ಲೂಕನ ಶುಭ ಸಂದೇಶ - 9:7-9
ಯೊವಾನ್ನನು ಮರಳಿ ಜೀವಂತವಾಗಿ ಎದ್ದಿದ್ದಾನೆ
ನಡೆಯುತ್ತಿದ್ದ ಸಂಗತಿಗಳು ಸಾಮಂತ ರಾಜ ಹೆರೋದನ ಕಿವಿಗೆ ಬಿದ್ದವು. ಅವನ ಮನಸ್ಸು ಕಳವಳಗೊಂಡಿತು.ಏಕೆಂದರೆ 'ಯೊವಾನ್ನನು ಮರಳಿ ಜೀವಂತವಾಗಿ ಎದ್ದಿದ್ದಾನೆ ಎಂದು ಕೆಲವರೂ, ಎಲೀಯನು ಪುನ: ಕಾಣಿಸಿಕೊಂಡಿದ್ದಾನೆ ಎಂದು ಇನ್ನೂ ಕೆಲವರು, ಪ್ರಾಚೀನ ಪ್ರವಾದಿಗಳ್ಲ್ಲಲ್ಲಿ ಒಬ್ಬನು ಮರಳಿ ಜೀವಂತವಾಗಿದ್ದಾನೆ’ ಎಂದು ಕೆಲವರೂ ಹೇಳುತ್ತಿದ್ದರು. ಹೆರೋದನಾದರೋ ’ಯೊವಾನ್ನನೇ? ಅವನನ್ನು ನಾನೇ ಶಿರಚ್ಛೇದನ ಮಾಡಿಸಿದೆನಲ್ಲಾ! ಮತ್ತೆ ಇವನಾರು? ಇವನ ಬಗ್ಗೆ ಇಂಥಾ ವಿಷಯಗಳೆನೆಲ್ಲಾ ಕೇಳುತ್ತಾ ಇರುವೆನಲ್ಲಾ!’ ಎಂದುಕೊಂಡು, ಯೇಸುವನ್ನು ನೋಡಲು ಅವಕಾಶ ಹುಡುಕುತ್ತಿದ್ದನು.
No comments:
Post a Comment