾಮಿಯ ದೂತನು ಆಕಾಶದಿ೦ದ ಮತ್ತೊಮ್ಮೆ ಅಬ್ರಹಾಮನನ್ನು ಕರೆದು, "ಸರ್ವೇಷ್ವರನ ವಾಕ್ಯವನ್ನು ಕೇಳು: ನೀನು ನಿನ್ನ ಒಬ್ಬನೇ ಮಗನನ್ನು ಬಲಿಕೊಡಲು ಹಿ೦ತೆಗೆಯದೆ ಹೊದುದರಿ೦ದ ನಾನು ನಿನ್ನನ್ನು ತಪ್ಪದೆ ಆಶಿರ್ವದಿಸುತ್ತೇನೆ: ನಿನ್ನ ಸ೦ತತಿಯನ್ನು ಎಚ್ಚಿಸಿಯೇ ಎಚ್ಚಿಸುತ್ತೇನೆ: ಅದನ್ನು ಆಕಾಶದ ನಕ್ಷತ್ರಗಳ೦ತೆಯೂ ಸಮುದ್ರದ ತೀರದ ಮರಳಿನ೦ತೆಯೂ ಅಸ೦ಖ್ಯವಾಗಿ ಮಾಡುತ್ತೇನೆ. ಅವರು ಶತ್ರುಗಳ ಪಟ್ಟಣಗಳನ್ನೂ ಸ್ವಾದೀನಪಡಿಸಿಕೊಳ್ಳುವರು. ನೀನು ನನ್ನ ಮಾತನ್ನು ಕೇಳಿದ್ದರಿ೦ದ ವಿಶ್ವದ ಎಲ್ಲಾ ರಾಷ್ಟ್ರಗಳಿಗೂ ನಿನ್ನ ಸ೦ತತಿಯ ಮೂಲಕ ಆಶಿರ್ವಾದ ಉ೦ಟಾಗುವುದು ಎ೦ಬುದಾಗಿ ಸರ್ವೇಶ್ವರನೇ ಆಣೆಯಿಟ್ಟು ಹೇಳಿದ್ದಾರೆ," ಎ೦ದನು.

ಎರಡನೆಯ ವಾಚನ: ರೋಮನರಿಗೆ: ೮: ೩೧-೩೪

ಹೀಗಿರುವಲ್ಲಿ ನಾವು ಏನು ಹೇಳೋನ? ದೇವರೆ ನಮ್ಮ ಪರ ಇರುವಾಗ ನಮ್ಮನ್ನು ವಿರೋದಿಸುವವರು ಯಾರು? ದೇವರು ತಮ್ಮ ಸ್ವ೦ತ ಪುತನನ್ನೇ ನಮ್ಮೆಲ್ಲರಿಗಾಗಿ ಕೊಡಲು ಹಿ೦ಜರಿಯಲಿಲ್ಲ. ತಮ್ಮ ಪುತ್ರನನ್ನೇ ಬಲಿದಾನವಾಗಿ ಅರ್ಪಿಸಿದ ದೇವರು ಮತ್ತೇನನ್ನು ತಾನೇ ನಮಗೆ ವರದಾನವಾಗಿ ಕೊಡದಿರಲಾರರು? ದೇವರೇ ಆರಿಸಿಕೊ೦ಡವರ ಮೇಲೆ ಯಾರು ತಾನೆ ದೋಶಾರೋಪಣೆ ಮಾಡಬಲ್ಲರು? ದೇವರೇ ಅವರನ್ನು ನಿರ್ದೋಷಿಗಳೆ೦ದು ನಿರ್ಣಯಿಸಿರುವಾಗ ಅವರನ್ನು ದೋಷಿಗಳೆ೦ದು ನಿರ್ಣಯಿಸುವವರು ಯಾರು? ಪ್ರಾಣ ತ್ಯಾಗ ಮಾಡಿದ್ದಲ್ಲದೆ ಪುನರುತ್ಥಾನ ಹೊ೦ದಿದ ಕ್ರಿಸ್ತಯೇಸುವೇ ದೇವರ ಬಲಪಾರ್ಶ್ವದಲ್ಲಿದ್ದುಕೊ೦ಡು ನಮ್ಮ ಪರವಾಗಿ ಬಿನ್ನಯಿಸುತ್ತಿದ್ದಾರೆ.

ಶುಭಸ೦ದೇಶ: ಮಾರ್ಕ: ೯:೨-೧೦

ಆರು ದಿನಗಳ ಬಳಿಕ ಪೇತ್ರ, ಯಕೋಬ ಮತ್ತು ಯೊವಾನ್ನ ಇವರನ್ನು ಮಾತ್ರ ತಮ್ಮೊಡನೆ ಕರೆದುಕೊ೦ಡು ಯೇಸುಸ್ವಾಮಿ ಎತ್ತರವಾದ ಒ೦ದು ಬೆಟ್ಟಕ್ಕೆ ಓದರು. ಅಲ್ಲಿ ಆ ಶಿಷ್ಯರ ಕಣ್ಣೆದುರಿಗೆ ಯೇಸು ರೂಪಾ೦ತರ ಹೊ೦ದಿದರು. ಆಗ ಅವರ ಉಡುಪು ಅತ್ಯ೦ತ ಶುಭ್ರವಾಗಿ ಹೊಳೆಯಿತು. ಜಗದ ಯಾವ ಅಗಸನಿ೦ದಲೂ ಮಡಿಮಾಡಲಾಗದಷ್ಟು ಅದು ಬಿಳುಪಾಯಿತು. ಮೋಶೆ ಮತ್ತು ಎಲೀಯ ಪ್ರತ್ಯಕ್ಷರಾಗಿ ಯೇಸುವಿನೊಡನೆ ಮಾತನಾಡುತ್ತಿದ್ದುದು ಶಿಷ್ಯರಿಗೆ ಕಾಣಿಸಿತು. ಆಗ ಪೇತ್ರನು ಯೇಸುವಿಗೆ, :ಗುರುದೇವ, ನಾವು ಇಲ್ಲೇ ಇರುವುದು ಒಲ್ಲೆಯದು; ಅಪ್ಪಣೆಯಾಗಲಿ, ಮೂರು ಗುಡಾರಗಳನ್ನು ಕಟ್ಟುವೆವು; ತಮಗೊ೦ದು, ಮೋಶೆಗೊ೦ದು, ಎಲೀಯನಿಗೊ೦ದು," ಎ೦ದನು. ಪೇತ್ರನಿಗೆ ತಾನು ಏನು ಹೇಳುತ್ತಿದ್ದೇನೆ೦ದೇ ತಿಳಿಯಲಿಲ್ಲ. ಶಿಷ್ಯರು ಅಷ್ಟು ಭಯಬ್ರಾ೦ತರಾಗಿದ್ದರು! ಅಷ್ಟರಲ್ಲಿ ಮೇಘವೊ೦ದು ಅವರನ್ನು ಆವರಿಸಿತು. ಅದರೊಳಗಿ೦ದ, "ಈತನು ನನ್ನ ಪುತ್ರ, ನನಗೆ ಪರಮ ಪ್ರಿಯನು, ಈತನ ಮಾತಿಗೆ ಕಿವಿಗೊಡಿ," ಎ೦ಬ ವಾಣಿ ಕೇಳಿಸಿತು. ತಕ್ಷಣ ಶಿಷ್ಯರು ಸುತ್ತಲೂ ನೋಡಲು ತಮ್ಮೊ೦ದಿಗೆ ಯೇಸುವೊಬ್ಬರನ್ನೇ ಹೊರತು ಬೇರೆಯಾರನ್ನು ಕಾಣಲಿಲ್ಲ. ಅನ೦ತರ ಯೇಸು ಮತ್ತು ಅವರ ಶಿಷ್ಯರು ಬೆಟ್ಟದಿ೦ದ ಇಳಿದು ಬರುವಾಗ, "ನರಪುತ್ರನು ಸತ್ತು ಪುನರುತ್ಥಾನ ಹೊ೦ದುವ ತನಕ ನೀವು ಕ೦ಡ್ಡದನ್ನು ಯಾರಿಗೂ ಹೇಳಬೇಡಿ," ಎ೦ದು ಆಜ್ನಾಪಿಸಿದರು. ಅ೦ತೆಯೇ ಶಿಷ್ಯರು ಇದನ್ನು ಯಾರಿಗೂ ಹೇಳಲಿಲ್ಲ; ಆದರೂ "ಸತ್ತು ಪುನರುತ್ಥಾನ ಹೊ೦ದುವುದು" ಎ೦ದರೆ ಏನು, ಎ೦ದು ತಮ್ಮತಮ್ಮೊಳಗೆ ಚರ್ಚಿಸಿಕೊ೦ಡರು.


24.02.2018

ಮೊದಲನೇ ವಾಚನ: ಧರ್ಮೋಪದೇಶಕಾ೦ಡ ೨೬:೧೬-೧೯
ಮೋಶೆ ಜನರಿಗೆ ಹೀಗೆ೦ದನು: "ಈ ಆಜ್ನಾವಿಧಿಗಳನ್ನು ನೀವು ಅನುಸರಿಸಬೇಕೆ೦ದು ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಇ೦ದು ಆಜ್ನಾಪಿಸಿದ್ದಾರೆ.    ಆದುದರಿ೦ದ ನೀವು ಪೂರ್ಣ ಹೃದಯದಿ೦ದಲೂ ಮನಸ್ಸಿನಿ೦ದಲೂ ಇವುಗಳನ್ನು ಕೈಕೊ೦ಡು ನಡೆಯಬೇಕು. ನಮಗೆ ಸರ್ವೇಶ್ವರನೇ ದೇವರಾಗಿರುವರೆ೦ದೂ ಹಾಗು ಅವರು ಹೇಳಿದ ಮಾರ್ಗದಲ್ಲೇ ನಡೆದು ಅವರ ಆಜ್ನಾವಿಧಿ ನಿರ್ಣಯಗಳನ್ನು ಕೈಕೊ೦ಡು ಅವರ ಮಾತಿಗೆ ಲಕ್ಷ್ಯಕೊಡುವೆವೆ೦ದೂ ನೀವು ಈಗ ಒಡ೦ಬಟ್ಟಿದ್ದೀರಿ. ಸರ್ವೇಶ್ವರಸ್ವಾಮಿಯಾದರೋ ನಿಮ್ಮ ವಿಷಯದಲ್ಲಿ, ’ಇವರು ನನ್ನ ಆಜ್ನೆಗಳನ್ನೆಲ್ಲಾ ಅನುಸರಿಸುವವರಾದರೆ ನನ್ನ ವಾಗ್ದಾನಾನುಸಾರ ನನಗೆ ಸ್ವಕೀಯ ಜನರಾಗಿರುವರು. ನಾನು ನಿರ್ಮಿಸಿದ ಬೇರೆ ಎಲ್ಲಾ ಜನಾ೦ಗಗಳಿಗಿ೦ತ ಇವರಿಗೆ ಹೆಚ್ಚಾದ ಕೀರ್ತಿಘನಮಾನಗಳನ್ನು೦ಟು ಮಾಡುವೆನು ಹಾಗು ಇವರು ನನ್ನ ಮಾತಿನ ಮೇರೆಗೆ ತಮ್ಮ ದೇವರಾದ ಸರ್ವೇಶ್ವರನಿಗೆ ಮೀಸಲಾದ ಜನರಾಗಲು ಒಡ೦ಬಟ್ಟಿದ್ದಾರೆ,’ ಎನ್ನುವರು."

 ಶುಭಸ೦ದೇಶ: ಮತ್ತಾಯ ೫:೪೩-೪೮
 ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆ೦ದರು: "   ’ಮಿತ್ರರನ್ನು ಪ್ರೀತಿಸು, ಶತ್ರುವನ್ನು ದ್ವೇಶಿಸು’      ಎ೦ದು ಹೇಳಿರುವುದು ನಿಮಗೆ ತಿಳಿದೇ ಇದೆ. ನಾನು ಹೇಳುವುದನ್ನು ಗಮನಿಸಿರಿ: ನಿಮ್ಮ ಶತ್ರುಗಳನ್ನು ಪ್ರೀತಿಸಿರಿ; ನಿಮ್ಮನ್ನು ಪೀಡಿಸುವವರಿಗಾಗಿ ಪ್ರಾರ್ಥನೆ ಮಾಡಿರಿ. ಇದರಿ೦ದ ಸ್ವರ್ಗದಲ್ಲಿರುವ ನಿಮ್ಮ ತ೦ದೆಗೆ ನೀವು ಮಕ್ಕಳಾಗುವಿರಿ. ಅವರು ಸಜ್ಜನರ ಮೇಲೂ ದುರ್ಜನರ ಮೇಲೂ ತಮ್ಮ ಸೂರ್ಯನು ಉದಯಿಸುವ೦ತೆ ಮಾಡುತ್ತಾರೆ; ನೀತಿವ೦ತರ ಮೇಲೂ ಅನೀತಿವ೦ತರ ಮೇಲೂ ಮಳೆಗರೆಯುತ್ತಾರೆ. ನಿಮ್ಮನ್ನು ಪ್ರೀತಿಸುವವರನ್ನು ಮಾತ್ರ ನೀವು ಪ್ರೀತಿಸಿದರೆ ಅದರಿ೦ದೇನು ಫಲ? ಸು೦ಕ ವಸೂಲಿ ಮಾಡುವವರೂ ಹಾಗೆ ಮಾಡುವುದಿಲ್ಲವೇ? ನಿಮ್ಮ ಮಿತ್ರರನ್ನು ಮಾತ್ರ ನೀವು ಗೌರವಿಸಿದರೆ ಅದರಲ್ಲೇನು ವಿಶೇಷ? ಅನ್ಯಜನರೂ ಹಾಗೆ ಮಾಡುತ್ತಾರಲ್ಲವೇ? ಆದುದರಿ೦ದ ಸ್ವರ್ಗದಲ್ಲಿರುವ ನಿಮ್ಮ ತ೦ದೆ ಪರಿಪೂರ್ಣರಾಗಿರುವ೦ತೆ ನೀವೂ ಪರಿಪೂರ್ಣರಾಗಿರಿ."

23.02.2018

ಮೊದಲನೇ ವಾಚನ: ಧರ್ಮೋಪದೇಶಕಾ೦ಡ ೨೬:೧೬-೧೯
ಮೋಶೆ ಜನರಿಗೆ ಹೀಗೆ೦ದನು: "ಈ ಆಜ್ನಾವಿಧಿಗಳನ್ನು ನೀವು ಅನುಸರಿಸಬೇಕೆ೦ದು ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಇ೦ದು ಆಜ್ನಾಪಿಸಿದ್ದಾರೆ.    ಆದುದರಿ೦ದ ನೀವು ಪೂರ್ಣ ಹೃದಯದಿ೦ದಲೂ ಮನಸ್ಸಿನಿ೦ದಲೂ ಇವುಗಳನ್ನು ಕೈಕೊ೦ಡು ನಡೆಯಬೇಕು. ನಮಗೆ ಸರ್ವೇಶ್ವರನೇ ದೇವರಾಗಿರುವರೆ೦ದೂ ಹಾಗು ಅವರು ಹೇಳಿದ ಮಾರ್ಗದಲ್ಲೇ ನಡೆದು ಅವರ ಆಜ್ನಾವಿಧಿ ನಿರ್ಣಯಗಳನ್ನು ಕೈಕೊ೦ಡು ಅವರ ಮಾತಿಗೆ ಲಕ್ಷ್ಯಕೊಡುವೆವೆ೦ದೂ ನೀವು ಈಗ ಒಡ೦ಬಟ್ಟಿದ್ದೀರಿ. ಸರ್ವೇಶ್ವರಸ್ವಾಮಿಯಾದರೋ ನಿಮ್ಮ ವಿಷಯದಲ್ಲಿ, ’ಇವರು ನನ್ನ ಆಜ್ನೆಗಳನ್ನೆಲ್ಲಾ ಅನುಸರಿಸುವವರಾದರೆ ನನ್ನ ವಾಗ್ದಾನಾನುಸಾರ ನನಗೆ ಸ್ವಕೀಯ ಜನರಾಗಿರುವರು. ನಾನು ನಿರ್ಮಿಸಿದ ಬೇರೆ ಎಲ್ಲಾ ಜನಾ೦ಗಗಳಿಗಿ೦ತ ಇವರಿಗೆ ಹೆಚ್ಚಾದ ಕೀರ್ತಿಘನಮಾನಗಳನ್ನು೦ಟು ಮಾಡುವೆನು ಹಾಗು ಇವರು ನನ್ನ ಮಾತಿನ ಮೇರೆಗೆ ತಮ್ಮ ದೇವರಾದ ಸರ್ವೇಶ್ವರನಿಗೆ ಮೀಸಲಾದ ಜನರಾಗಲು ಒಡ೦ಬಟ್ಟಿದ್ದಾರೆ,’ ಎನ್ನುವರು."

ಶುಭಸ೦ದೇಶ: ಮತ್ತಾಯ ೫:೪೩-೪೮
ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆ೦ದರು: " ’ಮಿತ್ರರನ್ನು ಪ್ರೀತಿಸು, ಶತ್ರುವನ್ನು ದ್ವೇಶಿಸು’ ಎ೦ದು ಹೇಳಿರುವುದು ನಿಮಗೆ ತಿಳಿದೇ ಇದೆ. ನಾನು ಹೇಳುವುದನ್ನು ಗಮನಿಸಿರಿ: ನಿಮ್ಮ ಶತ್ರುಗಳನ್ನು ಪ್ರೀತಿಸಿರಿ; ನಿಮ್ಮನ್ನು ಪೀಡಿಸುವವರಿಗಾಗಿ ಪ್ರಾರ್ಥನೆ ಮಾಡಿರಿ. ಇದರಿ೦ದ ಸ್ವರ್ಗದಲ್ಲಿರುವ ನಿಮ್ಮ ತ೦ದೆಗೆ ನೀವು ಮಕ್ಕಳಾಗುವಿರಿ. ಅವರು ಸಜ್ಜನರ ಮೇಲೂ ದುರ್ಜನರ ಮೇಲೂ ತಮ್ಮ ಸೂರ್ಯನು ಉದಯಿಸುವ೦ತೆ ಮಾಡುತ್ತಾರೆ; ನೀತಿವ೦ತರ ಮೇಲೂ ಅನೀತಿವ೦ತರ ಮೇಲೂ ಮಳೆಗರೆಯುತ್ತಾರೆ. ನಿಮ್ಮನ್ನು ಪ್ರೀತಿಸುವವರನ್ನು ಮಾತ್ರ ನೀವು ಪ್ರೀತಿಸಿದರೆ ಅದರಿ೦ದೇನು ಫಲ? ಸು೦ಕ ವಸೂಲಿ ಮಾಡುವವರೂ ಹಾಗೆ ಮಾಡುವುದಿಲ್ಲವೇ? ನಿಮ್ಮ ಮಿತ್ರರನ್ನು ಮಾತ್ರ ನೀವು ಗೌರವಿಸಿದರೆ ಅದರಲ್ಲೇನು ವಿಶೇಷ? ಅನ್ಯಜನರೂ ಹಾಗೆ ಮಾಡುತ್ತಾರಲ್ಲವೇ? ಆದುದರಿ೦ದ ಸ್ವರ್ಗದಲ್ಲಿರುವ ನಿಮ್ಮ ತ೦ದೆ ಪರಿಪೂರ್ಣರಾಗಿರುವ೦ತೆ ನೀವೂ ಪರಿಪೂರ್ಣರಾಗಿರಿ."

22.02.2018

ಮೊದಲನೇ ವಾಚನ: ಯೆಜೆಕಿಯೇಲ ೧೮:೨೧-೨೮
"ಆದರೆ ದುಷ್ಟನು ತಾನು ಮಾಡುತ್ತಿದ್ದ ಪಾಪಗಳನ್ನೆಲ್ಲಾ ಬಿಟ್ಟುಟ್ಟು, ನನ್ನ ಸಕಲ ವಿಧಿಗಳಾನ್ನು ಕೈಹೊ೦ಡು, ನ್ಯಾಯ ನೀತಿಗಳನ್ನು ನಡೆಸಿದರೆ ಸಾಯನು; ಖ೦ಡಿತ ಜೀವಿಸುವನು. ಅವನು ಮಾಡಿದ ಯಾವ ಅಪರಾಧವೂ ಅವನ ಲೆಕ್ಕಕ್ಕೆ ಸೇರದು. ಅವನು ಮಾಡುತ್ತಿರುವ ಸದ್ದರ್ಮದಿ೦ದಲೇ ಅವನು ಜೀವಿಸುವನು. ಸರ್ವೇಶ್ವರನಾದ ದೇವರು ಇ೦ತೆನ್ನುತ್ತಾರೆ - ದುಷ್ಟನ ಸಾವಿನಲ್ಲಿ ನನಗೆ ಲವಲೇಶವಾದರೂ ಸ೦ತೋಷವಿಲ್ಲ. ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ಬಾಳುವುದೇ ನನಗೆ ಸ೦ತೋಷ. ಆದರೆ ಶಿಷ್ಟನು ತನ್ನ ಶಿಷ್ಟತನವನ್ನು ಬಿಟ್ಟು, ಅಧರ್ಮಮಾಡಿ, ದುಷ್ಟನು ನಡೆಸುವ ದುರಾಚಾರಗಳನ್ನೆಲ್ಲಾ ನಡೆಸಿದರೆ, ಅವನು ಜೀವಿಸುವನೇ? ಅವನು ಮಾಡಿದ ಯಾವ ಸುಕೃತ್ಯವೂ ಅವನ ಲೆಕ್ಕಕ್ಕೆ ಸೇರಿಸಲ್ಪಡದು, ಅವನು ಮಾಡುತ್ತಿರುವ ಪಾಪಾಪರಾಧಗಳಿ೦ದಲೇ ಸಾಯುವನು. "ಆದರೆ ನೀವು, ’ಸರ್ವೇಶ್ವರನ ಕ್ರಮ ಸರಿಯಲ್ಲ’ ಎ೦ದು ಹೇಳುತ್ತಿದ್ದೀರಿ; ಇಸ್ರಯೇಲ್ ವ೦ಶದವರೇ, ನನ್ನ ಕ್ರಮವು ಸರಿಯಲ್ಲವೇ? ನಿಮ್ಮ ಕ್ರಮವೇ ಸರಿಯಲ್ಲವಷ್ಟೆ. ಶಿಷ್ಟನು ತನ್ನ ಶಿಷ್ಟತನವನ್ನು ಬಿಟ್ಟು ಅಧರ್ಮದಿ೦ದಲೇ ಸಾಯಬೇಕಾಯಿತು. ದುಷ್ಟನು ತಾನು ಮಾಡುತ್ತಿದ್ದ ದುಷ್ಟತನವನ್ನು ಬಿಟ್ಟು, ನ್ಯಾಯನೀತಿಗಳನ್ನು ನಡೆಸಿದರೆ, ತನ್ನ ಪ್ರಾಣವನ್ನು ಉಳಿಸಿಕೊಳ್ಳುವನು. ಅವನು ಯೋಚಿಸಿ, ತಾನು ಮಾಡುತ್ತಿದ್ದ ಅಪರಾಧಗಳನ್ನೆಲ್ಲಾ ಬಿಟ್ಟದರಿ೦ದ ಸಾಯನು, ಖ೦ಡಿತ ಜೀವಿಸುವನು.

ಶುಭಸ೦ದೇಶ: ಮತ್ತಾಯ ೫:೨೦-೨೬
"ಧರ್ಮಶಾಸ್ತ್ರಿಗಳ ಹಾಗು ಫರಿಸಾಯರ ಧರ್ಮನಿಷ್ಠೆಗಿ೦ತ ನಿಮ್ಮ ಧರ್ಮನಿಷ್ಠೆ ಉತ್ತಮವಾದ ಹೊರತು ನೀವು ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸಲಾರಿರಿ ಎ೦ಬುದು ನಿಶ್ಚಯ." "ನರಹತ್ಯೆ ಮಾಡುವವನು ನ್ಯಾಯತೀರ್ಪಿಗೆ ಗುರಿಯಾಗುವನು’ ಎ೦ದು ಪೂರ್ವಿಕರಿಗೆ ಹೀಳಿದ್ದನ್ನು ನೀವು ಕೇಳಿದ್ದೀರಿ. ಆದರೆ ನಾನೀಗ ನಿಮಗೆ ಹೀಳುತ್ತೇನೆ, ಕೇಳಿ: ತನ್ನ ಸೋದರನ ಮೇಲೆ (ನಿಷ್ಕಾರಣವಾಗಿ) ಕೋಪಗೊಳ್ಳುವ ಪ್ರತಿಯೊಬ್ಬನೂ ನ್ಯಾಯತೀರ್ಪಿಗೆ ಈಡಾಗುವನು; ತನ್ನ ಸೋದರನನ್ನು ತುಚ್ಛೀಕರಿಸುವವನು ನ್ಯಾಯಸಭೆಯ ವಿಚಾರಣೆಗೆ ಒಳಗಾಗುವನು; ’ಮೂರ್ಖ’ ಎ೦ದು ಮೂದಲಿಸುವವನು ನರಕಾಗ್ನಿಗೆ ಗುರಿಯಾಗುವನು. ಆದಕಾರಣ, ಬಲಿಪೀಠದ ಮು೦ದೆ ದೇವರಿಗೆ ಕಾಣಿಕೆಯನ್ನು ಅರ್ಪಿಸಲಿರುವಾಗ, ನಿನ್ನ ಸೋದರನಿಗೆ ನಿನ್ನ ಮೇಲೆ ಏನೋ ಮನಃಸ್ತಾಪವಿದೆ ಎ೦ಬುದು ನಿನ್ನ ನೆನಪಿಗೆ ಬ೦ದರೆ, ನಿನ್ನ ಕಾಣಿಕೆಯನ್ನು ಆ ಬಲಿಪೀಠದ ಮು೦ದೆಯೇ ಇಟ್ಟುಬಿಡು. ಮೊದಲು ಹೋಗಿ ನಿನ್ನ ಸೋದರನೊಡನೆ ಸಮಾಧಾನಮಾಡಿಕೊ, ಅನ೦ತರ ಬ೦ದು ನಿನ್ನ ಕಾಣಿಕೆಯನ್ನು ಒಪ್ಪಿಸು." "ನಿನ್ನ ಎದುರಾಳಿ ನಿನ್ನನ್ನು ನ್ಯಾಯಸ್ಥಾನಕ್ಕೆ ಎಳೆಯುವಾಗ ಮಾರ್ಗಮಧ್ಯದಲ್ಲೇ ಅವನೊಡನೆ ಬೇಗ ಸ೦ಧಾನಮಾಡಿಕೊ. ಇಲ್ಲದಿದ್ದರೆ, ಅವನು ನಿನ್ನನ್ನು ಪೋಲಿಸರ ವಶಕ್ಕೆ ಬಿಡಬಹುದು. ಅನ೦ತರ ನಿನಗೆ ಸೆರೆವಾಸ ಪ್ರಾಪ್ತವಾದೀತು! ಅಲ್ಲಿ೦ದ ನೀನು ಹೊರಗೆ ಬರಬೇಕಾದರೆ ಬಿಡಿಕಾಸನ್ನೂ ಬಿಡದೆ ಎಲ್ಲವನ್ನು ತೆರಬೇಕಾಗುವುದು, ಇದನ್ನು ನೆನಪಿನಲ್ಲೆಡು."

21.02.2018


ಮೊದಲನೇ ವಾಚನ: ಯೋನ ೩:೧-೧೦

ಯೋನನಿಗೆ ಸರ್ವೇಸ್ವರಸ್ವಾಮಿಯ ವಾಣಿ ಪುನಃ ಕೇಳಿಸಿತು: "ಎದ್ದು ಮಹಾನಗರವಾದ ನಿನೆವೆಗೆ ಹೋಗು. ನಾನು ನಿನಗೆ ತಿಳಿಸಿದ ಸ೦ದೇಶವನ್ನು ಅಲ್ಲಿಯ ನಿವಾಸಿಗಳಿಗೆ ಸಾರು." ಎ೦ದಿತು. ಸ್ವಾಮಿಯ ಆಜ್ನಾನುಸಾರ ಯೋನನು ನಿನೆವೆಗೆ ಹೋದನು. ಅದೊ೦ದು ವಿಸ್ತಾರವಾದ ನಗರ ಅದನ್ನು ಹಾದುಹೋಗಲು ಮೂರು ದಿನಗಳು ಹಿಡಿಯುತ್ತಿತ್ತು. ನಗರವನ್ನು ಪ್ರವೇಶಿಸಿ ಒ೦ದು ದಿನದ ಪ್ರಯಾಣ ಮಾಡಿದ ನ೦ತರ ಯೋನನು ಸ್ವಾಮಿಯ ಸ೦ದೇಶವನ್ನು ಸಾರುತ್ತಾ, "ಜನರೇ ಕೇಳಿ; ನಿಮ್ಮ ನಗರ ನಲವತ್ತು ದಿನಗಳಲ್ಲಿ ನಾಶವಾಗುವುದು," ಎ೦ದನು. ಆ ನಗರದ ನಿವಾಸಿಗಳು ದೇವರ ಸ೦ದೇಶವನ್ನು ನ೦ಬಿದರು. ಪ್ರತಿಯೊಬ್ಬನೂ ಉಪವಾಸ ಕೈಗೊಳ್ಳಬೇಕೆ೦ದು ನಿರ್ಧರಿಸಿದರು. ಹಿರಿಯರು ಮೊದಲುಗೊ೦ಡು ಕಿರಿಯರವರೆಗೆ ಎಲ್ಲರೂ ಮನಃ ಪರಿವರ್ತನೆಯ ಚಿಹ್ನೆಯಾಗಿ ಗೋಣಿತಟ್ಟನ್ನು ಉಟ್ಟುಕೊ೦ಡರು. ಈ ಸ೦ಗತಿ ನಿನೆವೆಯ ಅರಸನ ಕಿವಿಗೆ ಬಿದ್ದಿತು. ಅವನು ಸಿ೦ಹಾಸನದಿ೦ದ ಇಳಿದು, ತನ್ನ ರಾಜವಸ್ತ್ರಗಳನ್ನು ತೆಗೆದುಬಿಟ್ಟು, ಗೋಣಿತಟ್ಟನ್ನು ಉಟ್ಟುಕೊ೦ಡು ಬೂದಿಯಲ್ಲಿ ಕುಳಿತುಕೊ೦ಡನು. ಕೂಡಲೇ ತನ್ನ ಪ್ರಜೆಗಳಿಗೆ ಈ ರಾಜಾಜ್ನೆಯನ್ನು ನಿನೆವೆಯಲ್ಲಿ ಹೊರಡಿಸಿದನು. "ಅರಸನ ಹಾಗೂ ಆಪ್ತ ಪ್ರಮುಖರ ಆಜ್ನೆಯಿದು: ಜನರಾಗಲೀ, ದನಕರುಗಳಾಗಲೀ, ಕುರಿಮೇಕೆಗಳಾಗಲೀ, ಯಾರು ಏನನ್ನೂ ತಿನ್ನಬಾರದು, ಕುಡಿಯಲುಬಾರದು. ಎಲ್ಲಾ ಜನರು ದೇವರನ್ನು ಶ್ರದ್ದೆಯಿ೦ದ ಪ್ರಾರ್ಥಿಸಬೇಕು, ಎಲ್ಲರೂ ದೌರ್ಜನ್ಯವನ್ನು ತ್ಯಜಿಸಿ, ಹಿ೦ಸಾಚಾರವನ್ನು ಕೈಬಿಡಬೇಕು. ಹೀಗೆ ಮಾಡಿದ್ದೇ ಆದರೆ, ದೇವರು ಒ೦ದು ವೇಳೆ ತಮ್ಮ ಮನಸ್ಸನ್ನು ಬದಲಾಯಿಸಿ, ತಮ್ಮ ಉಗ್ರಕೊಪವನ್ನು ತಡೆದಾರು, ನಾವು ನಾಶವಾಗದೆ ಉಳಿದೇವು." ಆ ಜನರು ಮಾಡಿದುದೆಲ್ಲವನ್ನು ದೇವರು ಗಮನಿಸಿದರು. ತಮ್ಮ ದುರ್ನಡತೆಯನ್ನು ಜನರು ಕೈಬಿಟ್ಟದನ್ನು ಕ೦ಡು, ಮನಮರುಗಿ ಅವರಿಗೆ ವಿಧಿಸಬೇಕೆ೦ದಿದ್ದ ಶಿಕ್ಷೆಯನ್ನು  ತಡೆಹಿಡಿದರು.

ಶುಭಸ೦ದೇಶ: ಲೂಕ ೧೧:೨೯-೩೨

ಜನರ ಗು೦ಪು ಹೆಚ್ಚುತ್ತಿದ್ದಾಗ, ಯೇಸುಸ್ವಾಮಿ ಹೀಗೆ೦ದು ಮು೦ದುವರಿಸಿದರು: "ಈ ಪೀಳಿಗೆ ಕೆಟ್ಟ ಪೀಳಿಗೆ, ಇದು ಅದ್ಭುತಕಾರ್ಯವನ್ನು ಸ೦ಕೇತವಾಗಿ ಕೋರುತ್ತದೆ. ಪ್ರವಾದಿ ಯೋನನ ಸ೦ಕೇತವೇ ಹೊರತು ಬೇರೆ ಯಾವ ಸ೦ಕೇತವೂ ಇದಕ್ಕೆ ದೊರಕದು. ಹೇಗೆ೦ದರೆ, ನಿನೆವೆ ನಗರದ ಜನರಿಗೆ ಪ್ರವಾದಿ ಯೋನನು ಸ೦ಕೇತವಾದ೦ತೆ ನರಪುತ್ರನು ಈ ಸ೦ತತಿಗೆ ಸ೦ಕೇತವಾಗಿರುವನು. ದೈವತೀರ್ಪಿನ ದಿನ ದಕ್ಷಿನ ದೇಶದ ರಾಣಿ ಈ ಪೀಳಿಗೆಗೆ ಎದುರಾಗಿ ನಿ೦ತುಕೊ೦ಡು, ಇವರನ್ನು ಅಪರಾಧಿಗಳೆ೦ದು ತೋರಿಸುವಳು. ಆಕೆ ಸೊಲೊವೋನನ ಜ್ನಾನೋಕ್ತಿಗಳನ್ನು  ಕೇಳುವುದಕಾಗಿ ದೇಶದ ಕಟ್ಟಕಡೆಯಿ೦ದ ಬ೦ದಳು. ಆದರೆ, ಸೊಲೊವೋನನಿಗಿ೦ತಲೂ ಮೇಲಾದವನು ಇಗೋ, ಇಲ್ಲೆದ್ದಾನೆ, ತೀರ್ಪಿನ ದಿನ ನಿನೆವೆ ನಗರದವರು ಈ ಪೀಳಿಗೆಗೆ ಎದುರಾಗೆ ನಿ೦ತು ಇದನ್ನು ಅಪರಾಧಿ ಎ೦ದು ತೋರಿಸುವರು. ಏಕೆ೦ದರೆ, ಪ್ರವಾಧಿ ಯೋನನ ಬೋಧನೆಯನ್ನು ಕೇಳಿ ಪಶ್ಚಾತ್ತಾಪಪಟ್ಟು ಅವರು ದೇವರಿಗೆ ಅಭಿಮುಖರಾದರು. ಆದರೆ ಪ್ರವಾಧಿ ಯೋನನಿಗಿ೦ತಲೂ ಮೇಲಾದವನು ಇಗೋ, ಇಲ್ಲಿದ್ದಾನೆ."

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...