ಸಂತ ಸ್ಮರಣೆ - ಸಂತ ಹೆಲೆನಾ St.Helen
ಕ್ರೈಸ್ತ ಧರ್ಮಕ್ಕೆ ಒಂದು ಅದ್ಭುತ ತಿರುವನ್ನು ಕೊಟ್ಟು ಅದು ಒಂದು ರಾಷ್ಟ್ರದ ಧರ್ಮವಷ್ಟೇ ಆಗದೇ ವಿಶ್ವಕ್ಕೆ ವ್ಯಾಪಿಸಿದ ಕೀರ್ತಿ ಹೇಗೆ ಪ್ರೇಷಿತರಿಗೆ ಸಲ್ಲಬೇಕೋ ಹಾಗೆಯೇ ಅರಸ ಕಾನ್ ಸ್ಟಾಂಟೈನ್ ಗೂ ಸಲ್ಲಬೇಕು. ಈ ಕಾನ್ ಸ್ಟಾಂಟೈನ್ ಮಹಾರಾಜನ ತಾಯಿಯೇ ಹೆಲೆನಾ. ಏಷ್ಯಾದ ಬಡ ಕುಟುಂಬ ಒಂದರಿಂದ ಬಂದ ಹೆಲೆನಾ ಕಾನ್ ಸ್ಟಾಂಟಿಯುಸ್ ಕ್ಲೋರುಸ್ ಎಂಬ ಸೈನ್ಯಾಧಿಕಾರಿಯನ್ನು ಮದುವೆ ಯಾದಳು. 21 ವರ್ಷಗಳ ನಂತರ ಅವಳ ಅದೃಷ್ಟವೋ ದುರಾದೃಷ್ಟವೋ ಸೈನ್ಯಾಧಿಕಾರಿ ಕ್ಲೋರೋಸ್ ಅರಸನಾದ. ಇದರ ಬೆನ್ನಲ್ಲೇ ರಾಜತಾಂತ್ರಿಕ ಕಾರಣಗಳಿಗಾಗಿ ಹೆಲೆನಾ ಗೆ ವಿಚ್ಛೇದನ ನೀಡಿದ. ಒಬ್ಬನೇ ಮಗ ಕಾನ್ ಸ್ಟಾಂಟೈನ್ ತನ್ನ ತಾಯಿಗೆ ನಿಷ್ಠನಾಗಿದ್ದ ಅವಳನ್ನು ಗಾಢವಾಗಿ ಪ್ರೀತಿಸುತ್ತಿದ್ದ. ತನ್ನ ತಂದೆಯ ನಂತರ ಸಿಂಹಾಸನ ಏರಿದಾಗ ಕಾನ್ ಸ್ಟಾಂಟೈನ್ ತನ್ನ ತಾಯಿಗೆ ಮಹಾರಾಣಿಯ ಪಟ್ಟ ಕಟ್ಟಿದ.
313 ರಲ್ಲಿ ಮಾಕ್ಸೆಂತಿಯುಸ್ ವಿರುದ್ಧ ಕಾನ್ ಸ್ಟಾಂಟೈನ್ ಜಯಶಾಲಿಯಾದ ನಂತರ ಹೆಲೆನಾ ಕೂಡ ಕ್ರೈಸ್ತ ಧರ್ಮದ ದೀಕ್ಷೆ ಸ್ವೀಕರಿಸಿದರು. ಮಹಾರಾಣಿ ಪಟ್ಟ, ಆಕೆಯ ಧಾರ್ಮಿಕ ಕಾಳಜಿ ಮತ್ತು ವಿಶ್ವಾಸದ ಕಾರಣ ಕ್ರೈಸ್ತ ಧರ್ಮ ವ್ಯಾಪಕವಾಗಿ ಹಬ್ಬಲು ಆಕೆ ಕಾರಣಳಾದಳು. ಯುರೋಪ್ ನಲ್ಲಿ ಅನೇಕ ಚರ್ಚುಗಳನ್ನು ಸ್ಥಾಪಿಸಿ, ತನ್ನ 75ನೇ ವಯಸ್ಸಿನಲ್ಲಿ ಆಕೆಯ ಪವಿತ್ರ ನಾಡಿಗೆ ಪ್ರಯಾಣಿಸಿ ಬೆತ್ಲೆಹೆಮಿನಲ್ಲಿ ಯೇಸು ಹುಟ್ಟಿದ ಸ್ಥಳದ ಪಕ್ಕ ಮತ್ತು ಜೆರುಸಲೇಮಿನಲ್ಲಿ ಯೇಸು ಸ್ವರ್ಗಾರೋಹಣವಾದ ಸ್ಥಳದ ಹತ್ತಿರ ದೇವಾಲಯಗಳನ್ನು ಕಟ್ಟಿಸಿದರು.
ತನ್ನ ಮಗ ಕಂಡದ್ದಲ್ಲ, ತಾನೇ 'ನಿಜವಾದ ಶಿಲುಬೆ'ಯನ್ನು ಕಂಡ ನಂತರ ಹೆಲೆನಾ ತನ್ನ ರೋಮ್ ನ ಅರಮನೆಯನ್ನು ಸಾಂತಾ ಕ್ರೂಸ್ ದೇವಾಲಯವನ್ನಾಗಿ ಪರಿವರ್ತಿಸಿದಳು. ಸಂತ ಹೆಲೆನಾ ಮರಣಶಯ್ಯೆಯಲ್ಲಿರು ವವರ ಮತ್ತು ಸೂಜಿ ಮತ್ತು ಮೊಳೆಗಳನ್ನು ತಯಾರಿಸುವವರ ಪಾಲಕಿ ಎಂದು ವಿಶ್ವಾಸಿಸಲಾಗಿದೆ
No comments:
Post a Comment