03.03.2026 - ಸನ್ಮಾರ್ಗ ಹಿಡಿದವನಿಗೆ ತೋರುವೆ ಪರಮ ಜೀವೋದ್ದಾರವನು

ಮೊದಲನೇ ವಾಚನ: ಯೆಶಾಯ 1:10, 16-20


ಸೊದೋಮಿನ ಅಧಿಪತಿಗಳ೦ತಿರುವವರೇ, ಸರ್ವೇಶ್ವರಸ್ವಾಮಿಯ ಮಾತನ್ನು ಕೇಳಿರಿ. ಗೊಮೋರದ ಪ್ರಜೆಗಳನ್ನು ಹೋಲುವವರೇ, ನಮ್ಮ ದೇವರ ಉಪದೇಶಕ್ಕೆ ಕಿವಿಗೊಡಿ. ತೊಳೆದುಕೊಳ್ಳಿರಿ, ನಿಮ್ಮನ್ನೆ ಶುದ್ಧ ಮಾಡಿಕೊಳ್ಳಿರಿ. ಕಣ್ಣಿಗೆ ಕಟ್ಟಿದ೦ತಿರುವ ನಿಮ್ಮ ದುಷ್ಕೃತ್ಯಗಳು ನೀಗಿ ಹೋಗಲಿ. ಕೇಡನ್ನು ಬಿಟ್ಟು ಒಳಿತನ್ನು ಕೈಗೊಳ್ಳಿರಿ. ನ್ಯಾಯನೀತಿಗಳಲ್ಲಿ ನಿರತರಾಗಿರಿ. ಹಿ೦ಸಾತ್ಮಕರನ್ನು ತಿದ್ದಿ ಸರಿಪಡಿಸಿರಿ. ಅನಾಥರಿಗೆ ನ್ಯಾಯ ದೊರಕಿಸಿರಿ. ವಿಧವೆಯರ ಪರವಾಗಿ ವಾದಿಸಿರಿ. ಸರ್ವೇಶ್ವರ ಸ್ವಾಮಿ ಇಂತೆನ್ನುತ್ತಾರೆ : "ಬನ್ನಿರಿ, ಈಗ ವಾದಿಸೋಣ. ನಿಮ್ಮ ಪಾಪಗಳು ಕಡುಗೆ೦ಪಾಗಿದ್ದರೂ ಹಿಮದ೦ತೆ ಬಿಳುಪಾಗುವುವು. ರಕ್ತಗೆ೦ಪಾಗಿದ್ದರೂ ಉಣ್ಣೆಯ೦ತೆ ಬೆಳ್ಳಗಾಗುವುವು. ನೀವು ಮನಃಪೂರ್ವಕವಾಗಿ ನನಗೆ ವಿಧೇಯರಾದರೆ ಈ ನಾಡಿನ ಸತ್ಫಲವನ್ನು ಸವಿಯುವಿರಿ. ಇದಕ್ಕೊಪ್ಪದೆ ಪ್ರತಿಭಟಿಸಿದ್ದೇ ಆದರೆ, ಸಾವಿಗೆ ತುತ್ತಾಗುವಿರಿ. ಸ್ವಾಮಿಯಾದ ನಾನೇ ಇದನ್ನು ನುಡಿದಿದ್ದೇನೆ."


ಕೀರ್ತನೆ: 1116:10, 15, 16-19 

ಶ್ಲೋಕ: ಸನ್ಮಾರ್ಗ ಹಿಡಿದವನಿಗೆ ತೋರುವೆ ಪರಮ ಜೀವೋದ್ದಾರವನು. 


1.  ನಿನ್ನ  ಬಲಿಯರ್ಪಣೆಯನು  ನಾ  ತಪ್ಪೆಣಿಸುತ್ತಿಲ್ಲ|
ನಿನ್ನ  ಮುಂದಿವೆ  ಸತತ  ನಿನ್ನ  ದಹನ  ಬಲಿಗಳೆಲ್ಲ||
ನಾ  ಕೋರುವುದು  ನಿನ್ನ  ಮನೆಯ  ಹೋರಿಗಳನಲ್ಲ|
ನಾ  ಬಯಸುವುದು  ನಿನ್ನ  ಮಂದೆಯ  ಹೋತಗಳನಲ್ಲ||
ಶ್ಲೋಕ

2.  ನನ್ನ  ವಿಧಿಗಳ  ಪಠಿಸುವ  ಹಕ್ಕು  ನಿಮಗೆಂತು?|
ನನ್ನ  ನಿಬಂಧನೆಗಳ  ನೀವು  ಜಪಿಸುವುದೆಂತು?||
ನನ್ನ  ಮಾತುಗಳನು  ನೀವು  ತಾತ್ಸಾರ ಮಾಡುತ್ತೀರಿ|
ನನ್ನ  ತಿದ್ದುಪಾಟುಗಳನು  ನೀವು  ಧಿಕ್ಕರಿಸುತ್ತೀರಿ||
ಶ್ಲೋಕ

3.  ನೀವಿದನ್ನೆಲ್ಲ  ಮಾಡಿದರೂ  ನಾ  ಮೌನಿಯೆನ್ನುವಿರಾ?|
ನಾ  ಕೂಡ  ನಿಮ್ಮಂಥವನು  ಎಂದುಕೊಂಡಿರಾ?||
ಧನ್ಯವಾದದ  ಬಲಿಯನರ್ಪಿಸುವವನೇ  ನನಗೆ  ಸನ್ಮಾನಿತನು|
ಸನ್ಮಾರ್ಗ  ಹಿಡಿದವನಿಗೆ  ತೋರುವೆ  ಪರಮ  ಜೀವೋದ್ಧಾರವನು ||
ಶ್ಲೋಕ

🔥✝️🔥

ಘೋಷಣೆ
(ಮತ್ತಾಯ 4:17)

ದೇವರ ವಾಕ್ಯವಾದ ಪ್ರಭು ಯೇಸುವೇ, ನಿಮಗೆ ಸದಾ  ಮಹಿಮೆ ಸಲ್ಲಲಿ!

ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿರಿ, ದೇವರಿಗೆ ಅಭಿಮುಖರಾಗಿರಿ ಸ್ವರ್ಗಸಾಮ್ರಾಜ್ಯ  ಸಮೀಪಿಸಿತು||

ದೇವರ ವಾಕ್ಯವಾದ ಪ್ರಭು ಯೇಸುವೇ, ನಿಮಗೆ ಸದಾ  ಮಹಿಮೆ ಸಲ್ಲಲಿ!




ಶುಭಸ೦ದೇಶ: ಮತ್ತಾಯ 23:1-2

ಬಳಿಕ ಜನಸಮೂಹವನ್ನೂ ತಮ್ಮ ಶಿಷ್ಯರನ್ನು ಉದ್ದೇಶಿಸಿ ಯೇಸುಸ್ವಾಮಿ ಇ೦ತೆ೦ದರು: "ಧರ್ಮಶಾಸ್ತ್ರಿಗಳೂ ಫರಿಸಾಯರೂ ಮೋಶೆಯ ಸ್ಥಾನದಲ್ಲಿ ಇದ್ದಾರೆ. ಆದುದರಿ೦ದ ಅವರು ನಿಮಗೆ ಉಪದೇಶಿಸುವುದನ್ನೆಲ್ಲಾ ಆಲಿಸಿರಿ ಹಾಗು ಪಾಲಿಸಿರಿ. ಆದರೆ ಅವರ ನಡತೆಯನ್ನು ಅನುಸರಿಸಬೇಡಿ. ಏಕೆಂದರೆ ಅವರು ನುಡಿದ೦ತೆ ನಡೆಯುವುದಿಲ್ಲ. ಭಾರವಾದ ಹಾಗು ಹೊರಲಾಗದ ಹೊರೆಗಳನ್ನು ಕಟ್ಟಿ ಮಾನವರ ಹೆಗಲ ಮೇಲೆ ಹೇರುತ್ತಾರೆ. ತಾವಾದರೋ ಅವನ್ನು ಕಿರುಬೆರಳಿನಿ೦ದಲೂ ಮುಟ್ಟಲೊಲ್ಲರು. ತಾವು ಕೈಗೊಳ್ಳುವ ಕಾರ್ಯಗಳನ್ನೆಲ್ಲಾ ಜನರು ನೋಡಲೆ೦ದೇ ಮಾಡುತ್ತಾರೆ. ತಮ್ಮ ಧಾರ್ಮಿಕ ಹಣೆ ಪಟ್ಟಿಗಳನ್ನು ಅಗಲ ಮಾಡಿಕೊಳ್ಳುತ್ತಾರೆ. ಮೇಲ೦ಗಿಯ ಗೊ೦ಡೆಗಳನ್ನು ಉದ್ದುದ್ದ ಮಾಡಿಕೊಳ್ಳುತ್ತಾರೆ. ಜೌತಣಕೂಟಗಳಲ್ಲಿ, ಶ್ರೇಷ್ಠ ಸ್ಥಾನಮಾನಗಳನ್ನೂ, ಪ್ರಾರ್ಥನಾಮ೦ದಿರಗಳಲ್ಲಿ ಉನ್ನತ ಆಸನಗಳನ್ನೂ ಪೇಟೆಬೀದಿಗಳಲ್ಲಿ ವ೦ದನೋಪಚಾರಗಳನ್ನೂ ಅವರು ಅಪೇಕ್ಷಿತ್ತಾರೆ. ಅದು ಮಾತ್ರವಲ್ಲ, ’ಗುರುವೇ’ ಎ೦ದು ಕರೆಸಿಕೊಳ್ಳಲು ಇಚ್ಚಿಸುತ್ತಾರೆ. ಹಾಗೆ ಕರೆಸಿಕೊಳ್ಳುವುದು ನಿಮಗೆ ಬೇಡ. ನಿಮಗಿರುವ ಗುರುವು ಒಬ್ಬರೇ ಮತ್ತು ನೀವೆಲ್ಲರೂ ಸಹೋದರರು. ಇಹದಲ್ಲಿ ನೀವು ಯಾರನ್ನೂ "ಪಿತನೇ" ಎ೦ದು  ಸಂಬೋಧಿಸಬೇಡಿ. ಏಕೆ೦ದರೆ ನಿಮ್ಮ ಪಿತ ಒಬ್ಬರೇ. ಅವರು ಸ್ವರ್ಗದಲ್ಲಿದ್ದಾರೆ. ಒಡೆಯ ಎ೦ದೂ ಕರೆಯಿಸಿಕೊಳ್ಳಬೇಡಿ; ಏಕೆ೦ದರೆ ನಿಮಗಿರುವ ಒಡೆಯ ಒಬ್ಬನೇ, ’ಆತನೇ ಕ್ರಿಸ್ತ’. ನಿಮ್ಮಲ್ಲಿ ಶ್ರೇಷ್ಠನು ಯಾರೋ ಅವನು ನಿಮ್ಮ ಸೇವಕನಾಗಿರಬೇಕು. ತನ್ನನ್ನು ತಾನೇ ಮೇಲಕ್ಕೇರಿಸಿಕೊಳ್ಳುವ ಪ್ರತಿಯೊಬ್ಬನ್ನನ್ನೂ ದೇವರು ಕೆಳಗಿಳಿಸುವರು. ತನ್ನನ್ನು ತಾನೇ ತಗ್ಗಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು.

02.03.2026 - ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದು ಕೊಡುವರು

 ಮೊದಲನೇ ವಾಚನ: ದಾನಿಯೇಲ 9:4-10 



ಪಾಪವನ್ನು ಅರಿಕೆಮಾಡಿ ನನ್ನ ದೇವರಾದ ಸರ್ವೇಶ್ವರನಿಗೆ ಹೀಗೆಂದು ಬಿನ್ನವಿಸಿದೆ:  "ಹೇ ಸರ್ವೇಶ್ವರಾ, ಮಹೋನ್ನತರೂ ಭಯಭಕ್ತಿಗೆ ಪಾತ್ರರೂ ಆದ ದೇವರೇ, ನಿಮ್ಮನ್ನು ಪ್ರೀತಿಸಿ, ನಿಮ್ಮ ಆಜ್ಞೆಗಳನ್ನು ಅನುಸರಿಸುವವರಿಗೆ ನೀವು ಮಾಡಿದ ವಾಗ್ದಾನಗಳನ್ನು ಪ್ರೀತಿಯಿಂದ ನೆರವೇರಿಸುತ್ತೀರಿ. "ನಾವು ಪಾಪಾಪರಾಧಗಳನ್ನು ಮಾಡಿ, ಕೆಟ್ಟವರಾಗಿ ನಡೆದಿದ್ದೇವೆ; ನಿಮಗೆ ವಿರುದ್ಧ ತಿರುಗಿಬಿದ್ದು, ನಿಮ್ಮ ಆಜ್ಞೆಗಳನ್ನು ತೊರೆದು ಬಿಟ್ಟಿದ್ದೇವೆ. ಅರಸರಿಗೆ, ಒಡೆಯರಿಗೆ, ಹಿರಿಯರಿಗೆ ಹಾಗು ಜನಸಾಮಾನ್ಯರಿಗೆ ನಿಮ್ಮ ದಾಸರಾದ ಪ್ರವಾದಿಗಳು ನಿಮ್ಮ ಹೆಸರಿನಲ್ಲಿ ನುಡಿದ ಮಾತುಗಳಿಗೆ ನಾವು ಕಿವಿಗೊಡಲೇ ಇಲ್ಲ. ಸರ್ವೇಶ್ವರಾ, ನೀವು ಸತ್ಯಸ್ವರೂಪಿ. ನಾವೋ ಲಜ್ಜೆಗೆಟ್ಟವರು. ಹೌದು, ಯೆಹೂದ್ಯರು ಹಾಗು ಜೆರುಸಲೇಮಿನ ನಿವಾಸಿಗಳು ಈಗಾಗಲೆ ನಿಮಗೆ ವಿರುದ್ಧ ಮಾಡಿದ ದ್ರೋಹದ ನಮಿತ್ತ ನಿಮ್ಮಿಂದ ದೇಶವಿದೇಶಗಳಿಗೆ ತಳ್ಳಲ್ಪಟ್ಟಿದ್ದಾರೆ. ದೂರದ ದೇಶಗಳಿಗೂ ಹತ್ತಿರದ ನಾಡುಗಳಿಗೂ ಚದುರಿಹೋಗಿರುವ ಎಲ್ಲ ಇಸ್ರಯೇಲರು ನಿಚಿಕೆಗೆ ಈಡಾಗಿದ್ದಾರೆ. ಸ್ವಾಮೀ, ನಿಮಗೆ ವಿರುದ್ಧ ಪಾಪಮಾಡಿದ್ದರಿಂದ ನಾವೂ ನಮ್ಮ ಅರಸರೂ ಓಡೆಯರೂ ಹಿರಿಯರೂ ನಾಚಿಕೆಗೆ ಗುರಿಯಾಗಿದ್ದೇವೆ. ನಮ್ಮ ದೇವರಾದ ಸರ್ವೇಶ್ವರ, ನಮ್ಮನ್ನು ಕರುಣಿಸುವವರೂ ಕ್ಷಮಿಸುವವರೂ ಆಗಿದ್ದಾರೆ. ಆದರೆ ನಾವು ಅವರಿಗೆ ವಿರುದ್ಧ ತಿರುಗಿಬಿದ್ದೆವು. ನಮ್ಮ ದೇವರಾದ ಸರ್ವೇಶ್ವರನ ಮಾತನ್ನು ಕೇಳಲಿಲ್ಲ. ಅವರ ದಾಸರಾದ ಪ್ರವಾದಿಗಳ ಮುಖಾಂತರ ನಮಗೆ ಗೊತ್ತುಮಾಡಿದ ಸನ್ಮಾರ್ಗದಲ್ಲಿ ನಾವು ನಡೆಯಲಿಲ್ಲ.

ಕೀರ್ತನೆ: 79:8, 9, 11, 13
ಶ್ಲೋಕ: ಪ್ರಭೂ, ನಮ್ಮ ಪಾಪಗಳಿಗೆ ತಕ್ಕಂತೆ ನಮ್ಮನ್ನು ದಂಡಿಸದಿರಿ


1.  ಹೊರಿಸಬೇಡ  ಪೂರ್ವಿಕರ  ತಪ್ಪುಗಳನು  ನಮ್ಮ ಮೇಲೆ|
ಉರಿ ಸಂಕಟದಲ್ಲಿರುವೆವು,  ತೋರೆಮಗೆ  ಕರುಣೆಯನೀಗಲೆ||
ದೇವಾ, ಮುಕ್ತಿದಾತ,  ನೆರವಾಗು  ನಿನ್ನ  ನಾಮ ಮಹಿಮೆಯ  ನಿಮಿತ್ತ|
ಪಾಪಗಳನು  ಅಳಿಸಿ  ನಮ್ಮನ್ನುದರಿಸು  ನಿನ್ನ  ನಾಮದ  ಪ್ರಯುಕ್ತ||
ಶ್ಲೋಕ

2.  ಸೆರೆಹೋಗಿರುವವರ  ನರಳಾಟಕೆ  ಕಿವಿಗೊಡು  ನೀನು|
ನಿನ್ನ  ಶಕ್ತಿ  ಕಾದಿಡಲಿ  ಸಾವಿಗೀಡಾಗಿರುವ  ಅವರನು||
ಆಗ  ಸಲ್ಲಿಸುವೆವು  ಸದಾಕಾಲ  ಕೃತಜ್ಞತೆಯನು  ನಿನಗೆ|
ಸ್ಮರಿಸುವೆವು  ನಿನ್ನ  ಮಹಿಮೆಯನು  ತಲತಲಾಂತರದವರೆಗೆ|
ಹೇ  ದೇವಾ,  ನಾವು  ನಿನ್ನ  ಪ್ರಜೆ,  ನೀ  ಪಾಲಿಸುವ  ಮಂದೆ||
ಶ್ಲೋಕ


ಘೋಷಣೆ
(ಯೊವಾನ್ನ 6:63,68)

ದೇವರ ವಾಕ್ಯವಾದ ಪ್ರಭು ಯೇಸುವೇ, ನಿಮಗೆ ಸದಾ  ಮಹಿಮೆ ಸಲ್ಲಲಿ!

ನಿಮ್ಮ ಮಾತುಗಳು ಪ್ರಭೂ, ಆತ್ಮ ಮತ್ತು ಜೀವವಾಗಿವೆ | ನಿತ್ಯ ಜೀವವನ್ನು ಈಯುವ ನುಡಿ ಇರುವುದು ತಮ್ಮಲ್ಲೇ ||

ದೇವರ ವಾಕ್ಯವಾದ ಪ್ರಭು ಯೇಸುವೇ, ನಿಮಗೆ ಸದಾ  ಮಹಿಮೆ ಸಲ್ಲಲಿ!

ಶುಭಸಂದೇಶ: ಲೂಕ 6:36-38


ನಿಮ್ಮ ತಂದೆಯಾದ ದೇವರಂತೆ ನೀವೂ ದಯಾವಂತರಾಗಿರಿ. "ನೀವು ಇತರರ ಬಗ್ಗೆ ತೀರ್ಪು ಕೊಡಬೇಡಿ, ಆಗ ದೇವರು ನಿಮ್ಮ ಬಗ್ಗೆ ತೀರ್ಪು ಕೊಡುವುದಿಲ್ಲ; ಪರರನ್ನು ದಂಡನೆಗೆ ಗುರಿ ಮಾಡಬೇಡಿ, ದೇವರು ನಿಮ್ಮನ್ನೂ ದಂಡನೆಗೆ ಗುರಿ ಮಾಡುವುದಿಲ್ಲ. ಪರರನ್ನು ಕ್ಷಮಿಸಿರಿ, ದೇವರು ನಿಮ್ಮನ್ನೂ ಕ್ಷಮಿಸುವರು: ಪರರಿಗೆ ಕೊಡಿ, ದೇವರು ನಿಮಗೂ ಕೊಡುವರು; ಅಳತೆಯಲ್ಲಿ ತುಂಬಿ, ಕುಲುಕಿ, ಅದುಮಿ ತುಳುಕುವಂತೆ ಅಳೆದು ನಿಮ್ಮ ಮಡಿಲಿಗೆ ಹಾಕುವರು. ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದು ಕೊಡುವರು," ಎಂದರು.

ಮನಸಿಗೊಂದಿಷ್ಟು : ವೈದ್ಯರು ರೋಗಿಗಳಿಗೆ ನೀಡುವ ಔಷದಿಯ ಚೀಟಿಯಂತೆ ಮನಸ್ಸಿನ ನಿರಾಳತೆ ಹಾಗೂ  ದೇವರ ಕೃಪೆಗೆ ಯೇಸು ಒಂದಷ್ಟು ಸಿದ್ಧ ಔಷದಿಗಳ ಪಟ್ಟಿ ನೀಡುತ್ತಾರೆ. ಔಷದಿಯಂತೆ ಇವು ನುಂಗುವಾಗ ಕಹಿ, ಅದರೆ ಅದು ಮನಸಿಗೆ, ನೀಡುವ ಚಿಕಿತ್ಸೆ ಅವರ್ಣನೀಯ.  ನಾವು-ಪರರು-ದೇವರು ಎಂಬ ತ್ರಿಕೋನವು ಒಂದಕ್ಕೊಂದು ಬೆಸೆದುಕೊಂಡು ಅದು ಈ ಜಗದಲ್ಲಿ ನಮ್ಮನ್ನು ಮಾನವತೆಯಿಂದ ದೈವತ್ವದೆಡೆಗೆ ಪ್ರೇರೇಪಿಸುತ್ತಿದೆ. "ನಾನೇ ಬಡವ, ನಾನೇನು ಮಾಡಲು ಸಾಧ್ಯ?"ಎಂದುಕೊಳ್ಳುತ್ತಿದ್ದರೆ, 'ದಯಾವಂತರಾಗಿರಿ ಸಾಕು' ಎನ್ನುತ್ತಿದ್ದಾರೆ ಯೇಸು.     

ಪ್ರಶ್ನೆ : ದೇವರಿಂದ ಅಗಾಧವಾಗಿ ಪಡೆಯುತ್ತಿರುವ ನಾವು, ಪರರಿಗೆ ನೀಡುತ್ತಿರುವ ಅಳತೆ ಸರಿಯಾಗಿದೆಯೇ?

03.03.2026 - ಸನ್ಮಾರ್ಗ ಹಿಡಿದವನಿಗೆ ತೋರುವೆ ಪರಮ ಜೀವೋದ್ದಾರವನು

ಮೊದಲನೇ ವಾಚನ: ಯೆಶಾಯ 1:10, 16-20 ಸೊದೋಮಿನ ಅಧಿಪತಿಗಳ೦ತಿರುವವರೇ, ಸರ್ವೇಶ್ವರಸ್ವಾಮಿಯ ಮಾತನ್ನು ಕೇಳಿರಿ. ಗೊಮೋರದ ಪ್ರಜೆಗಳನ್ನು ಹೋಲುವವರೇ, ನಮ್ಮ ದೇವರ ಉಪದೇಶಕ್ಕೆ ...